Tag: ಸಾಗರ್

  • ‘ಸೂರ್ಯ’ನ ಹೋರಾಟಕ್ಕೆ ಬೆಂಬಲಿಸಿದ ಟೀಸರ್: ಇದು ಸಾಗರ್ ನಿರ್ದೇಶನದ ಸಿನಿಮಾ

    ‘ಸೂರ್ಯ’ನ ಹೋರಾಟಕ್ಕೆ ಬೆಂಬಲಿಸಿದ ಟೀಸರ್: ಇದು ಸಾಗರ್ ನಿರ್ದೇಶನದ ಸಿನಿಮಾ

    ಗಿನ ಕಾಲದ ಯುವಕ, ಯುವತಿಯರು ಪ್ರೀತಿಗಾಗಿ ಏನೆಲ್ಲ ಸಾಹಸಗಳನ್ನು ಮಾಡಬಹುದು ಎಂದು ಈಗಾಗಲೇ ಸಾಕಷ್ಟು ಚಲನಚಿತ್ರಗಳ ಮೂಲಕ ನಿರ್ದೇಶಕರು ಹೇಳಿದ್ದಾರೆ. ಅದೆಲ್ಲಕ್ಕಿಂತ ವಿಭಿನ್ನವಾದ, ಹೊಸ ತರಹದ ಕಥೆಯೊಂದನ್ನು ಯುವ ನಿರ್ದೇಶಕ ಸಾಗರ್ ಅವರು ಸೂರ್ಯ ಚಿತ್ರದ ಮೂಲಕ ಹೇಳುತಿದ್ದಾರೆ. ಖ್ಯಾತ ನಿರ್ದೇಶಕ ಬಿ.ಸುರೇಶ ಅವರ ಜೊತೆ ಸಹನಿರ್ದೇಶಕರಾಗಿ ಕೆಲಸ ಮಾಡಿದ್ದ ಸಾಗರ್, ಮಾಸ್ ಲವ್‌ಸ್ಟೋರಿ ಇಟ್ಟುಕೊಂಡು ಸೂರ್ಯ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಚಿತ್ರೀಕರಣದ ಕೊನೆಯಹಂತ ತಲುಪಿರುವ ಈ ಸಿನಿಮಾದಲ್ಲಿ ಯುವನಟ ಪ್ರಶಾಂತ್ ನಾಯಕನಾಗಿ ನಟಿಸಿದ್ದು, ಹರ್ಷಿತಾ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಂದಿ ಸಿನಿಮಾಸ್ ಮೂಲಕ ಬಸವರಾಜ್ ಬೆಣ್ಣೆ ಹಾಗೂ ರವಿ ಬೆಣ್ಣೆ ಸಹೋದರರು ಈ ಚಿತ್ರವನ್ನು  ನಿರ್ಮಾಣ  ಮಾಡುತ್ತಿದ್ದಾರೆ.

    ಸೂರ್ಯ ಚಿತ್ರದ ಟೀಸರ್ ಅನಾವರಣ ಸಮಾರಂಭ ಇತ್ತೀಚೆಗೆ ನೆರವೇರಿತು. ನಿರ್ದೇಶಕ ಬಹದ್ದೂರ್ ಚೇತನ್ ಅವರು ಟೀಸರ್ ಬಿಡುಗಡೆಮಾಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಚಿತ್ರದ ಕುರಿತಂತೆ ಮಾತನಾಡಿದ ನಿರ್ದೇಶಕ ಸಾಗರ್, ಸೂರ್ಯ ನಾಯಕನ ಹೆಸರು. ಆತ ತನ್ನ ಪ್ರೀತಿಗೋಸ್ಕರ ಯುದ್ದದ ರೀತಿಯಲ್ಲಿ ಸಮರ ಸಾರಿ ಅದನ್ನು ಹೇಗೆ ಉಳಿಸಿಕೊಳ್ಳುತ್ತಾನೆ ಎನ್ನುವುದೇ ಚಿತ್ರದ ಕಾನ್ಸೆಪ್ಟ್. ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಲೇ ನಾನೊಂದು ಕಥೆ ಮಾಡಿಕೊಂಡಿದ್ದೆ, ಆ ಕಥೆಯನ್ನು ಇಷ್ಟಪಟ್ಟ ನನ್ನ ಸ್ನೇಹಿತ, ಈ ನಿರ್ಮಾಪಕರ ಬಳಿ ಮಾತನಾಡಿ ಅವರನ್ನು ಒಪ್ಪಿಸಿದರು. ಬೆಂಗಳೂರು ಸುತ್ತಮುತ್ತ ಹಾಗೂ ಪೂನಾದಲ್ಲಿ ಮಾತಿನ ಭಾಗದ ಚಿತ್ರೀಕರಣ ನಡೆಸಿದ್ದೇವೆ, ಈಗಾಗಲೇ 3 ಹಾಡುಗಳನ್ನು ಚಿತ್ರೀಕರಿಸಿದ್ದು, ಉಳಿದ 2 ಸೆಟ್ ಸಾಂಗ್ ಹಾಗೂ ಹೆಚ್‌ಎಂಟಿಯಲ್ಲಿ ಮಾಡಬೇಕೆಂದಿರುವ ಸಾಹಸ ದೃಶ್ಯದ ಚಿತ್ರೀಕರಣವಷ್ಟೇ ಬಾಕಿಯಿದೆ. ಆರ್ಮುಗಂ ರವಿಶಂಕರ್ ಅವರನ್ನು ಈವರೆಗೆ ನೋಡಿರದಂಥ ಪಾತ್ರದಲ್ಲಿ ಕಾಣಬಹುದು. ಅಲ್ಲದೆ ನಟಿ ಶ್ರುತಿ ಅವರು ಒಬ್ಬ ಡಾಕ್ಟರ್ ಜೊತೆಗೆ ಈಗಿನ ಕಾಲದ ಅಮ್ಮನಾಗೂ ಕಾಣಿಸಿಕೊಂಡಿದ್ದಾರೆ, ಕಾಂತಾರ ಖ್ಯಾತಿಯ ಪ್ರಮೋದ್ ಶೆಟ್ಟಿ ಅವರಿಲ್ಲಿ ಉತ್ತರ ಕರ್ನಾಟಕ ಭಾಗದ ವಿಲನ್ ಪಾತ್ರ ನಿರ್ವಹಿಸಿದ್ದಾರೆ. ಚಿತ್ರದ 5 ಹಾಡುಗಳಿಗೆ ಶ್ರೀಶಾಸ್ತ ಸಂಗೀತ ಸಂಯೋಜನೆ ಮಾಡಿದ್ದು, ಬಹದ್ದೂರ್ ಚೇತನ್, ಯೋಗರಾಜ ಭಟ್ ಸಾಹಿತ್ಯ ರಚಿಸಿದ್ದಾರೆ ಎಂದು ಹೇಳಿದರು.ಇದನ್ನೂ ಓದಿ:ನಟಿ ಮಹಾಲಕ್ಷ್ಮಿ ಪತಿ ರವೀಂದ್ರ ಬಂಧನ

    ನಾಯಕ ಪ್ರಶಾಂತ್ ಮಾತನಾಡುತ್ತ ಪೂನಾ ಫಿಲಂ ಇನ್ ಸ್ಟಿಟ್ಯೂಟ್‌ನಲ್ಲಿ ಅಭಿನಯ ಕಲಿತ ನಂತರ ಸೀರಿಯಲ್‌ಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡಿಕೊಂಡಿದ್ದೆ. ಸಾಗರ್ ಅವರು ಕರೆದು ನನಗೀ  ಅವಕಾಶ ಕೊಟ್ಟಿದ್ದಾರೆ. ಈ ಚಿತ್ರದ ಮೂಲಕ ಮೊದಲಬಾರಿಗೆ ನಾಯಕನಾಗಿ ಕಾಣಿಸಿಕೊಂಡಿದ್ದೇನೆ. ಒಬ್ಬ ಮಿಡಲ್ ಕ್ಲಾಸ್ ಹುಡುಗ, ಲವರ್ ಬಾಯ್, ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಆತ ಹೇಗೆಲ್ಲ ಹೋರಾಡುತ್ತಾನೆಂದು ನನ್ನ ಪಾತ್ರದ ಮೂಲಕ ತೋರಿಸಿದ್ದಾರೆ ಎಂದು ಹೇಳಿದರು. ನಾಯಕಿ ಹರ್ಷಿತಾ ಮಾತನಾಡಿ ನನ್ನದು ತುಂಬಾ ವೇರಿಯೇಶನ್ಸ್ ಇರುವ ಪಾತ್ರ, ಪ್ರೀತಿಯ ವಿಷಯದಲ್ಲಿ ಆಕೆ ಯಾವ ನಿರ್ಧಾರ ತಗೋತಾಳೆ ಅನ್ನುವುದೇ ಈ ಚಿತ್ರದ ಕಥೆ ಎಂದು ವಿವರಿಸಿದರು.

     

    ನಿರ್ಮಾಪಕ ಬಸವರಾಜ್ ಬೆಣ್ಣೆ ಮಾತನಾಡಿ ರವಿಬೆಣ್ಣೆ ಹಾಗೂ ನಾನು ಇಬ್ಬರೂ ಸಹೋದರರು. ಬೆಳಗಾವಿಯ ರೈತ ಕುಟುಂಬದಿಂದ ಬಂದವರು. ಪೂನಾದಲ್ಲಿ ಇಂಡಸ್ಟ್ರಿ ನಡೆಸುತ್ತಿದ್ದೇವೆ. ಸಾಗರ್ ನಮ್ಮನ್ನು ಭೇಟಿಯಾಗಿ ಈ ಕಥೆ ಹೇಳಿದರು. ಹೊಸಬರಿಗೆ ಅವಕಾಶ ಕೊಡಬೇಕೆಂದು ಈ ಸಿನಿಮಾ ನಿರ್ಮಾಣ ಮಾಡಿದ್ದೇವೆ ಎಂದು ಹೇಳಿದರು. ವಿಲನ್ ರೋಲ್ ಮಾಡಿರುವ ಪ್ರಶಾಂತ್ ಶೆಟ್ಟಿ ಮಾತನಾಡಿ ನನ್ನ ಪಾತ್ರ ರವಿಶಂಕರ್ ಅವರಜೊತೆ ಬರುತ್ತದೆ ಎಂದರು. ಛಾಯಾಗ್ರಾಹಕ ಮನುರಾಜ್ ಮಾತನಾಡಿ ಈ ಹಿಂದೆ ಮೆಲೋಡಿ ಡ್ರಾಮಾ ಚಿತ್ರಕ್ಕೆ ಕ್ಯಾಮೆರಾ ವರ್ಕ್ ಮಾಡಿದ್ದೆ, ಇದು ಎರಡನೇ ಚಿತ್ರ. ಬೆಂಗಳೂರು ಸುತ್ತಮುತ್ತ ಈವರೆಗೆ 35 ದಿನಗಳ ಕಾಲ ಚಿತ್ರದ ಶೂಟಿಂಗ್  ನಡೆಸಿದ್ದೇವೆ ಎಂದರು. ಟಿ.ಎಸ್. ನಾಗಾಭರಣ, ಬಲ ರಾಜವಾಡಿ, ಪ್ರಸನ್ನ ಉಳಿದ ಪಾತ್ರ ವರ್ಗದಲ್ಲಿದ್ದಾರೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಳ್ಳಿ ಪರದೆ ಮೇಲೆ ‘ಸೂರ್ಯ’ನ ಮಾಸ್ ಲವ್ ಸ್ಟೋರಿ

    ಬೆಳ್ಳಿ ಪರದೆ ಮೇಲೆ ‘ಸೂರ್ಯ’ನ ಮಾಸ್ ಲವ್ ಸ್ಟೋರಿ

    ಬಿ.ಸುರೇಶ್ ಅವರ ಬಹುತೇಕ ಚಿತ್ರಗಳಿಗೆ  ಸಹನಿರ್ದೇಶಕರಾಗಿ  ಕೆಲಸ ಮಾಡಿರುವ  ಸಾಗರ್ ಈಗ ನಿರ್ದೇಶಕರಾಗಿದ್ದಾರೆ. ವಿಭಿನ್ನವಾದ ಮಾಸ್ ಲವ್ ಸ್ಟೋರಿ ಒಳಗೊಂಡ “ಸೂರ್ಯ” ಎಂಬ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು  ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಮುಹೂರ್ತ ಸಮಾರಂಬ ಕಳೆದ ಸೋಮವಾರ ಮಹಾಲಕ್ಷ್ಮಿ ಲೇಔಟ್ ನ ಶ್ರೀ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಹೊಸ ಪ್ರತಿಭೆ ಪ್ರಶಾಂತ್ ಈ ಚಿತ್ರದ ನಾಯಕನಾಗಿದ್ದು, ಹರ್ಷಿತಾ ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    ಮುಹೂರ್ತದ ನಂತರ ಚಿತ್ರದ ಕುರಿತಂತೆ ಮಾತನಾಡಿದ ನಿರ್ದೇಶಕ ಸಾಗರ್, ಸೂರ್ಯ ನಮ್ಮ ಚಿತ್ರದ ನಾಯಕನ ಹೆಸರು. ನಾಯಕ ಪ್ರೀತಿಗೋಸ್ಕರ ಯುದ್ದವನ್ನೇ ಮಾಡಿ ಹೇಗೆ ತನ್ನ ಪ್ರೀತಿಯನ್ನು ಉಳಿಸಿಕೊಳ್ಳುತ್ತಾನೆ ಎನ್ನುವುದೇ ಸೂರ್ಯ ಚಿತ್ರದ ಕಾನ್ಸೆಪ್ಟ್. ಬೆಂಗಳೂರು ಸುತ್ತಮುತ್ತ ಮಾತಿನ ಭಾಗದ ಚಿತ್ರೀಕರಣ ನಡೆಸಿ ಹಾಡುಗಳಿಗೆ ಮಡಿಕೇರಿ, ಮೈಸೂರು, ಪೂನಾಗೆ ಹೋಗುವ ಯೋಜನೆಯಿದೆ. ಇದನ್ನೂ ಓದಿ:ಏಕಾಂಗಿಯಾಗಿ ಹನಿಮೂನ್ ಸ್ಪಾಟ್, ಬಾಲಿಗೆ ಹಾರಿದ ನಿವೇದಿತಾ ಗೌಡ

    ಆರ್ಮುಗಂ ರವಿಶಂಕರ್ ಅವರನ್ನು ಈವರೆಗೆ ನೋಡಿರದಂಥ ಪಾತ್ರದಲ್ಲಿ ನೋಡಬಹುದು. ಅಲ್ಲದೆ ಶೃತಿ  ಅವರು ಒಬ್ಬ ಡಾಕ್ಟರ್ ಅಗಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಈಗಿನ ಕಾಲದ ಅಮ್ಮನೂ ಹೌದು ಕಾಂತಾರ ಖ್ಯಾತಿಯ ಪ್ರಮೋದ್ ಶೆಟ್ಟಿ ಅವರು ಉತ್ತರ ಕರ್ನಾಟಕ ಶೈಲಿಯ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ನಮ್ಮ ಚಿತ್ರದಲ್ಲಿ ೫ ಹಾಡುಗಳಿದ್ದು ಶ್ರೀಶಾಸ್ತ  ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಬಹದ್ದೂರ್ ಚೇತನ್, ನಾನು ಯೋಗರಾಜ ಭಟ್ ಸಾಹಿತ್ಯ ರಚಿಸಿದ್ದೇವೆ. ಮುಂದಿನ ವಾರದಿಂದ ಶೂಟಿಂಗ್ ಹೊರಡಲಿದ್ದೇವೆ ಎಂದು ಹೇಳಿದರು.  ನಂದಿ ಸಿನಿಮಾಸ್ ಮೂಲಕ ಬಸವರಾಜ್ ಬೆಣ್ಣೆ ಹಾಗೂ ರವಿ ಬೆಣ್ಣೆ ಸಹೋದರರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಮನುರಾಜ್ ಈ ಚಿತ್ರದ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹೊಸ ಹುಡುಗರ ಸಾಹಸಕ್ಕೆ ಸಾಥ್ ನೀಡಿದ ಡಾಲಿ ಧನಂಜಯ್: ಸ್ಯಾಂಡಲ್ ವುಡ್ ಗೆ ನವ ‘ಸೂರ್ಯ’

    ಹೊಸ ಹುಡುಗರ ಸಾಹಸಕ್ಕೆ ಸಾಥ್ ನೀಡಿದ ಡಾಲಿ ಧನಂಜಯ್: ಸ್ಯಾಂಡಲ್ ವುಡ್ ಗೆ ನವ ‘ಸೂರ್ಯ’

    ನ್ನಡ ಸಿನಿಮಾ ರಂಗದ ಖ್ಯಾತ ನಿರ್ದೇಶಕ, ನಟ ಬಿ.ಸುರೇಶ ಬಳಿ ಕೆಲಸ ಮಾಡಿದ ಸಾಗರ್ (Sagar), ಇದೀಗ ಸಿನಿಮಾ ರಂಗಕ್ಕೆ ನಿರ್ದೇಶಕರಾಗಿ ಪ್ರವೇಶ ಮಾಡುತ್ತಿದ್ದಾರೆ. ಇವರ ನಿರ್ದೇಶನದಲ್ಲಿ ಬರುತ್ತಿರುವ ಚಿತ್ರಕ್ಕೆ ‘ಸೂರ್ಯ’ (Surya) ಎಂದು ಹೆಸರಿಡಲಾಗಿದೆ. ಈ ಸಿನಿಮಾದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಮತ್ತೋರ್ವ ನಾಯಕ ನಟನ ಎಂಟ್ರಿ ಆಗುತ್ತಿದ್ದು, ಸೂರ್ಯ ಚಿತ್ರದ ಮೂಲಕ ಪ್ರಶಾಂತ್ (Prashant) ಚಿತ್ರ ರಂಗಕ್ಕೆ ಪ್ರವೇಶ ಮಾಡುತ್ತಿದ್ದಾರೆ. ಇಂದು ಪ್ರಶಾಂತ್ ಅವರ ಹುಟ್ಟು ಹಬ್ಬವಾಗಿದ್ದು, ಈ ದಿನದಂದು ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಡಾಲಿ ಧನಂಜಯ್ (Dhananjay) ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ತಂಡಕ್ಕೆ ಸಾಥ್ ನೀಡಿದ್ದಾರೆ.

    ನಿರ್ದೇಶಕ ಸಾಗರ್ ಈ ಹಿಂದೆ ಕಿರುತೆರೆ ಜಗತ್ತಿನಲ್ಲಿ ಸಾಕಷ್ಟು ಕೆಲಸ ಮಾಡಿದ್ದು, ಇದೀಗ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದಾರೆ. ಮೊದಲ ಸಿನಿಮಾದಲ್ಲೇ ಲವ್ ಸ್ಟೋರಿ ಜೊತೆಗೆ ಸಾಹಸ ಪ್ರಧಾನ ಅಂಶಗಳನ್ನು ಬೆರೆಸಿ, ಪಕ್ಕಾ ಕಮರ್ಷಿಯಲ್ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪ್ರಶಾಂತ್ ಅವರನ್ನು ಪರಿಚಯಿಸುತ್ತಿದ್ದು, ಪ್ರಶಾಂತ್ ಕೂಡ ಪಾತ್ರಕ್ಕೆ ಬೇಕಾದ ಎಲ್ಲ ಸಿದ್ಧತೆಯನ್ನೂ ಮಾಡಿಕೊಂಡು ಕ್ಯಾಮೆರಾ ಮುಂದೆ ನಿಲ್ಲುತ್ತಿದ್ದಾರೆ. ಇದನ್ನೂ ಓದಿ:ಸೋಮಣ್ಣ – ಗುರೂಜಿ ಗೆಲುವು ನೋಡಿ, ಗಳಗಳನೆ ಅತ್ತ ಸಾನ್ಯ ಅಯ್ಯರ್

    ಪಕ್ಕಾ ತಯಾರಿಯೊಂದಿಗೆ ಸಿನಿಮಾ ಶುರು ಮಾಡಿರುವ ತಂಡ, ಈ ತಿಂಗಳು ಚಿತ್ರಕ್ಕೆ ಮುಹೂರ್ತ ಸಮಾರಂಭ ನಡೆಯುತ್ತಿದ್ದು, ಅಕ್ಟೋಬರ್ ನಿಂದ ಚಿತ್ರೀಕರಣ ಆರಂಭಿಸಲಿದೆ. ಚಿತ್ರದ ಟ್ಯಾಗ್ ಲೈನ್ ‘ದಿ ಪವರ್ ಆಫ್ ಲವ್’ ಹೇಳುವಂತೆ, ಅದ್ಭುತವಾದ ಲವ್ ಸ್ಟೋರಿಯನ್ನು ಈ ಸಿನಿಮಾದಲ್ಲಿ ಹೇಳಲಿದ್ದಾರಂತೆ ನಿರ್ದೇಶಕರು. ರವಿಶಂಕರ್ (Ravi Shankar), ಶ್ರುತಿ, ಪ್ರಮೋದ್ ಶೆಟ್ಟಿ ಸೇರಿದಂತೆ ಪ್ರತಿಭಾವಂತ ಕಲಾವಿದರ ತಂಡವೇ ಸಿನಿಮಾದಲ್ಲಿದೆ.

    ತಾಂತ್ರಿಕ ವರ್ಗವೂ ಇದಕ್ಕೆ ಹೊರತಾಗಿಲ್ಲ. ಕೆಜಿಎಫ್ ಸಿನಿಮಾದ ಸಿನಿಮಾಟೋಗ್ರಾಫರ್ ಭುವನ್ ಜೊತೆ ಕೆಲಸ ಮಾಡಿರುವ ಮನುರಾಜ್ ಕ್ಯಾಮೆರಾಮೆನ್ ಆಗಿದ್ದು, ಖ್ಯಾತ ಸಂಗೀತ ನಿರ್ದೇಶಕ ಯುವನ್ ಶಂಕರ್ ರಾಜ್ ಬಳಿ ಕೆಲಸ ಮಾಡಿರುವ ಶ್ರೀಸಸ್ತ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿರಲಿದೆ. ನಂದಿ ಸಿನಿಮಾಸ್ ಬ್ಯಾನರ್ ಅಡಿ ಬಸವರಾಜ್ ಬೆಣ್ಣಿ (Basavaraj Benni) ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಚಂದದ ಭಾವನೆ, ತುಂಬಿದೆ ಘಮ್ಮನೆ’ ಹಾಡು ಹುಡುಗರ ಹೃದಯ ಕುಣಿಸುತ್ತಿದೆ!

    ‘ಚಂದದ ಭಾವನೆ, ತುಂಬಿದೆ ಘಮ್ಮನೆ’ ಹಾಡು ಹುಡುಗರ ಹೃದಯ ಕುಣಿಸುತ್ತಿದೆ!

    ಯೋಗರಾಜ್ ಭಟ್ಟರ ಸಾಹಿತ್ಯ ಅಂದ್ರೇನೆ ಹಾಗೆ. ಕಾಮನ್ ಪೀಪಲ್ ಗೂ ಆ ಸಾಹಿತ್ಯ ಮನದೊಳಗೆ ಕೂತು ತೇಲಾಡಿಸುವಂತಿರುತ್ತದೆ. ನಮ್ಮ ನಮ್ಮ ನಡುವಿನ ಕೆಲವು ಸಂಭಾಷಣೆಗಳೇ ಸಾಹಿತ್ಯವಾಗಿ ಹೊರಹೊಮ್ಮುತ್ತದೆ. ಸಂಗೀತದ ಜ್ಞಾನ ಇಲ್ಲದವರಿಗೂ ಯೋಗರಾಜ್ ಭಟ್ಟರ ಸಾಹಿತ್ಯ ಮನಸ್ಸಿಗೆ ನಾಟುವಂತಿರುತ್ತದೆ. ಹಾಗಾಗಿಯೇ ಅವರ ಸಾಹಿತ್ಯಕ್ಕೆ ಹುಡುಗರು ಹುಚ್ಚೆದ್ದು ಕುಣಿಯುವುದು. ಅವರ ಕುಂಚದಿಂದ ಮೂಡಿದ ಹಾಡಿಗೆ ಅಷ್ಟು ಡಿಮ್ಯಾಂಡ್ ಕ್ರಿಯೇಟ್ ಆಗೋದು. ಇದೀಗ ಅಂತದ್ದೆ ಒಂದು ಹಾಡು ಭಟ್ಟರ ಭತ್ತಳಿಕೆಯಿಂದ ಹೊರ ಬಂದಿದ್ದು, ಹಳ್ಳಿ ಹೈದರ ಹೃದಯವನ್ನ ಕುಣಿಸುತ್ತಿದೆ.

    ಮೊದಲ ಬಾರಿಗೆ ರಾಗಿ ಮುದ್ದೆ ಎಂಬ ವಿಷಯಾಧಾರಿತದ ಮೇಲೆ ಸೂನಗಹಳ್ಳಿ ರಾಜು ‘ಆನೆ ಬಲ’ ಸಿನಿಮಾವನ್ನ ನಿರ್ದೇಶನ ಮಾಡಿದ್ದಾರೆ. ಇದೇ 28 ರಂದು ತೆರೆಗೆ ಬರಲು ಸಿದ್ಧವಾಗಿರುವ ಸಿನಿಮಾದ ಹಾಡೊಂದು ರಿಲೀಸ್ ಆಗಿದ್ದು, ಸೌಂಡ್ ಮಾಡ್ತಾ ಇದೆ. ಯೋಗರಾಜ್ ಭಟ್ ಸಾಹಿತ್ಯ ಬರೆದೊರುವ ‘ಚಂದದ ಭಾವನೆ’ ಎಂಬ ಹಾಡನ್ನು ಪೂರ್ಣಚಂದ್ರ ತೇಜಸ್ವಿ ಕಂಪೋಸ್ ಮಾಡಿದ್ದಾರೆ. ಅಷ್ಟೇ ಸೊಗಸಾಗಿ ಅನನ್ಯ ಭಟ್ ಹಾಡಿಗೆ ಕಂಠ ನೀಡಿದ್ದಾರೆ.

    ಹಳ್ಳಿ ಹೈಕ್ಳ ಪ್ರೀತಿ ಆ ಹಾಡಿನಲ್ಲಿ ಸೊಗಸಾಗಿ ಕಾಣುತ್ತಿದೆ. ಪ್ರೀತಿ ಮಾಡುವವರ ಆಸೆ, ಪ್ರಿಯತಮನ ಹೊಗಳಿಕೆ ಎಲ್ಲವನ್ನು ಹಾಡಿನಲ್ಲೇ ಮೈರೋಮಾಂಚನಗೊಳ್ಳುವಂತೆ ಹೇಳಲಾಗಿದೆ. ಹಳ್ಳಿ ಕಡೆ ಪ್ರೀತ ಆದ್ರೂ ಅದನ್ನ ಕೊಂಚ ಭಯದಲ್ಲೇ ವ್ಯಕ್ತಪಡಿಸಲಾಗುತ್ತೆ. ಮನಸ್ಸಲ್ಲಿ ಆಸೆ ಇದ್ರು ಕದ್ದು ಮುಚ್ಚಿ ಪಡೆದುಕೊಳ್ಳಬೇಕಾಗುತ್ತದೆ. ಈ ಎಲ್ಲಾ ಅಂಶಗಳು ಆ ಹಾಡಿನಲ್ಲಿ ಅಡಕವಾಗಿರುವುದು ನೋಡುವಾಗ ಫೀಲ್ ಆಗುತ್ತೆ. ಒಮ್ಮೆ ತಮ್ಮ ಪ್ರಿಯತಮ ಅಥವಾ ಪ್ರಿಯತಮೆಯ ಕನಸಿಗೆ ಜಾರುವಂತೆ ಈ ಹಾಡು ಎಲ್ಲರನ್ನು ಮೈ ಮರೆಸಿದೆ.

    ಜನತಾ ಟಾಕೀಸ್ ಬ್ಯಾನರ್ ಸಂಸ್ಥೆಯಡಿ ಎ.ವಿ ವೇಣುಗೋಪಾಲ್ (ಅಡಕಿಮಾರನಹಳ್ಳಿ) ನಿರ್ಮಿಸಿರುವ ‘ಆನೆ ಬಲ’ ಸಿನಿಮಾ ಇದೇ 28 ರಂದು ರಿಲೀಸ್ ಆಗ್ತಾ ಇದೆ. ಈಗಾಗಲೇ ಪೋಸ್ಟರ್, ಟ್ರೇಲರ್ ಗಳಿಂದಲೇ ಸಖತ್ ಸುದ್ದಿಯಲ್ಲಿದ್ದ ಸಿನಿಮಾ ಇದೀಗ ಹಾಡೊಂದು ರಿಲೀಸ್ ಆಗಿದ್ದು ಎಲ್ಲರ ಮನಸ್ಸಿಗೆ ನಾಟುವಂತಿದೆ. ಸೂನಗಹಳ್ಳಿ ರಾಜು ನಿರ್ದೆಶನ ಮಾಡಿದ್ದು, ಜೆ.ಟಿ ಬೆಟ್ಟೆಗೌಡ ಛಾಯಾಗ್ರಹಣ, ಬಿ.ಎಸ್ ಕೆಂಪರಾಜು ಸಂಕಲನ, ಈಶ್ವರಿ ಕುಮಾರ್ ಕಲಾನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

  • ನೈಜ ಘಟನೆಗೆ ಹಾಸ್ಯದ ಟಚ್ ನೀಡಿರುವ ‘ಆನೆ ಬಲ’

    ನೈಜ ಘಟನೆಗೆ ಹಾಸ್ಯದ ಟಚ್ ನೀಡಿರುವ ‘ಆನೆ ಬಲ’

    ಮುದ್ದೆ ತಿನ್ನುವ ಸ್ಪರ್ಧೆ ಒಂದು ಜಾನಪದ ಕಲೆ. ಮಂಡ್ಯ ಜಿಲ್ಲೆ ಕಡೆ ಈಗಲೂ ಜಾತ್ರೆಗಳಲ್ಲಿ ಈ ಸ್ಪರ್ಧೆ ನಡೆಯಲಿದೆ. ಇದೆ ವಿಚಾರವನ್ನಿಟ್ಟುಕೊಂಡು ಸೊನಗಹಳ್ಳಿ ರಾಜು ಸಿನಿಮಾವೊಂದನ್ನ ಸಿದ್ಧ ಮಾಡಿದ್ದಾರೆ. ಹಳ್ಳಿ ಸೊಗಡನ್ನ ಸಾರುವ ‘ಆನೆ ಬಲ’ ಈಗಾಗಲೇ ಎಲ್ಲೆಡೆ ಟಾಕ್ ಕ್ರಿಯೇಟ್ ಮಾಡಿದೆ. ಇದೇ ತಿಂಗಳ 28ರಂದು ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.

    ‘ಆನೆ ಬಲ’ ರೂರಲ್ ಬ್ಯಾಕ್ ಡ್ರಾಪ್ ನಲ್ಲಿ ನಡೆಯುವ ಕಥೆ. ಜಾನಪದ ಅಂಶಗಳು ಸಿನಿಮಾದಲ್ಲಿ ಬಹಳಷ್ಟಿದೆ. ರಾಗಿ ಮುದ್ದೆ ತಿನ್ನೋ ಸ್ಪರ್ಧೆಯ ಸುತ್ತ ಈ ಕಥೆಯನ್ನು ತೆಗೆಯಲಾಗಿದೆ. ಇದರ ಜೊತೆಯಲ್ಲಿ ಹಳ್ಳಿಯಲ್ಲಿ ನಡೆಯುವ ಸಾಮಾಜಿಕ ಕೆಲಸಗಳಿಗೆ ನಾಯಕ ಮತ್ತವರ ತಂಡ ಹೇಗೆ ಕೆಲಸ ಮಾಡುತ್ತದೆ ಎಂಬುದು ಸಿನಿಮಾದಲ್ಲಿದೆ. ಈಗಾಗಲೇ ಟ್ರೇಲರ್ ರಿಲೀಸ್ ಆಗಿದ್ದು ಸಖತ್ ಸದ್ದು ಮಾಡುತ್ತಿದೆ.

    ನೆಲ, ಜಲ, ತನ್ನೂರು, ತನ್ನ ಜನ ಅಂತ ನಾಯಕ ಹೆಚ್ಚು ಅದಕ್ಕೆ ಒತ್ತು ಕೊಡುತ್ತಾನೆ. ಜಾನಪದ, ಹಳ್ಳಿ ಜೀವನ, ಸಂಸ್ಕೃತಿಗೆ ಅಲ್ಲಿ ಹೆಚ್ಚು ಪ್ರಾಮುಖ್ಯತೆ ಅಲ್ಲಿ ಎದ್ದು ಕಾಣುತ್ತದೆ. ಗ್ರಾಮೀಣ ಭಾಗದಲ್ಲಿನ ಒಳ ನೋಟಗಳಿಗೆ ಹೆಚ್ಚು ಫೋಕಸ್ ಮಾಡಿರುವ ಸೂನಗನಹಳ್ಳಿ ರಾಜು, ಮೊದಲ ಬಾರಿಗೆ ರಾಗಿ ಮುದ್ದೆ ಮೇಲೆ ಸಿನಿಮಾ ಮಾಡಿರುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಎಲ್ಲೂ ವೈಭೋಪೇತ, ಆಡಂಬರ ಎನಿಸದೆ ಕ್ಯಾಂಡಿಡ್ ರೀತಿಯಲ್ಲಿ ಸಿನಿಮಾ ಚಿತ್ರೀಕರಿಸಲಾಗಿದೆ. ಇದೇ ತಿಂಗಳ 28 ಕ್ಕೆ ರಿಲೀಸ್ ಆಗುತ್ತಿದ್ದು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.

    ಛಾಯಾಗ್ರಹಣ ಜೆ.ಟಿ. ಬೆಟ್ಟೇಗೌಡ ಕೀಲಾರ ಅವರದು. ಗೌತಂ, ಚಿರಂಜೀವಿ, ಹರೀಶ್ ಶೆಟ್ಟಿ, ಕೀಲಾರ ಉದಯ್, ಸುಮಾ, ರೂಪಾ, ಮುತ್ತುರಾಜು ತಾರಾಗಣದಲ್ಲಿ ಇದ್ದಾರೆ.

  • ಹಳ್ಳಿ ಹೈಕ್ಳ ನಿದ್ದೆ ಕೆಡಿಸುತ್ತಿದೆ ‘ಆನೆ ಬಲ’ ಹಾಡುಗಳು..!

    ಹಳ್ಳಿ ಹೈಕ್ಳ ನಿದ್ದೆ ಕೆಡಿಸುತ್ತಿದೆ ‘ಆನೆ ಬಲ’ ಹಾಡುಗಳು..!

    ಮುದ್ದೆ ತಿಂದು ಒಳ್ಳೆ ನಿದ್ದೆ ಮಾಡು ಅನ್ನೋ ಮಾತಿದೆ. ಅದ್ರಲ್ಲೂ ನಾಟಿ ಕೋಳಿ ಸಾರು ಮಾಡಿದಾಗ ರಾಗಿ ಮುದ್ದೆ ಇಲ್ಲಂದ್ರೆ ಊಟದ ರುಚಿ ಗೊತ್ತಾಗೋದೆ ಇಲ್ಲ. ಇಂತ ರಾಗಿ ಮುದ್ದೆಯನ್ನೇ ಆಧಾರವಾಗಿಟ್ಟುಕೊಂಡು ಸೂನಗಹಳ್ಳಿ ರಾಜು ‘ಆನೆ ಬಲ’ ಎಂಬ ಸಿನಿಮಾವನ್ನು ಸಿದ್ಧ ಮಾಡಿದ್ದಾರೆ. ಇದೇ 28 ರಂದು ಸಿನಿಮಾ ತೆರೆ ಮೇಲೆ ರಾರಾಜಿಸಲಿದೆ. ಸಿನಿಮಾ ಈಗಾಗಲೇ ಟ್ರೇಲರ್ ನಿಂದಲೇ ಸದ್ದು ಮಾಡಿರುವ ‘ಆನೆ ಬಲ’ದಲ್ಲಿ ಮತ್ತಷ್ಟು ವಿಶೇಷತೆಗಳಿವೆ. ಯೋಗರಾಜ್ ಭಟ್ಟರ ಸಾಹಿತ್ಯ ಈ ಸಿನಿಮಾದಲ್ಲಿದೆ.

    ಯೋಗರಾಜ್ ಭಟ್ಟರ ಸಾಹಿತ್ಯ ಅಂದ್ರೆ ಯುವಕರಿಗೆ ಎಲ್ಲಿಲ್ಲದ ಕ್ರೇಜು. ಅವರ ಹಾಡುಗಳು ಅಂದ್ರೆ ಯುವಕರಿಗೆ ಮತ್ತೇರಿಸುವಂತಿರುತ್ತದೆ. ಈ ಸಿನಿಮಾದಲ್ಲೂ ಯೋಗರಾಜ ಭಟ್ಟರ ಸಾಹಿತ್ಯವಿದ್ದು ಇನ್ನಷ್ಟು ನಿರೀಕ್ಷೆಯನ್ನ ಹುಟ್ಟಿಸಿದೆ. ಜಾನಪದ ಶೈಲಿಗೆ, ಯೋಗರಾಜ ಭಟ್ಟರ ಸಾಹಿತ್ಯ ಬೆರೆತರೆ ಅಲ್ಲೊಂದು ಹುಚ್ಚೆಬ್ಬಿಸುವ ಹಾಡುಗಳು ಕಿವಿಗೆ ಬೀಳದೆ ಇರಲು ಸಾಧ್ಯವೇ ಇಲ್ಲ. ಯೋಗರಾಜ್ ಭಟ್ಟರ ಸಾಹಿತ್ಯಕ್ಕೆ ಪೂರ್ಣಚಂದ್ರ ತೇಜಸ್ವಿಯವರ ಸಂಗೀತವಿದೆ.

    ಪೂರ್ಣಚಂದ್ರ ತೇಜಸ್ವಿಯವರ ಹಾಡುಗಳಿಗೆ ಫಿದಾ ಆಗದವರೇ ಇಲ್ಲ. ಹಳ್ಳಿ ಸೊಗಡಿನ ಕಥೆಗೆ ಅದ್ಭುತವಾದ ಸಾಹಿತ್ಯ ನೀಡಿರುವ ಯೋಗರಾಜ್ ಭಟ್ಟರು ಒಂದು ಕಡೆಯಾದ್ರೆ, ಯುವಕರ ಹೃದಯ ತಟ್ಟುವಂತ, ವಾವ್ ಎನ್ನಿಸುವಂತ ಸಂಗೀತ ನೀಡುವ ಪೂರ್ಣಚಂದ್ರ ತೇಜಸ್ವಿಯವರು ಇನ್ನೊಂದು ಕಡೆ. ಹೀಗಾಗಿ ಒಂದೊಳ್ಳೆ ಹಾಡುಗಳು ಸಿನಿಮಾದಲ್ಲಿ ಮೂಡಿ ಬಂದಿವೆ. ಈಗಾಗಲೇ ರಿಲೀಸ್ ಆಗಿರುವ ‘ಮಳವಳ್ಳಿ ಜಾತ್ರೆಲಿ, ರಾಗಿ ಮುದ್ದೆ’ ಹಾಡುಗಳು ಹಿಟ್ ಆಗಿವೆ. ಸಿನಿಮಾದಲ್ಲಿ ಜಾನಪದ ಶೈಲಿಯ ಹಾಡುಗಳು ಕಿವಿಗೆ ಇಂಪು ನೀಡುತ್ತವೆ.

    ಜನತಾ ಟಾಕೀಸ್ ನ ಚೊಚ್ಚಲ ಕಾಣಿಕೆಯೇ ಈ ‘ಆನೆ ಬಲ’. ಎ.ವಿ ವೇಣುಗೋಪಾಲ್ ಅಡಕಿಮಾರನಹಳ್ಳಿ ಈ ಸಿನಿಮಾದ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಸೂನಗಹಳ್ಳಿ ರಾಜು ನಿರ್ದೇಶನ ಮಾಡಿದ್ದಾರೆ. ಸಾಗರ್ ನಾಯಕನಾಗಿದ್ದು, ರಕ್ಷಿತಾ ನಾಯಕಿಯಾಗಿದ್ದಾರೆ. ಮಲ್ಲರಾಜು, ಉದಯ್ ಕುಮಾರ್, ಮುತ್ತು ರಾಜ್ ಸೇರಿದಂತೆ ಅನೇಕರು ತಾರಾಬಳಗದಲ್ಲಿದ್ದಾರೆ. ಇದೆ ತಿಂಗಳ 28 ರಂದು ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ.