Tag: ಸಾಕ್ಸ್

  • ಶಾಲಾ ಮಕ್ಕಳಿಗೆ ನಾಲ್ಕು ಜೊತೆ ಶೂ, ಸಾಕ್ಸ್ ಕೊಡಿ: ಪ್ರದೀಪ್ ಈಶ್ವರ್ ಆಗ್ರಹ

    ಶಾಲಾ ಮಕ್ಕಳಿಗೆ ನಾಲ್ಕು ಜೊತೆ ಶೂ, ಸಾಕ್ಸ್ ಕೊಡಿ: ಪ್ರದೀಪ್ ಈಶ್ವರ್ ಆಗ್ರಹ

    – 8ನೇ ತರಗತಿ ಮಕ್ಕಳಿಗೆ ಮತ್ತೆ ಸೈಕಲ್ ವಿತರಣೆಗೆ ಶಾಸಕ ಒತ್ತಾಯ

    ಬೆಳಗಾವಿ: ಶಾಲಾ ಮಕ್ಕಳಿಗೆ (School Students) ಎರಡು ಜೊತೆ ಬದಲು ನಾಲ್ಕು ಜೊತೆ ಶೂ (Shoe), ಸಾಕ್ಸ್ (Socks) ಕೊಡುವಂತೆ ಚಿಕ್ಕಬಳ್ಳಾಪುರ (Chikkaballapura) ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಆಗ್ರಹಿಸಿದ್ದಾರೆ.

    ಪರಿಷತ್‌ನಲ್ಲಿ ಪ್ರಶ್ನೋತ್ತರ ವೇಳೆ ಮಾತನಾಡಿದ ಅವರು, ಸರ್ಕಾರಿ ಶಾಲೆಗಳ ಎಂಟನೇ ತರಗತಿ ಮಕ್ಕಳಿಗೆ ಮತ್ತೆ ಸೈಕಲ್ (Cycle) ವಿತರಣೆ ಮಾಡುವಂತೆ ಒತ್ತಾಯಿಸಿದ್ದಾರೆ. ಅಲ್ಲದೇ ಮುಂದಿನ ಬಜೆಟ್‌ನಲ್ಲಿ ಸೈಕಲ್ ವಿತರಣೆಗೆ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದು, ಸಿಎಂ ಹಾಗೂ ಆರ್ಥಿಕ ಇಲಾಖೆ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಇದನ್ನೂ ಓದಿ: ಶೋಭಾ ಕರಂದ್ಲಾಜೆ ಸೇರಿ ನಾಲ್ವರು ಕೇಂದ್ರ ಸಚಿವರಿಗೆ ಹೆಚ್ಚುವರಿ ಖಾತೆಗಳ ಉಸ್ತುವಾರಿ

    ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಮಧು ಬಂಗಾರಪ್ಪ (Madhu Bangarappa), ಇದರ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದರು. ಈ ವೇಳೆ ವಿಪಕ್ಷ ನಾಯಕ ಆರ್.ಅಶೋಕ್  (R Ashok) ಮಧ್ಯ ಪ್ರವೇಶಿಸಿ, ಇಡೀ ರಾಜ್ಯದಲ್ಲಿ ಸೈಕಲ್ ವಿತರಣೆ ಪುನರಾರಂಭಿಸಿ. ಯಡಿಯೂರಪ್ಪ ತಂದಿರುವ ಯೋಜನೆ ಅದು. ದೂರದಿಂದ ಬರುವ ಮಕ್ಕಳಿಗೆ ಸಹಾಯ ಆಗುತ್ತದೆ ಎನ್ನುವ ಮೂಲಕ ಪ್ರದೀಪ್ ಈಶ್ವರ್ ಬೆಂಬಲಕ್ಕೆ ನಿಂತರು. ಇದನ್ನೂ ಓದಿ: ಆರ್‌ಎಸ್‌ಎಸ್‌ನಲ್ಲಿ ಜಾತಿ ಕೇಳಿ ಒಳಬಿಡುವ ಪದ್ಧತಿಯಿಲ್ಲ: ರಾಜಕುಮಾರ್

    ಇದಕ್ಕೆ ಉತ್ತರಿಸಿದ ಮಧು ಬಂಗಾರಪ್ಪ, ಸೈಕಲ್ ವಿತರಣೆ ನಿಮ್ಮ ಕಾಲದಲ್ಲೇ ಸ್ಥಗಿತ ಆಯಿತು. ನಿಮ್ಮವರೇ ಆರಂಭಿಸಿ ನಿಮ್ಮ ಕಾಲದಲ್ಲೇ ಸ್ಥಗಿತ ಆಯಿತು. ಹೀಗಾಗಬಾರದಿತ್ತು. ಈಗ ನಮ್ಮ ಸರ್ಕಾರ ಸೈಕಲ್ ವಿತರಣೆಗೆ ಪರಿಶೀಲಿಸಿ ಕ್ರಮ ವಹಿಸಲಿದೆ ಎಂದು ಅಶೋಕ್‌ಗೆ ಟಾಂಗ್ ಕೊಟ್ಟರು. ಇದನ್ನೂ ಓದಿ: ಹೊನಗಾ ಕೈಗಾರಿಕಾ ಪ್ರದೇಶದಲ್ಲಿ ತಿಂಗಳಲ್ಲಿ ಖಾತಾ: ಉದ್ಯಮಿಗಳ ನಿಯೋಗಕ್ಕೆ ಎಂ.ಬಿ.ಪಾಟೀಲ್‌ ಭರವಸೆ

  • ಸರ್ಕಾರಿ ಶಾಲಾ ಮಕ್ಕಳಿಗೆ ಸರ್ಕಾರ ನೀಡುತ್ತಿದ್ದ ಶೂ & ಸಾಕ್ಸ್ ಈ ವರ್ಷ ಸಿಗೋದು ಡೌಟ್

    ಸರ್ಕಾರಿ ಶಾಲಾ ಮಕ್ಕಳಿಗೆ ಸರ್ಕಾರ ನೀಡುತ್ತಿದ್ದ ಶೂ & ಸಾಕ್ಸ್ ಈ ವರ್ಷ ಸಿಗೋದು ಡೌಟ್

    ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳಿಗೆ ಸೈಕಲ್ ಶಾಕ್ ಕೊಟ್ಟಿದ್ದ ರಾಜ್ಯ ಸರ್ಕಾರ ಈಗ ಮತ್ತೊಂದು ಶಾಕ್ ಕೊಟ್ಟಿದೆ. ಸರ್ಕಾರಿ ಶಾಲಾ ಮಕ್ಕಳಿಗೆ ನೀಡುತ್ತಿದ್ದ ಶೂ ಮತ್ತು ಸಾಕ್ಸ್ ಈ ವರ್ಷ ಸಿಗೋದು ಡೌಟ್ ಅನಿಸುತ್ತಿದೆ.

    ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಶೂ ಮತ್ತು ಸಾಕ್ಸ್ ಯೋಜನೆಗೆ ಈ ವರ್ಷ ಸರ್ಕಾರ ಹಣವೇ ಇಟ್ಟಿಲ್ಲ. ಸರ್ಕಾರಿ ಶಾಲೆಗ ಸೇರುವ 1 ರಿಂದ 10ನೇ ತರಗತಿ ವರೆಗಿನ ಬಡ ವಿದ್ಯಾರ್ಥಿಗಳು ಮತ್ತು ಸರ್ಕಾರಿ ಶಾಲೆಗೆ ಮಕ್ಕಳನ್ನು ಆಕರ್ಷಿಸಲು ಹಾಗೂ ಖಾಸಗಿ ಶಾಲೆಗಳೊಂದಿಗೆ ಸ್ಪರ್ಧೆ ಮಾಡಲು ರಾಜ್ಯ ಸರ್ಕಾರ ಪ್ರತಿ ವಿದ್ಯಾರ್ಥಿಗೆ ಒಂದು ಜೊತೆ ಶೂ ಮತ್ತು 2 ಎರಡು ಜೊತೆ ಸಾಕ್ಸ್ ನೀಡುವ ಯೋಜನೆ 2016ರಲ್ಲಿ ಜಾರಿ ಮಾಡಲಾಗಿತ್ತು. 2019-20ನೇ ಸಾಲಿನ ಕೊನೆದಾಗಿ ಸರ್ಕಾರ ಈ ಯೋಜನೆಗೆ ಹಣ ಬಿಡುಗಡೆ ಮಾಡಿತ್ತು. 2020-21, 2021-22 ಮತ್ತು ಈ ವರ್ಷ ಮಕ್ಕಳಿಗೆ ಶೂ ಮತ್ತು ಸಾಕ್ಸ್ ಭಾಗ್ಯವೇ ಇಲ್ಲದಂತೆ ಆಗಿದೆ. ಇದನ್ನೂ ಓದಿ: ಸರ್ಕಾರದ ವಿವಿಧ ಯೋಜನೆ – ರಾಜ್ಯಪಾಲರಿಂದ ಫಲಾನುಭವಿಗಳೊಂದಿಗೆ ಸಂವಾದ

    ಎರಡು ವರ್ಷ ಕೊರೊನಾ ಕಾರಣ ನೀಡಿ ಸರ್ಕಾರ ಮಕ್ಕಳಿಗೆ ಶೂ, ಸಾಕ್ಸ್ ನೀಡಿರಲಿಲ್ಲ. ಈ ವರ್ಷ ಶಾಲೆಗಳು ಪ್ರಾರಂಭ ಆಗಿ ಒಂದೂವರೆ ತಿಂಗಳು ಕಳೆಯಿತು. ಈವರೆಗೂ ಈ ಬಗ್ಗೆ ಯಾವುದೇ ಚರ್ಚೆಯನ್ನು ಮಾಡಿಲ್ಲ ಸರ್ಕಾರ. ಶಿಕ್ಷಣ ಇಲಾಖೆ ಮೂಲಗಳ ಮಾಹಿತಿ ಪ್ರಕಾರ ಈ ವರ್ಷವೂ ಮಕ್ಕಳಿಗೆ ಶೂ ಮತ್ತು ಸಾಕ್ಸ್ ಸಿಗೋದು ಡೌಟ್. ಸರ್ಕಾರಕ್ಕೆ ಆರ್ಥಿಕ ಕಷ್ಟ ಎದುರಾಗಿದೆ. ಅಲ್ಲದೆ ಈ ವರ್ಷ 15 ಸಾವಿರ ಶಿಕ್ಷಕರ ನೇಮಕ, ಕಲಿಕಾ ಚೇತರಿಕೆ ಕಾರ್ಯಕ್ರಮ ಅನುಷ್ಠಾನ, ಶಾಲಾ ಕೊಠಡಿಗಳ ರಿಪೇರಿಗೆ ಆದ್ಯತೆ ಕೊಡಲಾಗುತ್ತಿದೆ. ಹಾಗಾಗಿ ಮಕ್ಕಳಿಗೆ ಅನುಕೂಲ ಆಗೋ ಸೈಕಲ್, ಶೂ, ಸಾಕ್ಸ್ ಭಾಗ್ಯವನ್ನು ಕೈ ಬಿಡೋ ಪ್ಲಾನ್‌ ಸರ್ಕಾರ ಮಾಡಿದೆ ಎಂದು ಮೂಲಗಳಿಂದ ವರದಿಯಾಗಿದೆ. ಇದನ್ನೂ ಓದಿ: ಹೊಸದಾಗಿ ಗೆದ್ದವರ ಕ್ಷೇತ್ರಗಳು ಡೇಂಜರ್ – ಬಿಜೆಪಿ ಇಂಟರ್ನಲ್ ರಿಪೋರ್ಟ್ ಔಟ್‌

    ಸರ್ಕಾರಿ ಶಾಲೆಗಳಲ್ಲಿ ಸುಮಾರು 60-70 ಲಕ್ಷ ಮಕ್ಕಳು ಈ ಯೋಜನೆಯ ಫಲಾನುಭವಿಗಳು. 1-5ನೇ ತರಗತಿಗೆ 225 ರೂ. 6-8ನೇ ತರಗತಿಗೆ 250 ರೂ. ಮತ್ತು 9-10 ನೇ ತರಗತಿ ವಿದ್ಯಾರ್ಥಿಗಳಿಗೆ 275 ರೂ. ನಂತೆ ಶೂಗೆ ದರ ನಿಗದಿ ಮಾಡಲಾಗಿದೆ. ಆದ್ರೆ ಇದಕ್ಕೆ ಈಗ ಆರ್ಥಿಕ ಕಾರಣ ಎಂದು ಸರ್ಕಾರ ಉತ್ತರಿಸುತ್ತಿದೆ.

    Live Tv

  • ಚುಮು ಚುಮು ಚಳಿಯಲ್ಲಿ ಚರ್ಮದ ಆರೈಕೆಗೆ ಏನು ಮಾಡಬೇಕು ಗೊತ್ತಾ?

    ಚುಮು ಚುಮು ಚಳಿಯಲ್ಲಿ ಚರ್ಮದ ಆರೈಕೆಗೆ ಏನು ಮಾಡಬೇಕು ಗೊತ್ತಾ?

    ಳಿಗಾಲ ಆರಂಭವಾಗಿದ್ದು, ಜೀವನ ಶೈಲಿ ಬದಲಾವಣೆ ಆಗುತ್ತಾ ಹೋಗುತ್ತೆ. ಬೀರುವಿನಲ್ಲಿದ್ದ ಉಣ್ಣೆಯ ಬಟ್ಟೆಗಳು ಹೊರ ಬರುತ್ತವೆ. ಅಬ್ಬಾ ಎಷ್ಟು ಚಳಿ ಎಂದು ದಿನಕ್ಕೆ ಒಂದೆರೆಡು ಸಾರಿ ಹೆಚ್ಚು ಚಹಾ ಕುಡಿಯುವವರು ಕಾಣಸಿಗುತ್ತಾರೆ. ಚಳಿಗಾಲ ಆರಂಭವಾಗುತ್ತಲೇ ಎಲ್ಲ ವಯೋಮಾನದವರಲ್ಲಿ ಒಣ ತ್ವಚೆ (ಡ್ರೈ ಸ್ಕಿನ್) ಸಮಸ್ಯೆ ಆರಂಭವಾಗುತ್ತದೆ. ಇಷ್ಟು ಅಲ್ಲದೇ 3 ರಿಂದ 4 ತಿಂಗಳು ಪಾದಗಳು ಬಿರುಕು ಬಿಡಲು ಆರಂಭಿಸುತ್ತವೆ. ಈ ಸಮಸ್ಯೆಗಾಗಿ ಕೆಲವು ಟಿಪ್ಸ್​ ಈ ಕೆಳಗಿನಂತೆ ನೀಡಲಾಗಿದೆ.

    ತುಟಿ ಒಡೆಯುವುದು, ಪಾದಗಳು ಬಿರುಕು ಬಿಡುವುದು, ಕೂದಲು ಉದುರುವುದು ಸರ್ವಸಾಮಾನ್ಯವಾಗಿದೆ. ಹಲವರಿಗೆ ಚಳಿಗಾಗಲದಲ್ಲಿ ಈ ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ನೀವು ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್ ಬಳಕೆ ಮಾಡಿರುತ್ತೀರ. ಆದರೆ ನೀವೆ ಮನೆಯಲ್ಲಿ ನಿಮ್ಮನ್ನು ನೀವು ಚಳಿಗಾಲದಲ್ಲಿ ಆರೈಕೆ ಮಾಡಿಕೊಳ್ಳಬಹುದಾಗಿದೆ. ಇದನ್ನೂ ಓದಿ:   ಪಂಜಾಬ್ ಚುನಾವಣೆಗೆ ಸೋನು ಸೂದ್ ಸೋದರಿ ಸ್ಪರ್ಧೆ – ಪಕ್ಷ ಇನ್ನೂ ಸಸ್ಪೆನ್ಸ್

    * ನೀರು, ಹೆಚ್ಚು ಹೆಚ್ಚು ಕುಡಿಯುವುದರಿಂದ ಚರ್ಮವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ. ಜ್ಯೂಸ್, ಬಿಸಿ ಸೂಪ್‍ಗಳನ್ನು ಆಗಾಗ ಕುಡಿಯುತ್ತಿರಬೇಕು.
    * ಪೌಷ್ಟಿಕಾಂಶಕ್ಕಾಗಿ ಪಾಲಕ, ಕ್ಯಾರೆಟ್ ಮತ್ತು ಬೀನ್ಸ್‌ನಂತಹ ಕ್ಯಾಲೋರಿಭರಿತ ತರಕಾರಿಗಳನ್ನು ಸೇವಿಸಿ. ಪಾಲಕ್ ನಂತಹ ಹಸಿರು ತರಕಾರಿಗಳಲ್ಲಿ ನೀರಿನಂಶ ಸಮೃದ್ಧವಾಗಿವೆ. ಆದ್ದರಿಂದ, ಹೆಚ್ಚು ಹಸಿರು ತರಕಾರಿಗಳನ್ನು ತಿನ್ನುವುದು ನಿಮಗೆ ಹೈಡ್ರೇಟೆಡ್ ಆಗಿರಲು ಸಹಾಯ ಮಾಡುತ್ತದೆ. ಇದನ್ನೂ ಓದಿ:   ಹಿಂದೂ ಧರ್ಮ, ಹಿಂದುತ್ವ ಬೇರೆ ಬೇರೆ: ರಾಹುಲ್ ಗಾಂಧಿ

    * ಚಳಿಗಾದಲ್ಲಿ ಸ್ನಾನ ಮಾಡುವಾಗ ಸೋಪ್ ಬಳಸುವ ಬದಲಾಗಿ ಕಡಲೆ ಹಿಟ್ಟನ್ನು ಬಳಸಬಹುದಾಗಿದೆ.
    * ಅರಿಶಿಣ ಪುಡಿಯನ್ನು ಹಾಲಿನೊಂದಿಗೆ ಮಿಶ್ರಣ ಮಾಡಿ ಮುಖ ಮತ್ತು ಕೈ, ಕಾಲಗಳಿಗೆ ಹಚ್ಚಿ ತಣ್ಣಗಿನ ನೀರಿನಲ್ಲಿ ತೊಳೆಯುವುದರಿಂದ ಚರ್ಮದ ಆರೈಕೆ ಮಾಡಬಹುದಾಗಿದೆ.

    * ಹೆಚ್ಚಿನವರಲ್ಲಿ ಪಾದಗಳಲ್ಲಿ ಬಿರುಕು ಕಾಣಿಕೊಳ್ಳುತ್ತದೆ. ಹೀಗಾಗಿ ಅಂತಹವರು ರಾತ್ರಿ ಮಲಗುವಾಗ ಮತ್ತು ಹೊರಗೆ ಹೊಗುವ ವೇಳೆ ಸಾಕ್ಸ್ ಧರಿಸುವುದನ್ನು ರೂಢಿಮಾಡಿಕೊಳ್ಳುವುದು ಉತ್ತಮವಾಗಿದೆ.
    * ಎಣ್ಣೆ ಚರ್ಮವನ್ನು ಹೊಂದಿದವರು ರೋಸ್ ವಾಟರ್, ಕಡಲೆ ಹಿಟ್ಟನ್ನು ಮಿಶ್ರಣ ಮಾಡಿ ಹಚ್ಚುವುದರಿಂದ ಚರ್ಮ ಕಾಂತಿಯುಕ್ತವಾಗುತ್ತದೆ.

    * ತುಟಿ ಒಡೆಯುವುದು, ಒರಟಾಗುವಂತಿದ್ದರೆ ನೀವು ಬಾದಾಮಿ ಎಣ್ಣೆ, ಕೊಬ್ಬರಿ ಎಣ್ಣೆ, ಹಾಲಿನಕೆನೆಯನ್ನು ಹಚ್ಚಿ ಮಲಗುವ ಅಭ್ಯಾಸವನ್ನು ಚಳಿಗಾಲದಲ್ಲಿ ಮಾಡಿಕೊಳ್ಳಬೇಕು.
    * ಕೂದಲು ಉದುರುವ ಸಮಸ್ಯೆ ಚಳಿಗಾಗಲದಲ್ಲಿ ಕಾಣಿಸಿಕೊಳ್ಳುತ್ತದೆ ಹೀಗಾಗಿ ನೀವು ಕೊಬ್ಬರಿ ಎಣ್ಣೆ, ಹರಳೆಣ್ಣೆಯನ್ನು ತುಸು ಬಿಸಿಮಾಡಿಕೊಂಡು ಹಚ್ಚುವುದು ಒಳ್ಳೆಯದಾಗಿದೆ.

    * ಉಣ್ಣೆಯ ಬಟ್ಟೆಯನ್ನು ಧರಿಸುವುದು, ಕಿವಿಗೆ ಹತ್ತಿಯನ್ನು ಇಟ್ಟುಕೊಳ್ಳುವುದರಿಂದ ಚಳಿಯಿಂದ ದೇಹವನ್ನು ರಕ್ಷಣೆ ಮಾಡಿಕೊಳ್ಳಬಹುದಾಗಿದೆ.
    * ಸ್ವೆಟರ್, ಸ್ಕಾರ್ಪ್, ಸಾಕ್ಸ್ ಚಳಿಗಾಲದಲ್ಲಿ ಬಳಕೆ ಮಾಡುವುದು ಉತ್ತಮವಾಗಿದೆ.


    * ಚಳಿಗಾಲದಲ್ಲಿ ತೈಲ ಆಧಾರಿತ ಮಾಯಿಶ್ಚರೈಸ್‍ಗಳಾದ ಬಾದಾಮಿ ಎಣ್ಣೆ, ತೆಂಗಿನ ಎಣ್ಣೆ ಮತ್ತು ಆಲಿವ್ ಎಣ್ಣೆಯಂತಹ ನೈಸರ್ಗಿಕ ತೈಲಗಳು ನಿಮ್ಮ ಚರ್ಮವನ್ನು ತೇವಗೊಳಿಸಲು ಉತ್ತಮ ಮಾರ್ಗವಾಗಿದೆ.

  • ಸಾಕ್ಸ್ ಮಾರುತ್ತಿದ್ದ ಬಾಲಕನಿಗೆ ಸಿಎಂ ಕರೆ

    ಸಾಕ್ಸ್ ಮಾರುತ್ತಿದ್ದ ಬಾಲಕನಿಗೆ ಸಿಎಂ ಕರೆ

    ಚಂಢೀಗಢ: ಹತ್ತವರ್ಷದ ಬಾಲಕನೊಬ್ಬ ಶಾಲೆ ತ್ಯಜಿಸಿ, ರಸ್ತೆಗಳಲ್ಲಿ ಸಾಕ್ಸ್ ಮಾರುತ್ತಿರುವ ವೀಡಿಯೋವೊಂದು ಪಂಜಾಬ್‍ನಲ್ಲಿ ಹರಿದಾಡುತ್ತಿತ್ತು. ಇದರ ಬೆನ್ನಲ್ಲೇ ಬಾಲಕ ವಂಶ ಸಿಂಗ್‍ಗೆ ಅಚ್ಚರಿಯೊಂದು ಕಾದಿತ್ತು.

    ಸ್ವತಃ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಬಾಲಕನಿಗೆಕರೆ ಮಾಡಿ ನೀನು ಮತ್ತೆ ಶಾಲೆಗೆ ಸೇರಿಕೊ ನಿನ್ನ ವಿದ್ಯಾಭ್ಯಾಸ ಖರ್ಚನ್ನು ಪೂರ್ಣವಾಗಿ ಸರ್ಕಾರ ಹೊತ್ತುಕೊಳ್ಳುತ್ತದೆ. ನಿನ್ನ ಕುಟುಂಬಕ್ಕೆ ತಕ್ಷಣಕ್ಕೆ 2 ಲಕ್ಷ ರೂ. ಆರ್ಥಿಕ ನೆರವು ನೀಡಲಾಗುತ್ತದೆ ಎಂದು ತಿಳಿಸಿದ್ದರು.

    ಬಾಲಕನ ತಂದೆಯೂ ಜೀವನ ನಿರ್ವಹಣೆಗೆ ಸಾಕ್ಸ್ ಮಾರುತ್ತಾರೆ. ವಂಶ ಸಿಂಗ್‍ಗೆ ಮೂವರು ಸಹೋದರಿಯರು, ಒಬ್ಬ ಸಹೋದರ ಇದ್ದಾನೆ. ಬಾಲಕನಿಗೆ ಈ ಮಟ್ಟದ ಜನಪ್ರಿಯತೆ ಬರಲೂ ಒಂದು ಕಾರಣವಿದೆ. ಪ್ರಾಮಾಣಿಕತೆ ಇವನಿಗೆ ಇಂತಹ ಒಂದು ದೊಡ್ಡ ಮಟ್ಟದ ಸಾಹಯ ಸಿಗಲು ಕಾರಣವಾಗಿದೆ. ಸಾಕ್ಸ್ ಬೆಲೆಗಿಂತ 50 ರೂ. ಹೆಚ್ಚು ಕೊಡುತ್ತೇನೆಂದರೂ, ವಂಶ ಸಿಂಗ್ ತೆಗೆದುಕೊಳ್ಳಲು ಒಪ್ಪುತ್ತಿರಲಿಲ್ಲ. ಇದನ್ನು ಇಡೀ ರಾಜ್ಯವೇ ಗೌರವಿಸಿದೆ.

  • 1 ಜೊತೆ ಸಾಕ್ಸ್ ಖರೀದಿಗೆ 85 ಸಾವಿರ ರೂ. ಖರ್ಚು ಮಾಡಿದ ಪಾಪ್ ಗಾಯಕಿ

    1 ಜೊತೆ ಸಾಕ್ಸ್ ಖರೀದಿಗೆ 85 ಸಾವಿರ ರೂ. ಖರ್ಚು ಮಾಡಿದ ಪಾಪ್ ಗಾಯಕಿ

    ವಾಷಿಂಗ್ಟನ್: ಅಮೆರಿಕದ ಖ್ಯಾತ ಗಾಯಕಿ ಜೆನ್ನಿಫರ್ ಲೋಪೇಜ್ ಅವರು ದುಬಾರಿ ಬೆಲೆಯ ಸಾಕ್ಸ್ ಖರೀದಿಸಿ ಈಗ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದಾರೆ.

    ಅಮೇರಿಕಾದ ಖ್ಯಾತ ಗಾಯಕಿ ಜೆನ್ನಿಫರ್ ಲೋಪೇಜ್ 1 ಜೊತೆ ಸಾಕ್ಸ್ ಗಾಗಿ ಬರೋಬ್ಬರಿ 85 ಸಾವಿರ ರೂ. ಗಳನ್ನು ಖರ್ಚು ಮಾಡಿದ್ದಾರೆ. ಈಗ ಆ ಸಾಕ್ಸ್ ಹಾಕಿಕೊಂಡಿರುವ ಫೋಟೋವನ್ನು ತಮ್ಮ ಇನ್‍ ಸ್ಟಾಗ್ರಾಂನಲ್ಲಿ ಹಾಕಿದ್ದು, ಅದಕ್ಕೆ ಇಂದು ನನಗೆ ಹೊಸ ಜೊತೆ ಸಾಕ್ಸ್ ಸಿಕ್ಕಿತ್ತು ಎಂದು ಬರೆದು #ಗುಸ್ಸಿಗ್ಯಾಂಗ್ ಎಂದು ಹ್ಯಾಷ್‍ ಟ್ಯಾಗ್ ಹಾಕಿ ಪೋಸ್ಟ್ ಮಾಡಿದ್ದಾರೆ.

    I got a new pair of socks today…???? #guccigang

    A post shared by Jennifer Lopez (@jlo) on

    ಈ ಗುಸ್ಸಿ ಸಾಕ್ಸ್ ನಲ್ಲಿ ಬಿಳಿ ಹರಳುಗಳು ಹೊಂದಿದ್ದು, ಅದಕ್ಕೆ ಬಿಳಿ ಬಣ್ಣದ ಫುರ್ ಟಾಪ್ ಹಾಗೂ ಉದ್ದದ ಟ್ಯೂಲ್ ಸ್ಕರ್ಟ್ ಧರಿಸಿದ್ದಾರೆ. ನಂತರ ಗುಸ್ಸಿ ಸಾಕ್ಸ್ ಧರಿಸಿ ಅದಕ್ಕೆ ನೇರಳೆ ಬಣ್ಣದ ಸ್ಯಾಂಡಲ್ಸ್ ಧರಿಸಿದ್ದಾರೆ. ಇದು 80ರ ದಶಕದ ಫ್ಯಾಶನ್ ಆಗಿದ್ದು, ಜೆನ್ನಿಫರ್ ಈ ಟ್ರೆಂಡ್ ಮತ್ತೆ ಮರುಕಳಿಸಿದ್ದಾರೆ.

    ಜೆನ್ನಿಫರ್ ಫ್ಯಾಶನ್ ಮ್ಯಾಗಜೀನ್‍ ಗಳಲ್ಲಿ ಪಾದರಕ್ಷೆಯ ಬಗ್ಗೆ ಹೇಳುತ್ತಾರೆ. ಈ ಹಿಂದೆ ನಡೆದ ಸಂದರ್ಶನದಲ್ಲಿ ಜೆನ್ನಿಫರ್,’ನನಗೆ ಹೀಲ್ಸ್ ಅಥವಾ ತೂಕವಿರುವ ಪಾದರಕ್ಷೆಗಳು ಇಷ್ಟವಿಲ್ಲ. ನನಗೆ ನಯವಾದ, ಸಂಸ್ಕರಿಸಿದ ಪಾದರಕ್ಷೆಗಳು ಇಷ್ಟವಾಗುತ್ತದೆ’ ಎಂದು ತಿಳಿಸಿದ್ದರು.