Tag: ಸಾಕ್ಷ್ಯಚಿತ್ರ

  • ಮೊದಲ ಬಾರಿಗೆ ಆರ್‌ಬಿಐ `ಚಿನ್ನದ ಖಜಾನೆ’ ಅನಾವರಣ

    ಮೊದಲ ಬಾರಿಗೆ ಆರ್‌ಬಿಐ `ಚಿನ್ನದ ಖಜಾನೆ’ ಅನಾವರಣ

    – ಡಾಕ್ಯುಮೆಂಟರಿ ಮೂಲಕ ಅಪರೂಪದ ದೃಶ್ಯಗಳ ಪ್ರಸಾರ
    – ಕೋಟ್ಯಂತರ ಬೆಲೆಯ ಚಿನ್ನದ ಗಟ್ಟಿ, ಸಂಗ್ರಹಗಾರದ ಆಳ-ಅಗಲ ಬಹಿರಂಗ
    – ಆರ್‌ಬಿಐಗೆ 90 ವರ್ಷ ತುಂಬುತ್ತಲೇ ಈ ಸಾಕ್ಷ್ಯಚಿತ್ರ ರಿಲೀಸ್

    ಮುಂಬೈ: ಮೊದಲ ಬಾರಿಗೆ ಭಾರತದ ಕೇಂದ್ರೀಯ ಬ್ಯಾಂಕ್ ಆರ್‌ಬಿಐ (RBI) ಸಾಕ್ಷ್ಯಚಿತ್ರವೊಂದನ್ನು ಹೊರತಂದಿದೆ. ಈ ಮೂಲಕ ತನ್ನ ಚಿನ್ನದ ಖಜಾನೆಯೊಂದನ್ನು ಅನಾವರಣಗೊಳಿಸಿದೆ.

    ಇಲ್ಲಿಯವರೆಗೆ ಸಾರ್ವಜನಿಕರಿಗೆ ಆರ್‌ಬಿಐ ದೇಶದ ಸಂಪತ್ತನ್ನು ನಗದು ರೂಪದಲ್ಲಿ ಮಾತ್ರವಲ್ಲದೆ ಚಿನ್ನದ ರೂಪದಲ್ಲೂ ಇಟ್ಟುಕೊಂಡಿರುತ್ತದೆ ಎಂಬುದಷ್ಟೇ ತಿಳಿದಿತ್ತು. ಆದರೆ ಇದೇ ಮೊದಲ ಬಾರಿಗೆ ಸಾಕ್ಷ್ಯಚಿತ್ರವೊಂದರ (Documentry) ಮೂಲಕ ಆರ್‌ಬಿಐನ ಚಿನ್ನ ಸಂಗ್ರಹಗಾರದ ಆಳ-ಅಗಲ ಬಹಿರಂಗಗೊಳಿಸಿದೆ.ಇದನ್ನೂ ಓದಿ: ಕುಕ್ಕೆಯಲ್ಲಿ ಆಶ್ಲೇಷ ಬಲಿ ಪೂಜೆ ನೆರವೇರಿಸಿದ ಅಣ್ಣಾಮಲೈ

    ಓಟಿಟಿ ವೇದಿಕೆಯಾದ ಜಿಯೋ ಹಾಟ್‌ಸ್ಟಾರ್‌ನಲ್ಲಿ (Jio Hotstar) 5 ಭಾಗಗಳಲ್ಲಿ ಪ್ರಸಾರವಾಗುತ್ತಿರುವ `ಆರ್‌ಬಿಐ ಅನ್‌ಲಾಕ್ಡ್‌: ಬಿಯಾಂಡ್ ದ ರುಪಿ’ (RBI Unlocked: Beyond the Rupee) ಎಂಬ ಡಾಕ್ಯುಮೆಂಟರಿಯ ಮೂಲಕ ಆರ್‌ಬಿಐ ಬಳಿ ಇರುವ ಅಗಾಧ ಸಂಪತ್ತಿನ ಅನಾವರಣ ಮಾಡಲಾಗಿದೆ. ಸದ್ಯ 4 ಭಾಗಗಳು ರಿಲೀಸ್ ಆಗಿದ್ದು, ಇನ್ನೂ ಒಂದು ಭಾಗ ರಿಲೀಸ್ ಆಗಬೇಕಷ್ಟೆ. ಆರ್‌ಬಿಐ ಸ್ಥಾಪನೆಯಾಗಿ 90 ವರ್ಷ ತುಂಬಿರುವ ಹೊತ್ತಿನಲ್ಲೇ ಈ ಡಾಕ್ಯುಮೆಂಟರಿ ಹೊರಬಂದಿದೆ.

    ಸಾಕ್ಷ್ಯಚಿತ್ರದಲ್ಲೇನಿದೆ?
    ಚಾಕ್‌ಬೋರ್ಡ್ ಎಂಟರ್‌ಟೇನ್‌ಮೆಂಟ್ (Chalkboard Entertainment) ನಿರ್ಮಿಸಿರುವ ಈ ಡಾಕ್ಯುಮೆಂಟರಿಯಲ್ಲಿ, ಕಳೆದ 90 ವರ್ಷಗಳಲ್ಲಿ ಆರ್‌ಬಿಐನ ಕಾರ್ಯವೈಖರಿಯನ್ನು ವಿವರಿಸಲಾಗಿದೆ. ತಲಾ 12.5 ಕೆ.ಜಿ. ತೂಗುವ ಚಿನ್ನದ ಗಟ್ಟಿಗಳ ಅಟ್ಟಿಯನ್ನು ಬಿಗಿಭದ್ರತೆಯಲ್ಲಿ ಇರಿಸಿರುವುದನ್ನು ತೋರಿಸಲಾಗಿದೆ. ಇವುಗಳ ಮೌಲ್ಯ ಕೋಟಿಯಷ್ಟಿದ್ದು, ಭಾರತದಲ್ಲಿ ಒಟ್ಟು 870 ಟನ್ ಚಿನ್ನದ ಸಂಗ್ರಹವಿದೆ ಎಂಬುದು ಬಹಿರಂಗಪಡಿಸಿದೆ.

    1991ರ ಬಳಿಕ ವಿದೇಶಿ ವ್ಯಾಪಾರ ಸಮತೋಲನವನ್ನು ಕಾಯ್ದುಕೊಳ್ಳಲು ದೇಶದ ಚಿನ್ನವನ್ನು ವಿದೇಶಗಳಿಗೆ ನೀಡಬೇಕಾಗಿತ್ತು. ಇದರ ಹೊರತಾಗಿಯೂ ಆರ್‌ಬಿಐ ತನ್ನ ಚಿನ್ನದ ಸಂಗ್ರಹ ಕುಗ್ಗಲು ಬಿಟ್ಟಿಲ್ಲ. ಇತ್ತೀಚಿನ ವರದಿ ಪ್ರಕಾರ, ಭಾರತದಲ್ಲಿ 7.2 ಲಕ್ಷ ಕೋಟಿ ರೂ. ಮೌಲ್ಯದ ಸ್ವರ್ಣ ಸಂಗ್ರಹವಿದೆ. ಈ ಬಗ್ಗೆ ಮಾತನಾಡಿದ ಅಧಿಕಾರಿಯೊಬ್ಬರು, `ದೇಶ ಹಾಗೂ ಆರ್ಥಿಕತೆ ಏರಿಳಿತಗಳನ್ನು ಕಾಣುತ್ತಿರುತ್ತವೆ. ಆದರೆ ಚಿನ್ನ ಯಾವಾಗಲೂ ತನ್ನ ಮೌಲ್ಯವನ್ನು ಕಾಯ್ದುಕೊಳ್ಳುತ್ತದೆ’ ಎಂದು ಹೇಳಿದ್ದಾರೆ.

    ಈ ಡಾಕ್ಯುಮೆಂಟರಿ ಮೂಲಕ, ತನ್ನ ಕಾರ್ಯನಿರ್ವಹಣೆ ಹಾಗೂ ಭದ್ರತೆಯನ್ನು ಅನಾವರಣಗೊಳಿಸುವ ಮೂಲಕ ಜನರಲ್ಲಿ ಅರಿವು ನಂಬಿಕೆ ಮೂಡಿಸುವುದು ಆರ್‌ಬಿಐನ ಮುಖ್ಯ ಉದ್ದೇಶವಾಗಿದೆ.ಇದನ್ನೂ ಓದಿ: ಕಬಿನಿಯಿಂದ ನೀರು ಬಿಡುಗಡೆ – ಕಪಿಲಾ ನದಿ ಉಕ್ಕಿ ಭತ್ತದ ಬೆಳೆ ಮುಳುಗಡೆ

  • ಮಾ.8 ರಿಂದ ವಿಶಿಷ್ಟ ಸಾಕ್ಷ್ಯಚಿತ್ರ ‘ಒಣವಿಲ್ಲು, ದ ಡಿವೈನ್ ಬೋವ್’

    ಮಾ.8 ರಿಂದ ವಿಶಿಷ್ಟ ಸಾಕ್ಷ್ಯಚಿತ್ರ ‘ಒಣವಿಲ್ಲು, ದ ಡಿವೈನ್ ಬೋವ್’

    ಲಯಾಳಂ ಭಾಷೆಯ ಕುತೂಹಲಕಾರಿ ಸಾಕ್ಷ್ಯಚಿತ್ರ ‘ಓಣವಿಲ್ಲು, ದ ಡಿವೈನ್ ಬೋವ್’ (ದೇವ ಧನುಸ್ಸು) ಮಾರ್ಚ್‌ 8ರಿಂದ ಜಿಯೊಸಿನಿಮಾದಲ್ಲಿ ಉಚಿತವಾಗಿ ಪ್ರದರ್ಶನ ಕಾಣುತ್ತಿದೆ. ತಿರುವನಂತಪುರ ಮೂಲದ ಚಿತ್ರನಿರ್ದೇಶಕ ಆನಂದ್ ಬನಾರಸ್ ಮತ್ತು ಶರತ್‌ ಚಂದ್ರ ಮೋಹನ್ ಈ ಸಾಕ್ಷ್ಯಚಿತ್ರವನ್ನು ನಿರ್ದೇಶಿಸಿದ್ದು, ಅಭಿನವ್ ಕಾಲ್ರಾ ನಿರ್ಮಾಣ ಮಾಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಸ್ಟೀಫನ್ ಒರ್ಲಾಂಡೊ ಇದಕ್ಕೆ ಸಂಗೀತ ನೀಡಿದ್ದಾರೆ. ‘ಓಣವಿಲ್ಲು’ ಸಮರ್ಪಣೆಯ ಸಾಂಪ್ರದಾಯಿಕ ಆಚರಣೆಯ ಮಹತ್ವ ಮತ್ತು ಅದರ ಸಾಂಸ್ಕೃತಿಕ ಶ್ರೀಮಂತಿಕೆಯ ಮೇಲೆ ಈ ಸಾಕ್ಷ್ಯಚಿತ್ರ ಗಮನಸೆಳೆಯುತ್ತದೆ.

    ಏನಿದು ಒಣವಿಲ್ಲು?

    ‘ಓಣವಿಲ್ಲು’ ಎಂಬುದು ಒಂದು ದೈವೀಕ ಧನುಸ್ಸಾಗಿದ್ದು, ಅದರ ಮೇಲೆ ವಿಷ್ಣುವಿನ ದಶಾವತಾರ ಮತ್ತು ಕೃಷ್ಣನ ಲೀಲೆಗಳ ಚಿತ್ರಗಳನ್ನು ಬಿಡಿಸಲಾಗಿರುತ್ತದೆ. ಇದನ್ನು ಕೇರಳದ ತಿರುವನಂತಪುರದ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ತಿರುಓಣಂ ಹಬ್ಬದ ಸಮಯದಲ್ಲಿ ಸಮರ್ಪಿಸಲಾಗುತ್ತದೆ. ‘ಓಣವಿಲ್ಲು’ವನ್ನು ಎಲ್ಲರೂ ಮಾಡುವಂತಿಲ್ಲ. ಒಣವಿಲ್ಲು ರಚಿಸುವ ಹಕ್ಕು ಇರುವುದು ಕರಮಾನ ಮೆಲಾರನ್ನೂರ್ ವಿಲಾಯಿಲ್ ವೀಡು ಕುಟುಂಬಕ್ಕೆ ಮಾತ್ರ! ಈ ಸಾಕ್ಷ್ಯಚಿತ್ರದಲ್ಲಿ ಈ ಕುಟುಂಬದ ಬಗ್ಗೆಯೂ ಸಾಕಷ್ಟು ಬೆಳಕು ಚೆಲ್ಲಲಾಗಿದೆ.

    ಮಮ್ಮುಟ್ಟಿ ಧ್ವನಿ

    ಹಲವು ತಲೆಮಾರುಗಳಿಂದ ನಡೆದುಬಂದಿರುವ ಈ ವಿಶಿಷ್ಟ ಸಾಂಪ್ರದಾಯಿಕ ಆಚರಣೆಯ ಕುರಿತಾದ ಸಾಕ್ಷ್ಯಚಿತ್ರದ ವಿಶೇಷತೆ ಏನೆಂದರೆ, ಮಲಯಾಳಂನ ಜನಪ್ರಯ ಹಿರಿಯ ನಟ ಮಮ್ಮೂಟ್ಟಿ ಮತ್ತು ಯುವನಟ ಉನ್ನಿ ಮುಕುಂದನ್‌ ಅವರ ಧ್ವನಿ. ಓಣವಿಲ್ಲು ಆಚರಣೆಯ ಕುರಿತಾದ ಹಲವು ಸಂಗತಿಗಳನ್ನು ನೀವು ಇವರ ಧ್ವನಿಯಲ್ಲಿ ಕೇಳಬಹುದಾಗಿದೆ.  ಬಹುಮಹತ್ವದ ಆಚರಣೆ ಮತ್ತು ಅದರ ಸಾಂಸ್ಕೃತಿಕ ಮಹತ್ವದ ಕುರಿತು ‘ಓಣವಿಲ್ಲು, ದ ಡಿವೈನ್ ಬೋವ್’ ಸಾಕ್ಷಚಿತ್ರ ಮಾಹಿತಿ ನೀಡುತ್ತೆ. ಕದಂಬ ಮತ್ತು ಮಹಾಗನಿ ಕಟ್ಟಿಗೆಯಲ್ಲಿ ಈ ಬಿಲ್ಲನ್ನು ರೂಪಿಸಲಾಗುತ್ತದೆ. ನಂತರ ಇದರ ಮೇಲೆ ಬಹುಸುಂದರವಾಗಿ ವಿಷ್ಣುವಿನ ದಶಾವತಾರ ಮತ್ತು ಕೃಷ್ಣನ ಲೀಲೆಯ ಚಿತ್ರಗಳನ್ನು ರಚಿಸಲಾಗುತ್ತದೆ. ಈ ಸಾಂಪ್ರದಾಯಿಕ ಕಲೆಯನ್ನು ದೈವೀಭಕ್ತಿಯಿಂದ ಕಾಪಾಡಿಕೊಂಡು ಬರುತ್ತಿರುವ ಕುಟುಂಬದವರ ಕುರಿತೂ ಈ ಸಾಕ್ಷ್ಯಚಿತ್ರ ಹಲವು ಕುತೂಹಲಕಾರಿ ಮಾಹಿತಿಯನ್ನು ನೀಡುತ್ತದೆ.

    ಹಿಂದೆ ತಿರುವಾಂಕೂರು ರಾಜ್ಯದ ರಾಷ್ಟ್ರಗೀತೆಯಾಗಿದ್ದ ‘ವಾಂಚಿ ಭೂಮಿ’ ಎಂಬ ಹಾಡೂ ಈ ಸಾಕ್ಷ್ಯದಲ್ಲಿರುವುದು ವಿಶೇಷ. ಈ ಹಾಡನ್ನು ಉಲ್ಲೂರು ಎಸ್ ಪರಮೇಶ್ವರ ಅಯ್ಯರ್ ರಚಿಸಿದ್ದಾರೆ. ಬಾಲಿವುಡ್‌ ಗಾಯಕ ತಾನಿಯಾ ದೇವ ಗುಪ್ತ ಹಾಡಿದ್ದಾರೆ. ಕೇರಳದ ಸಮೃದ್ಧ ಪರಂಪರೆಯ ಪರಿಚಯ, ಕಲೆ, ಸಂಸ್ಕೃತಿಗಳ ಹಿನ್ನೆಲೆಯಲ್ಲಿ ಒಣವಿಲ್ಲು  ಎಂಬ ವಿಶಿಷ್ಟ ದೈವೀಕ ಧನುಸ್ಸು ಅರ್ಪಣೆ ಆಚರಣೆಯ ಕುರಿತಾದ ಸಾಕ್ಷ್ಯಚಿತ್ರವನ್ನು ಮಾರ್ಚ್‌ 8ರಿಂದ ಜಿಯೊಸಿನಿಮಾದಲ್ಲಿ ಉಚಿತವಾಗಿ ವೀಕ್ಷಿಸಿ.

  • ಆಪ್ತ ವಲಯದವರಿಂದಲೇ ಪುಟಿನ್ ಹತ್ಯೆ: ಝೆಲೆನ್ಸ್ಕಿ ಭವಿಷ್ಯ

    ಆಪ್ತ ವಲಯದವರಿಂದಲೇ ಪುಟಿನ್ ಹತ್ಯೆ: ಝೆಲೆನ್ಸ್ಕಿ ಭವಿಷ್ಯ

    ಕೀವ್: ರಷ್ಯಾದ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಒಂದು ದಿನ ತಮ್ಮ ಆಪ್ತ ವಲಯದವರಿಂದಲೇ ಕೊಲ್ಲಲ್ಪಡುತ್ತಾರೆ ಎಂದು ಉಕ್ರೇನ್ (Ukraine) ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelensky) ಭವಿಷ್ಯ ನುಡಿದಿದ್ದಾರೆ.

    ಝೆಲೆನ್ಸ್ಕಿ ಅವರ ಈ ಹೇಳಿಕೆ ಉಕ್ರೇನ್‌ನ ‘ಇಯರ್’ (Year) ಹೆಸರಿನ ಸಾಕ್ಷ್ಯಚಿತ್ರದಲ್ಲಿ (Documentary) ಕಂಡುಬಂದಿದೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿ 1 ವರ್ಷವಾಗಿರುವ ಹಿನ್ನೆಲೆ ಶುಕ್ರವಾರ ಇಯರ್ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಲಾಗಿದೆ.

    ರಷ್ಯಾ ಅಧ್ಯಕ್ಷ ನಾಯಕತ್ವದಲ್ಲಿ ದುರ್ಬಲತೆಯ ಅವಧಿ ಬರಲಿದೆ. ಅವರ ಆಪ್ತ ವಲಯದವರೇ ಅಧ್ಯಕ್ಷನ ವಿರುದ್ಧ ಕೆಲಸ ಮಾಡಲು ಪ್ರೇರೇಪಿಸಲಿದೆ. ಪರಭಕ್ಷಕಗಳು ಪರಭಕ್ಷಕನನ್ನು ತಿನ್ನುತ್ತವೆ. ಕೊಲೆಗಾರನನ್ನು ಕೊಲ್ಲಲು ಅವರು ಕಾರಣಗಳನ್ನು ಕಂಡುಕೊಳ್ಳುತ್ತಾರೆ. ಇದು ಖಂಡಿತಾ ನಡೆಯುತ್ತದೆ, ಆದರೆ ಯಾವಾಗ ಆಗುತ್ತದೆ ಎಂಬುದು ಹೇಳಲು ಸಾಧ್ಯವಿಲ್ಲ ಎಂದು ಉಕ್ರೇನ್ ಅಧ್ಯಕ್ಷ ಹೇಳಿದ್ದಾರೆ. ಇದನ್ನೂ ಓದಿ: ಇಟಲಿಯಲ್ಲಿ ದೋಣಿ ದುರಂತ – 40ಕ್ಕೂ ಹೆಚ್ಚು ವಲಸಿಗರ ದುರ್ಮರಣ

    ರಷ್ಯಾ ಉಕ್ರೇನ್ ಮೇಲೆ ಯುದ್ಧವನ್ನು ಸಾರಿದ ಬಳಿಕ ಆಗಾಗ ಅಧ್ಯಕ್ಷ ಪುಟಿನ್ ಬಗ್ಗೆ ಅವರ ಆಂತರಿಕ ವಲಯದಲ್ಲೇ ಅಸಮಾಧಾನ ಹೊಂದಿರುವ ಬಗ್ಗೆ ರಷ್ಯಾದಲ್ಲಿ ವರದಿಯಾಗಿದೆ. ಪುಟಿನ್‌ರ ಆಪ್ತ ವಲಯದವರೇ ಅವರ ಬಗ್ಗೆ ಹೆಚ್ಚು ಹತಾಶೆಗೊಂಡಿದ್ದಾರೆ ಎಂದು ಹೇಳಲಾಗಿದೆ. ಯುದ್ಧದ ವೇಳೆಯೂ ರಷ್ಯಾದ ಸೈನಿಕರು ಅಧ್ಯಕ್ಷನ ವಿರುದ್ಧ ದೂರುವುದು ಹಲವು ವೀಡಿಯೋಗಳಲ್ಲಿ ಕಂಡುಬಂದಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಇರಾನ್‌ನಲ್ಲಿ ಹೆಣ್ಣುಮಕ್ಕಳ ಶಿಕ್ಷಣ ತಡೆಯಲು ವಿಷಪ್ರಾಶನ – ಸಚಿವರ ಆರೋಪದ ಬಳಿಕ ಭುಗಿಲೆದ್ದ ವಿವಾದ

  • ಪಕ್ಷಾತೀತ, ಭಯರಹಿತ ಪತ್ರಿಕೋದ್ಯಮ ಮುಂದುವರಿಸುತ್ತೇವೆ – ಆರ್ಥಿಕ ಸಮೀಕ್ಷೆ ಬಳಿಕ BBC ಹೇಳಿಕೆ

    ಪಕ್ಷಾತೀತ, ಭಯರಹಿತ ಪತ್ರಿಕೋದ್ಯಮ ಮುಂದುವರಿಸುತ್ತೇವೆ – ಆರ್ಥಿಕ ಸಮೀಕ್ಷೆ ಬಳಿಕ BBC ಹೇಳಿಕೆ

    ನವದೆಹಲಿ: ಅಂತಾರಾಷ್ಟ್ರೀಯ ಸುದ್ದಿ ವಾಹಿನಿ ಬಿಬಿಸಿ (BBC) ಕಚೇರಿಯ ಆರ್ಥಿಕ ಸಮೀಕ್ಷೆ ಅಂತ್ಯವಾಗಿದೆ. ಮೂರು ದಿನಗಳ ಪರಿಶೀಲನೆ ಬಳಿಕ ಆದಾಯ ತೆರಿಗೆ ಅಧಿಕಾರಿಗಳು ಸಮೀಕ್ಷೆ ಅಂತ್ಯಗೊಳಿಸಿದ್ದು, ನಾವು ಪಕ್ಷಾತೀತ ಮತ್ತು ಭಯರಹಿತ ಪತ್ರಿಕೋದ್ಯಮ (Journalism) ಮುಂದುವರಿಸಲಿದ್ದೇವೆ ಎಂದು ಆಡಳಿತ ವರ್ಗ ಹೇಳಿದೆ.

    ಕಳೆದ ಮೂರು ದಿನಗಳಲ್ಲಿ ಸುಮಾರು 59 ಗಂಟೆಗಳ ಕಾಲ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದು, ಸಮೀಕ್ಷೆಯಲ್ಲಿ ಅಧಿಕಾರಿಗಳು ವಿವಿಧ ದಾಖಲೆಗಳು ಮತ್ತು ದತ್ತಾಂಶಗಳನ್ನು ಸಂಗ್ರಹಿಸಿದ್ದಾರೆ. ನಮ್ಮ ಪ್ರಸಾರ ಸಾಮಾನ್ಯ ಸ್ಥಿತಿಗೆ ಬಂದಿದ್ದು ಸಮೀಕ್ಷೆ ವೇಳೆ ಹಗಲು ರಾತ್ರಿ ಅಧಿಕಾರಿಗಳಿಗೆ ಸಹಕರಿಸಿದ ಸಿಬ್ಬಂದಿಯನ್ನು ನಾವು ಶ್ಲಾಘಿಸುತ್ತೇವೆ ಎಂದು ಬಿಬಿಸಿ ಹೇಳಿದೆ. ಇದನ್ನೂ ಓದಿ: 18 ಮಂದಿಯನ್ನು ಸಾಗಿಸುತ್ತಿದ್ದ ಜೀಪ್‌ನಿಂದ ಟ್ರಕ್‌ಗೆ ಡಿಕ್ಕಿ; 7 ಮಂದಿ ದುರ್ಮರಣ – ಜೀಪ್‌ ಚಾಲಕ ಎಸ್ಕೇಪ್

    ಮಂಗಳವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ತಂಡ ದೆಹಲಿ (Delhi) ಮತ್ತು ಮುಂಬೈನಲ್ಲಿರುವ (Mumbai) ಬಿಬಿಸಿ ಕಚೇರಿಗಳನ್ನು ಪ್ರವೇಶಿಸಿತ್ತು. ಇದು ಅಂತಾರಾಷ್ಟ್ರೀಯ ತೆರಿಗೆ ಸಮಸ್ಯೆಗಳಿಗೆ ಸಂಬಂಧಿಸಿದ ಪ್ರಕರಣ ಎಂದು ಐಟಿ ಮೂಲಗಳು ತಿಳಿಸಿದ್ದವು. ಸಮೀಕ್ಷೆ ವೇಳೆ ಅಧಿಕಾರಿಗಳು ಆಯ್ದ ಸಿಬ್ಬಂದಿಯಿಂದ ಹಣಕಾಸಿನ ದತ್ತಾಂಶವನ್ನು ಸಂಗ್ರಹಿಸಿದ್ದರು.

    ಸಮೀಕ್ಷಾ ತಂಡಗಳು ಪುರಾವೆಗಳನ್ನು ಸಂಗ್ರಹಿಸುತ್ತಿದ್ದಂತೆ ಬಿಬಿಸಿ ತನ್ನ ಉದ್ಯೋಗಿಗಳಿಗೆ ತಮ್ಮ ಎಲೆಕ್ಟ್ರಾನಿಕ್ ಸಾಧನಗಳಿಂದ ಯಾವುದೇ ಡೇಟಾವನ್ನು ಅಳಿಸದಂತೆ ಕೇಳಿಕೊಂಡಿತು. ಇದನ್ನೂ ಓದಿ: Article 370 ರದ್ದು- ವಿಚಾರಣೆ ನಡೆಸುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ: ಸಿಜೆಐ ಡಿವೈ ಚಂದ್ರಚೂಡ್

    ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಾಕ್ಷ್ಯಚಿತ್ರ ಸಿದ್ಧಪಡಿಸಿದ, ಪ್ರಸಾರ ಮಾಡಿದ ಬಳಿಕ ನಡೆದ ಸಮೀಕ್ಷೆ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೋದಿ ವಿರುದ್ಧದ ಬಿಬಿಸಿ ಸಾಕ್ಷ್ಯಚಿತ್ರಕ್ಕೆ ರಷ್ಯಾ ಆಕ್ರೋಶ

    ಮೋದಿ ವಿರುದ್ಧದ ಬಿಬಿಸಿ ಸಾಕ್ಷ್ಯಚಿತ್ರಕ್ಕೆ ರಷ್ಯಾ ಆಕ್ರೋಶ

    ಮಾಸ್ಕೋ: ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ಬಿಬಿಸಿ (BBC) ನಿರ್ಮಿಸಿರುವ ಸಾಕ್ಷ್ಯಚಿತ್ರಕ್ಕೆ (Documentary) ರಷ್ಯಾ ಆಕ್ರೋಶ ವ್ಯಕ್ತಪಡಿಸಿದೆ.

    ರಷ್ಯಾದ(Russia) ವಿದೇಶಾಂಗ ಸಚಿವಾಲಯದ  ವಕ್ತಾರೆ ಮಾರಿಯಾ ಜಖರೋವಾ ಪ್ರತಿಕ್ರಿಯಿಸಿ, ಬಿಬಿಸಿ ರಷ್ಯಾದ ವಿರುದ್ಧ ಮಾತ್ರವಲ್ಲದೇ ಸ್ವತಂತ್ರ ನೀತಿಯನ್ನು ಅನುಸರಿಸುತ್ತಿರುವ ಇತರ ದೇಶಗಳ ವಿರುದ್ಧ ಮಾಹಿತಿ ಯುದ್ಧವನ್ನು ನಡೆಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕೇಂದ್ರ ಬಜೆಟ್ ಮೇಲೆ ಜಗತ್ತು ಕಣ್ಣಿಟ್ಟಿದೆ: ಮೋದಿ

    ಬಿಬಿಸಿ ವಿವಿಧ ರಂಗಗಳಲ್ಲಿ ಮಾಹಿತಿ ಯುದ್ಧವನ್ನು ನಡೆಸುತ್ತಿದೆ ಎಂಬುದಕ್ಕೆ ಇದು ಮತ್ತೊಂದು ನಿದರ್ಶನ. ಬಿಬಿಸಿ ಈಗ ಸ್ವತಂತ್ರವಾಗಿ ಉಳಿದಿಲ್ಲ. ಪತ್ರಿಕೋದ್ಯಮ ವೃತ್ತಿಯನ್ನು ನಿರ್ಲಕ್ಷಿಸಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

    ಪ್ರಧಾನಿ ಮೋದಿಯವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ನಡೆದ ಗಲಭೆ ವಿಷಯಗಳ ಬಗ್ಗೆ ತನಿಖೆ ನಡೆಸಿ ಎರಡು ಭಾಗಗಳಲ್ಲಿ ಬಿಬಿಸಿ ಸಾಕ್ಷ್ಯಚಿತ್ರವನ್ನು ತಯಾರಿಸಿದೆ. ಭಾರತದ ವಿದೇಶಾಂಗ ಇಲಾಖೆ ಇದು “ವಸಾಹತುಶಾಹಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ” ಎಂದು ಟೀಕಿಸಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೋದಿ ಸಾಕ್ಷ್ಯಚಿತ್ರ – ಬಿಬಿಸಿಯನ್ನು ಸಮರ್ಥಿಸಿಕೊಂಡ ಅಮೆರಿಕ

    ಮೋದಿ ಸಾಕ್ಷ್ಯಚಿತ್ರ – ಬಿಬಿಸಿಯನ್ನು ಸಮರ್ಥಿಸಿಕೊಂಡ ಅಮೆರಿಕ

    ವಾಷಿಂಗ್ಟನ್‌: ನರೇಂದ್ರ ಮೋದಿ (Narendra Modi) ಕುರಿತ ಸಾಕ್ಷ್ಯಚಿತ್ರದ ವಿಚಾರದಲ್ಲಿ ಭಾರತ (India) ಸರ್ಕಾರಕ್ಕೆ ಅಮೆರಿಕ ಶಾಕ್ ನೀಡಿ ಪರೋಕ್ಷವಾಗಿ ಬಿಬಿಸಿಯನ್ನು (BBC) ಸಮರ್ಥಿಸಿಕೊಂಡಿದೆ.

    ಪತ್ರಿಕಾಗೋಷ್ಠಿಯಲ್ಲಿ, ಪಾಕಿಸ್ತಾನದ ಪತ್ರಕರ್ತರೊಬ್ಬರು ಬಿಬಿಸಿ ಸಾಕ್ಷ್ಯಚಿತ್ರದ (BBC Documentary) ಮೇಲಿನ ನಿಷೇಧ ಪತ್ರಿಕಾ ಸ್ವಾತಂತ್ರ್ಯ ಅಥವಾ ವಾಕ್ ಸ್ವಾತಂತ್ರ್ಯದ ವಿಷಯವೇ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಪ್ರತಿನಿಧಿ ನೆಡ್ ಪ್ರೈಸ್ ಅವರನ್ನು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಡಾರ್ಕ್‌ನೆಟ್‌ ಬಳಸಿ ಮೋದಿ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಯತ್ನ- ರಣಾಂಗಣವಾದ ವಿವಿ ಕ್ಯಾಂಪಸ್

    ಈ ವಿಷಯಕ್ಕೆ ಬಂದಾಗ, ನಾವು ಪ್ರಪಂಚದಾದ್ಯಂತ ಮುಕ್ತ ಪತ್ರಿಕಾ ಸ್ವಾತಂತ್ರ್ಯವನ್ನು ಬೆಂಬಲಿಸುತ್ತೇವೆ ಎಂದು ಪ್ರೈಸ್ ಉತ್ತರಿಸಿದ್ದಾರೆ. ಮುಕ್ತ ಪತ್ರಿಕಾ ಸ್ವಾತಂತ್ರ್ಯ ಪ್ರಜಾತಂತ್ರದ ಮೌಲ್ಯಗಳನ್ನು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮತ್ತಷ್ಟು ಬಲಪಡಿಸುತ್ತದೆ. ಇದೇ ನಿಲುವು ಭಾರತಕ್ಕೂ ಅನ್ವಯಿಸುತ್ತದೆ ಎಂದು ಹೇಳಿದರು.

    ಬಿಬಿಸಿ ದುರುದ್ದೇಶದಿಂದ ಈ ಡಾಕ್ಯುಮೆಂಟರಿ ಮಾಡಿದೆ ಎಂದು ಆರೋಪಿಸಿ ಕೇಂದ್ರ ಸರ್ಕಾರ, ಇದನ್ನು ಯೂಟ್ಯೂಬ್, ಟ್ವಿಟ್ಟರ್‌ನಲ್ಲಿ ನಿಷೇಧಿಸಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಡಾರ್ಕ್‌ನೆಟ್‌ ಬಳಸಿ ಮೋದಿ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಯತ್ನ- ರಣಾಂಗಣವಾದ ವಿವಿ ಕ್ಯಾಂಪಸ್

    ಡಾರ್ಕ್‌ನೆಟ್‌ ಬಳಸಿ ಮೋದಿ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಯತ್ನ- ರಣಾಂಗಣವಾದ ವಿವಿ ಕ್ಯಾಂಪಸ್

    ನವದೆಹಲಿ/ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಕುರಿತ ಬಿಬಿಸಿಯ ಸಾಕ್ಷ್ಯಚಿತ್ರ (BBC Documentary) ದೇಶದಲ್ಲೇ ಹೊಸ ವಿವಾದ ಹುಟ್ಟುಹಾಕಿದೆ. ಇಷ್ಟು ದಿನ ರಾಜಕೀಯ ಕೇಸರೆರಚಾಟಕ್ಕೆ ಸೀಮಿತವಾಗಿದ್ದ ಸಾಕ್ಷ್ಯಚಿತ್ರ ಈಗ ದೇಶದ ವಿಶ್ವವಿದ್ಯಾಲಯಗಳಲ್ಲಿ ಹೊಸ ಸಂಘರ್ಷ ಸೃಷ್ಟಿಸಿದೆ. ಸಿಎಎ (CAA), ಎನ್‌ಆರ್‌ಸಿ (NRC) ಬಳಿಕ ಕ್ಯಾಂಪಸ್ ಗಳಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನ ಮುಂದಿಟ್ಟುಕೊಂಡು ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ಮಾಡಲಾರಂಭಿಸಿದ್ದಾರೆ.

    ಹೌದು. ಪ್ರಧಾನಿ ನರೇಂದ್ರ ಮೋದಿ ಕುರಿತು ಬಿಬಿಸಿ ಸಿದ್ಧಪಡಿಸಿರುವ ಸಾಕ್ಷ್ಯಚಿತ್ರ ದೇಶದಲ್ಲಿ ವಿಶ್ವವಿದ್ಯಾಲಯಗಳಲ್ಲಿ ಹೊಸ ಸಂಘರ್ಷಕ್ಕೆ ಕಾರಣವಾಗಿದೆ. ಸಾಕ್ಷ್ಯಚಿತ್ರವನ್ನು ಭಾರತದಲ್ಲಿ ಪ್ರಸಾರ ಮಾಡಲು ಕೇಂದ್ರ ಸರ್ಕಾರ ನಿರ್ಬಂಧ ಹೇರಿದ ಬೆನ್ನಲ್ಲೇ ವಿಶ್ವವಿದ್ಯಾಲಯಗಳಲ್ಲಿ ಅದನ್ನು ಪ್ರಸಾರ ಮಾಡಲು ವಿದ್ಯಾರ್ಥಿಗಳೇ ಪಟ್ಟು ಹಿಡಿದಿದ್ದಾರೆ. ತಾವೇ ಗುಂಪು ಕಟ್ಟಿಕೊಂಡು ಡಾರ್ಕ್ ನೆಟ್ (DarkNet) ಮೂಲಕ ಚಿತ್ರವನ್ನು ಕ್ಯಾಂಪಸ್ ನಲ್ಲಿ ಪ್ರಸಾರ ಮಾಡುವ ಪ್ರಯತ್ನ ಆರಂಭಿಸಿದ್ದಾರೆ.

    ಇತ್ತೀಚೆಗಷ್ಟೇ ದೆಹಲಿಯ ಜೆಎನ್‌ಯು (JNU) ಹಾಗೂ ಹೈದರಾಬಾದ್‌ನ ಸೆಂಟ್ರಲ್ ಯೂನಿವರ್ಸಿಟಿಯಲ್ಲಿ ಚಿತ್ರ ಪ್ರದರ್ಶನ ಮಾಡುವ ಪ್ರಯತ್ನ ನಡೆದಿತ್ತು. ಈ ವೇಳೆ ಇದು ಸಂಘರ್ಷಕ್ಕೆ ಕಾರಣವಾಗಿತ್ತು. ಸೆಂಟ್ರಲ್ ವಿವಿಗಳಲ್ಲಿ ಗಲಭೆ ಸೃಷ್ಟಿಯಾದ್ರೆ, ಜೆಎನ್‌ಯು ಕ್ಯಾಂಪಸ್ ನಲ್ಲಿ ಕಲ್ಲು ತೂರಾಟಕ್ಕೆ ಕಾರಣವಾಗಿತ್ತು. ಈ ಎರಡು ವಿವಿಗಳಿಗೆ ಸಂಘರ್ಷ ಸೀಮಿತವಾಗಿದೆ ಎಂದು ಕೊಳ್ಳುತ್ತಿರುವಾಗಲೇ ದೇಶದ ಹಲವು ವಿವಿಗಳಲ್ಲಿ ಇಂತಹದೇ ಘಟನೆಗಳು ವರದಿಯಾಗುತ್ತಿವೆ.

    ಮೋದಿ ಸಾಕ್ಷ್ಯಚಿತ್ರ ಸಂಘರ್ಷ ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಕ್ಯಾಂಪಸ್ ನಲ್ಲಿ ತಾರಕಕ್ಕೇರಿತ್ತು. ಚಿತ್ರವನ್ನು ಸಂಜೆ 6 ಗಂಟೆಗೆ ಕ್ಯಾಂಪಸ್ ನಲ್ಲಿ ಪ್ರದರ್ಶನ ಮಾಡುವುದಾಗಿ ವಿದ್ಯಾರ್ಥಿಗಳು ಘೋಷಣೆ ಮಾಡಿದರು. ಇದಕ್ಕೆ ವಿವಿ ಕುಲಪತಿಗಳು ವಿರೋಧ ವ್ಯಕ್ತಪಡಿಸಿದರು. ಅದಕ್ಕೆ ಜಗ್ಗದ ವಿದ್ಯಾರ್ಥಿಗಳು ಪ್ರದರ್ಶನಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ವಿದ್ಯಾರ್ಥಿಗಳ ವರ್ತನೆ ಕಂಡು ಕುಲಪತಿಗಳು ಪೊಲೀಸರಿಗೆ ದೂರು ನೀಡಿದರು. ಈ ಹಿನ್ನಲೆ ಕ್ಯಾಂಪಸ್ ಗೆ ಬಂದ ಪೊಲೀಸರು ಚಿತ್ರ ಪ್ರದರ್ಶನಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದ 14 ಮಂದಿ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಪೊಲೀಸರು ವಿದ್ಯಾರ್ಥಿಗಳನ್ನು ಬಂಧಿಸುತ್ತಿದ್ದಂತೆ ಪ್ರತಿಭಟನೆ ಭುಗಿಲೆದ್ದಿತು.

    ಇತ್ತ ಪಂಜಾಬ್ ವಿಶ್ವವಿದ್ಯಾಲಯಕ್ಕೂ ಸಾಕ್ಷ್ಯಚಿತ್ರದ ಬಿಸಿ ತಟ್ಟಿದೆ. ಕ್ಯಾಂಪಸ್ ನಲ್ಲಿ ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕವಾದ ನ್ಯಾಷನಲ್ ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯಾ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸುತ್ತಿತ್ತು. ಮಧ್ಯಪ್ರವೇಶ ಮಾಡಿದ ಪೊಲೀಸರೂ ಪ್ರದರ್ಶನವನ್ನು ತಡೆದು ಕೆಲವರನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಕೇರಳದ ತಿರುವನಂತಪುರಂ ವಿವಿ, ಪಾಂಡಿಚೇರಿ ವಿವಿಯಲ್ಲೂ ಸಾಕ್ಷ್ಯಚಿತ್ರ ಪ್ರದರ್ಶನದ ವಿಫಲ ಪ್ರಯತ್ನಗಳು ನಡೆದಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹೈದರಾಬಾದ್ ವಿವಿ ಕ್ಯಾಂಪಸ್‌ನಲ್ಲಿ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ – ತನಿಖೆಗೆ ಆದೇಶ

    ಹೈದರಾಬಾದ್ ವಿವಿ ಕ್ಯಾಂಪಸ್‌ನಲ್ಲಿ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ – ತನಿಖೆಗೆ ಆದೇಶ

    ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಕುರಿತು ಬಿಬಿಸಿ (BBC) ರಚಿಸಿರುವ ಸಾಕ್ಷ್ಯಚಿತ್ರ (Documentary) ಪ್ರಸಾರವನ್ನು ಕೇಂದ್ರ ನಿರ್ಬಂಧಿಸಿದ್ದರೂ ಹೈದರಾಬಾದ್ ವಿಶ್ವವಿದ್ಯಾಲಯದ (Hyderabad University) ಕ್ಯಾಂಪಸ್‌ನಲ್ಲಿ ಪ್ರದರ್ಶನ ಮಾಡಿರುವುದಾಗಿ ದೂರು ದಾಖಲಾಗಿದೆ.

    ‘ಇಂಡಿಯಾ: ದಿ ಮೋದಿ ಕ್ವೆಶ್ಚನ್’ (India: The Modi Question) ಹೆಸರಿನ ಸಾಕ್ಷ್ಯಚಿತ್ರ 2002ರ ಗಲಭೆಯ ಸಂದರ್ಭದ ಗುಜರಾತ್ ನಾಯಕತ್ವದ ಬಗ್ಗೆ ತಪ್ಪು ವರದಿ ಮಾಡಿರುವುದಾಗಿ ವಿವಾದಕ್ಕೀಡಾಗಿತ್ತು. ಈ ಹಿನ್ನೆಲೆ ಕಳೆದ ಶನಿವಾರ ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ಯೂಟ್ಯೂಬ್‌ನಲ್ಲಿ ಬಿಬಿಸಿ ರಚಿಸಿರುವ ಸಾಕ್ಷ್ಯಚಿತ್ರವನ್ನು ನಿರ್ಬಂಧಿಸಿದೆ.

    ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಬಿಬಿಸಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿ ಆರ್‌ಎಸ್‌ಎಸ್‌ನ ವಿದ್ಯಾರ್ಥಿ ವಿಭಾಗವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಸೋಮವಾರ ಅಧಿಕಾರಿಗಳಿಗೆ ದೂರು ಸಲ್ಲಿಸಿದೆ. ಭದ್ರತಾ ಇಲಾಖೆಯಿಂದ ವರದಿಯನ್ನು ನಿರೀಕ್ಷಿಸಲಾಗಿದ್ದು, ಅದರಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ತಿಳಿಸಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಮೋದಿ ಮೆಗಾ ರೋಡ್ ಶೋಗೆ ಪ್ಲಾನ್

    ಕೆಲ ವಿದ್ಯಾರ್ಥಿಗಳು ಸಾಕ್ಷ್ಯಚಿತ್ರ ಪ್ರದರ್ಶನದ ಬಗ್ಗೆ ಯಾವುದೇ ಉಲ್ಲಂಘನೆ ಮಾಡಿಲ್ಲ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರ ಈ ನಿರ್ಬಂಧವನ್ನು ಹೇರುವುದಕ್ಕೂ ಮೊದಲೇ ಸ್ಕ್ರೀನಿಂಗ್ ಅನ್ನು ಆಯೋಜನೆ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ. ಆದರೆ ಕೇಂದ್ರ ಸರ್ಕಾರದ ಆದೇಶದ 1 ದಿನದ ನಂತರ ಎಂದರೆ ಭಾನುವಾರ ಸಾಕ್ಷ್ಯಚಿತ್ರ ಪ್ರದರ್ಶನವಾಗಿದೆ ಎಂದು ವಿಶ್ವವಿದ್ಯಾಲಯ ಹೇಳಿದೆ. ಇದನ್ನೂ ಓದಿ: ಬೊಮ್ಮಾಯಿ ಅಂಕಲ್ ನಮ್ಗೆ ಮೇಲ್ಸೇತುವೆ ಬೇಡ- ಸಿಎಂಗೆ 2 ಸಾವಿರ ವಿದ್ಯಾರ್ಥಿಗಳಿಂದ ಪತ್ರ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಾಳಿ ಕೈಲಿ ಸಿಗರೇಟು ವಿವಾದ : ನಿರ್ದೇಶಕಿ ಲೀನಾ ಮಣಿಮೇಕಲೈ ಟ್ವಿಟ್‌ಗೆ ತಡೆ

    ಕಾಳಿ ಕೈಲಿ ಸಿಗರೇಟು ವಿವಾದ : ನಿರ್ದೇಶಕಿ ಲೀನಾ ಮಣಿಮೇಕಲೈ ಟ್ವಿಟ್‌ಗೆ ತಡೆ

    ಮ್ಮ ಸಾಕ್ಷ್ಯಚಿತ್ರದಲ್ಲಿ ಕಾಳಿ ದೇವತೆಯ ಒಂದು ಕೈಯಲ್ಲಿ ಸಿಗರೇಟು ಮತ್ತು ಕೈಯಲ್ಲಿ ಎಲ್ಜಿಬಿಟಿಕ್ಯೂ ಧ್ವಜ ಕೊಟ್ಟ ಕಾರಣಕ್ಕಾಗಿ ತಮಿಳಿನ ಖ್ಯಾತ ನಿರ್ದೇಶಕಿ ಲೀನಾ ಮಣಿಮೇಕಲೈ ವಿರುದ್ಧ ಕ್ರಮಕ್ಕಾಗಿ ದೇಶಾದ್ಯಂತ ಆಗ್ರಹ ನಡೆದಿತ್ತು. ಹಲವು ಕಡೆ ಇವರ ವಿರುದ್ಧ ದೂರುಗಳು ದಾಖಲಾಗಿದ್ದವು. ಮುಂಬೈನಲ್ಲಿ ಎಫ್‍.ಐ.ಆರ್ ಕೂಡ ದಾಖಲಾಗಿತ್ತು. ಇದೀಗ ಭಾರತದಲ್ಲಿ ಅವರ ಟ್ವಿಟರ್ ಖಾತೆಯನ್ನು ತಡೆಹಿಡಿಯಲಾಗಿದೆ.

    ನಿನ್ನೆಯಷ್ಟೇ ದೆಹಲಿಯಲ್ಲಿ ದೂರು ದಾಖಲಾಗಿದ್ದು, ಬೆಂಗಳೂರಿನಲ್ಲೂ ಕಿರಣ್ ಆರಾಧ್ಯ ಎನ್ನುವವರು ಸೈಬರ್ ಕ್ರೈಂಗೆ ದೂರು ನೀಡಿದ್ದರು.  ಅಲ್ಲದೇ, ಅನೇಕ ಕಡೆ ಈ ಕುರಿತು ಪ್ರತಿರೋಧ ಕೂಡ ವ್ಯಕ್ತವಾಗಿತ್ತು. ಇದೀಗ ದೇಶದ ಹಲವು ಕಡೆ ಫಿಲ್ಮ್ ಚೇಂಬರ್ ಗೂ ದೂರುಗಳನ್ನು ದಾಖಲಿಸಲಾಗುತ್ತಿದೆ. ಅಲ್ಲದೇ, ಆ ಸಾಕ್ಷ್ಯ ಚಿತ್ರವನ್ನು ಪ್ರದರ್ಶನ ಮಾಡದಂತೆ ಒತ್ತಡ ಹೇರಲಾಗುತ್ತಿದೆ. ಇದನ್ನೂ ಓದಿ : Breaking- ಫಹಾದ್ ಫಾಸಿಲ್ ಗಾಗಿ ಸಿನಿಮಾ ಮಾಡಲು ಮತ್ತೆ ತಮಿಳಿಗೆ ಹೊರಟ ಪವನ್ ಕುಮಾರ್

    ಲೀನಾ ಅವರು ತಮ್ಮ ಸಾಕ್ಷ್ಯಚಿತ್ರದ ಪೋಸ್ಟರ್ ಒಂದನ್ನು ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಆ ಪೋಸ್ಟರ್ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಧಾರ್ಮಿಕ ಭಾವನೆಗಳಿಗೆ ಅವರು ಧಕ್ಕೆ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಲೀನಾ ಅವರು ಕಾಳಿ ಕುರಿತಾಗಿ ಸಾಕ್ಷ್ಯ ಚಿತ್ರ ಮಾಡಿದ್ದು, ಕಾಳಿಯ ಒಂದು ಕೈಲಿ ಸಿಗರೇಟು ಮತ್ತೊಂದು ಕೈಲಿ ಎಲ್ಜಿಬಿಟಿಕ್ಯೂ ಧ್ವಜವನ್ನು ನೀಡಲಾಗಿದೆ. ಈ ಪೋಸ್ಟರ್ ಅನ್ನು ಶೇರ್ ಮಾಡಿರುವ ಲೀನಾ, ಈ ಸಾಕ್ಷ್ಯ ಚಿತ್ರವು ಕೆನಡಾ ಫಿಲ್ಮ್ ಫೇಸ್ಟಿವಲ್ ನಲ್ಲಿ ಬಿಡುಗಡೆ ಆಗುತ್ತಿದೆ. ಈ ಕಾರಣಕ್ಕಾಗಿ ನಾನು ಉತ್ಸುಕಳಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ಟ್ವಿಟರ್ ಬಳಕೆದಾರರು ಈ ಕುರಿತು ಆಕ್ರೋಶ ವ್ಯಕ್ತ ಪಡಿಸಿದ್ದು, ಈ ನಿರ್ಮಾಪಕಿಯನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಕೋಟ್ಯಂತರ ಹಿಂದೂಗಳ ಭಾವನೆಗೆ ಆಕೆ ಧಕ್ಕೆ ಮಾಡಿದ್ದರಿಂದ, ಆ ಸಾಕ್ಷ್ಯ ಚಿತ್ರವನ್ನು ನಿಷೇಧ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದ್ದಾರೆ. ತಮಿಳು ನಾಡು ಮೂಲದ ಈ ಲೀನಾ ಸಲಿಂಗಿಗಳ ಬೆಂಬಲಕ್ಕೆ ಈ ಹಿಂದೆ ನಿಂತವರು ಎನ್ನುವುದು ವಿಶೇಷ.

    Live Tv
    [brid partner=56869869 player=32851 video=960834 autoplay=true]

  • ಕಾಳಿ ಕೈಲಿ ಸಿಗರೇಟು ವಿವಾದ : ಲೀನಾ ವಿರುದ್ಧ ಫಿಲ್ಮ್ ಚೇಂಬರ್ ನಲ್ಲಿ ದೂರು

    ಕಾಳಿ ಕೈಲಿ ಸಿಗರೇಟು ವಿವಾದ : ಲೀನಾ ವಿರುದ್ಧ ಫಿಲ್ಮ್ ಚೇಂಬರ್ ನಲ್ಲಿ ದೂರು

    ಮ್ಮ ಸಾಕ್ಷ್ಯಚಿತ್ರದಲ್ಲಿ ಕಾಳಿ ದೇವತೆಯ ಒಂದು ಕೈಯಲ್ಲಿ ಸಿಗರೇಟು ಮತ್ತು ಕೈಯಲ್ಲಿ ಎಲ್ಜಿಬಿಟಿಕ್ಯೂ ಧ್ವಜ ಕೊಟ್ಟ ಕಾರಣಕ್ಕಾಗಿ ತಮಿಳಿನ ಖ್ಯಾತ ನಿರ್ಮಾಪಕಿ ಲೀನಾ ಮಣಿಮೇಕಲೈ ವಿರುದ್ಧ ಆಕ್ರೋಶ  ಮುಂದುವರೆದಿದ್ದು, ಇದೀಗ ಅವರ ವಿರುದ್ದ ನಿರ್ದೇಶಕ ಕಂ ನಿರ್ಮಾಪಕ ಮರಡಿಹಳ್ಳಿ ನಾಗಚಂದ್ರ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಫಿಲ್ಮ್ ಚೇಂಬರ್ ಅಧ್ಯಕ್ಷರಿಗೆ ದೂರು ನೀಡಿರುವ ಅವರು, ಲೀನಾ ಮೇಲೆ ತಗೆದುಕೊಳ್ಳಬಹುದಾದ ಕ್ರಮದ ಕುರಿತು ಚರ್ಚಿಸಿದ್ದಾರೆ.

    ನಿನ್ನೆಯಷ್ಟೇ ದೆಹಲಿಯಲ್ಲಿ ದೂರು ದಾಖಲಾಗಿದ್ದು, ಬೆಂಗಳೂರಿನಲ್ಲೂ ಕಿರಣ್ ಆರಾಧ್ಯ ಎನ್ನುವವರು ಸೈಬರ್ ಕ್ರೈಂಗೆ ದೂರು ನೀಡಿದ್ದರು.  ಅಲ್ಲದೇ, ಅನೇಕ ಕಡೆ ಈ ಕುರಿತು ಪ್ರತಿರೋಧ ಕೂಡ ವ್ಯಕ್ತವಾಗಿತ್ತು. ಇದೀಗ ದೇಶದ ಹಲವು ಕಡೆ ಫಿಲ್ಮ್ ಚೇಂಬರ್ ಗೂ ದೂರುಗಳನ್ನು ದಾಖಲಿಸಲಾಗುತ್ತಿದೆ. ಅಲ್ಲದೇ, ಆ ಸಾಕ್ಷ್ಯ ಚಿತ್ರವನ್ನು ಪ್ರದರ್ಶನ ಮಾಡದಂತೆ ಒತ್ತಡ ಹೇರಲಾಗುತ್ತಿದೆ. ಇದನ್ನೂ ಓದಿ:ಸಮಂತಾ ಮೊದಲ ಸಂಭಾವನೆ ಕೇಳಿದ್ರೆ ನೀವು ಶಾಕ್‌ ಆಗುತ್ತೀರಾ

    ಲೀನಾ ಅವರು ತಮ್ಮ ಸಾಕ್ಷ್ಯಚಿತ್ರದ ಪೋಸ್ಟರ್ ಒಂದನ್ನು ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಆ ಪೋಸ್ಟರ್ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಧಾರ್ಮಿಕ ಭಾವನೆಗಳಿಗೆ ಅವರು ಧಕ್ಕೆ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಲೀನಾ ಅವರು ಕಾಳಿ ಕುರಿತಾಗಿ ಸಾಕ್ಷ್ಯ ಚಿತ್ರ ಮಾಡಿದ್ದು, ಕಾಳಿಯ ಒಂದು ಕೈಲಿ ಸಿಗರೇಟು ಮತ್ತೊಂದು ಕೈಲಿ ಎಲ್ಜಿಬಿಟಿಕ್ಯೂ ಧ್ವಜವನ್ನು ನೀಡಲಾಗಿದೆ. ಈ ಪೋಸ್ಟರ್ ಅನ್ನು ಶೇರ್ ಮಾಡಿರುವ ಲೀನಾ, ಈ ಸಾಕ್ಷ್ಯ ಚಿತ್ರವು ಕೆನಡಾ ಫಿಲ್ಮ್ ಫೇಸ್ಟಿವಲ್ ನಲ್ಲಿ ಬಿಡುಗಡೆ ಆಗುತ್ತಿದೆ. ಈ ಕಾರಣಕ್ಕಾಗಿ ನಾನು ಉತ್ಸುಕಳಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ಟ್ವಿಟರ್ ಬಳಕೆದಾರರು ಈ ಕುರಿತು ಆಕ್ರೋಶ ವ್ಯಕ್ತ ಪಡಿಸಿದ್ದು, ಈ ನಿರ್ಮಾಪಕಿಯನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಕೋಟ್ಯಂತರ ಹಿಂದೂಗಳ ಭಾವನೆಗೆ ಆಕೆ ಧಕ್ಕೆ ಮಾಡಿದ್ದರಿಂದ, ಆ ಸಾಕ್ಷ್ಯ ಚಿತ್ರವನ್ನು ನಿಷೇಧ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದ್ದಾರೆ. ತಮಿಳು ನಾಡು ಮೂಲದ ಈ ಲೀನಾ ಸಲಿಂಗಿಗಳ ಬೆಂಬಲಕ್ಕೆ ಈ ಹಿಂದೆ ನಿಂತವರು ಎನ್ನುವುದು ವಿಶೇಷ.

    Live Tv
    [brid partner=56869869 player=32851 video=960834 autoplay=true]