Tag: ಸಾಕ್ಷಿ ವೈದ್ಯ

  • ಶ್ರೀಲೀಲಾ, ರಶ್ಮಿಕಾಗೆ ಗೇಟ್ ಪಾಸ್ – ವಿಜಯ್ ದೇವರಕೊಂಡಗೆ ಸಾಕ್ಷಿ ವೈದ್ಯ ನಾಯಕಿ

    ಶ್ರೀಲೀಲಾ, ರಶ್ಮಿಕಾಗೆ ಗೇಟ್ ಪಾಸ್ – ವಿಜಯ್ ದೇವರಕೊಂಡಗೆ ಸಾಕ್ಷಿ ವೈದ್ಯ ನಾಯಕಿ

    ವಿಜಯ್ ದೇವರಕೊಂಡ (Vijay Devarakonda) ಹೊಸ ಸಿನಿಮಾ ಒಂದಲ್ಲಾ ಒಂದು ವಿಚಾರವಾಗಿ ಸಖತ್ ಸುದ್ದಿಯಾಗುತ್ತಿದೆ. ವಿಜಯ್ 12ನೇ ಚಿತ್ರಕ್ಕೆ ಶ್ರೀಲೀಲಾ, ರಶ್ಮಿಕಾ ಮಂದಣ್ಣ (Rashmika Mandanna) ಇಬ್ಬರು ಬಿಟ್ಟು ರೌಡಿಗೆ ಸಾಕ್ಷಿ ವೈದ್ಯ ನಾಯಕಿಯಾಗಿದ್ದಾರೆ.

    ವಿಜಯ್ 12ನೇ ಚಿತ್ರಕ್ಕೆ ಮೊದಲು ಶ್ರೀಲೀಲಾ ನಾಯಕಿಯಾಗಿದ್ರು. ಆದರೆ ಕಾರಣಾಂತರಗಳಿಂದ ‘ಕಿಸ್’ ಬ್ಯೂಟಿ ತಂಡದಿಂದ ಹೊರನಡೆದರು. ಬಳಿಕ ಶ್ರೀಲೀಲಾ ಜಾಗಕ್ಕೆ ರಶ್ಮಿಕಾ ನಾಯಕಿ, ವಿಜಯ್ ಮತ್ತೆ ಜೋಡಿಯಾಗ್ತಾರೆ ಎನ್ನಲಾಗಿತ್ತು. ಆದರೆ ಈಗ ರಶ್ಮಿಕಾ ಕೂಡ ಔಟ್ ಆಗಿದ್ದಾರೆ. ವಿಜಯ್‌ಗೆ ನಾಯಕಿಯಾಗಿ ಸಾಕ್ಷಿ ವೈದ್ಯ (Sakshi Vaidya) ಎಂಟ್ರಿ ಕೊಟ್ಟಿದ್ದಾರೆ.

    ಗೌತಮ್ ತಿನ್ನನೂರಿ-ವಿಜಯ್ ಕಾಂಬೋ ಸಿನಿಮಾ ಶುರುವಾಗುವ ಮುಂಚೆಯೇ ಒಂದಲ್ಲಾ ಒಂದು ಅಡೆತಡೆಗಳಿಂದ ಸುದ್ದಿಯಾಗ್ತಿದೆ. ಮೂಲಗಳ ಪ್ರಕಾರ, ಸಾಕ್ಷಿ ವೈದ್ಯ ಅವರು ನಾಯಕಿಯಾಗಿ ಫೈನಲ್ ಆಗಿದ್ದಾರಂತೆ.

    ವಿಜಯ್ ದೇವರಕೊಂಡ- ಸಾಕ್ಷಿ ಮೊದಲ ಬಾರಿಗೆ ತೆರೆಯ ಮೇಲೆ ಒಂದಾಗ್ತಿದ್ದಾರೆ. ವಿಜಯ್-ಸಾಕ್ಷಿ ಜೋಡಿ ಪ್ರೇಕ್ಷಕರಿಗೆ ಮೋಡ ಮಾಡೋದ್ರಲ್ಲಿ ಯಶಸ್ವಿಯಾಗುತ್ತಾ ಕಾದುನೋಡಬೇಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಏಜೆಂಟ್ ಸಿನಿಮಾಗೆ ಬಾಲಿವುಡ್ ಸ್ಟಾರ್: ಡಿನೋ ಮೋರಿಯಾ ಫಸ್ಟ್ ಲುಕ್

    ಏಜೆಂಟ್ ಸಿನಿಮಾಗೆ ಬಾಲಿವುಡ್ ಸ್ಟಾರ್: ಡಿನೋ ಮೋರಿಯಾ ಫಸ್ಟ್ ಲುಕ್

    ಟಾಲಿವುಡ್ ಯಂಗ್ ಅಂಡ್ ಡೈನಾಮಿಕ್ ಹೀರೋ ಅಖಿಲ್ ಅಕ್ಕಿನೇನಿ (Akhil Akkineni) ನಟನೆಯ ಕ್ರೇಜಿ ಪ್ರಾಜೆಕ್ಟ್ ಏಜೆಂಟ್ ಅಂಗಳದಿಂದ ಹೊಸ ಅಪ್ ಡೇಟ್ ಸಿಕ್ಕಿದೆ. ಅಖಿಲ್ ಹುಟ್ಟುಹಬ್ಬಕ್ಕೆ ಹೊಸ ಪೋಸ್ಟರ್ ಅನಾವರಣ ಮಾಡಿದ್ದ ಚಿತ್ರತಂಡ ಈಗ ಮತ್ತೊಂದು ಪ್ರಮುಖ ಪಾತ್ರವನ್ನು ಸಿನಿರಸಿಕರಿಗೆ ಪರಿಚಯಿಸಿದೆ.  ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ (Mummutty) ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಸಾಕ್ಷಿ ವೈದ್ಯ ನಾಯಕಿಯಾಗಿ ಅಭಿನಯಿಸಿರುವ ಏಜೆಂಟ್ (Agent) ಸಿನಿಮಾಗೆ ಬಾಲಿವುಡ್ ತಾರೆ ಎಂಟ್ರಿ ಕೊಟ್ಟಿದ್ದಾರೆ.

    ರಾಝ್, ಅಕ್ಸರ್, ಜೂಲಿ ಮುಂತಾದ ಪಾತ್ರಗಳ‌ ಮೂಲಕ ಖ್ಯಾತಿ ಪಡೆದಿರುವ ಬಿಟೌನ್ ಸ್ಟಾರ್ ಡಿಯೋ ಮೋರಿಯಾ (Deo Morea) ಏಜೆಂಟ್ ಸಿನಿಮಾದಲ್ಲಿ ದಿ ಗಾಡ್ ಎಂಬ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉದ್ದವಾದ ಕೇಶರಾಶಿ, ಮುಖದ‌ ಮೇಲೆ ಗಾಯದ ಗುರುತು, ಕೈಯಲ್ಲಿ ಗನ್ ಹಿಡಿದು ಡಿಯೋ ಮೋರಿಯಾ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಜ್ಯೂ.ಎನ್‌ಟಿಆರ್ ಎದುರು ಅಬ್ಬರಿಸಲಿದ್ದಾರೆ ಸೈಫ್ ಅಲಿ ಖಾನ್

    ಈಗಾಗಲೇ ಏಜೆಂಟ್ ಮೊದಲ ಎರಡು ಹಾಡುಗಳ ಹಿಟ್ ಲೀಸ್ಟ್ ಸೇರಿದ್ದು, ನಿನ್ನೆ ರಿಲೀಸ್ ಆಗಿರುವ ರಾಮ ಶ್ರೀಕೃಷ್ಣ ಎಂಬ ಹಾಡು ಬಜ್ ಕ್ರಿಯೇಟ್ ಮಾಡಿದೆ. ಆಕ್ಷನ್ ಹೈವೋಲ್ಟೇಜ್  ಏಜೆಂಟ್ ಸಿನಿಮಾವನ್ನು ರಾಮಬ್ರಹ್ಮಂ ಸುಂಕರ AK ಎಂಟರ್ಟೈನ್ಮೆಂಟ್ಸ್ ಹಾಗೂ ಸುರೇಂದ್ರ 2 ಸಿನಿಮಾ ಬ್ಯಾನರ್ ನಡಿ ನಿರ್ಮಾಣ ಮಾಡಿದ್ದಾರೆ.

    ಚಿತ್ರಕ್ಕೆ ವಕ್ಕನಾಥಂ ವಂಶಿ ಕಥೆ ಬರೆದಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತ ನವೀನ್ ನೂಲಿ ಸಂಕಲನ, ಅವಿನಾಶ ಕೊಲ್ಲ ಕಲಾ ನಿರ್ದೇಶನ, ಅಜೇಯ್ ಸುಂಕರ, ಪಾತಿ ದೀಪ ರೆಡ್ಡಿ ಸಹ ನಿರ್ಮಾಣ ಚಿತ್ರಕ್ಕಿದೆ. ಹಿಪ್ ಹಾಪ್ ಥಮೀಜಾ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದ ಏಜೆಂಟ್ ಚಿತ್ರ ರಸೂಲ್ ಎಲ್ಲೋರೆ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿರುವ ಏಜೆಂಟ್ ಸಿನಿಮಾ ಏಪ್ರಿಲ್ 28ಕ್ಕೆ ಬಿಡುಗಡೆಯಾಗುತ್ತಿದೆ.

  • ಅಖಿಲ್ ಅಕ್ಕಿನೇನಿ ಹುಟ್ಟುಹಬ್ಬಕ್ಕೆ ‘ಏಜೆಂಟ್’ ಹೊಸ ಪೋಸ್ಟರ್ ರಿಲೀಸ್

    ಅಖಿಲ್ ಅಕ್ಕಿನೇನಿ ಹುಟ್ಟುಹಬ್ಬಕ್ಕೆ ‘ಏಜೆಂಟ್’ ಹೊಸ ಪೋಸ್ಟರ್ ರಿಲೀಸ್

    ಡೈನಾಮಿಕ್ ಹೀರೋ ಅಖಿಲ್ ಅಕ್ಕಿನೇನಿ (Akhil Akkineni), ಸ್ಟೈಲಿಶ್ ಮೇಕರ್ ಸುರೇಂದರ್ ರೆಡ್ಡಿ (Surender Reddy) ಕಾಂಬಿನೇಶನ್ ಹೈ ವೋಲ್ಟೇಜ್ ಸಿನಿಮಾ ‘ಏಜೆಂಟ್’ (Agent) ಬಿಡುಗಡೆಗೆ ಸಜ್ಜಾಗಿದೆ. ಟಾಲಿವುಡ್ ಅಂಗಳದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲೊಂದಾದ ‘ಏಜೆಂಟ್’ ಏಪ್ರಿಲ್ 28ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ.

    ಮೇಕಿಂಗ್ ವೀಡಿಯೋ ಹಾಗೂ ಹಾಡಿನ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಹೊಸ ಪೋಸ್ಟರ್ ಅಖಿಲ್ ಅಕ್ಕಿನೇನಿ ಹುಟ್ಟುಹಬ್ಬಕ್ಕೆ ರಿಲೀಸ್ ಆಗಿದೆ. ಕೈಯಲ್ಲಿ ಗನ್ ಹಿಡಿದು ಸ್ಟೈಲೀಶ್ ಲುಕ್ ನಲ್ಲಿ ಅಖಿಲ್ ಎಂಟ್ರಿ ಕೊಟ್ಟಿರುವ ಪೋಸ್ಟರ್ ಕಿಚ್ಚು ಹಚ್ಚಿದೆ. ಈ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಚಿತ್ರತಂಡ ಪ್ರಮೋಷನ್ ಗೆ ಕಿಕ್ ಸ್ಟಾರ್ಟ್ ಕೊಟ್ಟಿದೆ. ಮುಂಬರುವ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡು ಏಜೆಂಟ್ ಟೀಂ ಪ್ಲಾನ್ ಮಾಡಿಕೊಂಡಿದೆ. ಇದನ್ನೂ ಓದಿ: ‘ವಿಷ್ಣುಪ್ರಿಯಾ’ಗಾಗಿ ಕೇರಳದಿಂದ ಹಾರಿಬಂದ ಕಣ್ಸನ್ನೆ ಬೆಡಗಿ ಪ್ರಿಯಾ

    ನಿರ್ದೇಶಕ ಸುರೇಂದರ್ ರೆಡ್ಡಿ ಏಜೆಂಟ್ ಚಿತ್ರವನ್ನು ಇತರೆ ಸ್ಪೈ ಥ್ರಿಲ್ಲರ್ ಸಿನಿಮಾಗಳಿಗಿಂತಲೂ ಡಿಫ್ರೆಂಟ್ ಆಗಿ ತೆರೆ ಮೇಲೆ ತರುತ್ತಿದ್ದು ಇಬ್ಬರ ಕಾಂಬಿನೇಶನ್ ಮೇಲೆ ಸಿನಿ ಪ್ರೇಮಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚಿತ್ರದಲ್ಲಿ ಸಾಕ್ಷಿ ವೈದ್ಯ ಅಖಿಲ್ ಅಕ್ಕಿನೇನಿಗೆ ನಾಯಕಿಯಾಗಿ ನಟಿಸಿದ್ದು, ಮಮ್ಮುಟ್ಟಿ ಚಿತ್ರದ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ರಾಮಬ್ರಹ್ಮಂ ಸುಂಕರ AK ಎಂಟರ್ಟೈನ್ಮೆಂಟ್ಸ್ ಹಾಗೂ ಸುರೇಂದ್ರ 2 ಸಿನಿಮಾ ಬ್ಯಾನರ್ ನಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

    ಚಿತ್ರಕ್ಕೆ ವಕ್ಕನಾಥಂ ವಂಶಿ ಕಥೆ ಬರೆದಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತ ನವೀನ್ ನೂಲಿ ಸಂಕಲನ, ಅವಿನಾಶ ಕೊಲ್ಲ ಕಲಾ ನಿರ್ದೇಶನ, ಅಜೇಯ್ ಸುಂಕರ, ಪಾತಿ ದೀಪ ರೆಡ್ಡಿ ಸಹ ನಿರ್ಮಾಣ ಚಿತ್ರಕ್ಕಿದೆ. ಹಿಪ್ ಹಾಪ್ ಥಮೀಜಾ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದ ಏಜೆಂಟ್ ಚಿತ್ರ ರಸೂಲ್ ಎಲ್ಲೋರೆ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿರುವ ಪ್ಯಾನ್ ಇಂಡಿಯಾ ಸಿನಿಮಾ ಏಜೆಂಟ್ ಬೇಸಿಗೆ ರಜೆ ದಿನಗಳಲ್ಲಿ ತೆರೆಗೆ ಬರ್ತಿದ್ದು, ಬಾಕ್ಸಾಫೀಸ್ ಧೂಳ್ ಎಬ್ಬಿಸಲು ಅಖಿಲ್ ಸನ್ನದ್ಧರಾಗಿದ್ದಾರೆ.