Tag: ಸಾಕಾನೆ ಶಿಬಿರ

  • ಕೊಡಗಿನಲ್ಲಿ 3ನೇ ಸಾಕಾನೆ ಶಿಬಿರ ಲೋಕಾರ್ಪಣೆ – ಹಾರಂಗಿ ವಿಶೇಷತೆ ಏನು?

    ಕೊಡಗಿನಲ್ಲಿ 3ನೇ ಸಾಕಾನೆ ಶಿಬಿರ ಲೋಕಾರ್ಪಣೆ – ಹಾರಂಗಿ ವಿಶೇಷತೆ ಏನು?

    ಮಡಿಕೇರಿ: ಪ್ರವಾಸಿಗರ ಸ್ವರ್ಗ, ಹಚ್ಚ ಹಸಿರ ಬೆಟ್ಟ ಗುಡ್ಡಗಳ ಸುಂದರ ಪ್ರಕೃತಿಯ ತವರು ಕೊಡಗಿನಲ್ಲಿ(Kodagu) ಮೂರನೇ ಸಾಕಾನೆ ಶಿಬಿರ(Elephant Camp)ಲೋಕಾರ್ಪಣೆಗೊಂಡಿದೆ.

    ಜಿಲ್ಲೆಯಲ್ಲಿ ಇಲ್ಲಿಯವರೆಗೆ ದುಬಾರೆ ಹಾಗೂ ಮತ್ತಿಗೋಡಿನಲ್ಲಿ ಸಾಕಾನೆ ಶಿಬಿರಗಳಿದ್ದವು. ಈ ಸಾಲಿಗೆ ಈಗ ಹಾರಂಗಿ(Harangi) ಸಾಕಾನೆ ಶಿಬಿರವೂ ಸೇರ್ಪಡೆಗೊಂಡಿದೆ.

    ದುಬಾರೆ ಸಾಕಾನೆ ಶಿಬಿರದಲ್ಲಿ(Dubare Elephant Camp) ಬರೋಬ್ಬರಿ 32 ಸಾಕಾನೆಗಳಿತ್ತು. ಆದರೆ ಇಷ್ಟೊಂದು ಆನೆಗಳ ಒತ್ತಡ ತಡೆದುಕೊಳ್ಳಲು ಆ ಶಿಬಿರಕ್ಕೆ ಸಾಧ್ಯವಾಗುತ್ತಿರಲಿಲ್ಲ. ಅಷ್ಟೇ ಅಲ್ಲದೇ ಸಾಕಾನೆ ಶಿಬಿರದಲ್ಲಿ ಇಂತಿಷ್ಟೇ ಆನೆಗಳಿರಬೇಕು ಎಂಬ ಸುಪ್ರಿಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಹೊಸ ಸಾಕಾನೆ‌ ಶಿಬಿರವನ್ನು ತೆರೆಯಲಾಗಿದೆ. ಈಗಾಗಲೇ ದುಬಾರೆಯಿಂದ 7 ಸಾಕಾನೆಗಳನ್ನು ಶಿಫ್ಟ್ ಮಾಡಲಾಗಿದೆ.

    ಮತ್ತಿಗೋಡು, ದುಬಾರೆ ಸಾಕಾನೆ ಶಿಬಿರಗಳಿಗಿಂತ ವಿಭಿನ್ನವಾಗಿದೆ ಈ ಹಾರಂಗಿ ಸಾಕಾನೆ ಶಿಬಿರ. ಈ ಸಾಕಾನೆ ಶಿಬಿರ ಹಾರಂಗಿ ಜಲಾಶಯದ ಹಿನ್ನೀರಿನ ಸುಂದರ ಪ್ರಕೃತಿಯ ಮಡಿಲಲ್ಲಿ ಇರುವುದು ವಿಶೇಷ. ಸುಮಾರು 2 ಸಾವಿರ ಎಕ್ರೆ ವಿಶಾಲವಾದ ಅರಣ್ಯ ಪ್ರದೇಶದಲ್ಲಿ ಈ ಶಿಬಿರವನ್ನು ತೆರೆಯಲಾಗಿದೆ. ಇದನ್ನೂ ಓದಿ: ಅಂದು ಬ್ರಿಟಿಷರ ತರಕಾರಿ ತೋಟ, ಇಂದು ವಿಶ್ವ ಪ್ರಸಿದ್ಧ ಪ್ರವಾಸಿ ಗಾರ್ಡನ್‌

     

    ಹಿನ್ನೀರು ಪ್ರದೇಶದಲ್ಲಿ ಆನೆಗಳ ಮಜ್ಜನ, ಆನೆಗಳ ಆಹಾರ, ಆನೆ ಸವಾರಿ ಮೊದಲಾದ ಚಟುವಟಿಕೆಗಳಿವೆ. ಶಿಬಿರದಲ್ಲಿ ಬಗೆ ಬಗೆಯ ಮರಗಳ ವೃಕ್ಷೋಧ್ಯಾನ ತಲೆ ಎತ್ತುತ್ತಿದೆ. ಜೊತೆಗೆ ಮಕ್ಕಳಿಗೆ ಆಡವಾಡಲು ಪ್ರತ್ಯೇಕ ಆಟದ ಸ್ಥಳಾವಕಾಶವಿದೆ. ಅಷ್ಟೇ ಅಲ್ಲದೇ ಬೋಟಿಂಗ್ ಅನುಭವ ಕೂಡ ಇಲ್ಲಿ ಸಿಗಲಿದೆ.

    ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಕುಳಿತು ಸೂರ್ಯಾಸ್ತಮಾನದ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು. ಈ ನೂತನ ಶಿಬಿರದಿಂದ ಸ್ಥಳೀಯ ವ್ಯಾಪಾರ ಉದ್ಯಮಕ್ಕೂ ಪುನಶ್ಚೇತನ ಸಿಗಲಿದೆ. ಕೊಡಗು ಪ್ರವಾಸೋದ್ಯಮಕ್ಕೆ(Kodagu Tourism) ಮತ್ತೊಂದು ಗರಿ ಎಂಬಂತೆ ಸೇರ್ಪಡೆಯಾಗಿರುವ ಹಾರಂಗಿ ಸಾಕಾನೆ ಶಿಬಿರ ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸುವುದರಲ್ಲಿ ಎರಡು ಮಾತಿಲ್ಲ.

    Live Tv
    [brid partner=56869869 player=32851 video=960834 autoplay=true]

  • 4 ಸಾವಿರ ಕಿ.ಮೀ ಕಾಡಿನಲ್ಲಿ ಸಂಚರಿಸಿ ಮರಳಿ ದುಬಾರೆಗೆ ಬಂದ ಕುಶ

    4 ಸಾವಿರ ಕಿ.ಮೀ ಕಾಡಿನಲ್ಲಿ ಸಂಚರಿಸಿ ಮರಳಿ ದುಬಾರೆಗೆ ಬಂದ ಕುಶ

    ಮಡಿಕೇರಿ: ಸಾಕಾನೆ ಕುಶ 4 ಸಾವಿರ ಕಿ.ಮೀ ಕಾಡಿನಲ್ಲಿ ಸಂಚರಿಸಿ  ಮರಳಿ ತನ್ನ ಗೂಡಿಗೆ ನಡೆದುಕೊಂಡು ಬಂದು ಎಲ್ಲರಿಗೂ ಅಚ್ಚರಿ ಮೂಡಿಸಿರುವ ಘಟನೆ ಕೊಡಗಿನ ದುಬಾರೆಯಲ್ಲಿ ನಡೆದಿದೆ.

    ಸಾಕಾನೆ ಕುಶನನ್ನು ತಾನು ಹುಟ್ಟಿ ಬೆಳೆದ ಊರಿನಿಂದ ಮೇಲಧಿಕಾರಿಗಳ ಸೂಚನೆ ಮೇರೆಗೆ ನೂರಾರು ಕಿಲೋಮೀಟರ್‌ನಷ್ಟು ದೂರ ಹೋಗಿ ಅರಣ್ಯ ಇಲಾಖೆಯ ಸಿಬ್ಬಂದಿ ಬಿಟ್ಟು ಬಂದಿದ್ರು. ಆದರೆ ಆ ಆನೆ ಬಂದು ಒಂದು ವರ್ಷ ಏಳು ದಿನಗಳಲ್ಲಿ ತಾನು ಹುಟ್ಟಿ ಬೆಳೆದ ಸಂಗತಿಗಳನ್ನು ನೆನಪು ಮಾಡಿಕೊಂಡು ಸಾವಿರಾರು ಕಿ.ಮೀ ನಡೆದುಕೊಂಡು ಬಂದು ಮತ್ತೆ ತಾನು ಇದ್ದ ಸ್ಥಳಕ್ಕೆ ತಲುಪಿದೆ. ಇದರಿಂದಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಮಾವುತ ಕಾವಾಡಿಗರಿಗೆ ಆಶ್ಚರ್ಯ ಉಂಟು ಮಾಡಿದೆ. ಇದನ್ನೂ ಓದಿ: ಪೊಲೀಸ್ ಇಲಾಖೆ ಸಿಬ್ಬಂದಿ ವಿರುದ್ಧ ಪೋಸ್ಟ್ – ಕಾನ್ಸ್‌ಟೇಬಲ್ ಅಮಾನತು

    2021 ಜೂನ್ ತಿಂಗಳಲ್ಲಿ ದುಬಾರೆ ಸಾಕಾನೆ ಶಿಬಿರದಿಂದ ಬಂಡೀಪುರಕ್ಕೆ ಸ್ಥಳಾಂತರ ಮಾಡಿದ ಸಾಕನೆ ಮತ್ತೆ ಪ್ರತ್ಯಕ್ಷವಾಗಿದೆ. ಬಂಡೀಪುರದಿಂದ ದುಬಾರೆ ಕುಶಾ ಶಿಬಿರಕ್ಕೆ 4 ಸಾವಿರ ಕಿಲೋ ಮೀಟರ್ ಕ್ರಮಿಸಿ ಮರಳಿದೆ. ಕುಶಗೆ ರೇಡಿಯೋ ಕಾಲರ್ ಅಳವಡಿಕೆ ಮಾಡಿದ ಹಿನ್ನೆಲೆಯಲ್ಲಿ ಅದರ ಚಲನವಲನ ಪತ್ತೆಯಾಗಿದೆ.

    ವರ್ಷದ ಹಿಂದೆ ಕೆಲವು ವನ್ಯಜೀವಿ ಪ್ರೇಮಿಗಳ ಒತ್ತಾಯದಿಂದ ರಾಜ್ಯ ಸರ್ಕಾರ ಕುಶ ಎಂಬ ಆನೆಯನ್ನು ಅರಣ್ಯ ಇಲಾಖೆ ಮೂಲಕ ರೇಡಿಯೋ ಕಾಲರ್ ಅಳವಡಿಸಿ 2021 ಜೂನ್ ತಿಂಗಳಲ್ಲಿ ಬಂಡೀಪುರಕ್ಕೆ ಸ್ಥಳಾಂತರ ಮಾಡುವ ಕಾರ್ಯ ನಡೆಸಿತ್ತು. ಆದರೆ ಬಂಡೀಪುರದಲ್ಲಿ ನೆಲೆ ನಿಲ್ಲಲು ಇಚ್ಛಿಸದ ಕುಶ ಅಲ್ಲಿನ ಕೆಲವು ಸಂಗಡಿಗರೊಂದಿಗೆ ಕೇರಳ ಮೂಲಕ ಕೊಡಗಿನ ಗಡಿ ದಾಟಿ, ತಿತಿಮತಿ ದೊಡ್ಡಹರವೆ ಮೀಸಲು ಅರಣ್ಯ ಮಾರ್ಗವಾಗಿ ಇದೀಗ ಮಾಲ್ದಾರೆ ಸಮೀಪದ ದುಬಾರೆ ಶಿಬಿರದ ಸಮೀಪದಲ್ಲಿ ನೆಲೆಯೂರಿದೆ.

    ಕುಶ ಶಿಬಿರದಲ್ಲಿದ್ದ ಸಂದರ್ಭ ಅಧಿಕಾರಿಗಳು ಮತ್ತು ಮಾವುತರು ತುಂಬಾ ಚೆನ್ನಾಗಿ ಆರೈಕೆ ಮಾಡಿದ ಹಿನ್ನೆಲೆಯಲ್ಲಿ ಅದನ್ನು ನೆನಪಿಸಿಕೊಂಡು ಶಿಬಿರಕ್ಕೆ ಮತ್ತೆ ಹಿಂತಿರುಗುವ ಮನಸ್ಸು ಮಾಡಿದೆ ಅನ್ನೋದು ಕೆಲವರ ಅಭಿಪ್ರಾಯ. 2016ರಲ್ಲಿ ಜಿಲ್ಲೆಯ ಚೆಟ್ಟಳ್ಳಿ ಅರಣ್ಯದಿಂದ ಹಿಡಿದು ಶಿಬಿರಕ್ಕೆ ತಂದ ಕುಶ ದುಬಾರೆ ಸಾಕಾನೆ ಶಿಬಿರ ಸೇರಿತ್ತು. 2017 ರ ನವೆಂಬರ್ ತಿಂಗಳಲ್ಲಿ ಏಕಾಏಕಿ ಕುಶಾ ಶಿಬಿರದಿಂದ ನಾಪತ್ತೆಯಾಗಿತ್ತು. ನಂತರ ಆನೆಯನ್ನು ಮರಳಿ ತರುವಲ್ಲಿ ದುಬಾರೆ ಸಾಕಾನೆ ಶಿಬಿರದ ಅಧಿಕಾರಿಗಳು ಸಿಬ್ಬಂದಿ ಹರಸಾಹಸಪಟ್ಟು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದರು.

    ವನ್ಯಜೀವಿ ಪ್ರೇಮಿ ಮನೇಕಾ ಗಾಂಧಿ ನೇತೃತ್ವದ ತಂಡದ ಆಗ್ರಹದಂತೆ ಸರ್ಕಾರ ಕುಶ ಆನೆಯನ್ನು ಅದರ ಇಚ್ಛೆಗೆ ವಿರುದ್ಧವಾಗಿ ಮತ್ತೆ ಅರಣ್ಯಕ್ಕೆ ಸ್ಥಳಾಂತರಿಸುವ ಕಾರ್ಯ ನಡೆಸಿತ್ತು. ಆದರೆ ಅಂದು ಕುಶ ಅನೆ ವಲ್ಲದ ಮನಸ್ಸಿನಲ್ಲೇ ಬಂಡಿಪುರ ಅರಣ್ಯದಲ್ಲೇ ಸುತ್ತಾಡಿಕೊಂಡು ಇತ್ತು. ಇದನ್ನೂ ಓದಿ:  ಸಾಂಪ್ರದಾಯಿಕ ಒತ್ತು ಶಾವಿಗೆ, ಕಾಯಿ ಹಾಲು ಮಾಡುವ ವಿಧಾನ 

    ಒಟ್ಟಿನಲ್ಲಿ ಬಂಡೀಪುರದಿಂದ ನೂರಾರು ಕಿಲೋ ಮೀಟರ್ ದೂರದ ದುಬಾರೆಗೆ ಮತ್ತೆ ಆಗಮಿಸಿದ ಕುಶ ಇದೀಗ ಶಿಬಿರದ ಕೆಲವೇ ಅಂತರದಲ್ಲಿ 5-6 ಕಾಡಾನೆಗಳ ಜೊತೆಗೆ ಓಡಾಡುತ್ತಿದೆ. ತಾನು ಹುಟ್ಟಿ ಬೆಳೆದ ಸ್ಥಳಕ್ಕೆ ಸಾವಿರಾರು ಕಿಲೋ ಮೀಟರ್ ನಡೆದು ಬಂದಿರುವುದು ನಿಜಕ್ಕೂ ಆಶ್ಚರ್ಯ. ಮೂಕಪ್ರಾಣಿಯೊಂದರ ಪ್ರೀತಿ ಹೇಗೆ ಇದೆ ಎಂದು ಸಾಕಾನೆಯನ್ನು ಪಳಗಿಸಿದ ಮಾವುತ ಕಾವಡಿಗಳ ಮಾತಾಗಿದೆ.

  • ಸಾಕಾನೆ ಶಿಬಿರಕ್ಕೂ ತಟ್ಟಿದ ಲಾಕ್‍ಡೌನ್ ಎಫೆಕ್ಟ್ – ಆಹಾರ ಇಲ್ಲದೇ ಮಾವುತ, ಕಾವಡಿಗಳ ಕುಟುಂಬದ ನರಳಾಟ

    ಸಾಕಾನೆ ಶಿಬಿರಕ್ಕೂ ತಟ್ಟಿದ ಲಾಕ್‍ಡೌನ್ ಎಫೆಕ್ಟ್ – ಆಹಾರ ಇಲ್ಲದೇ ಮಾವುತ, ಕಾವಡಿಗಳ ಕುಟುಂಬದ ನರಳಾಟ

    ಮಡಿಕೇರಿ: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಭಾಗವಹಿಸುವ ದುಬಾರೆ ಸಾಕಾನೆ ಶಿಬಿರಕ್ಕೂ ಲಾಕ್‍ಡೌನ್ ಎಫೆಕ್ಟ್ ತಟ್ಟಿದೆ.

    ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ದುಬಾರೆ ಸಾಕಾನೆ ಶಿಬಿರದಲ್ಲಿ ಆನೆಗಳ ಪರಿಸ್ಥಿತಿ ಸಾಕಾನೆಗಳ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತೆ ಆಗಿದೆ. ಶಿಬಿರದಲ್ಲಿರುವ ಆನೆಗಳಿಗೆ ಹೊಟ್ಟೆ ತುಂಬಾ ಆಹಾರ ಬಳಲುತ್ತಿವೆ. ಲಾಕ್‍ಡೌನ್ ಹಿನ್ನೆಲೆ ಆಹಾರ ಪೂರೈಕೆಯಾಗಿಲ್ಲ. ಆನೆಗಳಿಗೆ ಪ್ರತಿದಿನ ಆಹಾರ ನೀಡುತ್ತಿದ್ದ ಭತ್ತದ ಹುಲ್ಲು, ಬೆಲ್ಲದ ಕೊರತೆ ಉಂಟಾಗಿದೆ. ಮಾವುತರು, ಕಾವಡಿಗರಿಗೂ ಅಗತ್ಯ ವಸ್ತುಗಳ ಕೊರತೆಯಾಗಿದೆ.

    ಅಷ್ಟೇ ಅಲ್ಲದೇ ಸಾಕಾನೆಗಳನ್ನೆ ಅವಲಂಬಿಸಿಕೊಂಡು ಜೀವನ ನಡೆಸುತ್ತಿರುವ ಮಾವುತ, ಕಾವಡಿಗಳ ಕುಟುಂಬಕ್ಕೂ ಪಡಿತರ ಅಂಗಡಿಯಿಂದ ಅಕ್ಕಿ, ಗೋಧಿಗಳ ಪೂರೈಕೆ, ತರಕಾರಿ ಪೂರೈಕೆಯೂ ಇಲ್ಲವಾಗಿದೆ. ಇದರಿಂದ 90 ಕುಟುಂಬಗಳು ಪರದಾಟ ನಡೆಸುತ್ತಿವೆ. ಒಂದು ಹೊತ್ತು ಊಟ ಮಾಡಿ ಎರಡು ಹೊತ್ತು ಉಪವಾಸ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ.

    ತೋಟಗಳಲ್ಲಿ ಹೋಗಿ ಕೆಲಸ ಮಾಡುತ್ತೇವೆ ಅಂದರೂ ಇದೀಗಾ ಲಾಕ್‍ಡೌನ್ ಹಿನ್ನೆಲೆ ಯಾರು ಕೆಲಸ ಕೋಡುತ್ತಿಲ್ಲ. ಜೀವನ ನಡೆಸುವುದೇ ಕಷ್ಟವಾಗಿದೆ ಎಂದು ಮಾವುತ, ಕಾವಡಿಗಳ ಕುಟುಂಬಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾವೆ.