Tag: ಸಾಂಗ್ ರಿಲೀಸ್

  • ದುಬೈನಲ್ಲಿ ‘ಕುದ್ರು’ ಸಿನಿಮಾದ ಸಾಂಗ್ ರಿಲೀಸ್

    ದುಬೈನಲ್ಲಿ ‘ಕುದ್ರು’ ಸಿನಿಮಾದ ಸಾಂಗ್ ರಿಲೀಸ್

    ತ್ತೀಚೆಗೆ ದುಬೈ (Dubai) ಯಲ್ಲಿ ನಡೆದ ಆಟಿದೊಂಜಿ ದಿನ ಸಮಾರಂಭದಲ್ಲಿ ‘ಕುದ್ರು’ (Kudru) ಸಿನಿಮಾ ಹಾಡುಗಳ ವಿಡಿಯೋ (Song Release) ರಿಲೀಸ್ ಮಾಡಲಾಯಿತು. ಕತೆಗಾರ, ನಿರ್ದೇಶಕ ಹಾಗೂ ನಿರ್ಮಾಪಕರಾದ ಭಾಸ್ಕರ್ ನಾಯ್ಕ್ (Bhaskar Naik), ನಾಯಕ ನಟ ಹರ್ಷಿತ್ ಶೆಟ್ಟಿ (Harshit Shetty)  ನಾಯಕಿರಾದ ಪ್ರಿಯಾ ಹೆಗ್ಡೆ, ಡೈನ ಡಿಸೋಜ ಸಮಾರಂಭದಲ್ಲಿ ಭಾಗವಹಿಸಿದ್ದರು.  ಶ್ರೀಮತಿ ಸಂಧ್ಯಾ ಪ್ರಸಾದ್ ಅತಿಥಿಗಳಿಗೆ ಪುಷ್ಪಗುಚ್ಚ ನೀಡಿ ಸ್ವಾಗತಿಸಿದರು.

    ದಕ್ಷಿಣ ಕನ್ನಡದ ಸಂಸ್ಕೃತಿಯನ್ನು UAE ಯಲ್ಲಿ ಎತ್ತಿ ಬಿಂಬಿಸುವ  ಹಬ್ಬದಾಚರಣೆ (ಆಟಿದೊಂಜಿ ದಿನ) ಎಲ್ಲರ ಮನ ಗೆದ್ದಿತು. ಈ ಸಮಾರಂಭದಲ್ಲಿ ಕುದ್ರು ಸಿನಿಮಾದ ಟೈಟಲ್ ಸಾಂಗ್  ಹಾಗೂ  ಫೇರ್ವೆಲ್ ಪಾರ್ಟಿ ಸಾಂಗ್ ಬಿಡುಗಡೆ ಮಾಡಲಾಯಿತು. ನಮ್ರಿತ ಮಲ್ಲ ಈ ಹಾಡುಗಳಿಗೆ ಹೆಜ್ಜೆ ಹಾಕಿದರು. ಇದನ್ನೂ ಓದಿ:ಬಿಗ್ ಬಾಸ್ ಫ್ಯಾನ್ಸ್‌ಗೆ ಗುಡ್ ನ್ಯೂಸ್- ದೊಡ್ಮನೆ ಆಟಕ್ಕೆ ಮುಹೂರ್ತ ಫಿಕ್ಸ್

    ಕುದ್ರು ಚಿತ್ರದಲ್ಲಿ ದಕ್ಷಿಣ ಕನ್ನಡದ  ಸುಂದರ ತಾಣಗಳನ್ನು ಹಾಗೂ ಕೋಲ, ಕಂಬಳ, ಯಕ್ಷಗಾನ ದಂತಹ  ಕಲೆಗಳನ್ನು ಪರಿಚಯ ಮಾಡಿಸಿದ್ದಾರೆ ನಿರ್ದೇಶಕ ಭಾಸ್ಕರ್ ನಾಯ್ಕ್.  ಸಿನೆಮಾ ಬಗ್ಗೆ ಮಾತನಾಡಿ ನಿರ್ದೇಶಕರು, ಕುದ್ರು ಒಂದು ಸಮಾಜಕ್ಕೆ ಒಳ್ಳೆಯ ನುಡಿ ಕೊಡುವ ಸಿನಿಮಾ,  ಆಯಿಲ್ ರಿಗ್ ನಲ್ಲಿ ಶೂಟ್ ಮಾಡಿದ ಮೊದಲ ಭಾರತೀಯ ಸಿನಿಮಾ ಕುದ್ರು”ಎನ್ನುವ ಮೂಲಕ UAE ಜನರಿಗೆ ಇನ್ನೂ ಕುತೂಹಲ ಮೂಡಿಸಿದರು.

     

    ಹರ್ಷಿತ್ ಶೆಟ್ಟಿ, ಪ್ರಿಯ ಹೆಗ್ಡೆ ಹಾಗೂ ಡೈನ  ಡಿಸೋಜಾ ಮಾತನಾಡಿ ತಮ್ಮ ಪರಿಚಯದೊಂದಿಗೆ ಸಿನಿಮಾ ಕುರಿತಾದ ಅನುಭವ ಹಂಚಿಕೊಂಡರು.  ಸ್ಥಳೀಯ ಉದ್ಯಮಿ ಮತ್ತು ಪ್ರಖ್ಯಾತ ಕಾರ್ಯ ನಿರ್ವಾಹಕ ರೊನಾಲ್ಡ್ ಒಲಿವೆರಾ ಸಮಾರಂಭದ ನಿರ್ವಾಹಣೆ ಮಾಡಿದ್ದರು. ಪ್ರವೀಣ್ ಶೆಟ್ಟಿ, ಉದ್ಯಮಿಗಳಾದ ಡೇವಿಡ್ ಫ್ರಾಂಕ್ ಫೆರ್ನಾಂಡಿಸ್ ಹಾಗೂ ಜೋಸೆಫ್ ಮತಾಯಸ್ ಹಾಡುಗಳನ್ನು ಬಿಡುಗಡೆ ಮಾಡಿದರು. ಗುರೂಜಿ ಹರೀಶ್,  ಸುಹೈಲ್ ಕುದ್ರೋಳಿ, ಶೋಧನ್ ಪ್ರಸಾದ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಸೂಪರ್ ಸ್ಟಾರ್’ ಪದ ಯಾವಾಗಲೂ ಸಮಸ್ಯೆಯಾಗಿದೆ : ಅಚ್ಚರಿ ಹೇಳಿಕೆ ನೀಡಿದ ತಲೈವಾ

    ‘ಸೂಪರ್ ಸ್ಟಾರ್’ ಪದ ಯಾವಾಗಲೂ ಸಮಸ್ಯೆಯಾಗಿದೆ : ಅಚ್ಚರಿ ಹೇಳಿಕೆ ನೀಡಿದ ತಲೈವಾ

    ನಿನ್ನೆಯಷ್ಟೇ ರಜನಿಕಾಂತ್ (Rajinikanth) ನಟನೆಯ ‘ಜೈಲರ್’ (Jailer) ಸಿನಿಮಾದ ಹಾಡುಗಳು ಬಿಡುಗಡೆ (Song Release) ಕಾರ್ಯಕ್ರಮ ನಡೆಯಿತು. ಚೆನ್ನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಜನಿಕಾಂತ್ ಸೇರಿದಂತೆ ಸಾಕಷ್ಟು ಗಣ್ಯರು ಹಾಜರಿದ್ದರು. ಈ ಸಂದರ್ಭದಲ್ಲಿ ಮನಬಿಚ್ಚಿ ಮಾತನಾಡಿದ ರಜನಿ, ಅಭಿಮಾನಿಗಳು ತಮ್ಮನ್ನು ಅಭಿಮಾನದಿಂದ ಕರೆಯುವ ‘ಸೂಪರ್ ಸ್ಟಾರ್’ (Super Star) ಪದವನ್ನು ಕಿತ್ತುಹಾಕಿ ಎಂದು ಹೇಳಿದ್ದರ ಕುರಿತು ಮಾತನಾಡಿದರು.

    ‘ಈ ಸೂಪರ್ ಸ್ಟಾರ್ ಪದ ಯಾವಾಗಲೂ ನನಗೆ ಸಮಸ್ಯೆಯನ್ನುಂಟು ಮಾಡಿದೆ. ಜೈಲರ್ ಸಿನಿಮಾದ ಹಾಡಿನಲ್ಲೂ ಸೂಪರ್ ಸ್ಟಾರ್ ಎನ್ನುವ ಪದ ನುಸುಳಿದೆ. ಸಾಹಿತ್ಯ ಬರೆದಿರುವ ಸೂಪರ್ ಸುಬು ಅವರಿಗೆ ಹೇಳಿದ್ದೆ. ನನಗೂ ಈ ಸೂಪರ್ ಸ್ಟಾರ್ ಪದಕ್ಕೂ ಯಾಕೋ ಕೂಡಿ ಬರುತ್ತಿಲ್ಲ’ ಎಂದು ನುಡಿದರು. ಜೊತೆಗೆ ಜೈಲರ್ ಸಿನಿಮಾದ ನಿರ್ದೇಶಕ ನೆಲ್ಸನ್ ಅವರನ್ನು ಈ ಸಿನಿಮಾದಿಂದ ತೆಗೆದುಹಾಕಿ ಎಂದೆಲ್ಲ ವಿರೋಧ ಬಂತು. ಅದಕ್ಕೆ ನಾನು ಒಪ್ಪಲಿಲ್ಲ ಎನ್ನುವ ಮಾತುಗಳನ್ನೂ ಅವರು ಆಡಿದರು. ಇದನ್ನೂ ಓದಿ:ದುಲ್ಕರ್ ಸಲ್ಮಾನ್ ಚಿತ್ರಕ್ಕೆ ‘ಲಕ್ಕಿ ಬಾಸ್ಕರ್’ ಟೈಟಲ್ ಫಿಕ್ಸ್

    ಒಂದು ಕಡೆ ಸಿನಿಮಾದ ಹಾಡುಗಳ ಸಂಭ್ರಮ ಜೋರಾಗಿದ್ದರೆ ಮತ್ತೊಂದು ಕಡೆ ಚಿತ್ರದ ಟೈಟಲ್ (Title) ಕುರಿತು ಸಂಕಷ್ಟ ಎದುರಾಗಿದೆ. ಈ ಸಿನಿಮಾ ಮೂರು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದ್ದು, ಈ ಸಂದರ್ಭದಲ್ಲಿ ಮಲಯಾಳಂ (Malayalam) ನಿರ್ದೇಶಕರೊಬ್ಬರು ಟೈಟಲ್ ವಿರುದ್ಧ ಕೋರ್ಟ್ ಮೆಟ್ಟಿಲು ಏರಿದ್ದಾರೆ.

    ಮಲಯಾಳಂನಲ್ಲಿ ಈಗಾಗಲೇ ನಿರ್ದೇಶಕ ಸಕ್ಕಿರ್ ಮಡತ್ತಿಲ್ಲ (Sakkir Madattilla) ‘ಜೈಲರ್’ ಹೆಸರಿನಲ್ಲಿ ಸಿನಿಮಾ ಮಾಡಿದ್ದಾರೆ. ಅದು ಕೂಡ ಬಿಡುಗಡೆಗೆ ಸಿದ್ಧವಾಗಿತ್ತು. ಮಲಯಾಳಂನಲ್ಲಿ ರಜನಿ ಜೈಲರ್ ಸಿನಿಮಾ ಕೂಡ ಬಿಡುಗಡೆ ಆಗುತ್ತಿರುವುದರಿಂದ, ಮಲಯಾಳಂನಲ್ಲಿ ಟೈಟಲ್ ಬದಲಾಯಿಸಿ ರಿಲೀಸ್ ಮಾಡುವಂತೆ ಅವರು ಮನವಿ ಮಾಡಿಕೊಂಡಿದ್ದರು. ಆದರೆ, ಅದು ಆಗುವುದಿಲ್ಲ ಎಂದು ಸನ್ ಪಿಕ್ಚರ್ ನಿರ್ಮಾಣ ಸಂಸ್ಥೆ ಉತ್ತರ ಬರೆದಿತ್ತು.

     

    ಈಗ ಸಕ್ಕಿರ್ ಮಡತ್ತಿಲ್ಲ ತಮಿಳಿನ ಜೈಲರ್ ಸಿನಿಮಾದ ವಿರುದ್ಧ ಕೋರ್ಟ್ ಮೆಟ್ಟಿಲು ಏರಿದ್ದಾರೆ. ಜೊತೆ ಜೊತೆಗೆ ರಜನಿಕಾಂತ್ ನಟನೆಯ ಜೈಲರ್ ಸಿನಿಮಾ ರಿಲೀಸ್ ದಿನವೇ ಮಲಯಾಳಂನಲ್ಲಿ ತಮ್ಮ ಜೈಲರ್ ಚಿತ್ರವನ್ನು ರಿಲೀಸ್ ಮಾಡುವುದಾಗಿ ಘೋಷಿಸಿದ್ದಾರೆ. ಆಗಸ್ಟ್ 10ಕ್ಕೆ ತಮ್ಮ ಸಿನಿಮಾವನ್ನು ಬಿಡುಗಡೆ ಮಾಡುವುದಾಗಿ ಅವರು ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತಮನ್ನಾ-ರಜನಿ ಕುಣಿದ ‘ಕಾವಾಲಾ’ ಹಾಡಿನ ರಿಲೀಸ್ ಇವೆಂಟ್ ತಡೆದ ಮಳೆರಾಯ

    ತಮನ್ನಾ-ರಜನಿ ಕುಣಿದ ‘ಕಾವಾಲಾ’ ಹಾಡಿನ ರಿಲೀಸ್ ಇವೆಂಟ್ ತಡೆದ ಮಳೆರಾಯ

    ಜನಿಕಾಂತ್ (Rajinikanth) ಮತ್ತು ಶಿವರಾಜ್ ಕುಮಾರ್ ಕಾಂಬಿನೇಷನ್ ನ ‘ಜೈಲರ್’ ಸಿನಿಮಾದ ಕಾವಾಲಾ (Kawala) ಹಾಡು ಇಡೀ ದೇಶದ ಡಾನ್ಸ್ ಪ್ರೇಮಿಗಳೇ  ಕುಣಿಸಿದೆ. ತಮಿಳಿನಲ್ಲಿ ರಿಲೀಸ್ ಆಗಿದ್ದ ಈ ಹಾಡನ್ನು ಇದೀಗ ತೆಲುಗು ಭಾಷೆಯಲ್ಲೂ ತಯಾರು ಮಾಡಲಾಗಿತ್ತು. ಆ ಹಾಡಿನ ಬಿಡುಗಡೆ  (Song Release) ಇಂದು ಹೈದರಾಬಾದ್ ನಲ್ಲಿ ನಡೆಯಲಿತ್ತು.

    ಈ ಹಾಡಿನ ಬಿಡುಗಡೆಗಾಗಿ ತಮನ್ನಾ (Tamannaah) ಸೇರಿದಂತೆ ಚಿತ್ರತಂಡದ ಹಲವು ಸದಸ್ಯರು ಹೈದರಾಬಾದ್ ಗೆ ಆಗಮಿಸಿದ್ದರು. ರಜನಿಕಾಂತ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದ ಮಾಹಿತಿ ಕೂಡ ಸಿಕ್ಕಿತ್ತು. ಆದರೆ, ಈ ಕಾರ್ಯಕ್ರಮ ನಡೆಯದಂತೆ ವರುಣ ಅಬ್ಬರಿಸಿದ್ದಾನೆ. ಮಳೆಯ ಕಾರಣದಿಂದಾಗಿ ಇವೆಂಟ್ ಕ್ಯಾನ್ಸಲ್ ಆಗಿದೆ. ಈ ಮಾಹಿತಿಯನ್ನು ಸ್ವತಃ ಚಿತ್ರತಂಡವೇ ನೀಡಿದೆ.

     

    ಕಾವಾಲಾ ತೆಲುಗು ಹಾಡನ್ನು ಕೇಳಲು ನೀವೆಲ್ಲ ಉತ್ಸುಕರಾಗಿದ್ದೀರಿ ಎನ್ನುವುದನ್ನು ನಾವು ಬಲ್ಲೆವು. ಆದರೆ, ಮಳೆಯ ಕಾರಣದಿಂದಾಗಿ ಈ ಕಾರ್ಯಕ್ರಮವನ್ನು ರದ್ದುಗೊಳಿಸುವುದು ಅನಿವಾರ್ಯವಾಗಿದೆ. ಹಾಗಂತ ನಿಮಗೆ ನಿರಾಸೆ ಮಾಡುವುದಿಲ್ಲ. ಮುಂದಿನ ದಿನಗಳಲ್ಲಿ ಕಂಡಿತಾ ಇವೆಂಟ್ ಮಾಡಿಯೇ ಸಾಂಗ್ ರಿಲೀಸ್ ಮಾಡುತ್ತೇವೆ ಎಂದಿದೆ ಸನ್ ಪಿಕ್ಚರ್ಸ್.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಮಾಜರ್’ ಸಿನಿಮಾ ಹಾಡು ರಿಲೀಸ್ ಮಾಡಿದ ಸಚಿವ ಕೆ.ಗೋಪಾಲಯ್ಯ

    ‘ಮಾಜರ್’ ಸಿನಿಮಾ ಹಾಡು ರಿಲೀಸ್ ಮಾಡಿದ ಸಚಿವ ಕೆ.ಗೋಪಾಲಯ್ಯ

    ಗೀತ ರಚನೆಕಾರನಾಗಿ ಸಾಕಷ್ಟು ಜನಪ್ರಿಯ ಚಿತ್ರಗೀತೆಗಳನ್ನು ಬರೆದಿರುವ ಲೋಕಲ್ ಲೋಕಿ (Local Loki) ನಿರ್ದೇಶನದ ‘ಮಾಜರ್’ (Major) ಚಿತ್ರದ ಹಾಡುಗಳನ್ನು (Song Release) ಸಚಿವ ಕೆ‌.ಗೋಪಾಲಯ್ಯ (K. Gopalaya) ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ನಾಯಕ ಶ್ರೀನಗರ ಕಿಟ್ಟಿ, ರಾಜಕೀಯ ಮುಖಂಡರಾದ ಜಯರಾಮ್ ಮುಂತಾದ ಗಣ್ಯರು ಈ ಸಮಾರಂಭಕ್ಕೆ ಆಗಮಿಸಿ, ತಮ್ಮ ಪ್ರೋತ್ಸಾಹಭರಿತ ಮಾತುಗಳ ಮೂಲಕ ಚಿತ್ರಕ್ಕೆ ಶುಭ ಹಾರೈಸಿದರು.

    ನಾನು ಸಾಕಷ್ಟು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಗೀತರಚನೆಕಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಈಗ ಮಾಜರ್ ಎಂಬ ಚಿತ್ರವನ್ನು ನಿರ್ದೇಶಿಸಿದ್ದೇನೆ. ಈ ಚಿತ್ರದಲ್ಲಿ ಮೂರು ಹಾಡುಗಳು ಹಾಗೂ ಮೂರು ಬಿಟ್ ಗಳಿದೆ. ಎಲ್ಲಾ ಹಾಡುಗಳನ್ನು ನಾನೇ ಬರೆದಿದ್ದೇನೆ. ಹುಚ್ಚ ವೆಂಕಟ್, ಸಂತೋಷ್ ವೆಂಕಿ, ಶಶಾಂಕ್ ಶೇಷಗಿರಿ ಹಾಡಿದ್ದಾರೆ. ಎ.ಟಿ.ರವೀಶ್ ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತ ರಾಜೇಶ್ ರಾಮನಾಥ್ ಅವರದು. ಇನ್ನು ಚಿತ್ರದ ಬಗ್ಗೆ ಹೇಳುವುದಾದರೆ, ಅನಾದಿಕಾಲದಿಂದಲೂ ಹೆಣ್ಣಿನ ಶೋಷಣೆ ನಡೆಯುತ್ತಲೇ ಇದೆ. ಆದರೆ ತಪಿತಸ್ಥರಿಗೆ ನೀಡುವ ಶಿಕ್ಷೆ ಬಹಳ ಕಡಿಮೆ. ಹೆಣ್ಣನ್ನು ಶೋಷಣೆ ಮಾಡಿದವರಿಗೆ ಯಾವ ರೀತಿ ಶಿಕ್ಷೆ ನೀಡಬೇಕೆಂದು ಈ ಚಿತ್ರದಲ್ಲಿ ತೋರಿಸಿದ್ದೇವೆ. ಬರೀ ಇಷ್ಟೇ ಅಲ್ಲ. ಲವ್ ಸ್ಟೋರಿ ಕೂಡ ನಮ್ಮ ಚಿತ್ರದಲ್ಲಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ ಎಂದು ನಿರ್ದೇಶಕ ಲೋಕಲ್ ಲೋಕಿ ಹೇಳಿದರು. ಇದನ್ನೂ ಓದಿ: ಬ್ಲೂಫಿಲ್ಮ್ ಮಾಡ್ತೀಯಾ ಅಂತ ಕೇಳಿದ ‘ಆ’ ನಟ: ಪೆಂಟಗನ್ ನಟಿಯ ಕಣ್ಣೀರು

    ಕನ್ನಡದಲ್ಲಿ ಚಿತ್ರವೊಂದನ್ನು ನಿರ್ಮಿಸುವ ಆಸೆಯಿತ್ತು. ಲೋಕಿ ಅವರು ಹೇಳಿದ ಕಥೆ ಇಷ್ಟವಾಗಿ, ನಿರ್ಮಾಣ ಮಾಡಿದ್ದೇನೆ ಎಂದರು ನಿರ್ಮಾಪಕ ಮುರುಗನಂಥನ್.  ಹಾಡುಗಳ ಬಗ್ಗೆ ಎ.ಟಿ.ರವೀಶ್ ಮಾಹಿತಿ ನೀಡಿದರು. ಚಿತ್ರದಲ್ಲಿ ನಟಿಸಿರುವ ಉಗ್ರಂ ರವಿ, ಅರ್ಜುನ್, ರಂಜಿತ್ ಪ್ರಿನ್ಸ್  ಹಾಗೂ ನೃತ್ಯ ನಿರ್ದೇಶಕರಾದ ಸೈ ಗೀತ, ವಾಸ್ತು ನಾಗ ಮಾಜರ್ ಚಿತ್ರದ ಬಗ್ಗೆ ಮಾತನಾಡಿದರು.

  • ಕನ್ನೇರಿ ಚಿತ್ರದ ಮನಮುಟ್ಟುವ ಹಾಡು ಬಿಡುಗಡೆ ಮಾಡಿದ ಖ್ಯಾತ ನಟಿ ಶ್ರುತಿ

    ಕನ್ನೇರಿ ಚಿತ್ರದ ಮನಮುಟ್ಟುವ ಹಾಡು ಬಿಡುಗಡೆ ಮಾಡಿದ ಖ್ಯಾತ ನಟಿ ಶ್ರುತಿ

    ನ್ನೇರಿ.. ನಿರ್ದೇಶಕ ನೀನಾಸಂ ಮಂಜು ಕನಸಿನ ಸಿನಿಮಾ. ಮೂಕಹಕ್ಕಿ ಮೂಲಕ ಮನ ಮುಟ್ಟುವ ಕಥೆ ಹೇಳಿ ಪ್ರೇಕ್ಷಕರ ಮನದಲ್ಲಿ ಭರವಸೆ ಹುಟ್ಟಿಸಿರುವ ನಿರ್ದೇಶಕ. ಈಗ ಕನ್ನೇರಿ ಎಂಬ ನೈಜ ಘಟನೆ ಆಧಾರಿತ ಸಿನಿಮಾವನ್ನು ಪ್ರೇಕ್ಷಕರ ಮುಂದೆ ಹೊತ್ತು ತರಲು ಸಜ್ಜಾಗಿದ್ದಾರೆ. ಫಸ್ಟ್ ಲುಕ್ ಮೂಲಕ ಕನ್ನೇರಿ ಪ್ರಚಾರ ಕಾರ್ಯಕ್ಕೆ ಈಗಾಗಲೇ ಮುನ್ನುಡಿ ಬರೆದಿರುವ ನಿರ್ದೇಶಕರು ಈಗ ಚಿತ್ರದ ಚೆಂದದ ಹಾಡೊಂದನ್ನು ಬಿಡುಗಡೆ ಮಾಡಿದ್ದಾರೆ.

    kanneri-

    ಕೋಟಿಗಾನಹಳ್ಳಿ ರಾಮಯ್ಯ ಅವರ ಲೇಖನಿಯಲ್ಲಿ ಅರಳಿರುವ ಬೆಟ್ಟ ಕಣಿವೆಗಳ ಹಾಡಿನ ಲಿರಿಕಲ್ ವೀಡಿಯೋ ಬಿಡುಗಡೆಯಾಗಿದೆ. ಚಿತ್ರದ ಕಥೆಗೆ ಪೂರಕವಾದ ಈ ಹಾಡನ್ನು ಖ್ಯಾತ ನಟಿ ಶ್ರುತಿ ಮೆಚ್ಚಿ ಬಿಡುಗಡೆ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ. ಕಾಡಿನ ಜನರ ಚೆಂದದ ಬದುಕು ಆ ಬದುಕಲಿದ್ದ ಖುಷಿ, ಯಾರದ್ದೋ ಸಂಚಿನಿಂದ ಅಸ್ತಿತ್ವ ಕಳೆದುಕೊಂಡ ನೋವು ಎಲ್ಲವೂ ಬೆರೆತ ಈ ಹಾಡು ಮನಮುಟ್ಟುವಂತೆ ಮೂಡಿ ಬಂದಿದ್ದು, ಆ ಸಾಲುಗಳಿಗೆ ಅಷ್ಟೇ ಚೆಂದದ ದನಿಯಾಗಿದ್ದಾರೆ ಗಾಯಕ ಸಚಿನ್ ಅರಬಳ್ಳಿ. ಮಣಿಕಾಂತ್ ಕದ್ರಿ ಸಂಗೀತವೂ ಅಷ್ಟೇ ಸೊಗಸಾಗಿ ಮೂಡಿ ಬಂದಿದೆ. ಇದನ್ನೂ ಓದಿ: ಆರೋಗ್ಯಕರವಾದ ಮಸಾಲಾ ಟೀ ಒಮ್ಮೆ ಮಾಡಿ ನೋಡಿ

    ಕನ್ನೇರಿ ಚಿತ್ರಕ್ಕೆ ನೈಜ ಘಟನೆಯೇ ಜೀವಾಳ. ಕೊಡಗಿನಲ್ಲಿ ನಡೆದ ದಿಡ್ಡಳ್ಳಿ ಹೋರಾಟದ ಕಥೆಯೇ ಚಿತ್ರಕ್ಕೆ ಸ್ಪೂರ್ತಿ. ದಿಡ್ಡಳ್ಳಿ ಹೋರಾಟದ ಜಾಡು ಹಿಡಿದು ಹೊರಟ ನಿರ್ದೇಶಕ ನೀನಾಸಂ ಮಂಜು ಅವರಿಗೆ ಅವರ ಬವಣೆ, ಅಭದ್ರತೆ, ಬದುಕು ಕಟ್ಟಿಕೊಳ್ಳುವ ಹಂಬಲ, ಅಲ್ಲಿನ ಹೆಣ್ಣು ಮಕ್ಕಳ ತೊಳಲಾಟ ಎಲ್ಲವೂ ಕಾಡಿದೆ. ಆ ಕಾಡುವ ಕಥನವನ್ನೇ ಸಿನಿಮಾವಾಗಿಸಿ ಹೊಸದೇನನ್ನೋ ಚಿತ್ರ ಪ್ರೇಮಿಗಳಿಗೆ ಉಣಬಡಿಸಲು ಸಕಲ ಸಜ್ಜಾಗಿ ನಿಂತಿದ್ದಾರೆ. ಇಂತಹದೊಂದು ಕಥೆಗೆ ಇನ್ನಷ್ಟು ಸ್ಪೂರ್ತಿ ತುಂಬಿದ್ದು ಕ್ಷೀರಸಾಗರ ಅವರ `ಜೇನು: ಆಕಾಶದ ಅರಮನೆ’ ಕಾದಂಬರಿ ಎಳೆ. ಈ ಎಲ್ಲದಕ್ಕೂ ಕಥೆಯ ರೂಪ ಕೊಟ್ಟವರು ಕೋಟಿಗಾನಹಳ್ಳಿ ರಾಮಯ್ಯ. ಇದನ್ನೂ ಓದಿ: ಒಂದೇ ವಿಮಾನದಲ್ಲಿ ಪ್ರಿಯಾಂಕಾ ಗಾಂಧಿ, ಅಖಿಲೇಶ್ ಯಾದವ್ – ಇದರ ಹಿಂದಿನ ರಹಸ್ಯವೇನು?

    ಕನ್ನೇರಿ ಚಿತ್ರಕ್ಕೆ ಅರ್ಚನಾ ಮಧುಸೂದನ್ ಮುಖ್ಯ ಭೂಮಿಕೆಯಲ್ಲಿ ಜೀವ ತುಂಬಿದ್ದು, ಅನಿತಾ ಭಟ್, ಎಂ.ಕೆ.ಮಠ್, ಅರುಣ್ ಸಾಗರ್, ಕರಿಸುಬ್ಬು, ಸರ್ದಾರ್ ಸತ್ಯ ಒಳಗೊಂಡ ತಾರಾಬಳಗ ಚಿತ್ರದಲ್ಲಿದೆ. ಬುಡ್ಡಿದೀಪ ಸಿನಿಮಾ ಹೌಸ್ ಬ್ಯಾನರ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಪಿ.ಪಿ ಹೆಬ್ಬಾರ್ ಬಂಡವಾಳ ಹೂಡಿದ್ದಾರೆ. ಗಣೇಶ್ ಹೆಗ್ಡೆ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿರೋ ಸಿನಿಮಾಗೆ ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ, ಸುಜಿತ್ ಎಸ್ ನಾಯಕ್ ಸಂಕಲನವಿದೆ. ಇದನ್ನೂ ಓದಿ: ಪರ್ವತದ ನೀರು ಕುಡಿದು, ದೇವಾಲಯದ ಪ್ರಸಾದ ಸೇವಿಸಿ ಬದುಕುಳಿದೆವು: ಉತ್ತರಾಖಂಡ್ ಪ್ರವಾಹ ಭೀಕರತೆ ಬಿಚ್ಚಿಟ್ಟ ಕನ್ನಡಿಗರು