ಜಿನೀವಾ: ಕೋವಿಡ್‌ನಿಂದಾಗಿ (Covid-19) ಬಳಲಿರುವ ಜಗತ್ತು ಇದೀಗ ಮತ್ತೊಂದು ಸಾಂಕ್ರಾಮಿಕದ (Pandemic) ಭೀತಿಯಲ್ಲಿದೆ. ಮುಂಬರುವ ಸಾಂಕ್ರಾಮಿಕ ರೋಗಕ್ಕೆ ಜಗತ್ತು ಸಿದ್ಧವಾಗಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಎಚ್ಚರಿಕೆ ನೀಡಿದೆ.
ಮುಂದಿನ ಸಾಂಕ್ರಾಮಿಕ ರೋಗಕ್ಕೆ ಜಗತ್ತು ಸಿದ್ಧವಾಗಬೇಕು. ಇದು ಕೋವಿಡ್-19 ಗಿಂತಲೂ ಹೆಚ್ಚು ಮಾರಣಾಂತಿಕವಾಗಿರಬಹುದು. ಪ್ರಪಂಚದಾದ್ಯಂತ ಕೋವಿಡ್ ಪ್ರಕರಣಗಳು ಸ್ವಲ್ಪಮಟ್ಟಿಗೆ ಸ್ಥಿರಗೊಳ್ಳುತ್ತಿದ್ದರೂ ಕೋವಿಡ್‌ನ ಅಂತ್ಯ ಜಾಗತಿಕ ಆರೋಗ್ಯ ಬೆದರಿಕೆಯ ಅಂತ್ಯವಲ್ಲ ಎಂದು ಡಬ್ಲ್ಯುಹೆಚ್‌ಒನ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ (Tedros Adhanom Ghebreyesus) ಹೇಳಿದ್ದಾರೆ. ಇದನ್ನೂ ಓದಿ: ಆರ್‌ವಿ ರಸ್ತೆ, ಬೊಮ್ಮಸಂದ್ರ ಪ್ರಯಾಣಿಕರಿಗೆ ಗುಡ್ ನ್ಯೂಸ್ – ವರ್ಷಾಂತ್ಯಕ್ಕೆ ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭ
76ನೇ ವಿಶ್ವ ಆರೋಗ್ಯ ಅಸೆಂಬ್ಲಿಯಲ್ಲಿ ಮಾತನಾಡಿದ ಘೆಬ್ರೆಯೆಸಸ್, ರೋಗ ಹಾಗೂ ಸಾವಿನ ಸಂಖ್ಯೆಯನ್ನು ಉಲ್ಬಣಗೊಳಿಸುವ ಮತ್ತೊಂದು ರೂಪಾಂತರದ ಬೆದರಿಕೆ ಇನ್ನೂ ಕೂಡಾ ಉಳಿದಿದೆ. ಮುಂದಿನ ಸಾಂಕ್ರಾಮಿಕ ಜಗತ್ತಿಗೆ ಕರೆಗಂಟೆಯಾಗಿದ್ದು, ಮತ್ತೆ ಭೀತಿಯನ್ನು ಹುಟ್ಟಿಸಲಿದೆ. ಇದಕ್ಕಾಗಿ ನಾವು ನಿರ್ಣಾಯಕವಾಗಿ, ಸಾಮೂಹಿಕವಾಗಿ ಹಾಗೂ ಸಮಾನವಾಗಿ ಉತ್ತರ ನೀಡಲು ಸಿದ್ಧರಾಗಿರಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ಚಿಲ್ಲರೆ ವ್ಯಾಪಾರಿಗಳು ಗ್ರಾಹಕರ ಮೊಬೈಲ್ ನಂಬರ್ ಕೇಳುವಂತಿಲ್ಲ – ಕೇಂದ್ರ ಸರ್ಕಾರ
-ಕೊರೊನಾ ಅಷ್ಟೇ ಅಲ್ಲ ಪ್ಲೇಗ್ ಕೂಡ ಚೀನಾದಿಂದ್ಲೆ ಹರಡಿತ್ತು
ಕೋವಿಡ್-19 (Corona) ಇಡೀ ಜಗತ್ತನ್ನೇ ಹಿಂಡಿಹಿಪ್ಪೆ ಮಾಡಿದ ಸಾಂಕ್ರಾಮಿಕ. ವಿಶ್ವದಾದ್ಯಂತ ಕೋಟ್ಯಂತರ ಮಂದಿ ಬಲಿಯಾದರು. ಸೋಂಕು ತಗುಲುವ ಭೀತಿಯಿಂದ ಜನರು ಮನೆಯಲ್ಲೇ ಬಂಧಿಯಾಗಿ ಜೈಲುವಾಸ ಅನುಭವಿಸಿದರು. ಇಡೀ ಜಗತ್ತು ಲಾಕ್ ಡೌನ್ ಆಗಿ ಆರ್ಥಿಕ ಸಂಕಷ್ಟ ಎದುರಿಸಿತು. ಇಷ್ಟೆಲ್ಲ ಭೀಕರತೆಯ ನಡುವೆ ಕೊರೊನಾ ವೈರಸ್ ಅನ್ನು ಸಾಂಕ್ರಾಮಿಕ ರೋಗವೆಂದು 2020ರ ಮಾರ್ಚ್ ತಿಂಗಳಲ್ಲಿ WHO ಘೋಷಿಸಿತು. ಇಂತಹ ಅನೇಕ ಸಾಂಕ್ರಾಮಿಕಗಳು ಮನುಕುಲವನ್ನು ಕಾಡಿ ಹೋಗಿವೆ. ಕೊರೊನಾ ವೈರಸ್ ಹುಟ್ಟಿಗೆ ಕಾರಣವಾಗಿ ಚೀನಾ ಕುಖ್ಯಾತಿ ಪಡೆಯಿತು. ಕೋವಿಡ್ ಅಷ್ಟೇ ಅಲ್ಲ, ಮತ್ತೊಂದು ರಾಕ್ಷಸ ಸಾಂಕ್ರಾಮಿಕ ಪ್ಲೇಗ್ ಹುಟ್ಟಿಗೂ ಚೀನಾ ದೇಶವೇ ಕಾರಣ.
ಪ್ಲೇಗ್ (Plague) ಸಾಂಕ್ರಾಮಿಕ ಇತರೆ ದೇಶಗಳಿಗಿಂತ ಭಾರತವನ್ನೇ (India) ಕಾಡಿದ್ದು ಹೆಚ್ಚು. ಅದಕ್ಕಾಗಿ ಇದನ್ನು ಆಧುನಿಕ ಭಾರತದ ಮೊದಲ ಸಾಂಕ್ರಾಮಿಕ ಎಂದೇ ಕರೆಯಲಾಗುತ್ತೆ. ಏನಿದು ಪ್ಲೇಗ್? ಇದು ಹುಟ್ಟಿದ್ದೆಲ್ಲಿ? ಭಾರತಕ್ಕೆ ಕಾಲಿಟ್ಟಿದ್ದು ಹೇಗೆ? ಪ್ಲೇಗ್‌ನಿಂದ ದೇಶದಲ್ಲಾದ ದುರಂತ ಕಥನಗಳ ಬಗ್ಗೆ ತಿಳಿಯೋಣ.
ಪ್ಲೇಗ್ ಹುಟ್ಟಿದ್ದೆಲ್ಲಿ?: 1855ರಲ್ಲಿ ಚೀನಾದ (China) ಯುನಾನ್‍ನಲ್ಲಿ ಕಾಣಿಸಿಕೊಂಡ ಪ್ಲೇಗ್, ಸಾಂಕ್ರಾಮಿಕ ರೋಗವಾಗಿ 1959ರಲ್ಲಿ ವಿಶ್ವದಾದ್ಯಂತ ಹಬ್ಬಿತ್ತು. ಅಷ್ಟೇ ಅಲ್ಲದೇ ವಿಶ್ವಾದ್ಯಂತ ವರ್ಷಕ್ಕೆ 200ಕ್ಕಿಂತ ಹೆಚ್ಚು ಸಾವು ನೋವು ಸಂಭವಿಸಿತ್ತು. ಈ ಅವಧಿಯಲ್ಲಿ ಪ್ರಪಂಚದಾದ್ಯಂತ 12-25 ಮಿಲಿಯನ್ ಜನರು ಸಾವನ್ನಪ್ಪಿದ್ದರು. ಸ್ಯಾನ್ ಫ್ರಾನ್ಸಿಸ್ಕೋ, ಗ್ಲಾಸ್ಗೋ ಮತ್ತು ಪೋರ್ಟೊದಂತೆಯೇ ಹಾಂಗ್ ಕಾಂಗ್ ಮತ್ತು ಮುಂಬೈಯಂತಹ ನಗರಗಳ ಮೇಲೂ ಪ್ಲೇಗ್ ದುಷ್ಪರಿಣಾಮ ಬೀರಿತ್ತು.
ಏನಿದು ಪ್ಲೇಗ್? ಬುಬೊನಿಕ್ ಪ್ಲೇಗ್ ಯೆರ್ಸಿನಿಯಾ ಪೆಸ್ಟಿಸ್ ಎಂಬ ಬ್ಯಾಕ್ಟೀರಿಯಾದಿಂದ ಈ ಪ್ಲೇಗ್ ರೋಗ ಕಾಣಿಸಿಕೊಂಡಿದೆ. ಈ ರೋಗ ಒಬ್ಬರಿಂದ ಮತ್ತೊಬ್ಬರಿಗೆ ಹೆಚ್ಚು ಹರಡುತ್ತದೆ. ಪ್ಲೇಗ್ ಬಂದವರಿಗೆ ಮೊದಲಿಗೆ ಜ್ವರ, ಶೀತ ಹಾಗೂ ತಲೆನೋವು ಕಾಣಿಸಿಕೊಳ್ಳುತ್ತದೆ. ನಂತರ ಸೋಂಕು ಹೆಚ್ಚಾದಂತೆ ಆಯಾಸ, ಹೆಚ್ಚು ನೋವು ಕಾಣಿಸಿಕೊಳ್ಳುತ್ತದೆ. ಅದಾದ ನಂತರ ಒಂದು ವಾರದೊಳಗೆ ಬಹು ಅಂಗಾಗ ವೈಫಲ್ಯದಿಂದಾಗಿ ಸೋಂಕಿತ ವ್ಯಕ್ತಿ ಮೃತಪಡಬಹುದು.
ಜನವರಿ 1897ರಲ್ಲಿ ಮೊದಲ ಬಾರಿಗೆ ವಿಜ್ಞಾನಿಗಳು ಈ ರೋಗವು ಇಲಿಗಳಲ್ಲಿ ಕಂಡುಬಂದಿದೆ ಎಂದು ಪತ್ತೆಹಚ್ಚಿದರು. ಅದಾದ ಬಳಿಕ ಇದೊಂದು ಸಾಂಕ್ರಾಮಿಕ ರೋಗವೆಂದು ಎಚ್ಚರಿಕೆಯನ್ನು ನೀಡಿದರು.
ಭಾರತಕ್ಕೆ ಹೇಗೆ ಬಂತು ಪ್ಲೇಗ್?: ಪ್ಲೇಗ್ ಚೀನಾದಲ್ಲಿ ಪ್ರಾರಂಭವಾಯಿತಾದರೂ ಸಮುದ್ರದ ಮೂಲಕ ಭಾರತಕ್ಕೆ ಬಂತು. ಆ ಸಮಯದಲ್ಲಿ ಬ್ರಿಟಿಷ್ ಅಧಿಕಾರಿಗಳು ಹಾಂಗ್‍ಕಾಂಗ್‍ನಿಂದ ಬರುವ ಹಡಗುಗಳಿಗೆ ಏಕಾಏಕಿ ಕ್ವಾರಂಟೈನ್ ವಿಧಿಸಿದ್ದರು. ಆದರೆ ಕ್ವಾರಂಟೈನ್ ನಿಯಮವನ್ನು ಸಡಿಲಗೊಳಿಸುತ್ತಿದ್ದಂತೆ ಭಾರತದಲ್ಲಿ ಪ್ಲೇಗ್ ಹೆಚ್ಚಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸಿತು. ಅದರಲ್ಲೂ ಕೋಲ್ಕತ್ತಾ, ಮುಂಬೈ, ಕರಾಚಿ ಹಾಗೂ ಪುಣೆಯಲ್ಲಿ ಹೆಚ್ಚಾಗಿ ಕೇಸ್‍ಗಳು ದಾಖಲಾದವು. ತಜ್ಞರ ಪ್ರಕಾರ 19ನೇ ಶತಮಾನದ ಆರಂಭದಲ್ಲಿಯೇ ದೇಶದ ವಿವಿಧ ಭಾಗಗಳಲ್ಲಿ ಪ್ಲೇಗ್ ಏಕಾಏಕಿ ಕಾಣಿಸಿಕೊಂಡಿತು. ಆದರೆ ಆ ಸಮಯದಲ್ಲಿ ಕಾಲರಾ ನಿಯಂತ್ರಣದ ಮೇಲೆ ಹೆಚ್ಚು ಕಾಳಜಿಯನ್ನು ವಹಿಸಲಾಗಿತ್ತು.
ಪ್ಲೇಗ್‍ನಿಂದಾಗೋ ತೊಂದರೆ ಏನು?: ಪ್ಲೇಗ್ ಭೀತಿಯು ಜಾಗತಿಕವಾಗಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಮುಂಬೈನಲ್ಲಿ ಪ್ಲೇಗ್ ಹೆಚ್ಚಾಗಿ ಕಾಣಿಸಿಕೊಂಡಿತು. ಇದರಿಂದಾಗಿ ಮುಂಬೈ ಅನ್ನು ಪ್ಲೇಗ್ ನಗರ ಎಂದು ಕರೆಯಲಾಯಿತು. 1897ರಲ್ಲಿ ಮುಂಬೈನಲ್ಲಿ ಸುಮಾರು 8,50,000 ಜನಸಂಖ್ಯೆಯಿತ್ತು. ಆದರೆ ಪ್ಲೇಗ್‍ನಿಂದಾಗಿ ಸುಮಾರು 3,80,000 ಜನರು ಗ್ರಾಮೀಣ ಪ್ರದೇಶಗಳಿಗೆ ವಲಸೆ ಹೋದರು. ಇದರಿಂದಾಗಿ ಗ್ರಾಮದ ಮೂಲೆ ಮೂಲೆಗಳಲ್ಲೂ ಪ್ಲೇಗ್ ಹರಡಿತು.
ಅಷ್ಟೇ ಅಲ್ಲದೇ ಧಾನ್ಯದ ವ್ಯಾಪಾರದಿಂದಲೂ ಪ್ಲೇಗ್ ಹರಡಿತು. ಧಾನ್ಯದ ಅಂಗಡಿಗಳಿಗೆ ಇಲಿಗಳು ಮುತ್ತಿಗೆ ಹಾಕುತ್ತಿದ್ದವು. ಇದರಿಂದಾಗಿ 1897ರ ಅಂತ್ಯದ ವೇಳೆಗೆ ಪ್ಲೇಗ್ ಪಂಜಾಬ್‍ನವರೆಗೂ ಹಬ್ಬಿತ್ತು. ಅಷ್ಟೇ ಅಲ್ಲದೇ ಪಂಜಾಬ್‍ನಲ್ಲಿ ಹೆಚ್ಚಿನ ಸಾವು- ನೋವುಗಳು ಸಂಭವಿಸಿದವು.
ಹೇಗಿತ್ತು ಬ್ರಿಟಿಷ್ ಅಧಿಕಾರಿಗಳ ಸ್ಪಂದನೆ: ಪ್ಲೇಗ್ ಮುಂಬೈನಲ್ಲಿ ವ್ಯಾಪಕವಾಗಿ ಹಬ್ಬುತ್ತಿದ್ದಂತೆ ಸ್ವಚ್ಛತೆ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಲು ಪ್ರಾರಂಭಿಸಿದರು. ನಂತರ ಸ್ಥಳೀಯರಿಗೆ ಬಲವಂತವಾಗಿ ತಪಾಸಣೆ ಮಾಡಿಸುವುದು, ಪ್ಲೇಗ್ ಕಂಡುಬಂದಲ್ಲಿ ಆಸ್ಪತ್ರೆಗೆ ಸೇರಿಸಲಾಯಿತು. ಈ ವಿಚಾರವಾಗಿ ಕೆಲವೊಮ್ಮೆ ಅಧಿಕಾರಿಗಳು ಹಾಗೂ ಸ್ಥಳೀಯರ ನಡುವೆ ಘರ್ಷಣೆಯೂ ನಡೆಯಿತು. ಅಲ್ಲದೇ ಅಧಿಕಾರಿಗಳು ಎಲ್ಲಾ ರೈಲು ನಿಲ್ದಾಣ ಹಾಗೂ ಬಂದರುಗಳಲ್ಲಿ ವೈದ್ಯಕೀಯ ತಪಾಸಣೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ದೇಶದಲ್ಲಿ ಅನೇಕ ಕಡೆಗಳಲ್ಲಿ ಗಲಭೆಗಳು ಉಂಟಾಯಿತು.
ಪ್ಲೇಗ್ ಕ್ಷೀಣಿಸಿದ್ದು ಹೇಗೆ?: ಭಾರತದಲ್ಲಿ 20ನೇ ಶತಮಾನದ ಆರಂಭದಲ್ಲಿ ಅದು ಸಂಪೂರ್ಣವಾಗಿ ಕಣ್ಮರೆಯಾಯಿತು. 1990ರ ನಂತರ ರಷ್ಯನ್ ಫ್ರೆಂಚ್ ಬ್ಯಾಕ್ಟೀರಿಯಾಲಜಿಸ್ಟ್ ವಾಲ್ಡೆಮರ್ ಹಾಫ್ಕಿನ್ ಅಭಿವೃದ್ಧಿ ಪಡಿಸಿದ ಲಸಿಕೆಯೂ ಹೆಚ್ಚಾಗಿ ಪ್ರಚಲಿತಕ್ಕೆ ಬಂತು. ಮರಣ ಪ್ರಮಾಣವನ್ನು ಸುಮಾರು 80 ಪ್ರತಿಶತದಷ್ಟು ಕಡಿಮೆ ಮಾಡಿತು. ಇಲಿಗಳ ಹತ್ಯೆ ಮಾಡಿದಾಗ ಈ ರೊಗವು ಮತ್ತಷ್ಟು ಕಡಿಮೆಯಾಯಿತು.
ಇಸ್ಲಾಮಾಬಾದ್: ನೆರೆಯ ಪಾಕಿಸ್ತಾನದಲ್ಲಿ (Pakistan) ಇತ್ತೀಚೆಗೆ ಭಾರೀ ಪ್ರವಾಹ (Flood) ಉಂಟಾಗಿದ್ದು, ಅಲ್ಲಿನ ಜನತೆ ಪ್ರವಾಹಕ್ಕೆ ಹೈರಾಣಾಗಿದೆ. ಪ್ರವಾಹದಿಂದಾಗಿ ಇದೀಗ ಪಾಕಿಸ್ತಾನದಲ್ಲಿ ಸೊಳ್ಳೆಗಳ (Mosquito) ಕಾಟ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗದ ಭೀತಿ ಹುಟ್ಟಿಕೊಂಡಿದೆ. ಈ ಹಿನ್ನೆಲೆ ಪಾಕಿಸ್ತಾನ ರೋಗದಿಂದ ತಪ್ಪಿಸಿಕೊಳ್ಳಲು 60 ಲಕ್ಷ ಸೊಳ್ಳೆ ಪರದೆಗಳನ್ನು (Mosquito nets) ಕಳುಹಿಸಿಕೊಡುವಂತೆ ಭಾರತಕ್ಕೆ (India) ಮನವಿ ಮಾಡಿಕೊಂಡಿದೆ.
ದೇಶದ 32 ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಮಲೇರಿಯಾ ವೇಗವಾಗಿ ಹರಡುತ್ತಿದೆ. ಅಲ್ಲಿ ಸಾವಿರಾರು ಮಕ್ಕಳು ಸೊಳ್ಳೆಯಿಂದ ಹರಡುವ ರೋಗಗಳಿಗೆ ತುತ್ತಾಗಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮಲೇರಿಯಾ ಕಾಣಿಸಿಕೊಂಡಿದ್ದು, ಈ ಹಿನ್ನೆಲೆ ಸೊಳ್ಳೆ ಪರದೆಗಳನ್ನು ಕಳುಹಿಸಲು ಭಾರತಕ್ಕೆ ಮನವಿ ಮಾಡಲು ಆರೋಗ್ಯ ಸಚಿವಾಲಯವನ್ನು ಕೇಳಿಕೊಂಡಿದ್ದೇವೆ. ಇದಕ್ಕೆ ಒಪ್ಪಿಗೆ ದೊರಕಿರುವುದಾಗಿ ಪಾಕಿಸ್ತಾನದ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ನಷ್ಟ ಸರಿದೂಗಿಸಲು ತೈಲ ಕಂಪನಿಗಳಿಗೆ 22 ಸಾವಿರ ಕೋಟಿ ರೂ. ಅನುದಾನ
ಪಾಕಿಸ್ತಾನದಲ್ಲಿ ಪ್ರವಾಹ ಪೀಡಿತರಿಗೆ ಭಾರತದಿಂದ ಸೊಳ್ಳೆ ಪರದೆಗಳನ್ನು ಪಡೆಯಲು ಜಾಗತಿಕ ನಿಧಿಯು ವಿಶ್ವ ಆರೋಗ್ಯ ಸಂಸ್ಥೆಗೆ (WHO) ಹಣಕಾಸಿನ ಸಂಪನ್ಮೂಲವನ್ನು ಒದಗಿಸುತ್ತಿದೆ. ಪಾಕಿಸ್ತಾನದ ಅಧಿಕಾರಿಗಳು ಆದಷ್ಟು ಬೇಗ ಸೊಳ್ಳೆ ಪರದೆಗಳನ್ನು ಪಡೆಯಲು ಯೋಜಿಸುತ್ತಿದ್ದಾರೆ. ಅದು ವಾಘಾ ಮಾರ್ಗದ ಮೂಲಕ ನವೆಂಬರ್ ಮಧ್ಯದ ವೇಳೆಗೆ ಪಾಕಿಸ್ತಾನಕ್ಕೆ ಬರುವ ಭರವಸೆ ಇದೆ ಎಂದು ಹೇಳಿದರು. ಇದನ್ನೂ ಓದಿ: ನೌಕಾನೆಲೆಯ ಲೇಬರ್ ಕಾಲೋನಿಯಲ್ಲಿ ಸಿಲಿಂಡರ್ ಸ್ಫೋಟ – ತಪ್ಪಿದ ಅನಾಹುತ
ಪಾಕಿಸ್ತಾನದಲ್ಲಿ ಕಳೆದ ತಿಂಗಳು ಉಂಟಾದ ಭಾರೀ ಪ್ರವಾಹದಿಂದ 1,600 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯೂ ಪಾಕಿಸ್ತಾನದಲ್ಲಿ ಉಂಟಾಗಬಹುದಾದಂತಹ ಸಾಂಕ್ರಾಮಿಕ ರೋಗದ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
Live Tv
[brid partner=56869869 player=32851 video=960834 autoplay=true]
ಉಡುಪಿ: ದೇಶಕ್ಕೂ ಕಾಲಿಟ್ಟು ಆತಂಕ ಸೃಷ್ಟಿಸಿರುವ ಮಂಕಿಪಾಕ್ಸ್ ಜ್ವರದ ಭೀತಿ ಮಾಸುವ ಮುನ್ನವೇ ಉಡುಪಿ ಜಿಲ್ಲೆಯಲ್ಲಿ ಅಪರೂಪದ ಇಲಿ ಜ್ವರ ಪತ್ತೆಯಾಗಿದ್ದು, ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ.
ಜಿಲ್ಲೆಯ 85 ಮಂದಿಯಲ್ಲಿ ಇಲಿ ಜ್ವರ ಕಾಣಿಸಿಕೊಂಡಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಇಲಿ ಜ್ವರ ಕಾಣಿಸಿಕೊಂಡಿದ್ದು, ಇದು ಇಲಿಗಳ ಮಲಮೂತ್ರದಿಂದ ಹರಡುವ ಸೋಂಕಾಗಿದೆ. ಮಲೆನಾಡಿನ ತಪ್ಪಲಿನಲ್ಲಿ ಹೆಚ್ಚು ಜನಕ್ಕೆ ಇಲಿಜ್ವರ ಕಾಣಿಸಿಕೊಂಡಿದೆ. ಕುಂದಾಪುರ 40, ಉಡುಪಿ 32, ಕಾರ್ಕಳ 13 ಪ್ರಕರಣ ವರದಿಯಾಗಿದೆ. ಮಳೆಗಾಲದಲ್ಲಿ ಈ ಜ್ವರ ಕಾಣಿಸಿಕೊಳ್ಳಲಿದ್ದು, ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಹರಡುತ್ತಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಏಷ್ಯಾದಲ್ಲಿ ಭಾರತ ಹೊರತು ಪಡಿಸಿ 13 ದೇಶಗಳಲ್ಲಿ ಆರ್ಥಿಕ ಹಿಂಜರಿತ ಸಾಧ್ಯತೆ
ಏನಿದು ಇಲಿ ಜ್ವರ?
ವೈಜ್ಞಾನಿಕವಾಗಿ ಲೆಪ್ಟೊಸ್ಪೈರೋಸಿಸ್ ಎಂದು ಕರೆಸಿಕೊಳ್ಳುವ ಈ ಇಲಿ ಜ್ವರ ಬರುವುದು ಲೆಪ್ಟೊಸ್ಪೈರ ಎಂಬ ಬ್ಯಾಕ್ಟೀರಿಯ ರೋಗಾಣುಗಳಿಂದ. ಪ್ರಾಣಿಗಳಿಂದ ಮಾನವರಿಗೆ ಹರಡುವ ರೋಗಗಳಲ್ಲಿ ಇದೂ ಒಂದು. ಮುಖ್ಯವಾಗಿ ಇಲಿ, ಹೆಗ್ಗಣಗಳಿಂದ ಈ ರೋಗಾಣುಗಳು ಹರಡುವುದರಿಂದ ಇದಕ್ಕೆ ಇಲಿ ಜ್ವರವೆಂದು ಹೆಸರು. ಈ ರೋಗ ಕೇವಲ ಮನುಷ್ಯರನ್ನಷ್ಟೇ ಅಲ್ಲ ದನ, ಎಮ್ಮೆ, ಕುರಿ, ಮೇಕೆ, ಹಂದಿ, ನಾಯಿ, ಬೆಕ್ಕು, ವನ್ಯಮೃಗಗಳು ಹೀಗೆ ಬಹುತೇಕ ಪ್ರಾಣಿಗಳನ್ನು ಬಾಧಿಸುತ್ತದೆ. ಇದನ್ನೂ ಓದಿ: ಮಾರ್ಗರೇಟ್ ಆಳ್ವಾ ಅವರ ಫೋನ್ ಟ್ಯಾಪ್ ಆರೋಪದಲ್ಲಿ ಹುರುಳಿಲ್ಲ: ಪ್ರಹ್ಲಾದ್ ಜೋಶಿ ತಿರುಗೇಟು
ರೋಗ ಹೇಗೆ ಹರಡುತ್ತದೆ?
ಹೆಚ್ಚಾಗಿ ಇಲಿ, ಹೆಗ್ಗಣಗಳೇ ರೋಗಾಣುಗಳ ವಾಹಕಗಳು. ಈ ರೋಗ ಇಲಿಗಳನ್ನು ಬಾಧಿಸದಿದ್ದರೂ ಇವು ತಮ್ಮ ಜೀವನ ಪರ್ಯಂತ ಮೂತ್ರದಲ್ಲಿ ರೋಗಾಣುಗಳನ್ನು ವಿಸರ್ಜಿಸುತ್ತಿರುತ್ತವೆ. ಇಂತಹ ಇಲಿಗಳ ಮೂತ್ರದ ಸಂಪರ್ಕಕ್ಕೆ ಬರುವ ಮನುಷ್ಯ, ಪ್ರಾಣಿಗಳಿಗೆ ಸೋಂಕು ತಗಲುತ್ತದೆ. ಹಾಗೆಯೇ ರೋಗಪೀಡಿತ ಪ್ರಾಣಿಗಳ ಮೂತ್ರದ ಮೂಲಕವೂ ಈ ಕಾಯಿಲೆ ಹರಡುತ್ತದೆ. ಆದರೆ ಮನುಷ್ಯನಿಂದ ಮನುಷ್ಯನಿಗೆ ಇದು ಅಂಟುವುದಿಲ್ಲ.
ಮಣ್ಣಿಗೆ ಸೇರಿದ ರೋಗಾಣುಗಳು ಸುಮಾರು ಆರು ಗಂಟೆವರೆಗೆ ಜೀವಂತವಿದ್ದರೆ, ನೀರಿನಲ್ಲಿ ಆರು ತಿಂಗಳವರೆಗೆ ಬದುಕಬಲ್ಲವು. ಹಾಗಾಗಿ ಮಳೆಗಾಲದಲ್ಲಿ, ನೆರೆ ಬಂದಾಗ ಈ ರೋಗದ ಹಾವಳಿ ಜಾಸ್ತಿ. ಪಾದದ ಚರ್ಮದಲ್ಲಿನ ಬಿರುಕುಗಳು, ಒಡೆದ ಹಿಮ್ಮಡಿ, ಗಾಯಗಳ ಮೂಲಕ ರೋಗಾಣುಗಳು ದೇಹ ಪ್ರವೇಶಿಸಬಹುದು. ಇಲಿಮೂತ್ರದಿಂದ ಕಲುಷಿತ ನೀರು, ಆಹಾರದ ಮೂಲಕವೂ ದೇಹ ಸೇರುವ ಕ್ರಿಮಿಗಳು ಬಾಯಿ, ಗಂಟಲು, ಅನ್ನನಾಳದ ಮೂಲಕ ಒಳ ಪ್ರವೇಶಿಸುತ್ತವೆ. ಕಣ್ಣು, ಕಿವಿಯ ಮೂಲಕವೂ ರೋಗಾಣುಗಳು ಶರೀರ ಸೇರಬಹುದು. ಸಾಮಾನ್ಯವಾಗಿ ಸೋಂಕು ತಗುಲಿದ ಎರಡು ದಿನಗಳಿಂದ ಎರಡು ಮೂರು ವಾರಗಳಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ಸಾಂಕ್ರಾಮಿಕ ರೋಗ ತಜ್ಞರು ಹೇಳಿದ್ದಾರೆ.
Live Tv
[brid partner=56869869 player=32851 video=960834 autoplay=true]
ವಾಷಿಂಗ್ಟನ್: 2014ರಲ್ಲಿ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ 2020ರಲ್ಲಿ ಜಗತ್ತು ಸಾಂಕ್ರಾಮಿಕ ರೋಗಕ್ಕೆ ತುತ್ತಾಗುತ್ತದೆ ಎಂದು ಭವಿಷ್ಯ ನುಡಿದಿದ್ದರು. ಅವರ ಭವಿಷ್ಯ ನಿಜವೆಂಬಂತೆ ಕೋವಿಡ್-19 ಜಗತ್ತಿನಾದ್ಯಂತ ಹರಡಿತು. ಇದೀಗ ಬಿಲ್ ಗೇಟ್ಸ್ ಇನ್ನೊಂದು ಸಾಂಕ್ರಾಮಿಕ ರೋಗದ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಬಿಲ್ ಗೇಟ್ಸ್ ವಿಶೇಷ ಸಂದರ್ಶನವೊಂದರಲ್ಲಿ, ಜಗತ್ತು ಮುಂದಿನ 20 ವರ್ಷಗಳಲ್ಲಿ ಇನ್ನೊಂದು ಸಾಂಕ್ರಾಮಿಕ ರೋಗಕ್ಕೆ ತುತ್ತಾಗಲಿದೆ ಎಂದಿದ್ದಾರೆ. 20 ವರ್ಷಗಳ ಬಳಿಕ ತಲೆದೋರಲಿರುವ ರೋಗವನ್ನು ಜಗತ್ತು ಎದುರಿಸಲು ಈಗಲೇ ತಯಾರಿ ನಡೆಸಲು ಕರೆ ನೀಡಿದ್ದಾರೆ. ಇದನ್ನೂ ಓದಿ: ಟ್ವಿಟ್ಟರ್‌ಗೆ ಎಲಾನ್ ಮಸ್ಕ್ ತಾತ್ಕಾಲಿಕ CEO?
20 ವರ್ಷಗಳಲ್ಲಿ ನಾವು ಇನ್ನೊಂದು ಸಾಂಕ್ರಾಮಿಕ ರೋಗವನ್ನು ಎದುರಿಸುವ ಸಾಧ್ಯತೆ ಇದೆ. ಇದನ್ನು ಹತೋಟಿಗೆ ತರಲು ನಾವು ಸಿದ್ಧರಾಗಿರಬೇಕು. ಈ ರೋಗ ಜಾಗತಿಕವಾಗಿ ಹರಡುವುದಕ್ಕೂ ಮೊದಲು ಮುಂಜಾಗೃತೆ ವಹಿಸಬೇಕು. ಈ ಮೂಲಕ ಸಾವಿನ ಸಂಖ್ಯೆಯನ್ನು ಮಿತಿಗೊಳಿಸಲು ಪ್ರಯತ್ನಿಸಬೇಕು ಎಂದಿದ್ದಾರೆ. ಇದನ್ನೂ ಓದಿ: ಗೂಗಲ್, ಆಪಲ್, ಮೈಕ್ರೋಸಾಫ್ಟ್‌ಗಳಲ್ಲಿ ಶೀಘ್ರವೇ ಬರಲಿದೆ ಪಾಸ್‌ವರ್ಡ್ ಲೆಸ್ ಸೈನ್ ಇನ್ ಸೇವೆ
ಹೈದರಾಬಾದ್: ಕೆಲವು ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸುವುದು ಸೇರಿದಂತೆ ಎಲ್ಲಾ ಕೋವಿಡ್-19 ಸಂಬಂಧಿತ ನಿರ್ಬಂಧಗಳನ್ನು ತೆಗೆದುಹಾಕಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ.
ವಯಸ್ಸಾದವರು, ಗರ್ಭಿಣಿಯರನ್ನು ಹೊರತುಪಡಿಸಿ ಉಳಿದವರು ಮಾಸ್ಕ್ ಧರಿಸುವುದು ಅವರ ಆಯ್ಕೆಯಾಗಿದೆ. ತೆಲಂಗಾಣದಲ್ಲಿ ಕೋವಿಡ್ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ಪ್ರತಿದಿನ 50 ಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗುತ್ತಿವೆ ಎಂದು ಸಾರ್ವಜನಿಕ ಆರೋಗ್ಯದ ರಾಜ್ಯ ನಿರ್ದೇಶಕ ಜಿ ಶ್ರೀನಿವಾಸ ರಾವ್ ಹೇಳಿದ್ದಾರೆ. ಇದನ್ನೂ ಓದಿ:ಇಂದಿನಿಂದ ಮುಂಬೈನಲ್ಲಿ ಮಾಸ್ಕ್ ಕಡ್ಡಾಯವಲ್ಲ
ಕೊರೊನಾ ವೈರಸ್ ರೋಗಕ್ಕೆ ಸಂಬಂಧಿಸಿದ ಎಲ್ಲಾ ನಿಬರ್ಂಧಗಳನ್ನು ತೆಗೆದುಹಾಕಲಾಗುವುದು ಎಂದು, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳ ಗುರುವಾರ ಘೋಷಿಸಿದ ಒಂದು ದಿನದ ನಂತರ ಕೋವಿಡ್ -19 ಸಂಬಂಧಿತ ನಿರ್ಬಂಧಗಳನ್ನು ತೆಗೆದುಹಾಕಲು ತೆಲಂಗಾಣ ಸರ್ಕಾರದ ನಿರ್ಧರಿಸಿದೆ. ದೆಹಲಿ ಕೂಡ ಸಾರ್ವಜನಿಕ ಸ್ಥಳಗಳಲ್ಲಿ ಮುಖವಾಡಗಳನ್ನು ಕಡ್ಡಾಯವಾಗಿ ಧರಿಸುವುದನ್ನು ತೆಗೆದುಹಾಕಲು ನಿನ್ನೆ ನಿರ್ಧರಿಸಿದೆ.
ಬೆಂಗಳೂರು: ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇರುವುದರಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಲು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪ್ರವಾಹಪೀಡಿತ ಗ್ರಾಮಗಳು, ಸ್ಥಳಾಂತರಗೊಂಡಿರುವ ಗ್ರಾಮಗಳು, ಸಂತ್ರಸ್ತರಿಗೆ ತೆರೆಯುವ ಕಾಳಜಿ ಕೇಂದ್ರಗಳ ಬಳಿ ಕೈಗೊಳ್ಳಬೇಕಿರುವ ಕ್ರಮಗಳು ಹಾಗೂ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಕೈಗೊಳ್ಳಬೇಕಿರುವ ಸಿದ್ಧತೆಗಳ ಬಗ್ಗೆ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಶುಕ್ರವಾರ ಅಗತ್ಯ ಸೂಚನೆಗಳನ್ನು ನೀಡಿದರು.
ಕಾಳಜಿ ಕೇಂದ್ರಗಳಲ್ಲಿ ಆಶ್ರಯಪಡೆದಿರುವ ಸಂತ್ರಸ್ತರಿಗೆ ಶುದ್ಧಕುಡಿಯುವ ನೀರು ಮತ್ತು ಗುಣಮಟ್ಟದ ಆಹಾರ ಪೂರೈಸಬೇಕು. ಒಂದು ವೇಳೆ ಶುದ್ಧಕುಡಿಯುವ ನೀರಿನ ಘಟಕಗಳು ಸಮೀಪದಲ್ಲಿ ಇಲ್ಲದಿದ್ದರೆ ಲಭ್ಯವಿರುವ ನೀರನ್ನೇ ಕಾಯಿಸಿ, ಶೋಧಿಸಿ ನೀಡಲು ಸೂಚಿಸಲಾಗಿದೆ. ಕೇಂದ್ರಗಳ ಒಳಗೆ ಮತ್ತು ಹೊರಭಾಗದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಬೇಕು, ಪ್ರತಿದಿನ ರೋಗನಿರೋದಕ ದ್ರಾವಣ ಸಿಂಪಡಿಸಬೇಕು, ಕೇಂದ್ರದಲ್ಲಿರುವ ಎಲ್ಲರ ಆರೋಗ್ಯ ತಪಾಸಣೆ ಮಾಡಬೇಕು ಮತ್ತು ಅವರಿಗೆ ಕೋವಿಡ್ ಮತ್ತು ಸಾಂಕ್ರಾಮಿಕ ರೋಗಗಳ ಬಗ್ಗೆ ತಜ್ಞರು ಅರಿವು ಮೂಡಿಸುವ ಕೆಲಸ ಮಾಡಲು ಆದೇಶಿಸಿದರು.
ಹಿರಿಯ ನಾಗರಿಕರು, ಬಾಣಂತಿಯರು, ಗರ್ಭಿಣಿಯರು ಮತ್ತು ಮಕ್ಕಳನ್ನು ಸಾಧ್ಯವಾದಷ್ಟು ಮಟ್ಟಿಗೆ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಘಟಕ ಅಥವಾ ತಾಲೂಕು ಆಸ್ಪತ್ರೆಗಳಿಗೆ ಸ್ಥಳಾಂತರಿಸಿ ವಿಶೇಷ ಕಾಳಜಿಯಿಂದ ಅವರನ್ನು ನೋಡಿಕೊಳ್ಳಬೇಕು. ಜ್ವರ ಹಾಗೂ ಇತರೆ ರೋಗಲಕ್ಷಣ ಇದ್ದವರಿಗೆ ತಕ್ಷಣ ಕೋವಿಡ್ ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಲು ಸೂಚಿಸಲಾಗಿದ್ದು, ಕಾಳಜಿ ಕೇಂದ್ರಗಳಲ್ಲಿರುವ ಎಲ್ಲರಿಗೂ ಮಾಸ್ಕ್ ವಿತರಿಸಬೇಕು, ಸ್ಯಾನಿಟೈಸರ್ ನೀಡುವ ಜೊತೆಗೆ ಶುಚಿತ್ವದ ಬಗ್ಗೆ ಗಮನಹರಿಸರಿಸಲು ಸೂಚಿಸಿದ್ದಾರೆ.
ರಾಜ್ಯದ 18 ತಾಲೂಕು, 131 ಗ್ರಾಮಗಳು ಪ್ರವಾಹಕ್ಕೆ ಸಿಲುಕಿದ್ದು, 830 ಮನೆಗಳಿಗೆ ಹಾನಿಯಾಗಿದೆ. ಸದ್ಯ ರಾಜ್ಯದಲ್ಲಿ 80 ಕಾಳಜಿ ಕೇಂದ್ರ ತೆರೆಯಲಾಗಿದ್ದು, 8,733 ಜನರನ್ನು ಅಲ್ಲಿಗೆ ಸ್ಥಳಾಂತರಿಸಲಾಗಿದೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಮತ್ತೊಂದು ದೆಹಲಿ ಆಗುತ್ತಿದ್ಯಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ದೆಹಲಿ ವಾತಾವರಣದಂತೆ ಬೆಂಗಳೂರು ಕೂಡ ಬದಲಾಗುತ್ತಿದೆ. ಬೆಂಗಳೂರಿನ ವಾತಾವರಣದ ಜೊತೆಗೆ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಬಿಸಿಲಿನ ಏರುಪೇರು ಮತ್ತು ವಾತಾವರಣದ ಬದಲಾವಣೆಯಿಂದ ಅಸ್ತಮ ಕಾಯಿಲೆ ಜನರನ್ನು ಕಾಡುತ್ತಿದೆ.
ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ ರಾಜ್ಯದ ವಾತಾವರಣದಲ್ಲಿ ಭಾರೀ ಬದಲಾವಣೆಯಾಗುತ್ತಿದೆ. ಬೆಳಗ್ಗೆ ಚಳಿ, ಮಧ್ಯಾಹ್ನ ಬಿಸಿಲು ಮತ್ತು ರಾತ್ರಿ ಚಳಿ ಜಾಸ್ತಿಯಾಗುತ್ತಿದೆ. ಇತ್ತೀಚೆಗೆ ಬಿಸಿಲಿನ ತಾಪ ಹೆಚ್ಚಾಗಿದ್ದು, ವಾತಾವರಣದ ವಾಯು ಮಾಲಿನ್ಯದಿಂದಾಗಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗ್ತಿವೆ. ಆಸ್ಪತ್ರೆಗಳ ಮುಂದೆ ರೋಗಿಗಳ ಕ್ಯೂ ಹೆಚ್ಚಾಗ್ತಿದೆ. ವಾಯು ಮಾಲಿನ್ಯದಿಂದ ಅಸ್ತಮಾ ಕಾಯಿಲೆ ಜಾಸ್ತಿ ಆಗ್ತಿದ್ದು, ಬೆಂಗಳೂರಿನ ವಾಯುಮಾಲಿನ್ಯ ದೆಹಲಿ ರೀತಿ ಆಗದಂತೆ ಎಚ್ಚರ ವಹಿಸಬೇಕು ಎಂದು ವೈದ್ಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರಿನ ವಾಯು ಮಾಲಿನ್ಯಕ್ಕೆ ಕಾರಣ ಟ್ರಾಫಿಕ್ ಸಮಸ್ಯೆ, ವಾಹನಗಳ ಸಂಖ್ಯೆ ಹೆಚ್ಚಳ, ಮರಗಳ ನಾಶ ಮತ್ತು ಫ್ಯಾಕ್ಟರಿಗಳಿಂದ ಬರುವ ವಿಷಾನಿಲ ಎನ್ನಲಾಗುತ್ತಿದೆ. ಪ್ರತಿ ತಿಂಗಳಿಗೆ ಅಸ್ತಮಾ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಸಾಂಕ್ರಾಮಿಕ ರೋಗಗಳಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಜನರ ಕ್ಯೂ ಜಾಸ್ತಿಯಾಗಿದೆ.
ವಾತಾವರಣ ಏರುಪೇರಿಂದ ಸಾಂಕ್ರಾಮಿಕ ರೋಗಕ್ಕೆ ತುತ್ತಾದವರ ಸಂಖ್ಯೆ ನೋಡೋದಾದ್ರೆ; 1. ಡಿಸೆಂಬರಿನಲ್ಲಿ ಅಸ್ತಮಾ ರೋಗಿಗಳ ಸಂಖ್ಯೆ 300 2. ಜನವರಿಯಲ್ಲಿ ಅಸ್ತಮಾ ರೋಗಿಗಳ ಸಂಖ್ಯೆ 350 3. ಫೆಬ್ರವರಿಯಲ್ಲಿ ಇದರ ಸಂಖ್ಯೆ 550ಕ್ಕೆ ಹೆಚ್ಚಳ
ವಾತಾವರಣದಲ್ಲಿ ಬದಲಾವಣೆ ಮತ್ತು ಬಿಸಿಲು ಹೆಚ್ಚಾದಂತೆ ಈ ಕಾಯಿಲೆಗಳು ಹೆಚ್ಚಾಗ್ತಿವೆ. ಇದರಿಂದ ಪಾರಾಗಲು ವಾಹನಗಳ ಸಂಖ್ಯೆ ಕಡಿಮೆ ಮಾಡಬೇಕು, ಮರ ಗಿಡಗಳನ್ನು ಬೆಳೆಸಬೇಕು, ಜೊತೆಗೆ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸಬೇಕು ಇಲ್ಲವೆಂದರೆ ದೆಹಲಿ ರೀತಿ ಆಗುವುದು ಬೇಡಾ ಎಂದು ವೈದ್ಯರು ಹೇಳುತ್ತಾರೆ.
ರಾಜ್ಯದಲ್ಲಿ ಜನವರಿಯಲ್ಲಿ ಆದ ರಥ ಸಪ್ತಮಿ ಬಳಿಕ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಸೂರ್ಯ ಉತ್ತರಾಯಣದ ಕಡೆ ಪಯಣ ಮಾಡುತ್ತಿರುವ ಹಿನ್ನೆಲೆ ಬಿಸಿಲಿನ ತಾಪ ಜಾಸ್ತಿ ಇರಲಿದೆಯಂತೆ. ಮಾರ್ಚ್ ಅಷ್ಟೋತ್ತಿಗೆ ಸೂರ್ಯ ಸಮಭಾಜಕ ವೃತ್ತದ ಬಳಿಗೆ ಬರಲಿದ್ದು ಬಿಸಿಲು ಜಾಸ್ತಿ ಆಗುವುದರಿಂದ ಸಾಂಕ್ರಾಮಿಕ ರೋಗಗಳು ಜಾಸ್ತಿ ಆಗಲಿದೆ ಎಂದು ಭೂ ಗರ್ಭ ಶಾಸ್ತ್ರಜ್ಞರು ತಿಳಿಸಿದರು.
ರಥಸಪ್ತಮಿ ಬಳಿಕ ಬಿಸಿಲಿನ ತಾಪದಲ್ಲಿ ಆದ ಬದಲಾವಣೆಯನ್ನು ನೋಡೋದಾದರೆ; 1. ಡಿಸೆಂಬರಿನಲ್ಲಿ ಬಿಸಿಲಿನ ತಾಪಮಾನ 25 ಡಿಗ್ರಿ ಸೆಲ್ಸಿಯಸ್ 2. ಜನವರಿ ಬಿಸಿಲಿನ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಆಗಿದೆ 3. ಫೆಬ್ರವರಿಯಲ್ಲಿ ಇದರ ಪ್ರಮಾಣ 36ಕ್ಕೆ ಏರಿಕೆ 4. ಮಾರ್ಚ್‍ನಲ್ಲಿ ಇನ್ನೂ ಜಾಸ್ತಿಯಾಗುವ ಸಾಧ್ಯತೆ ಇದೆ