Tag: ಸಹೋದರಿಯರು

  • ಕೃಷಿಹೊಂಡದಲ್ಲಿ ಮುಳುಗಿ ಅಕ್ಕ, ತಂಗಿಯ ದಾರುಣ ಸಾವು

    ಕೃಷಿಹೊಂಡದಲ್ಲಿ ಮುಳುಗಿ ಅಕ್ಕ, ತಂಗಿಯ ದಾರುಣ ಸಾವು

    ಚಿಕ್ಕಬಳ್ಳಾಪುರ: ಕೃಷಿಹೊಂಡದಲ್ಲಿ ಕಾಲು ಜಾರಿ‌ಬಿದ್ದು ಅಕ್ಕ ತಂಗಿ ಇಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ (Chikkaballpura) ಜಿಲ್ಲೆಯ ಚೇಳೂರು (Chelur) ತಾಲೂಕಿನ ಕುರಪ್ಪಲ್ಲಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ರಾಧಾ(17), ಸಾಹಿತಿ(14) ಮೃತ ದುರ್ದೈವಿಗಳು.  ಬೇಸಿಗೆ ರಜೆ (Summer Holiday)  ಇದ್ದ ಕಾರಣ  ತಾಯಿಯ ಜೊತೆ ತೋಟದಲ್ಲಿ ಕೆಲಸ ಮಾಡುವಾಗ ಕೃಷಿ ಹೊಂಡಕ್ಕೆ ಆಳವಡಿಸಿದ್ದ ಪೈಪ್‌ ಸರಿ ಮಾಡಲು ಹೋಗಿ ಅಕ್ಕ ತಂಗಿ ಇಬ್ಬರು ಕಾಲು ಜಾರಿ ಬಿದ್ದಿದ್ದಾರೆ.

    ತಂದೆ ಇಲ್ಲದೇ ಇಬ್ಬರು ಮಕ್ಕಳೇ ಜೀವನಾಧಾರ ಅಂತ ಬದುಕು ಕಟ್ಟಿಕೊಂಡಿದ್ದ ತಾಯಿಯ ಆಕ್ರಂದನ ಈಗ ಮುಗಿಲುಮುಟ್ಟಿದೆ. ಚೇಳೂರು ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ನಾಪತ್ತೆಯಾಗಿದ್ದ ಮೂವರು ಸಹೋದರಿಯರ ಮೃತದೇಹ ಟ್ರಂಕ್‌ನಲ್ಲಿ ಪತ್ತೆ

    ನಾಪತ್ತೆಯಾಗಿದ್ದ ಮೂವರು ಸಹೋದರಿಯರ ಮೃತದೇಹ ಟ್ರಂಕ್‌ನಲ್ಲಿ ಪತ್ತೆ

    ಚಂಡೀಗಢ: ನಾಪತ್ತೆಯಾಗಿದ್ದ ಮೂವರು ಅಪ್ರಾಪ್ತ ಸಹೋದರಿಯರ (Sisters) ಮೃತದೇಹ ತಮ್ಮ ಮನೆಯಲ್ಲಿಯೇ ಟ್ರಂಕ್‌ನಲ್ಲಿ (Trunk) ಪತ್ತೆಯಾಗಿರುವ ಆಘಾತಕಾರಿ ಘಟನೆ ಪಂಜಾಬ್‌ನ (Punjab) ಜಲಂಧರ್ (Jalandhar) ಜಿಲ್ಲೆಯ ಕಾನ್ಪುರ (Kanpur) ಗ್ರಾಮದಲ್ಲಿ ನಡೆದಿದೆ.

    ಮೃತ ಸಹೋದರಿಯರನ್ನು ಕಾಂಚನ್ (4), ಶಕ್ತಿ (7) ಹಾಗೂ ಅಮೃತ (9) ಎಂದು ಗುರುತಿಸಲಾಗಿದೆ. ಬಾಲಕಿಯರ ಪೋಷಕರು ಕೂಲಿ ಕಾರ್ಮಿಕರಾಗಿದ್ದು, ಒಟ್ಟು ಐವರು ಮಕ್ಕಳಿದ್ದರು. ಕೆಲಸದಿಂದ ಮನೆಗೆ ಹಿಂತಿರುಗಿದಾಗ ಮೂವರು ಮಕ್ಕಳು ನಾಪತ್ತೆಯಾಗಿರುವುದು ತಿಳಿದುಬಂದಿದೆ.

    ಮಕ್ಕಳು ನಾಪತ್ತೆಯಾಗಿರುವ ಬಗ್ಗೆ ಪೋಷಕರು ಮಕ್ಸೂದ್ ಪೊಲೀಸ್ ಠಾಣೆಯಲ್ಲಿ ಭಾನುವಾರ ರಾತ್ರಿ ದೂರು ನೀಡಿದ್ದಾರೆ. ಮರುದಿನ ಬಾಲಕಿಯರ ತಂದೆ ಗೃಹೋಪಯೋಗಿ ವಸ್ತುಗಳನ್ನು ಸ್ಥಳಾಂತರಿಸುತ್ತಿದ್ದಾಗ ಟ್ರಂಕ್ ಎಂದಿಗಿಂತಲೂ ಭಾರವಾಗಿರುವುದು ತಿಳಿದುಬಂದಿದೆ. ಈ ವೇಳೆ ಟ್ರಂಕ್ ಅನ್ನು ತೆರದಾಗ ಮೂವರು ಬಾಲಕಿಯರ ಮೃತದೇಹಗಳು ಅದರಲ್ಲಿ ಪತ್ತೆಯಾಗಿದೆ. ಇದನ್ನೂ ಓದಿ: ವಾಹನ ತಪಾಸಣೆ ವೇಳೆ ಬ್ಯಾರಿಕೇಡ್ ಎಳೆದ ಪೊಲೀಸರು – ಬೈಕ್‌ನಿಂದ ಬಿದ್ದ ಮಹಿಳೆ ಕೈ ಮೇಲೆ ಹರಿದ ಟಿಪ್ಪರ್

    ಬಾಲಕಿಯರ ಸಾವು ನಿಗೂಢವಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಸಹೋದರಿಯರ ಸಾವಿನ ಕಾರಣವನ್ನು ತಿಳಿಯಲು ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪೊಲೀಸರ ಪ್ರಕಾರ ಬಾಲಕಿಯರ ತಂದೆಗೆ ಕುಡಿತದ ಚಟವಿದ್ದು, ಮನೆಯ ಮಾಲೀಕರು ಮನೆಯನ್ನು ಖಾಲಿ ಮಾಡುವಂತೆ ಹೇಳಿದ್ದರು. ಈ ಬಗ್ಗೆಯೂ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಇದನ್ನೂ ಓದಿ: ಮೆಕ್ಸಿಕೊದಲ್ಲಿ ಟ್ರಕ್‌ ಅಪಘಾತಕ್ಕೆ 10 ವಲಸಿಗರು ಬಲಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜನರನ್ನು ಲೆಕ್ಕಿಸದೇ ಗುಂಡು ಹಾರಿಸಿದ ದುಷ್ಕರ್ಮಿಗಳು – ಸಹೋದರನನ್ನು ಕಾಪಾಡಲು ಹೋಗಿ ಸಹೋದರಿಯರಿಬ್ಬರು ಬಲಿ

    ಜನರನ್ನು ಲೆಕ್ಕಿಸದೇ ಗುಂಡು ಹಾರಿಸಿದ ದುಷ್ಕರ್ಮಿಗಳು – ಸಹೋದರನನ್ನು ಕಾಪಾಡಲು ಹೋಗಿ ಸಹೋದರಿಯರಿಬ್ಬರು ಬಲಿ

    ನವದೆಹಲಿ: ಸಹೋದರನ ಮೇಲೆ ನಡೆಯುತ್ತಿದ್ದ ಹಲ್ಲೆಯನ್ನು ತಡೆಯಲು ಹೋಗಿ ನೆರೆದವರೆದುರಲ್ಲೇ ಸಹೋದರಿಯರಿಬ್ಬರು (Sisters) ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿರುವ ಆಘಾತಕಾರಿ ಘಟನೆ ದೆಹಲಿಯಲ್ಲಿ (Delhi) ನಡೆದಿದೆ. ಗುಂಡೇಟಿನ ಭೀಕರ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

    ಘಟನೆ ಭಾನುವಾರ ದೆಹಲಿಯ ಆರ್‌ಕೆ ಪುರಂ (RK Puram) ಪ್ರದೇಶದಲ್ಲಿ ನಡೆದಿದೆ. ದುಷ್ಕರ್ಮಿಕರು ಸ್ಥಳದಲ್ಲೇ ನೆರೆದಿದ್ದ ಹತ್ತಾರು ಜನರನ್ನು ಲೆಕ್ಕಿಸದೇ ಗುಂಡುಗಳನ್ನು ಹಾರಿಸಿದ್ದಾರೆ. ತಮ್ಮ ಸಹೋದರನ ಮೇಲೆ ನಡೆಯುತ್ತಿದ್ದ ಹಲ್ಲೆಯನ್ನು ತಡೆಯಲು ಹೋದ ಸಹೋದರಿಯರಾದ ಪಿಂಕಿ (30) ಹಾಗೂ ಜ್ಯೋತಿ (29) ಗುಂಡು ತಗುಲಿ ಸಾವನ್ನಪ್ಪಿದ್ದಾರೆ.

    ಹಣದ ವಿಚಾರಕ್ಕೆ ದುಷ್ಕರ್ಮಿಗಳು ಮೃತ ಮಹಿಳೆಯರ ಸಹೋದರನನ್ನು ಹುಡುಕಿಕೊಂಡು ಬಂದಿದ್ದರು ಎನ್ನಲಾಗಿದೆ. ಘಟನಾ ಸ್ಥಳದಲ್ಲಿ ಹತ್ತಾರು ಜನರಿದ್ದರೂ ಕಿಡಿಗೇಡಿಗಳು ನಿರ್ಭೀತರಾಗಿ ಗುಂಡು ಹಾರಿಸಿರುವುದು ವೀಡಿಯೋದಲ್ಲಿ ಕಂಡುಬಂದಿದೆ. ಆದರೂ ಅವರು ಕೃತ್ಯ ಎಸಗಿದ ಬಳಿಕ ಸ್ಥಳದಿಂದ ಪರಾರಿಯಾಗಿದ್ದು, ಬಳಿಕ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಉರಿಯುವ ಬಿಸಿಲಿಗೆ 54 ಮಂದಿ ಬಲಿ, 400ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

    ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದು, ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾನೂನು ಸುವ್ಯವಸ್ಥೆಯನ್ನು ಸುಧಾರಿಸುವ ಬದಲು ಕೇಂದ್ರ ಸರ್ಕಾರ ಇಡೀ ದೆಹಲಿಯ ಮೇಲೆ ಹಿಡಿತ ಸಾಧಿಸುವ ಪ್ರಯತ್ನದಲ್ಲಿ ನಿರತವಾಗಿದೆ ಎಂದು ಟೀಕಿಸಿದ್ದಾರೆ.

    ಇದೀಗ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಶಸ್ತ್ರಾಸ್ತ್ರ ಕಾಯ್ದೆಯ ಆರೋಪದ ಜೊತೆ ಕೊಲೆ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಈ ಕುರಿತು ತನಿಖೆ ನಡೆಸಲು ಹಿರಿಯ ಪೊಲೀಸ್ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಇದನ್ನೂ ಓದಿ: ಸಿನಿಮೀಯ ಶೈಲಿಯಲ್ಲಿ ಪ್ರೇಮಿಗಳಿಬ್ಬರ ದುರಂತ ಅಂತ್ಯ

  • ಸಹೋದರಿಯರ ಅಕೌಂಟ್‍ಗೆ ಲಕ್ಷ ಲಕ್ಷ ಟ್ರಾನ್ಸ್‌ಫರ್- ವಿದೇಶದಿಂದಲೇ ಶಾರಿಕ್‍ಗೆ ಸಂದಾಯವಾಗ್ತಿತ್ತಾ ಹಣ?

    ಸಹೋದರಿಯರ ಅಕೌಂಟ್‍ಗೆ ಲಕ್ಷ ಲಕ್ಷ ಟ್ರಾನ್ಸ್‌ಫರ್- ವಿದೇಶದಿಂದಲೇ ಶಾರಿಕ್‍ಗೆ ಸಂದಾಯವಾಗ್ತಿತ್ತಾ ಹಣ?

    ಬೆಂಗಳೂರು/ಮಂಗಳೂರು: ಆಟೋದಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ (Cooker Bomb Blast) ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರಿಗೆ ಮಹತ್ವದ ವಿಚರವೊಂದು ಸಿಕ್ಕಿದೆ. ಶಂಕಿತ ಶಾರೀಕ್‍ನಿಂದ ಸಹೋದರಿಯರ ಅಕೌಂಟ್‍ (Sisters Bank Account) ಗೆ ಲಕ್ಷ ಲಕ್ಷ ಹಣ ಹೋಗಿರುವುದು ಬಯಲಾಗಿದೆ.

    ಇಷ್ಟೊಂದು ಹಣ ಶಾರೀಕ್‍ಗೆ ಬರುತ್ತಿದ್ದಿದ್ದು ಎಲ್ಲಿಂದ..?, ಭಾರತವನ್ನು ಟಾರ್ಗೆಟ್ ಮಾಡಿ ವಿದೇಶದಿಂದ ಫಂಡಿಂಗ್ ಮಾಡಲಾಗ್ತಿದ್ಯಾ..?, ಶಾರೀಕ್‍ಗೂ ವಿದೇಶದಿಂದಲೇ ಫಂಡಿಂಗ್ ಎಂಬ ಅನುಮಾನ ಮೂಡಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.‌ ಇದನ್ನೂ ಓದಿ; ಮಂಗಳೂರಿನಲ್ಲಿ ದುಷ್ಕೃತ್ಯಕ್ಕೆ ಮಾಸ್ಟರ್ ಪ್ಲಾನ್- ಶಾರಿಕ್ ವಿಚಾರಣೆಗೆ ಎನ್‍ಐಎ ಸಿದ್ಧತೆ

    ಈಗಾಗಲೇ ಅರಾಫತ್ ಕೂಡ ದುಬೈ (Dubai) ನಲ್ಲಿ ನೆಲೆ ಊರಿದ್ದಾನೆ. ಭಾರತವನ್ನು ಟಾರ್ಗೆಟ್ ಮಾಡೋದಕ್ಕೆ ವಿದೇಶದಿಂದ ಮೊದಲಿಂದಲೂ ಫಡಿಂಗ್ ಆಗ್ತಿದೆ. ಈಗಲೂ ಕೂಡ ಅದೇ ವಿಚಾರದಲ್ಲಿ ಫಡಿಂಗ್ ಆಗಿದೆ ಅನ್ನೋ ಅನುಮಾನ ಶುರುವಾಗಿದೆ. ಹೀಗಾಗಿ ಪೊಲೀಸರು ಈ ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ.

    ಇತ್ತ ಮಂಗಳೂರಿನ ಆತ್ಮಾಹುತಿ ಬಾಂಬ್ ಹಿಂದಿನ ರಹಸ್ಯ ಬಯಲಾಗಿದ್ದು, ತನ್ನ ಸ್ನೇಹಿತ ಮಾಝ್ ಬಂಧನ ಸಹಿಸಲಾಗದೇ ಶಾರೀಕ್ ಈ ಕೃತ್ಯ ಎಸಗಿದ್ದಾನೆ. ಜಬೀವುಲ್ಲಾನ ಬಂಧನ ಬಳಿಕ ಯಾಸೀನ್, ಮಾಝ್‍ನನ್ನು ಬಂಧಿಸಲಾಗಿತ್ತು. ಈ ಮೂವರು ಸೇರಿ ಸ್ಫೋಟಕ್ಕೆ ಸಂಚು ರೂಪಿಸಿದ್ರು. ಮಾಝ್ ಬಂಧನ ಬೆನ್ನಲ್ಲೇ ಶಾರೀಕ್ ಪ್ರತೀಕಾರಕ್ಕೆ ಇಳಿದಿದ್ದ. ಅಲ್ಲದೇ ಭಾರತವನ್ನು ಇಸ್ಲಾಂ ರಾಷ್ಟ್ರವನ್ನಾಗಿ ಮಾಡುವ ಗುರಿಯನ್ನು ಈ ಮೂವರು ಹೊಂದಿದ್ದರು ಎಂಬುದಾಗಿ ತಿಳಿದುಬಂದಿದೆ.

    Live Tv
    [brid partner=56869869 player=32851 video=960834 autoplay=true]

  • ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಮೂವರು ಸಹೋದರಿಯರು ಸಾವು

    ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಮೂವರು ಸಹೋದರಿಯರು ಸಾವು

    ಭೋಪಾಲ್: ಒಂದೇ ಮರಕ್ಕೆ ಮೂವರು ಸಹೋದರಿಯರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ನಡೆದಿದೆ.

    ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೂವರು ಸಹೋದರಿಯರ ಶವ ಪತ್ತೆಯಾಗಿದ್ದು, ಈ ಘಟನೆ ಖಾಂಡ್ವಾದ ಜವಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಕೊಟ್ಖೇಡಿ ಗ್ರಾಮದಲ್ಲಿ ನಡೆದಿದೆ. ಇದನ್ನೂ ಓದಿ: ಚೆಸ್ ಒಲಿಂಪಿಯಾಡ್‌ನಲ್ಲಿ ಮೋದಿ ಫೋಟೋ ಹಾಕದೇ ಜಾಹೀರಾತು – ಎಲ್ಲ ಬೋರ್ಡ್‍ಗಳಿಗೂ ಫೋಟೋ ಅಂಟಿಸಿದ ಬಿಜೆಪಿ

    crime

    ಮೃತ ಸಹೋದರಿಯರನ್ನು ಸೋನು, ಸಾವಿತ್ರಿ ಮತ್ತು ಲಲಿತಾ ಎಂದು ಗುರುತಿಸಲಾಗಿದ್ದು, ಮೂವರು ಕೂಡ ತಮ್ಮ ತಾಯಿ ಮತ್ತು ಸಹೋದರನೊಂದಿಗೆ ವಾಸಿಸುತ್ತಿದ್ದರು. ಇದೀಗ ಮೂವರು ಸಹೋದರಿಯರು ಸಾವನ್ನಪ್ಪಿದ್ದು ತನ್ನ ತಾಯಿ, ಇಬ್ಬರು ಸಹೋದರಿಯರು ಮತ್ತು ಮೂವರು ಸಹೋದರರನ್ನು ಅಗಲಿದ್ದಾರೆ. ಇದನ್ನೂ ಓದಿ: ಸಾಮೂಹಿಕ ರಾಜೀನಾಮೆಗೆ ಮುಂದಾದ ಬಿಜೆಪಿ ಯುವ ಮೋರ್ಚಾ ಘಟಕ ಸದಸ್ಯರು

    ಈ ಕುರಿತಂತೆ ಮಾಹಿತಿ ದೊರೆತ ಪೊಲೀಸರು ನಂತರ ಘಟನಾ ಸ್ಥಳಿಕ್ಕೆ ಆಗಮಿಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅಲ್ಲದೇ ಘಟನಾ ಸ್ಥಳದಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗದ ಹಿನ್ನೆಲೆ ಸಾವಿನ ಹಿಂದಿನ ಪ್ರಮುಖ ಕಾರಣವೇನು ಎಂಬುವುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪ್ರತಿದಿನ ಸಾಯೋದಕ್ಕಿಂತ ಒಂದೇ ದಿನ ಸಾಯೋದು ಒಳಿತು – ಮೂವರು ಸಹೋದರಿಯರು ಮಕ್ಕಳೊಂದಿಗೆ ಆತ್ಮಹತ್ಯೆ

    ಜೈಪುರ: ಮೂವರು ಸಹೋದರಿಯರು ಹಾಗೂ ಇಬ್ಬರು ಮಕ್ಕಳ ಶವ ಶನಿವಾರ ರಾಜಸ್ಥಾನದ ಜೈಪುರ ಜಿಲ್ಲೆ, ದುಡು ಪಟ್ಟಣದ ಬಾವಿಯೊಂದರಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಗಿದೆ. ಸಹೋದರಿಯರು ತಮ್ಮ ಮಕ್ಕಳೊಂದಿಗೆ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂದು ಜನರಲ್ಲಿ ಪ್ರಶ್ನೆ ಮೂಡಿದೆ.

    ಕಲು ದೇವಿ(27), ಮಮತಾ(23) ಹಾಗೂ ಕಮಲೇಶ್(20) ಸಹೋದರಿಯರು ತಮ್ಮ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಲು ದೇವಿಯ ಇಬ್ಬರು ಮಕ್ಕಳಲ್ಲಿ ಓರ್ವನಿಗೆ 4 ವರ್ಷ ಹಾಗೂ ಇನ್ನೊಂದು ಕೇವಲ 27 ದಿನದ ಹಸುಗೂಸು. ಅಲ್ಲದೇ ಮಮತಾ ಹಾಗೂ ಕಮಲೇಶ್ ಇಬ್ಬರೂ ತುಂಬು ಗರ್ಭಿಣಿಯರಾಗಿದ್ದರು.

    ಈ ಮೂವರು ಸಹೋದರಿಯರು ಹಾಗೂ ಮಕ್ಕಳು ಬುಧವಾರ ನಾಪತ್ತೆಯಾಗಿದ್ದರು. ಶನಿವಾರದವರೆಗೂ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಇದೀಗ ಅವರ ಶವ ಬಾವಿಯಲ್ಲಿ ಪತ್ತೆಯಾಗಿದೆ. ಘಟನೆಗೂ ಒಂದು ದಿನ ಮುನ್ನ ಮಮತಾ ತನ್ನ ವಾಟ್ಸಪ್ ಸ್ಟೇಟಸ್‌ನಲ್ಲಿ ಪ್ರತಿದಿನ ಸಾಯುವುದಕ್ಕಿಂತ ಒಮ್ಮೆ ಸಾಯುವುದೇ ಉತ್ತಮ ಎಂದು ಬರೆದಿದ್ದಳು. ಇದನ್ನೂ ಓದಿ: ಕೇರಳದಲ್ಲಿ ವ್ಯಾಪಕವಾಗಿ ಹರಡುತ್ತಿದೆ ದೇಶ ವಿರೋಧಿ ಚಿಂತನೆ – ಬಿಜೆಪಿ ಸಂಸದ ಅಲ್ಫೋನ್ಸ್ ಹೇಳಿಕೆ

    ಮೂವರು ಮಹಿಳೆಯರು ಕೌಟುಂಬಿಕ ದೌರ್ಜನ್ಯಕ್ಕೆ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ. ಸಹೋದರಿಯರು ಒಂದೇ ಕುಟುಂಬದ ಮೂವರನ್ನು 2003ರಲ್ಲಿಯೇ ಬಾಲ್ಯ ವಿವಾಹವಾಗಿದ್ದರು. ಅವರ ಪತಿಯರು ಪ್ರತಿ ದಿನ ಕುಡಿದು ಬಂದು, ಅಮಲಿನಲ್ಲಿ ಪತ್ನಿಯರಿಗೆ ಚಿತ್ರಹಿಂಸೆ ನೀಡುತ್ತಿದ್ದರು. ಇತ್ತೀಚೆಗೆ ಕಲು ದೇವಿಗೆ ತನ್ನ ಅತ್ತಿಗೆ ಥಳಿಸಿದ್ದು, 15 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದರು. ಆಕೆಯ ಕಣ್ಣಿಗೆ ಗಾಯಗಳಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಕಿರಿಯ ಸಹೋದರಿ ಕಮಲೇಶ್‌ಗೂ ಇತ್ತೀಚೆಗೆ ತನ್ನ ಫೋನ್‌ನಲ್ಲಿ ಯಾರೊಂದಿಗೋ ಮಾತನಾಡಿದ ಬಳಿಕ ಥಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೂವರಿಗೂ ವಿದ್ಯಾಭ್ಯಾಸದಲ್ಲಿ ಆಸಕ್ತಿ ಇದ್ದು, ಓದಿ, ಸಂಪಾದಿಸಬೇಕು ಅಂದುಕೊಂಡಿದ್ದರು. ಮಮತಾ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದು, ಕಲು ಅಂತಿಮ ವರ್ಷದ ಬಿಎ ಓದುತ್ತಿದ್ದಳು ಹಾಗೂ ಕಮಲೇಶ್ ವಿಶ್ವವಿದ್ಯಾಲಯಕ್ಕೆ ದಾಖಲಾಗಿದ್ದಳು. ಆದರೆ ಕೇವಲ 5-6ನೇ ತರಗತಿ ಓದಿದ್ದ ಪತಿಯರಿಗೆ ಮಹಿಳೆಯರು ವಿದ್ಯಾಭ್ಯಾಸ ಮಾಡುವುದು ಇಷ್ಟವಿರಲಿಲ್ಲ. ಇದನ್ನೂ ಓದಿ: ಎರಡು ವರ್ಷಗಳ ನಂತರ ಭಾರತ- ಬಾಂಗ್ಲಾ ರೈಲು ಸಂಚಾರ ಪುನಾರಂಭ

    ಸಹೋದರಿಯರ ಶವಗಳು ತಮ್ಮ ಮನೆಯಿಂದ 2 ಕಿಮೀ ದೂರದ ಬಾವಿಯಲ್ಲಿ ಪತ್ತೆಯಾಗಿದ್ದು, ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಹಿಳೆಯರ ಪತಿಯರಾದ ನರ್ಸಿ, ಗೊರಿಯೊ ಹಾಗೂ ಮುಖೇಶ್‌ನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ವರದಕ್ಷಿಣೆ ವಿಚಾರದ ಬಗೆಗೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಸೀಬೆ ಹಣ್ಣು ಕೀಳಲು ಹೋಗಿ ಪ್ರಾಣ ಕಳೆದುಕೊಂಡ ಸಹೋದರಿಯರು

    ಸೀಬೆ ಹಣ್ಣು ಕೀಳಲು ಹೋಗಿ ಪ್ರಾಣ ಕಳೆದುಕೊಂಡ ಸಹೋದರಿಯರು

    ಚಾಮರಾಜನಗರ: ಸೀಬೆ ಹಣ್ಣು ಕೀಳಲು ಹೋಗಿ ಇಬ್ಬರು ಬಾಲಕಿಯರು ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕೆಬ್ಬೇಪುರ ಗ್ರಾಮದಲ್ಲಿ ನಡೆದಿದೆ.

    ಪೂಜಾ (10) ಪುಣ್ಯ (15) ಮೃತ ಬಾಲಕಿಯರು. ಈ ಇಬ್ಬರು ದುರ್ದೈವಿಗಳು ರೇಚಣ್ಣ ಎಂಬವರ ಪುತ್ರಿಯರಾಗಿದ್ದಾರೆ. ಇಂದು ಬೆಳಗ್ಗೆ ತಿಂಡಿ ತಿಂದು ಬಳಿಕ ಸೀಬೆ ಹಣ್ಣು ಕೀಳಲೆಂದು ಜಮೀನಿಗೆ ತೆರಳಿದ್ದಾರೆ. ಅಲ್ಲದೆ ಸೀಬೆ ಮರ ಹತ್ತಿ ಹಣ್ಣು ಕೀಳುತ್ತಿರುವಾಗ ಆಯತಪ್ಪಿ ಕೃಷಿ ಹೊಂಡಕ್ಕೆ ಬಿದ್ದಿದ್ದಾರೆ.

     

    ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬಾವಿಗೆ ಬಿದ್ದು ಸಹೋದರಿಯರಿಬ್ಬರ ಅನುಮಾನಾಸ್ಪದ ಆತ್ಮಹತ್ಯೆ ಪ್ರಕರಣ : ನಾಲ್ವರ ಬಂಧನ

    ಬಾವಿಗೆ ಬಿದ್ದು ಸಹೋದರಿಯರಿಬ್ಬರ ಅನುಮಾನಾಸ್ಪದ ಆತ್ಮಹತ್ಯೆ ಪ್ರಕರಣ : ನಾಲ್ವರ ಬಂಧನ

    ಬೀದರ್: ಬಾವಿಗೆ ಬಿದ್ದು ಸಾವನ್ನಪ್ಪಿರುವ ಸಹೋದರಿಯರಿಬ್ಬರ ಆತ್ಮಹತ್ಯೆ  ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 4 ಜನ ಆರೋಪಿಗಳ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

    ಸಂಬಾಜೀ, ವಿಠಲ್, ರಾಣಿ ಬಂಧಿತ ಆರೋಪಿಗಳಾಗಿದ್ದಾರೆ. ನಾಲ್ಕು ಜನ ಆರೋಪಿಗಳನ್ನು ಮೇಹಕರ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಡಾ.ಪುನೀತ್ ರಾಜ್‍ಕುಮಾರ್ ನೆನೆದು ಗುಣಗಾನ ಮಾಡಿದ ಪ್ರಿಯಾಂಕ್ ಖರ್ಗೆ 

    ನಡೆದಿದ್ದೇನು?: ಎರಡು ದಿನಗಳ ಹಿಂದೆ ಅಂಕಿತ(15) ಹಾಗೂ ಶ್ರದ್ಧಾ(13) ಸಹೋದರಿಯರ ಶವ ಬಾವಿಯಲ್ಲಿ ಪತ್ತೆಯಾಗಿತ್ತು. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಅಟ್ಟರ್ಗಾ ಗ್ರಾಮದಲ್ಲಿ ಘಟನೆಯಾಗಿದ್ದು, ಈ ಕುರಿತು ಮೇಹಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದರು.

    ಮದುವೆ ಸಂಬಂದ ಎರಡು ಕುಟುಂಬಗಳ ನಡುವೆ ಗಲಾಟೆಯಾಗಿತ್ತು. ಈ ವೇಳೆ ಸಂಬಾಜೀ, ಸಹೋದರಿಯರ ಪೋಷಕರ ಮೇಲೆ ಹಲ್ಲೆ ಮಾಡಿದ್ದನು. ಈ ವಿಚಾರವಾಗಿ ಮನನೊಂದು ಸಹೋದರಿಯರಿಬ್ಬರು ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು.

  • ಬಾವಿಯಲ್ಲಿ ಅಪ್ರಾಪ್ತ ಸಹೋದರಿಯರ ಶವ ಪತ್ತೆ – ಗ್ರಾಮಸ್ಥರಿಂದ ಕೊಲೆ ಶಂಕೆ

    ಬಾವಿಯಲ್ಲಿ ಅಪ್ರಾಪ್ತ ಸಹೋದರಿಯರ ಶವ ಪತ್ತೆ – ಗ್ರಾಮಸ್ಥರಿಂದ ಕೊಲೆ ಶಂಕೆ

    ಬೀದರ್: ಅಪ್ರಾಪ್ತ ಸಹೋದರಿಯರಿಬ್ಬರ ಶವ ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕು ಅಟ್ಟರ್ಗಾ ಗ್ರಾಮದಲ್ಲಿ ನಡೆದಿದೆ.

    ಅಂಕಿತಾ(15) ಹಾಗೂ ಶ್ರದ್ಧಾ(13) ಮೃತ ದುರ್ದೈವಿ ಸಹೋದರಿಯರಾಗಿದ್ದಾರೆ. ಅಪ್ರಾಪ್ತ ಸಹೋದರಿಯರು ಗ್ರಾಮದ ಹೊರವಲಯದಲ್ಲಿರುವ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೊದಲಿಗೆ ಶಂಕೆ ವ್ಯಕ್ತವಾಗಿತ್ತು. ನಂತರ ಇವರನ್ನು ಕೊಲೆ ಮಾಡಲಾಗಿದೆ ಎಂದು ಕುಟುಂಬದ ಸದಸ್ಯರು ಮತ್ತು ಗ್ರಾಮಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಬುರ್ಕಾ ಹಾಕಬೇಕು, ನಮಾಜ್ ಮಾಡಬೇಕು, ಮುಸ್ಲಿಂ ಸಂಸ್ಕೃತಿ ಪಾಲಿಸಬೇಕೆಂದು ಒತ್ತಾಯಿಸುತ್ತಿದ್ದ: ಪತ್ನಿ ನೇರ ಆರೋಪ

    POLICE JEEP

    ಮೃತ ಸಹೋದರಿಯರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದ್ದು, ಮಕ್ಕಳ ಶವ ಸಂಸ್ಕಾರ ಮಾಡುವುದಿಲ್ಲ, ಮೊದಲು ನಮಗೆ ನ್ಯಾಯ ಒದಗಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಸ್ಥಳಕ್ಕೆ ಮೇಹಕರ್ ಪೊಲೀಸರು ಭೇಟಿ ನೀಡಿ ಘಟನೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: 2.5 ಕೆಜಿ ಚಿನ್ನ, 12 ಕೆಜಿ ಬೆಳ್ಳಿ – ಆಸ್ತಿ ಕಂಡು ಎಸಿಬಿ ಅಧಿಕಾರಿಗಳು ಶಾಕ್

    ಕುಟುಂಬಕ್ಕೆ ಶವ ಸಂಸ್ಕಾರ ಮಾಡುವಂತೆ ಮನವೊಲಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

  • ಕೊಳೆತ ಸ್ಥಿತಿಯಲ್ಲಿ ಸಹೋದರಿಯರಿಬ್ಬರ ಶವ ಪತ್ತೆ

    ಕೊಳೆತ ಸ್ಥಿತಿಯಲ್ಲಿ ಸಹೋದರಿಯರಿಬ್ಬರ ಶವ ಪತ್ತೆ

    ದಾವಣಗೆರೆ: ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಸಹೋದರಿಯರಿಬ್ಬರ ಶವ ಪತ್ತೆಯಾಗಿರುವ ಘಟನೆ ದಾವಣಗೆರೆಯ ಹೊರವಲಯದಲ್ಲಿ ನಡೆದಿದೆ.

    ಗೌರಮ್ಮ (34) ರಾಧಮ್ಮ (32) ಸಾವನ್ನಪ್ಪಿರುವ ಸಹೋದರಿಯರಾಗಿದ್ದಾರೆ. ದಾವಣಗೆರೆಯ ಹೊರವಲಯದಲ್ಲಿರುವ ಆಂಜನೇಯ ಕಾಟನ್ ಮಿಲ್ ಪ್ರದೇಶದ ಬಾಡಿಗೆ ಮನೆಯಲ್ಲಿ ಘಟನೆ ನಡೆದಿದೆ. ಘಟನೆ ನಡೆದು ಐದಾರು ದಿನವಾಗಿದ್ದು, ಕೊಳೆತ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿವೆ. ಇದನ್ನೂ ಓದಿ:  ಮೃತ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ನೆರವು ನೀಡಿದ ಬಿಎಸ್‍ವೈ

    ಮೃತ ಗೌರಮ್ಮ ಹಾಗೂ ರಾಧಿಕಾ ಮೂಲತಃ ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನ ಬೆನಕನಹಳ್ಳಿ ಗ್ರಾಮದವರಾಗಿದ್ದಾರೆ. ಕೂಲಿ ಮಾಡಲು ದಾವಣಗೆರೆಯ ಆಂಜನೇಯ ಕಾಟನ್ ಮಿಲ್ ಕೆಲಸ ಮಾಡುತ್ತಿದ್ದು, ಅದೇ ಬಡಾವಣೆಯಲ್ಲಿ ಇಬ್ಬರೂ ವಾಸವಾಗಿದ್ದರು. ಇದನ್ನೂ ಓದಿ:  ಜನ ಬಯಸಿದರೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ: ಅಭಿಷೇಕ್ ಅಂಬರೀಶ್

    ಕಳೆದ ಐದಾರು ದಿನಗಳಿಂದ ಮನೆಯಿಂದ ಹೊರ ಬಂದಿರಲಿಲ್ಲ, ಅಲ್ಲದೆ ಈ ಇಬ್ಬರು ಸಹೋದರಿಯರು ವಾಸವಾಗಿದ್ದ ಮನೆಯಿಂದ ಕೆಟ್ಟ ವಾಸನೆ ಬರುತ್ತಿದ್ದು, ಇದರಿಂದ ಸ್ಥಳೀಯರು ವಿದ್ಯಾ ನಗರ ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ಬಂದುಮನೆ ಬಾಗಿಲು ತೆರೆದಾಗ ಪ್ರಕರಣ ಬಯಲಿಗೆ ಬಂದಿದೆ. ಅಲ್ಲದೆ ಸಹೋದರಿಯರಿಬ್ಬರ ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದು, ಕೆಟ್ಟ ವಾಸನೆ ಬರುತ್ತಿದೆ. ಈ ಸಂಬಂಧ ವಿದ್ಯಾನಗರ ಠಾಣೆಯಲ್ಲಿ ಮೃತರ ಕುಟುಂಬಸ್ಥರು ಕೊಲೆ ಶಂಕೆ ಎಂದು ದೂರು ನೀಡಿದ್ದು, ಗೌರಮ್ಮ ಪತಿ ಮಂಜುನಾಥ್ ಎಂಬುವವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಪ್ರಕರಣ ಸಂಬಂಧಿಸಿದಂತೆ ಮೃತರ ಕುಟುಂಬಸ್ಥರ ಬಳಿ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ.