Tag: ಸಹಾಯಕಿ

  • ಮಗು ಮೂತ್ರ ಮಾಡಿದ್ದಕ್ಕೆ ಕಾಲಿಗೆ ಬರೆ ಎಳೆದ ಅಂಗನವಾಡಿ ಸಹಾಯಕಿ!

    ಮಗು ಮೂತ್ರ ಮಾಡಿದ್ದಕ್ಕೆ ಕಾಲಿಗೆ ಬರೆ ಎಳೆದ ಅಂಗನವಾಡಿ ಸಹಾಯಕಿ!

    ಮೈಸೂರು: ಅಂಗನವಾಡಿಯಲ್ಲಿ ಮಗು ಮೂತ್ರ ಮಾಡಿದ್ದರಿಂದ ಸಿಟ್ಟುಗೊಂಡ ಸಹಾಯಕಿಯೊಬ್ಬರು ಬರೆ ಹಾಕಿರುವ ಅಮಾನವೀಯ ಘಟನೆ ನಗರದ ದೇವಯ್ಯನ ಹುಂಡಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ನಗರದ ದೇವಯ್ಯನ ಹುಂಡಿಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಅಂಗನವಾಡಿಯಲ್ಲಿ ಪುಟ್ಟ ಮಗುವೊಂದು ಮೂತ್ರ ಮಾಡಿತ್ತು. ಕೋಪಗೊಂಡ ಆಯಾ ನೀಲಮ್ಮ ಗ್ಯಾಸ್ ಸ್ಟೌವ್‍ನಲ್ಲಿ ಚಾಕು ಕಾಯಿಸಿ ಮಗುವಿನ ಕಾಲಿಗೆ ಬರೆ ಹಾಕಿದ್ದಾಳೆ. ಇದನ್ನೂ ಓದಿ: ಅಮ್ಮ ಬೇಕು ಅಂತ ಹಠಹಿಡಿದಿದ್ದ 4ರ ಕಂದಮ್ಮನ ಬೆನ್ನಿಗೆ ಬರೆ ಎಳೆದ ಶಿಕ್ಷಕ, ಆಯಾ!

    ವಿಷಯ ತಿಳಿಯುತ್ತಿದ್ದಂತೆಯೇ ಅಂಗನವಾಡಿ ಕೇಂದ್ರಕ್ಕೆ ಆಗಮಿಸಿದ ಪೋಷಕರು ಆಯಾ ನೀಲಮ್ಮರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಆಯಾ ಮಕ್ಕಳ ಮೇಲೆ ಯಾವಾಗಲೂ ಇದೇ ರೀತಿ ದೌರ್ಜನ್ಯ ನಡೆಸುತ್ತಾಳೆ ಎಂದು ಆರೋಪಿಸಿರುವ ಗ್ರಾಮಸ್ಥರು, ಕೂಡಲೇ ಆಯಾರನ್ನು ಅಮಾನತು ಮಾಡುವಂತೆ ಅಂಗನವಾಡಿ ಬಳಿ ಪ್ರತಿಭಟನೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 3 ವರ್ಷದ ಬಾಲಕನ ಕುತ್ತಿಗೆಗೆ ಬಿಸಿ ಸೌಟಿನಲ್ಲಿ ಹೊಡೆದು ಅಂಗನವಾಡಿ ಸಹಾಯಕಿಯಿಂದ ಹಲ್ಲೆ

    3 ವರ್ಷದ ಬಾಲಕನ ಕುತ್ತಿಗೆಗೆ ಬಿಸಿ ಸೌಟಿನಲ್ಲಿ ಹೊಡೆದು ಅಂಗನವಾಡಿ ಸಹಾಯಕಿಯಿಂದ ಹಲ್ಲೆ

    ಚಾಮರಾಜನಗರ: ಒಂದು ಅಂಗನವಾಡಿಯಿಂದ ಮತ್ತೊಂದು ಅಂಗನವಾಡಿಗೆ ಹೋಗಿದ್ದಾನೆ ಎಂದು ಸಹಾಯಕಿಯೊಬ್ಬಳು ಬಾಲಕನಿಗೆ ಸಾಂಬರ್ ನ ಬಿಸಿ ಸೌಟಿನಲ್ಲಿ ಹಲ್ಲೆ ಮಾಡಿರುವ ಘಟನೆ ಚಾಮರಾಜನಗರ ತಾಲೂಕಿನ ಬಸವಪುರ ಗ್ರಾಮದಲ್ಲಿ ಜರುಗಿದೆ.

    ಗ್ರಾಮದ ಜಡೆಸ್ವಾಮಿ ಎಂಬವರ ಮೂರು ವರ್ಷದ ಹಾರ್ಥಿಕ್ ಎಂಬಾತ ಹಲ್ಲೆಗೊಳಗಾದ ಬಾಲಕ. ಬಾಲಕ ಒಂದು ಅಂಗನವಾಡಿಯಿಂದ ಮತ್ತೊಂದು ಅಂಗನವಾಡಿಗೆ ಹೋದ ಎಂಬ ಕಾರಣಕ್ಕೆ ಸಹಾಯಕಿ ಶಿವಮಲ್ಲಮ್ಮ ಸಾಂಬರ್ ನ ಬಿಸಿ ಸೌಟಿನಲ್ಲಿ ಆತನ ಕುತ್ತಿಗೆ ಭಾಗಕ್ಕೆ ಹೊಡೆದಿದ್ದಾರೆ. ಇದರಿಂದ ಬಾಲಕನ ಕುತ್ತಿಗೆಯ ಭಾಗ ಸುಟ್ಟು ಹೋಗಿದ್ದು, ಗಂಭೀರ ಗಾಯಗಳಾಗಿವೆ.

    ಅಂಗನವಾಡಿ ಸಹಾಯಕಿ ಸರಿಯಾಗಿ ಮಗುವನ್ನು ನೋಡಿಕೊಂಡಿದ್ದರೆ ಮಗು ಬೇರೆ ಅಂಗನವಾಡಿಗೆ ಹೋಗುತ್ತಿರಲಿಲ್ಲ. ಸಹಾಯಕಿ ಬೇಜವಾಬ್ದಾರಿಯಿಂದ ನಮ್ಮ ಮಗನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

    ಈ ಬಗ್ಗೆ ಹಾರ್ಥಿಕ್ ಪೋಷಕರು ರಾಮಸಮುದ್ರದ ಪೂರ್ವ ಪೋಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.