Tag: ಸಹಪಾಠಿ

  • ಓದುವುದರಲ್ಲಿ ಕಾಂಪಿಟೇಷನ್ ನೀಡ್ತಿದ್ದಕ್ಕೆ ಮಗನ ಸಹಪಾಠಿಗೆ ವಿಷ ಕೊಟ್ಟು ಸಾಯಿಸಿದ್ಲು

    ಓದುವುದರಲ್ಲಿ ಕಾಂಪಿಟೇಷನ್ ನೀಡ್ತಿದ್ದಕ್ಕೆ ಮಗನ ಸಹಪಾಠಿಗೆ ವಿಷ ಕೊಟ್ಟು ಸಾಯಿಸಿದ್ಲು

    ಪುದುಚೇರಿ: ಓದುವುದರಲ್ಲಿ ತನ್ನ ಮಗನಿಗೆ ಸ್ಪರ್ಧೆ ನೀಡುತ್ತಿದ್ದ ಸಹಪಾಠಿಗೆ ಮಹಿಳೆಯೊಬ್ಬಳು ವಿಷ ನೀಡಿ ಹತ್ಯೆಗೈದಿರುವ ಘಟನೆ ಪುದುಚೇರಿಯಲ್ಲಿ ನಡೆದಿದೆ.

    ಖಾಸಗಿ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿ ಬಾಲಾ ಮಣಿಕಂದನ್ ಶೈಕ್ಷಣಿಕ ಸಾಲಿನ ರಜೆಗೆಂದು ಮನೆಗೆ ಹಿಂದುರುಗಿದಾಗ ತೂಕಡಿಸಲು ಆರಂಭಿಸಿದನು. ಈ ವೇಳೆ ಶಾಲೆಯಲ್ಲಿ ಏನಾದರೂ ಸೇವಿಸಿದ್ದೀಯಾ ಎಂದು ತಾಯಿ ಕೇಳಿದಾಗ, ವಾಚ್‍ಮ್ಯಾನ್ ತನಗೆ ಜ್ಯೂಸ್ ನೀಡಿದ್ದು, ಅದನ್ನು ಕುಡಿದ ನಂತರ ಕುಸಿದು ಬಿದ್ದಿರುವುದಾಗಿ ತಿಳಿಸಿದ್ದಾನೆ. ಇದನ್ನೂ ಓದಿ: ಹನುಮನ ವೇಷ ಧರಿಸಿದ್ದ ವ್ಯಕ್ತಿ ಪ್ರದರ್ಶನ ನೀಡುತ್ತಲೇ ಕುಸಿದು ಸಾವು

    ಕೂಡಲೇ ಮಣಿಕಂದನ್ ಬಾಲನನ್ನು ಕಾರೈಕ್ಕಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ವಾಚ್‍ಮ್ಯಾನ್ ಏಕೆ ಜ್ಯೂಸ್ ನೀಡಿರಬಹುದು ಎಂದು ಪೋಷಕರು ಮತ್ತು ಆತನ ಸಂಬಂಧಿಕರು ವಿಚಾರಿಸಿದಾಗ ಮಹಿಳೆಯೊಬ್ಬರು ತನ್ನ ಬಳಿಗೆ ಬಂದು ಎರಡು ಜ್ಯೂಸ್ ಬಾಟಲಿಗಳನ್ನು ನೀಡಿ, ಬಾಲಾ ಅವರ ಮನೆಯವರು ಕಳುಹಿಸಿದ್ದಾರೆ ಎಂದು ತಿಳಿಸಿರುವುದಾಗಿ ಹೇಳಿದ್ದಾನೆ.

    ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಮಹಿಳೆಯೊಬ್ಬರು ವಾಚ್‍ಮ್ಯಾನ್‍ಗೆ ಜ್ಯೂಸ್ ನೀಡುತ್ತಿರುವುದು ಕಂಡುಬಂದಿದೆ. ನಂತರ ಆಕೆಯನ್ನು ಬಾಲನ ಸಹಪಾಠಿ ಅರುಲ್ ಮೇರಿಯ ತಾಯಿ ಸಗಾಯರಾಣಿ ವಿಕ್ಟೋರಿಯಾ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಚಾಮರಾಜಪೇಟೆಯಲ್ಲಿ ನಾಳೆ ಜಮೀರ್ ನೇತೃತ್ವದಲ್ಲೇ ಗಣೇಶೋತ್ಸವ!

    ಚಿಕಿತ್ಸೆ ಫಲಾಕಾರಿಯಾಗದೇ ಶನಿವಾರ ರಾತ್ರಿ ಬಾಲ ಮೃತಪಟ್ಟಿದ್ದಾನೆ. ಇದರಿಂದ ರೊಚ್ಚಿಗೆದ್ದ ಮೃತ ವಿದ್ಯಾರ್ಥಿಯ ಪೋಷಕರು ಹಾಗೂ ಸಂಬಂಧಿಕರು ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಹೀಗಾಗಿ ಪೊಲೀಸರು ಸಗಾಯರಾಣಿ ವಿಕ್ಟೋರಿಯಾಳನ್ನು ಕೂಡಲೇ ಬಂಧಿಸಿದರು. ಬಳಿಕ ಈ ಕುರಿತಂತೆ ವಿಚಾರಣೆ ನಡೆಸಿದಾಗ, ತನ್ನ ಮಗ ಅರುಲ್ ಮೇರಿ ಮತ್ತು ಬಾಲಾ ನಡುವೆ ಅಂಕ ಗಳಿಸುವ ವಿಚಾರವಾಗಿ ಮತ್ತು ತರಗತಿಯಲ್ಲಿ ರ‍್ಯಾಂಕ್ ಪಡೆಯಲು ಪೈಪೋಟಿ ಇತ್ತು. ಇದರಿಂದಾಗಿ ಆಗಾಗ ಸಣ್ಣ-ಪುಟ್ಟ ಜಗಳವಾಗುತ್ತಿತ್ತು. ಇದರಿಂದ ಅಸಮಾಧಾನಗೊಂಡು ಈ ಕೃತ್ಯ ವೆಸಗಿರುವುದಾಗಿ ಮಹಿಳೆ ತಿಳಿಸಿದ್ದಾಳೆ.

    Live Tv
    [brid partner=56869869 player=32851 video=960834 autoplay=true]

  • ಶಾಲೆಯಲ್ಲಿ ಕುರ್ಚಿಗಾಗಿ ಜಗಳ- ಸಹಪಾಠಿಗೆ ಶೂಟ್ ಮಾಡಿದ 14ರ ಬಾಲಕ

    ಶಾಲೆಯಲ್ಲಿ ಕುರ್ಚಿಗಾಗಿ ಜಗಳ- ಸಹಪಾಠಿಗೆ ಶೂಟ್ ಮಾಡಿದ 14ರ ಬಾಲಕ

    – ಗೇಟ್ ಮುಚ್ಚಿಸಿ ಬಾಲಕನನ್ನು ಪೊಲೀಸರಿಗೆ ಒಪ್ಪಿಸಿದ ಪ್ರಿನ್ಸಿಪಾಲ್

    ಲಕ್ನೋ: ಶಾಲೆಯಲ್ಲಿ ಕುಳಿತುಕೊಳ್ಳಲು ಕುರ್ಚಿ ನೀಡಿಲ್ಲವೆಂಬ ಕಾರಣಕ್ಕೆ 10ನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಯನ್ನೇ ಪಿಸ್ತೂಲಿನಿಂದ ಗುಂಡಿಟ್ಟು ಕೊಂದಿರುವ ಘಟನೆ ಬುಧವಾರ ಶಿಕಾರ್‍ಪುರದಲ್ಲಿ ನಡೆದಿದೆ.

    ಹದಿಹರೆಯದ ವಯಸ್ಸಿನಲ್ಲಿ ಮಕ್ಕಳು ಶಾಲೆಯಲ್ಲಿ ಪೆನ್, ಪೆನ್ಸಿಲ್, ರಬ್ಬರ್, ಕುರ್ಚಿಗಾಗಿ ಕಿತ್ತಾಡುವುದು ಸಹಜ. ಆದರೆ ಕೊಲೆ ಮಾಡುವ ತನಕ ಯಾರು ಕೂಡ ಮುಂದುವರಿಯುವುದಿಲ್ಲ. ಆದ್ರೆ ಸನ್ನಿ ಎಂಬ 14 ವರ್ಷದ ಬಾಲಕ ಉತ್ತರ ಪ್ರದೇಶದ ಶಿಕಾರ್‍ಪುರನ ಸೂರಜ್‍ಭನ್ ಸರಸ್ವತಿ ಇಂಟರ್ ಕಾಲೇಜ್‍ನ ಕೊಠಡಿಯಲ್ಲಿ ಕುಳಿತುಕೊಳ್ಳಲು ಕುರ್ಚಿ ನೀಡಲಿಲ್ಲ ಎಂಬ ಕಾರಣಕ್ಕೆ ತನ್ನ ಸಹಪಾಠಿಯೊಂದಿಗೆ ಜಗಳ ಮಾಡಿದ್ದಾನೆ. ನಂತರ ಕೋಪಗೊಂಡು ಪಿಸ್ತೂಲಿನಿಂದ ಗುಂಡಿಟ್ಟು ಕೊಂದಿದ್ದಾನೆ. ಮಾರಣಾಂತಿಕವಾಗಿ ಶೂಟ್ ಮಾಡಿದ ನಂತರ ಸನ್ನಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಆದ್ರೆ ಅಲ್ಲಿಯೇ ಇದ್ದ ಮುಖ್ಯೋಪಾಧ್ಯಾಯರು ಶಾಲೆಯ ಗೇಟನ್ನು ಮುಚ್ಚಿಸಿ ಆತನನ್ನು ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಪಿಸ್ತೂಲ್ ಕುರಿತು ಪೊಲೀಸರು ಸನ್ನಿಯನ್ನು ಪ್ರಶ್ನಿಸಿದಾಗ ಈ ಪಿಸ್ತೂಲ್ ತನ್ನ ಅಂಕಲ್‍ಗೆ ಸೇರಿದ್ದು, ಅವರು ಆರ್ಮಿಯಿಂದ ಮನೆಗೆ ಹಿಂದಿರುಗಿದಾಗ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾನೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಕುಮಾರ್ ಸಿಂಗ್ ಹೇಳಿದರು.

  • ರ್‍ಯಾಗಿಂಗ್ ಮಾಡ್ಬೇಡಿ ಅಂದ ಸಹಪಾಠಿಗೆ ಚಾಕು ಇರಿತ!

    ರ್‍ಯಾಗಿಂಗ್ ಮಾಡ್ಬೇಡಿ ಅಂದ ಸಹಪಾಠಿಗೆ ಚಾಕು ಇರಿತ!

    ಬೆಂಗಳೂರು: ಕಾಲೇಜಿನಲ್ಲಿ ವಿದ್ಯಾರ್ಥಿನಿಯರನ್ನು ರೇಗಿಸಬೇಡಿ ಈ ರೀತಿ ರೇಗಿಸೋದ್ರಿಂದ ನಿಮಗೆ ಕೆಟ್ಟ ಹೆಸರು ಬರುವುದಲ್ಲದೇ ಕಾಲೇಜಿಗೂ ಕೆಟ್ಟ ಹೆಸರು ಬರುತ್ತೆ ಅಂತ ಬುದ್ಧಿವಾದ ಹೇಳಿದಕ್ಕೆ ಸಹಪಾಠಿಯನ್ನೇ ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರಿನ ಜಯನಗರದಲ್ಲಿ ನಡೆದಿದೆ.

    ವಿದ್ಯಾರ್ಥಿಗೆ ಚಾಕು ಇರಿದಿರುವ ಸಹಪಾಠಿಗಳು ನಮಗೆ ಬುದ್ಧಿವಾದ ಹೇಳ್ತಿಯಾ? ನಾವು ನಿನ್ನಂತೆಯೇ ಈ ಕಾಲೇಜಿಗೆ ಸೇರಿಕೊಂಡಿರೋದು, ನಮ್ಮ ಇಷ್ಟ ಬಂದ ಹಾಗೇ ಮಾಡ್ತೀವಿ ಅಂತ ಕ್ಯಾತೆ ತೆಗೆದಿದ್ದಾರೆ. ಆದರೆ ಇದನ್ನು ವಿದ್ಯಾರ್ಥಿ ವಿರೋಧಿಸಿದ್ದಕ್ಕಾಗಿ ಕಾಲೇಜಿನಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ.

    ವಿಜಯ ಕಾಲೇಜಿನ ಆಡಳಿತ ಮಂಡಳಿ ವಿದ್ಯಾರ್ಥಿಗಳ ಜಗಳ ತಿಳಿದು ವಿದ್ಯಾರ್ಥಿಗಳನ್ನು ಅಮಾನತು ಮಾಡಿದ್ದಾರೆ. ಈ ವಿಚಾರಕ್ಕೆ ಬೇಸರವಾಗಿದ್ದರಿಂದ ಸೇಡು ತೀರಿಸಿಕೊಳ್ಳಲಿಕ್ಕಾಗಿ ವಿದ್ಯಾರ್ಥಿಯ ಮೇಲೆ ಚಾಕು ಚುಚ್ಚಿ ಪರಾರಿಯಾಗಿದ್ದಾರೆ. ವಿಚಾರ ತಿಳಿದ ಪೊಲೀಸರು ಬಾಲಾಪರಾಧಿಗಳನ್ನು ಬಂಧಿಸಿದ್ದಾರೆ.

  • ತರಗತಿಯಲ್ಲೇ ಸಹಪಾಠಿ ಮೇಲೆ ಶೂಟೌಟ್- ಶಾಕಿಂಗ್ ವಿಡಿಯೋ ವೈರಲ್

    ತರಗತಿಯಲ್ಲೇ ಸಹಪಾಠಿ ಮೇಲೆ ಶೂಟೌಟ್- ಶಾಕಿಂಗ್ ವಿಡಿಯೋ ವೈರಲ್

    ಚಂಡೀಗಢ: ತರಗತಿಯೊಳಗೇ ಸಹಪಾಠಿಯೊಬ್ಬನಿಗೆ ವಿದ್ಯಾರ್ಥಿ ಶೂಟೌಟ್ ಮಾಡಿದ ಆಘಾತಕಾರಿ ಘಟನೆಯೊಂದು ಹರಿಯಾಣದಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಈ ಘಟನೆ ಶುಕ್ರವಾರ ಹರಿಯಾಣದ ಸೊನಿಪತ್ ನಲ್ಲಿರೋ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ(ಐಟಿಐ) ನಡೆದಿದೆ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ನಡೆದಿದ್ದೇನು?: ತರಗತಿಯೊಳಗೆ ಬಂದ ವಿದ್ಯಾರ್ಥಿಯೊಬ್ಬ ತನ್ನ ಸಹಪಠಿಗಳೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ಬಂದ ಇಬ್ಬರು ವಿದ್ಯಾರ್ಥಿಗಳಲ್ಲಿ ಓರ್ವ ತನ್ನ ಬ್ಯಾಗ್ ನಿಂದ ದೆಶೀ ನಿರ್ಮಿತ ಪಿಸ್ತೂಲ್ ಒಂದನ್ನು ತೆಗೆದು ಏಕಾಏಕಿ ಆತನ ಮೇಲೆ ಗುಂಡು ಹಾರಿಸಿದ್ದಾನೆ. ಪರಿಣಾಮ ವಿದ್ಯಾರ್ಥಿ ಗಂಭೀರ ಗಾಯಗೊಂಡಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ. ಕೂಡಲೇ ಉಳಿದ ವಿದ್ಯಾರ್ಥಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಹಳೆಯ ದ್ವೇಷದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಈ ಕೃತ್ಯ ಎಸಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿಯನ್ನು ಸೊನಿಪತ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆಗಾಗಿ ರೋಹ್ಟಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಇಬ್ಬರು ಆರೋಪಿಗಳು 17 ವರ್ಷ ವಯಸ್ಸಿನವರಾಗಿದ್ದು, ಸದ್ಯ ತಲೆಮರೆಸಿಕೊಂಡಿದ್ದಾರೆ. ಇವರಿಬ್ಬರ ವಿರುದ್ಧ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ.