Tag: ಸಹನಾ

  • ದರ್ಶನ್ ಜಾಮೀನು ರದ್ದು; ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ: ರೇಣುಕಾಸ್ವಾಮಿ ಪತ್ನಿ

    ದರ್ಶನ್ ಜಾಮೀನು ರದ್ದು; ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ: ರೇಣುಕಾಸ್ವಾಮಿ ಪತ್ನಿ

    – ಮಗನ ಆತ್ಮಕ್ಕೆ ಶಾಂತಿ ಸಿಕ್ಕಂತಾಯ್ತು: ರೇಣುಕಾಸ್ವಾಮಿ ತಾಯಿ

    ಚಿತ್ರದುರ್ಗ: ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗಬೇಕು. ಕಾನೂನು ಅನ್ವಯ ತಕ್ಕ ಶಿಕ್ಷೆ ಆಗಲಿ ಎಂದು ರೇಣುಕಾಸ್ವಾಮಿ (Renukaswamy) ಪತ್ನಿ ಸಹನಾ ಹೇಳಿದ್ದಾರೆ.

    ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ದರ್ಶನ್ ಸೇರಿದಂತೆ ಎಲ್ಲಾ 7 ಆರೋಪಿಗಳ ಜಾಮೀನನ್ನು ಸುಪ್ರೀಂಕೋರ್ಟ್ (Supreme Court) ರದ್ದುಗೊಳಿಸಿದೆ. ಅಲ್ಲದೇ ಎಲ್ಲಾ ಆರೋಪಿಗಳು ಕೂಡಲೇ ಶರಣಾಗುವಂತೆ ಕೋರ್ಟ್ ಸೂಚಿಸಿದೆ. ಶರಣಾಗದಿದ್ದರೆ ವಶಕ್ಕೆ ಪಡೆಯುವಂತೆ ಪೊಲೀಸರಿಗೆ ಕೋರ್ಟ್ ಸೂಚಿಸಿದೆ. ಸುಪ್ರೀಂ ಕೋರ್ಟ್ ಮಹತ್ವದ ಆದೇಶವನ್ನು ರೇಣುಕಾಸ್ವಾಮಿ ಕುಟುಂಬ ಸ್ವಾಗತಿಸಿದೆ. ಇದನ್ನೂ ಓದಿ: ದರ್ಶನ್‌ ಜಾಮೀನು ರದ್ದು | ಕಾನೂನು ಎಲ್ಲರಿಗೂ ಒಂದೇ ಎಂಬ ಸಂದೇಶ ಸಾರಿದ ಸುಪ್ರೀಂ: ವಕೀಲ ಚಿದಾನಂದ್

    ಇನ್ನು ಈ ಕುರಿತು ರೇಣುಕಾಸ್ವಾಮಿ ಚಿಕ್ಕಪ್ಪ ಷಡಾಕ್ಷರಿ ಮಾತನಾಡಿ, ಸರ್ಕಾರ ಮುಂದೆ ಹೋಗದಿದ್ದರೆ ತಪ್ಪು, ಸರಿ ಅರ್ಥ ಆಗ್ತಿರಲಿಲ್ಲ. ಶೀಘ್ರ, ತ್ವರಿತ ವಿಚಾರಣೆಗೆ ಸುಪ್ರೀಂ ಆದೇಶಿಸಿದೆ. ಟ್ರಯಲ್‌ಕೋರ್ಟ್ ವಿಚಾರಣೆಗೆ ನಾವು ಒತ್ತಾಯಿಸಿದ್ದೆವು. ಸುಪ್ರೀಂ ಕೂಡ ನಮಗೆ ನ್ಯಾಯ ಒದಗಿಸಿದೆ. ಕಾನೂನನ್ನು ಗೌರವಿಸುತ್ತೇವೆ. ತಪ್ಪು ಮಾಡಿದವರಿಗೆ ತಕ್ಕ ಶಾಸ್ತಿಯಾಗಿದೆ. ಚಿಕ್ಕ ವಯಸ್ಸಿನ ರೇಣುಕಾಸ್ವಾಮಿ ಪತ್ನಿ ಸಹನ, ಚಿಕ್ಕ ಹೆಣ್ಣುಮಗಳು. ಆಕೆಗೆ ವಿಶೇಷ ಪ್ರಕರಣದಡಿ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ದರ್ಶನ್‌ಗೆ VIP ಟ್ರೀಟ್‌ಮೆಂಟ್ ಕೊಟ್ರೆ ಹುಷಾರ್ – ಜೈಲಾಧಿಕಾರಿಗಳಿಗೆ ಸುಪ್ರೀಂ ಎಚ್ಚರಿಕೆ

    ಈ ಬಗ್ಗೆ ಮಾತನಾಡಿದ ರೇಣುಕಾಸ್ವಾಮಿ ತಾಯಿ ರತ್ನಮಾಲ, ಬೇಲ್ ರದ್ದುಪಡಿಸಿರೋದು ಸ್ವಾಗತಾರ್ಹ. ಮಗನ ಸಾವಿಗೆ ನ್ಯಾಯ ಸಿಕ್ಕಿದೆ. ಕೋರ್ಟ್, ಕಾನೂನಿನ ಬಗ್ಗೆ ನಂಬಿಕೆ ಇದೆ. ಇಂದು ಮನೆದೇವರಿಗೆ ಅಭಿಷೇಕ ಸಲ್ಲಿಸಲು ಹೊರಟಿದ್ದೆವು. ಇಂದೇ ತೀರ್ಪು ಇರುವ ಬಗ್ಗೆ ಮಾಹಿತಿ ಇರಲಿಲ್ಲ. ಇಂದು ಒಳ್ಳೆಯ ತೀರ್ಪು ಬಂದಿದೆ. ಮಗನ ಆತ್ಮಕ್ಕೆ ಶಾಂತಿ ಸಿಕ್ಕಂತಾಯ್ತು ಎಂದರು. ಇದನ್ನೂ ಓದಿ: ಕೊಲೆ ಕೇಸಲ್ಲಿ ಜಾಮೀನು ರದ್ದು – ಮತ್ತೆ ಜೈಲಿಗೆ ದರ್ಶನ್

  • ನಮಗೆ ಪರಿಹಾರ ಬೇಡ, ಮಗಳನ್ನು ತಂದುಕೊಡಿ: ಚೆಕ್ ಕೊಡಲು ಬಂದ ಡಿಸಿ ಮುಂದೆ ಸಹನಾ ಪೋಷಕರ ಕಣ್ಣೀರು

    ನಮಗೆ ಪರಿಹಾರ ಬೇಡ, ಮಗಳನ್ನು ತಂದುಕೊಡಿ: ಚೆಕ್ ಕೊಡಲು ಬಂದ ಡಿಸಿ ಮುಂದೆ ಸಹನಾ ಪೋಷಕರ ಕಣ್ಣೀರು

    – ಸಮಾಧಾನಪಡಿಸಿ ಪರಿಹಾರದ ಚೆಕ್ ನೀಡಿದ ಕೋಲಾರ ಡಿಸಿ

    ಕೋಲಾರ: ನಮಗೆ ಚೆಕ್ ಬೇಡ, ಪರಿಹಾರವೂ ಬೇಡ ನಮಗೆ ನಮ್ಮ ಮಗಳು ಬೇಕು ಅವಳನ್ನು ತಂದು ಕೊಡಿ. ನಾವೇ ನಿಮಗೆ ಬೇಕಾದರೆ ಮನೆ, ಜಮೀನು, ಆಸ್ತಿ ಪಾಸ್ತಿ ಎಲ್ಲವನ್ನೂ ಮಾರಿ ನಿಮಗೆ ಹತ್ತರಷ್ಟು ಹಣ ಕೊಡ್ತೀವಿ ಎಂದು ಜಿಲ್ಲಾಡಳಿತದ ಎದುರು ಕಾಲ್ತುಳಿತ ದುರಂತದಲ್ಲಿ ಮೃತಪಟ್ಟ ಸಹನಾ ತಂದೆ ಸುರೇಶ್ ಕಣ್ಣೀರಿಟ್ಟರು.

    ನಮಗೆ ಪರಿಹಾರ ಬೇಡ, ನಮಗೆ ನನ್ನ ಮಗಳು ಬೇಕು ಎಂದು ಸಹನಾ ತಂದೆ ಗೋಳಾಡಿದರು. ಆಗ ನೆರೆಹೊರೆಯವರು ಸಮಾಧಾನಪಡಿಸಿದರು. ನಂತರ ಕೋಲಾರ ಜಿಲ್ಲಾಧಿಕಾರಿ, ಮೃತರ ಕುಟುಂಬಸ್ಥರಿಗೆ ಪರಿಹಾರದ ಚೆಕ್ ನೀಡಿದರು.

    ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಕೋಲಾರ ಮೂಲದ ಟೆಕ್ಕಿ ಸಹನಾ ಸಾವನ್ನಪ್ಪಿದ್ದರು. ಮೃತರ ಕುಟುಂಬಸ್ಥರಿಗೆ ಸರ್ಕಾರ 25 ಲಕ್ಷ ರೂ. ಪರಿಹಾರ ಘೋಷಿಸಿತ್ತು. ಪರಿಹಾರದ ಚೆಕ್ ವಿತರಿಸಲು ಜಿಲ್ಲಾಧಿಕಾರಿಗಳು, ಕೋಲಾರ ನಗರದ ಎಸ್.ಜಿ.ಲೇಔಟ್‌ಗೆ ತೆರಳಿದ್ದರು. ಈ ವೇಳೆ ಸಹನಾ ತಂದೆ, ಜಿಲ್ಲಾಧಿಕಾರಿಗಳ ಎದುರು ಕಣ್ಣೀರಿಟ್ಟರು. ‘ನಮಗೆ ಪರಿಹಾರದ ಚೆಕ್ ಬೇಡ, ನನಗೆ ನಮ್ಮ ಮಗಳು ಬೇಕು’ ಎಂದು ಗೋಳಾಡಿದರು.

    ಈ ವೇಳೆ ಜೊತೆಗಿದ್ದ ಸ್ನೇಹಿತರು ಹಾಗೂ ಕುಟುಂಬ ವರ್ಗದವರು ಸಮಾಧಾನ ಪಡಿಸಿದ ನಂತರ ತನ್ನ ಪತ್ನಿ ಹಾಗೂ ಮಗಳೊಂದಿಗೆ ಪರಿಹಾರದ ಚೆಕ್ ಪಡೆದುಕೊಂಡರು. ಈ ವೇಳೆ ಮಾತನಾಡಿದ ಸಹನಾ ತಂದೆ ಸುರೇಶ್ ಬಾಬು, ನಮ್ಮ ಮನೆ, ಆಸ್ತಿ, ಜಮೀನು ಎಲ್ಲವನ್ನು ಮಾರಿ ನಿಮಗೆ ಅದರ ಹತ್ತುಪಟ್ಟು ಬೇಕಾದ್ರೆ ಹಣ ಕೊಡುತ್ತೇವೆ. ನಮಗೆ ನಮ್ಮ ಮಗಳನ್ನು ತಂದು ಕೊಡಿ ಎಂದು ತಮ್ಮ ನೋವನ್ನು ಹೊರಹಾಕಿದರು.

    ಸರ್ಕಾರ ಮಾಡಿದ ಅದೊಂದು ಬೇಜವಾಬ್ದಾರಿ ವ್ಯವಸ್ಥೆಯಿಂದಾಗಿ ಇವತ್ತು ಅದೆಷ್ಟೋ ಜನರು ಮಕ್ಕಳನ್ನು ಕಳೆದುಕೊಂಡು ಕಣ್ಣೀರಾಕುವ ಸ್ಥಿತಿ ಎದುರಾಗಿದೆ. ಸರ್ಕಾರ ಇನ್ನಾದರು ಇಂಥ ಕಾರ್ಯಕ್ರಮಗಳನ್ನು ಮಾಡುವಾಗ ಜವಾಬ್ದಾರಿಯಿಂದ ಮಾಡಿ. ನಮ್ಮಂತೆ ಯಾವ ತಂದೆ-ತಾಯಿಯೂ ಕಣ್ಣೀರು ಹಾಕದಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿಕೊಂಡರು.

  • ಇಂಟರ್ವಲ್ ಮೂಲಕ ನಾಯಕಿಯಾಗಿ ಸಹನಾ ಆಗಮನ!

    ಇಂಟರ್ವಲ್ ಮೂಲಕ ನಾಯಕಿಯಾಗಿ ಸಹನಾ ಆಗಮನ!

    ರತ್ ವರ್ಷ (Bharath Varsha) ನಿರ್ದೇಶನದ ‘ಇಂಟರ್ವಲ್’ (Interval) ಚಿತ್ರ ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿಕೊಂಡಿದೆ. ಇದು ಹೊಸತನ ತುಂಬಿರುವ ಸಿನಿಮಾ ಮಾತ್ರವಲ್ಲ, ಹೊಸಬರೇ ತುಂಬಿಕೊಂಡಿರುವ ಚಿತ್ರವು ಹೌದು. ಸಿನಿಮಾ ಕನಸಿಟ್ಟುಕೊಂಡು, ಅದನ್ನು ನನಸಾಗಿಸಿಕೊಳ್ಳೋದು ಅದೆಷ್ಟು ಕಷ್ಟದ ಸಂಗತಿ ಅನ್ನೋ ವಿಚಾರ ನಿರ್ದೇಶಕರಿಗೆ ಸ್ಪಷ್ಟವಾಗಿ ಅರಿವಿದೆ. ಈ ಕಾರಣದಿಂದಲೇ ತಮ್ಮ ಮೊದಲ ಹೆಜ್ಜೆಯಂಥ ‘ಇಂಟರ್ವಲ್’ ಸಿನಿಮಾದ ನಾನಾ ವಿಭಾಗಗಳಲ್ಲಿ ಒಂದಷ್ಟು ಹೊಸ ಪ್ರತಿಭಾನ್ವಿತರಿಗೆ ಅವಕಾಶ ಮಾಡಿ ಕೊಟ್ಟಿದ್ದಾರೆ. ಇದರ ಫಲವಾಗಿಯೇ ಈ ಸಿನಿಮಾದ ನಾಯಕಿಯರಲ್ಲೊಬ್ಬರಾಗಿ ಸಹನಾ (Sahana) ನಟಿಸಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ನವನಾಯಕಿಯ ಆಗಮನವಾಗಿದೆ. ಇದನ್ನೂ ಓದಿ:ಇಂಟರ್ವಲ್ ಬಗ್ಗೆ ಸೃಷ್ಟಿಕರ್ತ ಸುಕಿ ತೆರೆದಿಟ್ಟ ಬೆರಗಿನ ಸಂಗತಿ!

    ‘ಇಂಟರ್ವಲ್’ ಫ್ಯಾಮಿಲಿ ಕಾಮಿಡಿ ಡ್ರಾಮಾ ಜಾನರಿಗೊಳಪಡುವ ಚಿತ್ರ. ಇದರಲ್ಲಿ ಇಂಜಿನಿಯರಿಂಗ್ ಮುಗಿಸಿಕೊಂಡು ಕೆಲಸ ಅರಸಿ ಹೊರಡುವ ಮಧ್ಯಮ ವರ್ಗದ ಹುಡುಗರ ಕಥನವಿದೆ. ಇದರೊಂದಿಗೆ ಪ್ರಸ್ತುತ ಸಮಾಜದ ನಾನಾ ವಿಚಾರಗಳ ಬಗ್ಗೆ ಮನಮುಟ್ಟುವಂತೆ ಚಿತ್ರಿಸಲಾಗಿರೋ ಸೂಚನೆ ಈಗಾಗಲೇ ಸಿಕ್ಕಿದೆ. ಅದರ ಜೊತೆಗೆ ಬೇರೆ ಬೇರೆ ವಾತಾವರಣದ ಹೆಣ್ಣುಮಕ್ಕಳ ಮನಃಸ್ಥಿತಿಯನ್ನೂ ಕೂಡ ಕೆಲ ಪಾತ್ರಗಳ ಮೂಲಕ ಅನಾವರಣಗೊಳಿಸಲಾಗಿದೆ. ಅದರ ಭಾಗವಾಗಿ ಸಹನಾ ಈ ಸಿನಿಮಾದ ನಾಯಕಿಯರಲ್ಲೊಬ್ಬರಾಗಿ ಹಳ್ಳಿ ಶೇಡಿನ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಈ ಮೂಲಕ ನಟಿಯಾಗಬೇಕೆಂಬ ಕನಸಿನೊಂದಿಗೆ, ಒಂದಷ್ಟು ಸೀರಿಯಲ್‌ಗಳಲ್ಲಿ ಕಾಣಿಸಿಕೊಂಡಿದ್ದ ಸಹನಾ ಪಾಲಿಗೆ ಚೆಂದದ ಅವಕಾಶ ‘ಇಂಟರ್ವಲ್’ ಮೂಲಕ ಕೂಡಿ ಬಂದಂತಾಗಿದೆ. ಇದನ್ನೂ ಓದಿ:ಭರತನಾಟ್ಯ ಪ್ರವೀಣೆ ಚರಿತ್ರಾಗೀಗ ಇಂಟರ್ವಲ್‌ನದ್ದೇ ಧ್ಯಾನ!

     

    View this post on Instagram

     

    A post shared by PUBLiC TV (@publictv)


    ‘ಇಂಟರ್ವಲ್’ ಚಿತ್ರದ ಈ ಪಾತ್ರಕ್ಕಾಗಿ ಸಹನಾ ಆಯ್ಕೆಯಾಗಿರೋದು ಆಡಿಷನ್ ಮೂಲಕ. ಒಟ್ಟಾರೆ ಕಥೆ ಮತ್ತು ತಮ್ಮ ಪಾತ್ರದ ಚಹರೆ ಕಂಡು ಥ್ರಿಲ್ ಆಗಿದ್ದ ಸಹನಾ, ಹಳ್ಳಿ ಹುಡುಗಿಯ ಪಾತ್ರಕ್ಕೆ ಶಕ್ತಿಮೀರಿ ಜೀವ ತುಂಬಿದ ಖುಷಿ ಹೊಂದಿದ್ದಾರೆ. ಈ ಪಾತ್ರದ ಮೂಲಕ ನಟಿಯಾಗಿ ತನ್ನ ವೃತ್ತಿ ಬದುಕಿಗೆ ಹೊಸ ತಿರುವು ಸಿಗುವ ನಿರೀಕ್ಷೆ ಹೊಂದಿದ್ದಾರೆ. ಪ್ರೀತಿ ಮತ್ತು ಮುಗ್ಧತೆಯನ್ನು ಜೀವಾಳವಾಗಿಸಿಕೊಂಡಿರೋ ಇಂಟರ್ವಲ್ ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡಿರುವ ಸಹನಾ ತಿಪಟೂರು ಅರಸೀಕೆರೆ ನಡುಭಾಗದಲ್ಲಿರೋ ಹನಿಕೆರೆ ಮೂಲದವರು. ತಾತ ಹಾಗೂ ತಂದೆ ಮೂಡಲಪಾಯ ಶೈಲಿಯ ಯಕ್ಷಗಾನ ಕಲಾವಿದರಾದ್ದರಿಂದ ಕಲೆಯ ಸೆಳೆತ ಚಿಕ್ಕಂದಿನಿಂದಲೇ ಅವರನ್ನು ಆವರಿಸಿಕೊಂಡಿತ್ತು.

    ಇಂಜಿನಿಯರಿಂಗ್ ಪದವಿ ಪಡೆದ ನಂತರ ಒಂದೊಳ್ಳೆ ಕೆಲಸ ಹಿಡಿದು ಸೆಟಲ್ ಆಗೋ ಅವಕಾಶವಿದ್ದರೂ ಕೂಡ ಸಹನಾ ನಟಿಯಾಗಬೇಕೆಂಬ ಕನಸಿನ ಚುಂಗು ಹಿಡಿದು ಹೊರಟಿದ್ದರು. ನಂತರ ಒಂದಷ್ಟು ಸೀರಿಯಲ್‌ಗಳಲ್ಲಿ ಪುಟ್ಟ ಪಾತ್ರಗಳನ್ನು ನಿರ್ವಹಿಸುವ ಮೂಲಕ ಅನುಭವ ದಕ್ಕಿಸಿಕೊಂಡಿದ್ದರು. ಇದೀಗ ಇಂಟರ್ವಲ್ ಮೂಲಕ ಆಕೆ ನಾಯಕಿಯಾಗಿ ಆಗಮಿಸಿದ್ದಾರೆ. ‘ಸತ್ಯ’ ಸೀರಿಯಲ್‌ನ ಬಾಲಾ ಪಾತ್ರಧಾರಿ ಶಶಿರಾಜ್ (Shashi Raj) ಈ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ರಂಗಭೂಮಿ ಕಲಾವಿದ ಪ್ರಜ್ವಲ್ ಗೌಡ, ಸುಕಿ ಮತ್ತು ರಂಗನಾಥ್ ಶಿವಮೊಗ್ಗ ಮುಂತಾದವರು ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ. ರಾಜ್‌ಕಾಂತ್ ಛಾಯಾಗ್ರಹಣ, ಪ್ರಮೋದ್ ಮರವಂತೆ ಮತ್ತು ಸುಖಿ ಸಾಹಿತ್ಯ ಹಾಗೂ ಶಶಿಧರ್ ಸಂಕಲನ ಈ ಚಿತ್ರಕ್ಕಿದೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯ ಜವಾಬ್ದಾರಿಯನ್ನು ಸುಕಿ ನಿಭಾಯಿಸಿದ್ದಾರೆ. ಈ ಒಟ್ಟಾರೆ ಕಥನ, ಪಾತ್ರವರ್ಗ ಪ್ರೇಕ್ಷಕರಿಗೆ ಮೆಚ್ಚುಗೆಯಾಗಿದೆ. ಈ ಕಾರಣದಿಂದಲೇ ಎಲ್ಲ ಸವಾಲುಗಳನ್ನು ಮೀರಿಕೊಂಡು ಇಪ್ಪತೈದು ದಿನಗಳನ್ನು ಪೂರೈಸಿಕೊಂಡಿರುವ ‘ಇಂಟರ್ವಲ್’ ಚಿತ್ರಮಂದಿರಲ್ಲಿದಲ್ಲಿ ಮುನ್ನುಗ್ಗುತ್ತಿದೆ.

  • ಗಂಡು ಮಗುವಿಗೆ ಜನ್ಮ ನೀಡಿದ ರೇಣುಕಾಸ್ವಾಮಿ ಪತ್ನಿ ಸಹನಾ – ಕುಟುಂಬದಲ್ಲಿ ಹರ್ಷ

    ಗಂಡು ಮಗುವಿಗೆ ಜನ್ಮ ನೀಡಿದ ರೇಣುಕಾಸ್ವಾಮಿ ಪತ್ನಿ ಸಹನಾ – ಕುಟುಂಬದಲ್ಲಿ ಹರ್ಷ

    ಚಿತ್ರದುರ್ಗ: ನಟ ದರ್ಶನ್ (Darshan) ಮತ್ತು ಗ್ಯಾಂಗ್‌ನಿಂದ ಕೊಲೆಯಾದ ರೇಣುಕಾಸ್ವಾಮಿ (Renukaswamy) ಪತ್ನಿ ಸಹನಾ ಬುಧವಾರ (ಅ.16) ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

    ಚಿತ್ರದುರ್ಗ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸಹನಾಗೆ (Sahana) ಹೆರಿಗೆಯಾಗಿದೆ. ರೇಣುಕಾಸ್ವಾಮಿ ಹತ್ಯೆ ಘಟನೆ ವೇಳೆ 5 ತಿಂಗಳ ಗರ್ಭಿಣಿಯಾಗಿದ್ದ ಸಹನಾ, ಗಂಡನ ಸಾವಿನಿಂದ ಭಾರಿ ಆತಂಕಕ್ಕೀಡಾಗಿದ್ದರು. ರೇಣುಕಾಸ್ವಾಮಿ ಸಾವಿನ ನಂತರ ಆತನ ರೂಪದಲ್ಲಿ ಮನೆಗೆ ಗಂಡು ಮಗು ಮರಳಿ ಬರಬಹುದೆಂಬ ನಿರೀಕ್ಷೆಯಲ್ಲಿದ್ರು. ಅಂತೆಯೇ ರೇಣುಕಾಸ್ವಾಮಿ ಕುಟುಂಬಸ್ಥರ ನಂಬಿಕೆಯಂತೆ ಗಂಡು ಮಗುವಿಗೆ ಸಹನಾ ಜನ್ಮ ನೀಡಿದ್ದಾರೆ.

    ಹೀಗಾಗಿ ಇದ್ದ ಓರ್ವ ಮಗನನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ರೇಣುಕಾಸ್ವಾಮಿ ಪೋಷಕರಿಗೆ ಮೊಮ್ಮಗನ ಆಗಮನದಿಂದ ಸ್ವಲ್ಪ ಸಮಾಧಾನ ತಂದಿದೆ. ಈ ವಿಚಾರ ರೇಣುಕಾಸ್ವಾಮಿ ಕುಟುಂಬದ ಮೂಲಗಳಿಂದ ಮಾಹಿತಿ ತಿಳಿದಿದೆ. ಇದನ್ನೂ ಓದಿ: ದರ್ಶನ್, ಪವಿತ್ರಾಗೌಡ ಜಾಮೀನು ಅರ್ಜಿ ವಜಾ; ನ್ಯಾಯಾಲಯದ ತೀರ್ಪನ್ನು ಗೌರವಿಸ್ತೇವೆ: ರೇಣುಕಾಸ್ವಾಮಿ ತಂದೆ

    ಇನ್ನೂ ಈ ಕುರಿತು ಮಾಧುಮಗಳೊಂದಿಗೆ ಪ್ರತಿಕ್ರಿಯಿಸಿದ ರೇಣುಕಾಸ್ವಾಮಿ ತಂದೆ ಕಾಶೀನಾಥ್ ಶಿವನಗೌಡ್ರು ಭಾವುಕರಾಗಿದ್ದಾರೆ. ಬೆಳಿಗ್ಗೆ 6.55ಕ್ಕೆ ಗಂಡು ಮಗುವಿಗೆ ಸಹನ‌ಜನ್ಮ ನೀಡಿದ್ದಾರೆ. ತಾಯಿ-ಮಗು ಇಬ್ಬರು ಆರೋಗ್ಯವಾಗಿದ್ದಾರೆ. ನಮ್ಮ ಸೊಸೆ ಗಂಡು ಮಗುವಿಗೆ ಜನ್ಮ ನೀಡಿರೋದು ಮಗನೇ ಮರಳಿ ಬಂದಷ್ಟು ಸಂತಸವಾಗಿದೆ ಎಂದು ಭಾವುಕರಾಗಿದ್ದಾರೆ. ಇದನ್ನೂ ಓದಿ: ಸಿಎಂ ರಾಜೀನಾಮೆ ಸುಳಿವು ಸಿಕ್ಕಿದ್ದು ನಾನು ಸಿಎಂ, ನೀನು ಸಿಎಂ ಅಂತ ಕೈ ನಾಯಕರು ಓಡಾಡ್ತಿದ್ದಾರೆ : ಕಾರಜೋಳ

    ಆಸ್ಪತ್ರೆಯ ವೈದ್ಯರು ಉಚಿತ ಚಿಕಿತ್ಸೆ ನೀಡಿದ್ದರು. ನಾರ್ಮಲ್ ಡೆಲಿವರಿ ಮಾಡಿಸಿದ್ದಾರೆ ಎಂದು ಖಾಸಗಿ ಆಸ್ಪತ್ರೆ ವೈದ್ಯರಾದ ಡಾ. ಮಲ್ಲಿಕಾರ್ಜುನ ಹಾಗೂ ಸಿಬ್ಬಂದಿಗೆ ಧನ್ಯವಾದ ಹೇಳಿದ್ದಾರೆ. ಇದನ್ನೂ ಓದಿ: ಹರಿಯಾಣದಲ್ಲಿ ಕಾಂಗ್ರೆಸ್‌ಗೆ ಅಧಿಕಾರದ ಭರವಸೆಯಿತ್ತು, 3ನೇ ಬಾರಿಗೆ ಬಿಜೆಪಿಗೆ ಅಧಿಕಾರ ಸಿಗುತ್ತಿದೆ: ರಾಮಲಿಂಗಾ ರೆಡ್ಡಿ

  • ‘ಡಾನ್ ಕುಮಾರ’ ಹೆಸರಿನಲ್ಲಿ ಮತ್ತೊಂದ ಭೂಗತ ಕಥೆ

    ‘ಡಾನ್ ಕುಮಾರ’ ಹೆಸರಿನಲ್ಲಿ ಮತ್ತೊಂದ ಭೂಗತ ಕಥೆ

    ಭೂಗತ ಲೋಕದ ಚಿತ್ರಗಳು ಸಾಕಷ್ಟು ತೆರೆಕಂಡಿವೆ. ಆ ಸಾಲಿಗೆ ’ಡಾನ್ ಕುಮಾರ’ (Don Kumar) ಸಿನಿಮಾ ಹೊಸದಾಗಿ ಸೇರ್ಪಡೆಯಾಗಿದೆ. ಈ ಚಿತ್ರಕ್ಕೆ ರಿಯಲ್ ಸ್ಟೋರಿ, ರಿಯಲ್ ಡಾನ್ ಎನ್ನುವ ಅಡಬರಹವಿದ್ದು, ಎನ್.ನಾಗೇಶ್‌ಕುಮಾರ್ (Nagesh Kumar) ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಮಗನ ಸಲುವಾಗಿ ತಂದೆ ಡಿ.ಎಂ.ನರಸೇಗೌಡರು ಬಂಡವಾಳ ಹೂಡಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ಟ್ರೈಲರ್  (Trailer)ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

    ನಿರ್ದೇಶಕರು ಹೇಳುವಂತೆ, ‘ನಮ್ಮ ಸಿನಿಮಾವು ರೆಗ್ಯುಲರ್ ತರಹ ಇರಲ್ಲ. ನಿರೂಪಣೆ ಎಲ್ಲವೂ ವಿಶೇಷವಾಗಿರುತ್ತದೆ. 15 ಸಾಹಸ ದೃಶ್ಯಗಳಿವೆ. ಎಲ್ಲವು ರಿಯಲ್ ಫೈಟ್ಸ್ ಆಗಿದ್ದು, ಸಾಮಾನ್ಯ ಮನುಷ್ಯ ಜಗಳವಾಡಿದರೆ ಹೇಗಿರುತ್ತೋ ಅದೇ ರೀತಿಯಲ್ಲಿ, ನಾಟಕೀಯದಂತೆ ಇರದೆ  ಸಂಯೋಜನೆ ಮಾಡಲಾಗಿದೆ. ಭೂಗತ ಲೋಕದ ಸನ್ನಿವೇಶಗಳು ಇದ್ದರೂ, ಲವ್, ರೋಮ್ಯಾನ್ಸ್, ತಂದೆ ತಾಯಿ ಸೆಂಟಿಮೆಂಟ್ ಎಲ್ಲವು ಇರಲಿದೆ. ರೌಡಿಸಂ ಯಾಕೆ ಆಗುತ್ತೆ. 1990-2000 ನಡೆದಂತಹ ಒಂದಷ್ಟು ಘಟನೆಗಳನ್ನು ಬಳಸಲಾಗಿದೆ. ಆದರೆ ಯಾವುದೇ ವ್ಯಕ್ತಿಗೆ ಅನ್ವಯಿಸುವುದಿಲ್ಲ’ ಎನ್ನುತ್ತಾರೆ. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ರಾಧಿಕಾ ರಾವ್

    ಶೀರ್ಷಿಕೆ ಹೆಸರಿನಲ್ಲಿ ಚಂದ್ರಶೇಖರ್ (Chandrasekhar) ನಾಯಕ. ಸಹನಾ (Sahana) ಮತ್ತು ಪ್ರಕೃತಿ (Prakruti) ನಾಯಕಿಯರು. ಐಟಂ ಹಾಡಿಗೆ ನಮೃತಾಮಲ್ಲ ಹೆಜ್ಜೆ ಹಾಕಿದ್ದಾರೆ. ಉಳಿದಂತೆ ಮಿಮಿಕ್ರಿಗೋಪಿ ಅಲ್ಲದೆ ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಆರವ್‌ ಋಷಿಕ್ ಸಂಗೀತದ ಐದು ಗೀತೆಗಳಿಗೆ ಅನಿರುದ್‌ ಶಾಸ್ತ್ರಿ, ಅನುರಾಧ ಭಟ್, ನಿಮಿಕಾ ರತ್ನಾಕರ್, ಅವಿನಾಶ್‌ ಛಬ್ಬಿ ಕಂಠದಾನ ಮಾಡಿದ್ದಾರೆ.

     

    ಆನಂದ್‌ ದಿಂಡವಾರ್ ಛಾಯಾಗ್ರಹಣ, ಧನುಕುಮಾರ್ ನೃತ್ಯ, ಶ್ರೀನಿವಾಸ.ಪಿ.ಬಾಬು ಸಂಕಲನವಿದೆ. ಬೆಂಗಳೂರು, ಮೈಸೂರು, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ಹಾಗೂ ಸಿಂಗಾಪುರ್ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]