Tag: ಸಹದ್ಯೋಗಿ

  • ಮದ್ಯದ ಅಮಲಿನಲ್ಲಿ ಸಹೋದ್ಯೋಗಿ ತಲೆಗೆ ಕಲ್ಲಿನಿಂದ ಹೊಡೆದು ಕೊಂದ

    ಮದ್ಯದ ಅಮಲಿನಲ್ಲಿ ಸಹೋದ್ಯೋಗಿ ತಲೆಗೆ ಕಲ್ಲಿನಿಂದ ಹೊಡೆದು ಕೊಂದ

    ಮುಂಬೈ: ಮದ್ಯದ ಅಮಲಿನಲ್ಲಿ 22 ವರ್ಷದ ವ್ಯಕ್ತಿಯೋರ್ವ ತನ್ನ ಸಹೋದ್ಯೋಗಿಗೆ ಕಲ್ಲಿನಿಂದ ಹೊಡೆದು ಕೊಂದಿರುವ ಘಟನೆ ಮುಂಬೈನ ಪಶ್ಚಿಮ ಉಪನಗರ ಅಂಧೇರಿಯಲ್ಲಿ ನಡೆದಿದೆ.

    ಆರೋಪಿಯನ್ನು ಸುಶಾಂತ್ ಘೋಟ್ಕರ್ ಎಂದು ಗುರುತಿಸಲಾಗಿದ್ದು, ಅಂಧೇರಿಯ ಮರೋಲ್ ಪ್ರದೇಶದಲ್ಲಿ ತನ್ನ ಸಹೋದ್ಯೋಗಿ ರಾಹುಲ್ ಗಾಯಕ್‍ವಾಡ್‍ನನ್ನು ಕೊಂದಿದ್ದಾನೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಏರ್ ಇಂಡಿಯಾ ವಿಶ್ವದಲ್ಲೇ ಅತ್ಯುತ್ತಮವಾಗಿಸುವುದು ನಮ್ಮ ಗುರಿ: ಎನ್ ಚಂದ್ರಶೇಖರನ್

    ಕಳೆದ ವಾರ ಇಬ್ಬರು ಮದ್ಯ ಸೇವಿಸಿ ಯಾವುದೋ ವಿಷಯಕ್ಕೆ ಜಗಳವಾಡಿದ ವೇಳೆ ಈ ಘಟನೆ ನಡೆದಿದ್ದು, ಸುಶಾಂತ್ ಘೋಟ್ಕರ್ ಸಹೋದ್ಯೋಗಿ ರಾಹುಲ್ ಗಾಯಕ್‍ವಾಡ್ ಮುಖದ ಮೇಲೆ ಅನೇಕ ಬಾರಿ ಕಲ್ಲಿನಿಂದ ಹೊಡೆದು ಸ್ಥಳದಿಂದ ಪರಾರಿಯಾಗಿದ್ದಾನೆ. ಬಳಿಕ ಶವ ಪತ್ತೆಯಾಗಿದ್ದು, ಗಾಯಕ್‍ವಾಡ್‍ನನ್ನು ಹತ್ಯೆಗೈದಿರುವುದಾಗಿ ಮತ್ತೊಬ್ಬ ಸಹೋದ್ಯೋಗಿಗೆ ಸುಶಾಂತ್  ತಿಳಿಸಿದ್ದರಿಂದ ಇದೀಗ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಘಟನೆ ಸಂಬಂಧ ಪೊಲೀಸರು ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಚೀನೀ ಟೆಲಿಕಾಂ ಕಂಪನಿ ಹುವಾವೇ ಮೇಲೆ ಐಟಿ ರೇಡ್

  • ಮಾನಸಿಕ ರೋಗಿಯಂತಿದ್ದ, ಯಾರೊಂದಿಗೂ ಮಾತನಾಡುತ್ತಿರಲಿಲ್ಲ: ಆದಿತ್ಯ ಸಹದ್ಯೋಗಿ

    ಮಾನಸಿಕ ರೋಗಿಯಂತಿದ್ದ, ಯಾರೊಂದಿಗೂ ಮಾತನಾಡುತ್ತಿರಲಿಲ್ಲ: ಆದಿತ್ಯ ಸಹದ್ಯೋಗಿ

    ಮಂಗಳೂರು: ಆದಿತ್ಯ ಮಾನಸಿಕ ರೋಗಿಯಂತೆ ಕಾಣುತ್ತಿದ್ದನು. ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ ಎಂದು ಆರೋಪಿ ಜೊತೆ ಕೆಲಸ ಮಾಡಿದ್ದ ಸಹದ್ಯೋಗಿಗಳು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾರೆ.

    ಈ ಬಗ್ಗೆ ಮಾತನಾಡಿದ ಆದಿತ್ಯ ಸಹದ್ಯೋಗಿ, ಡಿಸೆಂಬರ್ 16ರಂದು ಆದಿತ್ಯ ಕುಡ್ಲ ಫ್ಯಾಮಿಲಿ ರೆಸ್ಟೋರೆಂಟ್ ನಲ್ಲಿ ಕೆಲಸಕ್ಕೆ ಸೇರಿದ್ದು, ಇಲ್ಲಿ ಆತ ಬಿಲ್ಲಿಂಗ್ ಕೆಲಸ ಮಾಡುತ್ತಿದ್ದನು. ಜನವರಿ 13ರಂದು ಸಂಬಳವಾದ ನಂತರ ಆತ ರೆಸ್ಟೋರೆಂಟ್ ತೊರೆದಿದ್ದ. ಬಳಿಕ ಆತನ ಬಗ್ಗೆ ನಮಗೆ ಮಾಹಿತಿ ಇಲ್ಲ. ಆದಿತ್ಯ ಒಂದು ವಿಭಾಗದ ಬಿಲ್ಲಿಂಗ್ ಕೆಲಸ ಮಾತ್ರ ಮಾಡುತ್ತಿದ್ದನು. ಆದಿತ್ಯ ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ. ಸೈಲೆಂಟ್ ಆಗಿ ಇರುತ್ತಿದ್ದನು ಎಂದರು.  ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಉದ್ಯೋಗ ಸಿಗದ್ದಕ್ಕೆ ಬೆದರಿಕೆ ಕರೆ ಮಾಡಿದ್ದ ಬಾಂಬರ್ ಈಗ ಬಾಂಬ್ ಇಟ್ಟ

    ಅಲ್ಲದೆ ಆದಿತ್ಯ ಮಾನಸಿಕ ರೋಗಿಯಂತೆ ಕಾಣುತ್ತಿದ್ದನು. ಈ ಬಗ್ಗೆ ಆತನಿಗೆ ಪ್ರಶ್ನಿಸಿದಾಗ, ನನ್ನ ತಂದೆಗೆ ಹುಷಾರಾಗಿಲ್ಲ. ಹಾಗಾಗಿ ನಾನು ಈ ರೀತಿ ಇದ್ದೇನೆ ಎಂದು ಹೇಳುತ್ತಿದ್ದನು. ಆದರೆ ಬಿಲ್ಲಿಂಗ್ ಕೆಲಸ ಮಾತ್ರ ಚೆನ್ನಾಗಿ ಮಾಡುತ್ತಿದ್ದನು. ಆದಿತ್ಯ ಕೆಲಸ ಕೇಳಿ ಬರುವಾಗ ನಮ್ಮ ಮ್ಯಾನೇಜರ್ ಇದ್ದರು, ನಾನು ಇಲ್ಲಿ ಇರಲಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಮಂಗಳೂರು ಬಾಂಬರ್ ಅರೆಸ್ಟ್

    ಇದೇ ವೇಳೆ ಮತ್ತೊಬ್ಬ ಸಹದ್ಯೋಗಿ ಮಾತನಾಡಿ, ನಾವು ಆದಿತ್ಯ ಜೊತೆ ಹೆಚ್ಚು ಸಂಪರ್ಕದಲ್ಲಿ ಇರುತ್ತಿರಲಿಲ್ಲ. ಆತ ಎಷ್ಟು ಬೇಕೋ ಅಷ್ಟು ಮಾತನಾಡುತ್ತಿದ್ದನು. ನೀವು ಯಾಕೆ ಮಾತನಾಡಲ್ಲ ಎಂದು ನಾವು ಪ್ರಶ್ನಿಸಿದಾಗ, ನಾನು ಅಷ್ಟೇ ಮಾತನಾಡುವುದು ಎಂದು ಹೇಳುತ್ತಿದ್ದನು. ಆದಿತ್ಯ ಚಲನವಲನದ ಬಗ್ಗೆ ನಮಗೆ ಯಾವುದೇ ಸುಳಿವು ಸಿಕ್ಕಿಲ್ಲ. ಆದರೆ ಆದಿತ್ಯ ಜೊತೆ ಯಾವಾಗಲೂ ಒಂದು ಬ್ಯಾಗ್ ತನ್ನ ಜೊತೆಯಲ್ಲಿಯೇ ಇಟ್ಟುಕೊಳ್ಳುತ್ತಿದ್ದನು. ಹೊರಗೆ ಹೋಗುವಾಗಲೂ ಆ ಬ್ಯಾಗ್ ತನ್ನ ಜೊತೆಯಲ್ಲೇ ತೆಗೆದುಕೊಂಡು ಹೋಗುತ್ತಿದ್ದನು ಎಂದು ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಹೌದು, ಬಾಂಬ್ ಇಟ್ಟಿದ್ದು ನಾನೇ – ತಪ್ಪೊಪ್ಪಿಕೊಂಡ ಆದಿತ್ಯ ರಾವ್

    ಮಣಿಪಾಲ ಮೂಲದ ಆದಿತ್ಯ ರಾವ್ ಇಂದು ಬೆಳಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಅವರ ಕಚೇರಿಗೆ ಆಗಮಿಸಿ ಶರಣಾಗಿದ್ದಾನೆ. ಈಗ ಪೊಲೀಸರು ಈತನನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.

  • ನಂಬಿ ಮನೆಯೊಳಗೆ ಸೇರಿಸಿಕೊಂಡ್ಳು- ಬೆತ್ತಲೆ ಫೋಟೋ ತೆಗ್ದು ಬ್ಲಾಕ್‍ಮೇಲ್ ಮಾಡ್ದ

    ನಂಬಿ ಮನೆಯೊಳಗೆ ಸೇರಿಸಿಕೊಂಡ್ಳು- ಬೆತ್ತಲೆ ಫೋಟೋ ತೆಗ್ದು ಬ್ಲಾಕ್‍ಮೇಲ್ ಮಾಡ್ದ

    ಬೆಂಗಳೂರು: ಯುವತಿಯೊಬ್ಬಳು ತನ್ನ ಸಹೋದ್ಯೋಗಿಯನ್ನು ನಂಬಿ ಮನೆಗೆ ಕರೆದಿದ್ದು, ಇದೀಗ ಆತ ಆಕೆಯ ಬೆತ್ತಲೆ ಫೋಟೋ ತೆಗೆದು ಬ್ಲಾಕ್‍ಮೇಲ್ ಮಾಡುತ್ತಿರುವ ಘಟನೆ ಬೆಂಗಳೂರಿನ ಗಿರಿನಗರದಲ್ಲಿ ಬೆಳಕಿಗೆ ಬಂದಿದೆ.

    ಆನಂದ್ ಇಮ್ಯಾನುಯೆಲ್ ಬ್ಲಾಕ್‍ಮೇಲ್ ಮಾಡುತ್ತಿರುವ ವ್ಯಕ್ತಿ. ಆನಂದ್ ಹಾಗೂ ಯುವತಿ ಆಕ್ಸೆಂಚರ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಯುವತಿ ತನ್ನ ಸಹೋದ್ಯೋಗಿ ಆನಂದ್ ಮನೆಗೆ ಬಂದಿದ್ದಾಗ ಆತನನ್ನು ನಂಬಿ ತನ್ನ ಮನೆಯೊಳಗೆ ಸೇರಿಸಿಕೊಂಡಿದ್ದಾಳೆ.

    ಆನಂದ್ ಮನೆಗೆ ಬಂದಾಗ ಆತನನ್ನು ಕೂರಿಸಿ ಯುವತಿ ಸ್ನಾನಕ್ಕೆ ಹೋಗಿದ್ದಳು. ಈ ವೇಳೆ ಆನಂದ್ ಯುವತಿ ಸ್ನಾನ ಮಾಡುವ ವಿಡಿಯೋವನ್ನು ತನ್ನ ಫೋನಿನಲ್ಲಿ ಸೆರೆ ಹಿಡಿದಿದ್ದಾನೆ. ಅಲ್ಲದೆ ಯುವತಿಯ ಅರೆ ಬೆತ್ತಲೆ ವಿಡಿಯೋ ತೆಗೆದು ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

    ವಿಡಿಯೋ ಮಾಡಿದ ಬಳಿಕ ಆತ ಯುವತಿಗೆ ನಾನು ಎಲ್ಲಿ ಕರೆಯುತ್ತೇನೋ ಅಲ್ಲಿಗೆ ನೀನು ಬರಬೇಕು ಎಂದು ಹೇಳಿದ್ದಾನೆ. ಒಂದು ವೇಳೆ ನೀನು ಬರದಿದ್ದರೆ ಈ ವಿಡಿಯೋವನ್ನು ಫೇಸ್‍ಬುಕ್‍ನಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

    ಈ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv