Tag: ಸಸ್ಯಾಹಾರಿ

  • ಪಾರ್ಸೆಲ್ ಆಹಾರದಲ್ಲಿ ಇಲಿಯ ತಲೆಬುರುಡೆ ಪತ್ತೆ- ಸಸ್ಯಾಹಾರಿ ರೆಸ್ಟೋರೆಂಟ್‍ಗೆ ಬೀಗ

    ಪಾರ್ಸೆಲ್ ಆಹಾರದಲ್ಲಿ ಇಲಿಯ ತಲೆಬುರುಡೆ ಪತ್ತೆ- ಸಸ್ಯಾಹಾರಿ ರೆಸ್ಟೋರೆಂಟ್‍ಗೆ ಬೀಗ

    ಚೆನ್ನೈ: ಪಾರ್ಸೆಲ್(Parcel) ತೆಗೆದುಕೊಂಡಿದ್ದ ಆಹಾರದಲ್ಲಿ ಇಲಿಯ(Rat) ತಲೆಬುರುಡೆ ಪತ್ತೆಯಾದ ಹಿನ್ನೆಲೆಯಲ್ಲಿ ಸಸ್ಯಾಹಾರಿ ರೆಸ್ಟೋರೆಂಟ್ ಅನ್ನು ಸೀಲ್ ಮಾಡಿರುವ ಘಟನೆ ತಮಿಳುನಾಡಿನಲ್ಲಿ(Tamil Nadu) ನಡೆದಿದೆ.

    ತಮಿಳುನಾಡಿನ ತಿರುವಣ್ಣಾ ಮಲೈನ ಅರಣಿ ಪ್ರದೇಶದಲ್ಲಿರುವ ಸಸ್ಯಾಹಾರಿ ರೆಸ್ಟೋರೆಂಟ್‍ನಲ್ಲಿ(Vegetarian Restaurant) ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿ ಆಹಾರ ಸುರಕ್ಷತಾ ಇಲಾಖೆಯವರು ರೆಸ್ಟೋರೆಂಟ್‍ನ ಪರವಾನಗಿಯನ್ನು(License) ರದ್ದುಗೊಳಿಸಲಾಗಿದೆ.

    ಆರ್. ಮುರುಳಿ ಎಂಬುವರು ಸಸ್ಯಾಹಾರಿ ರೆಸ್ಟೋರೆಂಟ್‍ನಿಂದ 100ಕ್ಕೂ ಹೆಚ್ಚು ಜನರಿಗೆ ಆಹಾರವನ್ನು(Food) ಆರ್ಡರ್ ಮಾಡಿದ್ದರು. ಇದನ್ನು ಆ ರೆಸ್ಟೋರೆಂಟ್ ಅವರ ಮನೆಗೆ ತಲುಪಿಸಿತ್ತು. ಇದಾದ ನಂತರ ಅಲ್ಲಿದ್ದ ಅತಿಥಿಗಳಲ್ಲಿ ಒಬ್ಬಾತನಿಗೆ, ಬೀಟ್‍ರೂಟ್‍ನಿಂದ ಮಾಡಿದ್ದ ತಿಂಡಿಯಲ್ಲಿ ಇಲಿಯ ತಲೆ ಬುರುಡೆ ಸಿಕ್ಕಿದೆ.

    ಇದರಿಂದಾಗಿ ಆ ಅಡುಗೆಯನ್ನು ಹೋಟೆಲ್‍ಗೆ ತೆಗೆದುಕೊಂಡು ಬಂದು ದೂರು ನೀಡಿದ್ದಾರೆ. ಆದರೆ ಆಡಳಿತ ಮಂಡಳಿ ಈ ದೂರನ್ನು ಸ್ವೀಕರಿಸಲು ನಿರಾಕರಿಸಿದೆ. ಅಷ್ಟೇ ಅಲ್ಲದೇ ಕೆಲಕಾಲ ವಾಗ್ವಾದ ನಡೆದಿದೆ. ಈ ಹಿನ್ನೆಲೆಯಲ್ಲಿ ಮುರುಳಿ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ನಾವು ಕತ್ತೆ ಕಾಯೋಕೆ ಇಲ್ಲಿ ಬಂದಿಲ್ಲ- ಸದನದಲ್ಲಿ ಮಾಧುಸ್ವಾಮಿ ಗರಂ

    ಘಟನೆಗೆ ಸಂಬಂಧಿಸಿ ಆಹಾರ ಸುರಕ್ಷತಾ ಅಧಿಕಾರಿಯು ದೂರಿನ ಮೇರೆಗೆ ಪರಿಶೀಲನೆ ನಡೆಸಲು ಹೋಟೆಲ್‍ಗೆ ತೆರಳಿದ್ದಾರೆ. ಆದರೆ ಅಲ್ಲಿ ಇಲಿಗಳು ಓಡಾಡುತ್ತಿರುವುದು ಕಂಡುಬಂದಿದೆ. ಹೋಟೆಲ್‍ನವರು ಅಡುಗೆ ಮಾಡುವ ಮುನ್ನ ಯಾವುದೇ ಸುರಕ್ಷತಾ ಕ್ರಮವನ್ನು ಮುಂಜಾಗ್ರತೆಯಾಗಿ ತೆಗೆದುಕೊಂಡಿಲ್ಲ ಎಂಬ ವಿಷಯ ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಪರವಾನಗಿಯನ್ನು ರದ್ದು ಮಾಡಲಾಗಿದೆ. ಇದನ್ನೂ ಓದಿ: ಭೀಕರ ರಸ್ತೆ ಅಪಘಾತದಲ್ಲಿ ಮಂಗಳೂರು ಮೂಲದ ವೈದ್ಯೆ ದುರ್ಮರಣ

    Live Tv
    [brid partner=56869869 player=32851 video=960834 autoplay=true]

  • ವೆಜ್ ಬದಲಾಗಿ ನಾನ್-ವೆಜ್ ಊಟ ನೀಡಿದ ಸಿಬ್ಬಂದಿ- ಅಮಾನತುಗೊಳಿಸಿದ ಏರ್ ಇಂಡಿಯಾ

    ವೆಜ್ ಬದಲಾಗಿ ನಾನ್-ವೆಜ್ ಊಟ ನೀಡಿದ ಸಿಬ್ಬಂದಿ- ಅಮಾನತುಗೊಳಿಸಿದ ಏರ್ ಇಂಡಿಯಾ

    ನವದೆಹಲಿ: ವೆಜ್ ಸೇವಿಸುವ ಪ್ರಯಾಣಿಕರಿಗೆ, ನಾನ್-ವೆಜ್ ಊಟ ನೀಡಿದ ಇಬ್ಬರು ಸಿಬ್ಬಂದಿಯನ್ನು ಏರ್ ಇಂಡಿಯಾ ಅಮಾನತುಗೊಳಿಸಿದೆ.

    ಸಸ್ಯಾಹಾರಿ ಪ್ರಯಾಣಿಕರಿಗೆ ತಪ್ಪಾಗಿ ಮಾಂಸಾಹಾರದ ಊಟ ನೀಡಿದ ಕಾರಣಕ್ಕಾಗಿ ಏರ್ ಇಂಡಿಯಾ ಮಾರ್ಚ್ 25 ರ ಟೋಕಿಯೊ-ದೆಹಲಿ ವಿಮಾನದ ಇಬ್ಬರು ಕ್ಯಾಬಿನ್ ಸಿಬ್ಬಂದಿಯನ್ನು ಅಮಾನತುಗೊಳಿಸಿದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ರಾಜ್ಯದ ಹಕ್ಕುಗಳನ್ನು ದೋಚುತ್ತಿದ್ದಾರೆ: ಭಗವಂತ್ ಮಾನ್

    ಪ್ರಯಾಣಿಕರು ಸಸ್ಯಾಹಾರಿ ಊಟವನ್ನು ಆರ್ಡರ್ ಮಾಡಿದ್ದರು. ಆದರೆ ಅವರಿಗೆ ತಪ್ಪಾಗಿ ಮಾಂಸಹಾರದ ಊಟ ನೀಡಲಾಗಿದೆ. ಮಾಂಸದ ಊಟ ಬಡಿಸಲಾಗಿದೆ ಎಂದು ಪ್ರಯಾಣಿಕರ ಗಮನಕ್ಕೆ ಬಂದ ನಂತರ ಅವರು ಸಿಬ್ಬಂದಿಗೆ ದೂರು ನೀಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ವಿಮಾನಯಾನ ಸಂಸ್ಥೆಯು ಇಬ್ಬರು ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದು, ಈ ಘಟನೆಯ ಬಗ್ಗೆ ತನಿಖೆ ಪ್ರಾರಂಭಿಸಿ ಅವರನ್ನು ಏರ್ ಇಂಡಿಯಾ ಅಮಾನತುಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ವಿಶ್ವದ ಐರನ್ ಮ್ಯಾನ್ ಸ್ಪರ್ಧೆಯಲ್ಲಿ ಭಾಗವಹಿಸಿದ 53 ವರ್ಷದ ಸೇನಾಧಿಕಾರಿ

    ವಿಶ್ವದ ಐರನ್ ಮ್ಯಾನ್ ಸ್ಪರ್ಧೆಯಲ್ಲಿ ಭಾಗವಹಿಸಿದ 53 ವರ್ಷದ ಸೇನಾಧಿಕಾರಿ

    ಬೆಳಗಾವಿ: ದೇಹದಾರ್ಢ್ಯ ಸೇರಿದಂತೆ ದೇಹ ದಂಡಿಸುವ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸುವವರು ಬಹುತೇಕ ಮಾಂಸಾಹಾರಿ ಆಗಿರುತ್ತಾರೆ. ಆದರೆ ಸಸ್ಯಾಹಾರಿ ಸೇನಾಧಿಕಾರಿಯೊಬ್ಬರು ಮಲೇಷಿಯಾದಲ್ಲಿ ನಡೆದ ಐರನ್ ಮ್ಯಾನ್ ಕಠಿಣ ದೇಹ ದಂಡನೆ ಸ್ಪರ್ಧೆಯಲ್ಲಿ ಭಾಗವಹಿಸಿ ದೇಶಕ್ಕೆ ಕೀರ್ತಿ ತಂದಿದ್ದಾರೆ.

    ಇತ್ತೀಚೆಗೆ ಮಲೆಷ್ಯಾದಲ್ಲಿ ನಡೆದ ಐರನ್ ಮ್ಯಾನ್ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಿ ಅದರಲ್ಲಿ ಪ್ರಥಮ ಸ್ಥಾನ ಪಡೆದು ಶಂಕರ್ ಕರಜಗಿ ಕೀರ್ತಿ ತಂದಿದ್ದಾರೆ. ಶಂಕರ್ ಕರಜಗಿ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ನಿವಾಸಿಯಾಗಿದ್ದು, ಭಾರತ ಪೆಟ್ರೋಲಿಯಂ ಕರ್ನಾಟಕದ ಹೆಡ್ ಹಾಗೂ ಟೆರಿಟರಲ್ ಆರ್ಮಿಯಲ್ಲಿ ಮೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

    17 ಗಂಟೆಯ ಅವಧಿಯಲ್ಲಿ ಶಂಕರ್ ಅವರು 3 ಕಿ.ಮೀ ಸಮುದ್ರದಲ್ಲಿ ಈಜುವ, 42 ಕಿ.ಮೀ ಬೆಟ್ಟ ಗುಡ್ಡಗಳಲ್ಲಿ ಓಡುವ ಹಾಗೂ 40 ಡಿಗ್ರಿ ತಾಪಮಾನವಿರುವ ಬೆಟ್ಟ ಗುಡ್ಡಗಳ ಸಾಲಿನಲ್ಲಿ 180 ಕಿ.ಮೀ ಸೈಕಲ್ ಸವಾರಿ ಮಾಡುವ ಚಾಲೆಂಜ್ ಸ್ವೀಕರಿಸಿ 15 ಗಂಟೆ 43 ನಿಮಿಷಗಳಲ್ಲಿ ಅದನ್ನು ಯಶಸ್ವಿಯಾಗಿ ನಿರ್ವಹಿಸಿ ಐರನ್ ಮ್ಯಾನ್ ಪ್ರಶಸ್ತಿ ಪಡೆದು ಭಾರತೀಯ ಸೇನೆ ಹಾಗು ಕರ್ನಾಟಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಸೇನಾಧಿಕಾರಿ ಅವರ ಈ ಸಾಧನೆಗೆ ಮೆಚ್ಚಿ ಸೇನಾ ಮೆಡಲ್ ಪುರಸ್ಕಾರ ನೀಡುವಂತೆ ಸೇನಾಧಿಕಾರಿಗಳು ಶಿಪಾರಸ್ಸು ಮಾಡಿದ್ದಾರೆ.

    ಇಷ್ಟೆಲ್ಲ ಸಾಧನೆ ಮಾಡಿರುವ ಶಂಕರ್ ಅವರು ಯಾವುದೇ ನಾನ್ ವೆಜ್ ಆಹಾರ ಸ್ವೀಕರಿಸದೆ ಕೇವಲ ಸಸ್ಯಾಹಾರಿಯಾಗಿರುವುದು ವಿಶೇಷ ಸಂಗತಿ. ಇಷ್ಟೆಲ್ಲಾ ದೇಹ ದಂಡಿಸುವ ಸ್ಪರ್ಧೆ ಮಾಡಿದರು ಮೊಟ್ಟೆಯನ್ನು ಕೂಡ ಶಂಕರ್ ಅವರು ಸೇವಿಸುವುದಿಲ್ಲ. ರಾತ್ರಿ ಊಟ ಕೂಡ ಮಾಡದೆ ಫಿಟ್ ಆ್ಯಂಡ್ ಫೈನ್ ಆಗಿದ್ದಾರೆ. ಶಂಕರ್ ಅವರಿಗೆ ಸದ್ಯ 53 ವಯಸ್ಸು ಈ ವಯಸ್ಸಿನಲ್ಲಿ ಗಣನೀಯ ಪ್ರಮಾಣದ ಸಾಹಸ ಸಾಧನೆ ಮಾಡಿರುವ ಶಂಕರ್ ಅವರನ್ನು ಇತ್ತೀಚೆಗೆ ಕುಟುಂಬಸ್ಥರು ಸತ್ಕರಿಸಿ ಸನ್ಮಾನಿಸಿದರು.

  • ಹುಲ್ಲು ತಿಂದ ಸಿಂಹ – ಸಸ್ಯಾಹಾರಿ ಲಯನ್ ಎಂದ ಜನರು

    ಹುಲ್ಲು ತಿಂದ ಸಿಂಹ – ಸಸ್ಯಾಹಾರಿ ಲಯನ್ ಎಂದ ಜನರು

    ಗಾಂಧಿನಗರ: ಗುಜರಾತಿನ ಗಿರ್ ಕಾಡಿನಲ್ಲಿ ಸಿಂಹವೊಂದು ಹುಲ್ಲು ತಿನ್ನುತ್ತಿರುವ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಚರ್ಚೆಯಾಗುತ್ತಿದೆ.

    ಅಪ್ಪಟ ಮಾಂಸಹಾರಿಯಾಗಿರುವ ಸಿಂಹ ಪ್ರಾಣಿಗಳನ್ನು ಬೇಟೆಯಾಡಿ ತಿನ್ನುವುದನ್ನು ನಾವು ನೋಡಿದ್ದೇವೆ. ಆದರೆ ಈ ಸಿಂಹ ಕಾಡಿನಲ್ಲಿ ಇರುವ ಗರಿಕೆ ಹುಲ್ಲು ಮತ್ತು ಗಿಡಮೂಲಿಕೆಯನ್ನು ತಿನ್ನುತ್ತಿರುವುದು ವಿಚಿತ್ರ ಎಂದು ತೋರುತ್ತದೆ.

    ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ನೋಡಿದ ಕೆಲವರು ಆಶ್ಚರ್ಯ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಸಿಂಹಗಳು ಹುಲ್ಲು ತಿನ್ನುವುದು ಸಹಜ ಎಂದು ಕಮೆಂಟ್ ಮಾಡಿದ್ದಾರೆ. ಇದನ್ನು ಒಪ್ಪಿಕೊಂಡಿರುವ ಪ್ರಾಣಿ ತಜ್ಞರು ಸಿಂಹಗಳು ಹಸಿ ಮಾಂಸವನ್ನು ತಿನ್ನುವುದರಿಂದ ಅದು ಬೇಗ ಜೀರ್ಣವಾಗುವುದಿಲ್ಲ. ಅದ್ದರಿಂದ ಜೀರ್ಣಕ್ರಿಯೇಗೆ ತೊಂದರೆಯಾದಾಗ ಸಿಂಹಗಳು ಹುಲ್ಲನ್ನು ತಿಂದು ಹೊಟ್ಟೆಯನ್ನು ಸ್ವಚ್ಛಮಾಡಿಕೊಳ್ಳುತ್ತವೆ ಎಂದು ಹೇಳಿದ್ದಾರೆ.

    ಎಲ್ಲಾ ಜಾತಿಯ ಮಾಂಸಹಾರಿ ಪ್ರಾಣಿಗಳು ಹುಲ್ಲನ್ನು ತಿನ್ನುತ್ತವೆ. ಏಕೆಂದರೆ ಅವುಗಳು ಬೇಟೆಯಾಡಿ ಹಸಿ ಮಾಂಸವನ್ನು ತಿನ್ನುವ ಕಾರಣ ಅವುಗಳ ದೇಹಕ್ಕೆ ಫೈಬರ್ ಅಂಶವು ಜಾಸ್ತಿ ಸೇರುತ್ತದೆ. ಇದರಿಂದ ಅವು ತಮ್ಮ ಕರುಳುಗಳನ್ನು ಸ್ವಚ್ಛಮಾಡಿಕೊಳ್ಳಲು ಆಗಾಗ ಈ ರೀತಿ ಹುಲ್ಲುಗಳನ್ನು ತಿನ್ನುತ್ತವೆ ಎಂದು ಪ್ರಾಣಿ ತಜ್ಞರು ತಿಳಿಸಿದ್ದಾರೆ.

    https://twitter.com/Adamiington/status/1167016863802355712

    ಈ ವಿಡಿಯೋ ನೋಡಿದ ಕೆಲವರು ವ್ಯಂಗ್ಯವಾಗಿ ಕೂಡ ಕಮೆಂಟ್ ಮಾಡಿದ್ದು, ಪಾಪ ಆದರ ಗಂಡ ಡಯಟ್ ಮಾಡು ಎಂದು ಹೇಳಿರಬೇಕು ಅದಕ್ಕೆ ಅ ಸಿಂಹಿಣಿ ಹಲ್ಲು ತಿನ್ನುತ್ತಿದೆ ಎಂದು ಹೇಳಿದ್ದಾರೆ. ಇನ್ನೂ ಕೆಲವರು ಇದು ಸಸ್ಯಾಹಾರಿ ಸಿಂಹ ಎಂದು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ.