Tag: ಸಸ್ಯಹಾರಿ

  • ಸಸ್ಯಹಾರಿ ಸೋನು ಸೂದ್ ಹೆಸರಲ್ಲಿ ಮಟನ್ ಶಾಪ್ – ನಟ ಹೇಳಿದ್ದು ಹೀಗೆ

    ಸಸ್ಯಹಾರಿ ಸೋನು ಸೂದ್ ಹೆಸರಲ್ಲಿ ಮಟನ್ ಶಾಪ್ – ನಟ ಹೇಳಿದ್ದು ಹೀಗೆ

    ಮುಂಬೈ: ತಮ್ಮ ಹೆಸರಿನಲ್ಲಿ ಆರಂಭವಾಗಿರುವ ಮಟನ್ ಶಾಪ್ ನೋಡಿ ಸಸ್ಯಹಾರಿ ನಟ ಸೋನು ಸೂದ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

    ಟ್ವಿಟ್ಟರ್ ನಲ್ಲಿ ಸೋನು ಸೂದ್ ವೀಡಿಯೋ ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಮಟನ್ ಅಂಗಡಿಗೆ ಸೋನು ಸೂದ್ ಎಂದು ಹೆಸರಿಡಲಾಗಿದೆ. ಅಂಗಡಿ ಮುಂದೆ ಸೋನು ಸೂದ್ ಫೋಟೋ ಹಾಕಿ ದೊಡ್ಡ ಬ್ಯಾನರ್ ಸಹ ಹಾಕಲಾಗಿದೆ. ಈ ಅಂಗಡಿ ವೀಡಿಯೋ ಕಳೆದೊಂದು ವಾರದಿಂದ ವೈರಲ್ ಆಗಿತ್ತು. ಈ ವೀಡಿಯೋ ನೋಡುತ್ತಿದ್ದಂತೆ ಸೋನು ಸೂದ್ ಸಹ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

    ಲಾಫಿಂಗ್ ಎಮೋಜಿ ಮೂಲಕ ಪ್ರತಿಕ್ರಿಯಿಸಿರುವ ಸೋನು ಸೂದ್, ನಾನೊಬ್ಬ ಸಸ್ಯಹಾರಿ. ಅರೇ ಇದೇನು ನೋಡುತ್ತಿದ್ದೇನೆ? ನನ್ನ ಹೆಸರಿನಲ್ಲಿ ಮಟನ್ ಶಾಪ್. ಇಲ್ಲಿ ಸಸ್ಯಹಾರಿ ವಸ್ತುಗಳನ್ನ ಮಾರಲು ನಾನು ಸಹಾಯ ಮಾಡಬಲ್ಲೆ ಎಂದು ಬರೆದು ವೀಡಿಯೋ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಸೋನು ಸೂದ್ ಫನ್ನಿ ಸಾಲುಗಳಿಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಪ್ರತಿ ನಿತ್ಯ 5 ಸಾವಿರ ಜನರಿಗೆ ಆಹಾರ ವಿತರಿಸುತ್ತಿರುವ ಸೋನು ಸೂದ್

    ಆಂಧ್ರಪ್ರದೇಶದಲ್ಲಿ ಎರಡು ಆಕ್ಸಿಜನ್ ಪ್ಲಾಂಟ್ ಸ್ಥಾಪಿಸೋದಾಗಿ ಸೋನು ಸೂದ್ ಘೋಷಣೆ ಮಾಡಿದ್ದಾರೆ. ಇದರ ಜೊತೆಗೆ ಚೀನಾ ಮತ್ತು ಫ್ರಾನ್ಸ್ ನಿಂದ ಆಮ್ಲಜನಕ ಸಾಂದ್ರಕ ತರುತ್ತೇನೆ ಎಂದು ಹೇಳಿದ್ದಾರೆ. ಇಷ್ಟು ಮಾತ್ರ ಅಲ್ಲದೇ ಕಳೆದ ವರ್ಷದಂತೆ ಈ ಬಾರಿಯೂ ಕೊರೊನಾ ಸಂಕಷ್ಟದಲ್ಲಿ ಸಿಲುಕಿರುವ ಜನರ ಪಾಲಿಗೆ ದೇವತಾ ಮನುಷ್ಯನಾಗಿ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಿದ ನಟ ಸೋನು ಸೂದ್

    2020ರಲ್ಲಿ ಲಾಕ್‍ಡೌನ್ ನಿಂದಾಗಿ ಸಂಕಷ್ಟದಲ್ಲಿದ್ದ ಪ್ರವಾಸಿ ಕಾರ್ಮಿಕರನ್ನು ಅವರ ಗೂಡು ಸೇರಿಸುವ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ಈಗ ಎಷ್ಟೋ ಜನ ಚಿಕಿತ್ಸೆಗೆ ಸಹಾಯ ಮಾಡುತ್ತಿದ್ದಾರೆ. ಸೋನು ಅವರ ನಿಸ್ವಾರ್ಥ ಸೇವೆಗೆ ಅಭಿಮಾನಿಗಳು ಅವರ ಹೆಸರಿನಲ್ಲಿ ಅಂಗಡಿ, ವಿಶೇಷ ಅಭಿಯಾನ, ದೇವಸ್ಥಾನ ಸಹ ನಿರ್ಮಿಸುತ್ತಿದ್ದಾರೆ. ಕೆಲ ತಿಂಗಳ ಹಿಂದೆ ವಿಮಾನದ ಮೇಲೆ ಸೋನು ಸೂದ್ ಚಿತ್ರವನ್ನ ಚಿತ್ರಿಸಿ ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ ವಿಶೇಷವಾಗಿ ಗೌರವ ಸಲ್ಲಿಸಿತ್ತು.

  • ವೆಜ್ ಬದಲು ನಾನ್‍ವೆಜ್ ಪಿಜ್ಜಾ ಬಂತು- 1 ಕೋಟಿ ಪರಿಹಾರ ಕೇಳಿದ ಮಹಿಳೆ

    ವೆಜ್ ಬದಲು ನಾನ್‍ವೆಜ್ ಪಿಜ್ಜಾ ಬಂತು- 1 ಕೋಟಿ ಪರಿಹಾರ ಕೇಳಿದ ಮಹಿಳೆ

    ಲಕ್ನೋ: ಆರ್ಡರ್ ಮಾಡಿದ್ದ ವೆಜ್ ಪಿಜ್ಜಾ ಬದಲಾಗಿ ನಾನ್‍ವೆಜ್ ಪಿಜ್ಜಾ ಕಳುಹಿಸಿದ ತಪ್ಪಿಗಾಗಿ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಮಹಿಳೆ ನ್ಯಾಯಾಲಯದ ಮೊರೆ ಹೋಗಿದ್ದಾರೆ.

    ಉತ್ತರ ಪ್ರದೇಶದ ಗಾಜಿಯಾಬಾದ್ ನಿವಾಸಿ ದೀಪಾಲಿ ತ್ಯಾಗ್ ಅನ್‍ಲೈನ್‍ನಲ್ಲಿ ವೆಜ್ ಪಿಜ್ಜಾ ಆರ್ಡರ್ ಮಾಡಿದ್ದರು. ಆದರೆ ಈ ಬದಲಿಗೆ ಅವರಿಗೆ ನಾನ್‍ವೆಜ್ ಪಿಜ್ಜಾ ಬಂದಿದೆ. ಈ ಸಂಬಂಧ ನ್ಯಾಯಾಲಯ ಮೊರೆ ಹೋಗಿದ್ದಾರೆ.

    2019ಮಾರ್ಚ್, 21ರಂದು ನಾನು ಅಮೆರಿಕನ್ ಪಿಜ್ಜಾ ಔಟ್‍ಲೆಟ್‍ನಲ್ಲಿ ಆನ್‍ಲೈನ್ ಮೂಲಕವಾಗಿ ವೆಜ್ ಪಿಜ್ಜಾ ಆರ್ಡರ್ ಮಾಡಿದ್ದೆ. ಬದಲಾಗಿ ನನಗೆ ನಾನ್ ವೆಜ್ ಪಿಜ್ಜಾ ಕಳುಹಿಸಿಕೊಟ್ಟಿದ್ದಾರೆ. ತುಂಬಾ ಹಸಿವಾದ್ದರಿಂದ ನಾನು ಈ ವಿಚಾರ ತಿಳಿಯದೆ ಹಾಗೇ ತಿಂದಿದ್ದೇನೆ. ಹುಟ್ಟಿದಾಗಿನಿಂದಲೂ ಶುದ್ಧ ಸಸ್ಯಹಾರಿಯಾಗಿರುವ ನನಗೆ ಹಾಗೂ ನನ್ನ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಹೀಗಾಗಿ ನನಗೆ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ನ್ಯಾಯಾಲದ ಮೊರೆ ಹೋಗಿದ್ದೇನೆ ಎಂದಿದ್ದಾರೆ. ರೆಸ್ಟೋರೆಂಟ್‍ನವರು ನಿಲಕ್ಷ್ಯದ ವಿರುದ್ಧ ದೂರು ನೀಡಿದ್ದರೆಂದು ಗ್ರಾಹಕ ನ್ಯಾಯಾಲಯಕ್ಕೆ ತ್ಯಾಗಿ ವಕೀಲ ಫರ್ಹಾತ್ ವಾರ್ಸಿ ಸಿಳಿಸಿದ್ದಾರೆ.

    ಘಟನೆಯ ಬಳಿಕ 2019ರ ಮಾರ್ಚ್ 26 ರಂದು ಪಿಜ್ಜಾ ರೆಸ್ಟರೋರೆಂಟ್‍ನ ಮ್ಯಾನೇಜರ್ ಎಂದು ಹೇಳಿಕೊಂಡು ತ್ಯಾಗಿ ಅವರಿಗೆ ಕರೆಮಾಡಿ ನಿಮ್ಮಿಂದ ಯಾವುದೇ ಹಣ ಪಡೆಯದೆ ನಿಮ್ಮ ಕುಟುಂಬಕ್ಕೆ ನಾವು ಪಿಜ್ಜಾ ನೀಡುತ್ತೇವೆ ಎಂದು ಹೇಳಿದ್ದಾರೆ. ಆಗ ತ್ಯಾಗಿ ಅವರು ಇದು ಸಾಮಾನ್ಯವಾದ ಪ್ರಕರಣವಲ್ಲ. ನಿಮ್ಮ ಕಂಪನಿ ಧಾರ್ಮಿಕ ಭಾವನೆಗೆ ಧಕ್ಕೆ ಮಾಡಿದೆ. ಮಾನಸಿಕ ನೆಮ್ಮದಿ ಹಾಳಾಗಿದೆ. ಹಲವಾರು ದುಬಾರಿ ಆಚರಣೆಗಳ ಮೂಲಕವಾಗಿ ಹೋಗಬೇಕಾಗುತ್ತದೆ. ಇದಕ್ಕೆ ಹಣ ಖರ್ಚು ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.

    ದೆಹಲಿ ಜಿಲ್ಲಾ ಗ್ರಾಹಕ ವಿವಾದ ನಿವಾರಣಾ ಆಯೋಗವು ಮಹಿಳೆಯ ದೂರಿಗೆ ಉತ್ತರವನ್ನು ಸಲ್ಲಿಸುವಂತೆ ಪಿಜ್ಜಾ ಕಂಪನಿಗೆ ಸೂಚಿಸಿದೆ. ಮಾರ್ಚ್ 17 ರಂದು ಪ್ರಕರಣದ ವಿಚಾರಣೆ ನಡೆಯಲಿದೆ.

  • ಅಯ್ಯಪ್ಪನ ಭಕ್ತರಿಗೆ ಸಸ್ಯಾಹಾರಿ ಎಂದು ಮಾಂಸಾಹಾರಿ ಊಟ ನೀಡಿದ ಹೋಟೆಲ್

    ಅಯ್ಯಪ್ಪನ ಭಕ್ತರಿಗೆ ಸಸ್ಯಾಹಾರಿ ಎಂದು ಮಾಂಸಾಹಾರಿ ಊಟ ನೀಡಿದ ಹೋಟೆಲ್

    ಮಂಗಳೂರು: ಅಯ್ಯಪ್ಪ ಸ್ವಾಮಿ ವೃತಾಧಾರಿಗಳಿಗೆ ಸಸ್ಯಾಹಾರಿ ಊಟ ಇದೆಯೆಂದು ನಂಬಿಸಿ ಮಾಂಸಾಹಾರಿ ಊಟ ನೀಡಿದ ಘಟನೆ ಕೇರಳದ ಕಾಸರಗೋಡಿನಲ್ಲಿ ನಡೆದಿದ್ದು ಹೋಟೆಲ್ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

    ಶಬರಿಮಲೆ ಯಾತ್ರೆ ವೇಳೆ ಕಾಸರಗೋಡು ಚೆರ್ಕಳದ ಹಳ್ಳಿಮನೆ ಎಂಬ ಹೋಟೆಲ್ ನಲ್ಲಿ ಘಟನೆ ನಡೆದಿದೆ. 50 ಜನರಿದ್ದ ಅಯ್ಯಪ್ಪ ವೃತಾಧಾರಿಗಳು ಊಟಕ್ಕೆಂದು ಬಸ್ಸು ನಿಲ್ಲಿಸಿ ಚೆರ್ಕಳದ ಹಳ್ಳಿಮನೆ ಹೋಟೆಲ್ ಗೆ ತೆರಳಿದ್ದರು. ಸಸ್ಯಾಹಾರಿ ಊಟ ನೀಡುತ್ತೇವೆ ಎಂದು ನಂಬಿಸಿ ಬಳಿಕ ಮಾಂಸಹಾರಿ ಉಪಹಾರ ಬಡಿಸಿ ವೃತಾಧಾರಿಗಳಿಗೆ ಅವಮಾನ ಮಾಡಿದ್ದಾರೆ.

    ಹೋಟೆಲ್ ಮಾಲೀಕ ತುಂಬಾ ಜನರಿದ್ದ ಕಾರಣ ಮಾಂಸಹಾರಿ ಊಟದ ಹೋಟೆಲ್ ನಲ್ಲಿ ಸಸ್ಯಹಾರಿ ಊಟ ನೀಡಲು ಮುಂದಾಗಿದ್ದ ಎನ್ನಲಾಗಿದೆ. ಆದರೆ ಮಾಂಸಹಾರಿ ಹೋಟೆಲ್ ಎಂದು ಭಾವಿಸಿದ ಅಯ್ಯಪ್ಪ ವೃತಾಧಾರಿಗಳು ಮಾಲೀಕನನ್ನು ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಂಡು ಬಳಿಕ ತಿಂದ ಆಹಾರಕ್ಕೆ ಹಣ ನೀಡಿ ಹಿಂದಿರುಗಿದ್ದಾರೆ.

  • ನಾನು ಸಸ್ಯಹಾರಿಯಾಗಿ ಬದಲಾಗಿದ್ದು ಯಾಕೆ: ಜಗ್ಗೇಶ್ ವಿವರಿಸಿದ್ರು

    ನಾನು ಸಸ್ಯಹಾರಿಯಾಗಿ ಬದಲಾಗಿದ್ದು ಯಾಕೆ: ಜಗ್ಗೇಶ್ ವಿವರಿಸಿದ್ರು

    ಬೆಂಗಳೂರು: ನವರಸ ನಾಯಕ ನಟ ಜಗ್ಗೇಶ್ ತಾವು ಯಾಕೆ ಸಸ್ಯಹಾರಿಯಾಗಿದ್ದು ಯಾಕೆ ಎನ್ನುವುದನ್ನು ಟ್ವೀಟ್ ಮೂಲಕ ಹೇಳಿಕೊಂಡಿದ್ದಾರೆ.

    ಜಗ್ಗೇಶ್ ಸಸ್ಯಹಾರಿಯಾಗಿದ್ದು, ಈ ಬಗ್ಗೆ ಜಗ್ಗೇಶ್ “ಊರ ಹಬ್ಬಕ್ಕೆ ಕುರಿ ಕಡಿಯಲು ಕಟುಕ ಅಣಿಯಾದಾಗ ಮಾತ್ತೊಂದು ಕುರಿ ರೋಧಿಸುತ್ತಿತ್ತು. ವಿಷಯ ತಿಳಿದಾಗ ನಾನು ಅತ್ತುಬಿಟ್ಟಿ. ಕಟುಕನಿಗೆ ತಲೆಕೊಟ್ಟದ್ದು ಮಗ ರೋಧಿಸುತ್ತಿದ್ದದ್ದು ಅಮ್ಮ. ಪ್ರಾಣಿಗಳಲ್ಲು ಭಾವನಾತ್ಮಕ ಸಂಬಂಧವಿರುತ್ತದೆ. 4 ಘಂಟೆಗೆ ಮಲವಾಗುವ ಊಟಕ್ಕೆ ಯಾಕೆ ಬೇಕು ಭಾವನೆ ಕೊಂದ ಊಟ. ದಯೇ ಧರ್ಮದ ಮೂಲ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಈ ಹಿಂದೆ ಜಗ್ಗೇಶ್, ಮಾಜಿ ಇಂಧನ ಸಚಿವ ಡಿಕೆ ಶಿವಕುಮಾರ್ ಅವರನ್ನು ನೋಡಿದರೆ ಅಯ್ಯೋ ಪಾಪಾ ಅನಿಸುತ್ತದೆ. ಸರ್ಕಾರ ರಚನೆಗೆ ತನು, ಮನ, ಧನ ಎಲ್ಲ ಅರ್ಪಿಸಿ, ಈಗ ಒಳಿತು ಮಾಡು ಮನುಸ ಎಂಬ ಹಾಡಿನಂತೆ ಕೂತಿದ್ದಾರೆ ಅಂತ ನಟ, ಬಿಜೆಪಿ ಮುಖಂಡ ಜಗ್ಗೇಶ್ ವ್ಯಂಗ್ಯವಾಡಿದ್ದರು.

    ಕಬಾಬ್, ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ ಎಲ್ಲಾ ಸಿಎಂ ಎಚ್‍ಡಿಕೆ ತಟ್ಟೆಯಲ್ಲಿದೆ. ನೀರ್ ಮಜ್ಜಿಗೆ, ಕೋಸಂಬರಿ, ಪಾನಕ ಎಲ್ಲವೂ ಕಾಂಗ್ರೆಸ್ ತಟ್ಟೆಯಲ್ಲಿದೆ. ಇಬ್ಬರು ಊಟಕ್ಕೆ ಕೂತಿದ್ದಾರೆ. ಜೆಡಿಎಸ್‍ನವರು ಮೃಷ್ಠಾನ್ನ ಭೋಜನ ಮಾಡುವುದನ್ನ ನೋಡಿಕೊಂಡು ಕಾಂಗ್ರೆಸ್ಸಿನವರು ಸುಮ್ಮನಿರುವುದಕ್ಕೆ ಸಾಧ್ಯಾನಾ.? ನೋಡ್ತಾ ಇರಿ, ತಟ್ಟೆ ಮುಂದೆಯೇ ಇಬ್ಬರು ಬಡಿದಾಡಿಕೊಳ್ತಾರೆ. ಆ ಕಾಲ ತುಂಬಾ ದೂರ ಇಲ್ಲ. ಮದುವೆ ಮನೆಯಲ್ಲಿ ಊಟಕ್ಕೆ ಕಿತ್ತಾಡುವ ಸಂದರ್ಭ ಬಹಳ ಬೇಗ ಬರುತ್ತೆ. ಈ ಆಟವನ್ನು ನೋಡಲು ನಾನೂ, ಜನರು ನೀವೂ ಎಲ್ಲರೂ ಕಾಯುತ್ತಿದ್ದೇವೆ ಅಂತ ಹೇಳಿದ್ದರು.

  • ಅಮಿತ್ ಶಾ ಸಸ್ಯಹಾರಿ ಅಲ್ವಾ? ರಮ್ಯಾ ಪ್ರಶ್ನೆ

    ಅಮಿತ್ ಶಾ ಸಸ್ಯಹಾರಿ ಅಲ್ವಾ? ರಮ್ಯಾ ಪ್ರಶ್ನೆ

    ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಸ್ಯಹಾರಿ ಅಲ್ವಾ ಎಂಬ ಪ್ರಶ್ನೆಯೊಂದನ್ನು ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಟ್ವಟ್ಟರ್ ನಲ್ಲಿ ಕೇಳಿದ್ದಾರೆ.

    ಕೊಪ್ಪಳದ ಗವಿಸಿದ್ದೇಶ್ವರ ಮಠದೊಳಗೆ ಪ್ರವೇಶಿಸಲು ಬಾಗಿಲು ಚಿಕ್ಕದಾಗಿರೋದ್ರಿಂದ ಅಮಿತ್ ಶಾ ಅವರಿಗೆ ಗರ್ಭಗುಡಿ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ ಅಂತಾ ಹೇಳಲಾಗಿದೆ. ಈ ಹಿಂದೆ ಇದೇ ಮಠಕ್ಕೆ ಭೇಟಿ ನೀಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗರ್ಭಗುಡಿ ಪ್ರವೇಶಿಸಿ ದೇವರ ದರ್ಶನ ಪಡೆದಿದ್ದರು.

    ರಮ್ಯಾ ಟ್ವಟ್ಟರ್ ನಲ್ಲಿ ಫೆಬ್ರವರಿ 10ರಂದು ರಾಹುಲ್ ಗಾಂಧಿ ಗರ್ಭ ಗುಡಿ ಪ್ರವೇಶಿಸಿ ದರ್ಶನ ಪಡೆದಿರುವ ವಿಡಿಯೋ ಅಪ್ಲೋಡ್ ಮಾಡಿಕೊಂಡಿದ್ದಾರೆ. ಸ್ಲಿಮ್ ಆ್ಯಂಡ್ ಫಿಟ್ ಆಗಿರೋ ರಾಹುಲ್ ಗಾಂಧಿ ಸರಾಗವಾಗಿ ಗರ್ಭಗುಡಿ ಪ್ರವೇಶಿಸಿದ್ರು, ಆದ್ರೆ ದಪ್ಪವಾಗಿದ್ದರಿಂದ ಅಮಿತ್ ಶಾ ಒಳಗಡೆ ಹೋಗಿಲ್ಲ ಎಂದು ಪರೋಕ್ಷವಾಗಿ ಕಾಲೆಳೆದಿದ್ದಾರೆ. ಇನ್ನು ರಮ್ಯಾ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ಟ್ವಿಟ್ಟಿಗರು, ರಾಜಕೀಯವಾಗಿ ಕಾಲೆಳೆಯೋದು ಓಕೆ ಆದ್ರೆ ತೀರಾ ವೈಯಕ್ತಿಕವಾಗಿ ದೇಹದ ಗಾತ್ರದ ಬಗ್ಗೆ ಲೇವಡಿ ಮಾಡೋದು ಸರಿಯಲ್ಲ ಅಂತಾ ಕಿಡಿಕಾರಿದ್ದಾರೆ.

    ಇಂದು ಸಹ ಚುನಾವಣೆ ಪ್ರಚಾರ ಹಿನ್ನೆಲೆಯಲ್ಲಿ ಅಮಿತ್ ಶಾ ಕೂಡಲ ಸಂಗಮಕ್ಕೆ ಭೇಟಿ ನೀಡಿದ್ದರು. ಸಂಗಮನಾಥ್ ಸ್ವಾಮಿಯ ದರ್ಶನ ಪಡೆದ ಅಮಿತ್ ಶಾ, ಬಸವಣ್ಣರ ಐಕ್ಯಮಂಟಪಕ್ಕೆ ತೆರಳದೇ ನೆಪ ಮಾತ್ರಕ್ಕೆ ಮೇಲಿನಿಂದಲೇ ನಿಂತು ನಮಸ್ಕರಿಸಿ ಹಿಂದಿರುಗಿದ್ರು.