Tag: ಸಸ್ಯಹಾರ

  • ನಾನ್ ವೆಜ್ ತಿಂದು ದೇವಸ್ಥಾನಕ್ಕೆ ಹೋದ್ರಂತೆ ರಾಗಾ – ಬಿಎಸ್‍ವೈ ಗಂಭೀರ ಆರೋಪ

    ನಾನ್ ವೆಜ್ ತಿಂದು ದೇವಸ್ಥಾನಕ್ಕೆ ಹೋದ್ರಂತೆ ರಾಗಾ – ಬಿಎಸ್‍ವೈ ಗಂಭೀರ ಆರೋಪ

    ಬೆಂಗಳೂರು: ಸತತ ಮೂರು ದಿನಗಳಿಂದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜನಾಶೀರ್ವಾದ ಯಾತ್ರೆಯಲ್ಲಿ ಭಾಗಿಯಾಗಿ ಉತ್ತರ ಕರ್ನಾಟಕದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಚುನಾವಣಾ ಪ್ರಚಾರದಲ್ಲಿ ಸಂಚರಿಸುವ ಮಾರ್ಗದಲ್ಲಿ ಬರುವ ಹಿಂದೂ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ.

    ಮಾಂಸಾಹಾರ ತಿಂದು ದರ್ಶನ ಪಡೆದ್ರಾ ರಾಗಾ?: ರಾಹುಲ್ ಗಾಂಧಿ ಕೊಪ್ಪಳ ಜಿಲ್ಲೆಯ ಇತಿಹಾಸ ಪ್ರಸಿದ್ಧ ಶ್ರೀ ಕನಕಾಚಲಪತಿ ದೇವಸ್ಥಾನಕ್ಕೆ ತೆರಳುವ ಮುನ್ನ ಪ್ರವಾಸಿ ಮಂದಿರದಲ್ಲಿ ಜವಾರಿ ಕೋಳಿ, ಬಿರಿಯಾನಿ, ಪಾವ್ ಬಾಜಿ, ಶಾವಿಗೆ ಪಾಯಸ, ಪಿಜ್ಜಾ ಸೇರಿದಂತೆ ವಿವಿಧ ವೆಜ್ ಮತ್ತು ನಾನ್‍ವೆಜ್ ಆಹಾರ ಸೇವನೆ ಮಾಡಿದ್ದರು ಎಂದು ಹೇಳಲಾಗುತ್ತಿದೆ.

    ಬಿಎಸ್‍ವೈ ಟ್ವೀಟ್: ಮೀನು ತಿಂದು ಧರ್ಮಸ್ಥಳ ಮಂಜುನಾಥನ ದರ್ಶನ ಪಡೆಯೋ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದೆಡೆಯಾದರೆ, ಜವಾರಿ ಕೋಳಿ ತಿಂದು ನರಸಿಂಹ ಸ್ವಾಮಿಯ ದರ್ಶನ ಪಡೆಯೋ ರಾಹುಲ್ ಗಾಂಧಿ ಮತ್ತೊಂದು ಕಡೆ. ಪ್ರತಿ ಬಾರಿ ಏಕೆ ಹಿಂದೂಗಳ ಭಾವನೆಗಳಿಗೆ ಕಾಂಗ್ರೆಸ್ ಧಕ್ಕೆ ತರುತ್ತಿದೆ? ಎಲ್ಲರನ್ನೂ ಸಮನಾಗಿ ಕಾಣುವುದು ಸಮಾಜವಾದ, ನಿಮ್ಮದು ಮಜಾವಾದ ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮೀನು ಊಟ ಸೇವಿಸಿ ಬಳಿಕ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ್ದರು ಎಂದು ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಆದ್ರೆ ಈ ಕುರಿತು ಸಿಎಂ ಪ್ರತಿಕ್ರಿಯಿಸಿ, ದೇವರು ಮಾಂಸಾಹಾರ ತಿಂದು ಬರಬೇಡ ಅಂತ ಎಲ್ಲೂ ಹೇಳಿಲ್ಲ ಎಂದು ಬೇಡರ ಕಣ್ಣಪ್ಪನ ಉದಾಹರಣೆ ಕೊಟ್ಟು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದರು. ಇದನ್ನೂ ಓದಿ: ಮೀನೂಟ ತಿಂದುಬಂದ ಸಿಎಂ, ಉಪವಾಸದಲ್ಲೇ ಧರ್ಮಸ್ಥಳಕ್ಕೆ ಬಂದ ಮೋದಿ!

  • ಮದ್ಯಪಾನ ಮಾಡದ ಸಸ್ಯಹಾರಿ ವಿದ್ಯಾರ್ಥಿಗೆ ಮಾತ್ರ ವಿವಿಯ ರ‍್ಯಾಂಕ್‌ ಚಿನ್ನದ ಪದಕ!

    ಮದ್ಯಪಾನ ಮಾಡದ ಸಸ್ಯಹಾರಿ ವಿದ್ಯಾರ್ಥಿಗೆ ಮಾತ್ರ ವಿವಿಯ ರ‍್ಯಾಂಕ್‌ ಚಿನ್ನದ ಪದಕ!

    ಪುಣೆ: ಸಸ್ಯಹಾರಿ ಆಗಿರುವ, ಮದ್ಯಪಾನ ಮಾಡದ ವಿದ್ಯಾರ್ಥಿಗೆ ಮಾತ್ರ ರ‍್ಯಾಂಕ್‌ ನೀಡುವುದಾಗಿ ಪುಣೆ ವಿಶ್ವವಿದ್ಯಾಲಯ ನಿಯಮ ರೂಪಿಸಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.

    ಹೌದು, ಪುಣೆಯ ಸಾವಿತ್ರಿಭಾಯಿ ಪುಲೆ ವಿಶ್ವವಿದ್ಯಾಲಯ ಚಿನ್ನದ ಪದಕ ನೀಡುವ ವಿದ್ಯಾರ್ಥಿ ಹೇಗಿರಬೇಕು ಎನ್ನುವುದಕ್ಕೆ ಕೆಲ ನಿಯಮಗಳನ್ನು ರೂಪಿಸಿ ಸುತ್ತೋಲೆ ಹೊರಡಿಸಿದೆ.

    ಸುತ್ತೋಲೆಯಲ್ಲಿ ಮಹರ್ಷಿ ಕೀರ್ತಂಕರ್ ಶೀರಲ್ ಮಾಮ ಚಿನ್ನದ ಪದಕ ಪಡೆಯುವ ವಿದ್ಯಾರ್ಥಿ ಹೇಗಿರಬೇಕು ಎನ್ನುವುದಕ್ಕೆ 10 ನಿಯಮಗಳನ್ನು ಪ್ರಕಟಿಸಿದ್ದು ಈ ನಿಯಮಗಳಲ್ಲಿ ವಿದ್ಯಾರ್ಥಿ ಸಸ್ಯಹಾರಿ ಆಗಿರಬೇಕು ಮತ್ತು ಮದ್ಯಪಾನ ಮಾಡಿರಬಾರದು ಎಂದು ತಿಳಿಸಲಾಗಿದೆ.

    ಸುತ್ತೋಲೆಯಲ್ಲಿ ಏನಿದೆ?
    ಸಸ್ಯಹಾರಿ ಮತ್ತು ಮದ್ಯ ಸೇವನೆ ಅಲ್ಲದೇ ಈ ಪದಕವನ್ನು ಪಡೆಯುವ ವಿದ್ಯಾರ್ಥಿ ರಕ್ತದಾನ ಶಿಬಿರ, ಶ್ರಮದಾನ, ಪರಿಸರ ರಕ್ಷಣೆ, ಮಲಿನ್ಯ ನಿಯಂತ್ರಣ ಕೆಲಸ, ಸಾಹಿತ್ಯ, ಶುಚಿತ್ವ, ಏಡ್ಸ್ ಜಾಗೃತಿ ಇತ್ಯಾದಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರಬೇಕು ಎನ್ನುವ ಅಂಶ ಸುತ್ತೋಲೆಯಲ್ಲಿದೆ.

    ಯಾಕೆ ಈ ನಿಯಮವನ್ನು ಜಾರಿಗೆ ತರಲಾಗಿದೆ ಎಂದು ಕೇಳಿದ್ದಕ್ಕೆ ವಿವಿ, ಈ ಚಿನ್ನದ ಪದಕವನ್ನು ಟ್ರಸ್ಟ್ ಒಂದು ಪ್ರಯೋಜನೆ ಮಾಡಿದ್ದು, ಟ್ರಸ್ಟ್ ಈ ಪದಕವನ್ನು ಪಡೆಯುವ ವಿದ್ಯಾರ್ಥಿ ಈ ಎಲ್ಲ ಅರ್ಹತೆಯನ್ನು ಹೊಂದಿರಬೇಕು ಎಂದು ಷರತ್ತು ವಿಧಿಸಿತ್ತು. ಹೀಗಾಗಿ ನಾವು ಈ ನಿಯಮವನ್ನು ಸುತ್ತೋಲೆಯಲ್ಲಿ ಸೇರಿದ್ದೇವೆ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿತ್ತು.

    ಪುಣೆ ವಿವಿಯ ಈ ವಿಶೇಷ ನಿಯಮಕ್ಕೆ ಶಿವಸೇನೆ ಮತ್ತು ಎನ್‍ಸಿಪಿ ಆಕ್ಷೇಪ ವ್ಯಕ್ತಪಡಿಸಿತ್ತು. ವಿವಾದವಾಗುತ್ತಿದ್ದಂತೆ ವಿಶ್ವವಿದ್ಯಾಲಯ ಈಗ ಸುತ್ತೋಲೆಯನ್ನು ಹಿಂದಕ್ಕೆ ಪಡೆದುಕೊಂಡಿದೆ.

    ವಿವಿಯ ರಿಜಿಸ್ಟ್ರರ್ ಅರವಿಂದ್ ಶಾಲಿಗ್ರಮ್ ಪ್ರತಿಕ್ರಿಯಿಸಿ, 2006ರಲ್ಲಿ ಮೊದಲ ಬಾರಿಗೆ ಈ ರೀತಿಯ ಸುತ್ತೋಲೆಯನ್ನು ಹೊರಡಿಸಲಾಗಿದ್ದು, ಈಗ ಪ್ರತಿ ವರ್ಷ ಹೊರಡಿಸಲಾಗುತ್ತಿದೆ. ಯೋಗಿ ಮಹರ್ಷಿ ಶೀಲರ್‍ಮಾಮ ಟ್ರಸ್ಟ್ ವತಿಯಿಂದ ಚಿನ್ನದ ಪದಕ ನೀಡಲಾಗುತ್ತಿದೆ. ಅವರು ಸೂಚಿಸಿದ ಷರತ್ತುಗಳನ್ನು ವಿಧಿಸಿ ವಿವಿ ಪ್ರತಿವರ್ಷ ಈ ಸುತ್ತೋಲೆಯನ್ನು ಹೊರಡಿಸಲಾಗುತ್ತಿದೆ ಹೊರತು ವಿವಿಯ ಪಾತ್ರ ಇದರಲ್ಲಿ ಇಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಈಗ ಮಾಧ್ಯಮಗಳಿಗೆ ಸಿಕ್ಕಿರುವ ಸುತ್ತೋಲೆ ಇದೇ ಅಕ್ಟೋಬರ್ 31 ರಂದು ಹೊರಡಿಸಲಾಗಿದೆ.

    ಎನ್‍ಸಿಪಿ ಲೋಕಸಭಾ ಸದಸ್ಯೆ ಸುಪ್ರಿಯಾ ಸುಳೆ ಪ್ರತಿಕ್ರಿಯಿಸಿ, ಪುಣೆ ವಿವಿ ನಿರ್ಧಾರ ನಿಜಕ್ಕೂ ಶಾಕಿಂಗ್. ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಆಹಾರದ ಬಗ್ಗೆ ತಲೆಕೆಡಿಸಿಕೊಳ್ಳದೇ ಗುಣಮಟ್ಟದ ಶಿಕ್ಷಣ ನೀಡುವತ್ತ ಗಮನ ಹರಿಸಬೇಕು ಎಂದು ಅವರು ಟ್ವೀಟ್ ಮಾಡಿದ್ದಾರೆ.

     

  • ಮಾಂಸಾಹಾರ ತಿನ್ನುವಂತೆ ಪತಿಯಿಂದ ಕಿರುಕುಳ-ಮನನೊಂದು ಆತ್ಮಹತ್ಯೆಗೆ ಶರಣಾದ ಪತ್ನಿ

    ಮಾಂಸಾಹಾರ ತಿನ್ನುವಂತೆ ಪತಿಯಿಂದ ಕಿರುಕುಳ-ಮನನೊಂದು ಆತ್ಮಹತ್ಯೆಗೆ ಶರಣಾದ ಪತ್ನಿ

    ಹೈದರಾಬಾದ್: ಪತಿ ಮಾಂಸಾಹಾರ ಸೇವಿಸುವಂತೆ ಕಿರುಕುಳ ನೀಡುತ್ತಿದ್ದಕ್ಕೆ ಮನನೊಂದ ಪತ್ನಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಮಿಯಾಪುರ್‍ನಲ್ಲಿ ನಡೆದಿದೆ.

    23 ವರ್ಷದ ಶ್ವೇತಾ ಆತ್ಮಹತ್ಯೆಗೆ ಶರಣಾದ ದುರ್ದೈವಿ. ಸಂಗಾರೆಡ್ಡಿ ಪಟ್ಟಣದ ಶ್ವೇತಾರನ್ನು ವಿಕರಾಬಾದ್ ನಿವಾಸಿ ಮರಿಚೆನ್ನ ರೆಡ್ಡಿ ಎಂಬರೊಂದಿಗೆ 2017 ಮೇ ನಲ್ಲಿ ಮದುವೆ ಮಾಡಿಕೊಡಲಾಗಿತ್ತು. ಮದುವೆಯಾದ ಕೆಲ ತಿಂಗಳ ನಂತರ ಪತಿ ಮತ್ತು ಆತನ ತಂದೆ ತಾಯಿ ವರದಕ್ಷಿಣೆ ತರುವಂತೆ ಕಿರುಕುಳ ನೀಡಲು ಪ್ರಾರಂಭಿಸಿದ್ದಾರೆ.

    ಮದುವೆ ವೇಳೆ ಶ್ವೇತಾ ಪೋಷಕರು 4 ಲಕ್ಷ ರೂ. ಕ್ಯಾಶ್ ಮತ್ತು 10 ತೊಲಾ ಚಿನ್ನವನ್ನು ವರದಕ್ಷಿಣೆ ರೂಪದಲ್ಲಿ ನೀಡಿದ್ದರು. ಮದುವೆ ಬಳಿಕ ಇನ್ನೂ ವರದಕ್ಷಿಣೆಯನ್ನು ನೀಡುವದಾಗಿ ಭರವಸೆಯನ್ನು ನೀಡಿದ್ದರು.

    ಈ ದಂಪತಿ ಮಿಯಾಪುರದಿಂದ ವಿಕರಾಬಾದ್‍ನ ಸಿರಿಪುರಂಗೆ ಸೆಪ್ಟಂಬರ್‍ನಲ್ಲಿ ಹೋಗಿ ವಾಸವಾಗಿದ್ದಾರೆ. ಅಲ್ಲಿ ಪತಿಯ ಪೋಷಕರು ಶ್ವೇತಾಗೆ ಮಾಂಸವನ್ನು ತಿನ್ನವಂತೆ ಬಲವಂತ ಮಾಡಿದ್ದಾರೆ. ಶ್ವೇತಾ ಸಸ್ಯಹಾರಿ ಆಗಿದ್ದರಿಂದ ಮಾಂಸವನ್ನು ತಿನ್ನಲು ನಿರಾಕರಿಸಿದ್ದಾರೆ. ಆದರೆ ಪತಿ ಬಿಡದೇ ಅವರ ಮುಂದೆ ಮಾಂಸ ಇಟ್ಟು ತಿನ್ನುವಂತೆ ಬಲವಂತ ಮಾಡಿದ್ದಾನೆ ಎಂದು ಪೊಲೀಸರು ತಿಳಿದ್ದಾರೆ.

    ಗಂಡನ ಮನೆಯವರ ಕಿರುಕುಳವನ್ನು ಸಹಿಸಿಕೊಳ್ಳಲಾಗದೇ ಶ್ವೇತಾ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಗಂಡ ಮತ್ತು ಆತನ ತಂದೆ-ತಾಯಿ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ಪೊಲೀಸರು ವಿಚಾರಣೆ ನಡೆಸಿದ್ದಾರೆ.