Tag: ಸಸಿಕಾಂತ್ ಸೆಂಥಿಲ್

  • ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ – ʻಕೈʼ ಸಂಸದ ಸಸಿಕಾಂತ್ ಸೆಂಥಿಲ್ ಫಸ್ಟ್‌ ರಿಯಾಕ್ಷನ್‌

    ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ – ʻಕೈʼ ಸಂಸದ ಸಸಿಕಾಂತ್ ಸೆಂಥಿಲ್ ಫಸ್ಟ್‌ ರಿಯಾಕ್ಷನ್‌

    – ರೆಡ್ಡಿ ಕೃತ್ಯಗಳನ್ನ ಬಯಲಿಗೆಳೆದಿದ್ದಕ್ಕೆ ನನ್ನ ವಿರುದ್ಧ ಆರೋಪ ಎಂದ ಸಂಸದ
    – ʻವೋಟ್ ಚೋರಿʼ ಪ್ರಕರಣದ ಗಮನ ಬೇರೆಡೆಗೆ ಸೆಳೆಯಲು ಬಿಜೆಪಿ ಯತ್ನ

    ನವದೆಹಲಿ: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಕಾಂಗ್ರೆಸ್‌ ಸಂಸದ ಸಸಿಕಾಂತ್ ಸೆಂಥಿಲ್ (Sasikanth Senthil) ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

    ಮಾಸ್ಕ್‌ಮ್ಯಾನ್‌ಗೆ ಬುರುಡೆ ಕೊಟ್ಟಿದ್ದೇ ಕೈ ಸಂಸದ ಸಸಿಕಾಂತ್‌ ಸೆಂಥಿಲ್ ಎಂಬ ಶಾಸಕ ಜನಾರ್ದನ ರೆಡ್ಡಿ (Janardhana Reddy) ಆರೋಪಕ್ಕೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಮಾಸ್ಕ್‌ಮ್ಯಾನ್‌ಗೆ ಬುರುಡೆ ಕೊಟ್ಟಿದ್ದೇ ಕೈ ಸಂಸದ ಸಸಿಕಾಂತ್‌ ಸೆಂಥಿಲ್: ಜನಾರ್ದನ ರೆಡ್ಡಿ

    Janardhana Reddy

    ದೆಹಲಿಯಲ್ಲಿ ʻಪಬ್ಲಿಕ್‌ ಟಿವಿ; ಜೊತೆಗೆ ಮಾತನಾಡಿರುವ ಸೆಂಥಿಲ್, ಜನಾರ್ದನ ರೆಡ್ಡಿ ಹೇಳಿಕೆಗಳು ಆಧಾರ ರಹಿತ, ಅದರಲ್ಲಿ ಯಾವುದೇ ಸತ್ಯವಿಲ್ಲ. ಬಳ್ಳಾರಿಯಲ್ಲಿ ನಾನು ಸಹಾಯಕ ಆಯುಕ್ತನಾಗಿದ್ದಾಗ ಅವರ ಅಪರಾಧಗಳನ್ನ ಬಹಿರಂಗಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೇನೆ. ನನ್ನ ಕೆಲಸದ ಭಾಗವಾಗಿ ನಾನು ಇದನ್ನು ಮಾಡಿದ್ದೇನೆ. ಬಹುಶಃ ಆ ಕಾರಣಗಳಿಂದ ನನ್ನ ಮೇಲೆ ಈ ಆರೋಪ ಮಾಡಿರಬಹುದು. ಇದನ್ನ ಹೊರತುಪಡಿಸಿ ಇದು ಬಿಜೆಪಿಯ ಹತಾಶ ರಾಜಕೀಯವಾಗಿರಬಹುದು ಎಂದು ತಿರುಗೇಟು ನೀಡಿದ್ದಾರೆ.

    ಇತ್ತಿಚೇಗೆ ಕರ್ನಾಟಕದಲ್ಲಿ ಹೊರ ಬಂದ ʻವೋಟ್ ಚೋರಿʼ ಪ್ರಕರಣದ ಗಮನವನ್ನ ಬೇರೆಡೆ ಸೆಳೆಯುವ ಪ್ರಯತ್ನಕ್ಕಾಗಿ ರೆಡ್ಡಿ ಆರೋಪ ಮಾಡಿರಬಹುದು. ವದಂತಿಗೆ ನಾನು ಹೆಚ್ಚು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಚಿವ ಸೆಂಥಿಲ್‌ ಬಾಲಾಜಿಗೆ ಶೀಘ್ರವೇ ಬೈಪಾಸ್‌ ಸರ್ಜರಿ ಅಗತ್ಯ – ಇಡಿ ಅರೆಸ್ಟ್‌ ಬೆನ್ನಲ್ಲೇ ವೈದ್ಯರ ಸಲಹೆ

    ಜನಾರ್ಧನ ರೆಡ್ಡಿ ಆರೋಪಗಳೇನು?
    ಮಾಜಿ ಐಎಎಸ್‌ ಅಧಿಕಾರಿ, ತಮಿಳುನಾಡಿನ ಕಾಂಗ್ರೆಸ್‌ ಸಂಸದ ಸಸಿಕಾಂತ್‌ ಸೆಂಥಿಲ್ ಮಾಸ್ಕ್‌ಮ್ಯಾನ್‌ಗೆ ಬುರುಡೆ ಕೊಟ್ಟು ಕಳುಹಿಸಿದ್ದಾರೆ ಎಂದು ಜನಾರ್ದನ ರೆಡ್ಡಿ ಗಂಭೀರ ಆರೋಪಿಸಿದ್ದರು.

    ಕಳೆದ 15-20 ದಿನದಿಂದ ಧರ್ಮಸ್ಥಳದ ವಿಚಾರದಲ್ಲಿ ಸಾಕಷ್ಟು ಅಪಪ್ರಚಾರ ನಡೆಯುತ್ತಿದೆ. ಬಳ್ಳಾರಿ ಮೂಲದ ಅನ್ಯಮತಿಯ ಯುಟ್ಯೂಬರ್ ಒಬ್ಬ ಸೌಜನ್ಯ ಪ್ರಕರಣದ ಬಗ್ಗೆ ಮಾತನಾಡಿದ ವಿಡಿಯೋಗೆ ಮಿಲಿಯನ್ಸ್ ವ್ಯೂವ್ಸ್ ಬಂತು. ಆಗ ಎಡ ಪಂತಿಯ ಮೂವರು ಸೇರಿಕೊಂಡು ಇದನ್ನ ದೊಡ್ಡ ಮಟ್ಟಕ್ಕೆ ಕೊಂಡೊಯ್ಯಲು ಮುಂದಾದರು. ಕರ್ನಾಟಕ, ಭಾರತ ಅಷ್ಟೇ ಅಲ್ಲ ಈ ಜಗತ್ತಿನಲ್ಲಿ ಕೋಟ್ಯಂತರ ಜನ ನಂಬುವ ಸತ್ಯ ದೇವರು ಧರ್ಮಸ್ಥಳ. ಇಂತಹ ಧರ್ಮಸ್ಥಳದ ಬಗ್ಗೆ ಎಡಪಂತಿಯರು ಸಸಿಕಾಂತ್‌ ಸೆಂಥಿಲ್ ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ತಂದಿದ್ದಾರೆ. ಹೈಕಮಾಂಡ್ ಸರ್ಕಾರಕ್ಕೆ ಒತ್ತಡ ಹಾಕಿದ್ದರಿಂದ ವಿಶೇಷ ತನಿಖಾ ತಂಡ ರಚನೆಯಾಗಿದೆ. ಧರ್ಮಸ್ಥಳ ಬುರುಡೆ ರಹಸ್ಯದ ಮಾಸ್ಟರ್‌ ಮೈಂಡ್‌ ಸೆಂಥಿಲ್‌.

    ಹೈಕಮಾಂಡ್ ಸೂಚನೆಯಿಂದ ಕಾಂಗ್ರೆಸ್ ಸರ್ಕಾರ ಈಗ ಟ್ರ್ಯಾಪ್‌ನಲ್ಲಿ ಸಿಲುಕಿದೆ. ಅಭಿಮನ್ಯು ಚಕ್ರವ್ಯೂಹದಲ್ಲಿ ಸಿಲುಕಿದಂತೆ ಎಸ್‌ಐಟಿ ತನಿಖೆ ಮೂಲಕ ಚಕ್ರವ್ಯೂಹದಲ್ಲಿ ಸಿಲುಕಿದೆ. ಷಡ್ಯಂತ್ರ ನಡೆದಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಅವರೇ ಹೇಳಿದ್ದಾರೆ. ಧರ್ಮಸ್ಥಳದ ವಿರುದ್ಧ ವ್ಯವಸ್ಥಿತವಾದ ಈ ಅಪಪ್ರಚಾರ ನಡೆದಿದೆ ಎಂದು ದೂರಿದ್ದರು. ಇದನ್ನೂ ಓದಿ: ಬುರುಡೆ ಕೇಸ್‌ ಹಿಂದೆ ಕೈ ಸಂಸದ ಶಶಿಕಾಂತ್‌ ಸೆಂಥಿಲ್‌ ಇದ್ದಾರೆ: ಯಶ್‌ಪಾಲ್‌ ಸುವರ್ಣ

  • ಮಾಸ್ಕ್‌ಮ್ಯಾನ್‌ಗೆ ಬುರುಡೆ ಕೊಟ್ಟಿದ್ದೇ ಕೈ ಸಂಸದ  ಸಸಿಕಾಂತ್‌ ಸೆಂಥಿಲ್: ಜನಾರ್ದನ ರೆಡ್ಡಿ

    ಮಾಸ್ಕ್‌ಮ್ಯಾನ್‌ಗೆ ಬುರುಡೆ ಕೊಟ್ಟಿದ್ದೇ ಕೈ ಸಂಸದ ಸಸಿಕಾಂತ್‌ ಸೆಂಥಿಲ್: ಜನಾರ್ದನ ರೆಡ್ಡಿ

    – ಇಡೀ ಪ್ರಕರಣದ ಮಾಸ್ಟರ್‌ ಮೈಂಡ್‌ ಕೈ ಸಂಸದ

    ಬೆಂಗಳೂರು: ಮಾಜಿ ಐಎಎಸ್‌ ಅಧಿಕಾರಿ, ತಮಿಳುನಾಡಿನ ಕಾಂಗ್ರೆಸ್‌ ಸಂಸದ ಸಸಿಕಾಂತ್‌ ಸೆಂಥಿಲ್ (Sasikanth Senthil) ಮಾಸ್ಕ್‌ಮ್ಯಾನ್‌ಗೆ (Maskman) ಬುರುಡೆ (Skull) ಕೊಟ್ಟು ಕಳುಹಿಸಿದ್ದಾರೆ ಎಂದು ಮಾಜಿ ಸಚಿವ, ಹಾಲಿ ಶಾಸಕ ಜನಾರ್ದನ ರೆಡ್ಡಿ (Janardhana Reddy) ಗಂಭೀರ ಆರೋಪ ಮಾಡಿದ್ದಾರೆ.

    ಪಬ್ಲಿಕ್‌ ಟಿವಿ ಜೊತೆ ಮಾತನಾಡಿದ ಅವರು, ಕಳೆದ 15-20 ದಿನದಿಂದ ಧರ್ಮಸ್ಥಳದ ವಿಚಾರದಲ್ಲಿ ಸಾಕಷ್ಟು ಅಪಪ್ರಚಾರ ನಡೆಯುತ್ತಿದೆ. ಬಳ್ಳಾರಿ ಮೂಲದ ಅನ್ಯಮತಿಯ ಯುಟ್ಯೂಬರ್ ಒಬ್ಬ ಸೌಜನ್ಯ ಪ್ರಕರಣದ ಬಗ್ಗೆ ಮಾತನಾಡಿದ ವಿಡಿಯೋಗೆ ಮಿಲಿಯನ್ಸ್ ವ್ಯೂವ್ಸ್ ಬಂತು. ಆಗ ಎಡ ಪಂತಿಯ ಮೂವರು ಸೇರಿಕೊಂಡು ಇದನ್ನ ದೊಡ್ಡ ಮಟ್ಟಕ್ಕೆ ಕೊಂಡೊಯ್ಯಲು ಮುಂದಾದರು ಎಂದು ಹೇಳಿದರು. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್‌| ಯಾರದ್ದೋ ಫೋಟೋ ತೋರಿಸಿ ಪುತ್ರಿ ಎಂದು ಸುಳ್ಳು ಹೇಳಿದ ಸುಜಾತ ಭಟ್‌!

     

    ಕರ್ನಾಟಕ, ಭಾರತ ಅಷ್ಟೇ ಅಲ್ಲ ಈ ಜಗತ್ತಿನಲ್ಲಿ ಕೋಟ್ಯಂತರ ಜನ ನಂಬುವ ಸತ್ಯ ದೇವರು ಧರ್ಮಸ್ಥಳ. ಇಂತಹ ಧರ್ಮಸ್ಥಳದ ಬಗ್ಗೆ ಎಡಪಂತಿಯರು ಸಸಿಕಾಂತ್‌ ಸೆಂಥಿಲ್ ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ತಂದಿದ್ದಾರೆ. ಹೈಕಮಾಂಡ್ ಸರ್ಕಾರಕ್ಕೆ ಒತ್ತಡ ಹಾಕಿದ್ದರಿಂದ ವಿಶೇಷ ತನಿಖಾ ತಂಡ ರಚನೆಯಾಗಿದೆ. ಧರ್ಮಸ್ಥಳ ಬುರುಡೆ ರಹಸ್ಯದ ಮಾಸ್ಟರ್‌ ಮೈಂಡ್‌ ಸೆಂಥಿಲ್‌ ಎಂದಿದ್ದಾರೆ.

    ಹೈಕಮಾಂಡ್ ಸೂಚನೆಯಿಂದ ಕಾಂಗ್ರೆಸ್ ಸರ್ಕಾರ ಈಗ ಟ್ರ್ಯಾಪ್‌ನಲ್ಲಿ ಸಿಲುಕಿದೆ. ಅಭಿಮನ್ಯು ಚಕ್ರವ್ಯೂಹದಲ್ಲಿ ಸಿಲುಕಿದಂತೆ ಎಸ್‌ಐಟಿ ತನಿಖೆ ಮೂಲಕ ಚಕ್ರವ್ಯೂಹದಲ್ಲಿ ಸಿಲುಕಿದೆ. ಷಡ್ಯಂತ್ರ ನಡೆದಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಅವರೇ ಹೇಳಿದ್ದಾರೆ. ಧರ್ಮಸ್ಥಳದ ವಿರುದ್ಧ ವ್ಯವಸ್ಥಿತವಾದ ಈ ಅಪಪ್ರಚಾರ ನಡೆದಿದೆ ಎಂದು ಹೇಳಿದರು.

    ಈ ಪ್ರಕರಣ ಸಿಬಿಐ, ಎನ್‌ಐಎ ತನಿಖೆ ನಡೆಸಬೇಕು. ಇಲ್ಲದೇ ಇದ್ದರೆ ಹೈಕೋರ್ಟ್ ಅಥವಾ ಸುಪ್ರಿಂ ಕೋರ್ಟ್ ಜಡ್ಜ್ ಮೂಲಕ ತನಿಖೆ ಆಗಬೇಕು. ಸರ್ಕಾರ ನಿರ್ಧಾರ ಮಾಡದೇ ಇದ್ದರೆ ನಾನೇ ಇದರ ವಿರುದ್ದ ಕೋರ್ಟ್ ಗೆ ಹೋಗಲು ನಿರ್ಧರಿಸಿದ್ದೇನೆ ಎಂದರು.

  • ಕಾಂಗ್ರೆಸ್ ಸೇರಲಿದ್ದಾರೆ ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್

    ಕಾಂಗ್ರೆಸ್ ಸೇರಲಿದ್ದಾರೆ ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್

    – ತಮಿಳುನಾಡಿನಲ್ಲಿ ಬಿಜೆಪಿಗೆ ಅಣ್ಣಾಮಲೈ, ಕಾಂಗ್ರೆಸ್ಸಿಗೆ ಸೆಂಥಿಲ್

    ಚೆನ್ನೈ: ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಸೋಮವಾರ ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ.

    2009ರ ಬ್ಯಾಚ್ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಕಳೆದ ವರ್ಷ ಸೆಪ್ಟೆಂಬರಿನಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಜೊತೆಗೆ ಕೇಂದ್ರ ಸರ್ಕಾರದ ನೀತಿಗಳು ನನಗೆ ಇಷ್ಟವಾಗುತ್ತಿಲ್ಲ. ಕೇಂದ್ರ ಸರ್ಕಾರದ ಪಾಲಿಸಿಗಳು ಸೈದ್ಧಾಂತಿಕವಾಗಿ ನನಗೆ ಒಪ್ಪಿಗೆ ಇಲ್ಲವೆಂದು ಕಾರಣ ಹೇಳಿ ರಾಜೀನಾಮೆ ನೀಡಿದ್ದರು.

    ರಾಜೀನಾಮೆ ನೀಡಿದ ಬಳಿಕ ಮೌನವಾಗಿದ್ದ ಸೆಂಥಿಲ್ ಇಂದು ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವುದಾಗಿ ಹೇಳಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಮತ್ತು ಕೇಂದ್ರ ಸರ್ಕಾರದ ನೀತಿ ಬೇಸತ್ತು ನಾನು ರಾಜೀನಾಮೆ ನೀಡಿದ್ದೆ. ಈಗ ನಾನು ರಾಜಕೀಯಕ್ಕೆ ಬರುವುದಕ್ಕೆ ಒಳ್ಳೆಯ ಸಮಯ ಕೂಡಿ ಬಂದಿದೆ. ನನ್ನ ರಾಜಕೀಯ ಭವಿಷ್ಯಕ್ಕೆ ಕಾಂಗ್ರೆಸ್ ಉತ್ತಮ ವೇದಿಕೆಯಾಗಿದೆ ಎಂದು ಹೇಳಿದ್ದಾರೆ.

    ನಾನು ಪಕ್ಷ ಸೇರಿರುವುದಕ್ಕೆ ಕಾಂಗ್ರೆಸ್ ನಾಯಕರು ಕೂಡ ಬಹಳ ಸಂತೋಷಪಟ್ಟಿದ್ದಾರೆ. ನಾನು ಎಂಎಲ್‍ಎ ಎಂಪಿಯಾಗಬೇಕು ಎಂದು ಇಲ್ಲಿಗೆ ಬಂದಿಲ್ಲ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅವಶ್ಯಕತೆಯನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಎಲ್ಲರನ್ನೂ ಒಂದುಗೂಡಿಸುವುದು ನನ್ನ ಕೆಲಸವಾಗಿದೆ. ನನಗೆ ನಂಬಿಕೆ ಇದೆ 2024ರಲ್ಲಿ ರಾಜಕೀಯದಲ್ಲಿ ಹೊಸ ಅಲೆ ಬೀಸಲಿದೆ ಎಂದು ಸೆಂಥಿಲ್ ತಿಳಿಸಿದ್ದಾರೆ.

    ಕಳೆದ ಅಗಸ್ಟ್ 25ರಂದು ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದ ಅಣ್ಣಾಮಲೈ ಅವರು ತಮಿಳುನಾಡಿನಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಈಗ ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದ ಸಸಿಕಾಂತ್ ಸೆಂಥಿಲ್ ಅವರು ಕೂಡ ತಮಿಳುನಾಡಿನಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ.

  • ಎನ್‌ಆರ್‌ಸಿ, ಎನ್‌ಪಿಆರ್‌ಗೆ ದಾಖಲೆ, ಮಾಹಿತಿ ನೀಡಬೇಡಿ- ಸಸಿಕಾಂತ್ ಸೆಂಥಿಲ್

    ಎನ್‌ಆರ್‌ಸಿ, ಎನ್‌ಪಿಆರ್‌ಗೆ ದಾಖಲೆ, ಮಾಹಿತಿ ನೀಡಬೇಡಿ- ಸಸಿಕಾಂತ್ ಸೆಂಥಿಲ್

    – ಮೋದಿ ತುಘಲಕ್ ಸರ್ಕಾರ ನಡೆಸ್ತಿದ್ದಾರೆ

    ಚಿಕ್ಕಬಳ್ಳಾಪುರ: ಸಿಎಎ, ಎನ್‌ಆರ್‌ಸಿ ಹಾಗೂ ಎನ್‍ಪಿಆರ್ ಗಳ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಿಸಿ, ಸರ್ವೆ ಮಾಡಲು ಬಂದಾಗ ಅಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡಬೇಡಿ. ಒಂದು ವೇಳೆ ನೀಡಿದರೆ ನಿಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರಿ ಎಂದು ಸ್ವಯಂ ನಿವೃತ್ತಿ ಹೊಂದಿರುವ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದರು.

    ಸಿಎಎ ಹಾಗೂ ಎನ್‌ಆರ್‌ಸಿ ವಿರೋಧಿಸಿ ಚಿಂತಾಮಣಿ ನಗರದಲ್ಲಿ ಪ್ರಗತಿಪರ ಓಕ್ಕೂಟಗಳ ನೇತೃತ್ವದಲ್ಲಿ ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಲಾಯಿತು. ಮೌನ ಪ್ರತಿಭಟನಾ ರ‍್ಯಾಲಿ  ನಡೆಸಿ ನಂತರ ನಡೆದ ವಿಚಾರ ಸಂಕಿರಣದಲ್ಲಿ ಸೆಂಥಿಲ್ ಮಾತನಾಡಿದರು. ಅಧಿಕಾರಿಗಳು ಮಾಹಿತಿ ಕೇಳಲು ಬಂದರೆ ನಾವು ಮಾಹಿತಿ ನೀಡುವುದಿಲ್ಲವೆಂದು ವಾಪಸ್ ಕಳುಹಿಸಿ. ದೇಶದ 11 ರಾಜ್ಯಗಳು ಈ ಕಾಯ್ದೆಗಳನ್ನು ಜಾರಿ ಮಾಡಲ್ಲವೆಂದು ತಿಳಿಸಿವೆ. 2 ರಾಜ್ಯಗಳು ಇವುಗಳ ವಿರುದ್ಧ ರೆಗ್ಯುಲೇಷನ್ ಪಾಸ್ ಮಾಡಿವೆ. ನಾವು ಸಹ ಆ ಮಾರ್ಗದಲ್ಲಿಯೇ ಈ ಕಾಯ್ದೆಗಳನ್ನು ತಿರಸ್ಕರಿಸಬೇಕು ಎಂದರು.

    ಇದು ದೇಶದ ಸಮಸ್ಯೆಯಲ್ಲ, ನಮ್ಮ ನಿಮ್ಮ ಮನೆಯ ಸಮಸ್ಯೆ, ಇಂತಹ ಕಾಯ್ದೆಗಳನ್ನು ತಿರಸ್ಕರಿಸದೆ ಇವರನ್ನು ಹೀಗೆಯೇ ಬಿಟ್ಟರೆ ದೇಶವನ್ನು ಮಾರಿಬಿಡುತ್ತಾರೆ. ಆದ್ದರಿಂದ ಎಲ್ಲರೂ ಇದನ್ನು ಪ್ರತಿಭಟಿಸಬೇಕು ಎಂದು ತಿಳಿಸಿದರು.

    ನಮ್ಮ ದೇಶ ಸೆಕ್ಯೂಲರ್ ಸಿದ್ಧಾಂತ ಇರುವಂತಹದು ಅಂದ ಮಾತ್ರಕ್ಕೆ ಧರ್ಮ ಇಲ್ಲವೆಂದಲ್ಲ. ಆದರೆ ನಮ್ಮ ಸಂವಿಧಾನದ ಕಾಯ್ದೆಗಳನ್ನು ಧರ್ಮದ ಆಧಾರದ ಮೇಲೆ ರೂಪಿಸಬಾರದು, ಎನ್‌ಆರ್‌ಸಿ ಹಾಗೂ ಎನ್‍ಪಿಆರ್ ಗಳು ಅಕ್ರಮ ನುಸುಳುಕೋರರನ್ನು ತಡೆಗಟ್ಟಲು ಮಾತ್ರ. ಆದರೆ ದೇಶದ ಎಲ್ಲರನ್ನೂ ನಿಲ್ಲಿಸಿ ಅವರ ಪೌರತ್ವದ ಬಗ್ಗೆ ಪ್ರಶ್ನೆ ಮಾಡುವುದಲ್ಲ ಎಂದರು.

    ಪ್ರಧಾನಿ ಮೋದಿಯವರು ಒಂದು ರೀತಿಯ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ. ಅವರ ಸುತ್ತಲಿನ ಎಲ್ಲರೂ ಕಳ್ಳರು, ಇದನ್ನು ಯಾರಾದರೂ ಪ್ರಶ್ನೆ ಮಾಡಿದರೆ ಅವರನ್ನು ದೇಶವಿರೋಧಿಗಳು ಎಂದು ಬಿಂಬಿಸುತ್ತಾರೆ. ನೋಟು ಅಮಾನ್ಯೀಕರಣ, ಜಿಎಸ್‍ಟಿ ಮುಂತಾದ ಕೆಲವು ತಪ್ಪು ನಿರ್ಣಯಗಳಿಂದ ದೇಶದ ಆರ್ಥಿಕ ಪರಿಸ್ಥಿತಿ ಶೇ.2ರಷ್ಟು ಕುಸಿದಿದೆ, ಅನೇಕ ಕೈಗಾರಿಕೆಗಳು ಮುಚ್ಚಿವೆ ಎಂದು ಮೋದಿ ವಿರುದ್ಧ ಕಿಡಿಕಾರಿದರು.

  • ಗೋಲಿಬಾರ್ ಪರಿಹಾರ ವಾಪಸ್ ಪಡೆದಿದ್ದು, ರಾಜ್ಯ ಸರ್ಕಾರದ ಕೆಟ್ಟ ನಿರ್ಧಾರ: ಸಸಿಕಾಂತ್ ಸೆಂಥಿಲ್

    ಗೋಲಿಬಾರ್ ಪರಿಹಾರ ವಾಪಸ್ ಪಡೆದಿದ್ದು, ರಾಜ್ಯ ಸರ್ಕಾರದ ಕೆಟ್ಟ ನಿರ್ಧಾರ: ಸಸಿಕಾಂತ್ ಸೆಂಥಿಲ್

    ಮಂಗಳೂರು: ಗೋಲಿಬಾರ್ ಗೆ ನೇರ ಕಾರಣ ಕರ್ನಾಟಕ ರಾಜ್ಯ ಸರ್ಕಾರವಾಗಿದ್ದರೂ ಘೋಷಿಸಿದ ಪರಿಹಾರವನ್ನು ವಾಪಸ್ ಪಡೆದಿರೋದು ರಾಜ್ಯ ಸರ್ಕಾರದ ಕೆಟ್ಟ ನಿರ್ಧಾರ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಬೇಸರ ವ್ಯಕ್ತಪಡಿಸಿದ್ದಾರೆ.

    ಮಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಬಂದಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಕೇವಲ 300 ಮಂದಿ ಪ್ರತಿಭಟನಾಕಾರರನ್ನು ಕಂಟ್ರೋಲ್ ಮಾಡಲು ಆಗದಿದ್ದ ಪೊಲೀಸರು ಯಾಕೆ ಬೇಕು? ಪೊಲೀಸರು ಈ ರೀತಿಯಾಗಿ ಗೋಲಿಬಾರ್ ಮಾಡಬಾರದಿತ್ತು ಎಂದು ಹೇಳಿದ್ದಾರೆ.

    ನಾನು ಜಿಲ್ಲಾಧಿಕಾರಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಈ ರೀತಿ ಗೋಲಿಬಾರ್ ಆಗಿ ಎರಡು ಜೀವಗಳು ಬಲಿಯಾಗಿರೋದು ತುಂಬಾ ಬೇಸರ ತಂದಿದೆ. ಪೊಲೀಸ್ ಗೋಲಿಬಾರ್ ನಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಕೊಡೋದು ಹಿಂದಿನಿಂದಲೂ ಇದೆ. ಆದರೆ ಇದೇ ಮೊದಲ ಬಾರಿಗೆ ಘೋಷಿಸಿದ ಪರಿಹಾರ ಮೊತ್ತವನ್ನು ವಾಪಸ್ ಪಡೆಯಲಾಗಿದೆ. ರಾಜ್ಯದಲ್ಲಿ ಮೊದಲು ಮಾನವೀಯತೆ ನೋಡಬೇಕು. ಅದರ ಬದಲು ಈ ತರದ ನಿರ್ಧಾರ ಮಾಡೋದು ಸರ್ಕಾರದ ಸರಿಯಾದ ಕ್ರಮವಲ್ಲ ಎಂದರು.

    ಸಿಎಎ ಹಾಗೂ ಎನ್.ಆರ್.ಸಿ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, ಈ ಮಸೂದೆಯಿಂದ ದೇಶ ವಿಭಜನೆಯಾಗುತ್ತದೆ. ಬಡವರು ಹಾಗೂ ಮಧ್ಯಮ ವರ್ಗದ ಜನರಿಗೆ ತುಂಬಾ ತೊಂದರೆಯಾಗುತ್ತದೆ. ದೇಶಕ್ಕೆ ಈಗ ಈ ಮಸೂದೆಯ ಅವಶ್ಯಕತೆ ಇಲ್ಲ. ಮುಂದೆ ಬೇಕಾದರೆ ಯೋಚಿಸಬಹುದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

  • ಕೇಂದ್ರ ಶಿಕ್ಷಣ ನೀತಿ ಸರಿಯಿಲ್ಲ- ಮಾಜಿ ನಕ್ಸಲನ ಭೇಟಿಗೆ ಬಂದ ಸಸಿಕಾಂತ್ ಸೆಂಥಿಲ್

    ಕೇಂದ್ರ ಶಿಕ್ಷಣ ನೀತಿ ಸರಿಯಿಲ್ಲ- ಮಾಜಿ ನಕ್ಸಲನ ಭೇಟಿಗೆ ಬಂದ ಸಸಿಕಾಂತ್ ಸೆಂಥಿಲ್

    ರಾಯಚೂರು: ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ನೂತನ ಶಿಕ್ಷಣ ನೀತಿ ಕೇಂದ್ರೀಕೃತ ಯೋಜನೆಯಾಗಿದೆ ಎಂದು ಐಎಎಸ್ ವೃತ್ತಿಗೆ ರಾಜೀನಾಮೆ ನೀಡಿರುವ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ.

    ರಾಯಚೂರಿನಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ನಕ್ಸಲ್ ದೊಡ್ಡಿಪಾಳ್ಯ ನರಸಿಂಹ ಮೂರ್ತಿಯನ್ನು ಸಸಿಕಾಂತ್ ಸೆಂಥಿಲ್ ಭೇಟಿ ಮಾಡಲು ಬಂದಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ತಪ್ಪು ಮಾಹಿತಿಯಿಂದ ನರಸಿಂಹ ಮೂರ್ತಿ ಬಂಧನವಾಗಿದೆ. ಹೀಗಾಗಿ ಅವರನ್ನು ನೋಡಲು ರಾಯಚೂರಿಗೆ ಬಂದಿದ್ದೇನೆ. ನಾನು ಜನರ ಜೊತೆಗೆ ಇರುತ್ತೇನೆ, ಸರ್ಕಾರದ ಹಿಡನ್ ಅಜೆಂಡಾಗಳ ಕುರಿತು ಜನರಿಗೆ ಮಾಹಿತಿ ನೀಡುತ್ತೇನೆ. ನಾನು ಅಧಿಕಾರದಲ್ಲಿ ಇದ್ದಾಗ ಹಲವು ನಕ್ಸಲ್‍ರನ್ನು ಹೊರಗೆ ತರಲು ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು.

    ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿ ಯೋಜನೆ ಪ್ರಧಾನ ಮಂತ್ರಿಗಳ ಕೈಯಲ್ಲಿ ಇರುವುದರಿಂದ ಹೆಚ್ಚಿನ ಅನುದಾನಕ್ಕೆ ಒತ್ತು ನೀಡಲ್ಲ. ಈ ನೀತಿಯು ಪ್ರಾಥಮಿಕ ಶಿಕ್ಷಣವನ್ನು ಪಡೆಯುವ ವಿದ್ಯಾರ್ಥಿಗಳ ಶೈಕ್ಷಣಿಕ ಹಕ್ಕನ್ನು ಕಸಿದು ಕೊಂಡಂತಾಗುತ್ತದೆ. ಇದರಿಂದ ರಾಷ್ಟ್ರೀಯ ಶಿಕ್ಷಣ ನೀತಿ ಒಕ್ಕೂಟಕ್ಕೆ ಧಕ್ಕೆಯಾಗುತ್ತದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

    ಕೇಂದ್ರ ಸರ್ಕಾರದ ಈ ನಡೆಯ ಕುರಿತು ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದ್ದರೂ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ನಾನು ದೇಶದಲ್ಲಿ ಪರಿಸ್ಥಿತಿ ಸರಿ ಇಲ್ಲವೆಂದು ರಾಜೀನಾಮೆ ನೀಡಿದ್ದೇನೆ. ಯಾವುದೇ ಕಾರಣಕ್ಕೂ ಮತ್ತೆ ಕೆಲಸಕ್ಕೆ ಮರಳುವುದಿಲ್ಲ. ಈ ವಿಚಾರ ಈಗಾಗಲೇ ಸರ್ಕಾರದ ಗಮನಕ್ಕೂ ತಂದಿದ್ದೇನೆ ಎಂದು ಸಸಿಕಾಂತ್ ಸೆಂಥಿಲ್ ಸ್ಪಷ್ಟಪಡಿಸಿದರು.

  • ಪಿಒಕೆ ವಶಕ್ಕೆ ಪಡೆಯುತ್ತೇವೆ, ರಾಮಮಂದಿರ ಕಟ್ಟುತ್ತೇವೆ: ಸೆಂಥಿಲ್ ವಿರುದ್ಧ ಸುನೀಲ್ ಕುಮಾರ್ ಕಿಡಿ

    ಪಿಒಕೆ ವಶಕ್ಕೆ ಪಡೆಯುತ್ತೇವೆ, ರಾಮಮಂದಿರ ಕಟ್ಟುತ್ತೇವೆ: ಸೆಂಥಿಲ್ ವಿರುದ್ಧ ಸುನೀಲ್ ಕುಮಾರ್ ಕಿಡಿ

    ಉಡುಪಿ: ಸಂಸದ ಅನಂತ್‍ಕುಮಾರ್ ಹೆಗ್ಡೆ ಬೆನ್ನಲ್ಲೇ ಶಾಸಕ ಸುನೀಲ್ ಕುಮಾರ್ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ನೂತನ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ನಗರದಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಶಾಸಕರು, ಪ್ರಧಾನಿ ಮೋದಿ ನಿಲುವನ್ನು ವಿರೋಧಿಸಿ ರಾಜೀನಾಮೆ ಕೊಟ್ಟಿದ್ದೀರಿ. ಮುಂದೆ ನಿಮ್ಮಂತವರು ಆತ್ಮಹತ್ಯೆಯನ್ನೂ ಕೂಡ ಮಾಡಿಕೊಳ್ಳಬೇಕಾಗುತ್ತದೆ. ಕಾಶ್ಮೀರ, ರಾಮಮಂದಿರ ವಿಚಾರದಲ್ಲಿ ಸೆಂಥಿಲ್ ಅವರಿಗೆ ಅಸಮಾಧಾನವಂತೆ. ಕೇವಲ 370ನೇ ವಿಧಿ ಅಲ್ಲ, ಪಿಒಕೆ ಒಳಗೆ ಪ್ರವೇಶ ಮಾಡುತ್ತೇವೆ. ರಾಮ ಮಂದಿರವನ್ನೂ ಕಟ್ಟುತ್ತೇವೆ ಎಂದು ಸವಾಲು ಹಾಕಿದರು.

    ಒಬ್ಬ ಜಿಲ್ಲಾಧಿಕಾರಿ ರಾಜೀನಾಮೆ ಕೊಟ್ಟರೆ ನಮ್ಮ ನಿಲುವು ಬದಲಾಗುವುದಿಲ್ಲ. ನೀವು ತಮಿಳುನಾಡಿನಲ್ಲಿ ಯಾವುದೋ ರಾಜಕೀಯ ಪಕ್ಷದಿಂದ ಚುನಾವಣೆಗೆ ನಿಲ್ಲುವುದಕ್ಕಾಗಿ ದೇಶದ ವ್ಯವಸ್ಥೆಯನ್ನು ಪ್ರಶ್ನೆ ಮಾಡಬೇಡಿ. ಕಾಶ್ಮೀರದ ಕುರಿತಂತೆ ರಾಮ ಮಂದಿರದ ಕುರಿತಂತೆ ನಮ್ಮ ಪಕ್ಷದ ನಿಲುವು ಬದಲಾಗುವುದಿಲ್ಲ. ಜಗತ್ತು ಭಾರತದ ಆಡಳಿತವನ್ನು ಒಪ್ಪಿಕೊಳ್ಳುತ್ತೆ. ಭಾರತದ ನಾಗರಿಕರು ಪ್ರಧಾನಿ ನರೇಂದ್ರ ಮೋದಿ ಅವರ ಕೆಲಸ ಮೆಚ್ಚಿದೆ ಎಂದು ಸುನೀಲ್ ಹೇಳಿದರು.

    ಸಂಸದ ಅನಂತ್‍ಕುಮಾರ್ ಹೆಗ್ಡೆ ಅವರು ಸೋಮವಾರ ಟ್ವೀಟ್ ಮೂಲಕ ಸಸಿಕಾಂತ್ ಸೆಂಥಿಲ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕೇಂದ್ರ ಸರ್ಕಾರ ಸಂಸತ್‍ನಲ್ಲಿ ಬಹುಮತದಿಂದ ಕೈಗೊಂಡ ನಿರ್ಧಾರವನ್ನು ಸರ್ಕಾರಿ ಅಧಿಕಾರಿ ಪ್ರಶ್ನಿಸಬಾರದು. ಅಂತಹ ದುಸ್ಸಾಹಸಕ್ಕೆ ಸೆಂಥಿಲ್ ಕೈಹಾಕಿದ್ದಾರೆ. ಇದಕ್ಕಿಂತ ದೊಡ್ಡ ದ್ರೋಹ ಮತ್ತೊಂದಿಲ್ಲ ಎಂದು ಗುಡುಗಿದ್ದರು.

    ಸಂಬಂಧಪಟ್ಟ ಅಧಿಕಾರಿಗಳು ಸಸಿಕಾಂತ್ ಸೆಂಥಿಲ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ರಾಜ್ಯಪಾಲರಿಗೂ ಕ್ರಮಕೈಗೊಳ್ಳುವ ಅಧಿಕಾರವಿದೆ. ಜನರು ಕೂಡ ಇದನ್ನು ಬಯಸುತ್ತಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಇಂತಹ ದುಷ್ಕೃತ್ಯ ಎಸಗಿದ್ದಾರೆ. ಇದರ ಹಿಂದೆ ಇರುವ ಕೈಗಳ ಕೈವಾಡ ಬೆಳಕಿಗೆ ಬರಬೇಕು. ಹೀಗಾಗಿ ತನಿಖೆ ಅಗತ್ಯವಾಗಿದೆ ಎಂದು ಒತ್ತಾಯಿಸಿದ್ದರು.

    ಅನಂತ್‍ಕುಮಾರ್ ಹೆಗ್ಡೆ ಅವರು ಭಾನುವಾರ ಸಸಿಕಾಂತ್ ಸೆಂಥಿಲ್ ಅವರ ಪತ್ರಿಕಾ ಹೇಳಿಕೆಯ ತುಣುಕನ್ನು ಟ್ವೀಟ್ ಮಾಡಿ, ಈತ ಮಾಡಬೇಕಾದ ಮೊದಲ ಕೆಲಸವೆಂದರೆ ಕೂಡಲೇ ತನ್ನ ನಿಲುವನ್ನು ಬೆಂಬಲಿಸಿದವರೊಂದಿಗೆ ಪಾಕಿಸ್ತಾನಕ್ಕೆ ವಲಸೆ ಹೋಗುವುದು. ಇದು ಪ್ರಾಯೋಗಿಕವಾಗಿಯೂ ಸುಲಭ ಮತ್ತು ಅಂತಿಮ ಪರಿಹಾರ ಕೂಡ. ಇಲ್ಲೇ ಇದ್ದು ದೇಶ ಒಡೆಯುವ ಬದಲು, ಅಲ್ಲಿಗೆ ಹೋಗಿ ನಮ್ಮ ದೇಶ ಮತ್ತು ನಮ್ಮ ಸರ್ಕಾರದ ವಿರುದ್ಧ ನೇರ ಹೋರಾಟ ಮಾಡುವುದು ಒಳಿತು. ಇದರಲ್ಲಾದರೂ ನಿಯತ್ತು ತೋರಿಸಲಿ ಎಂದು ಹೇಳಿದ್ದರು.

  • ಸಸಿಕಾಂತ್ ಸೆಂಥಿಲ್ ರಾಜದ್ರೋಹ ಎಸಗಿದ್ದಾರೆ: ಅನಂತ್ ಕುಮಾರ್ ಹೆಗ್ಡೆ

    ಸಸಿಕಾಂತ್ ಸೆಂಥಿಲ್ ರಾಜದ್ರೋಹ ಎಸಗಿದ್ದಾರೆ: ಅನಂತ್ ಕುಮಾರ್ ಹೆಗ್ಡೆ

    ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ರಾಜದ್ರೋಹ ಎಸಗಿದ್ದಾರೆ ಎಂದು ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗ್ಡೆ ಆರೋಪಿಸಿದ್ದಾರೆ.

    ಟ್ವಿಟ್ಟರ್ ನಲ್ಲಿ ಸಸಿಕಾಂತ್ ಸೆಂಥಿಲ್ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಸಂಸದರು, ಕೇಂದ್ರ ಸರ್ಕಾರ ಸಂಸತ್‍ನಲ್ಲಿ ಬಹುಮತದಿಂದ ಕೈಗೊಂಡ ನಿರ್ಧಾರವನ್ನು ಸರ್ಕಾರಿ ಅಧಿಕಾರಿ ಪ್ರಶ್ನಿಸಬಾರದು. ಅಂತಹ ದುಸ್ಸಾಹಸಕ್ಕೆ ಸೆಂಥಿಲ್ ಕೈಹಾಕಿದ್ದಾರೆ. ಇದಕ್ಕಿಂತ ದೊಡ್ಡ ದ್ರೋಹ ಮತ್ತೊಂದಿಲ್ಲ ಎಂದು ಗುಡುಗಿದರು.

    ಸಸಿಕಾಂತ್ ಸೆಂಥಿಲ್ ಅವರ ಹೇಳಿಕೆ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ರಾಜ್ಯಪಾಲರಿಗೂ ಕ್ರಮಕೈಗೊಳ್ಳುವ ಅಧಿಕಾರವಿದೆ. ಜನರು ಕೂಡ ಇದನ್ನು ಬಯಸುತ್ತಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಇಂತಹ ದುಷ್ಕೃತ್ಯ ಎಸಗಿದ್ದಾರೆ. ಇದರ ಹಿಂದೆ ಇರುವ ಕೈಗಳ ಕೈವಾಡ ಬೆಳಕಿಗೆ ಬರಬೇಕು. ಹೀಗಾಗಿ ತನಿಖೆ ಅಗತ್ಯವಾಗಿದೆ ಎಂದು ಒತ್ತಾಯಿಸಿದರು.

    ಸಂವಿಧಾನ ಬದ್ಧವಾಗಿ ಕೈಗೊಂಡ ನಿರ್ಧಾರವನ್ನು ಸರ್ಕಾರಿ ಅಧಿಕಾರಿ ಪ್ರಶ್ನಿಸಿರುವುದು ಸೂಕ್ತವಲ್ಲ. ಸಸಿಕಾಂತ್ ಸೆಂಥಿಲ್ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ದುರಂಹಕಾರ, ಅಸಭ್ಯತೆ ಮೆರೆದಿದ್ದಾರೆ. ತಕ್ಷಣವೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ಸಂಸದರು ಭಾನುವಾರವೂ ಟ್ವೀಟ್ ಮೂಲಕ ಸಸಿಕಾಂತ್ ಸೆಂಥಿಲ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಸಸಿಕಾಂತ್ ಸೆಂಥಿಲ್ ಅವರ ಪತ್ರಿಕಾ ಹೇಳಿಕೆಯ ತುಣುಕನ್ನು ಟ್ವೀಟ್ ಮಾಡಿದ್ದ ಹೆಗ್ಡೆ, ಈತ ಮಾಡಬೇಕಾದ ಮೊದಲ ಕೆಲಸವೆಂದರೆ ಕೂಡಲೇ ತನ್ನ ನಿಲುವನ್ನು ಬೆಂಬಲಿಸಿದವರೊಂದಿಗೆ ಪಾಕಿಸ್ತಾನಕ್ಕೆ ವಲಸೆ ಹೋಗುವುದು. ಇದು ಪ್ರಾಯೋಗಿಕವಾಗಿಯೂ ಸುಲಭ ಮತ್ತು ಅಂತಿಮ ಪರಿಹಾರ ಕೂಡ. ಇಲ್ಲೇ ಇದ್ದು ದೇಶ ಒಡೆಯುವ ಬದಲು, ಅಲ್ಲಿಗೆ ಹೋಗಿ ನಮ್ಮ ದೇಶ ಮತ್ತು ನಮ್ಮ ಸರ್ಕಾರದ ವಿರುದ್ಧ ನೇರ ಹೋರಾಟ ಮಾಡುವುದು ಒಳಿತು. ಇದರಲ್ಲಾದರೂ ನಿಯತ್ತು ತೋರಿಸಲಿ ಎಂದು ಹೇಳಿದ್ದರು.

  • ಪಾಕಿಸ್ತಾನಕ್ಕೆ ವಲಸೆ ಹೋಗಿ: ಸೆಂಥಿಲ್ ವಿರುದ್ಧ ಅನಂತ್ ಕುಮಾರ್ ಹೆಗ್ಡೆ ಕಿಡಿ

    ಪಾಕಿಸ್ತಾನಕ್ಕೆ ವಲಸೆ ಹೋಗಿ: ಸೆಂಥಿಲ್ ವಿರುದ್ಧ ಅನಂತ್ ಕುಮಾರ್ ಹೆಗ್ಡೆ ಕಿಡಿ

    ಕಾರವಾರ: ಪಾಕಿಸ್ತಾನಕ್ಕೆ ವಲಸೆ ಹೋಗುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಅವರಿಗೆ ಸಂಸದ ಅನಂತ್ ಕುಮಾರ್ ಹೆಗ್ಡೆ ಹೇಳಿದ್ದಾರೆ.

    ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನಗೊಂಡು ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ ಎಂದು ಸಸಿಕಾಂತ್ ಸೆಂಥಿಲ್ ತಿಳಿಸಿದ್ದರು. ಇದರಿಂದ ಕೋಪಗೊಂಡಿರುವ ಸಂಸದರು, ಟ್ವೀಟ್ ಮೂಲಕ ಸಸಿಕಾಂತ್ ಅವರ ವಿರುದ್ಧ ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಕೇಂದ್ರದ ನೀತಿಯೇ ರಾಜೀನಾಮೆಗೆ ಕಾರಣ- ಸಸಿಕಾಂತ್ ಸೆಂಥಿಲ್

    ಸಸಿಕಾಂತ್ ಸೆಂಥಿಲ್ ಅವರ ಪತ್ರಿಕಾ ಹೇಳಿಕೆಯ ತುಣುಕನ್ನು ಟ್ವೀಟ್ ಮಾಡಿರುವ ಸಂಸದರು, ಈತ ಮಾಡಬೇಕಾದ ಮೊದಲ ಕೆಲಸವೆಂದರೆ ಕೂಡಲೇ ತನ್ನ ನಿಲುವನ್ನು ಬೆಂಬಲಿಸಿದವರೊಂದಿಗೆ ಪಾಕಿಸ್ತಾನಕ್ಕೆ ವಲಸೆ ಹೋಗುವುದು. ಇದು ಪ್ರಾಯೋಗಿಕವಾಗಿಯೂ ಸುಲಭ ಮತ್ತು ಅಂತಿಮ ಪರಿಹಾರ ಕೂಡ. ಇಲ್ಲೇ ಇದ್ದು ದೇಶ ಒಡೆಯುವ ಬದಲು, ಅಲ್ಲಿಗೆ ಹೋಗಿ ನಮ್ಮ ದೇಶ ಮತ್ತು ನಮ್ಮ ಸರ್ಕಾರದ ವಿರುದ್ಧ ನೇರ ಹೋರಾಟ ಮಾಡುವುದು ಒಳಿತು. ಇದರಲ್ಲಾದರೂ ನಿಯತ್ತು ತೋರಿಸಲಿ ಎಂದು  ತಿಳಿಸಿದ್ದಾರೆ.

    ಸಸಿಕಾಂತ್ ಸೆಂಥಿಲ್ ತಮಿಳುನಾಡು ಮೂಲದವರಾಗಿದ್ದು ಎಲೆಕ್ಟ್ರಾನಿಕ್ಸ್ ಹಾಗೂ ಕಮ್ಯೂನಿಕೇಷನ್ ಎಂಜಿನಿಯರಿಂಗ್ ಪದವೀಧರರು. ಸೆಂಥಿಲ್ ಅವರು ಈ ಹಿಂದೆ ರಾಯಚೂರು ಜಿಲ್ಲಾಧಿಕಾರಿಯಾಗಿಯೂ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದರು.

    ದೇಶದಲ್ಲಿ ನಡೆಯುತ್ತಿರುವ ಪ್ರಸಕ್ತ ಬೆಳವಣಿಗೆ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುವುದಾಗಿ ಅವರು ತಿಳಿಸಿದ್ದರು. ರಾಜೀನಾಮೆಯ ಕುರಿತಾಗಿ ಅಧಿಕೃತ ಪತ್ರವನ್ನು ಬರೆದಿದ್ದ ಸಸಿಕಾಂತ್ ಸೆಂಥಿಲ್ ಅವರು, ಪ್ರಜಾಪ್ರಭುತ್ವದ ಮೂಲಭೂತ ಅಂಶಗಳಿಗೆ ಹಿಂದೆಂದೂ ಕಾರಣದಂತಹಾ ರೀತಿಯ ಅಪಾಯ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕ ಹುದ್ದೆಯಲ್ಲಿ ಮುಂದುವರಿಯುವುದು ಅನೈತಿಕ ಎಂದು ಭಾವಿಸುತ್ತೇನೆ ಎಂಬುವುದನ್ನು ಉಲ್ಲೇಖಿಸಿದ್ದರು.

  • ಸಸಿಕಾಂತ್ ಸೆಂಥಿಲ್ ವಿರುದ್ಧ ಲೋಕಾಯುಕ್ತಕ್ಕೆ ದೂರು

    ಸಸಿಕಾಂತ್ ಸೆಂಥಿಲ್ ವಿರುದ್ಧ ಲೋಕಾಯುಕ್ತಕ್ಕೆ ದೂರು

    ಮಂಗಳೂರು: ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿದ ಸಸಿಕಾಂತ್ ಸೆಂಥಿಲ್ ವಿರುದ್ಧ ದಕ್ಷಿಣ ಕನ್ನಡ ಹೊಯ್ಗೆ(ಮರಳು) ಲಾರಿ ಮಾಲಿಕರ ಸಂಘಗಳ ಒಕ್ಕೂಟ ಅಧ್ಯಕ್ಷ ಜೈರಾಜ್ ಶೆಟ್ಟಿ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

    ಸ್ಯಾಂಡ್ ಬಝಾರ್ ಆ್ಯಪ್ ಮೂಲಕ ಸೆಂಥಿಲ್ ಅವ್ಯವಹಾರ ಮಾಡಿದ್ದಾರೆ. ಒಂದೇ ಪರ್ಮಿಟ್‍ಗೆ ಹಲವೆಡೆ ಅಕ್ರಮ ಮರಳು ತೆಗೆಯಲು ಒಪ್ಪಿಗೆ ನೀಡಿದ್ದಾರೆ. ತುಂಬೆ ಡ್ಯಾಮ್ ಡ್ರೆಜ್ಜಿಂಗ್ ನೆಪದಲ್ಲಿ ಅವ್ಯವಹಾರ ಮಾಡಿದ್ದಾರೆ. ದಿಲ್ಲಿ ಕಂಪನಿಗೆ ಕಾನೂನು ಉಲ್ಲಂಘಿಸಿ ಟೆಂಡರ್ ಕೊಟ್ಟಿದ್ದಾರೆ ಎಂದು ಆರೋಪಿಸಿ ಜೈರಾಜ್ ದೂರು ನೀಡಿದ್ದಾರೆ.

    ಈ ಎಲ್ಲ ವಿಚಾರದ ಬಗ್ಗೆ ಹೈಕೋರ್ಟಿಗೆ ತಪ್ಪು ಮಾಹಿತಿ ನೀಡಿ, ಮರಳು ಮಾರಿದ್ದಾರೆ. ಮೂರು ಸಾವಿರದ ಹೊಯ್ಗೆಯನ್ನು 6 ಸಾವಿರಕ್ಕೆ ಮಾರಾಟ ಮಾಡಿದ್ದಾರೆ. ಉಡುಪಿಯಲ್ಲಿ ಬ್ಲಾಕ್ ಲಿಸ್ಟಲ್ಲಿರುವ ಕಂಪನಿಗೆ ಜಿಪಿಎಸ್ ಟೆಂಡರ್ ಆಗಿದೆ. ಟಿ ಫೋರ್ ಯು ಎಂಬ ಕಂಪನಿಗೆ ಟೆಂಡರ್ ಕೊಟ್ಟಿದ್ದರಲ್ಲಿ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಜೈರಾಜ್ ಆರೋಪಿಸಿದ್ದಾರೆ.

    ಹೊಯ್ಗೆ ಲಾರಿಗಳಿಗೆ ಜಿಪಿಎಸ್ ಅಳವಡಿಕೆಯಲ್ಲಿ ಭಾರೀ ಅವ್ಯವಹಾರ ಆಗಿದೆ. ವಶಕ್ಕೆ ಪಡೆದ ಮರಳನ್ನು ಒಂದೇ ಕಂಪನಿಗೆ ಕೊಟ್ಟಿದ್ದರಲ್ಲೂ ಅಕ್ರಮವಾಗಿದೆ ಎಂದು ಜೈರಾಜ್ ಆರೋಪ ಮಾಡಿದ್ದಾರೆ.