Tag: ಸಸಿ

  • ರಾಜಭವನದಲ್ಲಿ 75 ಶ್ರೀಗಂಧ ಸಸಿ ನೆಟ್ಟು ಸ್ವಾತಂತ್ರ್ಯೋತ್ಸವ ಆಚರಣೆ

    ರಾಜಭವನದಲ್ಲಿ 75 ಶ್ರೀಗಂಧ ಸಸಿ ನೆಟ್ಟು ಸ್ವಾತಂತ್ರ್ಯೋತ್ಸವ ಆಚರಣೆ

    ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ವಿಶೇಷವಾಗಿ ಆಚರಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮ ಮತ್ತು ರಾಜಭವನದ ಸಹಯೋಗದಲ್ಲಿ ಬುಧವಾರ ರಾಜಭವನದ ಅಂಗಳದಲ್ಲಿ 75 ಶ್ರೀಗಂಧದ ಸಸಿಗಳನ್ನು ನೆಡಲಾಯಿತು.

    ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಶ್ರೀಗಂಧ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ತಾರಾ ಅನುರಾಧ, ಕೆಎಸ್‍ಎಫ್‍ಡಿಸಿ ಅಧಿಕಾರಿಗಳು, ರಾಜಭವನದ ಅಧಿಕಾರಿಗಳು ಸಹ ಶ್ರೀಗಂಧ ಸಸಿಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಕೈಜೋಡಿಸಿದರು.

    ನಂತರ ಮಾತನಾಡಿದ ರಾಜ್ಯಪಾಲರು, ಶ್ರೀಗಂಧದ ನಾಡು ಎಂದೇ ಕರ್ನಾಟಕ ಪ್ರಸಿದ್ಧಿಯಾಗಿದೆ. ಶ್ರೀಗಂಧದಂತಹ ಸೊಗಡನ್ನು ಹೊಂದಿರುವ ಸುಂದರ ನಾಡಿನ ಪರಿಸರವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ರಾಜ್ಯದಲ್ಲಿರುವ ಅರಣ್ಯವನ್ನು ಸಂರಕ್ಷಿಸುವುದರ ಜೊತೆಯಲ್ಲೇ, ಪರಿಸರ ಮಾಲಿನ್ಯವನ್ನು ತಡೆಗಟ್ಟಲು ನಗರ ಪ್ರದೇಶಗಳಲ್ಲೂ ಹೆಚ್ಚಾಗಿ ಗಿಡ ಮರಗಳನ್ನು ಬೆಳೆಸುವುದಕ್ಕೆ ಆದ್ಯತೆ ನೀಡಬೇಕು. ಇದರಿಂದ ನಗರಗಳಲ್ಲಿ ಹಸಿರು ಹೆಚ್ಚಾಗುವುದಲ್ಲದೆ, ಸೌಂದರ್ಯವೂ ಇಮ್ಮಡಿಯಾಗುತ್ತದೆ. 75 ಶ್ರೀಗಂಧದ ಮರಗಳನ್ನು ನೆಡುವ ಮೂಲಕ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವವನ್ನು ವಿಶೇಷವಾಗಿ ಆಚರಿಸುತ್ತಿರುವ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಕಾರ್ಯ ಶ್ಲಾಘನೀಯವಾಗಿದೆ. ಬೇರೆ ಸಂಘ ಸಂಸ್ಥೆಗಳೂ ಕೂಡಾ ಇಂತಹ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಎಂದು ಕರೆ ನೀಡಿದರು. ಇದನ್ನೂ ಓದಿ: ಜನರನ್ನು ದಾರಿ ತಪ್ಪಿಸಬೇಡಿ: ಬಾಬಾ ರಾಮದೇವ್‌ ವಿರುದ್ಧ ದೆಹಲಿ ಹೈಕೋರ್ಟ್‌ ಕಿಡಿ

    ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನುರಾಧ ಮಾತನಾಡಿ, ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಜನಮಾನಸದಲ್ಲಿ ಅಚ್ಚಳಿಯದಂತೆ ಮಾಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹರ್ ಘರ್ ತಿರಂಗಾ ಯಶಸ್ವಿಯಾಗಿದೆ. ಈ ಸಂದರ್ಭವನ್ನು ಇನ್ನಷ್ಟು ವಿಶೇಷವಾಗಿ ಆಚರಿಸುವುದು ನಮ್ಮ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ರಾಜಭವನದಲ್ಲಿ 75 ಶ್ರೀಗಂಧದ ಸಸಿಗಳನ್ನು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರ ಅಮೃತ ಹಸ್ತದಿಂದ ನೆಡಿಸಲಾಗಿದೆ. ಅಲ್ಲದೇ, ಶ್ರೀಗಂಧದ ಮರಗಳಿಗೆ ಸೂಕ್ತ ರಕ್ಷಣೆ ದೊರಕುವಂತಹ ಕಚೇರಿಗಳಲ್ಲೂ ಕೂಡಾ ಸಸಿಗಳನ್ನು ನೆಡುವ ಕಾರ್ಯವನ್ನು ನಮ್ಮ ನಿಗಮದ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ನಿಗದ ವ್ಯವಸ್ಥಾಪಕ ನಿರ್ದೇಶಕಿ ರಾಧಾದೇವಿ, ಐಎಫ್‍ಎಸ್ ರಾಜಭವನದ ವಿಶೇಷ ಕಾರ್ಯದರ್ಶಿ ಪ್ರಭುಶಂಕರ್, ಎಡಿಸಿ ಸಾಬೂ ಥಾಮಸ್, ರಾಜ್ಯಪಾಲರ ಉಪ ಕಾರ್ಯದರ್ಶಿ ಯೋಗೇಶ್ ಉಪಾಧ್ಯಾಯ್, ಓಎಸ್ ಡಿ ಶಂಕರ್ ಗುಜರ್ ಸೇರಿದಂತೆ ಇತರರಿದ್ದರು. ಇದನ್ನೂ ಓದಿ: ನಾನು ಕ್ರಿಶ್ಚಿಯನ್; ಧ್ವಜಾರೋಹಣ ಮಾಡಲ್ಲ: ಮುಖ್ಯ ಶಿಕ್ಷಕಿ

    Live Tv
    [brid partner=56869869 player=32851 video=960834 autoplay=true]

  • ಪಬ್ಲಿಕ್‌ ಟಿವಿ ದಶಮಾನೋತ್ಸವ: ರಾಜ್ಯಾದ್ಯಂತ ಸಸಿ ನೆಟ್ಟು ಶುಭ ಕೋರಿದ ಜನತೆ

    ಪಬ್ಲಿಕ್‌ ಟಿವಿ ದಶಮಾನೋತ್ಸವ: ರಾಜ್ಯಾದ್ಯಂತ ಸಸಿ ನೆಟ್ಟು ಶುಭ ಕೋರಿದ ಜನತೆ

    ಬೆಂಗಳೂರು: ಪಬ್ಲಿಕ್ ಟಿವಿಯ ದಶಮಾನೋತ್ಸವದ ನೆನಪನ್ನು ಹಚ್ಚ ಹಸಿರಾಗಿಸಬೇಕು ಎಂಬ ಆಶಯದೊಂದಿಗೆ ಇಂದು ರಾಜ್ಯಾದ್ಯಂತ 10 ಸಾವಿರ ಗಿಡ ನೆಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 101 ಗಿಡಗಳನ್ನು ನೆಡಲಾಯಿತು.

    ಬೆಗಳೂರಿನಲ್ಲಿ ಅದಮ್ಯ ಚೇತನ ಸಂಸ್ಥೆ ಸಹಯೋಗದಲ್ಲಿ ಜ್ಞಾನಭಾರತಿ ಪ್ರದೇಶದಲ್ಲಿ ಸಾವಿರ ಗಿಡ ನೆಡುವ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್, ನಿವೃತ್ತ ನ್ಯಾಯಮೂರ್ತಿ ಎನ್ ಕುಮಾರ್, ಆರ್‌ಎಸ್‍ಎಸ್ ಹಿರಿಯರಾದ ನಾಗರಾಜ್, ಬೆಂಗಳೂರು ವಿವಿ ವಿಸಿ, ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು, ಮಕ್ಕಳು ಸ್ವಯಂ ಪ್ರೇರಿತವಾಗಿ ಗಿಡ ನೆಟ್ಟರು. ಇದನ್ನೂ ಓದಿ: ಪಬ್ಲಿಕ್‌ ಟಿವಿ ಜ್ಞಾನದೀವಿಗೆ 2ನೇ ಆವೃತ್ತಿಗೆ ಬೊಮ್ಮಾಯಿ, ಸಿದ್ದರಾಮಯ್ಯ ಚಾಲನೆ


    ಹಲವು ಪ್ರಭೇದ ಸಸಿಗಳನ್ನು ನೆಟ್ಟು ಗೊಬ್ಬರ ಹಾಕಿ, ನೀರೆರೆಯಲಾಯ್ತು ಮೈಸೂರು, ಬೆಳಗಾವಿ, ಮಂಗಳೂರು, ಶಿವಮೊಗ್ಗ, ಮಂಡ್ಯ, ಧಾರವಾಡ ಸೇರಿ ಎಲ್ಲಾ ಜಿಲ್ಲೆಗಳಲ್ಲೂ ವನಮಹೋತ್ಸವ ನಡೆಯಿತು. ಇದನ್ನೂ ಓದಿ: ಪಬ್ಲಿಕ್ ಟಿವಿಗೆ ದಶಕದ ಸಂಭ್ರಮ – ಶಾಂತಿಧಾಮಕ್ಕೆ 25 ಲಕ್ಷ ರೂ. ವಿತರಣೆ

  • ಆಕ್ಸಿಜನ್ ಚಾಲೆಂಜ್ ಅಭಿಯಾನ- ಸಾವಿರ ಸಸಿ ನೆಡಲು ಧಾರವಾಡ ಎಬಿವಿಪಿ ಸಂಕಲ್ಪ

    ಆಕ್ಸಿಜನ್ ಚಾಲೆಂಜ್ ಅಭಿಯಾನ- ಸಾವಿರ ಸಸಿ ನೆಡಲು ಧಾರವಾಡ ಎಬಿವಿಪಿ ಸಂಕಲ್ಪ

    ಧಾರವಾಡ: ಎಬಿವಿಪಿ ಧಾರವಾಡ ಶಾಖೆಯ ವತಿಯಿಂದ ‘ಆಕ್ಸಿಜನ್ ಚಾಲೆಂಜ್’ ಅಭಿಯಾನ ಇಡೀ ಕರ್ನಾಟಕದಾದ್ಯಂತ ನಡೆಯುತ್ತಿದ್ದು, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಆವರಣದಲ್ಲಿ ಸುಮಾರು 1 ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

    ನಾಳೆ ಎಬಿವಿಪಿಯಿಂದ ಒಂದೇ ದಿನ 1 ಸಾವಿರ ಸಸಿಗಳನ್ನು ನೆಡಲು ಧಾರವಾಡ ಎಬಿವಿಪಿ ಕಾರ್ಯಕರ್ತರು ಸಂಕಲ್ಪ ಮಾಡಿದ್ದಾರೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪರಿಸರ ಸಂರಕ್ಷಣೆಗಾಗಿ ಕಳೆದ ಹಲವು ವರ್ಷಗಳಿಂದ ವಿನೂತನ ಅಭಿಯಾನ, ಯೋಜನೆ ಹಾಗೂ ಕಾರ್ಯಕ್ರಮಗಳಿಂದ ಪರಿಸರ ಜಾಗೃತಿ ಹಾಗೂ ಸಸಿಗಳನ್ನ ನೆಡುವುದು ಅಷ್ಟೆ ಅಲ್ಲದೆ, ಅವುಗಳನ್ನ ಪಾಲನೆ ಪೋಷಣೆ ಮಾಡುವಂತಹ ಮಹತ್ತರ ಕೆಲಸವನ್ನು ಮಾಡುತ್ತಿದೆ.

    ಕೊರೊನಾ ಮಹಾಮಾರಿಯ ಈ ವಿಷಮ ಪರಿಸ್ಥಿತಿಯಲ್ಲಿ ಎಲ್ಲರೂ ಮನೆಯ ಸುತ್ತಲಿನ ಪರಿಸರದಲ್ಲಿ ಗಿಡ ಮರಗಳನ್ನ ನೆಟ್ಟು ಪಾಲನೆ ಪೋಷಣೆ ಮಾಡಿ, ಸಮಾಜಕ್ಕೂ ಹಾಗೂ ಮುಂದಿನ ಪಿಳಿಗೆಗೂ ಅನುಕೂಲವಾಗುವ ರೀತಿಯಲ್ಲಿ ಸುಂದರ ಪರಿಸರವನ್ನು ನಿರ್ಮಾಣ ಮಾಡಬೇಕು ಎಂದು ಎಬಿವಿಪಿ ಸಂಘಟನೆ ಕರೆ ಕೊಟ್ಟಿದೆ.

  • ಬೆಂಗ್ಳೂರು ರಸ್ತೆ ಬದಿ ಸಸಿ ಮಾರುತ್ತಿರೋ ವೃದ್ಧನ ವಿಡಿಯೋ ವೈರಲ್ – ಬಾಲಿವುಡ್ ನಟ, ನಟಿಯರ ಸ್ಪಂದನೆ

    ಬೆಂಗ್ಳೂರು ರಸ್ತೆ ಬದಿ ಸಸಿ ಮಾರುತ್ತಿರೋ ವೃದ್ಧನ ವಿಡಿಯೋ ವೈರಲ್ – ಬಾಲಿವುಡ್ ನಟ, ನಟಿಯರ ಸ್ಪಂದನೆ

    ಬೆಂಗಳೂರು: ದೆಹಲಿಯ ಬಾಬಾ ಕಾ ಡಾಭಾ ವೃದ್ಧರ ಸಂಕಷ್ಟದ ಕುರಿತು ಸುದ್ದಿ ವೈರಲ್ ಆದ ಬೆನ್ನಲ್ಲೇ ಇದೀಗ ಬೆಂಗಳೂರಿನ ಸಸಿ ಮಾರುವ ವೃದ್ಧನ ವಿಡಿಯೋ ಸಖತ್ ವೈರಲ್ ಆಗಿದ್ದು, ಸಹಾಯ ಮಾಡುವಂತೆ ಬಾಲಿವುಡ್ ಸ್ಟಾರ್‍ ಗಳು ಸಹ ಮನವಿ ಮಾಡಿದ್ದಾರೆ.

    ಬೆಂಗಳೂರಿನ ಜೆಪಿ ನಗರದ ಕನಕಪುರ ರಸ್ತೆಯ ಸಾರಕ್ಕಿ ಸಿಗ್ನಲ್ ಬಳಿ ಸಸಿ ಮಾರುವ ರೇವಣಸಿದ್ದಪ್ಪ ಅವರಿಗೆ ಸಹಾಯ ಮಾಡುವಂತೆ ಟ್ವೀಟ್ ವೈರಲ್ ಆಗಿದೆ. ಅಲ್ಲದೆ ಇದಕ್ಕೆ ಬಾಲಿವುಡ್ ನಟರು ಪ್ರತಿಕ್ರಿಯಿಸಿದ್ದು, ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.

    ರೇವಣಸಿದ್ದಪ್ಪ ಅವರು ಸುಡುವ ಬಿಸಿಲಿನಲ್ಲಿ ಸಿಗ್ನಲ್ ಪಕ್ಕ ಕುಳಿತುಕೊಂಡು 10 ರಿಂದ 30 ರೂಪಾಯಿಗೆ ಸಸಿ ಮಾರುತ್ತಿದ್ದಾರೆ. ಈ ವೃದ್ಧನ ಬಗ್ಗೆ ಐ ಆಮ್ ಶುಭಮ್ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿತ್ತು. ಇವರಿಗೆ ಸಹಾಯ ಮಾಡಿ ಎಂದು ನಟರಾದ ಸೋನು ಸೂದ್, ಮಾಧವನ್, ಕಾಂಚನಾ ಗುಪ್ತ ಮತ್ತು ಪ್ರವೀಣ್ ಕಸ್ವನ್ ಗೆ ಟ್ಯಾಗ್ ಮಾಡಲಾಗಿದೆ. ಇದನ್ನು ಕಂಡ ಹಲವರು ರೀಟ್ವೀಟ್ ಮಾಡಿದ್ದು, ಪೋಸ್ಟ್ ವೈರಲ್ ಆಗಿದೆ. ಪೋಸ್ಟ್ ನೋಡಿದ ಬಾಲಿವುಡ್ ನಟ ರಣದೀಪ್ ಹೂಡಾ ಪ್ರತಿಕ್ರಿಯೆ ನೀಡಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ರಣದೀಪ್ ಹೂಡಾ, ಹೇ ಬೆಂಗಳೂರು ಸ್ವಲ್ಪ ಪ್ರೀತಿಯನ್ನು ತೋರಿಸುವುದನ್ನು ಮಾಡಿ, ಇವರು ವುಲಾರ್ ಫ್ಯಾಷನ್ ಫ್ಯಾಕ್ಟರಿ, ಜೆಪಿ ನಗರ, ಸಾರಕ್ಕಿ ಸಿಗ್ನಲ್, ಕನಕಪುರ ರಸ್ತೆ, ಬೆಂಗಳೂರು. ಈ ವಿಳಾಸದಲ್ಲಿ ಕುಳಿತಿರುತ್ತಾರೆ ಎಂದು ಮನವಿ ಮಾಡಿದ್ದಾರೆ.

    ಸುಡುವ ಬಿಸಿಲಿನಲ್ಲಿ ಕೊಡೆ ಹಿಡಿದು ವ್ಯಾಪಾರ ಮಾಡುವ ಈ ವೃದ್ಧನ ಕಥೆ ಪರಿಸ್ಥಿತಿ ಎಂತಹವರಿಗೂ ಮನಮಿಡಿಯುತ್ತದೆ. ರಸ್ತೆ ಪಕ್ಕ ಕೊಡೆ ಹಿಡಿದುಕಂಡು ಸಸಿಗಳನ್ನು ಮಾರುತ್ತಿದ್ದಾರೆ. ಆದರೆ ಗ್ರಾಹಕರು ಬಾರದ ಹಿನ್ನೆಲೆ ಬೇಸರಗೊಂಡಿದ್ದಾರೆ. ಸಸಿಗಳನ್ನು ಯಾರು ತೆಗೆದುಕೊಳ್ಳದ್ದಕ್ಕೆ ವೃದ್ಧನಿಗೆ ತುಂಬಾ ನೋವುಂಟಾಗಿದೆ. ಇದನ್ನು ಮನಗಂಡ ಸೈನಿಕರೊಬ್ಬರು ಟ್ವೀಟ್ ಮಾಡಿ, ಬಾಲಿವುಡ್ ನಟರಿಗೆ ಟ್ಯಾಗ್ ಮಾಡಿದ್ದಾರೆ. ವೃದ್ಧನಿಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.

  • ಬರೋಬ್ಬರಿ 1,650 ಎಕರೆ ಅರಣ್ಯವನ್ನು ದತ್ತು ಪಡೆದ ಪ್ರಭಾಸ್

    ಬರೋಬ್ಬರಿ 1,650 ಎಕರೆ ಅರಣ್ಯವನ್ನು ದತ್ತು ಪಡೆದ ಪ್ರಭಾಸ್

    – ಅಭಿವೃದ್ಧಿ ಪಡಿಸೋ ಜವಾಬ್ದಾರಿ ಹೊತ್ತ ಬಾಹುಬಲಿ

    ಹೈದರಾಬಾದ್: ಟಾಲಿವುಡ್ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಟಾಲಿವುಡ್‍ನಲ್ಲಿ ಸಖತ್ ಹವಾ ಕ್ರಿಯೇಟ್ ಮಾಡುತ್ತಿದ್ದಾರೆ. ಅದೇ ರೀತಿ ಸಹಾಯ ಮಾಡುವ ತಮ್ಮ ಮನೋಭಾವದಿಂದಲೂ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇತ್ತೀಚೆಗೆ ತಮ್ಮ ಜಿಮ್ ಟ್ರೇನರ್‌ಗೆ ಭರ್ಜರಿ ಉಡುಗೊರೆ ನೀಡಿದ್ದರು. ಇದೀಗ ಅರಣ್ಯವನ್ನೇ ದತ್ತು ಪಡೆದುಕೊಂಡಿದ್ದಾರೆ.

    ಸಾಮಾನ್ಯವಾಗಿ ಸಿನಿಮಾ ನಟರು ಆನೆ, ಸಿಂಹ, ಹುಲಿಗಳನ್ನು ದತ್ತು ಪಡೆದುಕೊಳ್ಳುತ್ತಾರೆ. ಆದರೆ ಬಾಹುಬಲಿ ಖ್ಯಾತಿಯ ಪ್ರಭಾಸ್, ಇಡೀ ಅರಣ್ಯವನ್ನೇ ದತ್ತುಪಡೆದಿದ್ದಾರೆ. ಹೈದರಾಬಾದ್ ಬಳಿಯ ಬರೋಬ್ಬರಿ 1,650 ಎಕರೆ ಕಾಜಿಪಲ್ಲಿ ಮೀಸಲು ಅರಣ್ಯವನ್ನು ದತ್ತು ಪಡೆದುಕೊಂಡಿದ್ದು, ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

    ಅಲ್ಲದೇ ಮೀಸಲು ಅಭಿವೃದ್ಧಿಗಾಗಿ ಅರಣ್ಯ ಅಧಿಕಾರಿಗಳಿಗೆ 2 ಕೋಟಿ ರೂ. ಹಣವನ್ನೂ ಕೂಡ ನೀಡಿದ್ದಾರೆ. ಈ ವೇಳೆ ತೆಲಂಗಾಣದ ಅರಣ್ಯ ಸಚಿವ ಅಲೋಲಾ ಇಂದ್ರ ಕರಣ್‍ ರೆಡ್ಡಿ ಮತ್ತು ರಾಜ್ಯಸಭಾ ಸಂಸದ ಜೋಗಿನಪಲ್ಲಿ ಸಂತೋಷ್ ಕುಮಾರ್ ಉಪಸ್ಥಿತರಿದ್ದರು. ಇದೇ ವೇಳೆ ರಾಜಕೀಯ ಮುಖಂಡರ ಜೊತೆ ನಗರ ಅರಣ್ಯ ಉದ್ಯಾನಕ್ಕಾಗಿ ಪ್ರಭಾಸ್ ಅಡಿಗಲ್ಲು ಕಾರ್ಯಕ್ರಮ ನೆರವೇರಿಸಿದ್ದಾರೆ.

    ನಟ ಪ್ರಭಾಸ್ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಅಪ್ಲೋಡ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. “ನಾನು ಹೈದರಾಬಾದ್ ಬಳಿಯ 1,650 ಎಕರೆ ಕಾಜಿಪಲ್ಲಿ ಮೀಸಲು ಅರಣ್ಯ ಪ್ರದೇಶವನ್ನು ದತ್ತು ಪಡೆದುಕೊಂಡು ಅಭಿವೃದ್ಧಿಪಡಿಸಲು ಮುಂದಾಗಿದ್ದೇನೆ” ಎಂದು ತಿಳಿಸಿದ್ದಾರೆ.

    ರಾಜ್ಯಸಭಾ ಸಂಸದ ಸಂತೋಷ್ ಕುಮಾರ್ ಅವರ ಬೆಂಬಲಕ್ಕೆ ಮತ್ತು  ಈ ಅವಕಾಶವನ್ನು ನೀಡಿದ ತೆಲಂಗಾಣ ಸರ್ಕಾರ ಹಾಗೂ ಅರಣ್ಯ ಇಲಾಖೆಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಜೊತೆಗೆ ಗ್ರೀನ್ ಇಂಡಿಯಾ ಚಾಲೆಂಜ್ ಎಂಬ ಹ್ಯಾಷ್‍ಟ್ಯಾಗ್ ಮೂಲಕ ಜನರಿಗೂ ಸಸಿ ನೆಡುವ, ಹಸಿರು ಸಂರಕ್ಷಿಸುವ ಸವಾಲು ಹಾಕಿದ್ದಾರೆ.

    ಕಾಜಿಪಲ್ಲಿ ಮೀಸಲು ಅರಣ್ಯ ಅಲ್ಲಿನ ಔಷಧ ಸಂಪತ್ತಿಗಾಗಿ ಖ್ಯಾತಿ ಪಡೆದುಕೊಂಡಿದೆ. ಇಲ್ಲಿ ಶೀಘ್ರದಲ್ಲಿಯೇ 1,650 ಎಕರೆ ಭೂಮಿಯಲ್ಲಿ ಪರಿಸರ ಸ್ನೇಹಿ ಪಾರ್ಕ್ ನಿರ್ಮಾಣವಾಗಲಿದೆ. ಈ ಅರಣ್ಯ ಪ್ರದೇಶದಲ್ಲಿ ಅಧಿಕ ಸಸಿಗಳನ್ನು ನೆಟ್ಟು, ಅಲ್ಲಲ್ಲಿ ಕೊಳಗಳನ್ನು ನಿರ್ಮಿಸಿ, ವನ್ಯಪ್ರಾಣಿಗಳು ಓಡಾಡುವಂತೆ ವ್ಯವಸ್ಥೆ ಕಲ್ಪಿಸುವ ಐಡಿಯಾವನ್ನು ಹಾಕಿಕೊಂಡಿದ್ದಾರೆ. ಆ ಮೂಲಕ ಈ ಅರಣ್ಯದಿಂದ ನಗರದ ಪರಿಸರವೂ ಉತ್ತಮವಾಗಲಿದೆ ಎಂಬುದು ಪ್ರಭಾಸ್ ನಂಬಿಕೆ ಆಗಿದೆ.

  • ಲಾಕ್‍ಡೌನ್ ಡ್ಯೂಟಿ ಮಧ್ಯೆ 20 ಸಾವಿರ ಸಸಿ ಬೆಳೆಸಿದ ರಾಯಚೂರು ಪೊಲೀಸರು

    ಲಾಕ್‍ಡೌನ್ ಡ್ಯೂಟಿ ಮಧ್ಯೆ 20 ಸಾವಿರ ಸಸಿ ಬೆಳೆಸಿದ ರಾಯಚೂರು ಪೊಲೀಸರು

    – ಪೊಲೀಸರಿಂದ ಸಾರ್ವಜನಿಕರಿಗೆ ಉಚಿತ ಉಡುಗೊರೆ

    ರಾಯಚೂರು: ಬಿಸಿಲನಾಡು ರಾಯಚೂರನ್ನು ಹಸಿರು ಜಿಲ್ಲೆಯನ್ನಾಗಿಸಲು ಜಿಲ್ಲಾ ಪೊಲೀಸ್ ಇಲಾಖೆ ನಿರಂತರವಾಗಿ ಶ್ರಮಿಸುತ್ತಿದೆ. ಕೊರೊನಾ ಲಾಕ್ ಡೌನ್ ಸಮಯದಲ್ಲೂ 20 ಸಾವಿರ ಸಸಿಗಳನ್ನು ಬೆಳೆಸಿದೆ.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ ಅವರು ಹಸಿರು ಜಿಲ್ಲೆಗಾಗಿ ಪೊಲೀಸ್ ಸಿಬ್ಬಂದಿ, ಸಾರ್ವಜನಿಕರೊಂದಿಗೆ 5 ಲಕ್ಷ ಸಸಿಗಳನ್ನು ನೆಡುವ ಪ್ರತಿಜ್ಞೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ರಾಯಚೂರಿನ ನಾಗರಿಕರ ಸಹಕಾರದೊಂದಿಗೆ ಹಾಲಿನ ಪ್ಯಾಕೆಟ್ ಗಳನ್ನು ಸಂಗ್ರಹಿಸಿ ಅದರಲ್ಲಿ ವಿವಿಧ ರೀತಿಯ ಬೀಜಗಳನ್ನು ಹಾಕಿ ಸಸಿಗಳನ್ನು ಬೆಳೆಸಿ ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಸುಮಾರು 20 ಸಾವಿರ ಪಪ್ಪಾಯ, ಸೀತಾಫಲಾ, ಮಾವು, ಪೇರಲ, ಹುಣಸೆ, ನುಗ್ಗೆಕಾಯಿ, ಹೊಂಗೆ, ಅಲೊವೇರಾ ಸೇರಿದಂತೆ ವಿವಿಧ ರೀತಿಯ ಸಸಿಗಳನ್ನು ಬೆಳೆಸಿದ್ದಾರೆ.

    ದಣಿವರಿಯದ ಕರೊನಾ ಲಾಕ್‍ಡೌನ್ ಕರ್ತವ್ಯದ ಮಧ್ಯೆ ಬಿಡುವಿನ ಸಮಯದಲ್ಲಿ ಪೊಲೀಸ್ ಸಿಬ್ಬಂದಿ ಸಸಿಗಳನ್ನು ನೆಡುವ ಕಾರ್ಯದ ಕಡೆ ಗಮನ ಹರಿಸಿ, ಅವುಗಳನ್ನು ಪೋಷಣೆ ಮಾಡುತ್ತಿದ್ದಾರೆ. ಪೊಲೀಸ್ ಸಿಬ್ಬಂದಿ ಪರಿಶ್ರಮದಿಂದ ಸುಮಾರು 20 ಸಾವಿರ ಸಸಿಗಳು ಸಿದ್ಧವಾಗಿವೆ. ಆದ್ದರಿಂದ ರಾಯಚೂರು ಜಿಲ್ಲೆಯ ನಾಗರಿಕರು ಹಲವಾರು ಕಾರ್ಯಕ್ರಮದಲ್ಲಿ ಭಾಗಿಯಾಗುವಾಗ ಇತರೆ ಉಡುಗೊರೆ ನೀಡುವ ಬದಲಾಗಿ ಸಸಿಗಳನ್ನು ಉಡುಗೊರೆಯಾಗಿ ನೀಡಿ ಜಿಲ್ಲೆಯನ್ನು ಹಸಿರು ಜಿಲ್ಲೆಯಾಗಿಸಲು ಸಹಕರಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಕೋರಿದ್ದಾರೆ.

    ಸಸಿಗಳನ್ನು ಉಚಿತವಾಗಿ ವಿತರಿಸಲಾಗುತ್ತಿದ್ದು, ಸಸಿಗಳು ಬೇಕಾದಲ್ಲಿ ಮೊಬೈಲ್ ಸಂಖ್ಯೆ 9480803806 ಅಥವಾ 9480803840ಕ್ಕೆ ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.

  • ಬಿಸಿಲನಾಡಲ್ಲಿ 5 ಲಕ್ಷ ಸಸಿ ನೆಡುವ ಅಭಿಯಾನ – ಪೊಲೀಸ್ ಇಲಾಖೆ ಕೆಲಸಕ್ಕೆ ಇಡೀ ನಗರವೇ ಸಾಥ್

    ಬಿಸಿಲನಾಡಲ್ಲಿ 5 ಲಕ್ಷ ಸಸಿ ನೆಡುವ ಅಭಿಯಾನ – ಪೊಲೀಸ್ ಇಲಾಖೆ ಕೆಲಸಕ್ಕೆ ಇಡೀ ನಗರವೇ ಸಾಥ್

    ರಾಯಚೂರು: ಐದು ಲಕ್ಷ ಸಸಿಗಳನ್ನ ನೆಡುವ ಕಾರ್ಯಕ್ರಮ ಅಂಗವಾಗಿ ನಗರದಲ್ಲಿಂದು ಪೊಲೀಸ್ ಇಲಾಖೆ, ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಸಾವಿರಾರು ಬೀಜಗಳನ್ನ ನೆಡುವ ಕಾರ್ಯಕ್ರಮಕ್ಕೆ ಪೊಲೀಸ್ ಮೈದಾನದಲ್ಲಿ ಚಾಲನೆ ನೀಡಲಾಯಿತು.

    ಡೈರಿ ಹಾಲಿನ ಖಾಲಿ ಪ್ಯಾಕೆಟ್‍ಗಳಲ್ಲಿ, ನೀರಿನ ಬಾಟಲ್, ಅಡುಗೆ ಎಣ್ಣೆಯ ಪ್ಲಾಸ್ಟಿಕ್ ಪ್ಯಾಕೆಟ್‍ಗಳಲ್ಲಿ ಮಣ್ಣು ಗೊಬ್ಬರ ತುಂಬಿ ಬೀಜ ಹಾಕಿ ಸಸಿಗಳನ್ನು ತಯಾರಿಸುವ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಸಿ.ಬಿ.ವೇದಮೂರ್ತಿ ಚಾಲನೆ ನೀಡಿದರು. ಜೊತೆಗೆ 186ನೇ ವಾರದ ಸ್ವಚ್ಛತಾ ಆಂದೋಲನ ಕಾರ್ಯಕ್ರಮವನ್ನೂ ಮುಂದುವರಿಸಲಾಯಿತು.

    ಈಗಾಗಲೇ ಬೇಸಿಗೆಯ ಬಿರು ಬಿಸಿಲು ಆರಂಭವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ತಾಪಮಾನ ಕಡಿಮೆಗೊಳಿಸಲು ನಾವು ಹೆಚ್ಚು ಹೆಚ್ಚು ಮರಗಳನ್ನು ಬೆಳೆಸಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಿದೆ. ಜಿಲ್ಲೆಯ ಸಾರ್ವಜನಿಕರು ಈ ಕಾರ್ಯಕ್ಕೆ ಕೈ ಜೋಡಿಸಿದಲ್ಲಿ ಮುಂದಿನ ಮಳೆಗಾಲದ ವೇಳೆಗೆ ನಾವು ಐದು ಲಕ್ಷ ಸಸಿಗಳನ್ನು ಬೆಳೆಸುವ ಕಾರ್ಯ ಯಶಸ್ವಿಗೊಳಿಸಲು ಸಾಧ್ಯ ಎಂದು ವೇದಮೂರ್ತಿ ಹೇಳಿದರು.

    ಜಿಲ್ಲಾ ಪೋಲಿಸ್ ಇಲಾಖೆ ಜೊತೆಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಅರಣ್ಯ ಇಲಾಖೆ, ನಗರಸಭೆ, ಶಿಲ್ಪಾ ಫೌಂಡೇಶನ್, ಗ್ರೀನ್ ರಾಯಚೂರು ಮತ್ತು ರಾಯಚೂರು ನಗರದ ವಿವಿಧ ಸಂಘ ಸಂಸ್ಥೆಗಳು ಸಹಕಾರ ನೀಡಿವೆ. ಇನ್ನೂ ಈ ಸಂದರ್ಭದಲ್ಲಿ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎಚ್.ಆರ್. ಕುಮಾರ್, ಡಿ.ಎ.ಆರ್ ಪೊಲೀಸ್ ಉಪಾಧೀಕ್ಷಕರಾದ ಪ್ರಮಾನಂದ ಘೋಡ್ಕೆ ಮತ್ತು ಆರ್.ಪಿ.ಐ ಕೇದಾರನಾಥ ಭಾಗವಹಿಸಿದ್ದರು.

     

  • ಚಿತ್ರ ವೀಕ್ಷಣೆಗೆ ಬಂದ ವೀಕ್ಷಕರಿಗೆ ಉಪ್ಪಿ ಅಭಿಮಾನಿಗಳಿಂದ ಸಸಿ ವಿತರಣೆ

    ಚಿತ್ರ ವೀಕ್ಷಣೆಗೆ ಬಂದ ವೀಕ್ಷಕರಿಗೆ ಉಪ್ಪಿ ಅಭಿಮಾನಿಗಳಿಂದ ಸಸಿ ವಿತರಣೆ

    ರಾಮನಗರ: ನಟ ರಿಯಲ್ ಸ್ಟಾರ್ ಉಪೇಂದ್ರರವರ ಅಭಿಮಾನಿಗಳು ಹಾಗೂ ಪ್ರಜಾಕೀಯ ಪಕ್ಷದ ಕಾರ್ಯಕರ್ತರು ‘ಐ ಲವ್ ಯೂ’ ಸಿನಿಮಾ ವೀಕ್ಷಣೆಗೆ ಬಂದ ವೀಕ್ಷಕರಿಗೆ ಸಸಿಗಳನ್ನು ವಿತರಿಸುವ ಮೂಲಕ ವಿಭಿನ್ನ ರೀತಿಯಲ್ಲಿ ಪ್ರಮೋಷನ್ ಮಾಡಿದ್ದಾರೆ.

    ಜಿಲ್ಲೆಯ ಪ್ರಜಾಕೀಯ ಪಕ್ಷದ ಕಾರ್ಯಕರ್ತರು ಹಾಗೂ ಉಪ್ಪಿ ಅಭಿಮಾನಿಗಳು ನಗರದ ಶಾನ್ ಥಿಯೇಟರ್ ಬಳಿ ಸಿನಿಮಾ ವೀಕ್ಷಣೆಗೆ ಬಂದ ವೀಕ್ಷಕರಿಗೆ ವಿವಿಧ ಜಾತಿಯ ಹಣ್ಣಿನ ಸಸಿಗಳನ್ನು ವಿತರಿಸಿದ್ದಾರೆ. ಪರಿಸರ ದಿನಾಚರಣೆಯನ್ನ ಉಪೇಂದ್ರ ಚಿತ್ರ ವೀಕ್ಷಣೆಗೆ ಬಂದ ಅಭಿಮಾನಿಗಳ ಜೊತೆ ಆಚರಿಸುವ ಮೂಲಕ ಸಿನಿಮಾ ಪ್ರೀಯರಿಗೆ 1,000ಕ್ಕೂ ಹೆಚ್ಚು ಸಸಿಗಳನ್ನು ವಿತರಿಸಿದ್ದಾರೆ.

    ಇದೇ ವೇಳೆ ಸಸಿ ವಿತರಣೆ ಜೊತೆಗೆ ಸಾರ್ವಜನಿಕರು ಅನುಭವಿಸುತ್ತಿರುವ ಸಮಸ್ಯೆಗಳನ್ನ ತಿಳಿಸುವಂತೆ ಅರ್ಜಿಗಳನ್ನು ವಿತರಿಸಿದ್ದಾರೆ. ಬಳಿಕ ಸಾರ್ವಜನಿಕರ ದೂರನ್ನ ಆಡಳಿತ ಪಕ್ಷದ ಶಾಸಕರು, ಸಚಿವರ ಗಮನಕ್ಕೆ ತಂದು ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ.

    ‘ಐ ಲವ್ ಯೂ’ ಸಿನಿಮಾವನ್ನು ಆರ್. ಚಂದ್ರು ನಿರ್ದೇಶನ ಮಾಡಿದ್ದು, ಉಪೇಂದ್ರ ಅವರಿಗೆ ನಾಯಕಿಯಾಗಿ ರಚಿತಾ ರಾಮ್ ಮತ್ತು ಸೋನುಗೌಡ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ರಚಿತಾ ರಾಮ್ ಅವರು ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

  • ಹಸಿರು ಮದ್ವೆಗೆ ಸಾಕ್ಷಿಯಾದ ಜೋಡಿಗಳು

    ಹಸಿರು ಮದ್ವೆಗೆ ಸಾಕ್ಷಿಯಾದ ಜೋಡಿಗಳು

    ಬಾಗಲಕೋಟೆ: ಹಸೆಮಣೆ ಏರಿದ ನವದಂಪತಿಗಳು ಮದುವೆಗೆ ಆಗಮಿಸಿದ ಅತಿಥಿಗಳಿಗೆ ಸಸಿ ವಿತರಿಸಿ, ಹಸಿರು ಬೆಳೆಸಿ, ಆಶೀರ್ವಾದಿಸಿ ಎನ್ನುವ ಮೂಲಕ ಮದುವೆ ಸಮಾರಂಭದಲ್ಲೂ ಪರಿಸರ ಜಾಗೃತಿ ಮೂಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರದ ಲೋಕೇಶ್ವರ ದೇವಸ್ಥಾನದಲ್ಲಿ ಈ ಮದುವೆ ನಡೆದಿದ್ದು, ವಿಕ್ರಮ ಗೋಳ್ ಮತ್ತು ಪೂಜಾ ಹಾಗೂ ಹೊಳಬಸಯ್ಯ ಗೋಳ್ ಮತ್ತು ದ್ರಾಕ್ಷಾಯಿಣಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ದಂಪತಿಗಳು ತಮ್ಮ ಮದುವೆಗೆ ಬಂದ ಅಥಿತಿಗಳಿಗೆ ಸಸಿ ವಿತರಿಸಿ ಹಸಿರು ಬೆಳೆಸಿ, ಆಶೀರ್ವಾದಿಸಿ ಎನ್ನುವ ಮೂಲಕ ವಿಶಿಷ್ಟ ಮದುವೆಗೆ ಸಾಕ್ಷಿಯಾಗಿದ್ದಾರೆ.

    ಈ ನವದಂಪತಿಗಳು ಸಾವಿರ ಸಸಿಗಳನ್ನು ಮದುವೆಗೆ ಬಂದ ಅತಿಥಿಗಳಿಗೆ ವಿತರಣೆ ಮಾಡಿದ್ದು, ಖುಷಿ ಜೊತೆಗೆ ಪರಿಸರ ಪ್ರೇಮದ ಅರಿವು ಮೂಡಿಸಿದರು. ಮದುವೆಯಾದ ಜೋಡಿಗಳು ತಲಾ ಒಂದೊಂದು ಸಸಿಗಳನ್ನು ನೆಟ್ಟು ಪ್ರಕೃತಿ ದೇವತೆಯ ಆಶೀರ್ವಾದ ಪಡೆದರು.

    ಇದೇ ವೇಳೆ ಮಾತನಾಡಿದ ದಂಪಂತಿಗಳು, ನಮ್ಮ ಸ್ಮೃತಿ ಪಟಲದಲ್ಲಿ ಹಚ್ಚಹಸಿರಾಗಿರಲಿದೆ. ಸಸಿಗಳನ್ನು ನೆಟ್ಟು ಪೋಷಿಸುವ ಪರಿಸರ ಕಾಳಜಿ ಎಲ್ಲರಲ್ಲಿ ಮೂಡಬೇಕಿದೆ. ದಿನದಿಂದ ದಿನಕ್ಕೆ ಪರಿಸರ ನಾಶವಾಗುತ್ತಿದೆ. ಹೀಗಾಗಿ ನಾವು ಸಸಿ ವಿತರಣೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

  • ಸಸಿಗಳನ್ನು ನೆಟ್ಟು ಬ್ಯಾಂಡ್ ಕಟ್ಟಿ ಕಲಬುರಗಿಯಲ್ಲಿ ಫ್ರೆಂಡ್‍ಶಿಪ್ ಡೇ ಆಚರಣೆ

    ಸಸಿಗಳನ್ನು ನೆಟ್ಟು ಬ್ಯಾಂಡ್ ಕಟ್ಟಿ ಕಲಬುರಗಿಯಲ್ಲಿ ಫ್ರೆಂಡ್‍ಶಿಪ್ ಡೇ ಆಚರಣೆ

    ಕಲಬುರಗಿ: ಫ್ರೆಂಡ್‍ಶಿಪ್ ಡೇ ಹಿನ್ನೆಲೆಯಲ್ಲಿ ‘ನಮ್ಮ ಸಂಕಲ್ಪ ಫೌಂಡೇಶನ್’ ಈ ದಿನವನ್ನು ಪರಿಸರ ದಿನವನ್ನಾಗಿ ಆಚರಿಸಿ, ಸಸಿಗಳನ್ನು ನೆಟ್ಟು, ಪರಿಸರ ಕಾಳಜಿ ಮೆರೆದಿದೆ.

    ಇಂದು ದೇಶದ ಎಲ್ಲೆಡೆ ಫ್ರೆಂಡ್‍ಶಿಪ್ ಡೇ ಯನ್ನು ಆಚರಿಸಲಾಗುತ್ತಿದೆ. ಹೀಗಾಗಿ ಸ್ನೇಹಿತರಿಬ್ಬರು ಪರಸ್ಪರ ಬ್ಯಾಂಡ್‍ಗಳನ್ನು ಕಟ್ಟಿ, ಸಿಹಿ ಕೊಟ್ಟು ಶುಭಾಶಯ ವಿನಿಮಯ ಮಾಡಿಕೊಳ್ಳೊದು ಕಾಮನ್. ಇದನ್ನು ಮೀರಿ ನಮ್ಮ ಸಂಕಲ್ಪ ಫೌಂಡೇಶನ್ ಸದಸ್ಯರು ಸಸಿಗಳನ್ನು ನೆಟ್ಟು ಫ್ರೆಂಡ್‍ಶಿಪ್ ಬ್ಯಾಂಡ್‍ಗಳನ್ನು ಕಟ್ಟಿ ಪರಿಸರ ಸ್ನೇಹವನ್ನು ವ್ಯಕ್ತಪಡಿಸಿದ್ದಾರೆ.

    ಇಲ್ಲಿನ ವಿಠಲ ನಗರದ ಹನುಮಾನ ದೇವಸ್ಥಾನದ ಮಹಾನಗರ ಪಾಲಿಕೆ ಉದ್ಯಾನದಲ್ಲಿ ‘ನಮ್ಮ ಸಂಕಲ್ಪ ಫೌಂಡೇಶನ್’ ಸ್ನೇಹಿತರ ದಿನಾಚರಣೆ ಆಯೋಜಿಸಿತ್ತು. ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್ ಸಸಿಗಳನ್ನು ನೆಟ್ಟು ಅವುಗಳಿಗೆ ನೀರು ಉಣಿಸುವುದರ ಮೂಲಕ ಗಿಡ ಮರಗಳನ್ನ ತಮ್ಮ ಸ್ನೇಹಿತರಂತೆ ನೋಡಿ ಅವುಗಳನ್ನ ಪ್ರತಿಯೊಬ್ಬರ ಪೋಷಿಸುವಂತೆ ಕರೆ ನೀಡಿದರು.

    ಇತ್ತೀಚಿನ ದಿನಗಳಲ್ಲಿ ಪರಿಸರದ ಬಗ್ಗೆ ಬಹುತೇಕರು ಕಾಳಜಿ ವಹಿಸುತ್ತಿಲ್ಲ. ಹೀಗಾಗಿ ಅರಣ್ಯ ಪ್ರದೇಶ ಕಡಿಮೆಯಾಗುತ್ತಿದೆ. ಸ್ವಚ್ಛಂದವಾಗಿ ಉಸಿರಾಡಲು ಕಷ್ಟವಾಗುತ್ತಿರುವ ದಿನಗಳಲ್ಲಿ ಪ್ರತಿಯೊಬ್ಬರು ಪರಿಸರ ಸಂರಕ್ಷಣೆಗೆ ಮುಂದಾಗಬೇಕು. ‘ನಮ್ಮ ಸಂಕಲ್ಪ ಫೌಂಡೇಶನ್’ ರಕ್ತ ದಾನಿಗಳ ಗುಂಪಾಗಿದ್ದು, ಕಲಬುರಗಿ ಸೇರಿದಂತೆ ವಿವಿಧೆಡೆ ಉಚಿತವಾಗಿ ರಕ್ತವನ್ನು ದಾನ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಕಾರ್ಯಕ್ರಮದ ಬಳಿಕ ಪಾಲಿಕೆ ವ್ಯಾಪ್ತಿಯ ಉದ್ಯಾನದಲ್ಲಿ ವಿವಿಧ ಬಗೆಯ ಸಸಿಗಳನ್ನು ನೆಟ್ಟು ಅವುಗಳಿಗೆ ಬ್ಯಾಂಡ್‍ಗಳನ್ನು ಕಟ್ಟಲಾಯಿತು.