Tag: ಸಶಸ್ತ್ರ ಪಡೆ

  • ಛತ್ತೀಸ್‍ಗಢದಲ್ಲಿ ಮಾವೋವಾದಿಗಳ ಅಟ್ಟಹಾಸ – ಕೊಡಲಿಯಿಂದ ಕೊಚ್ಚಿ ಸಶಸ್ತ್ರ ಪಡೆ ಕಮಾಂಡರ್ ಹತ್ಯೆ

    ಛತ್ತೀಸ್‍ಗಢದಲ್ಲಿ ಮಾವೋವಾದಿಗಳ ಅಟ್ಟಹಾಸ – ಕೊಡಲಿಯಿಂದ ಕೊಚ್ಚಿ ಸಶಸ್ತ್ರ ಪಡೆ ಕಮಾಂಡರ್ ಹತ್ಯೆ

    ರಾಯ್‍ಪುರ್: ಸಶಸ್ತ್ರ ಪಡೆ (ಸಿಎಎಫ್) ಕಮಾಂಡರ್ (CAF commander) ಒಬ್ಬರನ್ನು ನಕ್ಸಲ್ ನಿಗ್ರಹ ಪಡೆಯ ಶಿಬಿರದ ಸಮೀಪವೇ ಮಾವೋವಾದಿಗಳು ( Maoists) ಹತ್ಯೆಗೈದ ಘಟನೆ ಛತ್ತೀಸ್‍ಗಢದ (Chhattisgarh) ಬಿಜಾಪುರ ಜಿಲ್ಲೆಯಲ್ಲಿ ನಡೆದಿದೆ.

    ಕಮಾಂಡರ್ ತೇಜು ರಾಮ್ ಭುರ್ಯ ಹತ್ಯೆಗೀಡಾದ ಕಮಾಂಡರ್ ಆಗಿದ್ದಾರೆ. ಅವರು ಶಿಬಿರದಿಂದ ಸಿಬ್ಬಂದಿ ಜೊತೆ ಸಮೀಪದ ಮಾರುಕಟ್ಟೆಗೆ ತರಕಾರಿ ತರಲು ತೆರಳುತ್ತಿದ್ದರು. ಈ ವೇಳೆ ಮಾವೋವಾದಿಗಳ ತಂಡ ಏಕಾಏಕಿ ದಾಳಿ ನಡೆಸಿದೆ. ಈ ವೇಳೆ ತೇಜು ರಾಮ್ ಅವರಿಗೆ ಕೊಡಲಿಯಿಂದ ನಕ್ಸಲರು ಹಲ್ಲೆ ನಡೆಸಿದ್ದು, ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೂಡಲೇ ಹೆಚ್ಚುವರಿ ಸೇನೆ ಅಲ್ಲಿಗೆ ತೆರಳಿದ್ದು ಅಷ್ಟರಲ್ಲೇ ಮಾವೋವಾದಿಗಳ ತಂಡ ಅಲ್ಲಿಂದ ಪರಾರಿಯಾಗಿದೆ. ಇದನ್ನೂ ಓದಿ: ಖಾಸಗಿ ಬಸ್, ಇನ್ನೋವಾ ಮುಖಾಮುಖಿ ಡಿಕ್ಕಿ – ಅತ್ತೆ, ಸೊಸೆ ಸ್ಥಳದಲ್ಲೇ ಸಾವು

    ಭುರ್ಯ ಅವರು ಅನುಭವಿ ಅಧಿಕಾರಿಯಾಗಿದ್ದು, ಛತ್ತೀಸ್‍ಗಢದ ವಿವಿಧ ಭಾಗಗಳಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

    ದಾಳಿ ನಡೆಸಿದ ನಕ್ಸಲರ ಪತ್ತೆಗಾಗಿ ಸಿಎಎಫ್ ಮತ್ತು ಡಿಸ್ಟ್ರಿಕ್ಟ್ ರಿಸರ್ವ್ ಗಾರ್ಡ್ ತಂಡಗಳು ಶೋಧ ಕಾರ್ಯಾಚರಣೆ ನಡೆಸುತ್ತಿವೆ. ಇದನ್ನೂ ಓದಿ: ಸಂಧಾನಕ್ಕೆ ಹೋಗಿದ್ದ ಗರ್ಭಿಣಿ ಮೇಲೆ ಗ್ಯಾಂಗ್‌ ರೇಪ್‌; ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ದುರುಳರು!

  • ನಾಗಾಲ್ಯಾಂಡ್‌ನ 9 ಜಿಲ್ಲೆಗಳಲ್ಲಿ AFSPA ಜಾರಿ

    ನಾಗಾಲ್ಯಾಂಡ್‌ನ 9 ಜಿಲ್ಲೆಗಳಲ್ಲಿ AFSPA ಜಾರಿ

    ನವದೆಹಲಿ: ನಾಗಾಲ್ಯಾಂಡ್‌ನ (Nagaland) 9 ಜಿಲ್ಲೆಗಳಲ್ಲಿ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆಯನ್ನು ಇಂದಿನಿಂದ ಮುಂದಿನ ವರ್ಷದ ಮಾರ್ಚ್ 30ರವರೆಗೆ ವಿಸ್ತರಿಸಿದೆ ಎಂದು ಗೃಹ ಸಚಿವಾಲಯ (Central government) ಅಧಿಸೂಚನೆ ಹೊರಡಿಸಿದೆ.

    ನಾಗಾಲ್ಯಾಂಡ್‌ನ ದಿಮಾಪುರ್, ನಿಯುಲ್ಯಾಂಡ್, ಚುಮೌಕೆಡಿಮಾ, ಮೊನ್, ಕಿಫಿರೆ, ನೋಕ್ಲಾಕ್, ಫೆಕ್, ಪೆರೆನ್ ಮತ್ತು ಝುನ್ಹೆಬೊಟೊ ಜಿಲ್ಲೆಗಳು AFSPA ಕಾಯ್ದೆಯಡಿಯಲ್ಲಿ ಬರುತ್ತವೆ. ನಾಗಾಲ್ಯಾಂಡ್‌ನಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯನ್ನು ಮತ್ತಷ್ಟು ಪರಿಶೀಲಿಸಿದ ನಂತರ ಕೇಂದ್ರವು ಈ ಕ್ರಮ ಕೈಗೊಂಡಿದೆ.

    ಇದಕ್ಕೂ ಮೊದಲು ಕೇಂದ್ರ ಸರ್ಕಾರವು ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರಗಳು) ಕಾಯ್ದೆಯನ್ನು ಏಪ್ರಿಲ್ 1ರಿಂದ ಸೆಪ್ಟೆಂಬರ್ 30, 2022 ರವರೆಗೆ ನಾಗಾಲ್ಯಾಂಡ್‌ನ ಇತರ ನಾಲ್ಕು ಜಿಲ್ಲೆಗಳಲ್ಲಿ ಘೋಷಿಸಿತ್ತು. ಇದನ್ನೂ ಓದಿ: ಹೈಕೋರ್ಟ್ ವಕೀಲ ಆತ್ಮಹತ್ಯೆ- ಕೋರ್ಟ್ ಕೊಠಡಿ ಧ್ವಂಸ

    ಏನಿದು AFSPA ಕಾಯ್ದೆ?: ಭದ್ರತೆಗೆ ಸಮಸ್ಯೆಯಾಗುವ ಪ್ರದೇಶದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿಷೇಧಿಸುವ ಅಧಿಕಾರವನ್ನು ನೀಡುತ್ತದೆ. ಇದು ಭದ್ರತಾ ಸಿಬ್ಬಂದಿಗೆ ಬಲವನ್ನು ಬಳಸಲು ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ಉಲ್ಲಂಘನೆಯ ಸಂದರ್ಭದಲ್ಲಿ ಸರಿಯಾದ ಎಚ್ಚರಿಕೆಯ ನಂತರ ಗುಂಡಿನ ದಾಳಿ ನಡೆಸಲು ಸಹ ಅನುಮತಿಸುತ್ತದೆ.

    ಇದರ ಅನ್ವಯ ಕಾನೂನು ಮತ್ತು ಸುವ್ಯವಸ್ಥೆಗೆ ವಿರುದ್ಧವಾಗಿ ವರ್ತಿಸುವ ಯಾರೊಬ್ಬರ ಮೇಲೆ ಗುಂಡು ಹಾರಿಸುವುದು, ವಾರಂಟ್ ಇಲ್ಲದೆ ಯಾರನ್ನಾದರೂ ಬಂಧಿಸುವುದು, ಯಾವುದೇ ವಾಹನ ನಿಲ್ಲಿಸುವುದು ಮತ್ತು ಹುಡುಕುವುದು ಮತ್ತು ಐದು ಅಥವಾ ಅದಕ್ಕಿಂತ ಹೆಚ್ಚು ಜನರ ಸಭೆಯನ್ನು ನಿಷೇಧಿಸುವುದು ಸೇರಿದಂತೆ ಕೆಲವು ಅಧಿಕಾರಗಳನ್ನು ಸಶಸ್ತ್ರ ಪಡೆಗಳಿಗೆ ನೀಡಲಾಗುತ್ತದೆ. AFSPA ಅಡಿಯಲ್ಲಿ ನಾಗರಿಕರು ಬಂದೂಕುಗಳನ್ನು ಹೊಂದುವುದನ್ನು ಸಹ ನಿಷೇಧಿಸಲಾಗಿದೆ. ಇದನ್ನೂ ಓದಿ: ಬೆಂಗಳೂರಿನ ಐದು ರೈಲು ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್‌ ದರ ಏರಿಕೆ

    Live Tv
    [brid partner=56869869 player=32851 video=960834 autoplay=true]

  • ಆಕೆಯ ಮೇಲೆ ಪದೇ-ಪದೇ ಅತ್ಯಾಚಾರ ಮಾಡಿದ್ರು, ನರಮಾಂಸ ತಿನ್ನುವಂತೆ ಒತ್ತಾಯಿಸಿದ್ರು!

    ಆಕೆಯ ಮೇಲೆ ಪದೇ-ಪದೇ ಅತ್ಯಾಚಾರ ಮಾಡಿದ್ರು, ನರಮಾಂಸ ತಿನ್ನುವಂತೆ ಒತ್ತಾಯಿಸಿದ್ರು!

    ಬನ್ಗುಯಿ: ಕಾಂಗೋನಲ್ಲಿ ಉಗ್ರಗಾಮಿಗಳು ಮಹಿಳೆಯೊಬ್ಬರನ್ನು ಎರಡು ಬಾರಿ ಅಪಹರಿಸಿದ್ದಾರೆ. ಪದೇ ಪದೇ ಅತ್ಯಾಚಾರ ಎಸಗಿದ್ದಲ್ಲದೇ ಆಕೆಗೆ ನರ ಮಾಂಸವನ್ನು ಬೇಯಿಸಿ ತಿನ್ನುವಂತೆ ಒತ್ತಾಯಿಸಿದ್ದಾರೆ ಎಂದು ಕಾಂಗೋಲೀಸ್ ಹಕ್ಕುಗಳ ಗುಂಪು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ತಿಳಿಸಿದೆ.

    STOP RAPE

    ಮಹಿಳಾ ಹಕ್ಕುಗಳ ಗುಂಪಿನ ಮಹಿಳಾ ಸಾಲಿಡಾರಿಟಿ ಫಾರ್ ಇಂಟಿಗ್ರೇಟೆಡ್ ಪೀಸ್ ಅಂಡ್ ಡೆವಲಪ್‌ಮೆಂಟ್ (SOFEPADI)ನ ಅಧ್ಯಕ್ಷೆ ಜೂಲಿಯೆನ್ ಲುಸೆಂಗೆ, ಕಾಂಗೋದ ಪೂರ್ವದ ಸಂಘರ್ಷದ ಬಗ್ಗೆ 15 ಸದಸ್ಯರ ಮಂಡಳಿಯನ್ನು ಉದ್ದೇಶಿಸಿ ಮಾತನಾಡುವಾಗ ಅತ್ಯಾಚಾರಕ್ಕೆ ಸಿಕ್ಕಿ ನಲುಗಿದ ಮಹಿಳೆಯೊಬ್ಬರ ಕರಾಳ ಕಥೆಯನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ಟಾಯ್ಲೆಟ್‌ ನೀರು ಮರುಬಳಸಿ ತಯಾರಿಸಿದ ಬಿಯರ್‌ ಸೂಪರ್‌ ಎಂದ ಮದ್ಯಪ್ರಿಯರು!

    ಕಳೆದ ಮೇ ತಿಂಗಳಿನಲ್ಲಿ ಕಾಂಗೋ ಸರ್ಕಾರ ಹಾಗೂ ಬಂಡಾಯ ಗುಂಪುಗಳ ನಡುವೆ ನಡೆಯುತ್ತಿದ್ದ ಹೋರಾಟವು ಹಿಂಸಾಚಾರಕ್ಕೆ ತಿರುಗಿ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಕಾಂಗೋ ಹಾಗೂ ಅಲ್ಲಿನ ನಿಯಮಗಳ ಕುರಿತು ವಿಶ್ಲೇಷಣೆ ನಡೆಸಿತು.

    ಈ ವೇಳೆ ಅಪಹರಣಕ್ಕೊಳಗಾದ ಕುಟುಂಬ ಸದಸ್ಯರೊಬ್ಬರನ್ನು ಬಿಡುಗಡೆ ಮಾಡಲು ಹೋದಾಗ CODECO ಉಗ್ರಗಾಮಿಗಳು ಮಹಿಳೆಯನ್ನು ಅಪಹರಿಸಿದ್ದರು. ಆಕೆಯ ಮೇಲೆ ಪದೇ-ಪದೇ ಅತ್ಯಾಚಾರ ನಡೆಸಿದರು. ದೈಹಿಕವಾಗಿ ಹಿಂಸಿಸಿದ್ರು. ಇಷ್ಟು ಸಾಲದೆಂಬಂತೆ ಒಬ್ಬ ವ್ಯಕ್ತಿಯ ಕತ್ತನ್ನು ಸೀಳಿ, ಅವನ ಕರುಳನ್ನು ಹೊರತೆಗೆದು ಬೇಯಿಸುವಂತೆ ಹೇಳಿದ್ದಾರೆ. ಜೊತೆಗೆ ಅದರಿಂದಲೇ ಅಡುಗೆ ತಯಾರಿಸಲು ಹೇಳಿದ್ದಾರೆ. ಊಟ ತಯಾರಿಸಿದ ಬಳಿಕ ಎಲ್ಲ ಕೈದಿಗಳಿಗೂ ಮನುಷ್ಯನ ಮಾಂಸವನ್ನೇ ತಿನ್ನಿಸಿದ್ದಾರೆ ಎಂದು ಲುಸೆಂಜ್ ಮಹಿಳೆಯ ಕಥೆ ವಿವರಿಸುತ್ತಾ ಭದ್ರತಾ ಮಂಡಳಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಸೆಪ್ಟೆಂಬರ್‌ವರೆಗೂ ಉಚಿತ ಪಡಿತರ ಯೋಜನೆಯನ್ನು ವಿಸ್ತರಿಸಿದ ದೆಹಲಿ ಸರ್ಕಾರ

    ಅಲ್ಲಿಂದ ಕೆಲ ದಿನಗಳ ನಂತರ ಮಹಿಳೆಯನ್ನು ಬಿಡುಗಡೆ ಮಾಡಲಾಯಿತು. ಮಹಿಳೆ ಮನೆಗೆ ಮರಳುತ್ತಿರುವಾಗ ಮತ್ತೊಂದು ಉಗ್ರಗಾಮಿಗಳ ಗುಂಪೊಂದು ಆಕೆಯನ್ನು ಅಪಹರಿಸಿದೆ. ಅಲ್ಲಿಯೂ ಕೂಡ ಆಕೆಯ ಮೇಲೆ ನಿರಂತರ ಅತ್ಯಾಚಾರ ಎಸಗಲಾಗಿದೆ. ಮತ್ತೆ ನರ ಮಾಂಸವನ್ನು ಬೇಯಿಸಿ ತಿನ್ನುವಂತೆ ಒತ್ತಾಯಿಸಲಾಗಿದೆ. ಅಂತಿಮವಾಗಿ ಅಲ್ಲಿಂದ ತಪ್ಪಿಸಿಕೊಂಡ ಮಹಿಳೆ ತನ್ನ ಕಥೆಯನ್ನು ಹೇಳಿಕೊಂಡಿರುವುದಾಗಿ ವಿವರಿಸಿದ್ದಾರೆ.

    ದೀರ್ಘಕಾಲ ಹೋರಾಡುತ್ತಿರುವ ಹಲವು ಸಶಸ್ತ್ರ ಸೇನಾ ಪಡೆಗಳಲ್ಲಿ ಕಾಂಗೋದ CODECO ಸಹ ಒಂದಾಗಿದೆ. ಕಳೆದ ದಶಕಗಳಲ್ಲಿ ಈ ಪಡೆಯು ಸಾವಿರಾರು ಜನರನ್ನು ಕೊಂದು ಲಕ್ಷಾಂತರ ಜನರನ್ನು ಸ್ಥಳಾಂತರಿಸಿದೆ ಎಂದು ಯುನ್ ಭದ್ರತಾ ಮಂಡಳಿ ಸಭೆಯಲ್ಲಿ ತಿಳಿದುಬಂದಿದೆ.

    Live Tv

  • ರಷ್ಯಾ ಸಶಸ್ತ್ರ ಪಡೆಗಳ ನಿಷ್ಕಲ್ಮಶ ಸೇವೆಗೆ ಪುಟಿನ್‌ ಧನ್ಯವಾದ

    ರಷ್ಯಾ ಸಶಸ್ತ್ರ ಪಡೆಗಳ ನಿಷ್ಕಲ್ಮಶ ಸೇವೆಗೆ ಪುಟಿನ್‌ ಧನ್ಯವಾದ

    ಮಾಸ್ಕೋ: ರಷ್ಯಾ ಒಕ್ಕೂಟದ ವಿಶೇಷ ಸಶಸ್ತ್ರ ಪಡೆಗಳ ಕಾರ್ಯಾಚರಣೆಗೆ ಮತ್ತು ಅವರ ನಿಷ್ಕಲ್ಮಶ ಸೇವೆಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಧನ್ಯವಾದ ಅರ್ಪಿಸಿದ್ದಾರೆ.

    ಮಾಸ್ಕೋ ಕ್ರೆಮ್ಲಿನ್‍ನಲ್ಲಿ ಮಾತನಾಡಿದ ಅವರು, ನಾನು ವಿಶೇಷ ಕಾರ್ಯಾಚರಣೆ ಪಡೆಗಳ ಕಮಾಂಡ್, ಸಿಬ್ಬಂದಿಗೆ, ರಷ್ಯಾದ ಜನತೆ ಮತ್ತು ನಮ್ಮ ಮಹಾನ್ ಮಾತೃಭೂಮಿಗೆ ಅವರು ಮಾಡಿದ ನಿಷ್ಕಲ್ಮಶ ಸೇವೆಗಾಗಿ ಧನ್ಯವಾದ ಹೇಳಲು ಬಯಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ರಾಷ್ಟ್ರಗೀತೆ ಹಾಡಿದ ಉಕ್ರೇನ್ ಮಹಿಳೆಯ ವೀಡಿಯೋ ವೈರಲ್

    ಫೆಬ್ರವರಿ 24 ರಂದು ರಷ್ಯಾ ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿತು. ಅಂದಿನಿಂದ ರಷ್ಯಾದ ಪಡೆಗಳು ಉಕ್ರೇನ್‍ನಾದ್ಯಂತ ಮಿಲಿಟರಿ ನೆಲೆಗಳು ಮತ್ತು ಇತರ ಸ್ಥಳಗಳ ಮೇಲೆ ದಾಳಿ ನಡೆಸಲು ಪ್ರಾರಂಭಿಸಿದೆ. ಇದೀಗ ರಷ್ಯಾದ ಪಡೆಗಳು ಉಕ್ರೇನ್ ರಾಜಧಾನಿ ಕೀವ್ ಒಳ ನುಗ್ಗಲು ದಾರಿ ಹುಡುಕುತ್ತಿದೆ. ಇದನ್ನೂ ಓದಿ: ಉಕ್ರೇನ್‍ನ ಅನಾಥಾಶ್ರಮಗಳ ಮೇಲೆ ರಷ್ಯಾ ದಾಳಿ- ಬಾಲಕಿ ಸೇರಿ 6 ಮಂದಿ ಸಾವು

    ಇದೀಗ ರಷ್ಯಾದ ಪಡೆ ಉಕ್ರೇನ್ ದೇಶದ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್‍ನಲ್ಲಿ ಗ್ಯಾಸ್ ಪೈಪ್‍ಲೈನ್ ಸ್ಫೋಟಗೊಳಿಸಿದ್ದಾರೆ. ರಷ್ಯಾದ ಕ್ಷಿಪಣಿಗಳು ಕೈವ್‍ನ ನೈಋತ್ಯದ ಉಕ್ರೇನಿಯನ್ ಪಟ್ಟಣವಾದ ವಾಸಿಲ್ಕಿವ್‍ಗೆ ಅಪ್ಪಳಿಸಿ ತೈಲ ಟರ್ಮಿನಲ್ ಸುಟ್ಟು ಹಾಕಲಾಗಿದೆ.

    ಭಾನುವಾರ ರಷ್ಯಾ ಪಡೆಗಳು ದಕ್ಷಿಣ ಉಕ್ರೇನಿಯನ್ ನಗರಗಳಾದ ಖೆರ್ಸನ್ ಮತ್ತು ಬರ್ಡಿಯಾನ್ಕ್ಸ್‍ವನ್ನು ಸಂಪೂರ್ಣವಾಗಿ ನಿರ್ಬಂಧಿಸಿವೆ. ಹೆನಿಚೆಸ್ಕ್ ಪಟ್ಟಣ ಮತ್ತು ಖೆರ್ಸನ್ ಬಳಿಯ ವಿಮಾನ ನಿಲ್ದಾಣವನ್ನು ವಶಪಡಿಸಿಕೊಂಡಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.

  • ಎಸ್.ಆರ್.ಎಸ್.ಐ ಮನೆಯ ಹಿಂಬಾಗಿಲ ಬೀಗ ಮುರಿದು ಕಳ್ಳತನ!

    ಎಸ್.ಆರ್.ಎಸ್.ಐ ಮನೆಯ ಹಿಂಬಾಗಿಲ ಬೀಗ ಮುರಿದು ಕಳ್ಳತನ!

    ಹಾವೇರಿ: ಮನೆಯ ಹಿಂಬಾಗಿಲ ಬೀಗ ಮುರಿದು ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿರುವ ಘಟನೆ ಹಾವೇರಿ ನಗರದ ಹೊರವಲಯದಲ್ಲಿರುವ ಶ್ರೀಕಂಠಪ್ಪ ಬಡಾವಣೆಯಲ್ಲಿ ನಡೆದಿದೆ.

    ನಗರದ ಅಂಥೋನಿ ಡಿಸೋಜಾ ಹಾವೇರಿ ಸಶಸ್ತ್ರ ಮೀಸಲು ಪಡೆಯ ಎಸ್.ಆರ್.ಎಸ್.ಐ ಕೆಲಸ ಮಾಡುತ್ತಿದ್ದ ಪೊಲೀಸ್ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.

    ಹಿಂಬಾಗಿಲ ಬೀಗ ಮುರಿದು ಟ್ರಜರಿಯಲ್ಲಿ ಎರಡು ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 20 ಸಾವಿರ ರೂಪಾಯಿ ಕಳ್ಳತನ ಮಾಡಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.