Tag: ಸವಾಲು

  • ಹಿನ್ನೆಲೆಗೆ ಹೋಗ್ಬೇಡಿ ಮುನ್ನೆಲೆಗೆ ಬನ್ನಿ – ಮೋದಿಗೆ ರಾಹುಲ್ ಸವಾಲ್

    ಹಿನ್ನೆಲೆಗೆ ಹೋಗ್ಬೇಡಿ ಮುನ್ನೆಲೆಗೆ ಬನ್ನಿ – ಮೋದಿಗೆ ರಾಹುಲ್ ಸವಾಲ್

    – ಲಾಕ್‍ಡೌನ್ ಸಂಪೂರ್ಣ ವಿಫಲವಾಗಿದೆ

    ನವದೆಹಲಿ: ಲಾಕ್‍ಡೌನ್ ವಿಫಲವಾದ ಬಳಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಿಂದೆ ಸರಿದಿದ್ದು, ಈ ನಡುವೆ ಅವರು ಎಲ್ಲೂ ಮುನ್ನೆಲೆಯಲ್ಲಿ ಕಾಣುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ, ಸಂಸದ ರಾಹುಲ್ ಗಾಂಧಿ ಕುಟುಕಿದ್ದಾರೆ. ಲಾಕ್‍ಡೌನ್ ಅವಧಿಯಲ್ಲಿ ಸರಣಿ ಸುದ್ದಿಗೋಷ್ಠಿ ನಡೆಸುತ್ತಿರುವ ಅವರು, ಇಂದಿನ ಸುದ್ದಿಗೋಷ್ಠಿಯಲ್ಲೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

    ಭಾರತದಲ್ಲಿ ಲಾಕ್‍ಡೌನ್ ಸಂಪೂರ್ಣ ವಿಫಲವಾಗಿದೆ. ಲಾಕ್‍ಡೌನ್ ಬಳಿಕವೂ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಏಕೈಕ ದೇಶ ಭಾರತ. ಇಲ್ಲಿ ಲಾಕ್‍ಡೌನ್ ಗುರಿ ಮತ್ತು ಉದ್ದೇಶ ಈಡೇರದೆ ವಿಫಲವಾಗಿದೆ. ವಿಫಲವಾದ ಲಾಕ್‍ಡೌನ್ ಫಲಿತಾಂಶವನ್ನು ಸದ್ಯ ಭಾರತ ಎದುರಿಸುತ್ತಿದ್ದು, ಸೋಂಕಿನ ಪ್ರಮಾಣ ಗಣನೀಯ ಏರಿಕೆ ಕಾಣುತ್ತಿದೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.

    ಲಾಕ್‍ಡೌನ್ ಆರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುನ್ನೆಲೆಯಲ್ಲಿದ್ದರು ಲಾಕ್‍ಡೌನ್ ವಿಫಲವಾಗುತ್ತಿದ್ದಂತೆ ಹಿನ್ನಲೆಗೆ ಸರಿದಿದ್ದಾರೆ. ವಿಪಕ್ಷವಾಗಿ ನಾವು ಅವರಿಗೆ ಮನವಿ ಮಾಡುತ್ತೇವೆ ಮತ್ತೆ ದೇಶದ ಮುನ್ನೆಲೆಗೆ ಬಂದು ಮಾತನಾಡಬೇಕು. ಲಾಕ್‍ಡೌನ್ ಬಳಿಕ ಸರ್ಕಾರದ ಮುಂದಿನ ನಡೆ ಏನು ಎಂದು ಸ್ಪಷ್ಟಪಡಿಸಬೇಕು. ಲಾಕ್‍ಡೌನ್ ವಿಫಲವಾಗಿದೆ ಸರ್ಕಾರದ ನಿರ್ಧಾರ ಏನು ಎನ್ನುವುದು ಜನರಿಗೆ ತಿಳಿಸಬೇಕು ಎಂದು ಆಗ್ರಹಿಸಿದರು.

    ಕೇಂದ್ರ ಸರ್ಕಾರದ ಇಪ್ಪತ್ತು ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ನಿಂದ ಏನು ಲಾಭ ಇಲ್ಲ. ಆರ್ಥಿಕ ಚೇತರಿಕೆಗೆ ನಗದು ಹಣ ವರ್ಗಾವಣೆ ಮಾಡದೆ ಬೇರೆ ಪರಿಹಾರ ಇಲ್ಲ. ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಬಲಿಷ್ಠಗೊಳಿಸಿ. ಶೇ.50 ಬಡ ಜನರಿಗೆ 7,500 ಹಣ ವರ್ಗಾವಣೆ ಮಾಡಿ ಇಲ್ಲದಿದ್ದರೆ ದೊಡ್ಡ ಆರ್ಥಿಕ ಮುಗ್ಗಟ್ಟು ದೇಶ ಎದುರಿಸಲಿದೆ ಎಂದು ಎಚ್ಚರಿಸಿದರು.

    ವಿದೇಶಗಳ ಬಗ್ಗೆ ಸರ್ಕಾರ ಯೋಚನೆ ಮಾಡವುದಲ್ಲ, ನಾವು ಮೊದಲು ನಮ್ಮ ದೇಶದ ಜನರನ್ನು ರಕ್ಷಿಸಬೇಕು. ಬಡವರು ಬದುಕು ಕಟ್ಟಿಕೊಳ್ಳಲು ಸರ್ಕಾರ ಏನು ಮಾಡಲಿದೆ ತಿಳಿಸಲಿ. ಕೊರೊನಾ ಹೋರಾಟಕ್ಕೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ನೆರವು ಸಿಗುತ್ತಿಲ್ಲ. ಆರ್ಥಿಕ ಪ್ಯಾಕೇಜ್‍ನ ಅವಶ್ಯಕತೆ ಇದೆ ಆದರೆ ಮೋದಿ ಸರ್ಕಾರ ಈ ಮನವಿ ಪರಿಗಣಿಸುತ್ತಿಲ್ಲ. ಇದು ಮತ್ತಷ್ಟು ಸಂಕಷ್ಟಕ್ಕೆ ಕಾರಣವಾಗಲಿದೆ. ಕೊರೊನಾ ನಿಯಂತ್ರಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ನಾನು ಮಾರ್ಕ್ಸ್ ನೀಡುವುದಿಲ್ಲ, ಮಾರ್ಕ್ಸ್ ನೀಡಲು ನಾನು ಪ್ರೊಫೆಸರ್ ಅಲ್ಲ ಎಂದು ಪ್ರಶ್ನೆಗೆ ಉತ್ತರಿಸಿದರು.

  • ಮೊದಲು ವಿಪಕ್ಷ ನಾಯಕರೆಂದು ಘೋಷಣೆ ಮಾಡಿಕೊಳ್ಳಲಿ – ಸಿದ್ದುಗೆ ಶೆಟ್ಟರ್ ಸವಾಲು

    ಮೊದಲು ವಿಪಕ್ಷ ನಾಯಕರೆಂದು ಘೋಷಣೆ ಮಾಡಿಕೊಳ್ಳಲಿ – ಸಿದ್ದುಗೆ ಶೆಟ್ಟರ್ ಸವಾಲು

    ಹುಬ್ಬಳ್ಳಿ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮೊದಲು ಅವರ ಪಕ್ಷದಿಂದ ವಿರೋಧ ಪಕ್ಷದ ನಾಯಕರೆಂದು ಘೋಷಣೆ ಮಾಡಿಸಿಕೊಳ್ಳಲಿ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಸಿದ್ದುಗೆ ಸವಾಲು ಎಸೆದಿದ್ದಾರೆ.

    ನಗರದ ತಮ್ಮ ನಿವಾಸದಲ್ಲಿಂದು ಮಾತನಾಡಿದ ಜಗದೀಶ್ ಶೆಟ್ಟರ್, ಎಸಿಬಿ, ಲೋಕಾಯುಕ್ತದ ಬಗ್ಗೆ ಮಾತನಾಡಲು ಸಿದ್ದರಾಮಯ್ಯ ಅವರಿಗೆ ನೈತಿಕತೆ ಇಲ್ಲದಾಗಿದೆ. ನೈತಿಕತೆಯನ್ನ ಮರೆತು ಸಿದ್ದರಾಮಯ್ಯ ಎಸಿಬಿ ಸ್ಥಾಪನೆ ಮಾಡಿದರು. ಅವರಿಗೆ ನೈತಿಕತೆ ಇದ್ದಿದ್ದರೆ ಅವರು ಸಿಎಂ ಆಗಿದ್ದ ವೇಳೆಯೇ ಎಸಿಬಿ ರದ್ದುಗೊಳಿಸಿ. ಲೋಕಾಯುಕ್ತಕ್ಕೆ ಬಲ ತುಂಬಬೇಕಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಅಲ್ಲದೇ ಎಸಿಬಿ, ಲೋಕಾಯುಕ್ತದ ಬಗ್ಗೆ ಸಿದ್ದರಾಮಯ್ಯ ಅವರು ಸದನದಲ್ಲಿ ಮಾತನಾಡಲಿ. ಆಗ ಉತ್ತರ ನೀಡುತ್ತೇವೆ. ಮೊದಲು ಸಿದ್ದರಾಮಯ್ಯ ವಿಪಕ್ಷ ನಾಯಕರು ಎಂದು ಘೋಷಣೆ ಮಾಡಿಸಿಕೊಳ್ಳಲಿ ಎಂದು ಲೇವಡಿ ಮಾಡಿದರು. ಅಲ್ಲದೇ ವಿಪಕ್ಷ ನಾಯಕರೆಂದು ಘೋಷಣೆ ಮಾಡಿಸಿಕೊಂಡ ನಂತರ ಅವರು ಬಿಜೆಪಿ, ಸಿಎಂ ಯಡಿಯೂರಪ್ಪ ಮತ್ತು ಪ್ರಧಾನ ಮಂತ್ರಿ ಮೋದಿ ಬಗ್ಗೆ ಮಾತನಾಡಲಿ ಎಂದು ಸವಾಲು ಎಸೆದರು.

  • Any Time, Any Where..I am Ready: ನಿಖಿಲ್ ಸವಾಲು ಸ್ವೀಕರಿಸಿದ ಸುಮಲತಾ

    Any Time, Any Where..I am Ready: ನಿಖಿಲ್ ಸವಾಲು ಸ್ವೀಕರಿಸಿದ ಸುಮಲತಾ

    ಮಂಡ್ಯ: ಬಹಿರಂಗ ಸಭೆಗೆ ಬನ್ನಿ ಮಾತನಾಡೋಣ ಎಂದು ನಿಖಿಲ್ ಕುಮಾರಸ್ವಾಮಿ ಹಾಕಿದ್ದ ಸವಾಲನ್ನು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಸ್ವೀಕರಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸುಮಲತಾ ಅವರು, ಅಂಬರೀಶ್ ಮತ್ತು ನನ್ನ ಬಗ್ಗೆ ಮಾತನಾಡುವುದನ್ನು ಬಿಟ್ಟು ಅಭಿವೃದ್ಧಿ ಬಗ್ಗೆ ಮಾತನಾಡಿ. ಎಲ್ಲಿಬೇಕಾದರೂ, ಯಾವ ವೇದಿಕೆಯಲ್ಲಾದರೂ ಚರ್ಚೆ ಮಾಡಿ. ಜನರ ಸಮಸ್ಯೆಯನ್ನು ಕೇಳಿ ಅದರ ಬಗ್ಗೆ ಮತನಾಡಿ ಎಂದು ನಾನೇ ಹೇಳಿದ್ದೆ ಎಂದರು. ಇದೇ ವೇಳೆ ಅಭಿವೃದ್ಧಿ ಬಗ್ಗೆ ನಿಖಿಲ್ ಜೊತೆ ಬಹಿರಂಗ ಚರ್ಚೆಗೆ ಸಿದ್ಧಳಿದ್ದೇನೆ ಎಂದು ನಿಖಿಲ್ ಕುಮಾರಸ್ವಾಮಿ ಸವಾಲನ್ನು ಸುಮಲತಾ ಸ್ವೀಕರಿಸಿದ್ದಾರೆ.

    ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು, ಸುಮ್ಮನೆ ಒಬ್ಬೊಬ್ಬರ ಕಾಲೆಳೆದುಕೊಂಡು ಮಾತನಾಡುವುದನ್ನು ಬಿಟ್ಟು ಅಭಿವೃದ್ಧಿ ಬಗ್ಗೆ ಮಾತನಾಡೋಣ, ಬಹಿರಂಗ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದ್ದರು. ಇದಕ್ಕೆ Any time, any where..I am ready ಎನ್ನುವ ಮೂಲಕ ನಿಖಿಲ್ ಸವಾಲು ಸ್ವೀಕರಿಸಿದ್ದಾರೆ.

    ನ್ಯಾಯಯುತ ಚುನವಾಣೆ ನಡೆಯಬೇಕು ಎಂದರೆ ಡಿಸಿ ವರ್ಗಾವಣೆ ಆಗಬೇಕು ಎಂದು ಮಂಡ್ಯ ಡಿಸಿ ಬಗ್ಗೆ ಮೊದಲೇ ದೂರು ನೀಡಿದ್ದೇವು. ಇದೀಗ ನ್ಯಾಯ ಸಿಕ್ಕಿದೆ. ಈಗ ಸಮಾಧಾನವಾಗಿದೆ ಎಂದು ಡಿಸಿ ವರ್ಗಾವಣೆ ಬಗ್ಗೆ ಹೇಳಿದ್ದಾರೆ.

    ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುದ್ದಿಗಳು 90% ಕನ್ಫರ್ಮ್ ಇಲ್ಲ. ಇದನ್ನು ಗಂಭೀರವಾಗಿ ತೆಗೆದುಕೊಂಡು ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಬಿಜೆಪಿ ಬೆಂಬಲಿತ ಅಭ್ಯರ್ಥಿ ಎನ್ನುವುದಕ್ಕಿಂತ ಕಾಂಗ್ರೆಸ್, ರಾಜ್ಯ ರೈತ ಸಂಘದ ಜನರು ಮತ್ತು ಜೆಡಿಎಸ್ ಪಕ್ಷದ ಕಾರ್ಯಕರ್ತರು ನನ್ನ ಬೆಂಬಲಕ್ಕೆ ಇದ್ದಾರೆ. ಅಂಬರೀಶ್ ಅವರು ಪಕ್ಷತೀತವಾಗಿ ಇದ್ದರು. ಹೀಗಾಗಿ ನಾನು ಬಿಜೆಪಿ ಅಭ್ಯರ್ಥಿಯಲ್ಲ. ಬಿಜೆಪಿಗೆ ಸೇರೋದು ಇಲ್ಲ ಎಂದು ಸುಮಲತಾ ಅವರು ಸ್ಪಷ್ಟಪಡಿಸಿದರು.

  • ಭತ್ತ ಕಟಾವು ಮಾಡಿದ್ದಾಯ್ತು, ಕಬ್ಬು ಸುಲಿಯೋಕೆ ಬನ್ನಿ: ಸಿಎಂಗೆ ಸವಾಲು ಹಾಕಿದ ರೈತ ಮಹಿಳೆ ಜಯಶ್ರೀ

    ಭತ್ತ ಕಟಾವು ಮಾಡಿದ್ದಾಯ್ತು, ಕಬ್ಬು ಸುಲಿಯೋಕೆ ಬನ್ನಿ: ಸಿಎಂಗೆ ಸವಾಲು ಹಾಕಿದ ರೈತ ಮಹಿಳೆ ಜಯಶ್ರೀ

    ಬೆಳಗಾವಿ: ಸಿಎಂ ಅವರೇ ಭತ್ತ ಕಟಾವು, ನಾಟಿ ಮಾಡಿದ್ದಾಯಿತು. ಈಗ ಕಬ್ಬು ಸುಲಿಯಲು ಬನ್ನಿ ಎನ್ನುವ ಮೂಲಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ರೈತ ಮಹಿಳೆ ಜಯಶ್ರೀ ಗುರಣ್ಣನವರ್ ಬಹಿರಂಗವಾಗಿ ಸವಾಲು ಹಾಕಿದ್ದಾರೆ.

    ಇಂದು ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಎದುರು ಕಬ್ಬು ಬೆಳೆಗಾರರು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಈ ವೇಳೆ ಮಾತನಾಡಿದ ಜಯಶ್ರೀ, ನಾವು ರೈತರೇ ಅಲ್ಲ ಅನ್ನುವ ನೀವು, ನನ್ನ ಹೇಳಿಕೆಯನ್ನು ಸವಾಲನ್ನಾಗಿ ಸ್ವೀಕರಿಸಿದರೂ ಪರವಾಗಿಲ್ಲ. ನಾವು ಭತ್ತ ನಾಟಿದ್ದೇವೆ. ಕಟಾವು ಸಹ ಮಾಡಿದ್ದೇವೆ. ಆದರೆ ಈಗ ನೀವು ಕಬ್ಬು ಸುಲಿಯೋಕೆ ಬನ್ನಿ ಎಂದು ಪಂಥಾಹ್ವಾನ ನೀಡಿದ್ದಾರೆ.

    ಕಬ್ಬು ಸುಲಿಯುವುದಕ್ಕೆ ನೀವೇ ಸ್ಥಳವನ್ನು ನಿಗದಿ ಮಾಡಿ. ಇಲ್ಲವೇ ನಾವು ನಿಗದಿ ಮಾಡಿದ ಜಾಗಕ್ಕೆ ಬಂದು ಕಬ್ಬು ಸುಲಿಯಿರಿ ಎಂದು ಬಹಿರಂಗವಾಗಿಯೇ ಸವಾಲು ಹಾಕಿದ್ದಾರೆ.

    ಪ್ರತಿಭಟನೆ ವಾಪಸ್:
    ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಾಗೂ ರೈತ ಮುಖಂಡರಾಗಿರುವ ಕೋಡಿಹಳ್ಳಿ ಚಂದ್ರಶೇಖರ್, ಬೆಳಗಾವಿ ಜಿಲ್ಲೆಯ ಕೆಂಡಸಕೊಪ್ಪದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಂಡಿದ್ದಾರೆ. ಸರ್ಕಾರ ರೈತರ ಬೇಡಿಕೆಗಳನ್ನು ಪೂರೈಸಲು ಬದ್ಧವಾಗಿದೆ. ಫೆಬ್ರವರಿ ತಿಂಗಳೊಳಗಾಗಿ ಬೇಡಿಕೆ ಈಡೇರಿಸುವ ಬಗ್ಗೆ ಸಿಎಂ ಕುಮಾರಸ್ವಾಮಿ ಮಾತು ಕೊಟ್ಟಿದ್ದಾರೆ. ಕಬ್ಬು ಬಿಲ್ ಬಾಕಿ ಹಾಗೂ ಬೆಂಬಲ ಬೆಲೆ ಹಾಗೂ ಭತ್ತಕ್ಕೆ ಎಮ್‍ಎಸ್‍ಪಿ ನಿಯಮದಂತೆ ಯೋಗ್ಯ ದರ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ. ಒಂದು ವೇಳೆ ಫೆಬ್ರವರಿ ಒಳಗೆ ಸಿಎಂ ಹೇಳಿದ ಹಾಗೆ ನಡೆದುಕೊಳ್ಳದೇ ಇದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮಂಗಳೂರು ವಿಚಾರವಾದಿಯ ಓಪನ್ ಚಾಲೆಂಚ್ ಸ್ವೀಕರಿಸಿದ ನಾಗಪಾತ್ರಿ

    ಮಂಗಳೂರು ವಿಚಾರವಾದಿಯ ಓಪನ್ ಚಾಲೆಂಚ್ ಸ್ವೀಕರಿಸಿದ ನಾಗಪಾತ್ರಿ

    ಉಡಪಿ: ವಿಚಾರವಾದಿ ಪ್ರೊ.ನರೇಂದ್ರ ನಾಯಕ್ ಹಾಕಿದ್ದ ಬಹಿರಂಗ ಸವಾಲನ್ನು ನಾನು ಸ್ವೀಕರಿಸಿದ್ದೇನೆ ಎಂದು ತೀರ್ಥಹಳ್ಳಿಯ ನಾಗಪಾತ್ರಿ ನಾಗರಾಜ್ ಭಟ್ ಹೇಳಿದ್ದಾರೆ.

    ನಾನು ನಾಗ ದೇವರ ಆರಾಧಕ. ದೇವತಾ ಕೆಲಸ ಮಾಡುತ್ತಿದ್ದು, ಕರೆನ್ಸಿ ಹಾಗೂ ನಂಬರ್ ಹೇಳುವ ಕೆಲಸ ಮಾಡುತ್ತಿಲ್ಲ. ಅವರು ನಾಗ ಪ್ರತಿಮೆ ಸವಾಲು ಹಾಕಿದರೆ ನಾನು ಗುರುತಿಸಲು ಸಿದ್ಧ. ಆದರೆ ಕರೆನ್ಸಿ ಹಾಗೂ ನಂಬರ್ ಹುಡುಕುವುದು ಕಾನೂನು ವಿರೋಧಿ ಚಟುವಟಿಕೆ ಆಗುತ್ತದೆ. ಒಂದು ವೇಳೆ ಹೀಗೆ ಮಾಡಿದರೆ ಮುಂದೆ ವಸ್ತುಗಳನ್ನು ಕಳೆದುಕೊಂಡವರು ಬರುತ್ತಾರೆ ಎಂದು ಹೇಳಿದರು.

    ಮನೆ ನಿರ್ಮಾಣದ ವೇಳೆ ವಿವಿಧ ಮಣ್ಣುಗಳನ್ನು ಬಳಕೆ ಮಾಡುತ್ತಾರೆ. ಹೀಗಾಗಿ ಉಡುಪಿಯಲ್ಲಿ ಹೊರತೆಗೆದ ನಾಗ ಕಲ್ಲಿಗೆ ಬೇರೆ ಮಣ್ಣು ಹತ್ತಿತ್ತು. ಪೂಜಾ ಕಾರ್ಯ ನಿಮಿತ್ತ ಸದ್ಯಕ್ಕೆ ಈ ಸವಾಲು ಸ್ವೀಕರಿಸಲು ಆಗಲ್ಲ. ಆದರೆ ಫೆಬ್ರವರಿ ಬಳಿಕ ಸವಾಲು ಸ್ವೀಕರಿಸುತ್ತೇನೆ. ಹೀಗಾಗಿ ಅವರು ಇಂದಿನಿಂದಲೇ ಅವರು ಆಸ್ತಿ ಹಾಗೂ ಹಣ ವರ್ಗಾವಣೆ ನಿಲ್ಲಿಸಬೇಕು. ನಾನು ನಾಗ ಪ್ರತಿಮೆ ಗುರುತಿಸಿದ ತಕ್ಷಣವೇ ಅವರು ಎಲ್ಲ ಆಸ್ತಿಯನ್ನು ನನಗೆ ಬಿಟ್ಟುಕೊಡಬೇಕು ಎಂದು ತಿಳಿಸಿದ್ದಾರೆ.

    ಸವಾಲು ಏನು?:
    ನಾಗಪಾತ್ರಿ ಕೊಡುವ ಕಲ್ಲನ್ನು ಒಂದೇ ರೀತಿಯ ಹತ್ತು ಬಾಕ್ಸ್ ಗಳನ್ನಿಟ್ಟು ಒಂದರಲ್ಲಿ ಇಡುತ್ತೇನೆ. ಯಾವ ಬಾಕ್ಸ್ ನಲ್ಲಿ ನಾಗ ಕಲ್ಲು ಇದೆ ಎನ್ನುವುದನ್ನು ಹೇಳಬೇಕು. ಮತ್ತೊಂದು ವಿಧಾನವೆಂದರೆ ಕಲ್ಲಿನ ಜೊತೆಗೆ ಒಂದು ಕರೆನ್ಸಿ ನೋಟನ್ನು ಇಡುತ್ತೇನೆ. ನಾಗನಪಾತ್ರಿ ಸರಿಯಾಗಿ ಗ್ರಹಿಸಿ, ನಾಗನ ಕಲ್ಲು ಮತ್ತು ಕರೆನ್ಸಿ ನೋಟಿನ ಸೀರಿಯಲ್ ನಂಬರ್ ಹೇಳಿದರೆ ನನ್ನಲ್ಲಾ ಆಸ್ತಿಯನ್ನು ಅವರಿಗೆ ಬರೆದುಕೊಡುತ್ತೇನೆ ಎಂದು ನರೇಂದ್ರ ನಾಯಕ್ ಓಪನ್ ಚಾಲೆಂಜ್ ಮಾಡಿದ್ದರು.

    ಅವರು ನಾಗ ಕಲ್ಲು ಇರುವ ಚಿತ್ರವನ್ನು ಬಿಡಿಸಿದ್ದರು. ಹೀಗಾಗಿ ಕರೆನ್ಸಿ ನಂಬರ್ ಹೇಳುವ ಸವಾಲು ಹಾಕಿದ್ದೇನೆ. ಒಂದು ವೇಳೆ ನಾಗನ ಕಲ್ಲು ಗುರುತಿಸಿದರೆ ಅದನ್ನು ಅದ್ಭುತವೆಂದು ಒಪ್ಪಿಕೊಳ್ಳುತ್ತೇನೆ. ಮನೆಯ ಒಳಗೆ ಆರು ಅಡಿ ತಳಪಾಯದಲ್ಲಿ ಇರುವ ನಾಗನ ಕಲ್ಲನ್ನು ತೆಗೆದವರಿಗೆ ಇದೇನು ದೊಡ್ಡ ಸವಾಲು ಅಲ್ಲ. ಅಂಥ ಶಕ್ತಿಯಿದ್ದರೆ ಸವಾಲು ಸ್ವೀಕರಿಸಲಿ ಅಂತಾ ಹೇಳಿದ್ದರು.

    ಒಂದು ವೇಳೆ ಅವರು ಸವಾಲಿನಲ್ಲಿ ಗೆದ್ದರೆ ನನ್ನ ಆಸ್ತಿಯನ್ನು ಅವರಿಗೆ ಬರೆದುಕೊಡುತ್ತೇನೆ. ಜೊತೆಗೆ ಸಾಯುವವರೆಗೂ ಅವರ ಗುಲಾಮನಾಗಿ ಇರುತ್ತೇನೆ. ಅವರು ಸೋತರೆ ಜನರು ಸತ್ಯೆ ಏನು ಎನ್ನುವುದನ್ನು ಅರಿಯುತ್ತಾರೆ ಎಂದು ನರೇಂದ್ರ ನಾಯಕ್ ಹೇಳಿದ್ದಾರೆ.

    ನಾಗಪಾತ್ರಿ ಯಾರು?
    ತೀರ್ಥಹಳ್ಳಯ ನಾಗಪಾತ್ರಿ ನಾಗರಾಜ್ ಭಟ್ ಅವರು ಉಡುಪಿ ಜಿಲ್ಲೆ ಮುದ್ರಾಡಿ ಗ್ರಾಮದ ಬರ್ಸಬೆಟ್ಟು ಮನೆಯಲ್ಲಿ ನಾಗನ ಕಲ್ಲನ್ನು ತೆಗೆದು ತೋರಿಸಿ ಅಚ್ಚರಿಗೆ ಮೂಡಿಸಿದ್ದರು. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಹಿಂದೆಯೇ ಮೈಸೂರು, ತುಮಕೂರು ಇನ್ನೂ ಹಲವೆಡೆ ಒಂದೇ ತರಹದ ಪ್ರತಿಮೆಗಳು ತೆಗೆದಿದ್ದಾರೆ. ಸುಮಾರು 7-8 ವರ್ಷದಿಂದ ಈ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ನಾಗಪಾತ್ರಿಗೆ ವಿಚಾರವಾದಿ ಪ್ರೊ. ನರೇಂದ್ರ ನಾಯಕ್ ಓಪನ್ ಚಾಲೆಂಜ್

    ನಾಗಪಾತ್ರಿಗೆ ವಿಚಾರವಾದಿ ಪ್ರೊ. ನರೇಂದ್ರ ನಾಯಕ್ ಓಪನ್ ಚಾಲೆಂಜ್

    ಮಂಗಳೂರು: ತೀರ್ಥಹಳ್ಳಿಯ ನಾಗಪಾತ್ರಿ ನಾಗರಾಜ್ ಭಟ್ ಅವರಿಗೆ ವಿಚಾರವಾದಿ, ಪ್ರೊ.ನರೇಂದ್ರ ನಾಯಕ್ ಎಂಬವರು ಬಹಿರಂಗವಾಗಿ ಸವಾಲು ಹಾಕಿದ್ದಾರೆ.

    ಸವಾಲು ಏನು?:
    ನಾಗನ ಪಾತ್ರಿ ಕೊಡುವ ಕಲ್ಲನ್ನು ಒಂದೇ ರೀತಿಯ ಹತ್ತು ಬಾಕ್ಸ್ ಗಳನ್ನಿಟ್ಟು ಒಂದರಲ್ಲಿ ಇಡುತ್ತೇನೆ. ಯಾವ ಬಾಕ್ಸ್ ನಲ್ಲಿ ನಾಗ ಕಲ್ಲು ಇದೆ ಎನ್ನುವುದನ್ನು ಹೇಳಬೇಕು. ಮತ್ತೊಂದು ವಿಧಾನವೆಂದರೆ ಕಲ್ಲಿನ ಜೊತೆಗೆ ಒಂದು ಕರೆನ್ಸಿ ನೋಟನ್ನು ಇಡುತ್ತೇನೆ. ನಾಗನಪಾತ್ರಿ ಸರಿಯಾಗಿ ಗ್ರಹಿಸಿ, ನಾಗನ ಕಲ್ಲು ಮತ್ತು ಕರೆನ್ಸಿ ನೋಟಿನ ಸೀರಿಯಲ್ ನಂಬರ್ ಹೇಳಿದರೆ ನನ್ನಲ್ಲಾ ಆಸ್ತಿಯನ್ನು ಅವರಿಗೆ ಬರೆದುಕೊಡುತ್ತೇನೆ ಎಂದು ಓಪನ್ ಚಾಲೆಂಜ್ ಮಾಡಿದ್ದಾರೆ.

    ನಾಗಪಾತ್ರಿ ತೆಗೆದ ಜಾಗದಲ್ಲಿ ಇದ್ದಿದ್ದು ಕೆಂಪು ಮಣ್ಣು ಇತ್ತು. ಆದರೆ ಕಲ್ಲು ಹೊರಗೆ ಬಂದಾಗ ಮಣ್ಣಿನ ಬಣ್ಣದಲ್ಲಿ ಬದಲಾವಣೆ ಆಗಿದ್ದನ್ನು ನಾನು ಗಮನಿಸಿದ್ದೇನೆ. ನಾಗ ಕಲ್ಲು ಹೊರತೆಗೆಯುವ ಮುನ್ನ ಅವರು ಅದು ಇರುವ ಜಾಗದ ಚಿತ್ರವನ್ನು ಬಿಡಿಸಿದ್ದರು. ಹೀಗಾಗಿ ಕರೆನ್ಸಿ ನಂಬರ್ ಹೇಳುವ ಸವಾಲು ಹಾಕಿದ್ದೇನೆ. ಒಂದು ವೇಳೆ ನಾಗನ ಕಲ್ಲು ಗುರುತಿಸಿ, ಕರೆನ್ಸಿ ನಂಬರ್ ಹೇಳಿದರೆ ಅದನ್ನು ಅದ್ಭುತವೆಂದು ಒಪ್ಪಿಕೊಳ್ಳುತ್ತೇನೆ. ಮನೆಯ ಒಳಗೆ ಆರು ಅಡಿ ತಳಪಾಯದಲ್ಲಿ ಇರುವ ನಾಗನ ಕಲ್ಲನ್ನು ತೆಗೆದವರಿಗೆ ಇದೇನು ದೊಡ್ಡ ಸವಾಲು ಅಲ್ಲ. ಅಂಥ ಶಕ್ತಿಯಿದ್ದರೆ ಸವಾಲು ಸ್ವೀಕರಿಸಲಿ ಎಂದರು.

    ಒಂದು ವೇಳೆ ಅವರು ಸವಾಲಿನಲ್ಲಿ ಗೆದ್ದರೆ ನನ್ನ ಆಸ್ತಿಯನ್ನು ಅವರಿಗೆ ಬರೆದುಕೊಡುತ್ತೇನೆ. ಜೊತೆಗೆ ಸಾಯುವವರೆಗೂ ಅವರ ಗುಲಾಮನಾಗಿ ಇರುತ್ತೇನೆ. ಅವರು ಸೋತರೆ ಜನರು ಸತ್ಯ ಏನು ಎನ್ನುವುದನ್ನು ಅರಿಯುತ್ತಾರೆ ಎಂದು ನರೇಂದ್ರ ನಾಯಕ್ ಹೇಳಿದ್ದಾರೆ.

    ನಾಗಪಾತ್ರಿ ಯಾರು?
    ತೀರ್ಥಹಳ್ಳಿಯ ನಾಗಪಾತ್ರಿ ನಾಗರಾಜ್ ಭಟ್ ಅವರು ಉಡುಪಿ ಜಿಲ್ಲೆ ಮುದ್ರಾಡಿ ಗ್ರಾಮದ ಬರ್ಸಬೆಟ್ಟು ಮನೆಯಲ್ಲಿ ನಾಗನ ಕಲ್ಲನ್ನು ತೆಗೆದು ತೋರಿಸಿ ಅಚ್ಚರಿ ಮೂಡಿಸಿದ್ದರು. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಹಿಂದೆಯೇ ಮೈಸೂರು, ತುಮಕೂರು ಇನ್ನೂ ಹಲವೆಡೆ ಒಂದೇ ತರಹದ ಪ್ರತಿಮೆಗಳು ತೆಗೆದಿದ್ದಾರೆ. ಸುಮಾರು 7-8 ವರ್ಷದಿಂದ ಈ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಹುಲಿಯ ಬಾಯಿಗೆ ಕೈ ಹಾಕಿದ ಶ್ರೀರಾಮುಲು ಶೀಘ್ರವೇ ಜೈಲಿಗೆ: ಕೈ ಮುಖಂಡ ಆಂಜನೇಯಲು

    ಹುಲಿಯ ಬಾಯಿಗೆ ಕೈ ಹಾಕಿದ ಶ್ರೀರಾಮುಲು ಶೀಘ್ರವೇ ಜೈಲಿಗೆ: ಕೈ ಮುಖಂಡ ಆಂಜನೇಯಲು

    ಬಳ್ಳಾರಿ: ಡಿಕೆ ಶಿವಕುಮಾರ್ ಜೈಲಿಗೆ ಹೋಗಲಿದ್ದಾರೆ ಎಂದು ಹೇಳಿದ ನೀವೂ ಸಹ ಜೈಲಿಗೆ ಹೋಗುವ ಕಾಲ ಹತ್ತಿರ ಬಂದಿದೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಜೆ ಎಸ್ ಆಂಜನೇಯಲು ಶ್ರೀರಾಮುಲು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೆಡ್ಡಿ-ರಾಮುಲು ಅಧಿಕಾರದಲ್ಲಿದ್ದಾಗ ಗಣಿಗಾರಿಕೆಯಲ್ಲಿ ಲೂಟಿ ಮಾಡಿದ್ದೂ ಜನರು ಮರೆತಿಲ್ಲ. ಶಾಸಕ ಶ್ರೀರಾಮುಲುಗೆ ಬಳ್ಳಾರಿ ಜನರ ಮೇಲೆ ನಂಬಿಕೆಯಿಲ್ಲ. ಹೀಗಾಗಿ ಅವರು ಮೊಳಕಾಲ್ಮೂರು ಕ್ಷೇತ್ರಕ್ಕೆ ಹೋಗಿ ಸ್ಫರ್ಧಿಸಿದರು ಎಂದು ಹೇಳಿದರು.

    ಶ್ರೀರಾಮುಲು ಸಹ 27 ಎಕರೆ ಜಮೀನು ಕಬಳಿಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ನಿಮ್ಮ ವಿರುದ್ಧವೂ ಸಹ ಲೋಕಾಯುಕ್ತದಲ್ಲಿ ಕೇಸಿದೆ. ನೀವೂ ಸಹ ಜೈಲಿಗೆ ಹೋಗುವ ಕಾಲ ಸನ್ನಿಹಿತವಾಗಿದೆ. ಹುಲಿಯ ಬಾಯಿಗೆ ಕೈ ಹಾಕುತ್ತಿದ್ದೀರಿ ಹುಷಾರ್ ಎಂದು ಶ್ರೀರಾಮುಲು ಅವರ ಮಾತಿಗೆ ತಿರುಗೇಟು ನೀಡಿದರು.

    ಬಳ್ಳಾರಿ ಜನರನ್ನು ದಡ್ರು ಎಂದು ತಿಳಿದುಕೊಂಡಿದ್ದಿರಾ. ರಾಜ್ಯದಲ್ಲಿ ಮಂತ್ರಿಯಾಗಬೇಕಾದಾಗ ಮೊಳಕಾಲ್ಮೂರಿನಲ್ಲಿ ನಿಂತುಕೊಂಡಿದ್ದೀರಿ. ಕೇಂದ್ರದಲ್ಲಿ ಮಂತ್ರಿಯಾಗಬೇಕಾದ್ರೆ ಬಳ್ಳಾರಿಯಲ್ಲಿ ನಿಂತುಕೊಳ್ಳುತ್ತೀರಿ. ಬಳ್ಳಾರಿ ಜನರನ್ನು ಕೇವಲ ಮಂತ್ರಿಯಾಗುವುದಕ್ಕೆ ಮಾತ್ರ ಉಪಯೋಗಿಸಿಕೊಳ್ಳುತ್ತಿದ್ದೀರಿ. ಬಳ್ಳಾರಿ ಜನರನ್ನು ಏನೆಂದು ತಿಳಿದುಕೊಂಡಿದ್ದೀರಿ? ಒಂದು ಬಾರಿ ಬಿಜೆಪಿಯಲ್ಲಿ ಅವಕಾಶ ನೀಡಿದ್ದಕ್ಕೆ ಅಕ್ರಮ ಗಣಿಗಾರಿಕೆ ಲೂಟಿ ಮಾಡಿದ್ದೀರಿ ಎಂದು ಆಕ್ರೋಶ ಹೊರ ಹಾಕಿದರು.

    ನಿಮಗೆ ತಾಕತ್ ಇದ್ದರೆ ನೀವು ನಾಗೇಂದ್ರ ವಿರುದ್ಧ ಸ್ಪರ್ಧೆ ಮಾಡಬೇಕಿತ್ತು. ಅದು ಬಿಟ್ಟು ಸೋಲುವ ಭಯದಿಂದ ಬೇರೆ ಕಡೆ ಸ್ಪರ್ಧೆ ಮಾಡಿದ್ರಿ. ನೀವೂ ರಾಜೀನಾಮೆ ನೀಡಿ ಬಂದು ನನ್ನ ವಿರುದ್ಧ ಗೆಲುವು ಸಾಧಿಸಿದರೆ ನಾನು ಬಳ್ಳಾರಿ ಬಿಟ್ಟೇ ಹೋಗುತ್ತೇನೆ. ಒಂದು ವೇಳೆ ನೀವು ಸೋತರೇ ಬಳ್ಳಾರಿ ಬಿಟ್ಟು ಹೋಗ್ತೀರಾ ಎಂದು ಆಂಜನೇಯಲು ಶ್ರೀರಾಮುಲುಗೆ ಸವಾಲು ಎಸೆದರು.

    ರಾಜೀನಾಮೆ ನೀಡಿ ಮೂರು ಬಾರಿ ಜನರಿಗೆ ಮೋಸ ಮಡಿದ ನೀವು ಬಳ್ಳಾರಿಗೆ ನೀಡಿದ ಕೊಡಗೆ ಏನು ಎನ್ನುವುದನ್ನು ತೋರಿಸಿ ಎಂದು ಪ್ರಶ್ನಿಸಿ ವಾಗ್ದಾಳಿ ನಡೆಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಮಮಂದಿರಕ್ಕೆ ಪಾಯ ಹಾಕಿ ಎಂಪಿ ಚುನಾವಣೆ ಎದುರಿಸಿ: ಮೋದಿಗೆ ಬೆಳ್ಳುಬ್ಬಿ ಸವಾಲ್

    ರಾಮಮಂದಿರಕ್ಕೆ ಪಾಯ ಹಾಕಿ ಎಂಪಿ ಚುನಾವಣೆ ಎದುರಿಸಿ: ಮೋದಿಗೆ ಬೆಳ್ಳುಬ್ಬಿ ಸವಾಲ್

    ಬಾಗಲಕೋಟೆ: ರಾಮಮಂದಿರ ಹೆಸರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜಕೀಯ ಮಾಡುತ್ತಿದ್ದಾರೆ. ನಿಮ್ಮ ಹತ್ತಿರ ದಮ್ ಇದ್ದರೆ ರಾಮಮಂದಿರಕ್ಕೆ ಪಾಯಾ ಹಾಕಿ. ನಂತರ ಲೋಕಸಭಾ ಚುನಾವಣೆ ಎದುರಿಸಿ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಅವರು ಸವಾಲು ಹಾಕಿದ್ದಾರೆ.

    ನಗರದಲ್ಲಿ ನಡೆದ ಜೆಡಿಎಸ್ ನೂತನ ಜಿಲ್ಲಾಧ್ಯಕ್ಷ ಪದಗ್ರಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಸವಾಲು ಕೇವಲ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಷ್ಟೇ ಅಲ್ಲ, ರಾಜ್ಯ ಹಾಗೂ ಕೇಂದ್ರ ಬಿಜೆಪಿ ಮುಖಂಡರಿಗೂ ಅನ್ವಯವಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

    ಬಿಜೆಪಿಯವರು ಯುವಕರನ್ನು ಬಲಿ ಕೊಟ್ಟರು, ಬ್ರಾಹ್ಮಣ ಕುಟುಂಬಗಳನ್ನು ಸರ್ವನಾಶ ಮಾಡಿದರು. ಕಳೆದ ವರ್ಷವೇ ಕೃಷಿ ಉತ್ಪನ್ನದ ಕನಿಷ್ಠ ಬೆಂಬಲ ಬೆಲೆಯನ್ನು ಏರಿಕೆ ಮಾಡಬಹುದಿತ್ತು. ಆದರೆ ಮಾಡಲಿಲ್ಲ. ಈಗ ಲೋಕಸಭೆ ಚುನಾವಣೆ ಉದ್ದೇಶದಿಂದ ಈ ನಿರ್ಧಾರಕ್ಕೆ ಕೇಂದ್ರ ಬಿಜೆಪಿ ಸರ್ಕಾರ ಮುಂದಾಗಿದೆ ಎಂದು ದೂರಿದರು.

    ಪ್ರಧಾನಿ ಮೋದಿ ಅವರ ಹೆಸರಿನ ಮೇಲೆ ಕತ್ತೆಗೂ ಟಿಕೆಟ್ ಕೊಟ್ಟರೆ ಆಯ್ಕೆಯಾಗುತ್ತಾರೆಯೇ? ಅನೇಕ ನಾಯಕರಿದ್ದರೂ ಅವರಿಗೆ ಅವಕಾಶ ನೀಡಲಿಲ್ಲ. ಹೀಗಾಗಿ ನಾನು ಬಿಜೆಪಿ ಬಿಟ್ಟು ಬಂದೆ. 2019ರ ಲೋಕಸಭೆ ಚುನಾವಣೆಯಲ್ಲಿ ಬಾಗಲಕೋಟೆ ಕ್ಷೇತ್ರದಿಂದ ಟಿಕೆಟ್ ದೊರೆತರೆ ಗೆಲುವು ಸಾಧಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ವಿರಾಟ್, ತೇಜಸ್ವಿ ಬಳಿಕ ಮೋದಿಗೆ ರಾಗಾ ಚಾಲೆಂಜ್!

    ವಿರಾಟ್, ತೇಜಸ್ವಿ ಬಳಿಕ ಮೋದಿಗೆ ರಾಗಾ ಚಾಲೆಂಜ್!

    ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಬಳಿಕ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಮೋದಿಗೆ ಸವಾಲೆಸೆದಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ವಿರಾಟ್ ಕೊಹ್ಲಿ ಅವರ ಫಿಟ್ನೆಸ್ ಸವಾಲನ್ನು ಸ್ವೀಕರಿಸಿದ್ದು ಸಂತಸ ತಂದಿದೆ. ಸದ್ಯ ತನ್ನನೊಂದು ಸವಾಲು ಇದ್ದು, ಇಂಧನ ಬೆಲೆಯನ್ನು ಕಡಿತಗೊಳಿಸಿ ಇಲ್ಲವಾದರೆ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ ನಡೆಸಿ ಒತ್ತಡ ತರುತ್ತದೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಈ ಕುರಿತು ನಿಮ್ಮ ಉತ್ತರಕ್ಕಾಗಿ ನಿರೀಕ್ಷೆಯಲ್ಲಿರುವುದಾಗಿಯೂ ತಿಳಿಸಿದ್ದಾರೆ.

    ಪ್ರಧಾನಿ ಮೋದಿ ಕೊಹ್ಲಿಗೆ ನೀಡಿದ ಉತ್ತರದಿಂದ ಪ್ರೇರಣೆಯಾಗಿ ಆರ್ ಜೆಡಿ ನಾಯಕ ತೇಜಸ್ವಿ ಯಾದವ್, ನಿರುದ್ಯೋಗ, ರೈತರಿಗೆ ಪರಿಹಾರ, ದಲಿತ ಹಾಗೂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯವನ್ನು ತಡೆಯುತ್ತೀರಾ ಎಂದು ಸವಾಲು ಎಸೆದಿದ್ದರು. ಇದನ್ನು ಓದಿ: ವಿರಾಟ್ ಸವಾಲ್ ಸ್ವೀಕರಿಸಿದ ಬೆನ್ನಲ್ಲೇ ಮೋದಿಗೆ ತೇಜಸ್ವಿ ಯಾದವ್ ಚಾಲೆಂಜ್!

  • ಯಡಿಯೂರಪ್ಪ ವಿರುದ್ಧ ಸ್ಪರ್ಧೆಗೆ ನಾನು ಸಿದ್ಧ: ವರ್ತೂರ್ ಪ್ರಕಾಶ್

    ಯಡಿಯೂರಪ್ಪ ವಿರುದ್ಧ ಸ್ಪರ್ಧೆಗೆ ನಾನು ಸಿದ್ಧ: ವರ್ತೂರ್ ಪ್ರಕಾಶ್

    ರಾಯಚೂರು: ಉತ್ತರ ಕರ್ನಾಟಕದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಎಲ್ಲೇ ಸ್ಪರ್ಧಿಸಿದರೂ ಅವರ ವಿರುದ್ಧ ಎದುರಾಳಿಯಾಗಿ ಸ್ಪರ್ಧಿಸುತ್ತೇನೆ ಎಂದು ಕೋಲಾರದ ಪಕ್ಷೇತರ ಶಾಸಕ ವರ್ತೂರ್ ಪ್ರಕಾಶ್ ಹೇಳಿದ್ದಾರೆ.

    ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ತನಗೆ ಟಿಕೆಟ್ ಕೊಡಿಸುವುದಾಗಿ ಸಿಎಂ ಸಿದ್ದರಾಮಯ್ಯ ಅವರು ಆಶ್ವಾಸನೆಯನ್ನು ನೀಡಿದ್ದಾರೆ ಎಂದು ಶಾಸಕ ವರ್ತೂರ್ ಪ್ರಕಾಶ ಹೇಳಿದ್ದಾರೆ.

    ರಾಯಚೂರಿನಲ್ಲಿ ಈ ಕುರಿತು ಮಾತನಾಡಿದ ಶಾಸಕ ಪ್ರಕಾಶ್, ಯಡಿಯೂರಪ್ಪನವರು ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಿದರು ಅಲ್ಲಿ ಲಿಂಗಾಯತ ಮತಗಳ 50 ಸಾವಿರದಿಂದ ಶುರವಾಗುತ್ತದೆ. ನಮ್ಮ ಅಹಿಂದ ಸಮುದಾಯದ ಮತಗಳು 75%ರಷ್ಟಿದ್ದು ಅದರಿಂದ ನಮ್ಮ ಗೆಲುವು ಸುಲಭಸಾಧ್ಯ ಎಂದು ತಿಳಿಸಿದರು.

    ಇದೇ ಸಂದರ್ಭದಲ್ಲಿ ಮುಂದಿನ ಅವಧಿಗೂ ರಾಜ್ಯದಲ್ಲಿ ಸಿದ್ದರಾಮಯ್ಯ ಅವರೆ ಸಿಎಂ ಆಗಬೇಕು. ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಕ್ಕೂ ಸಿದ್ದರಾಮಯ್ಯನವರಿಗೂ ಯಾವ ಸಂಬಂಧವಿಲ್ಲ. ಬುದ್ಧಿವಂತ ಸಮಾಜದವರು ತಾವೇ ಬೀದಿಗಿಳಿದು ಹೋರಾಟ ನಡೆಸಿದ್ದಾರೆ ಎಂದರು.

    ರಾಜ್ಯ ಸರ್ಕಾರ ರೈತರ ಸಾಲಮನ್ನಾ ಮಾಡಿರುವುದನ್ನ ಲಾಲಿಪಪ್‍ಗೆ ಹೋಲಿಸಿರುವ ಕೇಂದ್ರ ಸಚಿವ ಜಾವೇಡಕರ್ ಗೆ ಸವಾಲು ಎಸೆದ ಶಾಸಕರು, ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್‍ಗಳ ಸಾಲಮನ್ನಾ ಮಾಡಿ ಬಿರಿಯಾನಿ ಕೊಡಿಸಲಿ ಅಂತ ಹೇಳಿದರು.