Tag: ಸಲ್ಮಾನ್ ಖಾನ್

  • ಸಲ್ಮಾನ್‌ ಖಾನ್‌ ಈಗ ಉಗ್ರ: ಪಾಕ್‌ ಘೋಷಣೆ

    ಸಲ್ಮಾನ್‌ ಖಾನ್‌ ಈಗ ಉಗ್ರ: ಪಾಕ್‌ ಘೋಷಣೆ

    ಇಸ್ಲಾಮಾಬಾದ್: ಬಲೂಚಿಸ್ತಾನ್‌ ಪರ ಮಾತನಾಡಿದ್ದಕ್ಕೆ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ (Salman Khan) ಅವರಿಗೆ ಪಾಕಿಸ್ತಾನವು ‘ಭಯೋತ್ಪಾದಕ’ ಎಂಬ ಹಣಪಟ್ಟಿ ಕಟ್ಟಿದೆ.

    ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಇತ್ತೀಚೆಗೆ ರಿಯಾದ್‌ನಲ್ಲಿ ನಡೆದ ಜಾಯ್ ಫೋರಮ್ 2025 ರಲ್ಲಿ ಭಾರತೀಯ ಸಿನಿಮಾದ ಜಾಗತಿಕ ವ್ಯಾಪ್ತಿಯ ಬಗ್ಗೆ ಮಾತನಾಡುವಾಗ, ಬಲೂಚಿಸ್ತಾನ್ (Balochistan) ಮತ್ತು ಪಾಕಿಸ್ತಾನವನ್ನು ಪ್ರತ್ಯೇಕವಾಗಿ ಉಲ್ಲೇಖಿಸಿದ್ದರು. ಹೀಗಾಗಿ, ಪಾಕಿಸ್ತಾನ (Pakistan) ಸರ್ಕಾರ ಅವರನ್ನು ‘ಭಯೋತ್ಪಾದಕ’ ಎಂದು ಘೋಷಿಸಿದೆ. ಇದನ್ನೂ ಓದಿ: ಪಾತಾಳಕ್ಕೆ ಬಿದ್ದ ಪಾಕ್‌ – ಸಾಲದ ಪ್ರಮಾಣ 80 ಲಕ್ಷ ಕೋಟಿಗೆ ಏರಿಕೆ

    ಸಲ್ಮಾನ್ ಅವರನ್ನು ಪಾಕಿಸ್ತಾನದ 1997 ರ ಭಯೋತ್ಪಾದನಾ ನಿಗ್ರಹ ಕಾಯ್ದೆಯ 4ನೇ ವೇಳಾಪಟ್ಟಿಯ ಅಡಿಯಲ್ಲಿ ಸೇರಿಸಲಾಗಿದೆ. ಭಯೋತ್ಪಾದನೆಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಕಟ್ಟುನಿಟ್ಟಿನ ನಿಗಾದಲ್ಲಿರುವ ವ್ಯಕ್ತಿಗಳಿಗೆ ಈ ವರ್ಗವನ್ನು ಕಾಯ್ದಿರಿಸಲಾಗಿದೆ.

    ‘ಈಗ ನೀವು ಹಿಂದಿ ಸಿನಿಮಾ ಮಾಡಿ ಇಲ್ಲಿ ಬಿಡುಗಡೆ ಮಾಡಿದರೆ, ಅದು ಸೂಪರ್ ಹಿಟ್ ಆಗುತ್ತದೆ. ನೀವು ತಮಿಳು, ತೆಲುಗು ಅಥವಾ ಮಲಯಾಳಿ ಸಿನಿಮಾ ಮಾಡಿದರೆ, ನೂರಾರು ಕೋಟಿ ಗಳಿಸುತ್ತದೆ. ಏಕೆಂದರೆ ಇಲ್ಲಿ ಹಲವಾರು ದೇಶಗಳ ಜನರು ವಾಸಿಸುತ್ತಾರೆ. ಬಲೂಚಿಸ್ತಾನದ ಜನರಿದ್ದಾರೆ, ಅಫ್ಘಾನಿಸ್ತಾನದ ಜನರಿದ್ದಾರೆ, ಪಾಕಿಸ್ತಾನದ ಜನರಿದ್ದಾರೆ. ಎಲ್ಲರೂ ಇಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಸಲ್ಮಾನ್‌ ಖಾನ್‌ ಸಮಾರಂಭದಲ್ಲಿ ಮಾತನಾಡಿದ್ದರು.

    ಬಲೂಚಿಸ್ತಾನವನ್ನು ಪಾಕಿಸ್ತಾನದಿಂದ ಬೇರ್ಪಡಿಸುವ ಅವರ ಹೇಳಿಕೆಯು ಪಾಕ್‌ನ ತೀವ್ರ ಟೀಕೆಗೆ ಗುರಿಯಾಗಿದೆ. ಏಕೆಂದರೆ ಪಾಕಿಸ್ತಾನ ಆ ಪ್ರಾಂತ್ಯವನ್ನು ದೇಶದ ಅವಿಭಾಜ್ಯ ಅಂಗವೆಂದು ನೋಡುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಬಲೂಚ್ ಪ್ರತ್ಯೇಕತಾವಾದಿ ನಾಯಕರು ಸಲ್ಮಾನ್ ಅವರ ಮಾತುಗಳನ್ನು ಶ್ಲಾಘಿಸಿದ್ದಾರೆ. ಬಲೂಚ್ ಸ್ವಾತಂತ್ರ್ಯದ ಪ್ರಮುಖ ವಕೀಲರಾದ ಮೀರ್ ಯಾರ್ ಬಲೂಚ್, ‘ನಟ ಆರು ಕೋಟಿ ಬಲೂಚ್ ಜನರಿಗೆ ಸಂತೋಷ ತಂದಿದ್ದಾರೆ’ ಹೇಳಿದ್ದಾರೆ. ಇದನ್ನೂ ಓದಿ: ರಷ್ಯಾದಿಂದ ತೈಲ ಆಮದನ್ನು ಭಾರತ ಸಂಪೂರ್ಣವಾಗಿ ನಿಲ್ಲಿಸಲಿದೆ: ಟ್ರಂಪ್ ಅದೇ ರಾಗ

    ಪಾಕಿಸ್ತಾನದ ಅತಿದೊಡ್ಡ ಆದರೆ ಕಡಿಮೆ ಅಭಿವೃದ್ಧಿ ಹೊಂದಿದ ಪ್ರಾಂತ್ಯವಾದ ಬಲೂಚಿಸ್ತಾನ್, ದೀರ್ಘಕಾಲದಿಂದ ಆರ್ಥಿಕ ನಿರ್ಲಕ್ಷ್ಯ, ರಾಜಕೀಯ ದಮನ ಮತ್ತು ಮಿಲಿಟರಿ ದಮನಗಳನ್ನು ಎದುರಿಸುತ್ತಿದೆ. ಅಪಾರ ಖನಿಜ ಸಂಪತ್ತಿನ ಹೊರತಾಗಿಯೂ, ಈ ಪ್ರದೇಶವು ಬಡತನದಿಂದ ಬಳಲುತ್ತಿದೆ. ಅದರ ಜನಸಂಖ್ಯೆಯ 70% ಕ್ಕಿಂತ ಹೆಚ್ಚು ಜನರು ಬಡತನ ರೇಖೆಯ ಕೆಳಗಿದ್ದಾರೆ.

  • ತಿಂಡಿ ತಿನ್ನಲೂ ಒಂದು ಗಂಟೆ ಬೇಕಿತ್ತು, ಆತ್ಮಹತ್ಯೆ ಯೋಚನೆ ಬಂದಿತ್ತು – ಜೀವನದಲ್ಲಿ ಕಾಡಿದ ನರರೋಗದ ಬಗ್ಗೆ ಸಲ್ಮಾನ್ ಖಾನ್ ಮಾತು

    ತಿಂಡಿ ತಿನ್ನಲೂ ಒಂದು ಗಂಟೆ ಬೇಕಿತ್ತು, ಆತ್ಮಹತ್ಯೆ ಯೋಚನೆ ಬಂದಿತ್ತು – ಜೀವನದಲ್ಲಿ ಕಾಡಿದ ನರರೋಗದ ಬಗ್ಗೆ ಸಲ್ಮಾನ್ ಖಾನ್ ಮಾತು

    ತಿಂಡಿ ತಿನ್ನಲೂ ನನಗೆ ಗಂಟೆಗಳ ಅವಧಿ ಬೇಕಿತ್ತು, ಆತ್ಮಹತ್ಯೆ ಯೋಚನೆಗಳು ಬಂದಿದ್ದವು ಎಂದು ಜೀವನದಲ್ಲಿ ಅನುಭವಿಸಿದ ನರರೋಗದ ನರಕಯಾತನೆ ಬಗ್ಗೆ ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಮಾತನಾಡಿದ್ದಾರೆ.

    `ಟು ಮಚ್’ ಎಂಬ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನರದ ಅಸ್ವಸ್ಥತೆಯಿಂದಾಗಿ ಉಂಟಾಗಿದ್ದ ಟ್ರೈಜಿಮಿನಲ್ ನರರೋಗದ ಬಗ್ಗೆ, ತಾವು ಅನುಭವಿಸಿದ ಯಾತನೆ ಬಗ್ಗೆ ಹೇಳಿಕೊಂಡಿದ್ದಾರೆ. ಇದು ಸಾಮಾನ್ಯ ಜೀವನದ ಮೇಲೆಯೂ ತೀವ್ರವಾಗಿ ಪರಿಣಾಮ ಬೀರಿತ್ತು. ತಿನ್ನುವದರಿಂದ ಹಿಡಿದು ಎಲ್ಲವನ್ನೂ ಕಷ್ಟವನ್ನಾಗಿಸಿತ್ತು ಎಂದು ತಿಳಿಸಿದ್ದಾರೆ.ಇದನ್ನೂ ಓದಿ: 3ನೇ ಮಗುವಿನ ತಾಯಿಯಾದ ಖ್ಯಾತ ಸಿಂಗರ್ ರಿಹಾನಾ

    2007ರಲ್ಲಿ `ಪಾರ್ಟ್ನರ್’ ಸಿನಿಮಾದ ಸೆಟ್‌ನಲ್ಲಿ ಈ ರೋಗದ ಮೊದಲ ಲಕ್ಷಣ ಕಾಣಿಸಿಕೊಂಡಿತ್ತು. ಆ ಸಮಯದಲ್ಲಿ ನಟ ಲಾರಾ ದತ್ತ ಅವರು ನನ್ನ ಮುಖದಿಂದ ಕೂದಲೆಳೆಯನ್ನು ಕಿತ್ತಿದ್ದಾಗ ತೀವ್ರವಾಗಿ ನೋವಾಗಿತ್ತು. ಆಗ ನಾನು ಅದನ್ನು ಹಲ್ಲಿನ ಸಮಸ್ಯೆ ಎಂದುಕೊಂಡಿದ್ದೆ. ಆದರೆ ಬಳಿಕ ಆಸ್ಪತ್ರೆಗೆ ತೆರಳಿದಾಗ ಇದು ನರಗಳಿಗೆ ಸಂಬಂಧಿಸಿದ್ದು ಎಂದು ತಿಳಿಯಿತು. ಆದರೆ ಅದರ ನೋವು ಎಷ್ಟಿರುತ್ತದೆ ಎಂದರೆ ನಿಮ್ಮ ಶತ್ರುವಿಗೂ ಹಾಗಾಗಬಾರದು ಎಂದುಕೊಳ್ಳುವಷ್ಟು ತೀವ್ರವಾಗಿ ನೋವಾಗುತ್ತದೆ. ಇಂತಹ ನೋವಿನಿಂದ ಹೆಚ್ಚು ಆತ್ಮಹತ್ಯೆಗಳು ಸಂಭವಿಸುತ್ತವೆ. ನನಗೂ ಕೂಡ ಅಂತಹ ಯೋಚನೆಗಳು ಬಂದಿದ್ದವು. ಆದರೆ ನಾನು ಈ ನೋವನ್ನು ಏಳೂವರೆ ವರ್ಷಗಳ ಕಾಲ ಅನುಭವಿಸಿದ್ದೇನೆ ಎಂದಿದ್ದಾರೆ.

    ಈ ನೋವು ನನ್ನ ದೈನಂದಿನ ಜೀವನದ ಮೇಲೆ ತೀವ್ರವಾಗಿ ಪರಿಣಾಮ ಬೀರಿತು. ಪ್ರತಿ 4-5 ನಿಮಿಷಗಳಿಗೊಮ್ಮೆ ನೋವಾಗುತ್ತಿತ್ತು. ತಿಂಡಿ ತಿನ್ನಬೇಕೆಂದರೆ ನನಗೆ ಒಂದು ಗಂಟೆಗೂ ಅಧಿಕ ಸಮಯಬೇಕಿತ್ತು. ಅಗಿಯಲು ಆಗುತ್ತಿರಲಿಲ್ಲ. ಇದೆಲ್ಲದರ ನಂತರ ನಾನು ಗಾಮಾ ನೈಫ್ ಶಸ್ತ್ರಚಿಕಿತ್ಸೆಗೆ ಒಳಗಾದೆ. ಇದು 8 ಗಂಟೆಗಳ ಕಾಲ ನಡೆದಿತ್ತು. ಅದಾದ ಬಳಿಕ ನೋವು ಕಡಿಮೆ ಆಯ್ತು ಎಂದು ಹೇಳಿಕೊಂಡಿದ್ದಾರೆ.

    ಇದೆಲ್ಲದರ ಮಧ್ಯೆಯೂ ಸಲ್ಮಾನ್ ಖಾನ್ ಸಿನಿಮಾಗಳಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಲಿಲ್ಲ. ಸದ್ಯ `ಬ್ಯಾಟಲ್ ಆಫ್ ಗಾಲ್ವಾನ್’ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.ಇದನ್ನೂ ಓದಿ: ಕ್ರೂ ಪಾರ್ಟ್-2 ನಲ್ಲಿ ಕರೀನಾ ನಟಿಸೋದು ಪಕ್ಕಾ

     

  • ಸಲ್ಮಾನ್ ಖಾನ್‌ನ್ನು ಆಹ್ವಾನಿಸಿದ್ದಕ್ಕೆ ಕಪಿಲ್ ಶರ್ಮಾ ಕೆಫೆ ಮೇಲೆ ಶೂಟೌಟ್ – ಬಿಷ್ಣೋಯ್ ಗ್ಯಾಂಗ್‌ನದ್ದೇ ಎನ್ನಲಾದ ಆಡಿಯೋ ವೈರಲ್

    ಸಲ್ಮಾನ್ ಖಾನ್‌ನ್ನು ಆಹ್ವಾನಿಸಿದ್ದಕ್ಕೆ ಕಪಿಲ್ ಶರ್ಮಾ ಕೆಫೆ ಮೇಲೆ ಶೂಟೌಟ್ – ಬಿಷ್ಣೋಯ್ ಗ್ಯಾಂಗ್‌ನದ್ದೇ ಎನ್ನಲಾದ ಆಡಿಯೋ ವೈರಲ್

    ಒಟ್ಟಾವಾ: ಹಾಸ್ಯ ನಟ ಕಪಿಲ್ ಶರ್ಮಾ (Kapil Sharma) ಅವರ ಕೆನಡಾದ (Canada) ಕೆಫೆ ಮೇಲೆ ಗುಂಡಿನ ದಾಳಿ ನಡೆದ ಬೆನ್ನಲ್ಲೇ ಆಡಿಯೋವೊಂದು ವೈರಲ್ ಆಗಿದೆ. ಬಿಷ್ಣೋಯ್ ಗ್ಯಾಂಗ್‌ನ (Bishnoi Gang) ಹ್ಯಾರಿ ಬಾಕ್ಸರ್ ಎಂಬಾತನ ಆಡಿಯೋ ಇದಾಗಿದ್ದು, ನಟ ಸಲ್ಮಾನ್ ಖಾನ್‌ನ್ನು (Salman Khan) ಕೆಫೆ ಉದ್ಘಾಟನೆಗೆ ಆಹ್ವಾನಿಸಿದಕ್ಕಾಗಿ ಶೂಟೌಟ್ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

    ವೈರಲ್ ಆದ ಆಡಿಯೋದಲ್ಲಿ, ಕಪಿಲ್ ಶರ್ಮಾ ತಮ್ಮ ಕೆಫೆ ಉದ್ಘಾಟನೆಗೆ ಸಲ್ಮಾನ್ ಖಾನ್ ಅವರನ್ನು ಆಹ್ವಾನಿಸಿದ್ದಕ್ಕಾಗಿ ಗುಂಡಿನ ದಾಳಿ ನಡೆಸಲಾಗಿದೆ. ಅದಲ್ಲದೇ ಸಲ್ಮಾನ್ ಖಾನ್ ಜೊತೆಗೆ ಕೆಲಸ ಮಾಡುವ ಯಾವುದೇ ನಿರ್ದೇಶಕ, ನಿರ್ಮಾಪಕ ಅಥವಾ ಕಲಾವಿದರ ಎದೆಗೆ ಗುಂಡು ಹಾರಿಸುತ್ತೇವೆ. ನಾವು ಯಾರನ್ನೂ ಬಿಡುವುದಿಲ್ಲ. ಸಲ್ಮಾನ್ ಖಾನ್ ಜೊತೆ ಇರುವವರನ್ನು ಕೊಲ್ಲಲು ನಾವು ಯಾವ ಹಂತಕ್ಕೆ ಬೇಕಾದರೂ ಹೋಗುತ್ತೇವೆ. ನೆನಪಿರಲಿ, ನಿಮ್ಮ ಸಾವಿಗೆ ನೀವೇ ಕಾರಣರಾಗುತ್ತೀರಿ ಎಂದು ಎಚ್ಚರಿಕೆ ನೀಡಿದ್ದಾರೆ.ಇದನ್ನೂ ಓದಿ:ಚುನಾವಣಾ ಆಯೋಗ ಬಿಜೆಪಿಯ ಬ್ರ್ಯಾಂಚ್‌ ಆಫೀಸ್‌: ಸಿದ್ದರಾಮಯ್ಯ

    ಆ.7ರಂದು ಬೆಳಗಿನ ಜಾವ 4:30ರ ಸುಮಾರಿಗೆ ಅಪರಿಚಿತ ವ್ಯಕ್ತಿಗಳು ಬಂದು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ 9 ರಿಂದ 10 ಗುಂಡುಗಳು ಕೆಫೆಯ ಗೋಡೆಗೆ ಹಾಗೂ ಕಿಟಿಕಿಗಳಿಗೆ ತಾಗಿವೆ. ಗುಂಡಿನ ಸದ್ದು ಕೇಳಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಒಂದು ತಿಂಗಳ ಅವಧಿಯಲ್ಲಿ ಕಪಿಲ್ ಶರ್ಮಾ ಕೆಫೆಯ ನಡೆದ ಎರಡನೇ ದಾಳಿ ಇದಾಗಿದೆ. ಸದ್ಯ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯ ಗೋಲ್ಡಿ ಧಿಲ್ಲೋನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಗುಂಡಿನ ದಾಳಿಯ ಹೊಣೆ ಹೊತ್ತುಕೊಂಡಿದ್ದಾನೆ.

    ಜೂ.21ರಂದು ನೆಟ್‌ಫ್ಲಿಕ್ಸ್‌ನಲ್ಲಿ  ಪ್ರದರ್ಶನಗೊಂಡಿದ್ದ `ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ನ ಸೀಸನ್-3ರ ಮೊದಲ ಎಪಿಸೋಡ್‌ನಲ್ಲಿ ಸಲ್ಮಾನ್ ಕಾಣಿಸಿಕೊಂಡಿದ್ದರು. ಕೆಫೆ ಉದ್ಘಾಟನೆಗಾಗಿ ಸಲ್ಮಾನ್ ಖಾನ್ ಅವರನ್ನು ಕಪಿಲ್ ಆಹ್ವಾನಿಸಿದ್ದರು. ಇದರ ಬೆನ್ನಲ್ಲೇ ಜು.10ರಂದು ಕೆಫೆ ಮೇಲೆ ಗುಂಡಿನ ದಾಳಿ ನಡೆದಿತ್ತು. ಆ ಸಮಯದಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ಜೀತ್ ಸಿಂಗ್ ಲಡ್ಡಿ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದ.ಇದನ್ನೂ ಓದಿ: ಒಂದು ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿ 9 ಕೋಟಿ ಹಣ ಕಳೆದುಕೊಂಡ 80ರ ವೃದ್ಧ

  • ಭದ್ರತೆಗೆ ಹೊಸ ಬುಲೆಟ್‌ ಪ್ರೂಫ್‌ ಕಾರು ಖರೀದಿಸಿದ ಸಲ್ಮಾನ್ ಖಾನ್

    ಭದ್ರತೆಗೆ ಹೊಸ ಬುಲೆಟ್‌ ಪ್ರೂಫ್‌ ಕಾರು ಖರೀದಿಸಿದ ಸಲ್ಮಾನ್ ಖಾನ್

    ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಹೊಸ ಕಾರನ್ನ ಖರೀದಿಸಿದ್ದಾರೆ. ಅವರು ಬಳಿ ಸಾಕಷ್ಟು ಐಶಾರಾಮಿ ಕಾರ್‌ಗಳಿದ್ದರೂ ಹೊಸ ಕಾರು ಖರೀದಿಸಲು ಕಾರಣ ಭದ್ರತಾ ಕಾಳಜಿ. ಹೀಗಾಗಿ ಮರ್ಸಿಡೀಸ್ (Mercedes) ಮೇಬ್ಯಾಕ್ ಜಿಎಸ್‌ಎಲ್ 600 ಎಸ್‌ಯುವಿ ಕಾರನ್ನ ಬ್ಯಾಡ್‌ಬಾಯ್ ಇದೀಗ ಖರೀದಿಸಿದ್ದಾರೆ.

    ಇದು ಕಪ್ಪು ಬಣ್ಣದ ವಾಹನವಾಗಿದ್ದು ಸಂಪೂರ್ಣ ಬುಲೆಟ್‌ಪ್ರೂಫ್ (Bulletproof) ಆಗಿದೆ. ಇದರ ಬೆಲೆ 3.4 ಕೋಟಿ ರೂ. ನಿಂದ ಆರಂಭವಾಗುತ್ತದೆ. ಕಾರಿನ ಒಳಗಡೆ ತನಗೆ ಬೇಕಾದಂತೆ ವಿನ್ಯಾಸ ಮಾಡಿದ್ದರಿಂದ ಬೆಲೆ ಮತ್ತಷ್ಟು ಹೆಚ್ಚಾಗಲಿದೆ.

    ಕೃಷ್ಣಮೃಗ ಭೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರೆನ್ಸ್ ಬಿಷ್ಣೋಯ್ (Lawrence Bishnoi) ಗ್ಯಾಂಗ್‌ನಿಂದ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಇದೆ. ಹಲವು ಬಾರಿ ಅವರ ಮನೆ ಮೇಲೂ ಗುಂಡಿನ ದಾಳಿ ಆಗಿತ್ತು. ಕ್ರಮೇಣವಾಗಿ ಅವರಿಗೆ ಜೀವ ಬೆದರಿಕೆ ಕರೆಗಳು ಬರುತ್ತಲೇ ಇರುತ್ತದೆ. ಹೀಗಾಗಿ ಸಲ್ಮಾನ್ ಖಾನ್‌ಗೆ ಸರ್ಕಾರದಿಂದಲೇ ವೈ+ ಭದ್ರತೆಯನ್ನು ನೀಡಲಾಗಿದೆ. ಇದನ್ನೂ ಓದಿ: ವಿಜಯ್ ಜೊತೆ ಲವ್ ವದಂತಿಗೆ ತ್ರಿಷಾ ಕೆಂಡ – ಹೊಲಸು ಮನಸ್ಥಿತಿಯ ಜನ ಎಂದ ನಟಿ

    ಈ ನಡುವೆಯೂ ಇನ್ನೂ ಹೆಚ್ಚಿನ ಭದ್ರತೆಗಾಗಿ ಸಲ್ಮಾನ್ ಖಾನ್ ಹೊಸ ಕಾರ್‌ನ್ನು ಖರೀದಿಸಿದ್ದು ಇಂದು ಗುಂಡು ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ.

    ಸದ್ಯ ಜೈಲಲ್ಲಿರುವ ಲಾರೆನ್ಸ್ ಬಿಷ್ಣೋಯ್ ಜೈಲಲ್ಲಿದ್ದುಕೊಂಡೇ ತನ್ನ ಗ್ಯಾಂಗ್ ಮೂಲಕ ಸಲ್ಮಾನ್ ಖಾನ್ ಮೇಲೆ ಕಣ್ಣಿಟ್ಟಿದ್ದಾನೆ. ಸಲ್ಮಾನ್ ಖಾನ್‌ರನ್ನ ಹೊಡೆದುಹಾಕ್ತೀವಿ ಎಂದು ಬಿಷ್ಣೋಯ್ ಗ್ಯಾಂಗ್ ಹಲವು ಬಾರಿ ಬಹಿರಂಗವಾಗೇ ಹೇಳಿಕೊಂಡಿದೆ. ಹೀಗಾಗಿ ಮನೆಯಿಂದ ಸಲ್ಮಾನ್ ಖಾನ್ ಹೊರಟರೆ ಅವರಿಗೆ ವೈ+ ಭದ್ರತೆ ಕೊಡಲಾಗಿದ್ದು, ಮನೆ ಮುಂದೆಯೂ ಅತಿ ಹೆಚ್ಚಿನ ಭದ್ರತೆ ನೀಡಲಾಗಿದೆ.

    ಸಲ್ಮಾನ್ ಖಾನ್ ಸೆಲೆಬ್ರಿಟಿ ಆಗಿರುವುದರಿಂದ ಅವರ ಕಾರು ಗುರುತು, ನಂಬರ್ ಹಾಗೂ ಬಣ್ಣ ತಿಳಿದಿರುವುದು ಸಾಮಾನ್ಯ. ಹೀಗಾಗೇ ಗುರುತು ಪತ್ತೆಯಾಗದಿರಲು ಸಲ್ಮಾನ್ ಖಾನ್ ಹಲವು ಬಾರಿ ಕಾರು ಬದಲಿರುಸುತ್ತಿರುತ್ತಾರೆ. ಹೀಗಾಗಿ ಭದ್ರತಾ ಕಾಳಜಿಯಿಂದ ಹೊಸ ಕಾರನ್ನು ಸಲ್ಮಾನ್ ಖಾನ್ ಖರೀದಿಸಿದ್ದಾರೆ.

  • ಸ್ಟೆಪ್ ಹತ್ತಿ ಓಡೋಡಿ ಬಂದ – ಅಪರಿಚಿತನನ್ನು ನೋಡಿ ಸಲ್ಲು ಶಾಕ್‌!

    ಸ್ಟೆಪ್ ಹತ್ತಿ ಓಡೋಡಿ ಬಂದ – ಅಪರಿಚಿತನನ್ನು ನೋಡಿ ಸಲ್ಲು ಶಾಕ್‌!

    ಮಿರ್ ಖಾನ್ (Aamir Khan) ನಟಿಸಿ, ನಿರ್ಮಾಣ ಮಾಡಿರುವ ಸಿತಾರೆ ಜಮೀನ್ ಪರ್ (Sitaare Zameen Par) ಸಿನಿಮಾದ ಪ್ರೀಮಿಯರ್‌ ಶೋಗೆ ಬಂದಿದ್ದ ಸಲ್ಮಾನ್ ಖಾನ್ (Salman Khan) ಪ್ರೀಮಿಯರ್ ಮುಗಿಸಿ ಆಚೆ ಬಂದಾಗ ಶಾಕ್ ಆಗಿದ್ದಾರೆ.

    ಪ್ರೀಮಿಯರ್ ಶೋ ಮುಗಿಸಿ ಸಲ್ಮಾನ್‌ ಮೆಟ್ಟಿಲಿನಿಂದ ಇಳಿಯುತ್ತಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಓಡೋಡಿ ಬಂದಿದ್ದಾನೆ. ದಿಢೀರ್‌ ತನ್ನತ್ತ ಬಂದ ಅಪರಿಚಿತ ವ್ಯಕ್ತಿಯನ್ನು ಕಂಡು ಸಲ್ಮಾನ್‌ ಖಾನ್‌ ಆತಂಕಕ್ಕೆ ಒಳಗಾಗಿದ್ದಾರೆ. ಓಡೋಡಿ ಬಂದ ವ್ಯಕ್ತಿಯನ್ನ ಅಂಗರಕ್ಷಕರು ತಡೆದು ಕಳುಹಿಸಿದ್ದಾರೆ.

    ಆಪ್ತ ಗೆಳೆಯ ಆಮಿರ್ ಖಾನ್‌ರ ಸಿತಾರೆ ಜಮೀನ್ ಪರ್ ಸಿನಿಮಾ ನೋಡಿ ಸಲ್ಮಾನ್ ಖಾನ್ ಮೆಚ್ಚಿಕೊಂಡಿದ್ದಾರೆ. ಇದನ್ನೂ ಓದಿ: ಅಣ್ಣನ ಬೈಕ್ ಓಡಿಸಿ ಭಾವುಕರಾದ ಧ್ರುವ ಸರ್ಜಾ

    ಬಾಲಿವುಡ್ ನಟ ಸಲ್ಮಾನ್‌ಖಾನ್‌ಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಪ್ರಾಣ ಬೆದರಿಕೆ ಇದೆ. ಹೀಗಾಗಿ ಸಲ್ಮಾನ್ ಹೋದ ಕಡೆಗೆಲ್ಲ ಸರ್ಕಾರಿ ಭದ್ರತೆಯ ಜೊತೆಗೆ ಖಾಸಗಿ ಅಂಗರಕ್ಷಕರು ಇದ್ದೇ ಇರುತ್ತಾರೆ. ಅಂದಹಾಗೆ ನಟ ಸಲ್ಮಾನ್ ಖಾನ್‌ಗೆ ವೈ ಪ್ಲಸ್ ಸೆಕ್ಯೂರಿಟಿ ನೀಡಲಾಗಿದೆ. ಇದನ್ನೂ ಓದಿ: ʻಲಕ್ಷ್ಮೀ ನಿವಾಸʼದಿಂದ ಹೊರನಡೆದ ಶ್ವೇತಾ

    ಸಲ್ಮಾನ್ ಖಾನ್ ಸದ್ಯ ಸಿಕಂದರ್ ಸಿನಿಮಾದ ಸೋಲು ಮತ್ತೆ ಬಾಲಿವುಡ್‌ನಲ್ಲಿ ಚೇತರಿಸಿಕೊಳ್ಳಲು ಕೆಲ ದಿನಗಳು ಬೇಕಾಗುತ್ತೆ. ಬಹು ನಿರೀಕ್ಷೆಯನ್ನು ಇಟ್ಟುಕೊಂಡಿದ್ದ ಸಿಕಂದರ್ ಸೋಲು ಸಲ್ಮಾನ್‌ಗೆ ಬೇಜಾರು ಮೂಡಿದೆ ಎನ್ನಲಾಗ್ತಿದೆ.

  • ಸಲ್ಮಾನ್ ಖಾನ್ ಮನೆ ಬಳಿ ಭದ್ರತಾ ಲೋಪ – ಮನೆಗೆ ನುಗ್ಗಲು ಯತ್ನಿಸಿದ ಇಬ್ಬರ ಬಂಧನ

    ಸಲ್ಮಾನ್ ಖಾನ್ ಮನೆ ಬಳಿ ಭದ್ರತಾ ಲೋಪ – ಮನೆಗೆ ನುಗ್ಗಲು ಯತ್ನಿಸಿದ ಇಬ್ಬರ ಬಂಧನ

    ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಮನೆಗೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ಇಬ್ಬರನ್ನು ಮುಂಬೈ ಬಾಂದ್ರಾ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ:ಸೂರ್ಯ ನಟನೆಯ ಸಿನಿಮಾದಲ್ಲಿ ವಿಜಯ್ ದೇವರಕೊಂಡ?

    ಸಲ್ಮಾನ್ ಖಾನ್ ಅಭಿಮಾನಿ ಎಂದು ನಟನ ಗ್ಯಾಲಕ್ಸಿ ಅಪಾರ್ಟ್ಮೆಂಟ್‌ಗೆ ಜೀತೇಂದ್ರ ಕುಮಾರ್ ಸಿಂಗ್ ಮತ್ತು ಇಶಾ ಚಾಬ್ರಾ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ್ದಾರೆ. ಮೇ 19 ಇಶಾ ಚಾಬ್ರಾ ಮತ್ತು ಮೇ 20ರಂದು ಜೀತೇಂದ್ರ ಮನೆಗೆ ನುಗ್ಗಲು ಪ್ರಯತ್ನಿಸಿದ್ದಾರೆ. ಬೆಳಗ್ಗೆಯಿಂದ ನಟನ ಮನೆಯ ಕಡೆ ಓಡಾಡಿಕೊಂಡಿದ್ದ ಜೀತೇಂದ್ರ, ಸಂಜೆ 7:15ಕ್ಕೆ ಮನೆಗೆ ನುಗ್ಗಲು ಯತ್ನಿಸಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.

    ನಟನನ್ನು ಭೇಟಿಯಾಗಲು ಬಂದಿದ್ದೇನೆ ಎಂದಿದ್ದ ಜೀತೇಂದ್ರನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮನೆಗೆ ನುಗ್ಗಲು ಯತ್ನಿಸಿದ ಮತ್ತೋರ್ವ ಮಹಿಳಾ ಅಭಿಮಾನಿ ಇಶಾ ಚಾಬ್ರಾರನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು, ಸಿಸಿಟಿವಿಯಲ್ಲಿ ಆಕೆ ಮುಖ ಬಹಿರಂಗವಾಗಿದೆ. ಇದನ್ನೂ ಓದಿ:ರಾಧಿಕಾ ಪಂಡಿತ್‌ಗೆ ಸಿನಿಮಾ – ಯಶ್ ತಾಯಿ ಹೇಳೋದೇನು?

    ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಇರುವ ಹಿನ್ನೆಲೆ ಎರಡು ಕೇಸ್‌ಗಳ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  • ‘ಸಿಕಂದರ್’ ಸೋಲಿನ ಬಳಿಕ ಆರ್ಮಿ ಆಫೀಸರ್ ಪಾತ್ರದಲ್ಲಿ ಸಲ್ಮಾನ್ ಖಾನ್?

    ‘ಸಿಕಂದರ್’ ಸೋಲಿನ ಬಳಿಕ ಆರ್ಮಿ ಆಫೀಸರ್ ಪಾತ್ರದಲ್ಲಿ ಸಲ್ಮಾನ್ ಖಾನ್?

    ‘ಸಿಕಂದರ್’ (Sikandar) ಸೋಲಿನಿಂದ ಸಲ್ಮಾನ್ ಖಾನ್ (Salman Khan) ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ಸ್ಕ್ರಿಪ್ಟ್ ಆಯ್ಕೆಯಲ್ಲಿ ಮತ್ತಷ್ಟು ಚ್ಯೂಸಿಯಾಗಿದ್ದಾರೆ. ಹೀಗಿರುವಾಗ ಆರ್ಮಿ ಆಫೀಸರ್ ಪಾತ್ರದಲ್ಲಿ ನಟಿಸಲು ಸಲ್ಮಾನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ.‌ ಇದನ್ನೂ ಓದಿ:ರಶ್ಮಿಕಾರಲ್ಲಿ ದೇವರಕೊಂಡಗೆ ಪತ್ನಿಯಾಗುವ ಗುಣವಿದ್ಯಾ?- ನಟ ಹೇಳೋದೇನು?

    ಸಾಲು ಸಾಲು ಸಿನಿಮಾಗಳ ಸೋಲಿನಿಂದ ಹೈರಾಣು ಆಗಿರುವ ಸಲ್ಮಾನ್ ವಿಭಿನ್ನವಾಗಿರುವ ಕಥೆಯಲ್ಲಿ ಕಾಣಿಸಿಕೊಳ್ಳಬೇಕೆಂದಿದ್ದರು. ಅದರಂತೆ ಅವರಿಗೀಗ ಡೈರೆಕ್ಟರ್ ಅಪೂರ್ವ ಲಖಿಯಾ ನಟಿಸಲು ನಟ ಓಕೆ ಎಂದಿದ್ದಾರೆ ಎನ್ನಲಾಗಿದೆ. ಆರ್ಮಿ ಆಫೀಸರ್ ಮತ್ತು ಸೇನೆ ಸುತ್ತ ರಚಿಸಿರುವ ಕಥೆ ಸಲ್ಮಾನ್‌ಗೆ ಇಷ್ಟವಾಗಿದೆಯಂತೆ. ಹೀಗಾಗಿ ಈ ಸಿನಿಮಾದಲ್ಲಿ ನಟಿಸಿದರೆ ಸಕ್ಸಸ್ ಕಟ್ಟಿಟ್ಟ ಬುತ್ತಿ ಅನ್ನೋದು ಸಲ್ಮಾನ್ ಲೆಕ್ಕಾಚಾರ. ಇದನ್ನೂ ಓದಿ:ಸಿನಿಮಾ ಗೆದ್ದ ಬೆನ್ನಲ್ಲೇ ದೇವಿ ಮೊರೆ ಹೋದ ಶ್ರೀನಿಧಿ ಶೆಟ್ಟಿ

    ‘ಇಂಡಿಯಾಸ್ ಮೋಸ್ಟ್ ಫಿಯರ್‌ಲೆಸ್ 3’ ಕಾದಂಬರಿಯನ್ನು ಆಧರಿಸಿ ಸಿನಿಮಾ ಮಾಡಲು ನಿರ್ದೇಶಕ ತಯಾರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಚಿತ್ರತಂಡವೇ ಅಧಿಕೃತ ಮಾಹಿತಿ ತಿಳಿಸಬೇಕಿದೆ.

    ಈಗಾಗಲೇ ನಿರ್ದೇಶಕ ರಾಜ್ ಶಾಂಡಿಲ್ಯ, ರಾಜ್‌ಕುಮಾರ್ ಪೆರಿಸ್ವಾಮಿ ಸೇರಿದಂತೆ ಕೆಲವರೊಂದಿಗೆ ಹೊಸ ಸಿನಿಮಾ ಸ್ಕ್ರಿಪ್ಟ್‌ಗಳ  ಮಾತುಕತೆ ನಡೆದಿದೆ. ಇವರೊಂದಿಗೂ ಸಿನಿಮಾ ಮಾಡ್ತಾರಾ? ಸಲ್ಮಾನ್ ಕಥೆ ಇಷ್ಟವಾಗಿದ್ಯಾ ಎಂಬುದು ಖಾತ್ರಿಯಾಗಿಲ್ಲ. ನಟನ ಕಡೆಯಿಂದ ಗುಡ್ ನ್ಯೂಸ್‌ಗಾಗಿ ಕಾಯ್ತಿದ್ದಾರೆ.

  • ಭಾರತ-ಪಾಕ್ ಕದನ ವಿರಾಮಕ್ಕೆ ಸಲ್ಮಾನ್ ಖಾನ್ ಖುಷಿ; ಟೀಕೆ ಬೆನ್ನಲ್ಲೇ ಪೋಸ್ಟ್ ಡಿಲೀಟ್

    ಭಾರತ-ಪಾಕ್ ಕದನ ವಿರಾಮಕ್ಕೆ ಸಲ್ಮಾನ್ ಖಾನ್ ಖುಷಿ; ಟೀಕೆ ಬೆನ್ನಲ್ಲೇ ಪೋಸ್ಟ್ ಡಿಲೀಟ್

    ಭಾರತ-ಪಾಕ್ ನಡುವಿನ ‘ಕದನ ವಿರಾಮಕ್ಕೆ ಧನ್ಯವಾದಗಳು ದೇವರೇ’ ಎಂದು ಸಲ್ಮಾನ್ ಖಾನ್ (Salman Khan) ಪೋಸ್ಟ್ ಹಂಚಿಕೊಂಡು ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಇದನ್ನೂ ಓದಿ:ʻರಾಕಿ ಭಾಯ್‌ʼ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌; KGF-3 ಬಗ್ಗೆ ಬಿಗ್‌ ಹಿಂಟ್‌ ಕೊಟ್ಟ ಹೊಂಬಾಳೆ ಫಿಲ್ಮ್ಸ್

    ಮೇ 10 ಸಂಜೆ ಭಾರತ ಮತ್ತು ಪಾಕ್ ನಡುವೆ ಕದನ ವಿರಾಮ ಒಪ್ಪಂದ ಆಯಿತು. ಆಗ ಸಲ್ಮಾನ್ ಖಾನ್, ‘ಕದನ ವಿರಾಮ ಏರ್ಪಟ್ಟಿದ್ದಕ್ಕೆ ಧನ್ಯವಾದಗಳು’ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ಅವರ ಈ ನಡೆಗೆ ಅನೇಕರಿಂದ ವ್ಯಾಪಕ ಟೀಕೆ ವ್ಯಕ್ತವಾಯಿತು. ಕೂಡಲೇ ನಟ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ. ಹೀಗಾಗಿ ನಟನನ್ನು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಮಾಡ್ತಿದ್ದಾರೆ. ಇದನ್ನೂ ಓದಿ:ಭಾರತೀಯ ಸೇನೆಗೆ ದೇಣಿಗೆ ಘೋಷಿಸಿದ ವಿಜಯ್ ದೇವರಕೊಂಡ – ಫ್ಯಾನ್ಸ್ ಮೆಚ್ಚುಗೆ

    ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ (Operation Sindoor) ಮೂಲಕ ಉಗ್ರರಿಗೆ ತಕ್ಕ ಪಾಠ ಕಲಿಸಿದ್ದಕ್ಕೆ ಚಿತ್ರರಂಗದ ಕಲಾವಿದರು ಮೆಚ್ಚುಗೆ ಸೂಚಿಸಿದ್ದರು. ಆದರೆ, ಸಲ್ಮಾನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಕದನ ವಿರಾಮ ಘೋಷಣೆ ಆಗ್ತಿದ್ದಂತೆ ರಿಯಾಕ್ಟ್ ಮಾಡಿದ್ದಕ್ಕೆ ನಟನ ವಿರುದ್ಧ ನೆಟ್ಟಿಗರು ಕೆಂಡಕಾರಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಜಾಡಿಸಿದ್ದಾರೆ.

    ಏ.22ರಂದು ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ 26 ಮಂದಿ ಪ್ರವಾಸಿಗರು ಬಲಿಯಾಗಿದ್ದರು. ಈ ಹಿನ್ನೆಲೆ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಮೂಲಕ ಪಾಕ್‌ಗೆ ಭಾರತೀಯ ಸೇನೆ ತಕ್ಕ ಪಾಠ ಕಲಿಸಿದೆ.

  • ಪಹಲ್ಗಾಮ್ ಉಗ್ರರ ದಾಳಿ ಖಂಡಿಸಿದ ಬಾಲಿವುಡ್ ಸ್ಟಾರ್ಸ್‌

    ಪಹಲ್ಗಾಮ್ ಉಗ್ರರ ದಾಳಿ ಖಂಡಿಸಿದ ಬಾಲಿವುಡ್ ಸ್ಟಾರ್ಸ್‌

    ಹಲ್ಗಾಮ್‌ನಲ್ಲಿ (Pahalgam Terrorist Attack) ನಡೆದಿರುವ ವಿಶ್ವಾಸಘಾತುಕ ಕೃತ್ಯ ಮತ್ತು ಅಮಾನವೀಯ ಹಿಂಸಾಚಾರದ ಬಗ್ಗೆ ದುಃಖ ಮತ್ತು ಕೋಪವನ್ನು ವ್ಯಕ್ತಪಡಿಸಲು ಪದಗಳು ಸಾಲದು ಎಂದು ಶಾರುಖ್ ಖಾನ್ ಖಂಡಿಸಿದ್ದಾರೆ. ಉಗ್ರರ ಅಟ್ಟಹಾಸದ ಕುರಿತು ಶಾರುಖ್, ಸಲ್ಮಾನ್ ಖಾನ್ ಸೇರಿದಂತೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಹಲ್ಗಾಮ್‌ನಲ್ಲಿ ನಡೆದ ಹಿಂಸಾಚಾರದ ಬಗ್ಗೆ ದುಃಖ ಮತ್ತು ಕೋಪವನ್ನು ವ್ಯಕ್ತಪಡಿಸಲು ಪದಗಳಿಲ್ಲ. ದುಃಖದಲ್ಲಿರುವ ಕುಟುಂಬಗಳಿಗೆ ದೇವರಲ್ಲಿ ಪ್ರಾರ್ಥಿಸೋಣ. ಈ ಹೇಯ ಕೃತ್ಯದ ವಿರುದ್ಧ ನಾವು ಒಗ್ಗಟ್ಟಾಗಿ, ಬಲವಾಗಿ ನಿಂತು ಈ ಕೃತ್ಯ ಮಾಡಿದವರಿಗೆ ತಕ್ಕ ಶಾಸ್ತಿಯಾಗಲಿ ಎಂದು ಹಾರೈಸೋಣ ಎಂದು ಶಾರುಖ್ ಖಾನ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

    ಭೂಮಿಯ ಮೇಲಿನ ಸ್ವರ್ಗವಾದ ಕಾಶ್ಮೀರ ನರಕವಾಗಿ ಬದಲಾಗುತ್ತಿದೆ. ಅಮಾಯಕ ಜನರನ್ನು ಗುರಿಯಾಗಿಸಿಕೊಂಡಿದ್ದಾರೆ. ನನ್ನ ಹೃದಯ ಅವರ ಕುಟುಂಬಗಳಿಗಾಗಿ ಮಿಡಿಯುತ್ತದೆ. ಒಬ್ಬ ಅಮಾಯಕ ವ್ಯಕ್ತಿಯನ್ನು ಕೊಲ್ಲುವುದು ಇಡೀ ರಾಷ್ಟ್ರವನ್ನೇ ಕೊಂದಂತೆ ಎಂದು ಸಲ್ಮಾನ್‌ ಖಾನ್‌ (Salman Khan) ಬರೆದಿದ್ದಾರೆ.

    ಕಂಗನಾ ರಣಾವತ್ (Kangana Ranaut) ಹಂಚಿಕೊಂಡಿರುವ ಸ್ಟೋರಿಯಲ್ಲಿ, ಆ ದುರುಳರು ಅಮಾಯಕರ ಮೇಲೆ ದಾಳಿ ಮಾಡಿದ್ದಾರೆ. ಅಮಾಯಕರ ಮೇಲೆ ದಾಳಿ ಮಾಡಿ ನಪುಂಸಕತನ ಮೆರೆದಿದ್ದಾರೆ. ಇತಿಹಾಸದಲ್ಲಿ ಪ್ರತಿ ಯುದ್ಧವೂ ಸಹ ಯುದ್ಧಭೂಮಿಯಲ್ಲೇ ನಡೆದಿದೆ. ಆದರೆ ಈ ನಪುಂಸಕರು ಅಮಾಯಕರ ಮೇಲೆ ನಿರಸ್ತ್ರರಾಗಿರುವವರ ಮೇಲೆ ದಾಳಿ ಮಾಡಿದ್ದಾರೆ. ಯುದ್ಧಭೂಮಿಯ ಹೊರಗೆ ಕಾದಾಟ ಮಾಡುತ್ತಿರುವ ಈ ನಪುಂಸಕರ ಮೇಲೆ ಯುದ್ಧವಾದರೂ ಮಾಡುವುದು ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ. ಭಯೋತ್ಪಾದಕರಿಗೆ ಧರ್ಮ ಇದೆ, ಸಂತ್ರಸ್ತರಿಗೂ ಧರ್ಮ ಇದೆ ಎಂದಿದ್ದಾರೆ. ಭಯೋತ್ಪಾದಕರ ಧರ್ಮದ ಬಗ್ಗೆ ಬಹಿರಂಗವಾಗಿ ಹೇಳದೆ, ಮುಸ್ಲಿಂ ಭಯೋತ್ಪಾದಕರಿಂದ ಹಿಂದುಗಳು ದಶಕಗಳಿಂದಲೂ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದಿದ್ದಾರೆ.

     

    View this post on Instagram

     

    A post shared by Priyanka (@priyankachopra)

    ಪ್ರಿಯಾಂಕಾ ಚೋಪ್ರಾ (Priyanka Chopra) ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಪಹಲ್ಗಾಮ್ ದಾಳಿಯ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಇದೊಂದು ಅತ್ಯಂತ ಹೇಯ ಕೃತ್ಯ ಎಂದು ಬರೆದುಕೊಂಡಿದ್ದಾರೆ. ಭಯೋತ್ಪಾದನೆಯ ಈ ಅಮಾನವೀಯ ಕೃತ್ಯವನ್ನು ಅವರು ಖಂಡಿಸಿದ್ದಾರೆ. ಈ ದುಃಖದ ಸಮಯದಲ್ಲಿ ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಸಂತ್ರಸ್ತರ ಕುಟುಂಬದೊಂದಿಗೆ ಇವೆ. ಗಾಯಗೊಂಡಿರುವ ದಂಪತಿಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ.

     

    View this post on Instagram

     

    A post shared by Anupam Kher (@anupampkher)

    ಈ ಬಗ್ಗೆ ಅನುಪಮ್ ಖೇರ್‌ (Anupam Kher) ಮಾತನಾಡಿ, ಇಂದು ಪಹಲ್ಗಾಮ್‌ನಲ್ಲಿ ಹಿಂದೂಗಳ ನರಮೇಧ ಆಗಿದೆ. 27 ಹಿಂದೂಗಳನ್ನು ಹುಡುಕಿ ಹುಡುಕಿ ಕೊಲ್ಲಲಾಗಿದೆ. ದುಃಖದ ಜೊತೆ ಕ್ರೋಧ, ಸಿಟ್ಟು ಬರುತ್ತದೆ. ನಾನು ಇದನ್ನು ಜೀವನದಲ್ಲಿ ಬಹಳಷ್ಟು ನೋಡಿದ್ದೇನೆ. ಕಾಶ್ಮೀರದಲ್ಲಿ ಹಿಂದೂಗಳ ಜನರೊಂದಿಗೆ ಜೊತೆ ಹೀಗೆ ಆಗ್ತಾನೇ ಇದೆ. ‘ಕಾಶ್ಮೀರ್ ಫೈಲ್ಸ್’ ಅವರ ಕಥೆಯಾಗಿದ್ದು, ಇದನ್ನು ಸಿನಿಮಾ ಮಾಡಿದಾಗ ಪ್ರೊಪಗಾಂಡ ಎಂದು ಕರೆದ್ರಿ. ದೇಶದ ವಿವಿಧ ಭಾಗಗಳಿಂದ ಜನರು ತಮ್ಮ ರಜಾದಿನಗಳನ್ನು ಕಳೆಯಲು ಕುಟುಂಬದ ಜೊತೆ ಕಾಶ್ಮೀರಕ್ಕೆ ಬಂದರು. ಈ ವೇಳೆ, ಅವರ ಧರ್ಮವನ್ನು ತಿಳಿದು ಕೊಲ್ಲಲಾಗಿದೆ ಎಂದು ಕೃತ್ಯವನ್ನು ಖಂಡಿಸಿದ್ದಾರೆ.

    ಇದರ ಬಗ್ಗೆ ಮಾತನಾಡೋಕೆ ಶಬ್ದವೇ ಸಿಗೋದಿಲ್ಲ. ಪತಿಯ ಮೃತ ದೇಹದ ಜೊತೆಗಿದ್ದ ಮಹಿಳೆಯನ್ನು ನಾನು ಮರೆಯಲು ಸಾಧ್ಯವಿಲ್ಲ. ನಾನು ಪಲ್ಲವಿ ಜಿ ಅವರ ಸಂದರ್ಶನ ನೋಡಿದೆ. ಪತಿಯನ್ನ ಕಣ್ಣೆದುರೇ ಸಾಯಿಸಿದಾಗ ನನ್ನನ್ನು ನನ್ನ ಮಗನನ್ನು ಸಾಯಿಸಿ ಅಂದಾಗ, ನಿಮ್ಮನ್ನು ಸಾಯಿಸಲ್ಲ ಮೋದಿಗೆ ಹೋಗಿ ಹೇಳಿ ಅಂದ್ರಲ್ಲ. ಬಹುಶಃ ಅವನು ಒಂದು ಸಂದೇಶವನ್ನು ನೀಡಲು ಬಯಸಿದ್ದಿರಬಹುದು ಎಂದಿದ್ದಾರೆ. ಮೋದಿಯವರು ಹಾಗೂ ಅಮಿತ್ ಶಾ ಅವರ ಬಳಿ ನಾನು ಕೇಳಿಕೊಳ್ಳುವುದೇನಂದರೆ ಉಗ್ರರಿಗೆ ನಾವು ಎಂಥಹ ಪಾಠ ಕಲಿಸಬೇಕು ಅಂದರೆ ಇನ್ನೂ ಏಳು ಜನ್ಮ ಎತ್ತಿ ಬಂದ್ರೂ ಇಂಥಹ ದುಷ್ಟ ಕೆಲಸ ಮಾಡುವ ಯೋಚನೆನೇ ಅವರಿಗೆ ಬರಬಾರದು ಎಂದಿದ್ದಾರೆ.

  • ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಹಾಕಿದ ವ್ಯಕ್ತಿ ಮಾನಸಿಕ ಅಸ್ವಸ್ಥ: ಮುಂಬೈ ಪೊಲೀಸ್

    ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಹಾಕಿದ ವ್ಯಕ್ತಿ ಮಾನಸಿಕ ಅಸ್ವಸ್ಥ: ಮುಂಬೈ ಪೊಲೀಸ್

    ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ (Salman Khan) ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಗುಜರಾತ್‌ನ (Gujarat) ವಡೋದರಾ ಜಿಲ್ಲೆಯಲ್ಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ. 26 ವರ್ಷದ ಯುವಕನಾಗಿರುವ ಆರೋಪಿ ಮಾನಸಿಕವಾಗಿ ಅಸ್ವಸ್ಥನಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

    ಮುಂಬೈ ಸಂಚಾರ ಪೊಲೀಸರ ವಾಟ್ಸಪ್ ಸಹಾಯವಾಣಿಗೆ ಸಲ್ಮಾನ್ ಖಾನ್ ಅವರಿಗೆ ಬೆದರಿಕೆ ಹಾಕಲಾದ ಸಂದೇಶ ಬಂದಿತ್ತು. ಸಲ್ಮಾನ್ ಅವರ ಕಾರನ್ನು ಬಾಂಬ್ ಇಟ್ಟು ಸ್ಫೋಟಿಸಲಾಗುವುದು ಮತ್ತು ಅವರ ಮನೆಗೆ ಪ್ರವೇಶಿಸಿದ ನಂತರ ಅವರ ಮೇಲೆ ದಾಳಿ ಮಾಡಲಾಗುವುದು ಎಂದು ಸಂದೇಶದಲ್ಲಿ ಹೇಳಲಾಗಿತ್ತು. ಇದನ್ನೂ ಓದಿ: ಮನೆಗೆ ನುಗ್ಗಿ, ಕಾರು ಸ್ಫೋಟಿಸಿ ಕೊಲೆ ಮಾಡುವುದಾಗಿ ನಟ ಸಲ್ಮಾನ್‌ ಖಾನ್‌ಗೆ ಬೆದರಿಕೆ

    ಸಲ್ಮಾನ್ ಖಾನ್‌ಗೆ ಈಗಾಗಲೇ ವೈ-ಪ್ಲಸ್ ಭದ್ರತೆ ನೀಡಲಾಗಿದೆ. ಆದರೆ ಈ ಬೆದರಿಕೆಯ ನಂತರ, ಮುಂಬೈನ ವರ್ಲಿ ಪೊಲೀಸರು ತಕ್ಷಣ ಕ್ರಮ ಕೈಗೊಂಡರು. ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 351(2)(3)ರ ಅಡಿಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಬೆದರಿಕೆ ಪ್ರಕರಣವನ್ನು ದಾಖಲಿಸಿದ್ದಾರೆ. ಅಲ್ಲದೆ, ಬಾಂದ್ರಾದಲ್ಲಿರುವ ಸಲ್ಮಾನ್ ಮನೆಯ ಹೊರಗೆ ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದಾರೆ. ಇದನ್ನೂ ಓದಿ: ಗಲಭೆಕೋರರಿಗೆ ದಂಡವೇ ಒಳ್ಳೆ ಚಿಕಿತ್ಸೆ: ಬಂಗಾಳ ಹಿಂಸಾಚಾರಕ್ಕೆ ಯೋಗಿ ಆದಿತ್ಯನಾಥ್‌ ಕಿಡಿ

    ಪ್ರಕರಣದ ತನಿಖೆ ಆರಂಭಿಸಿದಾಗ ವಡೋದರಾದ (Vadodara) ವಾಘೋಡಿಯಾ ತಾಲೂಕಿನಲ್ಲಿ ವಾಸಿಸುತ್ತಿರುವ ವ್ಯಕ್ತಿಯೊಬ್ಬರು ಈ ಬೆದರಿಕೆ ಕರೆಯನ್ನು ಕಳುಹಿಸಿದ್ದಾರೆ ಎಂದು ತಿಳಿದು ಬಂದಿತ್ತು. ಮುಂಬೈ ಪೊಲೀಸರ ತಂಡವು ವಾಘೋಡಿಯಾ ಪೊಲೀಸರೊಂದಿಗೆ ಆ ವ್ಯಕ್ತಿಯ ಮನೆಗೆ ತಲುಪಿದೆ ಎಂದು ವಡೋದರಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಆನಂದ್ ಹೇಳಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಿಂದ ಬಂದು ಜಡ್ಜ್ ಮನೆಯಲ್ಲಿ ಕಳ್ಳತನ – 8 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದಿದ್ದ ಆರೋಪಿಗಳು ಅರೆಸ್ಟ್

    ಪ್ರಾಥಮಿಕ ತನಿಖೆಯಲ್ಲಿ ಈ 26 ವರ್ಷದ ಯುವಕ ಮಾನಸಿಕವಾಗಿ ಅಸ್ಥಿರನಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದುಬಂದಿದೆ. ಪೊಲೀಸರು, ಆತನನ್ನು ವಿಚಾರಣೆಗಾಗಿ ಮುಂಬೈಗೆ ಬರಲು ನೋಟಿಸ್ ನೀಡಿ, ವಾಪಸ್ ಮರಳಿದ್ದಾರೆ ಎಂದು ರೋಹನ್ ಆನಂದ್ ವಿವರಿಸಿದರು. ಇದನ್ನೂ ಓದಿ: ಶ್ರೀಲೀಲಾ ಜೊತೆ ಹೋಲಿಕೆ ಮಾಡಿದ್ದಕ್ಕೆ ನಿಧಿ ಅಗರ್ವಾಲ್ ತಿರುಗೇಟು

    ಸಲ್ಮಾನ್ ಖಾನ್ ಅವರಿಗೆ ಈ ಹಿಂದೆಯೂ ಹಲವು ಬಾರಿ ಜೀವ ಬೆದರಿಕೆ ಕರೆಗಳು ಬಂದಿದ್ದವು. ಕಳೆದ ವರ್ಷ ಏಪ್ರಿಲ್‌ನಲ್ಲಿ ಬಾಂದ್ರಾದಲ್ಲಿರುವ ಸಲ್ಮಾನ್ ಅವರ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಹೊರಗೆ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು 4 ಗುಂಡುಗಳನ್ನು ಹಾರಿಸಿದ್ದರು. ಇದನ್ನೂ ಓದಿ: ‘ಕುಬೇರ’ ಚಿತ್ರದ ಪೋಸ್ಟರ್ ಔಟ್- ಧನುಷ್ ಸಿನಿಮಾ ಬಗ್ಗೆ ಸಿಕ್ತು ಅಪ್‌ಡೇಟ್

    ಇದಲ್ಲದೆ, ಲಾರೆನ್ಸ್ ಬಿಷ್ಣೋಯ್ (Lawrence Bishnoi) ಗ್ಯಾಂಗ್ ಕೂಡ ಸಲ್ಮಾನ್‌ಗೆ ಬೆದರಿಕೆ ಹಾಕಿತ್ತು. 1998ರಲ್ಲಿ ಕೃಷ್ಣಮೃಗವನ್ನು ಬೇಟೆಯಾಡಿದ ಆರೋಪ ಹೊತ್ತಿದ್ದ ಸಲ್ಮಾನ್, ಬಿಷ್ಣೋಯ್ ಸಮುದಾಯದ ಕ್ಷಮೆಯಾಚಿಸಬೇಕೆಂದು ಗ್ಯಾಂಗ್ ಕೇಳಿಕೊಂಡಿತ್ತು. ಈ ಬೆದರಿಕೆಗಳ ನಂತರ, ಮುಂಬೈ ಪೊಲೀಸರು ಸಲ್ಮಾನ್‌ಗೆ ವೈ-ಪ್ಲಸ್ ಭದ್ರತೆಯನ್ನು ನೀಡಿದ್ದರು.