Tag: ಸಲಿಂಗ ಕಾಮ

  • ಸಲಿಂಗ ಕಾಮ ಮುಚ್ಚಿಡಲು ವಿವಾಹವಾದ- ಯಾರಿಗೂ ಹೇಳದಂತೆ ಪತ್ನಿಗೆ ಕೊಲೆ ಬೆದರಿಕೆ

    ಸಲಿಂಗ ಕಾಮ ಮುಚ್ಚಿಡಲು ವಿವಾಹವಾದ- ಯಾರಿಗೂ ಹೇಳದಂತೆ ಪತ್ನಿಗೆ ಕೊಲೆ ಬೆದರಿಕೆ

    – ನಿತ್ಯ ಮನೆಗೆ ಪುರುಷರನ್ನು ಕರೆಸಿಕೊಳ್ಳುತ್ತಿದ್ದ
    – ಪತಿಯನ್ನು ಆಕರ್ಶಿಸಲು ಎಷ್ಟೇ ಪ್ರಯತ್ನಿಸಿದರೂ ಆಗಿಲ್ಲ ಎಂದ ಮಹಿಳೆ

    ಗಾಂಧಿನಗರ: ಕುತೂಹಲಕಾರಿ ಘಟನೆಯೊಂದರಲ್ಲಿ ವ್ಯಕ್ತಿ ತಾನು ಸಲಿಂಗ ಕಾಮಿ ಎಂಬುದನ್ನು ಮರೆಮಾಚಲು ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದು, ನಂತರ ಈ ವಿಷಯವನ್ನು ಯಾರಿಗಾದರು ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಮಹಿಳೆ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

    ಗುಜರಾತ್‍ನ ಗಾಂಧಿನಗರ ನಿವಾಸಿಯಾಗಿರುವ 32 ವರ್ಷದ ಮಹಿಳೆ ತನ್ನ ಪತಿ ಲೈಂಗಿಕತೆ ವಿಚಾರವನ್ನು ಮುಚ್ಚಿಟ್ಟಿದ್ದಾನೆ ಎಂದು ಪೊಲೀಸರಿಗೆ ದೂರು ಸಲ್ಲಿಸಿದ್ದಾಳೆ. ಸಲಿಂಗ ಕಾಮದ ವಿಚಾರವನ್ನು ಬಾಯ್ಬಿಟ್ಟರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು, ಕಿರುಕುಳ ನೀಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

    ಗಾಂಧಿನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಹಿಳೆ ಅಹ್ಮದಾಬಾದ್‍ನ ಸಂಸ್ಥೆಯೊಂದರಲ್ಲಿ ಗ್ರಂಥಪಾಲಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಗಾಂಧಿನಗರದ ನಿವಾಸಿಯಾಗಿದ್ದಾರೆ. ವ್ಯಕ್ತಿಯನ್ನು ಪ್ರೀತಿಸಿ 2011ರಲ್ಲಿ ವಿವಾಹವಾಗಿದ್ದಾರೆ. ಆರೋಪಿ ಸಹ ಅಹ್ಮದಾಬಾದ್‍ನಲ್ಲಿ ಗ್ರಂಥಪಾಲಕನಾಗಿ ಕೆಲಸ ಮಾಡುತ್ತಿದ್ದು, ಗಾಂಧಿನಗರದ ಸೆಕ್ಟರ್ 3ರಲ್ಲಿ ವಾಸಿಸುತ್ತಿದ್ದಾನೆ.

    ಒಂದು ವರ್ಷದ ವರೆಗೆ ಪತಿ ವರ್ತನೆ ಸರಿಯಾಗಿಯೇ ಇತ್ತು. ನಂತರ ಅವರ ಲೈಂಗಿಕ ವಿಚಾರದ ಕುರಿತು ನನಗೆ ಅನುಮಾನ ಬಂತು. ಈ ವೇಳೆ ಅವನ ಮೊಬೈಲ್ ಚಾಟ್ ಪರಿಶೀಲಿಸಿದಾಗ ಹಲವು ಪುರುಷರೊಂದಿಗೆ ಲೈಂಗಿಕ ಸಂಪರ್ಕ ಹೊಂದಿರುವ ಕುರಿತು ತಿಳಿಯಿತು ಎಂದು ಪೊಲೀಸರು ದಾಖಲಿಸಿದ ಎಫ್‍ಐಆರ್‍ನಲ್ಲಿ ಉಲ್ಲೇಖವಾಗಿದೆ.

    ಲೈಂಗಿಕತೆ ಕುರಿತು ಮಹಿಳೆ ಪ್ರಶ್ನಿಸಿದಾಗ, ಪುರುಷರ ಬಗ್ಗೆ ಮಾತ್ರ ಆಸಕ್ತಿ ಹೊಂದಿದ್ದೇನೆ. ವಿವಾಹವಾಗದಿದ್ದರೆ ಸಮಾಜ ಒಪ್ಪಿಕೊಳ್ಳುವುದಿಲ್ಲ ಎಂಬ ಉದ್ದೇಶದಿಂದ ಮಾತ್ರ ನಿನ್ನ ವಿವಾಹವಾಗಿದ್ದೇನೆ. ಅಲ್ಲದೆ ಕೆಲಸ ಮಾಡಿ ಸಂಪಾದಿಸುವ ಮಹಿಳೆಯೇ ನನಗೆ ಬೇಕಿತ್ತು ಎಂದು ವ್ಯಕ್ತಿ ಹೇಳಿದ್ದ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.

    ಪತಿಯನ್ನು ಆಕರ್ಶಿಸಲು ನಾನು ಎಲ್ಲವನ್ನೂ ಮಾಡಿದ್ದೇನೆ. ಎಲ್ಲ ಪ್ರಯತ್ನಗಳೂ ವ್ಯರ್ಥವಾಗಿವೆ. ಸಂಸ್ಥೆಯಲ್ಲಿನ ಇತರ ಪುರುಷರೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದಕ್ಕಾಗಿ ಪತಿಯನ್ನು ಕೆಲಸದಿಂದ ವಜಾಗೊಳಿಸಿದೆ. ಕೆಲಸ ಕಳೆದುಕೊಂಡ ಬಳಿಕ ವ್ಯಕ್ತಿ ಲೈಂಗಿಕ ಆಸೆ ತೀರಿಸಿಕೊಳ್ಳಲು ತನ್ನ ಸ್ನೇಹಿತರು ಹಾಗೂ ಇತರ ಪುರುಷರನ್ನು ಮನೆಗೇ ಕರೆಸಿಕೊಳ್ಳಲು ಆರಂಭಿಸಿದ. ಲೈಂಗಿಕ ಆದ್ಯತೆಯನ್ನು ಬದಲಾಯಿಸುವಂತೆ ಮಗನಿಗೆ ತಿಳಿಸಿ ಎಂದು ಮಾವನನ್ನು ಕೇಳಿದೆ, ಅವರೂ ಬೆಂಬಲ ನೀಡಲಿಲ್ಲ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ.

  • ಸಲಿಂಗಕಾಮದಾಸೆಗೆ ಮರ್ಮಾಂಗಕ್ಕೆ ವಿದ್ಯಾರ್ಥಿಯಿಂದಲೇ ಕತ್ತರಿ – ಪೊಲೀಸರ ತಂತ್ರದಿಂದ ಅಸಲಿ ಕೃತ್ಯ ಬೆಳಕಿಗೆ

    ಸಲಿಂಗಕಾಮದಾಸೆಗೆ ಮರ್ಮಾಂಗಕ್ಕೆ ವಿದ್ಯಾರ್ಥಿಯಿಂದಲೇ ಕತ್ತರಿ – ಪೊಲೀಸರ ತಂತ್ರದಿಂದ ಅಸಲಿ ಕೃತ್ಯ ಬೆಳಕಿಗೆ

    – ಮದ್ವೆ ಆಗದೇ ಇರಲು ಕೃತ್ಯ ಎಸಗಿ ಸಿಕ್ಕಿಬಿದ್ರು
    – ತನ್ನ ಭವಿಷ್ಯವನ್ನೇ ಹಾಳು ಮಾಡಿಕೊಂಡ ವಿದ್ಯಾರ್ಥಿ

    ಮಂಡ್ಯ: ಆ ವಿದ್ಯಾರ್ಥಿ ತನ್ನ ಪಾಡಿಗೆ ಕಾಲೇಜಿಗೆ ಹೋಗಿ ಮನೆ ಬರುತ್ತಿದ್ದ. ಅಪ್ಪ-ಅಮ್ಮನ ಪಾಲಿಗೆ ಒಳ್ಳೆಯ ಮಗ ಹಾಗೂ ಕಾಲೇಜಿಗೆ ಒಳ್ಳೆಯ ವಿದ್ಯಾರ್ಥಿಯೂ ಸಹ ಆಗಿದ್ದ. ಆದರೆ ಒಬ್ಬ ವಿಕೃತ ಮನಸ್ಸಿನ ಯುವಕನ ಜೊತೆ ಸೇರಿ ತನ್ನ ಭವಿಷ್ಯವನ್ನು ಹಾಳು ಮಾಡಿಕೊಳ್ಳುವುದರ ಜೊತೆಗೆ ಹೆತ್ತ ತಂದೆ ತಾಯಿಗಳಿಗೂ ಸಹ ನೋವನ್ನು ನೀಡುತ್ತಿದ್ದಾನೆ.

    ಸಾಮಾನ್ಯವಾಗಿ ಕಾಲೇಜಿನ ದಿನಗಳಲ್ಲಿ ಹುಡುಗ-ಹುಡುಗಿಗೆ ಲವ್ ಆಗೋದು ಕಾಮನ್. ಅಷ್ಟೇ ಏಕೆ ನಂಗೆ ಆ ಹುಡುಗಿ ಬೇಕೇ ಬೇಕು ಎಂದು ಹುಡುಗಿಯನ್ನು ಹುಡುಗರು ಅಪಹರಣ ಮಾಡುವಂತಹ ಕಾಲವು ಸಹ ಬಂದಿದೆ. ಆದರೆ ಇಲ್ಲಿ ಹುಡುಗರಿಬ್ಬರ ವಿಕೃತ ಸ್ಥಿತಿಯಿಂದಾಗಿ ವಿದ್ಯಾರ್ಥಿಯ ಭವಿಷ್ಯ ಹಾಳಾಗುವುದರ ಜೊತೆಗೆ ಪೋಷಕರು ಸಹ ಕಣ್ಣೀರಿಡುವ ಸ್ಥಿತಿ ನಿರ್ಮಾಣವಾಗಿದೆ.

    ಕಳೆದ ಫೆಬ್ರವರಿ 14ರಂದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸೀತಾಪುರ ಬಳಿ ಯಾರೋ ದುಷ್ಕರ್ಮಿಗಳು ಕಾಲೇಜು ವಿದ್ಯಾರ್ಥಿಯ ಮರ್ಮಾಂಗ ಕತ್ತರಿಸಿ ವಿದ್ಯಾರ್ಥಿಯನ್ನು ರಸ್ತೆಯಲ್ಲಿ ಬಿಸಾಡಿ ಹೋಗಿದ್ದರು. ವಿದ್ಯಾರ್ಥಿ ನೋವು ತಡೆಯಲಾರದೇ ತನ್ನ ತಂದೆಗೆ ಕಾಲ್ ಮಾಡಿದ್ದಾನೆ. ನಂತರ ವಿದ್ಯಾರ್ಥಿಯನ್ನು ಶ್ರೀರಂಗಪಟ್ಟಣ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಈ ಪ್ರಕರಣವನ್ನು ಶ್ರೀರಂಗಪಟ್ಟಣ ಪೊಲೀಸರು ದಾಖಲಿಸಿಕೊಂಡರು. ಈ ವೇಳೆ ಇಡೀ ಪ್ರಕರಣದ ಸುತ್ತ ನಾನಾ ಅನುಮಾನಗಳು ಸಹ ಮೂಡಿದ್ದವು. ವಿದ್ಯಾರ್ಥಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು.

    ವಿದ್ಯಾರ್ಥಿ ಹೇಳಿದ್ದೇನು?
    ಈ ವೇಳೆ ಪೊಲೀಸರು ವಿದ್ಯಾರ್ಥಿಯ ಹೇಳಿಕೆ ಪಡೆಯುವಾಗ, ವಿದ್ಯಾರ್ಥಿ ಯಾರೋ ಕಾರಿನಲ್ಲಿ ಬಂದು ಲಿಫ್ಟ್ ಕೊಡ್ತೀನಿ ಬಾ ಅಂತಾ ಎಂದರು. ಕಾರು ಹತ್ತಿದಾಗ ಅವರು ಹಣ ಕೇಳಿದರು, ನಾನು ಇಲ್ಲ ಅಂದಿದ್ದಕ್ಕೆ ಹೀಗೆ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದ. ಈ ಹೇಳಿಕೆಯನ್ನು ಆಧಾರವನ್ನಾಗಿ ಇಟ್ಟುಕೊಂಡು ಆರೋಪಿಗಳ ಹುಡುಕಾಟಕ್ಕೆ ಪೊಲೀಸರು ಬಲೆ ಬೀಸಿದ್ದರು. ಪೊಲೀಸರು ಈ ಪ್ರಕರಣದ ಕುರಿತು ತನಿಖೆ ನಡೆಸುವಾಗ ಯಾವುದೇ ಸುಳಿವು ಸಹ ಸಿಕ್ಕಿರಲಿಲ್ಲ.

    ರಹಸ್ಯ ಬಯಲು ಮಾಡಿತ್ತು ಸಿಸಿ ಕ್ಯಾಮೆರಾ
    ಈ ನಡುವೇ ವಿದ್ಯಾರ್ಥಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಪ್ರಕರಣದಲ್ಲಿ ಯಾವುದೇ ತಿರುವು ಸಿಗದೇ ತಲೆ ಮೇಲೆ ಕೈ ಹೊತ್ತು ಕೂತಿದ್ದ ಪೊಲೀಸರು ಒಂದು ಪ್ಲಾನ್ ಮಾಡಿದ್ದರು. ವಿದ್ಯಾರ್ಥಿ ಇದ್ದ ವಾರ್ಡ್‍ಗೆ ರಹಸ್ಯವಾಗಿ ಪೊಲೀಸರು ಸಿಟಿ ಟಿವಿಯನ್ನು ಅಳವಡಿಸಿದ್ದರು. ಅಲ್ಲದೇ ಓರ್ವ ಪೇದೆಯನ್ನು ನರ್ಸ್ ವೇಶದಲ್ಲಿ ಅಲ್ಲಿಯೇ ಇರಿಸಿದ್ದರು. ಈ ಬಳಿಕ ವಿದ್ಯಾರ್ಥಿಯನ್ನು ನೋಡಲು ಓರ್ವ ಯುವಕ ಪದೇ ಪದೇ ಆಸ್ಪತ್ರೆಗೆ ಬರುತ್ತಿದ್ದ. ಅಲ್ಲದೇ ಆ ವಿದ್ಯಾರ್ಥಿಯನ್ನು ತಬ್ಬಿಕೊಂಡು ಮುತ್ತನ್ನು ಸಹ ಕೊಡುತ್ತಿದ್ದ. ಈ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆ ಆಗಿರುವುದರ ಜೊತೆಗೆ ಮಾರುವೇಶದಲ್ಲಿ ಇದ್ದ ಪೊಲೀಸ್ ಪೇದೆಯೂ ಸಹ ನೋಡಿದ್ದರು. ಇದನ್ನು ಗಮನಿಸಿದ ಪೊಲೀಸರಿಗೆ ಅನುಮಾನ ಹುಟ್ಟಿತ್ತು.

    ವಿಚಾರಣೆ ವೇಳೆ ಪ್ರಕರಣಕ್ಕೆ ಟ್ವಿಸ್ಟ್
    ಆಸ್ಪತ್ರೆಗೆ ಬಂದು ವಿದ್ಯಾರ್ಥಿಗೆ ಕಿಸ್ ಮಾಡುತ್ತಿದ್ದ ಯುವಕನನ್ನು ಪೊಲೀಸರು ವಿಚಾರಣೆ ಮಾಡಿದ್ದರು. ಈ ವೇಳೆ ಪಾಂಡವಪುರ ತಾಲೂಕಿನ ಸೀತಾಪುರ ಗ್ರಾಮದ ಕುಮಾರ ಅಲಿಯಾಸ್ ಸುನಿ ಎಂದು ತಿಳಿಯುತ್ತದೆ. ನಂತರ ಪ್ರಕರಣ ಸಂಬಂಧ ವಿಚಾರಣೆ ಮಾಡಿದಾಗ ಅಸಲಿ ಸತ್ಯ ಹೊರಗೆ ಬಂದಿದೆ. ವಿದ್ಯಾರ್ಥಿಯ ಮರ್ಮಾಂಗ ಕಟ್ ಮಾಡಲು ಮೂಲ ಕಾರಣ ಸಲಿಂಗಕಾಮ ಎಂದು ಈ ವೇಳೆ ಬೆಳಕಿಗೆ ಬಂದಿದೆ. ಅಲ್ಲದೇ ವಿದ್ಯಾರ್ಥಿಯ ಮರ್ಮಾಂಗವನ್ನು ಯಾರು ಕಟ್ ಮಾಡಿಲ್ಲ. ವಿದ್ಯಾರ್ಥಿಯೇ ಕತ್ತರಿಸಿಕೊಂಡಿದ್ದಾನೆ ಎನ್ನುವ ಅಂಶವೂ ಸಹ ಪೊಲೀಸರಿಗೆ ತಿಳಿದೆ.

    ಸಲಿಂಗಕಾಮದ ಪ್ರೇರಣೆ
    ಸುನಿ ಹಾಗೂ ಈ ವಿದ್ಯಾರ್ಥಿ ಕಳೆದ ಐದು ವರ್ಷಗಳಿಂದ ಪರಿಚಯವಾಗಿರುತ್ತಾರೆ. ಸುನಿ ಜಮೀನಿನಲ್ಲೇ ಒಂದು ದೇವಸ್ಥಾನ ಇದ್ದ ಕಾರಣ ವಿದ್ಯಾರ್ಥಿಯನ್ನು ಪ್ರತಿ ಶುಕ್ರವಾರ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ನನ್ನ ಮೇಲೆ ದೇವರು ಬರುತ್ತದೆ ಎಂದು ಹೇಳಿದ್ದ. ಅಲ್ಲದೇ ಸುನಿ ಹಾಗೂ ವಿದ್ಯಾರ್ಥಿ ಊರಿನಲ್ಲಿ ಒಟ್ಟಿಗೆ ಓಡಾಡುತ್ತಿದ್ದರು. ನಂತರ ಸುನಿ ತನ್ನಲ್ಲಿ ಇದ್ದ ಸಲಿಂಗಕಾಮದ ಬಗ್ಗೆ ವಿದ್ಯಾರ್ಥಿಯೊಂದಿಗೆ ಹಂಚಿಕೊಂಡಿದ್ದಾನೆ. ಈ ಬಳಿಕ ಇಬ್ಬರು ಒಟ್ಟಾಗಿಯೇ ಇರುತ್ತಾರೆ.

    ಕತ್ತರಿಸಿದ್ದು ಯಾಕೆ?
    ಸುನಿ ನಾನು ಮದುವೆಯಾಗಲ್ಲ ನಾವಿಬ್ಬರೂ ಒಟ್ಟಿಗೆ ಇರೋಣಾ ಎಂದು ವಿದ್ಯಾರ್ಥಿ ಹೇಳಿದ್ದಾನೆ. ಅಲ್ಲದೇ ನಿನ್ನ ಮರ್ಮಾಂಗವನ್ನು ಕತ್ತರಿಸಿಕೋ ಆಗ ನಿನಗೆ ಮದುವೆ ಮಾಡಲ್ಲ ಆಗ ನಾವಿಬ್ಬರೂ ಒಟ್ಟಿಗೆ ಆರಾಮವಾಗಿ ಇರಬಹುದು ಎಂದು ಪ್ರೇರಣೆ ನೀಡಿದ್ದಾನೆ. ನಂತರ ಫೆಬ್ರವರಿ 14 ರಂದು ವಿದ್ಯಾರ್ಥಿ ಸೀತಾಪುರ ಗೇಟ್‍ನ ನಿರ್ಜನ ಪ್ರದೇಶದಲ್ಲಿ ತನ್ನ ಮರ್ಮಾಂಗವನ್ನು ವಿದ್ಯಾರ್ಥಿ ಕತ್ತರಿಸಿಕೊಂಡಿದ್ದಾನೆ. ನೋವು ತಾಳಲಾರದೆ ತನ್ನ ತಂದೆಗೆ ಕಾಲ್ ಮಾಡಿದ್ದಾನೆ. ಎಲ್ಲಿ ನಿಜ ಹೇಳಿದರೆ ಬೈಯ್ಯುತ್ತಾರೆ ಎಂಬಾ ಕಾರಣಕ್ಕೆ ವಿದ್ಯಾರ್ಥಿ ಯಾರೋ ಅಪರಿಚಿತರು ಹೀಗೆ ಮಾಡಿ ಬಿಟ್ಟರು ಎಂದು ಕಥೆ ಕಟ್ಟಿದ್ದಾನೆ.

    ಒಟ್ಟಾರೆ ತನ್ನ ಸಲಿಂಗಕಾಮದ ಆಸೆಯಿಂದ ವಿದ್ಯಾರ್ಥಿ ಜೀವನದಲ್ಲಿ ಆಟವಾಡಿರುವ ಸುನಿ ಪೊಲೀಸರ ಅತಿಥಿಯಾದರೆ, ಸುನಿಗೆ ಸಹಕರಿಸಿ ವಿದ್ಯಾರ್ಥಿ ನೋವಿನಲ್ಲಿ ಒದ್ದಾಡುತ್ತಿದ್ದಾನೆ. ಇನ್ನೊಂದೆಡೆ ವಿದ್ಯಾರ್ಥಿಯ ಪೋಷಕರು ತಮ್ಮ ಮಗನ ಸ್ಥಿತಿ ಹೀಗೆ ಆಯ್ತಲ್ಲ ಎಂದು ಕೊರಗುತ್ತಿದ್ದಾರೆ.

  • 25ರ ಮಹಿಳೆಯಿಂದ 19ರ ಯುವತಿ ಮೇಲೆ ರೇಪ್- ಕೇಸ್ ದಾಖಲಿಸಲು ಪೊಲೀಸರ ಹಿಂದೇಟು

    25ರ ಮಹಿಳೆಯಿಂದ 19ರ ಯುವತಿ ಮೇಲೆ ರೇಪ್- ಕೇಸ್ ದಾಖಲಿಸಲು ಪೊಲೀಸರ ಹಿಂದೇಟು

    ನವದೆಹಲಿ: ಮಹಿಳೆಯಿಂದ ಮಹಿಳೆ ಅಥವಾ ಪುರುಷನಿಂದ ಪುರುಷನ ಮೇಲೆ ಅತ್ಯಾಚಾರ ನಡೆದರೆ, ಅಂತಹ ಪ್ರಕರಣವನ್ನು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿ ದೆಹಲಿ ನಡೆದಿದ್ದು, ಸಂತ್ರಸ್ತ ಯುವತಿ ದೂರು ನೀಡಿದರೂ, ಆರೋಪಿ ಮಹಿಳೆ ವಿರುದ್ಧ ಕ್ರಮಕೈಗೊಳ್ಳಲು ಕಾನೂನು ತೊಡಕು ಉಂಟಾಗಿದೆ.

    ಏನಿದು ಪ್ರಕರಣ?:
    ಈಶಾನ್ಯ ರಾಜ್ಯದ 25 ವರ್ಷದ ಮಹಿಳೆ, ನನ್ನ ಮೇಲೆ ಅತ್ಯಾಚಾರ ಎಸಗಿದ್ದಾಳೆ ಎಂದು 19 ವರ್ಷದ ಯುವತಿ ಆರೋಪಿಸಿದ್ದಾಳೆ. ಈ ಕುರಿತು ನವದೆಹಲಿಯ ಸೀಮಾಪುರಿ ಠಾಣೆಗೆ ದೂರು ನೀಡಿದರೂ ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ ಎಂದು ವರದಿಯಾಗಿದೆ.

    25 ವರ್ಷದ ಮಹಿಳೆ ಇದೇ ವರ್ಷದ ಮಾರ್ಚ್‍ನಿಂದ ಕಿರುಕುಳ ಆರಂಭಿಸಿದ್ದಾಳೆ. ಜೊತೆಗೆ 2 ತಿಂಗಳುಗಳ ಕಾಲ ಯುವತಿಯನ್ನು ಬಂಧನದಲ್ಲಿ ಇರಿಸಲಾಗಿತ್ತು. ಈ ವೇಳೆ ರೋಹಿತ್ ಮತ್ತು ರಾಹುಲ್ ಎಂಬವರು ನನ್ನ ಮೇಲೆ ಅತ್ಯಾಚಾರ ಎಸಗಿದ್ದು, ಅದನ್ನು ಚಿತ್ರೀಕರಣ ಮಾಡಿದ್ದಾರೆ. ಈಗ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಸಂತ್ರಸ್ತ ಯುವತಿ ಆರೋಪಿಸಿದ್ದಾಳೆ.

    ಬಂಧನದಲ್ಲಿ ಇರಿಸಿದ್ದ ವೇಳೆ ಮಹಿಳೆ ಸೆಕ್ಸ್ ಟಾಯ್ ಮೂಲಕ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾಳೆ. ಇದರಿಂದ ಮುಂದೆ ತನ್ನ ಮಹಿಳೆ ಸಲಿಂಗಿ ಗ್ರಾಹಕರಿಗೆ ಅನುಕೂಲವಾಗಲು ಹಾಗೂ ಹಣ ಸಂಪಾದನೆ ಮಾಡಲು ಹೀಗೆ ಮಾಡಿದ್ದಾಳೆ. ಅಷ್ಟೇ ಅಲ್ಲದೆ ಗ್ರೂಪ್ ಸೆಕ್ಸ್ ಮಾಡು ಅಂತಾ ಒತ್ತಾಯಿಸಿದ್ದಳು. ಅತ್ಯಾಚಾರದ ಜೊತೆಗೆ ದೈಹಿಕವಾಗಿ ಕಿರುಕುಳ ನೀಡುತ್ತಿದ್ದಳು ಎಂದು ಸಂತ್ರಸ್ತೆ ದೂರಿದ್ದಾಳೆ.

    ಬಾಲಕಿ ಮನೆಯವರಿಗೆ ಮಾಹಿತಿ ನೀಡಲು ಮುಂದಾಗಿದ್ದಕ್ಕೆ ಆಕೆಗೆ ವಿಡಿಯೋ ಬಹಿರಂಗ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾರೆ. ಇತ್ತ ಆರೋಪಿ ರಾಹುಲ್ ಯುವತಿಯ ಪೋಷಕರ ಬ್ಯಾಂಕ್ ಖಾತೆಗೆ 20 ಸಾವಿರ ರೂ. ಹಾಕಿದ್ದಾನೆ. ಹೀಗಾಗಿ ಯುವತಿ ಪೋಷಕರು ಮಗಳೇ ನನ್ನ ಖಾತೆಗೆ ಹಣ ಹಾಕಿದ್ದಾಳೆ ಅಂತಾ ತಿಳಿದು ಸುಮ್ಮನಿದ್ದರು ಎಂದು ವರದಿಯಾಗಿದೆ.

    ಪೋಷಕರಿಗೂ ಹೇಳಲಾಗದೆ ಬೆದರಿಕೆ ಹಾಗೂ ನಿರಂತರ ಅತ್ಯಾಚಾರದಿಂದ ಬೇಸತ್ತಿದ್ದ ಯುವತಿಯ ರಕ್ಷಣೆಗೆ ಸಂಘಟನೆಯೊಂದರ ನೆರವಾಗಿದೆ. ಅಲ್ಲಿಂದ ಹೊರ ಬಂದ ಆಕೆಯ ಸ್ಥಳೀಯ ಸೀಮಾಪುರಿ ಠಾಣೆಯಲ್ಲಿ ದೂರು ನೀಡಲು ಹೋಗಿದ್ದಾಳೆ. ಆದರೆ ಪೊಲೀಸರು ಅಸಹಜ ಅತ್ಯಾಚಾರ ಪ್ರಕರಣದ ಅಡಿ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಬರುವುದಿಲ್ಲ ಎಂದು ತಿಳಿಸಿದ್ದ ಅವರು, ಮ್ಯಾಜಿಸ್ಟ್ರೇಟ್‍ಗೆ ಮಾಹಿತಿ ನೀಡದಂತೆ ತಿಳಿ ಹೇಳಿದ್ದರು.

    ಮ್ಯಾಜಿಸ್ಟ್ರೇಟ್‍ಗೆ ಭೇಟಿಯಾದ ಯುವತಿ ಸೆ.26ರಂದು ಹೇಳಿಕೆ ದಾಖಲಿಸಿದ್ದಾಳೆ. ಹೀಗಾಗಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ರೋಹಿತ್ ಪರಾರಿಯಾಗಿದ್ದು, ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

    ಸುಪ್ರೀಂ ಕೋರ್ಟ್ ತೀರ್ಪು ಏನು?
    ಕೆಲ ದಿನಗಳ ಹಿಂದೆ ಸುಪ್ರೀಂಕೋರ್ಟ್ ಸಮ್ಮತಿಯ ಸಲಿಂಗ ಕಾಮ ಅಪರಾಧವಲ್ಲ ಎಂದು ತೀರ್ಪು ನೀಡಿ, ಭಾರತೀಯ ದಂಡ ಸಂಹಿತೆಯ 377ನೇ ವಿಧಿಯನ್ನು ರದ್ದು ಮಾಡಿತ್ತು. ಈ ಹಿನ್ನಲೆಯಲ್ಲಿ ನೊಂದ ಯುವತಿ ದೂರು ನೀಡಿದರೂ ಕಾನೂನಾತ್ಮಕವಾಗಿ ಮುಂದುವರಿಯಲು ತೊಂದರೆ ಎದುರಾಗಿದೆ ಎಂದು ಯುವತಿ ಪರ ವಕೀಲರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಸಲಿಂಗಕಾಮ ಅನುವಂಶೀಯ ಅಸ್ವಸ್ಥತೆ, ದೇಶದಲ್ಲಿ ಎಚ್‍ಐವಿ ಹೆಚ್ಚಾಗಲಿದೆ: ಸುಬ್ರಮಣಿಯನ್ ಸ್ವಾಮಿ

    ಸಲಿಂಗಕಾಮ ಅನುವಂಶೀಯ ಅಸ್ವಸ್ಥತೆ, ದೇಶದಲ್ಲಿ ಎಚ್‍ಐವಿ ಹೆಚ್ಚಾಗಲಿದೆ: ಸುಬ್ರಮಣಿಯನ್ ಸ್ವಾಮಿ

    ನವದೆಹಲಿ: ದೇಶದಲ್ಲಿ ಎಚ್‍ಐವಿ ಪ್ರಕರಣಗಳು ಹೆಚ್ಚಾಗಲಿದೆ ಎಂದು ಹೇಳುವ ಮೂಲಕ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಸಲಿಂಗಕಾಮ ತೀರ್ಪಿನ ಬಗ್ಗೆ ತಮ್ಮದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

    ಸಲಿಂಗಕಾಮ ಅಪರಾಧವಲ್ಲ ಎನ್ನುವ ಸುಪ್ರೀಂ ನೀಡಿದ ಐತಿಹಾಸಿಕ ತೀರ್ಪಿಗೆ ಪ್ರತಿಕ್ರಿಯಿಸಿದ ಅವರು, ಸುಪ್ರೀಂ ನೀಡಿರುವ ತೀರ್ಪು ಅಂತಿಮವಲ್ಲ. ತೀರ್ಪನ್ನು ಪ್ರಶ್ನಿಸಿ 7 ಮಂದಿ ನ್ಯಾಯಾಧೀಶರ ಪೀಠದಲ್ಲಿ ಮೇಲ್ಮನವಿ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶವಿದೆ. ಆದರೆ ಈ ತೀರ್ಪಿನಿಂದ ದೇಶದಲ್ಲಿ ಲೈಂಗಿಕ ಆರೋಗ್ಯಕ್ಕೆ ಸಂಬಂಧಿಸಿದ ರೋಗಗಳ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಎಂದರು.

    ಸಲಿಂಗಕಾಮ ಎನ್ನುವುದು ಅನುವಂಶೀಯ ಅಸ್ವಸ್ಥತೆ. ಹೀಗಾಗಿ ಈ ವ್ಯಕ್ತಿತ್ವ ಹೊಂದಿರುವವರನ್ನು ಸಾಮಾನ್ಯ ಲೈಂಗಿಕ ವರ್ತನೆ ಹೊಂದಿರುವ ವ್ಯಕ್ತಿಗಳ ಜೊತೆ ಹೋಲಿಕೆ ಮಾಡಲು ಬರುವುದಿಲ್ಲ. ಈ ಕುರಿತು ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ನಡೆಯಬೇಕಿದೆ. ಅಮೆರಿಕ ದೇಶದಲ್ಲಿರುವ ಸಂಸ್ಕೃತಿ ನಮ್ಮ ದೇಶದಲ್ಲೂ ಹೆಚ್ಚಾಗುವ ಸಂಭವವಿದ್ದು ಇದರ ಹಿಂದೆ ಸಾಕಷ್ಟು ಹಣದಸ ಹರಿವು ಇದೆ. ಇನ್ನು ಮುಂದೆ ಸಲಿಂಗಕಾಮದ ಬಾರ್ ಗಳು ಆರಂಭವಾಗಬಹುದು. ಇದು ದೇಶದ ಭದ್ರತೆಗೆ ಮಾರಕವಾಗಬಹುದು ಎಂದು ಅಭಿಪ್ರಾಯಪಟ್ಟರು.

    ಪೊಲೀಸರಿಗೆ ಬೆಡ್ ರೂಂ ಪ್ರವೇಶಿಸಲು ಯಾವುದೇ ಹಕ್ಕು ಇಲ್ಲ. ನನಗೆ ಗೊತ್ತಿದೆ ಹಲವರು ನ್ಯಾಯಾಧೀಶರು ಸಲಿಂಗಕಾಮಿಗಳಾಗಿದ್ದಾರೆ. ಅಷ್ಟೇ ಅಲ್ಲದೇ ಭವಿಷ್ಯದಲ್ಲಿ ಶಿಶುಕಾಮಿಗಳ ಸಂಖ್ಯೆ ಹೆಚ್ಚಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

    ತೀರ್ಪಿಗೂ ಮುನ್ನ ಪ್ರತಿಕ್ರಿಯೆ ನೀಡಿದ್ದ ಆರ್ ಎಸ್‍ಎಸ್ ವಕ್ತಾರೊಬ್ಬರು, ಸಂಲಿಗಕಾಮ ನೈಸಗಿಕವಾಗಿದ್ದರೂ ಅಥವಾ ನಿಸರ್ಗಕ್ಕೆ ವಿರೋಧವಾಗಿದ್ದರೂ ಇಂತಹ ಬೆಳವಣಿಗೆಗೆ ನಾವು ಬೆಂಬಲ ನೀಡುವುದಿಲ್ಲ. ಆದರೆ ಇದನ್ನು ಅಪರಾಧ ಎಂದು ಪರಿಗಣಿಸುವುದಿಲ್ಲ. ಇಂತಹ ಪದ್ಧತಿಗಳಿಗೆ ಭಾರತ ಸಂಸ್ಕೃತಿಯಲ್ಲಿ ಅವಕಾಶವಿಲ್ಲ ಎಂದು ತಿಳಿಸಿದ್ದರು.

    ಕಾಂಗ್ರೆಸ್ ಸಂಸದ ಶಶಿ ತರೂರ್ ಪ್ರತಿಕ್ರಿಯೆ ನೀಡಿ, ಸರ್ಕಾರಕ್ಕೆ ಮಲಗುವ ಕೋಣೆಗಳಲ್ಲಿ ಅವಕಾಶವಿಲ್ಲ. ಸುಪ್ರೀಂ ತೀರ್ಪು `ಸ್ವಾತಂತ್ರ್ಯ ಮುಂಜಾನೆ’ ಎಂದು ತಿಳಿಸಿದ್ದಾರೆ. ಇದನ್ನು ಓದಿ:  ಭಾರತದಲ್ಲಿ ಸಲಿಂಗಕಾಮ ಅಪರಾಧವಲ್ಲ: 156 ವರ್ಷದ ಬ್ರಿಟಿಷ್ ಕಾನೂನು ರದ್ದು

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv