Tag: ಸಲಿಂಗಿ ವಿವಾಹ

  • ಸಲಿಂಗಿಗಳ ಮದುವೆ ಮಾನ್ಯತೆ ಮನವಿ ತಿರಸ್ಕರಿಸಿದ ಹೈಕೋರ್ಟ್

    ಸಲಿಂಗಿಗಳ ಮದುವೆ ಮಾನ್ಯತೆ ಮನವಿ ತಿರಸ್ಕರಿಸಿದ ಹೈಕೋರ್ಟ್

    ನವದೆಹಲಿ: ತಮ್ಮ ಮದುವೆಗೆ ಮಾನ್ಯತೆ ಕೋರಿ ಸಲಿಂಗಿ ದಂಪತಿಯ ಮನವಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ.

    ತಮ್ಮ ಮಗಳನ್ನು ಇನ್ನೊಬ್ಬ ಮಹಿಳೆ ಬಲವಂತದಿಂದ ಮತ್ತು ಅಕ್ರಮವಾಗಿ ಬಂಧನದಲ್ಲಿರಿಸಿದ್ದಾಳೆ. ಮಗಳನ್ನು ತನ್ನ ಒಪ್ಪಿಸುವಂತೆ ಪೋಷಕರೊಬ್ಬರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ವಿಲೇವಾರಿ ಮಾಡಿದ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಮಹತ್ವದ ತೀರ್ಪು ಪ್ರಕಟಿಸಿದರು. ಇದನ್ನೂ ಓದಿ: ವೇಶ್ಯಾವಾಟಿಕೆ ಅಡ್ಡೆ ಮೇಲಿನ ದಾಳಿಯಲ್ಲಿ ಸಿಕ್ಕಿಬೀಳುವ ಗ್ರಾಹಕರನ್ನು ಬಂಧಿಸುವಂತಿಲ್ಲ: ಹೈಕೋರ್ಟ್‌

    Marrage

    ಈ ಹಿಂದೆ ಕೋರ್ಟ್ ನೀಡಿದ್ದ ನಿರ್ದೇಶನದಂತೆ ಇಬ್ಬರನ್ನು ನ್ಯಾಯಾಲಯಕ್ಕೆ ಸರ್ಕಾರಿ ವಕೀಲರು ಹಾಜರು ಪಡಿಸಿದರು. ಈ ವೇಳೆ ಇಬ್ಬರು ತಮ್ಮ ವಯಸ್ಸನ್ನು 23 ಮತ್ತು 22 ವರ್ಷ ಎಂದು ತೋರಿಸಿರುವ ವೈವಾಹಿಕ ಒಪ್ಪಿಗೆ ಪತ್ರವನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ದಂಪತಿ ತಾವು ವಯಸ್ಕರು ಮತ್ತು ತುಂಬಾ ಪ್ರೀತಿಸುತ್ತಿದ್ದೇವೆ ಎಂದು ತಿಳಿಸಿದರು. 

    ತಾವು ವಯಸ್ಕರಾಗಿದ್ದು, ಪ್ರೀತಿಸುತ್ತಿದ್ದು ಪರಸ್ಪರ ಒಪ್ಪಿಗೆಯೊಂದಿಗೆ ಮದುವೆಯಾಗಿದ್ದೇವೆ. ಸಮಾಜದಲ್ಲಿ ಕಾನೂನು ಬದ್ಧವಾಗಿ ಜೀವನ ನಡೆಸಲು ತಮ್ಮ ವಿವಾಹಕ್ಕೆ ಮಾನ್ಯತೆ ನೀಡಬೇಕು ಎಂದು ವಿನಂತಿ ಮಾಡಿದರು. ಇದನ್ನೂ ಓದಿ: ಪಾಕ್‌ ಪರ ಘೋಷಣೆ ಕೂಗಿದ್ದ ಕಾಶ್ಮೀರ ವಿದ್ಯಾರ್ಥಿಗಳಿಗೆ ಅಲಹಾಬಾದ್‌ ಹೈಕೋರ್ಟ್‌ ಜಾಮೀನು

    Court

    ನಮ್ಮ ಮದುವೆಗೆ ಮಾನ್ಯತೆ ನೀಡಲು ನವತೇಜ್ ಸಿಂಗ್ ಜೋಹರ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣವನ್ನು ಉಲ್ಲೇಖಿಸಿದ ಅವರು, ಇಬ್ಬರು ವಯಸ್ಕರಿಗೆ ಪರಸ್ಪರ ಒಪ್ಪಿಗೆಯೊಂದಿಗೆ ಒಟ್ಟಿಗೆ ಇರಲು ಸ್ವಾತಂತ್ರ‍್ಯ ನೀಡಲಾಗಿದೆ. ವಿಶ್ವದ 25ಕ್ಕೂ ಹೆಚ್ಚು ದೇಶಗಳು ಸಲಿಂಗ ವಿವಾಹವನ್ನು ಅಂಗೀಕರಿಸಿವೆ ಎಂಬುದನ್ನೂ ಪ್ರತಿಪಾದಿಸಿದರು. ಅಲ್ಲದೆ, ಹಿಂದೂ ವಿವಾಹ ಕಾಯ್ದೆಯು ಸಲಿಂಗ ವಿವಾಹವನ್ನು ನಿರ್ದಿಷ್ಟವಾಗಿ ವಿರೋಧಿಸುವುದಿಲ್ಲ ಎಂದು ಕೋರ್ಟ್ ಗಮನಕ್ಕೆ ತಂದರು. ಇದನ್ನೂ ಓದಿ: ಇಂಧನ ಬೆಲೆ ಏರಿಕೆ ಖಂಡಿಸಿ ರಾಹುಲ್ ಗಾಂಧಿ ಪ್ರತಿಭಟನೆ

    Allahabad high court 1

    ಸರ್ಕಾರಿ ವಕೀಲರು, ಪುರುಷ ಮತ್ತು ಮಹಿಳೆ ಇಲ್ಲದಿದ್ದರೆ ಭಾರತೀಯ ಸಂಪ್ರದಾಯದಲ್ಲಿ ವಿವಾಹವನ್ನು ಒಪ್ಪಲಾಗದು. ಏಕೆಂದರೆ ಅಂತಹ ವಿವಾಹ ಭಾರತೀಯ ಕುಟುಂಬದ ಪರಿಕಲ್ಪನೆಯನ್ನು ಮೀರುತ್ತದೆ. ಭಾರತದಲ್ಲಿ ಮದುವೆ ವೇಳೆ ಹಿಂದೂ ಪುರುಷರು ಮತ್ತು ಮಹಿಳೆಯರು ಪರಸ್ಪರ ಸುಖ ದುಃಖಗಳಲ್ಲಿ ಭಾಗಿಯಾಗುವುದಾಗಿ ದೇವರು ಮತ್ತು ಅಗ್ನಿ ಸಾಕ್ಷಿಯಾಗಿ ಪ್ರಮಾಣ ಮಾಡುತ್ತಾರೆ. ಇಂತಹ ಮದುವೆಗೆ ಅವಕಾಶ ನೀಡಿದರೆ ಭಾರತದಲ್ಲಿ ಮಹಿಳೆಯರು ಮತ್ತು ಪುರುಷರನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾದ ಅನೇಕ ಕಾನೂನುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬ ವಿಚಾರವನ್ನು ಕೋರ್ಟ್ಗೆ ತಿಳಿಸಿದರು. ಇದನ್ನೂ ಓದಿ: ಆನ್‍ಲೈನ್ ಗೇಮ್ ನಿಷೇಧ ರದ್ದು: ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಅರ್ಜಿ

    ಹಿಂದೂ ವಿವಾಹ ಕಾಯ್ದೆ-1955, ವಿಶೇಷ ವಿವಾಹ ಕಾಯ್ದೆ-1954 ಮತ್ತು ವಿದೇಶಿ ವಿವಾಹ ಕಾಯ್ದೆ-1969 ಸಲಿಂಗ ವಿವಾಹವನ್ನು ಅಂಗೀಕರಿಸುವುದಿಲ್ಲ. ವಾಸ್ತವವಾಗಿ, ಮುಸ್ಲಿಮರು, ಬೌದ್ಧರು, ಜೈನರು, ಸಿಖ್ಖರು ಮುಂತಾದವರಲ್ಲಿಯೂ ಸಹ ಸಲಿಂಗ ವಿವಾಹವನ್ನು ಗುರುತಿಸಲಾಗಿಲ್ಲ ಎಂದು ವಾದಿಸಿದರು. ವಾದ ಪರಿಗಣಿಸಿದ ನ್ಯಾಯಾಲಯ ಅರ್ಜಿದಾರರ ಮನವಿಯನ್ನು ತಿರಸ್ಕರಿಸಿದ್ದು, ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ವಿಲೇವಾರಿ ಮಾಡಿತು.