Tag: ಸಲಿಂಗಿ

  • ಶಾಲಾ ಪಠ್ಯದಲ್ಲಿ ಲೈಂಗಿಕ ಶಿಕ್ಷಣ ಅಳವಡಿಸಲು ತಮಿಳು ನಾಡು ಸರಕಾರಕ್ಕೆ ಮನವಿ ಮಾಡಿದ ನಿರ್ದೇಶಕ ವೆಟ್ರಿಮಾರನ್

    ಶಾಲಾ ಪಠ್ಯದಲ್ಲಿ ಲೈಂಗಿಕ ಶಿಕ್ಷಣ ಅಳವಡಿಸಲು ತಮಿಳು ನಾಡು ಸರಕಾರಕ್ಕೆ ಮನವಿ ಮಾಡಿದ ನಿರ್ದೇಶಕ ವೆಟ್ರಿಮಾರನ್

    ಶಾಲಾ ಮಕ್ಕಳು ಲೈಂಗಿಕ ಶಿಕ್ಷಣವನ್ನು ಕಲಿಯುವುದರ ಅವಶ್ಯಕತೆ ಇದೆ. ಶಾಲಾ ಪಠ್ಯಕ್ರಮದ ಭಾಗವಾಗಿ ಲೈಂಗಿಕ ಶಿಕ್ಷಣವನ್ನು ಸೇರ್ಪಡೆ ಮಾಡುವುದರ ಬಗ್ಗೆ ಕೇರಳ ಹೈಕೋರ್ಟ್ ಅಭಿಪ್ರಾಯ ವ್ಯಕ್ತ ಪಡಿಸಿರುವ ತಮಿಳಿನ ಖ್ಯಾತ ನಿರ್ದೇಶಕ ವೆಟ್ರಿಮಾರನ್, ಇದನ್ನು ತಮಿಳುನಾಡಿನಲ್ಲೂ ಜಾರಿಗೊಳಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ವಿಶ್ವ ಲೈಂಗಿಕ ಆರೋಗ್ಯ ದಿನ ಸಂದರ್ಭದಲ್ಲಿ ಮಾತನಾಡಿದ ಅವರು ಸಲಿಂಗ ವಿವಾಹವನ್ನೂ ಬೆಂಬಲಿಸುವುದಾಗಿ ಘೋಷಿಸಿದ್ದಾರೆ.

    ಬಾಂಗ್ಲಾದೇಶದ ಮಹಿಳೆ ಮತ್ತು ತಮಿಳುನಾಡಿನ ಮಹಿಳೆಯ ನಡುವೆ ನಡೆದ ಮದುವೆಯನ್ನು ಉದಾಹರಣೆಯಾಗಿ ತಗೆದುಕೊಂಡ ಅವರು ಇಂತಹ ಮದುವೆಯನ್ನು ನಾಗರೀಕ ಸಮಾಜ ಪ್ರೋತ್ಸಾಹಿಸಬೇಕು ಎಂದು ಅವರು ಮನವಿ ಮಾಡಿದರು. ಅಲ್ಲದೇ, ತಮಿಳುನಾಡಿನ ಸುಭಿಕ್ಷಾ ಸುಬ್ರಮಣಿ ಹಾಗೂ ಟೀನಾ ದಾಸ್ ಸಲಿಂಗಿಗಳು ತಮಿಳು ಸಾಂಪ್ರದಾಯಿಕ ಶೈಲಿಯಲ್ಲಿ ಮದುವೆಯಾಗಿದ್ದನ್ನೂ ಅವರು ನೆನಪಿಸಿಕೊಂಡರು. ಇದನ್ನೂ ಓದಿ: ಮತ್ತೆ ಶುರುವಾಯ್ತು ಬಾಲಿವುಡ್ ಬಾಯ್‌ಕಾಟ್ ಟ್ರೆಂಡ್: `ಬ್ರಹ್ಮಾಸ್ತ್ರʼ ಚಿತ್ರಕ್ಕೆ ವಿರೋಧ

    ಪ್ರತಿಯೊಬ್ಬರೂ ತಮ್ಮ ತಮ್ಮ ಹಕ್ಕುಗಳನ್ನು ಪಡೆದುಕೊಂಡು ಬದುಕಬೇಕು. ತೃತಿಯ ಲಿಂಗಿಗಳಿಗೆ ತಮ್ಮದೇ ಆದ ಬದುಕಿನ ಹಕ್ಕು ನೀಡುವಂತೆ ಕರೆಕೊಟ್ಟ ವೆಟ್ರಿಮಾರನ್, ಲೈಂಗಿಕ ಶಿಕ್ಷಣದ ಬಗ್ಗೆ ಒತ್ತು ನೀಡುವಂತೆ ಅವರು ಕೇಳಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರು ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    Live Tv
    [brid partner=56869869 player=32851 video=960834 autoplay=true]

  • ಲಾಡ್ಜ್‌ನಲ್ಲಿ ಸಲಿಂಗಿಗಳ ಕಿತ್ತಾಟ – ಓರ್ವ ಸಾವು, ಇನ್ನೊಬ್ಬ ಜೈಲಿಗೆ

    ಲಾಡ್ಜ್‌ನಲ್ಲಿ ಸಲಿಂಗಿಗಳ ಕಿತ್ತಾಟ – ಓರ್ವ ಸಾವು, ಇನ್ನೊಬ್ಬ ಜೈಲಿಗೆ

    – ಜೂನ್‌ನಲ್ಲಿ ನಡೆದಿದ್ದ ಅನುಮಾನಾಸ್ಪದ ಸಾವು
    – ಮಾರತ್‌ಹಳ್ಳಿ ಲಾಡ್ಜ್‌ನಲ್ಲಿ ಕೊಲೆ

    ಬೆಂಗಳೂರು: ಮಾರತ್‌ಹಳ್ಳಿ ಲಾಡ್ಜ್ ನಲ್ಲಿ ವ್ಯಕ್ತಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. ಸಲಿಂಗಿಗಳ ಮಧ್ಯೆ ಜಗಳ ನಡೆದು ಕೊಲೆಯಲ್ಲಿ ಅಂತ್ಯಗೊಂಡ ವಿಚಾರ ತನಿಖೆಯ ವೇಳೆ ಬಯಲಾಗಿದೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರತಹಳ್ಳಿ ಪೊಲೀಸರು ಸ್ನೇಹಿತ ರಾಜಗೋಪಾಲ್‌ನನ್ನು ಕೊಲೆಗೈದ ಆರೋಪಕ್ಕೆ ಸಂಬಂಧಿಸಿದಂತೆ ತಮಿಳುವಣ್ಣನ್‌ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

    ಏನಿದು ಪ್ರಕರಣ?
    ಜೂನ್ 4 ರಂದು ಮಾರತ್‌ಹಳ್ಳಿಯ ಲಾಡ್ಜ್‌ನಲ್ಲಿ ರಾಜಗೋಪಾಲ ಮತ್ತು ಮತ್ತೊಬ್ಬ ವ್ಯಕ್ತಿ ಸೇರಿ ರೂಮ್‌ ಪಡೆದುಕೊಂಡಿದ್ದರು. ಮೂರು ದಿನವಾದರೂ ರಿನಿವಲ್‌ ಮಾಡಿದ ಕಾರಣ ಜೂನ್‌ 7 ರಂದು ಲಾಡ್ಜ್ ಸಿಬ್ಬಂದಿ ಕೊಠಡಿ ಪರಿಶೀಲಿಸಲು ಮುಂದಾದಾಗ ಮೃತಪಟ್ಟ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ದೇಹ ಪತ್ತೆಯಾಗಿತ್ತು. ಕೂಡಲೇ ಲಾಡ್ಜ್‌ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮರಣೋತ್ತರ ಪರೀಕ್ಷೆಯ ವೇಳೆ ಕುತ್ತಿಗೆ ಹಿಸುಕಿ ಉಸಿರು ಗಟ್ಟಿಸಿ ರಾಜ್‌ಗೋಪಾಲನನ್ನು ಕೊಲೆ ಮಾಡಿರುವ ವಿಚಾರ ದೃಢಪಟ್ಟಿತ್ತು. ಅನುಮಾನಾಸ್ಪದ ಸಾವಿನ ಹಿನ್ನಲೆ ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.

    ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ?
    ಲಾಡ್ಜ್‌ನಲ್ಲಿ ಮೊಬೈಲ್‌ ಟವರ್‌ ಲೋಕೇಷನ್‌ ಪರಿಶೀಲಿಸಿದಾಗ ಒಂದು ಮೊಬೈಲ್‌ ಸಂಖ್ಯೆ ಸ್ವಿಚ್‌ ಆಫ್‌ ಆಗಿತ್ತು. ಆ ಮೊಬೈಲ್‌ ನಂಬರ್‌ ಜಾಡು ಹಿಡಿದಾಗ ತಮಿಳುನಾಡಿನಲ್ಲಿ ತಮಿಳುವಣ್ಣನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಪ್ರಕಟವಾಗಿದೆ. ಇದನ್ನೂ ಓದಿ: ಯುವಕರಿಗೆ ಪೊಲೀಸ್ ಕೆಲ್ಸ – ಕಲರ್ ಕಲರ್ ಕಥೆ ಕಟ್ಟಿದ್ದ ನಕಲಿ ಪೊಲೀಸಪ್ಪ ಪರಾರಿ

    ಇಬ್ಬರು ಸಲಿಂಗಿಗಳು:
    ಆರೋಪಿ ತಮಿಳುವಣ್ಣನ್‌ ಚೆನ್ನೈಯ ಖಾಸಗಿ ಆಸ್ಪತ್ರೆಯಲ್ಲಿ ಟೆಕ್ನಿಕಲ್‌ ಅಸೋಸಿಯೇಟ್‌ ಆಗಿ ಕೆಲಸ ಮಾಡಿಕೊಂಡಿದ್ದ. ಸಲಿಂಗಿ ಆಗಿದ್ದ ಕಾರಣಕ್ಕೆ ಪತ್ನಿ ಬಿಟ್ಟು ಹೋಗಿದ್ದಳು. 2020ರಲ್ಲಿ ತಮಿಳುವಣ್ಣನಿಗೆ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುವ ರಾಜಗೋಪಾಲ್‌ ಪರಿಚಯವಾಗಿದ್ದಾನೆ. ಆತನೂ ಸಲಿಂಗಿ ಆಗಿದ್ದು ಆತನ ಪತ್ನಿಯೂ ಬಿಟ್ಟುಹೋಗಿದ್ದಳು. ಸ್ನೇಹಿತರಾಗಿದ್ದ ಇವರಿಬ್ಬರು ಲಾಡ್ಜ್‌ಗಳಲ್ಲಿ ಉಳಿದುಕೊಂಡು ಖಾಸಗಿ ಕ್ಷಣಗಳನ್ನು ಕಳೆಯುತ್ತಿದ್ದರು.

    ಮೇ ತಿಂಗಳಲ್ಲಿ ತಮಿಳುವಣ್ಣನ್‌ಗೆ ದೇವರ ಬೀಸನಹಳ್ಳಿಯಲ್ಲಿ ಇರುವ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಕೆಲಸ ಸಿಕ್ಕಿತ್ತು. ಹೀಗಾಗಿ ಚೆನ್ನೈನಿಂದ ಬೆಂಗಳೂರಿಗೆ ಶಿಫ್ಟ್‌ ಆಗಿದ್ದ. ಶಿಫ್ಟ್‌ ಆದ ವಿಚಾರವನ್ನು ಸ್ನೇಹಿತ ರಾಜಗೋಪಾಲ್‌ಗೆ ತಿಳಿಸಿರಲಿಲ್ಲ. ತಮಿಳುವಣ್ಣನ್‌ ಚೆನ್ನೈ ಬಿಟ್ಟು ಹೋಗಿದ್ದಕ್ಕೆ ರಾಜಗೋಪಲ್‌ ಕೋಪಗೊಂಡಿದ್ದ. ಕೊನೆಗೆ ತಮಿಳುವಣ್ಣನ್‌ ಬೆಂಗಳೂರಿನಲ್ಲಿರುವ ವಿಚಾರ ತಿಳಿದು ಮೇ ಕೊನೆಯ ವಾರದಲ್ಲಿ ರಾಜಗೋಪಾಲ್‌ ನಗರಕ್ಕೆ ಬಂದಿದ್ದ. ಬಳಿಕ ಇವರಿಬ್ಬರೂ ಲಾಡ್ಜ್‌ನಲ್ಲಿ ಖಾಸಗಿ ಕ್ಷಣಗಳನ್ನು ಕಳೆದಿದ್ದರು.

    ಚೆನ್ನೈಗೆ ತೆರಳಿದ್ದ ರಾಜಗೋಪಲ್‌ ಜೂನ್‌ 4ರಂದು ಪುನಃ ಬೆಂಗಳೂರಿಗೆ ಬಂದಿದ್ದ. ರಾಜಗೋಪಾಲ್‌ ‘ನಿನ್ನ ಬಿಟ್ಟು ಹೋಗುವುದಿಲ್ಲ’ ಎಂದು ತಮಿಳುವಣ್ಣನ ಬಳಿ ಹೇಳಿದ್ದಾನೆ. ಅದೇ ದಿನ ರಾತ್ರಿ ಅದೇ ಲಾಡ್ಜ್‌ನಲ್ಲಿ ರೂಂ ಬಾಡಿಗೆ ಪಡೆದು ಇಬ್ಬರೂ ಉಳಿದುಕೊಂಡಿದ್ದರು. ಮಾರನೇ ದಿನ ತಮಿಳುವಣ್ಣನ್‌ ರೂಂಗೆ ಬಂದ ವೇಳೆ ಹಣಕಾಸಿನ ಕಾರಣಕ್ಕೆ ಇಬ್ಬರ ನಡುವೆ ಜಗಳ ನಡೆದಿದ್ದು ತಮಿಳುವಣ್ಣನ್‌ ಹೊಡೆಯಲು ಮುಂದಾದಾಗ ಆಘಾತದಿಂದ ರಾಜಗೋಪಾಲ್‌ ಕುಸಿದು ಮೃತಪಟ್ಟಿದ್ದಾನೆ. ಇದರಿಂದ ಭಯಗೊಂಡ ತಮಿಳುವಣ್ಣನ್‌ ಕೊಠಡಿಗೆ ಬೀಗ ಹಾಕಿ ತೆರಳಿದ್ದ.‌ ಜೂನ್‌ 7 ರಂದು ಲಾಡ್ಜ್‌ ಸಿಬ್ಬಂದಿ ಕೊಠಡಿ ತೆರೆದಾಗ ರಾಜಗೋಪಾಲ ಶವವಾಗಿ ಪತ್ತೆಯಾಗಿದ್ದ.

    Live Tv
    [brid partner=56869869 player=32851 video=960834 autoplay=true]

  • ರಾಮ್ ಗೋಪಾಲ್ ವರ್ಮಾ ಸಲಿಂಗ ಕಾಮಿ ಎಂದು ಜರಿದ ಫ್ಯಾನ್ಸ್

    ರಾಮ್ ಗೋಪಾಲ್ ವರ್ಮಾ ಸಲಿಂಗ ಕಾಮಿ ಎಂದು ಜರಿದ ಫ್ಯಾನ್ಸ್

    ಕ್ಷಿಣದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸುಮ್ಮನಿರಲು ಅವರ ಬಾಯಿ ಬಿಡುತ್ತಿಲ್ಲ. ಹಾಗಾಗಿಯೇ ಮನಬಂದಂತೆ ಮಾತನಾಡುತ್ತಲೇ ಇರುತ್ತಾರೆ. ಆ ಮಾತುಗಳು ಯಾವ ರೀತಿಯಲ್ಲಿ ತಮಗೇ ಪರಿಣಾಮ ಬೀರಬಲ್ಲವು ಎಂಬುದನ್ನು ಅವರು ಬಹುಶಃ ಯೋಚಿಸುವುದಿಲ್ಲ. ಹಾಗಾಗಿ ಮಾತೆಲ್ಲವೂ ವಿವಾದಗಳಾಗಿ ಬದಲಾಗುತ್ತವೆ. ಆದರೂ, ಅವರು ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ಮಾತನಾಡುತ್ತಲೇ ಹೋಗುತ್ತಾರೆ. ಇದನ್ನೂ ಓದಿ: ರಾಕ್ಷಸರ ರೂಪದಲ್ಲಿ ಬರುತ್ತಿದ್ದಾರೆ ಡೈಲಾಂಗ್ ಕಿಂಗ್ ಸಾಯಿಕುಮಾರ್

    ಇದೀಗ ರಾಮ್ ಗೋಪಾಲ್ ವರ್ಮಾ ಮತ್ತೆ ಮಾತಿಗೆ ಸಿಕ್ಕಿದ್ದಾರೆ. ಇವರ ನಿರ್ದೇಶನದ ಲಡಕಿ ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದೆ. ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಮೊದಲ ಬಾರಿಗೆ ಭಾರತೀಯ ಸಿನಿಮಾ ರಂಗಕ್ಕೆ ಪೂರ್ಣ ಪ್ರಮಾಣದ ಮಾರ್ಷಲ್ ಆರ್ಟ್ ಬಳಸಿಕೊಂಡು ಮಾಡಿದ ಸಿನಿಮಾವನ್ನು ನೀಡುತ್ತಿದ್ದಾರೆ. ಈ ಸಿನಿಮಾಗೆ ಪ್ರೇರಣೆ ಬ್ರೂಸಲಿ ಎಂದು ಹೇಳಿಕೊಂಡಿದ್ದಾರೆ. ಬ್ರೂಸಲಿ ಎನ್ನು ಇಷ್ಟಕ್ಕೆ ಬಳಸಿಕೊಂಡಿದ್ದರೆ ಚೆನ್ನಾಗಿತ್ತು. ಆದರೆ, ಅವರು ಹಾಗೆ ಮಾಡಿಲ್ಲ.

    ಸದ್ಯ ಲಡಕಿ ಸಿನಿಮಾದ ಪ್ರಚಾರದಲ್ಲಿ ತೊಡಗಿರುವ ರಾಮ್ ಗೋಪಾಲ್ ವರ್ಮಾ, ತಾವು ಈ ಸಿನಿಮಾವನ್ನು ಬ್ರೂಸ್ಲಿ ಪ್ರೇರಣೆಯಿಂದ ಮಾಡಿದ್ದು, ನಾನು ಅವರಿಗೆ ಕಿಸ್ ಮಾಡುವ ಆಸೆ ಹೊಂದಿದ್ದೆ. ತುಂಬಾ ಸಲ ಅವರಿಗೆ ಕಿಸ್ ಮಾಡಬೇಕು ಅಂತ ಅನಿಸಿತ್ತು. ಹಾಗಂತ ನನ್ನನ್ನು ಸಲಿಂಗಿ ಕಾಮಿ ಅಂದುಕೊಳ್ಳಬೇಡಿ. ನಾನು ಸಲಂಗಿ ಅಲ್ಲ ಎಂದೂ ಹೇಳಿದ್ದಾರೆ. ಆದರೆ, ಫ್ಯಾನ್ಸ್ ಮಾತ್ರ ಸುಮ್ಮನಿಲ್ಲ. ನೀವು ಸಲಂಗಿಯೇ ಎಂದು ಜರಿದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಲಿಂಗಿ ಸಂಬಂಧದಲ್ಲಿದ್ದೇನೆ – ಏಷ್ಯನ್ ಗೇಮ್ಸ್ ಬೆಳ್ಳಿ ವಿಜೇತೆ ದ್ಯುತಿ ಚಂದ್

    ಸಲಿಂಗಿ ಸಂಬಂಧದಲ್ಲಿದ್ದೇನೆ – ಏಷ್ಯನ್ ಗೇಮ್ಸ್ ಬೆಳ್ಳಿ ವಿಜೇತೆ ದ್ಯುತಿ ಚಂದ್

    ನವದೆಹಲಿ: ಭಾರತದ ಓಟಗಾರ್ತಿ ದ್ಯುತಿ ಚಂದ್ ತಾವು ಗೆಳತಿಯೊಂದಿಗೆ ಸಲಿಂಗಿ ಸಂಬಂಧದಲ್ಲಿ ಇರುವುದಾಗಿ ಬಹಿರಂಗ ಪಡಿಸಿದ್ದಾರೆ.

    ಒಡಿಶಾ ರಾಜ್ಯದ ಓಟಗಾರ್ತಿ ಆಗಿರುವ ದ್ಯುತಿ ಚಂದ್ ತಮ್ಮದೇ ಗ್ರಾಮದ ನಿವಾಸಿ ಆಗಿರುವ ಗೆಳತಿಯೊಂದಿಗೆ ಸಲಿಂಗಿ ಸಂಬಂಧ ಹೊಂದಿದ್ದೇನೆ ಎಂದಿದ್ದಾರೆ. ಅಲ್ಲದೇ ಕೆಲ ಕಾರಣಗಳಿಂದ ನಾನು ಗೆಳತಿಯ ಹೆಚ್ಚಿನ ಮಾಹಿತಿಯನ್ನ ಬಹಿರಂಗ ಪಡಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ದ್ಯುತಿ ಚಂದ್ ಸಲಿಂಗಿ ಸಂಬಂಧ ಹೊಂದಿರುವುದನ್ನು ಬಹಿರಂಗ ಪಡಿಸಿದ ಮೊದಲ ಭಾರತೀಯ ಅಥ್ಲಿಟ್ ಎನಿಸಿಕೊಂಡಿದ್ದಾರೆ.

    ನಮಗೆ ಇಷ್ಟವಾದ ವ್ಯಕ್ತಿಯೊಂದಿಗೆ ಜೀವಿಸಬೇಕು ಎಂಬ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ. ಸಲಿಂಗಿಯಾಗಿರುವ ವ್ಯಕ್ತಿಗಳ ಹಕ್ಕುಗಳ ರಕ್ಷಣೆಗೆ ನಾನು ಮುಂದಿರುತ್ತೇನೆ. ಇದು ಯಾವುದೇ ಒಬ್ಬ ವ್ಯಕ್ತಿಯ ವೈಯಕ್ತಿಕ ಆಯ್ಕೆ ಆಗಿರುತ್ತದೆ. ಸದ್ಯ ನಾನು ವಿಶ್ವ ಚಾಂಪಿಯನ್‍ಶಿಪ್ ಹಾಗೂ ಒಲಿಂಪಿಕ್ಸ್ ಕಡೆ ನನ್ನ ಹೆಚ್ಚಿನ ಗಮನ ಇದ್ದು, ಮುಂದಿನ ದಿನಗಳಲ್ಲಿ ನಾನು ಆಕೆಯೊಂದಿಗೆ ಜೀವಿಸಲು ಇಷ್ಟ ಪಡುತ್ತೇನೆ ಎಂದಿದ್ದಾರೆ.

    ಪ್ರೀತಿಯನ್ನು ತಪ್ಪು ಎನ್ನಲು ಯಾರಿಗೂ ಹಕ್ಕಿಲ್ಲ, ಇದನ್ನೇ ಸುಪ್ರೀಂ ಕೋರ್ಟ್ ಕೂಡ ಅಭಿಪ್ರಾಯ ಪಟ್ಟಿದೆ. ಅಥ್ಲೀಟ್ ಆದ ಕಾರಣಕ್ಕೆ ನನಗೆ ಮಾತ್ರ ಯಾರು ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಮುಂದಿನ 5 ವರ್ಷಗಳ ಕಾಲ ನಾನು ಓಟದಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ಹೊಂದಿದ್ದು, ವೃತ್ತಿ ಜೀವನದಿಂದ ವಿರಾಮ ಪಡೆದ ಬಳಿಕ ನನ್ನ ಜೀವನವನ್ನು ಗೆಳತಿಯೊಂದಿಗೆ ಕಳೆಯುತ್ತೇನೆ ಎಂದಿದ್ದಾರೆ.

    2018ರ ಏಷ್ಯನ್ ಗೇಮ್ಸ್ ನಲ್ಲಿ 100 ಹಾಗೂ 200 ಮೀಟರ್ ಓಟದ ಸ್ಪರ್ಧೆಯಲ್ಲಿ ದ್ಯುತಿ ಚಂದ್ ಬೆಳ್ಳಿ ಪದಕವನ್ನು ಪಡೆದಿದ್ದರು. 20 ವರ್ಷಗಳ ಇತಿಹಾಸಲ್ಲಿ ಮೊದಲ ಬಾರಿಗೆ ಭಾರತ ಮಹಿಳಾ ಆಥ್ಲಿಟ್ 100 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಪಡೆದಿದ್ದರು. 16 ವರ್ಷಗಳ ಬಳಿಕ 200 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಲಭಿಸಿತ್ತು.

  • ನಾನು ಸಲಿಂಗಕಾಮಿಯಲ್ಲ – ಆಸೀಸ್ ಆಟಗಾರ ಜೇಮ್ಸ್ ಫಾಲ್ಕ್‌ನರ್‌ ಸ್ಪಷ್ಟನೆ

    ನಾನು ಸಲಿಂಗಕಾಮಿಯಲ್ಲ – ಆಸೀಸ್ ಆಟಗಾರ ಜೇಮ್ಸ್ ಫಾಲ್ಕ್‌ನರ್‌ ಸ್ಪಷ್ಟನೆ

    ಸಿಡ್ನಿ: ಆಸ್ಟ್ರೇಲಿಯಾ ತಂಡದ ಖ್ಯಾತ ಕ್ರಿಕೆಟ್ ಆಟಗಾರರ ಜೇಮ್ಸ್ ಫಾಲ್ಕ್‌ನರ್‌ ತಾನೊಬ್ಬ ಸಲಿಂಗಕಾಮಿಯೆಂದು ಆರ್ಥೈಸುವಂತಹ ಟ್ವೀಟ್ ಮಾಡಿ ಮುಜುಗರಕ್ಕೆ ಒಳಗಾಗಿದ್ದು, ಬಳಿಕ ಇದೀಗ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

    ಆಸೀಸ್ ತಂಡದ ಪ್ರಮುಖ ವೇಗದ ಬೌಲರ್ ಆಗಿರುವ ಜೇಮ್ಸ್ ಫಾಲ್ಕ್‌ನರ್‌, ಸೋಮವಾರ ತಮ್ಮ 29ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ತಾಯಿ ಹಾಗೂ ಗೆಳೆಯನೊಂದಿಗೆ ಊಟ ಮಾಡುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ನನ್ನ ಬಾಯ್ ಫ್ರೆಂಡ್, ತಾಯಿಯೊಂದಿಗೆ ಹುಟ್ಟುಹಬ್ಬದ ಡಿನ್ನರ್ ಎಂದು ಫೋಟೋದ ಕೆಳಗೆ ಬರೆದುಕೊಂಡಿದ್ದರು.

    https://www.instagram.com/p/Bw1epixh7hN/?utm_source=ig_embed

    ಜೇಮ್ಸ್ ಫಾಲ್ಕ್‌ನರ್‌ ಪೋಸ್ಟ್ ಗೆ ಹಲವು ಕ್ರಿಕೆಟ್ ಆಟಗಾರರರು ಸೇರಿದಂತೆ ಅಭಿಮಾನಿಗಳು ಪ್ರತಿಕ್ರಿಯೆ ನೀಡಿ, ನೀವು ಸಲಿಂಗಕಾಮಿ ಎಂದು ಧೈರ್ಯವಾಗಿ ಹೇಳಿಕೊಂಡ ನಿಮ್ಮ ನಡೆಗೆ, ನಮ್ಮ ಬೆಂಬಲವಿದೆ ಎಂದು ಪ್ರತಿಕ್ರಿಯೆ ನೀಡಿದ್ದರು. ಆದರೆ ಅಭಿಮಾನಿಗಳ ಈ ಪ್ರತಿಕ್ರಿಯೆಗೆ ಶಾಕ್ ಆದ ಜೇಮ್ಸ್ ಫಾಲ್ಕ್‌ನರ್‌ ಮತ್ತೊಂದು ಪೋಸ್ಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.

    ನನ್ನ ಈ ಮೊದಲಿನ ಪೋಸ್ಟ್ ಬಗ್ಗೆ ತಪ್ಪು ತಿಳಿದುಕೊಳ್ಳಲಾಗಿದೆ. ನಾನು ಸಲಿಂಗಕಾಮಿ ಅಲ್ಲ. ಆದರೆ ಅಂತಹವರ ಬಗ್ಗೆ ನೀವು ನೀಡಿದ ಬೆಂಬಲ ನೋಡಿ ಹೆಮ್ಮೆ ಅನಿಸುತ್ತಿದೆ. ಪ್ರೀತಿ ಅಂದರೆ ಪ್ರೀತಿ ಅಷ್ಟೇ. ಅಂದಹಾಗೆ ಆತ ನನ್ನ ಗೆಳೆಯ ಮಾತ್ರ. ತುಂಬಾ ಸಮಯದ ಬಳಿಕ ಮನೆಯಲ್ಲಿ ಆತನೊಂದಿಗೆ ಭೇಟಿ ಮಾಡಿದ್ದ ಕಾರಣ ಪೋಸ್ಟ್ ಮಾಡಿದ್ದೆ ಎಂದು ತಿಳಿಸಿದ್ದಾರೆ.

    https://www.instagram.com/p/Bw2-aefB63J/?utm_source=ig_embed

    ಇತ್ತೀಚೆಗೆ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರು ಸಲಿಂಗ ವಿವಾಹವಾಗುವ ಮೂಲಕ ಸುದ್ದಿಯಾಗಿದ್ದರು. ಇದರ ಬೆನ್ನಲ್ಲೇ ಜೇಮ್ಸ್ ಫಾಲ್ಕ್‌ನರ್‌ ಅವರ ಪೋಸ್ಟ್ ಅಭಿಮಾನಿಗಳಲ್ಲಿ ಗೊಂದಲವನ್ನು ಮೂಡಿಸಿತ್ತು. ಈ ಹಿಂದೆ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಸ್ಟಿವನ್ ಡೇವಿಸ್ ತಾವು ಸಲಿಂಗಕಾಮಿ ಎಂಬುದನ್ನು ಬಹಿರಂಗ ಪಡಿಸಿದ್ದರು.

  • ಅಂದು ಅವಳಿಗಾಗಿ ಅವನಾದ- ಇಂದು ಅವಳೇ ಅವನನ್ನ ಬೇಡ ಅಂತಿದ್ದಾಳೆ

    ಅಂದು ಅವಳಿಗಾಗಿ ಅವನಾದ- ಇಂದು ಅವಳೇ ಅವನನ್ನ ಬೇಡ ಅಂತಿದ್ದಾಳೆ

    – 5 ವರ್ಷದ ಬಂಧನದ ವಿರಸಕ್ಕೆ ಕಾರಣ ಏನು ಗೊತ್ತೆ..?

    ಚಂಡೀಗಢ: ಪ್ರೀತಿಗೆ ಕಣ್ಣಿಲ್ಲ, ಮಾಯೆ ಎಂದು ಕರೆಯುತ್ತಾರೆ. ಕೆಲವೊಮ್ಮೆ ಮೊದಲ ನೋಟದಲ್ಲಿಯೇ ಮನಸೆಳೆದಾಗ ಇಬ್ಬರು ಒಬ್ಬರನೊಬ್ಬರು ಪ್ರೀತಿಸಿ ಮದುವೆ ಆಗುವುದುಂಟು. ಮತ್ತೆ ಬಾಲ್ಯದಲ್ಲಿ ಚಿಗುರಿದ ಪ್ರೀತಿ ಯೌವನದಲ್ಲಿ ಅರಳಿರುವ ಉದಾಹರಣೆಗಳಿವೆ. ಆದ್ರೆ ಇಲ್ಲೊಬ್ಬ ಮಹಿಳೆ ಯುವತಿಯನ್ನ ನೋಡಿ ಆಕರ್ಷಿತಳಾಗಿ, ಆಕೆಗಾಗಿ ತನ್ನ ಲಿಂಗಪರಿವರ್ತನೆ ಮಾಡಿಸಿಕೊಂಡು ಮದುವೆ ಕೂಡ ಆಗಿದ್ದಳು. ಅದೇ ಯುವತಿ ತನಗಾಗಿ ಲಿಂಗ ಬದಲಾಯಿಸಿಕೊಂಡವನು ನನಗೆ ಬೇಡ ಎಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ.

    ಇಂತಹ ವಿಚಿತ್ರ ಪ್ರಕರಣವೊಂದು ಹರಿಯಾಣ ರಾಜ್ಯದಲ್ಲಿ ಬೆಳಕಿಗೆ ಬಂದಿದೆ. 5 ವರ್ಷಗಳ ಹಿಂದೆ ಶಿಕ್ಷಕಿಯಾಗಿದ್ದ ಶರ್ಮಿಳಾ (ಹೆಸರು ಬದಲಾಯಿಸಲಾಗಿದೆ) ಶಾಲೆಯ ಕಾರ್ಯಕ್ರಮದಲ್ಲಿ ಯಾಮಿನಿ (ಹೆಸರು ಬದಲಿಸಲಾಗಿದೆ) ಎಂಬ ಯುವತಿಯನ್ನು ನೋಡಿದ್ದರು. ಮೊದಲ ನೋಟದಲ್ಲಿ ಇಬ್ಬರಿಗೂ ಲವ್ ಆಗಿದೆ. ಮದುವೆ ಮಾಡಿಕೊಳ್ಳಲು ನಿರ್ಧರಿಸಿದಾಗ ಶರ್ಮಿಳಾ ಸುಮಾರು 10 ಲಕ್ಷ ರೂ. ಖರ್ಚು ಮಾಡಿ ಲಿಂಗ ಪರಿವರ್ತನೆ ಮಾಡಿಸಿಕೊಂಡು ಶರ್ಮಾನ್ ಆಗಿ ಬದಲಾಗಿದ್ದರು.

     

    ಲಿಂಗ ಪರಿವರ್ತನೆ ಬಳಿಕ ಇಬ್ಬರು ಮನೆಯವರ ವಿರೋಧದ ನಡುವೆಯೂ ಮದುವೆ ಆಗಿದ್ದರು. ಮುಂದೆ ತಮಗೆ ಮಕ್ಕಳು ಆಗುವುದಿಲ್ಲ ಅಂತಾ ತಿಳಿದು ಹೆಣ್ಣು ಮಗುವನ್ನು ದತ್ತು ಪಡೆದುಕೊಂಡಿದ್ದಾರೆ. ಸದ್ಯ ಯಾಮಿನಿ ಗಂಡನಿಂದ ನನಗೆ ವಿಚ್ಛೇಧನ ನೀಡಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.

    ವಿರಸಕ್ಕೆ ಕಾರಣವೇನು..?
    ಕುಟುಂಬಸ್ಥರ ವಿರೋಧದ ನಡುವೆಯೂ ಮದುವೆಯಾದ ಶರ್ಮಿಳಾ ಮತ್ತು ಯಾಮಿನಿ ಐದು ವರ್ಷ ಜೊತೆಯಾಗಿದ್ದರು. ಮದುವೆ ಎರಡು ವರ್ಷದ ನಂತರ ಶರ್ಮಾನ್ (ಪತಿ) ನನಗೆ ಮಾನಸಿಕವಾಗಿ ಕಿರುಕುಳ ನೀಡಲು ಆರಂಭಿಸಿದನು. ಕೆಲವು ದಿನಗಳಿಂದ ದೈಹಿಕವಾಗಿಯೂ ಹಿಂಸೆ ಕೊಡುತ್ತಿದ್ದಾನೆ. ಮದುವೆ ನಂತರವೂ ನನ್ನ ಸಂಪೂರ್ಣ ಖರ್ಚು ವೆಚ್ಚವನ್ನ ನಾನೇ ಭರಿಸಿಕೊಳ್ಳುತ್ತಿದ್ದೇನೆ. ಪ್ರತಿದಿನ ಸಣ್ಣಪುಟ್ಟ ವಿಚಾರಕ್ಕೆ ಜಗಳ ತಗೆದು ಹಲ್ಲೆ ನಡೆಸುತ್ತಿದ್ದಾನೆ. ಹಾಗಾಗಿ ಆತನಿಂದ ನನಗೆ ಬಿಡುಗಡೆ ಕೊಡಿಸಬೇಕೆಂದು ಯಾಮಿನಿ ಕೇಳುತ್ತಿದ್ದಾರೆ.

     

    ಇತ್ತ ಮದುವೆ ಬಳಿಕ ದತ್ತು ಪಡೆದ ಎರಡೂವರೆ ವರ್ಷದ ಹೆಣ್ಣು ಮಗುವನ್ನು ತಮ್ಮ ಬಳಿಯೇ ಇರಿಸಿಕೊಳ್ಳಲು ಯಾಮಿನಿ ನಿರ್ಧರಿಸಿದ್ದಾರೆ. ಪತಿಯಿಂದ ತಮಗೆ ಯಾವುದೇ ಪರಿಹಾರದ ಹಣ ಬೇಡ. ಆತನಿಂದ ತನಗೆ ಮುಕ್ತಿ ಕೊಡಿಸಿದರೆ ಸಾಕು ಎಂದು ಯಾಮಿನಿ ಅಳುಲು ತೋಡಿಕೊಂಡಿದ್ದಾರೆ.

    ಈ ಸಂಬಂಧ ದಂಪತಿಯನ್ನು ಕೌನ್ಸಿಲಿಂಗ್ ಗಾಗಿ ಆಹ್ವಾನಿಸಿದ್ದೇವೆ. ಯಾಮಿನಿ ಮತ್ತು ಶರ್ಮಾನ್ ಇಬ್ಬರ ಅನಿಸಿಕೆಯನ್ನು ಪಡೆದುಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಹಿಳಾ ಸಂರಕ್ಷಣೆ ಮತ್ತು ಬಾಲ್ಯ ವಿವಾಹ ನಿಷೇಧ ಇಲಾಖೆ ಸಹಾಯಕ ಅಧಿಕಾರಿ ರಾಮ್ ಲೋಹನ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಕಬ್ಬನ್ ಪಾರ್ಕ್ ನಲ್ಲಿ ಸಲಿಂಗಿಗಳ ಹುಚ್ಚಾಟ

    ಕಬ್ಬನ್ ಪಾರ್ಕ್ ನಲ್ಲಿ ಸಲಿಂಗಿಗಳ ಹುಚ್ಚಾಟ

    ಬೆಂಗಳೂರು: ಸಲಿಂಗ ಸಂಬಂಧಕ್ಕೆ ಸುಪ್ರೀಂಕೋರ್ಟ್ ಮಾನ್ಯತೆ ನೀಡಿದೆ. ಸುಪ್ರೀಂ ಕೋರ್ಟ್ ಆದೇಶದ ನಂತರ ಕಬ್ಬನ್ ಪಾರ್ಕ್ ನ ಪೊದೆಗಳಲ್ಲಿ ಸಲಿಂಗಿಗಳು ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಹಾವಳಿ ಹೆಚ್ಚಾಗಿದ್ದು ಸಾರ್ವಜನಿಕರಿಗೆ ಮುಂಜುಗರ ಉಂಟು ಮಾಡುತ್ತಿದೆ.

    ಸಲಿಂಗಕಾಮಿಗಳಿಗೆ ಸುಪ್ರೀಂಕೋರ್ಟ್ ಕಾನೂನಿನ ಮಾನ್ಯತೆ ನೀಡಿದ್ದೆ ತಡ ಕಬ್ಬನ ಪಾರ್ಕ್‍ನಲ್ಲಿ ಸಲಿಂಗಿಗಳು ಹಾಗೂ ಲೈಗಿಂಕ ಅಲ್ಪ ಸಂಖ್ಯಾತರ ಹಾವಳಿ ಹೆಚ್ಚಾಗಿದೆ. ಸಾಮಾನ್ಯ ಸಾರ್ವಜನಿಕರು ಹಾಗೂ ಕಬ್ಬನ್ ಪಾರ್ಕ್ ವೀಕ್ಷಣೆಗೆ ಬರುವ ಪ್ರವಾಸಿಗಳಿಗೆ ಸಲಿಂಗಿಗಳ ಈ ನಡವಳಿಕೆ ಮುಂಜುಗರ ತರಿಸಿದ್ದು, ಪೊಲೀಸ್ ಭದ್ರತೆ ಹೆಚ್ಚಿಸುವಂತೆ ಕಬ್ಬನ್ ಪಾರ್ಕ್ ಅಸೋಶಿಯೇಷನ್ ಅಧ್ಯಕ್ಷ ಉಮೇಶ್ ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ:  ಭಾರತದಲ್ಲಿ ಸಲಿಂಗಕಾಮ ಅಪರಾಧವಲ್ಲ: 156 ವರ್ಷದ ಬ್ರಿಟಿಷ್ ಕಾನೂನು ರದ್ದು – ಐಪಿಸಿ ಸೆಕ್ಷನ್ 377 ಏನು ಹೇಳುತ್ತೆ?

    ಸುಪ್ರೀಂಕೋರ್ಟ್ ತೀರ್ಪು ನೀಡ್ತಾ ಇದ್ದಂತೆ ಸಲಿಂಗ ಕಾಮಿಗಳು ಅಂದು ಸಂಭ್ರಮಾಚರಣೆ ನಡೆಸಿದರು. ಮಾನವೀಯತೆ ಆಧಾರದಲ್ಲಿ ಸಮಾಜದ ಹಲವರು ಸುಪ್ರೀಂ ಆದೇಶಕ್ಕೆ ಸಂತಸ ವ್ಯಕ್ತಪಡಿಸಿದರು. ಆದ್ರೇ ಸಂಜೆಯಾಗುತ್ತಿದ್ದ ಹಾಗೆ ಪ್ರಕೃತಿಯ ಸೊಬಗಿಗೆ ಹೆಸರಾದ ಕಬ್ಬನ್ ಪಾರ್ಕ್ ನಲ್ಲಿ ಸಲಿಂಗ ಕಾಮಿಗಳ ಹಾವಳಿ ಹೆಚ್ಚಾಗಿದ್ದು ಆತಂಕ ಹೆಚ್ಚಿಸಿದೆ. ಒಟ್ಟಾರೆ, ಸುಪ್ರೀಂ ಆದೇಶದಿಂದಾಗಿ ಕಬ್ಬನ್ ಪಾರ್ಕ್ ಪೊಲೀಸರಿಗೆ ಮತ್ತೊಂದು ಹೊಸ ತಲೆ ನೋವು ಶುರುವಾಗಿದ್ದು, ಸಲಿಂಗಿಗಳ ಈ ಹುಚ್ಚಾಟಕ್ಕೆ ಯಾವ್ ರೀತಿ ಬ್ರೇಕ್ ಹಾಕ್ತಾರೋ ಕಾದು ನೋಡಬೇಕಿದೆ. ಇದನ್ನೂ ಓದಿ: ಸಲಿಂಗಕಾಮ ಅನುವಂಶೀಯ ಅಸ್ವಸ್ಥತೆ, ದೇಶದಲ್ಲಿ ಎಚ್‍ಐವಿ ಹೆಚ್ಚಾಗಲಿದೆ: ಸುಬ್ರಮಣಿಯನ್ ಸ್ವಾಮಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಲಿಂಗಿ ಮದುವೆಯಾದ ಮಹಿಳಾ ತಂಡದ ಕ್ರಿಕೆಟ್ ಆಟಗಾರ್ತಿಯರು!

    ಸಲಿಂಗಿ ಮದುವೆಯಾದ ಮಹಿಳಾ ತಂಡದ ಕ್ರಿಕೆಟ್ ಆಟಗಾರ್ತಿಯರು!

    ಜೊಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾ ಅಂತರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರು ಸಲಿಂಗಿ ಮದುವೆ ಆಗಿದ್ದಾರೆ.

    ದಕ್ಷಿಣ ಆಫ್ರಿಕಾ ಮಹಿಳಾ ತಂಡದ ಕ್ಯಾಪ್ಟನ್ ಡೇನ್ ವ್ಯಾನ್ ನಿಕೆರ್ಕ್ ಹಾಗೂ ಅದೇ ತಂಡದ ಅಲ್‍ರೌಂಡರ್ ಮರಿಝಾನ್ ಕಾಪ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಲ್‍ರೌಂಡರ್ ಕಾಪ್ ತಮ್ಮ ಮದುವೆಯ ವಿಷಯವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವುದರ ಮೂಲಕ ಬಹಿರಂಗಪಡಿಸಿದ್ದಾರೆ.

    2009ರ ಮಹಿಳಾ ವಿಶ್ವಕಪ್ ಸಮಯದಲ್ಲಿ ನಿಕೆರ್ಕ್ ಹಾಗೂ ಕಾಪ್ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ್ದರು. ನಿಕೆರ್ಕ್ ತಮ್ಮ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ಮಾರ್ಚ್ 8ರಂದು ವೆಸ್ಟ್ ಇಂಡೀಸ್ ವಿರುದ್ಧ ಆಡಿದ್ದರು. ಇನ್ನೂ ಕಾಪ್ ತಮ್ಮ ಮೊದಲ ಅಂತರಾಷ್ಟ್ರೀಯ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಆಡಿದ್ದರು.

    ಈ ಮದುವೆಗೆ ಇಬ್ಬರು ಆಟಗಾರ್ತಿಯರ ಕುಟುಂಬದವರು, ಸ್ನೇಹಿತರು ಹಾಗೂ ದಕ್ಷಿಣ ಆಫ್ರಿಕಾ ತಂಡದ ಸಹ ಆಟಗಾರರು ಇವರ ಮದುವೆಯಲ್ಲಿ ಭಾಗಿಯಾಗಿದ್ದರು. ನಿಕೆರ್ಕ್ ಹಾಗೂ ಕಾಪ್ ಅವರದ್ದು ಸಲಿಂಗಿ ಮದುವೆಯಾಗಿದ್ದು, ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಇವರ ಮದುವೆ ಎರಡನೇ ಪ್ರಕರಣವಾಗಿದೆ.

    ಈ ಮೊದಲು ನ್ಯೂಜಿಲೆಂಡ್ ಮಹಿಳಾ ತಂಡದ ಆಟಗಾರ್ತಿಯರಾದ ಆಮಿ ಸಟರ್ತೈಟ್ ಹಾಗೂ ಲೀ ಟಾಹುಹು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

    ????

    A post shared by Marizanne Kapp (@kappie777) on

  • ಮೂರು ವರ್ಷದ ಕಂದನ ಜೊತೆ ನದಿಗೆ ಜಿಗಿದ ಸಲಿಂಗಿ ಜೋಡಿ

    ಮೂರು ವರ್ಷದ ಕಂದನ ಜೊತೆ ನದಿಗೆ ಜಿಗಿದ ಸಲಿಂಗಿ ಜೋಡಿ

    ಗಾಂಧಿನಗರ: ಇಬ್ಬರು ಸಲಿಂಗಿಗಳು ಮೂರು ವರ್ಷದ ಕಂದಮ್ಮನ ಜೊತೆ ಅಹಮದಾಬಾದ್ ಬಳಿಯ ಸಾಬರಮತಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮವಾರ ಬೆಳಗಿನ ಜಾವ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದು, ಸಾಯುವ ಮುನ್ನ ಲಿಪ್‍ಸ್ಟಿಕ್ ಬಳಸಿ ಕಲ್ಲಿನ ಮೇಲೆ ಡೆತ್ ನೋಟ್ ಬರೆದಿದ್ದಾರೆ.

    ಆಶಾ ಠಾಕೂರ್ (30), ಭಾವನಾ ಠಾಕೂರ್ (28) ಮತ್ತು ಆಶಾಳ ಮೂರು ವರ್ಷದ ಮಗು ಮೇಘಾ ಸಾವನ್ನಪ್ಪಿದವರು. ಮೃತರ ದೇಹಗಳು ಎಲ್ಲೆ ಬ್ರಿಡ್ಜ್ ಬಳಿ ಪತ್ತೆಯಾಗಿದ್ದು, ಮಹಿಳೆಯರಿಬ್ಬರು ಸಲಿಂಗಿಗಳಾಗಿದ್ದು, ಹಲವು ವರ್ಷಗಳಿಂದ ಸಂಬಂಧದಲ್ಲಿದ್ದರು ಎಂದು ತಿಳಿದು ಬಂದಿದೆ.

    ಬಾವ್ಲಾ ನಗರದ ರಾಂಚೋಡ್ ಗ್ರಾಮದ ನಿವಾಸಿಗಳಾದ ಆಶಾ ಮತ್ತು ಭಾವನಾ ಹಲವು ವರ್ಷಗಳಿಂದ ರಿಲೇಶನ್ ಶಿಪ್‍ನಲ್ಲಿದ್ದರು. ಇಬ್ಬರಿಗೂ ಮದುವೆಯಾಗಿದ್ದು, ಎರಡು ಮಕ್ಕಳನ್ನು ಹೊಂದಿದ್ದಾರೆ.

    ಆಶಾ ಮತ್ತು ಭಾವನಾ ಜೂನ್ 8ರಿಂದ ಮೇಘಾ ಜೊತೆ ಮನೆಯಿಂದ ಕಾಣೆಯಾಗಿದ್ರು. ಆದ್ರೆ ಕುಟುಂಬಸ್ಥರು ಹುಡುಕುವ ಪ್ರಯತ್ನ ಅಥವಾ ನಾಪತ್ತೆ ದೂರು ಸಹ ದಾಖಲಿಸಿರಲಿಲ್ಲ. ಭಾನುವಾರ ಸಂಜೆ ನದಿ ದಂಡೆಗೆ ಬಂದ ಜೋಡಿ ಅಲ್ಲಿಯೇ ಊಟ ಮಾಡಿದ್ದಾರೆ. ನಮ್ಮ ಸಂಬಂಧವನ್ನು ಸಮಾಜ ಒಪ್ಪಿಕೊಳ್ಳುತ್ತಿಲ್ಲ ಅಂತಾ ಒಬ್ಬರನ್ನೊಬ್ಬರು ಒಂದೇ ದುಪ್ಪಟಾದಲ್ಲಿ ಕಟ್ಟಿಕೊಂಡು ಮಗುವಿನ ಜೊತೆ ನದಿಗೆ ಜಿಗಿದಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಎಂ.ಎಸ್.ಸಿಂಗ್ ತಿಳಿಸಿದ್ದಾರೆ.

    ಡೆತ್ ನೋಟ್‍ನಲ್ಲಿ ಏನಿತ್ತು: ಸಮಾಜ ನಮ್ಮನ್ನು ಬದುಕಲು ಬಿಡುತ್ತಿಲ್ಲ. ನಮ್ಮಿಬ್ಬರ ಪ್ರೀತಿ ಸಂಬಂಧವನ್ನು ಒಪ್ಪಿಕೊಳ್ಳದೇ ನಮ್ಮನ್ನು ಅವಮಾನಿಸುತ್ತಿದೆ. ಹಾಗಾಗಿ ನಾವಿಬ್ಬರೂ ಜೊತೆಯಾಗಿಯೇ ಸಾಯುತ್ತಿದ್ದೇವೆ ಎಂದು ಕಲ್ಲಿನ ಮೇಲೆ ಬರೆದಿದ್ದಾರೆ.

    ಪ್ರಸ್ತುತ ಸಮಾಜದಲ್ಲಿ ಇಬ್ಬರು ಯುವತಿಯರು ಒಂದೇ ಮನೆ ಮಾಡಿಕೊಂಡು ಜೀವನ ನಡೆಸುತ್ತಿದ್ದರೆ ಅವರನ್ನು ಕೆಟ್ಟ ದೃಷ್ಟಿಕೋನದಿಂದ ನೋಡಲಾಗುತ್ತದೆ. ಆದ್ರೆ ಹುಡುಗರು ರೂಮ್ ಮಾಡಿಕೊಂಡಿದ್ದರೆ ಸಮಾಜದಲ್ಲಿ ಯಾವ ಸಮಸ್ಯೆಗಳನ್ನು ಎದುರಿಸಲ್ಲ. ಒಂದು ವೇಳೆ ಇಬ್ಬರು ಮಹಿಳೆಯರು ಒಂದೇ ಮನೆಯಲ್ಲಿದ್ದು, ಸಂಬಂಧದಲ್ಲಿ ಇದ್ದಾರೆ ಅಂತಾ ತಿಳಿದ್ರೆ ಅವರು ಎಲ್ಲರ ಬೆಂಬಲ ಕಳೆದುಕೊಳ್ಳುತ್ತಾರೆ. ಎಲ್ಲರಿಂದ ದೂರವಾದ ಬಳಿಕ ಕೊನೆದೆ ವಿಧಿ ಇಲ್ಲದೇ ಆತ್ಮಹತ್ಯೆಗೆ ಮುಂದಾಗುತ್ತಾರೆ ಅಂತಾ ಲೈಂಗಿಕ ಅಲ್ಪಸಂಖ್ಯಾತರ ಎನ್‍ಜಿಓ ಸದಸ್ಯರೊಬ್ಬರು ಅಸಮಾಧಾನ ಹೊರ ಹಾಕಿದ್ದಾರೆ.

  • ಮದ್ವೆಯಾದ ನಂತ್ರ ಗೊತ್ತಾಯ್ತು ವರ ಅವನಲ್ಲ ಅವಳು!

    ಮದ್ವೆಯಾದ ನಂತ್ರ ಗೊತ್ತಾಯ್ತು ವರ ಅವನಲ್ಲ ಅವಳು!

    ಲಕ್ನೋ: ಸಾಮೂಹಿಕ ವಿವಾಹದಲ್ಲಿ 20 ವರ್ಷದ ಇಬ್ಬರು ಯುವತಿಯರು(ಸಲಿಂಗಿಗಳು) ತಮ್ಮ ಪೋಷಕರು ಹಾಗೂ ವಿವಾಹ ಆಯೋಜಕರಿಗೆ ಮೋಸ ಮಾಡಿ ಮದುವೆಯಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    20 ವರ್ಷದ ಈ ಯುವತಿಯರು 2 ವರ್ಷದಿಂದ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು. ಇವರ ಸಂಬಂಧದ ಬಗ್ಗೆ ಹಾಗೂ ಇವರಿಬ್ಬರು ಮದುವೆಯಾಗುತ್ತಿರುವುದು ಅವರ ಕುಟುಂಬಕ್ಕೆ ಯಾವುದೇ ಮಾಹಿತಿ ಇರಲಿಲ್ಲ. ಹಾಗಾಗಿ ಅವರು ಈ ರೀತಿ ಮದುವೆಯಾಗುವುದ್ದಾಗಿ ನಿರ್ಧರಿಸಿದ್ದರು ಎಂದು ವರದಿಯಾಗಿದೆ.

    ಏ. 6ರಂದು ಇಬ್ಬರು ಯುವತಿಯರು ಸಾಮೂಹಿಕ ಮದುವೆಯಾಗಲೂ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದರು. ಅಲ್ಲದೇ ನಕಲಿ ಪೋಷಕರನ್ನು ಕೂಡ ಕರೆ ತಂದಿದ್ದರು. ಇಬ್ಬರಲ್ಲಿ ಒಬ್ಬ ಯುವತಿ ವರನ ರೀತಿ ತಯಾರಿ ನಡೆಸಿಕೊಂಡು, ಕಾರ್ತಿಕ್ ಶುಕ್ಲಾ ಎಂಬ ಹೆಸರಿನ ಆಧಾರ್ ಕಾರ್ಡ್ ಕೂಡ ಮಾಡಿಸಿದ್ದಳು.

    ಮದುವೆಯಾದ ಕೆಲವು ದಿನಗಳ ನಂತರ ವಧುವಿನ ಕುಟುಂಬದವರಿಗೆ ವರ ಹೆಣ್ಣು ಎಂಬುದು ತಿಳಿಯಿತ್ತು. ಮದುವೆಯಾದ ನಂತರ ಪಕ್ಕದ ಮನೆಯವರು ಫೋಟೋಗಳನ್ನು ನೋಡಿದ್ದಾರೆ. ಈ ಸಂದರ್ಭದಲ್ಲಿ ಮದುವೆಯಾದ ಗಂಡು ಹುಡುಗನಲ್ಲ ಎನ್ನುವ ವಿಚಾರ ತಿಳಿದಿದೆ. ಈ ವಿಚಾರ ಪ್ರಚಾರ ಪಡೆದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಈಗ ವೈರಲ್ ಆಗಿದೆ.

    ಈ ವಿಚಾರದ ಬಗ್ಗೆ ಪೊಲೀಸರು ಪ್ರತಿಕ್ರಿಯಿಸಿ, ಮದುವೆಯಾದ ಬಗ್ಗೆ ಯಾವೊಂದು ಕುಟುಂಬ ದೂರು ದಾಖಲಿಸಿಲ್ಲ. ಹೀಗಾಗಿ ನಾವು ಯಾವುದೇ ಕ್ರಮಕೈಗೊಳ್ಳಲು ಸಾಧ್ಯವಿಲ್ಲ. ಇಬ್ಬರು ವಯಸ್ಕರಾಗಿದ್ದು, ಅವರನ್ನು ದೂರ ಮಾಡಲು ಆಗುವುದಿಲ್ಲ ಎಂದು ತಿಳಿಸಿದ್ದಾರೆ.