Tag: ಸಲಿಂಗಕಾಮ

  • ನೀನೇನು ಸಲಿಂಗಕಾಮಿಯೇ?: ಕಿರಾತಕಿ ಹುಡುಗಿ ಮೇಲೆ ಅನುಮಾನ ಪಟ್ಟ ಫ್ಯಾನ್ಸ್

    ನೀನೇನು ಸಲಿಂಗಕಾಮಿಯೇ?: ಕಿರಾತಕಿ ಹುಡುಗಿ ಮೇಲೆ ಅನುಮಾನ ಪಟ್ಟ ಫ್ಯಾನ್ಸ್

    ಶ್ ನಟನೆಯ ಕಿರಾತಕ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಓವಿಯಾ, ಲೈಂಗಿಕ ವಿಷಯದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಈ ಹಿಂದೆ ಅವರು ವೇಶ್ಯಾವಾಟಿಕೆಯನ್ನು ಕಾನೂನುಬದ್ಧ ಮಾಡಿ ಎಂದು ಸ್ಟೇಟ್ ಮೆಂಟ್ ಕೊಟ್ಟಿದ್ದರು. ಅದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈಗ ಸೆಕ್ಸ್ ಬಗ್ಗೆ ಮಾತನಾಡಿದ್ದಾರೆ ಓವಿಯಾ. ಈ ಕಾರಣದಿಂದಾಗಿ ಅಭಿಮಾನಿಯೊಬ್ಬ ಬೆಂಕಿ ರೀತಿಯ ಪ್ರಶ್ನೆ ಕೇಳಿದ್ದಾನೆ.

    ಕೇವಲ ಸೆಕ್ಸ್ ಗಾಗಿ ನಾನು ಮದುವೆ ಆಗಲಾರೆ. ಸೆಕ್ಸ್ ಮಾಡುವುದಕ್ಕಾಗಿ ಹುಡುಗನನ್ನು ಮದುವೆಯಾಗಿ ಜೀವನ ಪೂರ್ತಿ ಅವನ ಸೇವೆ ಮಾಡಲಾರೆ ಎಂದು ಸಂದರ್ಶನದಲ್ಲಿ ಹೇಳಿಕೆ ನೀಡಿದ್ದಾರೆ. ಈ ಮಾತು ಕೇಳಿದ ಅನೇಕರು ‘ನೀನೇನು ಸಲಿಂಗಕಾಮಿಯೇ?’ (Homosexuality) ಎಂದು ಪ್ರಶ್ನೆ ಮಾಡಿದ್ದಾರೆ.

    ನಟಿ ಓವಿಯಾ (Oviya) ಅಚ್ಚರಿಯ ಹೇಳಿಕೆ ಕೊಡುತ್ತಲೇ ಸುದ್ದಿ ಆಗುತ್ತಿದ್ದಾರೆ. ಅವರು ಆಡಿದ ಮಾತುಗಳು ಸಾಕಷ್ಟು ಚರ್ಚೆಗೂ ಕಾರಣವಾಗಿವೆ. ಕೆಲವರು ಓವಿಯಾ ಮಾತಿಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದರೆ, ಇನ್ನೂ ಕೆಲವರು ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ.

    ಮೊನ್ನೆಯಷ್ಟೇ ಅವರು ಅತ್ಯಾಚಾರ ಕುರಿತಂತೆ ಮಾತನಾಡಿ ‘ವೇಶ್ಯಾವಾಟಿಕೆಯನ್ನು (Prostitution) ಕಾನೂನುಬದ್ಧ ಮಾಡಿದರೆ, ಅತ್ಯಾಚಾರವನ್ನು ತಡೆಗಟ್ಟಬಹುದು. ಅತ್ಯಾಚಾರಕ್ಕೆ ಕಡಿವಾಣ ಹಾಕಲು ಇದೊಂದು ಸೂಕ್ತ ಮಾರ್ಗ’ ಎಂದು ಅವರು ಅಭಿಪ್ರಾಯ ಪಟ್ಟಿದ್ದರು. ಜೊತೆಗೆ ಲೈಂಗಿಕ ಶಿಕ್ಷಣದ ಬಗ್ಗೆಯೂ ಮಾತನಾಡಿದ್ದರು.

     

    ಎಲ್ಲರಿಗೂ ಲೈಂಗಿಕ ಆಸಕ್ತಿಗಳು ಇವೆ. ಅದನ್ನು ಅದುಮಿಟ್ಟುಕೊಂಡು ಮುಖವಾಡ ಹಾಕಿಕೊಂಡು ಬದುಕುತ್ತಿದ್ದಾರೆ. ಮನುಷ್ಯರಿಗೆ ಸಹಜವಾದದ್ದು ಇರಲೇಬೇಕು ಎಂದು ಓವಿಯಾ ಮಾತನಾಡಿದ್ದರು. ಈ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಕೂಡ ಆಗಿತ್ತು. ಓವಿಯಾಗೆ ಅವಕಾಶಗಳು ಕಡಿಮೆ ಆಗುತ್ತಿವೆ. ಹಾಗಾಗಿ ಈ ರೀತಿ ಮಾತನಾಡಿ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡಿದ್ದರು.

  • ಸಲಿಂಗಕಾಮದ ಶಂಕೆ – ಮಹಿಳೆಯರಿಬ್ಬರನ್ನು ಥಳಿಸಿ, ಖಾಸಗಿ ಭಾಗಕ್ಕೆ ಕಬ್ಬಿಣದ ರಾಡ್‌ನಿಂದ ಸುಟ್ಟ ದುರುಳರು

    ಸಲಿಂಗಕಾಮದ ಶಂಕೆ – ಮಹಿಳೆಯರಿಬ್ಬರನ್ನು ಥಳಿಸಿ, ಖಾಸಗಿ ಭಾಗಕ್ಕೆ ಕಬ್ಬಿಣದ ರಾಡ್‌ನಿಂದ ಸುಟ್ಟ ದುರುಳರು

    ಕೋಲ್ಕತ್ತಾ: ಇಬ್ಬರು ಮಹಿಳೆಯರನ್ನು (Women) ಸಲಿಂಗಕಾಮಿಗಳು (Lesbian) ಎಂದು ಶಂಕಿಸಿ, ಮೂವರು ಪರುಷರ ಗುಂಪು ಅವರಿಬ್ಬರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ, ಬಿಸಿ ಕಬ್ಬಿಣದ ರಾಡ್‌ನಿಂದ ಖಾಸಗಿ ಭಾಗವನ್ನು ಸುಟ್ಟಿರುವ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ (West Bengal) ಮುರ್ಷಿದಾಬಾದ್ ಪ್ರದೇಶದಲ್ಲಿ ನಡೆದಿರುವುದಾಗಿ ವರದಿಯಾಗಿದೆ.

    ಆಘಾತಕಾರಿ ಘಟನೆ ಅಕ್ಟೋಬರ್ 25ರಂದು ಜಿಲ್ಲೆಯ ಸಾಗರ್ದಿಘಿ ಗ್ರಾಮದಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತ ಮಹಿಳೆಯರನ್ನು ಪುರುಷರು ಲೈಂಗಿಕ ಪ್ರವೃತ್ತಿಗಾಗಿ ಥಳಿಸಿದ್ದಾರೆ ಎಂದು ತಿಳಿದುಬಂದಿದೆ.

    ಇಬ್ಬರು ಮಹಿಳೆಯರು ಮಲಗಿದ್ದ ಸಂದರ್ಭ ಆರೋಪಿಗಳು ಕೊಠಡಿಯ ಬಾಗಿಲು ಒಡೆದು ಬಂದಿದ್ದಾರೆ. ಇಬ್ಬರು ಮಹಿಳೆಯರು ಒಂದೇ ಬೆಡ್‌ನಲ್ಲಿ ಮಲಗಿದ್ದಕ್ಕೆ ಅವರಿಬ್ಬರು ಸಲಿಂಗಕಾಮಿಗಳು ಎಂದು ಆರೋಪಿಸಿ ಅವರಿಬ್ಬರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಬಾಲಕಿ ಮೇಲೆ 6 ಹುಡುಗರಿಂದ ಅತ್ಯಾಚಾರ – ಕೃತ್ಯ ಮೊಬೈಲ್‌ನಲ್ಲಿ ಸೆರೆ ಹಿಡಿದು ವಿಕೃತಿ

    ಮೂವರು ಪುರುಷರು ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಲು ಪ್ರಯತ್ನಿಸಿದ್ದಾರೆ. ಆದರೆ ಇಬ್ಬರು ಸಂತ್ರಸ್ತೆಯರು ಸ್ಥಳದಿಂದ ತಪ್ಪಿಸಿಕೊಂಡು ಹೋಗಿ, ಹೊಲದಲ್ಲಿ ಅಡಗಿ ಕೂತಿದ್ದಾರೆ. ಇಬ್ಬರ ಮೇಲೆ ಬೆಂಕಿ ಕಡ್ಡಿ ಹಾಗೂ ಮದ್ಯದ ಬಾಟಲಿಗಳಿಂದಲೂ ಹಲ್ಲೆ ನಡೆಸಿರುವುದಾಗಿ ಆರೋಪಿಸಿದ್ದಾರೆ.

    KILLING CRIME

    ಘಟನೆಯ ಬಗ್ಗೆ ಸಂತ್ರಸ್ತ ಮಹಿಳೆಯರು ನವೆಂಬರ್ 3 ರಂದು ಪೊಲೀಸರಿಗೆ ದೂರು ನೀಡಿದ್ದಾರೆ. ಒಬ್ಬ ಮಹಿಳೆ ಮತ್ತೊಬ್ಬಳೊಂದಿಗೆ ಸಂಬಂಧ ಇದ್ದುದಾಗಿಯೂ ಒಪ್ಪಿಕೊಂಡಿದ್ದಾರೆ. ಆರೋಪಿಗಳಲ್ಲೊಬ್ಬ ಸಂತ್ರಸ್ತೆಯೊಬ್ಬರ ಸಂಬಂಧಿಯೂ ಇದ್ದ ಎಂದು ಮಹಿಳೆಯರು ದೂರು ನೀಡಿದ್ದಾರೆ. ಇದನ್ನೂ ಓದಿ: ಅಪ್ರಾಪ್ತ ಮಗಳ ಮೇಲೆ ತಂದೆಯಿಂದಲೇ ನಿರಂತರ ಅತ್ಯಾಚಾರ – ಪತಿ ವಿರುದ್ಧ ಪತ್ನಿ ದೂರು

    ಘಟನೆಗೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಇನ್ನಿಬ್ಬರ ಬಂಧನಕ್ಕೆ ಶೋಧ ನಡೆಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಲಿಂಗಿಯ ಕಾಟದಿಂದ ಬೇಸತ್ತ ಯುವಕ ಆತ್ಮಹತ್ಯೆಗೆ ಶರಣು

    ಸಲಿಂಗಿಯ ಕಾಟದಿಂದ ಬೇಸತ್ತ ಯುವಕ ಆತ್ಮಹತ್ಯೆಗೆ ಶರಣು

    ಧಾರವಾಡ: ದಾವಣಗೆರೆ (Davanagere) ಯ ಬೆನ್ನಲ್ಲೇ ಇದೀಗ ಧಾರವಾಡದಲ್ಲಿಯೂ ಸಲಿಂಗಕಾಮದ ಸುದ್ದಿಯೊಂದು ಹೊರಬಿದ್ದಿದೆ. ಸಲಿಂಗಕಾಮಿಯ ಕಾಟಕ್ಕೆ ಯುವಕನೋರ್ವ ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ.

    ಯಾಸೀನ್ ರೋಟಿವಾಲೆ ಮೃತ ಯುವಕನಾಗಿದ್ದು, ಈತ ಧಾರವಾಡ ಅತ್ತಿಕೊಳ್ಳದ ನಿವಾಸಿ. ವೃತ್ತಿಯಲ್ಲಿ ಆಟೊ ಡ್ರೈವರ್ ಆಗಿದ್ದ ಇವನು, ಕಳೆದ ಅಕ್ಟೋಬರ್ 12 ರಂದು ತನ್ನ ಮನೆಯಿಂದ ಹೊರ ಹೋಗಿದ್ದ. ನಂತರ ಅಕ್ಟೋಬರ್ 15 ರಂದು ಧಾರವಾಡದ ಕೆಲಗೇರಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

    ಪವನ್ ಬ್ಯಾಳಿ ಎಂಬವನ ಜೊತೆ ಯಾಸೀನ್‍ಗೆ ಗೆಳೆತನವಿತ್ತು. ಆದರೆ ಪವನ್ ಸಲಿಂಗಕಾಮಿ (Homosexual). ಈತನ ಕಾಟಕ್ಕೆ ಯಾಸೀನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಯಾಸೀನ್ ತಂದೆ ರಫೀಕ್ ಆರೋಪ ಮಾಡುತ್ತಿದ್ದಾರೆ. ಯಾಸೀನ್ ಹಾಗೂ ಪವನ್ ಮಧ್ಯೆ ಏಳೆಂಟು ತಿಂಗಳಿನಿಂದ ಗೆಳೆತನ ಇತ್ತು. ಈ ಗೆಳೆತನ ಸಲಿಂಗಕಾಮಕ್ಕೂ ಕಾರಣವಾಗಿತ್ತು. ಅಲ್ಲದೇ ಪವನ್ ಎಲ್ಲರ ಮುಂದೆ ನಾನು ಯಾಸೀನ್‍ನ್ನು ಮದುವೆ (Same Sex Marriage) ಮಾಡಿಕೊಂಡಿದ್ದೇನೆ ಎಂದೂ ಹೇಳಿದ್ದ. ಈ ಗೆಳೆತನ (Friendship) ಮತ್ತೊಂದು ಸ್ವರೂಪ ಪಡೆದುಕೊಂಡಿತ್ತು.

    ಪವನ್ ಯಾಸೀನ್‍ಗೆ ಪ್ರತಿನಿತ್ಯ ಫೋನ್ ಮಾಡಿ ತನ್ನ ಸಂಪರ್ಕಕ್ಕೆ ಬರುವಂತೆ ಕಿರುಕುಳ ನೀಡುತ್ತಿದ್ದನಂತೆ. ಅಲ್ಲದೇ ಅಕ್ಟೋಬರ್ 12 ರಂದು ಪವನ್, ಯಾಸೀನ್ ಜೊತೆಯೇ ಇದ್ದ ಎಂಬುದು ಯಾಸೀನ್ ಪೋಷಕರ ಆರೋಪವಾಗಿದೆ. ಪವನ್ ನೀಡುತ್ತಿದ್ದ ಈ ಕಿರುಕುಳದಿಂದಲೇ ಬೇಸತ್ತು ಯಾಸೀನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಯಾಸೀನ್ ತಂದೆ ರಫೀಕ್ ವಿದ್ಯಾಗಿರಿ ಠಾಣೆ (Vidyagiri Police Station) ಯಲ್ಲಿ ದೂರು ನೀಡಿದ್ದು, ಸದ್ಯ ಪವನ್‍ನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಯುವತಿಯರಿಬ್ಬರ ನಡುವೆ ಪ್ರೇಮಾಂಕುರ- ಬೇರೆಯವಳೊಂದಿಗೆ ಮಾತಾಡಿದ್ದಕ್ಕೆ ರೇಡಿಯಂ ಕಟರ್‌ನಿಂದ ಹಲ್ಲೆಗೈದ್ಳು!

    ಯಾಸೀನ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಪವನ್ ಹಾಗೂ ಈತನ ಮಧ್ಯೆ ಜಗಳ ಕೂಡ ಆಗಿತ್ತು. ಇದರಿಂದ ಬೇಸತ್ತ ಯಾಸೀನ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಅಲ್ಲದೇ ಸಾಯುವ ಮುನ್ನ ತನ್ನ ತಂದೆಗೂ ಕರೆ ಮಾಡಿ, ಪವನ್ ಕಿರುಕುಳದ ಬಗ್ಗೆ ಹೇಳಿದ್ದ. ತನ್ನ ಸ್ನೇಹಿತರಿಗೂ ಮೆಸೇಜ್ ಮಾಡಿದ್ದ ಯಾಸೀನ್, ತನ್ನ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಮನವಿ ಮಾಡಿದ್ದ.

    ಸದ್ಯ ಸಲಿಂಗಕಾಮಿಯ ಕಾಟಕ್ಕೆ ಬೇಸತ್ತ ಯುವಕನೋರ್ವ ತನ್ನ ಜೀವವನ್ನೇ ಕಳೆದುಕೊಂಡಿದ್ದು ವಿಪರ್ಯಾಸವೇ ಸರಿ. ಈ ರೀತಿಯ ಕಾಟ ನೀಡಿದ ಸಲಿಂಗಕಾಮಿಯನ್ನು ಪೊಲೀಸರು ಕಂಬಿ ಹಿಂದೆ ತಳ್ಳಿದ್ದು, ಈ ಪ್ರಕರಣದ ಸಂಬಂಧ ಇನ್ನೂ ಹೆಚ್ಚಿನ ವಿಚಾರಣೆ ನಡೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಯುವತಿಯರಿಬ್ಬರ ನಡುವೆ ಪ್ರೇಮಾಂಕುರ- ಬೇರೆಯವಳೊಂದಿಗೆ ಮಾತಾಡಿದ್ದಕ್ಕೆ ರೇಡಿಯಂ ಕಟರ್‌ನಿಂದ ಹಲ್ಲೆಗೈದ್ಳು!

    ಯುವತಿಯರಿಬ್ಬರ ನಡುವೆ ಪ್ರೇಮಾಂಕುರ- ಬೇರೆಯವಳೊಂದಿಗೆ ಮಾತಾಡಿದ್ದಕ್ಕೆ ರೇಡಿಯಂ ಕಟರ್‌ನಿಂದ ಹಲ್ಲೆಗೈದ್ಳು!

    ದಾವಣಗೆರೆ: ಸಾಮಾನ್ಯವಾಗಿ ಹುಡುಗ-ಹುಡುಗಿ ನಡುವೆ ಪ್ರೀತಿ ಚಿಗುರುವುದನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ ದಾವಣಗೆರೆ (Davanagere) ಯಲ್ಲಿ ವಿಚಿತ್ರ ಘಟನೆಯೊಂದು ನಡೆದು ಹೋಗಿದೆ.

    ಪದವಿ ವ್ಯಾಸಂಗ ಮಾಡ್ತಿರುವ ಯುವತಿಯರಿಬ್ಬರ ನಡುವೆ ಪ್ರೀತಿ ಚಿಗುರಿದ್ದು, ಇದು ಸಲಿಂಗಕಾಮಕ್ಕೆ ತಿರುಗಿದೆ. ದುರಾದೃಷ್ಟ ಅಂದ್ರೆ ಆ ಯುವತಿಯು ಪರ ಯುವತಿಯೊಂದಿಗೆ ಮಾತನಾಡಿದ್ದಾಳೆ ಎಂಬ ಒಂದೇ ಕಾರಣಕ್ಕೆ ಸಲಿಂಗಕಾಮಿ (Homosexuality) ರೇಡಿಯಂ ಕಟರ್‌ನಿಂದ ಹಲ್ಲೆ ನಡೆಸಿ ಜೈಲು ಸೇರಿದ್ದಾಳೆ. ಇದನ್ನೂ ಓದಿ: ಗಾಜಿಯಾಬಾದ್ ಗ್ಯಾಂಗ್ ರೇಪ್ ಸುಳ್ಳು – ಕಥೆ ಕಟ್ಟಿದ ಮಹಿಳೆ

    ಇದೀಗ ಯುವತಿಯ ಮೇಲೆ ರೇಡಿಯಂ ಕಟರ್ (Radium Cutter) ನಿಂದ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಸಲಿಂಗ ಕಾಮವೇ ಹಲ್ಲೆಗೆ ಪ್ರಮುಖ ಕಾರಣ ಎಂದು ಪಬ್ಲಿಕ್ ಟಿವಿಗೆ ಎಸ್‍ಪಿಸಿಬಿ ರಿಷ್ಯಂತ್ ಸ್ಫೋಟಕ ಮಾಹಿತಿ ನೀಡಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಸತ್ಯ ಬಯಲಿಗಿದ್ದು, ದಾವಣಗೆರೆ ಶಾಂತಿ ನಗರದಲ್ಲಿ ಗುರುವಾರ ಸಂಜೆ ನಡೆಯಬಾರದ ಘಟನೆ ನಡೆದು ಹೋಗಿತ್ತು. ಇದನ್ನೂ ಓದಿ: ಗಂಡ-ಹೆಂಡತಿ ಜಗಳ ಬಿಡಿಸಲು ಬಂದ ನೆರೆಮನೆಯವನೇ ಕೊಲೆಯಾದ

    ಲಾಸಿ ಎನ್ನುವ ಯುವತಿ, ಸ್ನೇಹ ಎನ್ನುವ ಯುವತಿಗೆ ರೇಡಿಯಂ ಕಟರ್ ನಿಂದ ಹಲ್ಲೆ ನಡೆಸಿ ತಾನು ಕೈ ಕುಯ್ದುಕೊಂಡಿದ್ದ ಘಟನೆಯಿಂದ ಇಡೀ ಶಾಂತಿನಗರ (Shanthinagar) ಬೆಚ್ಚಿಬಿದ್ದಿತ್ತು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಲಾಸಿ ಹಾಗೂ ಸ್ನೇಹ ಇಬ್ಬರನ್ನು ಸ್ಥಳೀಯರು ಹಾಗೂ ಕುಟುಂಬಸ್ಥರು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಿದ್ದರು. ಇಬ್ಬರು ಕೂಡ ಪ್ರಾಣಪಾಯದಿಂದ ಪಾರಾಗಿದ್ದಾರೆ.‌ ಇದನ್ನೂ ಓದಿ: ಬೌದ್ಧ ಸನ್ಯಾಸಿಯ ವೇಷ ಧರಿಸಿ ದೇಶ ವಿರೋಧಿ ಚಟುವಟಿಕೆಯ ಶಂಕೆ – ಚೀನೀ ಮಹಿಳೆ ಬಂಧನ

    ಖಾಸಗಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡ್ತಿರುವ ಲಾಸಿ ಹಾಗೂ ಸ್ನೇಹ ಇಬ್ಬರು ಯುವತಿಯರು ಸಾಕಷ್ಟು ವರ್ಷಗಳಿಂದ ಸ್ನೇಹಿತರಾಗಿದ್ದರು. ಯುವತಿ ಸ್ನೇಹಳು ಪರ ಯುವತಿಯ ಜೊತೆ ಮಾತನಾಡಿ ಆತ್ಮೀಯವಾಗಿ ಇದ್ದಿದ್ದಕ್ಕೆ ಲಾಸಿಗೆ ಸಿಟ್ಟು ಬಂದಿದೆ. ಆದ್ದರಿಂದ ಲಾಸಿ ನಿನ್ನೆ ಸ್ನೇಹ ಮನೆಗೆ ನುಗ್ಗಿ ರೇಡಿಯಂ ಕಟರ್ ನಿಂದ ಮನಬಂದಂತೆ ಕುತ್ತಿಗೆ, ಕೆನ್ನೆ ಹಾಗೂ ಕೈಗೆ ಗಂಭೀರ ಗಾಯಗೊಳಿಸಿದ್ದಾಳೆ. ಬಳಿಕ ತಾನು ಕೂಡ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

    ಘಟನೆ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಸಲಿಂಗಕಾಮಕ್ಕೆ ವಿದ್ಯಾರ್ಥಿ ಬಳಸಿಕೊಂಡ ಆರೋಪ – ಮುಖ್ಯ ಶಿಕ್ಷಕ ಬಂಧನ

    ಸಲಿಂಗಕಾಮಕ್ಕೆ ವಿದ್ಯಾರ್ಥಿ ಬಳಸಿಕೊಂಡ ಆರೋಪ – ಮುಖ್ಯ ಶಿಕ್ಷಕ ಬಂಧನ

    ನೆಲಮಂಗಲ: ವಿಶೇಷ ಮಕ್ಕಳ ವಸತಿ ಶಾಲೆಯಲ್ಲಿ ಮುಖ್ಯ ಶಿಕ್ಷಕನೊಬ್ಬ ವಿಕೃತಿ ಮೆರೆದ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.

    ಸಲಿಂಗಕಾಮಕ್ಕೆ ವಿದ್ಯಾರ್ಥಿ ಬಟ್ಟೆ ಬಿಚ್ಚಿಸುತ್ತಿದ್ದ ಮುಖ್ಯ ಶಿಕ್ಷಕ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಡಾಬಸ್ ಪೇಟೆ ವಿಶೇಷ ಮಕ್ಕಳ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಸಲಿಂಗಕಾಮಕ್ಕೆ ವಿದ್ಯಾರ್ಥಿ ಬಳಸಿಕೊಂಡ ಆರೋಪದಡಿ ಮುಖ್ಯ ಶಿಕ್ಷಕ ಎಸ್.ರಂಗನಾಥ್ ನನ್ನ ಡಾಬಸ್ ಪೇಟೆ ಪೊಲೀಸರು ಬಂಧಿಸಿದ್ದಾರೆ.

    ಈ ಬಗ್ಗೆ ವಸತಿ ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿ ಶಿಕ್ಷಕ ರಂಗನಾಥ್, ಒತ್ತಾಯದ ಸಲಿಂಗಕಾಮ ಐಪಿಸಿ 377 ಹಾಗೂ ಜೀವ ಬೆದರಿಕೆ ಅಡಿ 506 ಆರೋಪದಡಿ ಪ್ರಕರಣ ಎಫ್ ಐಆರ್ ದಾಖಲಾಗಿದ್ದು, ಕೋವಿಡ್ ನಿಂದಾಗಿ 7 ವಿಶೇಷ ಮಕ್ಕಳನ್ನು ಮಾತ್ರ ಶಾಲೆಯಲ್ಲಿಟ್ಟುಕೊಂಡಿದ್ದರು ಎನ್ನಲಾಗಿದೆ. ಉಳಿದವರನ್ನು ಮನೆಗೆ ಕಳುಹಿಸಲಾಗಿತ್ತು ಎಂದು ಕಾರ್ಯದರ್ಶಿ ದೂರಿನಲ್ಲಿ ತಿಳಿಸಿದ್ದಾರೆ. ಮಾಗಡಿ ತಾಲೂಕಿನ ರಂಗನಾಥ್ 2009 ರಿಂದ 2010 ಶಾಲೆ ಮುಖ್ಯ ಶಿಕ್ಷಕನಾಗಿದ್ದ.

    ಇತ್ತಿಚ್ಚೆಗಷ್ಟೆ ಊರಿಗೆ ಹೋದಾಗ ಘಟನೆ ಬಗ್ಗೆ ತಾಯಿಗೆ ಆ ಬಾಲಕ ತಿಳಿಸಿದ್ದ. ಬಳಿಕ ತಾಯಿ ಶಾಲಾ ಆಡಳಿತ ಮಂಡಳಿಗೆ ಹೇಳಿದ್ದರು ಎನ್ನಲಾಗಿ ವಿಚಾರಣೆ ಬಳಿಕ ಆಂತರಕ ತನಿಖೆ ನಡೆಸಿದ್ದ ಶಾಲಾ ಆಡಳಿತ ಮಂಡಳಿ ರಂಗನಾಥ್ ಸಲಿಂಗ ಕಾಮದ ಕೃತ್ಯ ಆರೋಪ ಸಾಬೀತಾಗಿತ್ತು. ಕೂಡಲೇ ಡಾಬಸ್ ಪೇಟೆ ಠಾಣೆಗೆ ದೂರು ನೀಡಿದ್ದರು. ಕೇಸ್ ದಾಖಲಿಸಿ ಆರೋಪಿ ರಂಗನಾಥ್ ನನ್ನ ಪೊಲೀಸರು ಬಂಧಿಸಿ ನ್ಯಾಯಾಲಯದ ವಶಕ್ಕೆ ನೀಡಲಾಗಿದೆ.

  • ಸಲಿಂಗಕಾಮ ಸಿನಿಮಾ ನಿರ್ಮಾಣದ ಕನಸು ಬಿಚ್ಚಿಟ್ಟ ಕರಣ್ ಜೋಹರ್

    ಸಲಿಂಗಕಾಮ ಸಿನಿಮಾ ನಿರ್ಮಾಣದ ಕನಸು ಬಿಚ್ಚಿಟ್ಟ ಕರಣ್ ಜೋಹರ್

    ಮುಂಬೈ: ಬಾಲಿವುಡ್ ಅಂಗಳದಲ್ಲಿ ರೋಮ್ಯಾಂಟಿಕ್ ಸಿನಿಮಾ ಮೂಲಕವೇ ಖ್ಯಾತಿ ಪಡೆದಿರುವ ನಿರ್ದೇಶಕ ಕರಣ್ ಜೋಹರ್ ಸಲಿಂಗಮಕಾಮ ಪ್ರೀತಿಯ ಸಿನಿಮಾ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.

    ಸ್ವಿಸ್‍ನ ದಾವೋಸ್ ನಗರದಲ್ಲಿ ನಡೆದಿದ್ದ ಎಕಾನಮಿಕ್ ಫೋರಮ್‍ನಲ್ಲಿ ತಮ್ಮ ಮುಂದಿನ ನಡೆಯ ಕುರಿತಾಗಿ ಹೇಳಿಕೊಂಡಿದ್ದಾರೆ. ಕರಣ್ ಜೋಹರ್ ಅವರ ವೃತ್ತಿ ಜೀವನವು ಹೆಚ್ಚಾಗಿ ರೋಮ್ಯಾಂಟಿಕ್ ಸಿನಿಮಾಗಳನ್ನು ಒಳಗೊಂಡಿದೆ. ಹೀಗಾಗಿ ಮತ್ತೊಂದು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.

    ಬಾಲಿವುಡ್‍ನ ದೋಸ್ತಾನಾ ಸಲಿಂಗಕಾಮ ಸಿನಿಮಾವಾಗಿದ್ದರೂ, 2008ರಲ್ಲಿಯೇ ಬಿಡುಗಡೆಯಾಗಿತ್ತು. ಆದರೆ ಪ್ರಸ್ತುತ ದಿನಮಾನಕ್ಕೆ ತಕ್ಕಂತೆ ರೋಮ್ಯಾನ್ಸ್ ಸಿನಿಮಾ ಮಾಡುವ ನಿರ್ಧಾರವನ್ನು ಕೈಗೊಂಡಿದ್ದೇನೆ. ಈ ಸಿನಿಮಾದಲ್ಲಿ ಇಬ್ಬರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಇಲ್ಲಿಯವರೆಗೂ ಯಾವ ನಟರನ್ನೂ ಆಯ್ಕೆ ಮಾಡಿಲ್ಲ ಎಂದು ಕರಣ್ ಜೋಹರ್ ತಿಳಿಸಿದ್ದಾರೆ.

    ಸಲಿಂಗಕಾಮಿ ಪ್ರಣಯ ಮತ್ತು ಪ್ರೀತಿಯನ್ನು ಆಧರಿಸಿದ ಕೆಲವು ಸಿನಿಮಾಗಳು ಭಾರತದಲ್ಲಿ ವಿವಿಧ ರೀತಿಯ ವಿವಾದಗಳಿಗೆ ಕಾರಣವಾಗಿವೆ. ಶಬಾನಾ ಆಜ್ಮಿ ಮತ್ತು ನಂದಿತಾ ದಾಸ್ ನಟನೆಯ, ಇಂಡೋ-ಕೆನಡಿಯನ್ ಫಿಲ್ಮ್ ಮೇಕರ್ ದೀಪಾ ಮೆಹ್ತಾ ನಿರ್ಮಾಣದಲ್ಲಿ 1996ರಲ್ಲಿ ತೆರೆಕಂಡ ಫೈರ್ ಸಿನಿಮಾಗೆ ಶಿವಸೇನಾ ಮತ್ತು ಬಜರಂಗ ದಳ ಚಲನಚಿತ್ರ ಬಿಡುಗಡೆಗೆ ಅಡ್ಡಿ ಪಡಿಸಿದವು ಎಂದರು.

    ಸಿನಿಮಾ ನಿರ್ಮಾಪಕರು “ನಾನೊಬ್ಬ ಪ್ರಮುಖ ಸಿನಿಮಾ ನಿರ್ಮಾಪಕನಾಗಿದ್ದು, ಸಲಿಂಗಕಾಮ ಪ್ರೀತಿ ವಿಷಯದ ಸಿನಿಮಾ ಮಾಡಬಹುದು” ಅಂತ ತಿಳಿಸಿದ್ದಾರೆ. ಹೀಗಾಗಿ ಸಲಿಂಗಕಾಮಿ ಪ್ರೇಮ ಕಥೆಯನ್ನು ಮಾಡುವ ಇಚ್ಛೆಯನ್ನು ಹೊಂದಿರುವ ಮತ್ತು ಈ ಚಿತ್ರದಲ್ಲಿ ಇಬ್ಬರು ಪ್ರಮುಖ ನಟರು ಅಭಿನಯಿಸಲಿದ್ದಾರೆ. ಆದರೆ ಇಂತವರೇ ಸಿನಿಮಾದಲ್ಲಿ ಅಭಿನಯಿಸಬೇಕು ಅಂತ ನಿರ್ಧಾರ ಮಾಡಿಲ್ಲ ಎಂದು ತಿಳಿಸಿದ್ದಾರೆ.

    ಭಾರತೀಯ ಚಲನಚಿತ್ರ ಭ್ರಾತೃತ್ವವನ್ನು ದಾವೋಸ್ ನಲ್ಲಿ ಪ್ರತಿನಿಧಿಸಲು ನನಗೆ ತುಂಬಾ ಖುಷಿಯಾಗಿದೆ. ನಮ್ಮ ದೇಶದ ಸಾಮಾಜಿಕ ಹಾಗೂ ಸಿನಿಮಾ ಉದ್ಯಮಕ್ಕೆ ಬೇಕಾದ ಅಂಶಗಳ ಕುರಿತಾಗಿ ಇಲ್ಲಿನ ಜನರ ಜೊತೆಗೆ ಚರ್ಚೆ ನಡೆಸುತ್ತಿರುವೆ. ಇದು ನನಗೆ ತುಂಬಾ ಜವಾಬ್ದಾರಿ ತಂದುಕೊಟ್ಟಿದೆ. ಅಷ್ಟೇ ಅಲ್ಲದೆ ನನ್ನ ಸಿನಿಮಾವನ್ನು ದಾವೋಸ್ ನಲ್ಲಿ ಪ್ರತಿನಿಧಿಸಲು ಸಂತೋಷವಾಗಿದೆ ಎಂದು ಕರಣ್ ಜೋಹರ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆರ್ಮಿಯಲ್ಲಿ ಸಲಿಂಗಕಾಮಕ್ಕೆ ಅವಕಾಶವಿಲ್ಲ- ಬಿಪಿನ್ ರಾವತ್

    ಆರ್ಮಿಯಲ್ಲಿ ಸಲಿಂಗಕಾಮಕ್ಕೆ ಅವಕಾಶವಿಲ್ಲ- ಬಿಪಿನ್ ರಾವತ್

    ನವದೆಹಲಿ: ಸಲಿಂಗಕಾಮ ಅಪರಾಧವಲ್ಲ ಅಂತ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರೂ ಆರ್ಮಿಗೆ ಇದು ಅನ್ವಯವಾಗುವುದಿಲ್ಲ ಎಂದು ಭೂಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.

    ಸೇನೆಯ ವಾರ್ಷಿಕ ಸುದ್ದಿಗೋಷ್ಠಿ ನಡೆಸಿ ಇಂದು ಮಾತನಾಡಿದ ಅವರು, ಸಲಿಂಗಕಾಮಕ್ಕೆ ಸೇನೆಯಲ್ಲಿ ಅವಕಾಶ ನೀಡಲ್ಲ. ಭಾರತೀಯ ಸೇನೆಯ ಕಾನೂನಿನ ವಿಧಿಗಳ ಪ್ರಕಾರ ಸಲಿಂಗಕಾಮಕ್ಕೆ ಅವಕಾಶವಿಲ್ಲ. ಹೀಗಾಗಿ ಕೋರ್ಟ್ ಆದೇಶವನ್ನು ಸೇನೆಯಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

    ನಾವು ದೇಶದ ಕಾನೂನುಗಳನ್ನು ಮೀರಿದ ವ್ಯಕ್ತಿಗಳಲ್ಲ ಎಂದು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ ಅವರು, ಸೇನೆಗೆ ಸೇರಿದವರು ಕೆಲವು ಹಕ್ಕುಗಳನ್ನು ಕಳೆದುಕೊಳ್ಳುತ್ತಾರೆ. ಇದರಿಂದಾಗಿ ಕೆಲವು ಸಾಮಾನ್ಯರಿಗಿಂತ ನಮಗೆ ಭಿನ್ನವಾಗಿರುತ್ತದೆ. ಈ ನಿಟ್ಟಿನಲ್ಲಿ ಸಲಿಂಗಕಾಮಕ್ಕೆ ಸೇನೆಯಲ್ಲಿ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.

    ಕೋರ್ಟ್ ತೀರ್ಪು ಏನು?:
    ಸಲಿಂಗಕಾಮ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐದು ಜನ ನ್ಯಾಯಾಧೀಶರ ಪೀಠವು ಸೆಪ್ಟೆಂಬರ್ 6ರಂದು ತೀರ್ಪು ನೀಡಿತ್ತು. ಈ ತೀರ್ಪಿನಿಂದಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377ರ ರದ್ದುಗೊಳಿಸಲಾಗಿದೆ. ಐಪಿಸಿ ಸೆಕ್ಷನ್ 377ರ ಪ್ರಕಾರ ಯಾವುದೇ ವ್ಯಕ್ತಿ, ಮಹಿಳೆ ಅಥವಾ ಪ್ರಾಣಿಗಳೊಂದಿಗೆ ನಿಸರ್ಗಕ್ಕೆ ವಿರುದ್ಧವಾಗಿ ಲೈಂಗಿಕ ಕ್ರಿಯೆ ನಡೆಸಿದರೆ ಅದು ಅಪರಾಧವಾಗಿತ್ತು. ಇಂತಹ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಅಥವಾ 10 ವರ್ಷ ಜೈಲು ಹಾಗೂ ದಂಡ ವಿಧಿಸಬಹುದಾಗಿತ್ತು.

    ಕಾಲದ ಜೊತೆ ಕಾನೂನು ಕೂಡ ಬದಲಾಗಬೇಕು ಎಂದು ಹೇಳಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಆರ್. ಫಾಲಿ ನಾರಿಮನ್, ಎ.ಎಂ.ಖಾನ್‍ವಿಲ್ಕರ್, ಡಿ.ವೈ.ಚಂದ್ರಚೂಡ್ ಮತ್ತು ಇಂದೂ ಮಲ್ಹೋತ್ರ ಅವರನ್ನು ಒಳಗೊಂಡ ಈ ಪೀಠವು ಐಪಿಸಿ 377 ಅನ್ನು ಅಸಿಂಧುಗೊಳಿಸಿ ಆದೇಶವನ್ನು ಪ್ರಕಟಿಸಿತ್ತು. ಈ ಮೂಲಕ 156 ವರ್ಷದ ಹಿಂದಿನ ಬ್ರಿಟಿಷ್ ಕಾನೂನು ರದ್ದಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಲಿಂಗಕಾಮಕ್ಕೆ ಕರೆದು ಮೈ ಮೇಲೆ ಇದ್ದ ಚಿನ್ನ, ಬಟ್ಟೆಯನ್ನು ದೋಚುತ್ತಿದ್ದ ಗ್ಯಾಂಗ್ ಅರೆಸ್ಟ್

    ಸಲಿಂಗಕಾಮಕ್ಕೆ ಕರೆದು ಮೈ ಮೇಲೆ ಇದ್ದ ಚಿನ್ನ, ಬಟ್ಟೆಯನ್ನು ದೋಚುತ್ತಿದ್ದ ಗ್ಯಾಂಗ್ ಅರೆಸ್ಟ್

    ಬೆಂಗಳೂರು: ಸಲಿಂಗಕಾಮಕ್ಕೆ ಕರೆದು ಮೈ ಮೇಲೆ ಇದ್ದ ಚಿನ್ನ ಹಾಗೂ ಬಟ್ಟೆಯನ್ನು ಕಿತ್ತುಕೊಂಡು ಕಳುಹಿಸುತ್ತಿದ್ದ ಗ್ಯಾಂಗ್ ಈಗ ಪೊಲೀಸರ ಅತಿಥಿಯಾಗಿದೆ.

    ಪೊಲೀಸರ ಅತಿಥಿಯಾಗಿರುವ ಈ ಗ್ಯಾಂಗ್ ಥ್ರೂತ್ ಪಾಯಿಂಟ್ ಎನ್ನುವ ವೆಬ್ ಸೈಟ್ ಮೂಲಕ ಸಲಿಂಗ ಕಾಮಿಗಳನ್ನು ಆಹ್ವಾನ ಮಾಡುತ್ತಿದ್ದರು. ಸಲಿಂಗ ಕಾಮದಲ್ಲಿ ಆಸಕ್ತಿ ಇರುವವರು ಅವರು ಕರೆದ ಅಡ್ರೆಸ್‍ಗೆ ಕೂಡ ಹೋಗುತ್ತಿದ್ದರು.

    ಸಲಿಂಗಕಾಮಕ್ಕೆ ಎಂದು ಆ ಅಡ್ರೆಸ್‍ಗೆ ಹೋದಾಗ ರಾಬರಿ ಗ್ಯಾಂಗ್ ಅಲ್ಲಿಗೆ ಎಂಟ್ರಿ ಕೊಟ್ಟು ಅವರ ಚಿನ್ನಾಭರಣವನ್ನು ದೋಚುತ್ತಿದ್ದರು. ಅಲ್ಲದೇ ವಿಡಿಯೋ ಮಾಡಿದ್ದೀವಿ ಹಣ ಕೊಡು ಎಂದು ಪೀಡಿಸಿ ಅವರ ಚಿನ್ನಾಭರಣವನ್ನು ಕಿತ್ತುಕೊಂಡು ಕಳುಹಿಸುತ್ತಿದ್ದರು.

    ಇದೇ ರೀತಿ ಮಾಡುತ್ತಿದ್ದ ಪ್ರಭಾಕರ್ ಮತ್ತು ನಾಲ್ವರು ಆರೋಪಿಗಳನ್ನು ಮೈಕೋ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭಾರತದಲ್ಲಿ ಸಲಿಂಗಕಾಮ ಅಪರಾಧವಲ್ಲ: 156 ವರ್ಷದ ಬ್ರಿಟಿಷ್ ಕಾನೂನು ರದ್ದು

    ಭಾರತದಲ್ಲಿ ಸಲಿಂಗಕಾಮ ಅಪರಾಧವಲ್ಲ: 156 ವರ್ಷದ ಬ್ರಿಟಿಷ್ ಕಾನೂನು ರದ್ದು

    ನವದೆಹಲಿ: ಸಲಿಂಗಕಾಮ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಈ ಮೂಲಕ 17 ವರ್ಷಗಳಿಂದ ನಡೆಯುತ್ತಿದ್ದ ಕಾನೂನು ಹೋರಾಟಕ್ಕೆ ಜಯ ಸಿಕ್ಕಿದೆ.

    ಸಲಿಂಗಕಾಮ ಅಪರಾಧ ಎಂದು ಪರಿಗಣಿಸುವ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 377ರ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಕೋರ್ಟ್ ಈ ತೀರ್ಪು ಪ್ರಕಟಿಸಿದೆ. ಕಾಲದ ಜೊತೆ ಕಾನೂನು ಕೂಡ ಬದಲಾಗಬೇಕು ಎಂದು ಹೇಳಿ ಐಪಿಸಿ 377 ಅನ್ನು ಅಸಿಂಧುಗೊಳಿಸಿದೆ. ಈ ಮೂಲಕ 156 ವರ್ಷದ ಹಿಂದಿನ ಬ್ರಿಟಿಷ್ ಕಾನೂನು ರದ್ದಾಗಿದೆ.

    ಇಬ್ಬರು ವಯಸ್ಕರು ಸಮ್ಮತಿಯಿಂದ ನಡೆಸುವ ಲೈಂಗಿಕ ಕ್ರಿಯೆ ಅಪರಾಧವಲ್ಲ ಎಂದು ಘೋಷಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಸಾಂವಿಧಾನಿಕ ಪೀಠ, ಕಳೆದ ಜುಲೈ 17 ರಂದು ತೀರ್ಪು ಕಾಯ್ದಿರಿಸಿತ್ತು.

    ಕೇಂದ್ರ ಸರ್ಕಾರ ಸೆಕ್ಷನ್ 377ರ ರದ್ದತಿ ವಿಚಾರವನ್ನು ನ್ಯಾಯಾಲಯದ ವಿವೇಚನೆಗೆ ಬಿಡುವುದಾಗಿ ಹೇಳಿತ್ತು. ಆದರೆ ಸಲಿಂಗ ವಿವಾಹ ಮತ್ತು ಕೆಲವು ಹಕ್ಕುಗಳ ವಿಚಾರದಲ್ಲಿ ಗೊಂದಲ ಉಂಟಾಗಬಹುದು ಎಂಬ ಕಳವಳವನ್ನು ವ್ಯಕ್ತಪಡಿಸಿತ್ತು.

    ಈ ಹಿಂದೆ ಅಂದರೆ 2009ರಲ್ಲಿ ದೆಹಲಿ ಹೈಕೋರ್ಟ್ ಸಲಿಂಗಕಾಮವು ಅಪರಾಧವಲ್ಲ ಎಂದು ತೀರ್ಪು ನೀಡಿತ್ತು. ಆದರೆ, 2014ರಲ್ಲಿ ಸುಪ್ರೀಂ ಕೋರ್ಟ್, ದೆಹಲಿ ಹೈಕೋರ್ಟ್ ತೀರ್ಪನ್ನು ವಜಾ ಮಾಡಿ, ಸಲಿಂಗಕಾಮವನ್ನು ಅಪರಾಧವೆಂದು ಘೋಷಿಸಿತ್ತು. ನಂತರ ಹೋಟೆಲ್ ಉದ್ಯಮಿ ಕೇಶವ್ ಸೂರಿ ಅವರು ಸೆಕ್ಷನ್ 377ರ ವಿರುದ್ಧ ಅರ್ಜಿ ಸಲ್ಲಿಸಿದ್ದರು. ಇದಾದ ಬಳಿಕ ಹಮ್ಸಫರ್ ಟ್ರಸ್ಟ್ ನ ಅಶೋಕ್ ರಾವ್ ಕವಿ ಮತ್ತು ಆರಿಫ್ ಜಾಫರ್ ಏಪ್ರಿಲ್ 27ರಂದು ಸೆಕ್ಷನ್ ರದ್ದತಿಗೆ ಒತ್ತಾಯಿಸಿ ಅರ್ಜಿ ಸಲ್ಲಿಸಿದ್ದರು. ಮೇ ತಿಂಗಳಿನಿಂದ ನಡೆದ ವಿಚಾರಣೆಯ ತೀರ್ಪು ಇಂದು ಹೊರಬಿದ್ದಿದೆ.

    ಐಪಿಸಿ ಸೆಕ್ಷನ್ 377 ಏನು ಹೇಳುತ್ತೆ?
    ಯಾವುದೇ ವ್ಯಕ್ತಿ, ಮಹಿಳೆ ಅಥವಾ ಪ್ರಾಣಿಗಳೊಂದಿಗೆ ನಿಸರ್ಗಕ್ಕೆ ವಿರುದ್ಧವಾಗಿ ಲೈಂಗಿಕ ಕ್ರಿಯೆ ನಡೆಸಿದರೆ, ಅದು ಅಪರಾಧ. ಇಂತಹ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಅಥವಾ 10 ವರ್ಷ ಜೈಲು ಹಾಗೂ ದಂಡ ವಿಧಿಸಬಹುದಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv