Tag: ಸಲಾಡ್

  • ಮೊಳಕೆಯೊಡೆದ ಹೆಸರುಕಾಳಿನಿಂದ ಮಾಡಿ ಆರೋಗ್ಯಕರ ಕೋಸಂಬರಿ

    ಮೊಳಕೆಯೊಡೆದ ಹೆಸರುಕಾಳಿನಿಂದ ಮಾಡಿ ಆರೋಗ್ಯಕರ ಕೋಸಂಬರಿ

    ನಾವು ಯಾವುದೇ ಸಾಂಪ್ರದಾಯಿಕ ಮದುವೆಗಳಂತಹ ಕಾರ್ಯಕ್ರಮಕ್ಕೆ ಹೋದಾಗ ಊಟದಲ್ಲಿ ಹೆಸರು ಕಾಳು ಇಲ್ಲವೇ ಹೆಸರು ಬೇಳೆಯ ಕೋಸಂಬರಿಯನ್ನು ಮಿಸ್ ಮಾಡದೇ ನೋಡುತ್ತೇವೆ. ಕರ್ನಾಟಕದ ಎಲ್ಲಾ ಭಾಗಗಳಲ್ಲೂ ಈ ಸಲಾಡ್ ತುಂಬಾ ಫೇಮಸ್. ನಾವಿಂದು ಮೊಳಕೆ ಬರಿಸಿದ ಹೆಸರು ಕಾಳಿನಿಂದ ಅತ್ಯಂತ ಆರೋಗ್ಯಕರ, ಪೌಷ್ಟಿಕ ಮಾತ್ರವಲ್ಲದೇ ರುಚಿಕರ ಕೋಸಂಬರಿಯನ್ನು (Sprouted Moong Salad) ಮಾಡುವುದು ಹೇಗೆಂದು ತಿಳಿಸಿಕೊಡುತ್ತೇವೆ. ಈ ಸಿಂಪಲ್ ರೆಸಿಪಿಯನ್ನು ಕೇವಲ ಮದುವೆಯಂತಹ ಕಾರ್ಯಕ್ರಮಗಳಲ್ಲಿ ಯಾಕೆ? ಮನೆಯಲ್ಲೂ ಬೇಕೆಂದಾಗ ಮಾಡಿ ಸವಿಯಿರಿ.

    ಬೇಕಾಗುವ ಪಾರ್ಥಗಳು:
    ಮೊಳಕೆಯೊಡೆದ ಹೆಸರುಕಾಳು – 1 ಕಪ್
    ತುರಿದ ಕ್ಯಾರೆಟ್ – ಅರ್ಧ ಕಪ್
    ದಾಳಿಂಬೆ – ಅರ್ಧ ಕಪ್
    ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ – 2
    ತೆಂಗಿನ ತುರಿ – 2 ಟೀಸ್ಪೂನ್

    ಹೆಚ್ಚಿದ ಕೊತ್ತಂಬರಿ ಸೊಪ್ಪು – ಕಾಲು ಕಪ್
    ನಿಂಬೆ ರಸ – 1 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಸಾಸಿವೆ – 1 ಟೀಸ್ಪೂನ್
    ಹಿಂಗ್ – ಚಿಟಿಕೆ
    ಕರಿಬೇವಿನ ಎಲೆ – ಕೆಲವು ಇದನ್ನೂ ಓದಿ: ಗರಿಗರಿಯಾದ ಗೋಬಿ 65 ಮಾಡಿ ನೋಡಿ

    ಮಾಡುವ ವಿಧಾನ:
    * ಮೊದಲಿಗೆ ಒಂದು ಪಾತ್ರೆಯಲ್ಲಿ ಮೊಳಕೆಯೊಡೆದ ಹೆಸರು ಕಾಳು, ತುರಿದ ಕ್ಯಾರೆಟ್, ದಾಳಿಂಬೆ, ಹಸಿರು ಮೆಣಸಿನಕಾಯಿ, ತೆಂಗಿನ ತುರಿ, ಕೊತ್ತಂಬರಿ ಸೊಪ್ಪು ಹಾಗೂ ನಿಂಬೆ ರಸವನ್ನು ಹಾಕಿ ಮಿಶ್ರಣ ಮಾಡಿ.
    * ಒಂದು ಚಿಕ್ಕ ಬಾಣಲೆ ತೆಗೆದುಕೊಂಡು, ಅದರಲ್ಲಿ 1 ಟೀಸ್ಪೂನ್ ಎಣ್ಣೆ ಬಿಸಿ ಮಾಡಿ, ಬಳಿಕ ಅದಕ್ಕೆ ಸಾಸಿವೆ ಹಾಕಿ ಸಿಡಿಸಿ.
    * ಬಳಿಕ ಚಿಟಿಕೆ ಹಿಂಗ್ ಹಾಗೂ ಕರಿಬೇವಿನ ಎಲೆ ಹಾಕಿ, ಸ್ವಲ್ಪ ಹುರಿದು, ಬಳಿಕ ಹೆಸರು ಕಾಳಿನ ಮಿಶ್ರಣಕ್ಕೆ ಸುರಿಯಿರಿ.
    * ಇದೀಗ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿದರೆ, ಆರೋಗ್ಯಕರ ಮೊಳಕೆಯೊಡೆದ ಹೆಸರುಕಾಳಿನ ಕೋಸಂಬರಿ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ವಾವ್, ಸಖತ್ ಟೇಸ್ಟಿ – ಬೇಬಿ ಕಾರ್ನ್ ರೋಸ್ಟ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಲಾಡ್ ವಾಸನೆ ಬರ್ತಿದೆ ಎಂದಿದ್ದಕ್ಕೆ ಗ್ರಾಹಕನ ತಲೆಗೆ ಹೊಡೆದ ಹೋಟೆಲ್ ಸಿಬ್ಬಂದಿ

    ಸಲಾಡ್ ವಾಸನೆ ಬರ್ತಿದೆ ಎಂದಿದ್ದಕ್ಕೆ ಗ್ರಾಹಕನ ತಲೆಗೆ ಹೊಡೆದ ಹೋಟೆಲ್ ಸಿಬ್ಬಂದಿ

    ಜೈಪುರ: ಹಳೆಯ ಸಲಾಡ್‍ನನ್ನು ಸರ್ವ್ ಮಾಡಿದ್ದೀರಾ ಎಂದು ಆರೋಪಿಸಿದ ಗ್ರಾಹಕನಿಗೆ ಹೋಟೆಲ್ ಮಾಲೀಕ ಮತ್ತು ಸಿಬ್ಬಂದಿ ತೀವ್ರವಾಗಿ ಹಲ್ಲೆ ನಡೆಸಿರುವ ಘಟನೆ ರಾಜಸ್ಥಾನದ ಜೋಧ್ ಪುರ್‍ನಲ್ಲಿ ನಡೆದಿದೆ.

    ಹಲ್ಲೆಗೊಳಗಾಗಿರುವ ವ್ಯಕ್ತಿಯನ್ನು ಮಹೇಂದ್ರ ಸಿಂಗ್ ಎಂದು ಗುರುತಿಸಲಾಗಿದೆ. ಈತ ತಡರಾತ್ರಿ ಹೋಟೆಲ್ ವೊಂದರಲ್ಲಿ ಸಲಾಡ್ ಆರ್ಡರ್ ಮಾಡಿದ್ದಾನೆ. ಅಂತೆಯೇ ಸರ್ವರ್ ಸಲಾಡ್ ತಂದುಕೊಟ್ಟಿದ್ದಾನೆ. ಆದರೆ ಅದು ವಾಸನೆ ಬಂದಿದೆ. ಹೀಗಾಗಿ ಸಿಂಗ್, ಸಿಬ್ಬಂದಿ ಹಳೆಯ ಸಲಾಡ್ ನೀಡಿದ್ದಾನೆ ಎಂದು ಹೋಟೆಲ್ ಮಾಲೀಕನಿಗೆ ಕಂಪ್ಲೇಟ್ ಮಾಡಿದ್ದಾರೆ. ಬಳಿಕ ಹೋಟೆಲ್‍ನಲ್ಲಿ ಕೆಲಸ ಮಾಡುವವರಿಗೆ ನಿಂದಿಸಲು ಆರಂಭಿಸಿದ್ದಾರೆ. ಈ ವಿಚಾರವಾಗಿ ಆತ ಮತ್ತು ಹೋಟೆಲ್ ಸಿಬ್ಬಂದಿ ನಡುವೆ ವಾದ-ವಿವಾದ ಆರಂಭವಾಗಿದೆ. ಕೊನೆಗೆ ಜಗಳ ವಿಕೋಪಕ್ಕೆ ತಿರುಗಿ ಹೋಟೆಲ್ ನೌಕರರು ಮಹೇಂದ್ರ ಸಿಂಗ್ ತಲೆಗೆ ಕೋಲಿನಿಂದ ಹಲ್ಲೆ ಮಾಡಿದ್ದಾರೆ.

    ಕೂಡಲೇ ಮಹೆಂದ್ರ ಸಿಂಗ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮಹಾಮಂದಿರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಹೇಂದ್ರ ಸಿಂಗ್ ಊಟ ಮಾಡಲು ಹೋಟೆಲ್ ಗೆ ತೆರಳಿದ್ದಾಗ ಹಳೆಯ ಸಲಾಡ್ ನೀಡಿದ್ದಕ್ಕೆ ದೂರು ನೀಡಿದ್ದಾರೆ. ಇದರಿಂದ ಕೋಪಗೊಂಡ ಹೋಟೆಲ್ ಸಿಬ್ಬಂದಿ ಶ್ರವಣ್ ಸಿಂಗ್ ಎಂಬಾತ ಕೆಟ್ಟ ರೀತಿಯಲ್ಲಿ ಮಹೇಂದ್ರ ಸಿಂಗ್‍ರನ್ನು ಹೊಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

  • ಪ್ಯಾಕೇಜ್ಡ್ ಸಲಾಡ್ ತಿನ್ನುವಾಗ ಸಿಕ್ತು ಕಪ್ಪೆ ಮರಿ, ಮನೆಯಲ್ಲೇ ಸಾಕಿಕೊಂಡ್ಳು!

    ಪ್ಯಾಕೇಜ್ಡ್ ಸಲಾಡ್ ತಿನ್ನುವಾಗ ಸಿಕ್ತು ಕಪ್ಪೆ ಮರಿ, ಮನೆಯಲ್ಲೇ ಸಾಕಿಕೊಂಡ್ಳು!

    ಕ್ಯಾಲಿಫೋರ್ನಿಯಾ: ಹೊರಗಡೆ ಖರೀದಿಸಿದ ಊಟದಲ್ಲಿ ಜಿರಲೆ, ಹಲ್ಲಿ ಸಿಕ್ಕಿದ ಸಾಕಷ್ಟು ಉದಾಹರಣೆಗಳಿವೆ. ಅಂಥ ಸಂದರ್ಭದಲ್ಲಿ ಅಂಗಡಿಯವರನ್ನ ಬೈದುಕೊಂಡು ಆ ಊಟವನ್ನ ಬಿಸಾಡುತ್ತೇವೆ. ಆದ್ರೆ ಇಲ್ಲೊಬ್ಬ ಮಹಿಳೆ ಸ್ಥಳೀಯ ಮಳಿಗೆಯಲ್ಲಿ ಖರೀದಿಸಿದ ಸಲಾಡ್‍ನಲ್ಲಿ ಜೀವಂತ ಕಪ್ಪೆ ಸಿಕ್ಕಿದ್ದು, ಆಕೆ ಅದನ್ನ ಮನೆಯಲ್ಲೇ ಸಾಕಿಕೊಂಡಿದ್ದಾಳೆ.

    ಅಮೆರಿಕದ ಕ್ಯಾಲಿಫೋರ್ನಿಯಾ ನಿವಾಸಿಯಾದ ಬೆಕ್ಕಿ ಗಾರ್ಫಿಂಕೆಲ್ ಸ್ಥಳೀಯ ಟಾರ್ಗೆಟ್ ಮಳಿಗೆಯಲ್ಲಿ ಸಲಾಡ್ ತೆಗೆದುಕೊಂಡಿದ್ರು. ಆಕೆ ಆಗಲೇ ಮುಕ್ಕಾಲು ಭಾಗದಷ್ಟು ಸಲಾಡ್ ತಿಂದಿದ್ರು. ಆಗ ಜೀವಂತ ಕಪ್ಪೆಯೊಂದು ಸಲಾಡ್‍ನಲ್ಲಿ ಇದ್ದಿದ್ದನ್ನು ನೋಡಿದ್ದಾರೆ.

    ನನಗೆ ತುಂಬಾ ಶಾಕ್ ಆಯ್ತು, ಕಿರುಚಾಡಿದೆ. ನಂತರ ನನಗೆ ವಾಂತಿ ಕೂಡ ಆಯ್ತು. ನಾನು ವೆಜಿಟೇರಿಯನ್. ಸಲಾಡ್‍ನಲ್ಲಿ ಕಪ್ಪೆ ಇದ್ದಿದ್ದನ್ನು ನಂಬಲಾಗಲಿಲ್ಲ ಅಂತ ಗಾರ್ಫಿಂಕೆಲ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

    ನಂತರ ಗಾರ್ಫಿಂಕೆಲ್ ಆ ಕಪ್ಪೆ ಮರಿಯನ್ನು ಸೂಕ್ಷ್ಮವಾಗಿ ನೋಡಿದಾಗ ಅದು ಅರೆಜೀವವಾಗಿದ್ದುದು ಗೊತ್ತಾಗಿದೆ. ಬಳಿಕ ಆಕೆಯ ಗಂಡ ಚೆಸ್ಟ್ ಕಂಪ್ರೆಷನ್ ಮಾಡಿ ಕಪ್ಪೆ ಮರಿಯನ್ನ ಬದುಕಿಸಿ ಅದನ್ನ ಸಾಕಿಕೊಂಡಿದ್ದಾರೆ. ಹಳೇ ಅಕ್ವೇರಿಯಂವೊಂದನ್ನ ಕಪ್ಪೆಯ ಮನೆಯನ್ನಾಗಿ ಮಾಡಿದ್ದು, ಅದಕ್ಕೆ ಲಕ್ಕಿ ಅಂತ ಹೆಸರಿಟ್ಟಿದ್ದಾರೆ.

    ಸಲಾಡ್‍ನಲ್ಲಿ ಕಪ್ಪೆ ಮರಿ ಸಿಕ್ಕ ಬಗ್ಗೆ ಗಾಫಿಂಕೆಲ್ ಟಾರ್ಗೆಟ್ ಮಳಿಗೆಯ ಫೇಸ್‍ಬುಕ್ ಪೇಜ್‍ನಲ್ಲಿ ದೂರು ನೀಡಿದ್ದಾರೆ.