ಸ್ಯಾಂಡಲ್‌ವುಡ್ ಸಲಗ ದುನಿಯಾ ವಿಜಯ್ (Duniya Vijay) ಅವರು ತಮ್ಮ ಅಭಿಮಾನಿಗಳಿಗೆ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಯಶ್ (Yash) ಫ್ಯಾನ್ಸ್ ದುರಂತ ಸಾವಿನ ಬಳಿಕ ವಿಜಯ್ ಅಭಿಮಾನಿಗಳಿಗೆ ಕೈ ಮುಗಿದು ಮನವಿ ಮಾಡಿಕೊಂಡಿದ್ದಾರೆ. ತಮ್ಮ ಹುಟ್ಟುಹಬ್ಬದ (Birthday) ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:‘ಶನಿ’ ಕಂಟಕ ವರ್ತೂರು ಸಂತೋಷ್ ತಲೆಗೆ ಕಟ್ಟಿದ ಕಾರ್ತಿಕ್- ಚಳಿ ಬಿಡಿಸಿದ ಸುದೀಪ್
ಇದೇ ಜನವರಿ 20ರಂದು ದುನಿಯಾ ವಿಜಯ್ (Duniya Vijay) ಹುಟ್ಟುಹಬ್ಬವಿದೆ. ಹೀಗಾಗಿ ಪ್ರತಿ ಬಾರಿಯಂತೆ ಈ ಬಾರಿಯೂ ವಿಜಯ್ ತಮ್ಮ ಅಭಿಮಾನಿಗಳನ್ನು ಭೇಟಿಯಾಗಲಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತನ್ನ ಹುಟ್ಟೂರಾದ ಕುಂಬಾರನಹಳ್ಳಿಯಲ್ಲಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.
ಕುಂಬಾರನಹಳ್ಳಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದು, ಅಲ್ಲಿಯೇ ಅಭಿಮಾನಿಗಳನ್ನು ಭೇಟಿಯಾಗಲಿದ್ದಾರೆ. ನಟ ಯಶ್ ಬರ್ತಡೇ ದಿನ ನಡೆದ ದುರಂತಗಳನ್ನು ಗಮನದಲ್ಲಿಟ್ಟುಕೊಂಡು ಈ ವಿಚಾರ ತಿಳಿಸಿದ್ದಾರೆ. ಇನ್ನೂ ಕಳೆದ ಬಾರಿ ಅಭಿಮಾನಿಯೊಬ್ಬರು ನಡೆದುಕೊಂಡೇ ವಿಜಯ್ ಹುಟ್ಟುಹಬ್ಬಕ್ಕೆ ಬಂದಿದ್ದರು. ಹಾಗಾಗಿ ಕೈ ಮುಗಿದು ಕೇಳಿಕೊಳ್ಳುತ್ತೇನೆ ಯಾವ ಅಭಿಮಾನಿಗಳು ಸಹ ಈ ಬಾರಿ ನಡೆದುಕೊಂಡು ಬರಬೇಡಿ, ಯಾರು ಕೇಕ್ ಮತ್ತು ಹೂವಿನ ಹಾರ ತರಬೇಡಿ. ನನಗೆ ನಿಮ್ಮ ಜೊತೆಗೆ ಕುಳಿತು ಪ್ರೀತಿಯಿಂದ ಊಟ ಮಾಡುವ ಆಸೆಯಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಬೆಂಗಳೂರಿನ ಬೆಡಗಿಗೆ ಖುಲಾಯಿಸಿದ ಅದೃಷ್ಟ- ಮುಂದೇನು ಮಾಡ್ತಾರೆ ಶ್ರೀಲೀಲಾ?
ಜನವರಿ 20ರಂದು ಬೆಳಿಗ್ಗೆ ಎಲ್ಲರೂ ಸೇಫಾಗಿ ಬನ್ನಿ. ಜನವರಿ 19ರವರೆಗೂ ನಮಗೆ ಸಿನಿಮಾ ಕೆಲಸ ಇದೆ. ಹೀಗಾಗಿ ಜ.20ರಂದು ಎಲ್ಲರೂ ಬನ್ನಿ ಜೊತೆಯಲ್ಲಿ ಕುಳಿತು ಊಟ ಮಾಡೋಣ. ಯಾರು ನನ್ನ ಹುಟ್ಟುಹಬ್ಬದ ದಿನ ಫ್ಲೆಕ್ಸ್ ಬ್ಯಾನರ್ ಹಾಕಬೇಡಿ ಎಂದು ದುನಿಯಾ ವಿಜಯ್ ಹೇಳಿದ್ದಾರೆ.
ಅಂದಹಾಗೆ ಯಶ್ ಹುಟ್ಟುಹಬ್ಬದಂದು (ಜ.8) ಮೂವರು ಯುವಕರು ಮೃತಪಟ್ಟಿದ್ದರು. ಗದಗದ ಸೊರಣಗಿಯಲ್ಲಿ ಈ ಘಟನೆ ಸಂಭವಿಸಿತ್ತು. ಬಳಿಕ ಯಶ್ ಸೊರಣಗಿ ಗ್ರಾಮಕ್ಕೆ ಭೇಟಿ ನೀಡಿ, ಮೃತರಾಗಿರೋ ಯುವಕರ ಕುಟುಂಬಸ್ಥರನ್ನು ಸಂತೈಸಿ ಧೈರ್ಯ ಹೇಳಿ ಬಂದಿದ್ದರು.











ನಟ ದುನಿಯಾ ಇಂದು ತಮ್ಮ ಹುಟ್ಟೂರು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಕುಂಬಾರನಹಳ್ಳಿಯಲ್ಲಿ ತಮ್ಮ ಹೆತ್ತವರ ಸಮಾಧಿ ಬಳಿ ಭರ್ಜರಿಯಾಗಿ ಅಭಿಮಾನಿಗಳ ಜೊತೆ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಹೊರ ರಾಜ್ಯ ಸೇರಿದಂತೆ ರಾಜ್ಯದ ನಾನಾ ಕಡೆಗಳಿಂದ ಆಗಮಿಸಿದ್ದ ಅಭಿಮಾನಿಗಳು ದುನಿಯಾ ವಿಜಿಗೆ ಜೈಕಾರ ಹಾಕಿ, ನೆಚ್ಚಿನ ನಟನ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟಿದ್ದಾರೆ. ತಂದೆ ತಾಯಿಯ ಸಮಾಧಿಗೆ ದುನಿಯಾ ವಿಜಿ ಪೂಜೆ ಸಲ್ಲಿಸಿ ಸಾಧು ಸಂತರು ಹಾಗೂ ಸ್ವಾಮೀಜಿಗಳಿಂದ ಆಶೀರ್ವಾದವನ್ನ ಪಡೆದರು. ಹೆತ್ತವರ ಸಮಾಧಿಯ ಬಳಿಯ ನಿರ್ಮಾಣ ಮಾಡಲಾಗಿದ್ದ ವೇದಿಕೆ ದುನಿಯಾ ವಿಜಿ ಎಂಟ್ರಿ ಕೊಡುತ್ತಿದ್ದಂತೆ ನೆಚ್ಚಿನ ನಟನನ್ನು ಕಂಡ ಅಭಿಮಾನಿಗಳ ಆನಂದಕ್ಕೆ ಪಾರವೇ ಇರಲಿಲ್ಲ. ಅಭಿಮಾನಿಗಳು ಭೀಮ ಚಿತ್ರದ ಪೋಸ್ಟರ್ ಇರುವ ಕೇಕ್ ತರಿಸಿದ್ದು ಚಿತ್ರದ ನಿರ್ಮಾಪಕರ ಹಾಗೂ ಅಭಿಮಾನಿಗಳ ಜೊತೆಗೂಡಿ ವಿಜಿ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದನ್ನೂ ಓದಿ:
ಹನುಮ ವೇಷ ಧರಿಸಿ ಬಂದ ಅಭಿಮಾನಿಯನ್ನ ಕಂಡ ವಿಜಿ ಹತ್ತಿರಕ್ಕೆ ಕರೆದು ಬ್ಯಾರಿಕೇಡ್ ಮೇಲೆ ಕೂರಿಸಿಕೊಂಡು ಹಾರ ಹಾಕಿ ಸನ್ಮಾನ ಮಾಡಿದ್ರು. ಅದೇ ರೀತಿ ವಿಕಲಚೇತನ ಅಭಿಮಾನಿಯೋರ್ವ ಕೈನಲ್ಲಿ ಹಾರ ಹಿಡಿದುಕೊಂಡು ವಿಜಿಗೆ ಹಾಕಲು ಬಂದಾಗ ತಡೆದು ಅದೇ ಹಾರವನ್ನ ಹಾಕಿದ್ರು. ಇನ್ನೂ ಆನೇಕಲ್ ಪಟ್ಟಣದ ಮಣಿ ಎಂಬ ಅಭಿಮಾನಿ ಮೈತುಂಬ ದುನಿಯಾ ವಿಜಿ ಟ್ಯಾಟೂ ಹಾಕಿಸಿಕೊಂಡು ಬಂದು ನೆಚ್ಚಿನ ನಟನಿಗೆ ಬರ್ತಡೇ ವಿಶ್ ಮಾಡಿದ್ರು.





`ಅಣ್ಣಗಾರು’ ಪವರ್‌ಫುಲ್ ಟೈಟಲ್ ಮೂಲಕ ಬಾಲಯ್ಯ ಮತ್ತು ದುನಿಯಾ ವಿಜಯ್ ಬರುತ್ತಿದ್ದಾರೆ. ಸದ್ಯದಲ್ಲೇ ಚಿತ್ರತಂಡದಿಂದ ಟೈಟಲ್ ಕುರಿತು ಅಧಿಕೃತ ಮಾಹಿತಿ ಹೊರಬೀಳಲಿದೆ. ಲೆಜೆಂಡರಿ ಆಕ್ಟರ್ ಬಾಲಯ್ಯ ಮತ್ತು ದುನಿಯಾ ವಿಜಯ್ ನಟನೆಯನ್ನು ತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ.


