Tag: ಸರ್ವಾಧಿಕಾರಿ

  • ರೇವಣ್ಣ ಸರ್ವಾಧಿಕಾರಿ ಮನೋಭಾವ ಬಿಡಲೇಬೇಕು – ಜೆಡಿಎಸ್ ಶಾಸಕ ಎಟಿ.ರಾಮಸ್ವಾಮಿ

    ರೇವಣ್ಣ ಸರ್ವಾಧಿಕಾರಿ ಮನೋಭಾವ ಬಿಡಲೇಬೇಕು – ಜೆಡಿಎಸ್ ಶಾಸಕ ಎಟಿ.ರಾಮಸ್ವಾಮಿ

    ಹಾಸನ: ಮಾಜಿ ಸಚಿವ ಹೆಚ್‍ಡಿ ರೇವಣ್ಣ ಸರ್ವಾಧಿಕಾರಿ ಮನೋಭಾವವನ್ನು ಬಿಡಲೇಬೇಕು ಎಂದು ಅರಕಲಗೂಡು ಕ್ಷೇತ್ರದ ಜೆಡಿಎಸ್ ಶಾಸಕ ಎಟಿ.ರಾಮಸ್ವಾಮಿ ಅವರು ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದಾರೆ.

    ಇಂದು ಅರಕಲಗೂಡಿನಲ್ಲಿ ಮಾತನಾಡಿದ ಅವರು, ರೇವಣ್ಣ ಅವರ ಸರ್ವಾಧಿಕಾರಿ ಧೋರಣೆ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಇತ್ತೀಚಿನ ಕೆಲವು ವಿದ್ಯಮಾನಗಳು ನನ್ನನ್ನು ಘಾಸಿಗೊಳಿಸಿವೆ. ಹೀಗಾದರೆ ಪಕ್ಷ ಸಂಘಟನೆ ಕಾರ್ಯ ಸಾಧ್ಯವಿಲ್ಲ ಎಂದು ತಮ್ಮ ಪಕ್ಷದ ಶಾಸಕರ ಮೇಲೆಯೇ ಎಟಿ.ರಾಮಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

    ಹಾಸನ ಹಾಲು ಒಕ್ಕೂಟಕ್ಕೆ ಹೊನ್ನವಳ್ಳಿ ಸತೀಶ್ ಎಂಬುವವರನ್ನು ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಗಿದೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನೇ ಬೆಂಬಲಿಸಿದ್ದು ಬಹಳ ಆಘಾತಕಾರಿ ವಿಷಯ. ಅವರು ಎಲ್ಲ ಚುನಾವಣೆಯಲ್ಲೂ ಪಕ್ಷಕ್ಕೆ ವಿರೋಧವಾಗಿ ಕೆಲಸ ಮಾಡಿದ್ದಾರೆ. ಸತೀಶ್ ಹಣ ಇದ್ದವರ ಜೊತೆ ಹೋಗಿ ಬೆಂಬಲ ನೀಡಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿದವರ ಬೆಂಬಲಿಸಿದರೆ ತಾಯಿಯೇ ಮಗುವಿಗೆ ವಿಷ ಕೊಟ್ಟಂತೆ ಆಗುತ್ತೆ. ಆಗ ಮಗು ಹೇಗೆ ಬದುಕುತ್ತೆ ಹೇಳಿ ಎಂದು ಪ್ರಶ್ನೆ ಮಾಡಿದ್ದಾರೆ.

    ಪಕ್ಷದ ವರಿಷ್ಠರಾದ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಹೆಚ್‍ಡಿ.ರೇವಣ್ಣ ಅವರ ಬಳಿ ಈ ಹಿಂದಯೇ ಈ ವಿಚಾರವಾಗಿ ಮಾತನಾಡಿದ್ದೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನು ಪರಿಗಣಿಸಬೇಡಿ ಎಂದರೂ ಅವರನ್ನೇ ಪರಿಗಣಿಸಿದ್ದಾರೆ. ಶಾಸಕನಾಗಿ ನನ್ನ ಅಭಿಪ್ರಾಯ ಕೇಳಿಲ್ಲ. ಇದು ರೇವಣ್ಣ ಅವರ ಸರ್ವಾಧಿಕಾರಿ ಮನೋಭಾವ ತೋರಿಸುತ್ತದೆ. ರೇವಣ್ಣ ಸರ್ವಾಧಿಕಾರಿ ಮನೋಭಾವ ಬಿಡಲೇಬೇಕು. ಮುಂದಿನ ಸಂಘಟನೆ ಜವಾಬ್ದಾರಿ ವರಿಷ್ಠರಿಗೆ ಬಿಡುತ್ತೇನೆ ಎಂದಿದ್ದಾರೆ.

  • ಸರ್ವಾಧಿಕಾರಿ, ಹುಚ್ಚು ದೊರೆ ಕಿಮ್‌ ಈಗ ಕೋಮಾದಲ್ಲಿ?

    ಸರ್ವಾಧಿಕಾರಿ, ಹುಚ್ಚು ದೊರೆ ಕಿಮ್‌ ಈಗ ಕೋಮಾದಲ್ಲಿ?

    ಸಿಯೋಲ್‌: ಅನಾರೋಗ್ಯದಿಂದ ಬಳಲುತ್ತಿರುವ ಉತ್ತರ ಕೊರಿಯಾದ ಸರ್ವಾಧಿಕಾರಿ, ಹುಚ್ಚು ದೊರೆ ಕಿಮ್‌ ಜಾಂಗ್‌ ಉನ್‌ ಈಗ ಕೋಮಾಗೆ ಜಾರಿದ್ದಾನೆ ಎಂದು ವರದಿಯಾಗಿದೆ. ದಕ್ಷಿಣ ಕೊರಿಯಾ ಮಾಜಿ ಅಧ್ಯಕ್ಷರ ಆಪ್ತ ಅಧಿಕಾರಿಯೊಬ್ಬರ ಹೇಳಿಕೆ ಆಧಾರಿಸಿ ‘ಕೊರಿಯಾ ಹೆರಾಲ್ಡ್’ ವರದಿ ಮಾಡಿದೆ.

    ಕಿಮ್‌ ಜಾಂಗ್‌ ಮೃತಪಟ್ಟಿಲ್ಲ. ಸದ್ಯ ಈಗ ಉತ್ತರ ಕೊರಿಯಾದ ಆಡಳಿತವನ್ನು ಉನ್ ಸಹೋದರಿ ಕಿಮ್ ಯೊ ಜಾಂಗ್ ನೋಡಿಕೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

    ದಕ್ಷಿಣ ಕೊರಿಯಾದ ಬೆಹುಗಾರಿಕಾ ಸಂಸ್ಥೆಯೂ ಉತ್ತರ ಕೊರಿಯಾದ ಆಡಳಿತದಲ್ಲಿ ಮಹತ್ವದ ಬದಲಾವಣೆಯಾಗಿರುವ ಮಾಹಿತಿ ನೀಡಿದೆ. ಕಿಮ್ ಕೋಮಾದಲ್ಲಿರುವ ಬಗ್ಗೆ ಇದೂವರೆಗೂ ಯಾವುದೇ ಅಧಿಕೃತ ಮಾಹಿತಿ ಪ್ರಕಟಗೊಂಡಿಲ್ಲ.

    ಕಿಮ್‌ ಜಾಂಗ್‌ ಆರೋಗ್ಯದ ಬಗ್ಗೆ ವರದಿಯಾಗುವುದು ಇದೇ ಮೊದಲೆನಲ್ಲ. ಈ ವರ್ಷದ ಏಪ್ರಿಲ್‌ನಲ್ಲಿ ಆತ ಸತ್ತಿದ್ದಾನೆ ಎಂದೇ ವರದಿಯಾಗಿತ್ತು. ಜಪಾನ್‌ ಮಾಧ್ಯಮಗಳ ವರದಿಯಿಂದ ಸಂಚಲನ ಸೃಷ್ಟಿಯಾಗಿತ್ತು.

    ಏಪ್ರಿಲ್ 11ರ ನಂತರ ಕಿಮ್ ಜಾಂಗ್-ಉನ್ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಈ ಕಾರಣಕ್ಕೆ ಕಿಮ್ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಆತ ಸಾವನ್ನಪ್ಪಿರಬಹುದು ಎಂದು ರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಮಾಡಿದ್ದವು. ಆದರೆ ಕಿಮ್ ಮೇ 2 ರಂದು ತನ್ನ ದೇಶದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಈ ಎಲ್ಲ ಗಾಳಿ ಸುದ್ದಿಗಳಿಗೂ ಬ್ರೇಕ್ ಹಾಕಿದ್ದ.

    ದೇಶದಲ್ಲಿ ಆರಂಭವಾದ ನೂತನ ರಸಗೊಬ್ಬರ ಕಾರ್ಖಾನೆಯನ್ನು ಟೇಪ್ ಕತ್ತರಿಸುವ ಮೂಲಕ ಓಪನ್ ಮಾಡಿದ್ದ. ಈ ಕಾರ್ಯಕ್ರಮದ ನಂತರ ತಕ್ಷಣ ಆತನ ಫೋಟೋಗಳು ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ಕಿಮ್ ಚೈನ್ ಸ್ಮೋಕರ್ ಆಗಿದ್ದು, ಆತನ ದೇಹದ ತೂಕ ಜಾಸ್ತಿಯಾಗಿದೆ. ಜೊತೆಗೆ ಕುಟುಂಬ ಈ ಹಿಂದೆಯಿಂದಲೂ ಹೃದಯರಕ್ತನಾಳದ ಸಮಸ್ಯೆಯನ್ನು ಬಳಲಿದ್ದ ಇತಿಹಾಸವನ್ನು ಹೊಂದಿದೆ ಎಂದು ವರದಿಯಾಗಿದೆ. ಈ ಕಾರಣದಿಂದ ಆತನ ಆರೋಗ್ಯ ಹದಗೆಟ್ಟಿದ್ದು ಆತ ಸಾವನ್ನಪ್ಪಿರಬಹುದು ಎಂದು ಹೇಳಲಾಗಿತ್ತು. ಈ ನಡುವೆ ಚೀನಾದಿಂದ ಉನ್ನತ ವೈದ್ಯರ ತಂಡ ಉತ್ತರ ಕೊರಿಯಾಗೆ ಹೋಗಿದ್ದು, ಆತನಿಗೆ ಚಿಕಿತ್ಸೆ ನೀಡುತ್ತಿದೆ ಎಂದು ಹೇಳಲಾಗಿತ್ತು. ಇದನ್ನೂ ಓದಿ: ‘ಕಿಮ್ ಜೀವಂತವಾಗಿದ್ದಾರೆ’ – ಉಪಗ್ರಹ ಚಿತ್ರ ಸಾಕ್ಷಿಯಂತೆ