Tag: ಸರ್ವರ್ ಡೌನ್

  • ಕೇಂದ್ರದಿಂದ ಗ್ಯಾರಂಟಿ ಯೋಜನೆ ಆ್ಯಪ್ ಹ್ಯಾಕ್: ಸತೀಶ್ ಜಾರಕಿಹೊಳಿ ಬಾಂಬ್

    ಕೇಂದ್ರದಿಂದ ಗ್ಯಾರಂಟಿ ಯೋಜನೆ ಆ್ಯಪ್ ಹ್ಯಾಕ್: ಸತೀಶ್ ಜಾರಕಿಹೊಳಿ ಬಾಂಬ್

    ಬೆಳಗಾವಿ: ಗ್ಯಾರಂಟಿ ಯೋಜನೆಗಳ ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ಹ್ಯಾಕ್ (Hack) ಮಾಡುತ್ತಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಗಂಭೀರ ಆರೋಪ ಮಾಡಿದ್ದಾರೆ.

    ರಾಜ್ಯ ಕಾಂಗ್ರೆಸ್ (Congress) ಸರ್ಕಾರದ ಗ್ಯಾರಂಟಿ (Congress) ಫಲಾನುಭವಿಗಳಾಗಲು ಜನರು ಅರ್ಜಿ ಸಲ್ಲಿಸಲು ಮುಂದಾಗುತ್ತಿದ್ದಾರೆ. ಆದರೆ ಎಲ್ಲೆಡೆ ಸರ್ವರ್ ಡೌನ್ ಸಮಸ್ಯೆ ಎದುರಾಗುತ್ತಿದೆ. ಇದರಿಂದ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಇದೀಗ ಸತೀಶ್ ಜಾರಕಿಹೊಳಿ ಸರ್ವರ್ ಡೌನ್ ಆಗಲು ಕೇಂದ್ರ ಸರ್ಕಾರವೇ ಕಾರಣ ಎಂದು ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ನಾವು ಮೊದಲೇ ಈ ಬಗ್ಗೆ ಯೋಚನೆ ಮಾಡಿದ್ದೆವು. ನಮ್ಮ ಸಿಸ್ಟಂಗಳನ್ನು ಕೇಂದ್ರ ಸರ್ಕಾರ ಹ್ಯಾಕ್ ಮಾಡಿದೆ. ಈ ಹಿಂದೆ ಇವಿಎಂಗಳನ್ನು ಹೇಗೆ ಹ್ಯಾಕ್ ಮಾಡಿದ್ದಾರೋ ಈಗ ಸಿಸ್ಟಂಗಳನ್ನೂ ಹಾಗೆಯೇ ಹ್ಯಾಕ್ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಇದನ್ನೂ ಓದಿ: ಭೂಪೇಂದ್ರ ಯಾದವ್ ಭೇಟಿ ಮಾಡಿದ ಈಶ್ವರ್ ಖಂಡ್ರೆ – ಹುಲಿ ಅಭಯಾರಣ್ಯ ಬಾಕಿ ಹಣ ಬಿಡುಗಡೆಗೆ ಮನವಿ

    ಕೇಂದ್ರ ಸರ್ಕಾರ ಹ್ಯಾಕ್ ಮಾಡಿರುವ ಸಿಸ್ಟಂಗಳನ್ನು ನಾವು ಮುಂದಿನ ದಿನಗಳಲ್ಲಿ ರಿಪೇರಿ ಮಾಡುತ್ತೇವೆ. ಹೀಗಾಗಿ ಗೃಹಲಕ್ಷ್ಮಿ ಯೋಜನೆ ಜಾರಿ ಆಗುವುದು ಸ್ವಲ್ಪ ತಡವಾಗುತ್ತಿದೆ. ನಾವು ಮ್ಯಾನುವಲ್ ಆಗಿ ಕೈಯಿಂದಲೇ ಅರ್ಜಿಗಳನ್ನು ತೆಗೆದುಕೊಳ್ಳುತ್ತೇವೆ. 1 ತಿಂಗಳು ಯೋಜನೆ ಜಾರಿ ತಡವಾಗಬಹುದು. ಅದಕ್ಕಿಂತ ಹೆಚ್ಚಿನದು ಏನೂ ಆಗಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಫೇಕ್ ನ್ಯೂಸ್‌ಗಳ ಮೂಲ ಪತ್ತೆಹಚ್ಚಿ- ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ

  • ಪುನಾರಂಭಗೊಂಡ ವಾಟ್ಸಪ್ – ಸೋಶಿಯಲ್ ಮೀಡಿಯಾಗಳಲ್ಲಿ ತರಹೇವಾರು ಮೀಮ್ಸ್

    ಪುನಾರಂಭಗೊಂಡ ವಾಟ್ಸಪ್ – ಸೋಶಿಯಲ್ ಮೀಡಿಯಾಗಳಲ್ಲಿ ತರಹೇವಾರು ಮೀಮ್ಸ್

    ನವದೆಹಲಿ: ಜನರ ಜೀವನದ ಅವಿಭಾಜ್ಯ ಅಂಗವಾಗಿರುವ ವಾಟ್ಸಪ್ ತಾಂತ್ರಿಕ ಸಮಸ್ಯೆಯಿಂದ (WhatsAppDown) ಸುಮಾರು ಎರಡು ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ವಾಟ್ಸಪ್ ಮಾಲಿಕತ್ವ ಹೊಂದಿರುವ ಮೆಟಾ (Meta) ಈ ಸಮಸ್ಯೆಯನ್ನು ಬಗೆಹರಿಸಿದ್ದು ವಾಟ್ಸಪ್ ಆ್ಯಪ್ ಎಂದಿನಂತೆ ಕಾರ್ಯನಿರ್ವಹಿಸಲು ಆರಂಭಿಸಿದೆ.

    ಕೇವಲ ಭಾರತ ಮಾತ್ರವಲ್ಲದೇ ಅಮೇರಿಕಾ, ಜರ್ಮನಿ, ದಕ್ಷಿಣ ಆಫ್ರಿಕಾ, ಬಹ್ರೇನ್, ಬಾಂಗ್ಲಾದೇಶ ಸೇರಿ ಹಲವು ದೇಶಗಳಲ್ಲಿ ವಾಟ್ಸಪ್ ಸೇವೆಗಳಲ್ಲಿ ವ್ಯತ್ಯಯವಾಗಿತ್ತು. ಬಳಕೆದಾರರು ವಾಟ್ಸಪ್ ಕರೆ ಮಾಡಲು, ಸಂದೇಶಗಳನ್ನು ರವಾನಿಸಲು ಸಾಧ್ಯವಾಗಿರಲಿಲ್ಲ. ಈ ಅಡೆತಡೆಗಳು ಕಂಡು ಬಂದ ಹಿನ್ನೆಲೆ ಹಲವು ಜನರು ಟ್ವಿಟರ್‌ನಲ್ಲಿ “whatsappdown” ಎಂಬ ಹ್ಯಾಶ್‍ಟ್ಯಾಗ್‍ನಡಿ 90,000-ಕ್ಕೂ ಹೆಚ್ಚು ಟ್ವೀಟ್‍ಗಳನ್ನು ಮಾಡಿದ್ದಾರೆ.

    ಈ ಸಮಸ್ಯೆಯನ್ನು whatsapp ಒಪ್ಪಿಕೊಂಡಿದೆ. “ಕೆಲವರು ಪ್ರಸ್ತುತ ಸಂದೇಶಗಳನ್ನು ಕಳುಹಿಸುವಲ್ಲಿ ತೊಂದರೆ ಎದುರಿಸುತ್ತಿದ್ದಾರೆ ಎಂದು ನಮಗೆ ತಿಳಿದಿದೆ ಮತ್ತು ಸಾಧ್ಯವಾದಷ್ಟು ಬೇಗ ಎಲ್ಲರಿಗೂ whatsapp ಅನ್ನು ಮರುಸ್ಥಾಪಿಸಲು ನಾವು ಕೆಲಸ ಮಾಡುತ್ತಿದ್ದೇವೆ” ಎಂದು ಮೆಟಾ ವಕ್ತಾರರು ತಿಳಿಸಿದ್ದರು, ಅಂತೆಯೇ ಎರಡು ಗಂಟೆಯಲ್ಲಿ ಸೇವೆಯನ್ನು ಪುನಾರಂಭಗೊಳಿಸಿದ್ದಾರೆ.

    ವಾಟ್ಸಪ್ ಸ್ಥಗಿತಗೊಂಡ ಹಿನ್ನೆಲೆ ತರಹೆವಾರು ಮೀಮ್ಸ್‌ಗಳು ಸೋಶಿಯಲ್ ಮೀಡಿಯಾಗಳಲ್ಲಿ ಗಮನ ಸೆಳೆಯುತ್ತಿವೆ. ಕೆಲವರು ಸೂರ್ಯಗ್ರಹಣದಿಂದ ಪರಿಣಾಮ ವಾಟ್ಸಪ್ ಮೇಲೆ ಬೀರಿದೆ ಎಂದರೇ, ಇನ್ನು ಕೆಲವರು ಮಾರ್ಕ್ ಬುರ್ಕರ್ ಬರ್ಗ್ ಉಲ್ಲೇಖಿಸಿ ತಮಾಷೆ ಮಾಡಿದ್ದಾರೆ. ಇದನ್ನೂ ಓದಿ: ಶಾನಿದ್ ಆಸಿಫ್ ಅಲಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕನ್ನಡದ ಜೋಶ್ ನಟಿ ಪೂರ್ಣಾ

    2021ರ ಅಕ್ಟೋಬರ್ 5 ರಂದು ಫೇಸ್‍ಬುಕ್, ವಾಟ್ಸಪ್, ಇನ್‍ಸ್ಟಾಗ್ರಾಂ ಆ್ಯಪ್‍ಗಳು ಆರು ಗಂಟೆಗಳ ಕಾಲ ಸ್ಥಗಿತವಾಗಿದ್ದವು. ಈವರೆಗೂ ಅತಿ ಹೆಚ್ಚು ಕಾಲ ಸರ್ವರ್ ಡೌನ್ ಆದ ಉದಾಹರಣೆ ಇದಾಗಿದೆ. ಇದನ್ನೂ ಓದಿ: ರಾಯಚೂರಿನ ಸೂಗುರೇಶ್ವರ ದೇವಾಲಯಕ್ಕಿಲ್ಲ ಗ್ರಹಣ ಎಫೆಕ್ಟ್- ಮಂತ್ರಾಲಯ ಮಠದಲ್ಲಿ ಶಾಂತಿ ಹೋಮ

    Live Tv
    [brid partner=56869869 player=32851 video=960834 autoplay=true]

  • ವಿಶ್ವಾದ್ಯಂತ ವಾಟ್ಸಪ್‌ಗೂ ಗ್ರಹಣ – ಸಂದೇಶ ಕಳುಹಿಸಲಾಗದೇ ಜನರ ಒದ್ದಾಟ

    ವಿಶ್ವಾದ್ಯಂತ ವಾಟ್ಸಪ್‌ಗೂ ಗ್ರಹಣ – ಸಂದೇಶ ಕಳುಹಿಸಲಾಗದೇ ಜನರ ಒದ್ದಾಟ

    ನವದೆಹಲಿ: ಜನಪ್ರಿಯ ಸೋಶಿಯಲ್ ಮೀಡಿಯಾ ಆ್ಯಪ್ ವಾಟ್ಸಪ್ ಸರ್ವರ್‌ ಡೌನ್ ಆಗಿದೆ. ಕಳೆದ 30 ನಿಮಿಷಗಳಿಂದ ವಾಟ್ಸಪ್ ಬಳಸಲು ಸಾಧ್ಯವಾಗದೇ ಜನರ ಪರದಾಡುತ್ತಿದ್ದಾರೆ.

    ಸುಮಾರು 30 ನಿಮಿಷದಿಂದ ವಿಶ್ವದಾದ್ಯಂತ ವಾಟ್ಸಪ್ ಸೇವೆಯಲ್ಲಿ ವ್ಯತ್ಯಯ ಕಂಡುಬಂದಿದೆ. ಆದರೆ ಈ ಬಗ್ಗೆ ವಾಟ್ಸಪ್‍ನಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಸದ್ಯ ಬಳಕೆದಾರರಿಗೆ ಸಂದೇಶ ಕಳುಹಿಸಲು ಅಥವಾ ಸ್ವೀಕರಿಸಲು, ವೀಡಿಯೋ ಕಾಲ್‌ ಹಾಗೂ ಆಡಿಯೋ ಕಾಲ್‌ ಮಾಡಲು ಆಗುತ್ತಿಲ್ಲ. ಇದನ್ನೂ ಓದಿ: ವಿಶ್ವಾದ್ಯಂತ ವಾಟ್ಸಪ್‌ಗೂ ಗ್ರಹಣ – ಸಂದೇಶ ಕಳುಹಿಸಲಾಗದೇ ಜನರ ಒದ್ದಾಟ

    ಈ ಕುರಿತಂತೆ ಪ್ರತಿಕ್ರಿಯಿಸಿರುವ ಮೆಟಾ ಕಂಪನಿ ವಕ್ತಾರರು, ಕೆಲವು ಮಂದಿ ವಾಟ್ಸಪ್‌ನಲ್ಲಿ ಸಂದೇಶ ಕಳುಹಿಸಲು ಸಾಧ್ಯವಾಗದೇ ಸಮಸ್ಯೆ ಎದುರಿಸುತ್ತಿರುವ ವಿಚಾರ ತಿಳಿದುಬಂದಿದೆ. ಸಾಧ್ಯವಾದಷ್ಟು ಬೇಗ ವಾಟ್ಸಾಪ್‌ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಟ್ವೀಟ್‌ ಮಾಡುವ ಮೂಲಕ ತಿಳಿಸಿದ್ದಾರೆ.

    ಮಧ್ಯಾಹ್ನ 12:30 ರಿಂದ ವಾಟ್ಸಾಪ್‌ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಅನೇಕ ಮಂದಿ ಟ್ವಿಟ್ಟರ್‌ ಹಾಗೂ ಇನ್‌ಇಸ್ಟಾಗ್ರಾಮ್‌ನಲ್ಲಿ ಸರ್ವರ್‌ ಡೌನ್‌ ಬಗ್ಗೆ ಚಿತ್ರ ವಿಚಿತ್ರ ಮೀಮ್‌ಗಳನ್ನು ಶೇರ್‌ ಮಾಡಿಕೊಳ್ಳುವ ಮೂಲಕ ಟ್ರೋಲ್‌ ಮಾಡುತ್ತಿದ್ದಾರೆ. ಇದನ್ನೂ ಓದಿ: ರಾಯಚೂರಿನ ಸೂಗುರೇಶ್ವರ ದೇವಾಲಯಕ್ಕಿಲ್ಲ ಗ್ರಹಣ ಎಫೆಕ್ಟ್- ಮಂತ್ರಾಲಯ ಮಠದಲ್ಲಿ ಶಾಂತಿ ಹೋಮ

    Live Tv
    [brid partner=56869869 player=32851 video=960834 autoplay=true]

  • ಇನ್‍ಸ್ಟಾಗ್ರಾಮ್ ಸರ್ವರ್ ಡೌನ್ – ಫೋಟೋ, ವೀಡಿಯೋ ಅಪ್‍ಲೋಡ್ ಮಾಡಲಾಗದೇ ಜನರ ಪರದಾಟ

    ನವದೆಹಲಿ: ಜನಪ್ರಿಯ ಸೋಶಿಯಲ್ ಮೀಡಿಯಾ ಅಪ್ಲಿಕೇಶನ್ ಇನ್‍ಸ್ಟಾಗ್ರಾಮ್ (Instagram) ಗುರುವಾರ ವಿಶ್ವದ ವಿವಿಧ ಭಾಗಗಳಲ್ಲಿ ಸರ್ವರ್ ಡೌನ್ (Server down) ಆಗಿತ್ತು. ಇದರಿಂದ ಇನ್‍ಸ್ಟಾಗ್ರಾಮ್ ಬಳಕೆದಾರರು (Instagram users) ಫೋಟೋ, ವೀಡಿಯೋ ಪೋಸ್ಟ್ ಮಾಡಲಾಗದೇ ಪರದಾಡಿದ್ದಾರೆ. ಬಳಕೆದಾರರು ಇನ್‍ಸ್ಟಾಗ್ರಾಮ್ ಅಪ್ಲಿಕೇಶನ್ ಅನ್ನು ಮತ್ತೆ ಮೊದಲಿನಿಂದ ಓಪನ್ ಮಾಡಿದರೂ ಕ್ರ್ಯಾಶ್ (Crash) ಆಗುತ್ತಿತ್ತು ಎಂದು ವರದಿಯಾಗಿದೆ.

    ಬಳಕೆದಾರರು ಎದುರಿಸುತ್ತಿರುವ ಸಮಸ್ಯೆಯನ್ನು ಒಪ್ಪಿಕೊಂಡ ಇನ್‍ಸ್ಟಾಗ್ರಾಮ್, ಕೆಲವು ಬಳಕೆದಾರರು ಇನ್‍ಸ್ಟಾಗ್ರಾಮ್ ಅಪ್ಲಿಕೇಶನ್ ಓಪನ್ ಮಾಡಲು ಆಗದೇ ಸಮಸ್ಯೆ ಎದುರಿಸುತ್ತಿರುವುದು ನಮಗೆ ತಿಳಿದುಬಂದಿದೆ. ನಾವು ಸಾಧ್ಯವಾದಷ್ಟು ಶೀಘ್ರದಲ್ಲಿಯೇ ಪರಿಸ್ಥಿತಿಯನ್ನು ಸಾಮಾನ್ಯ ಸ್ಥಿತಿಗೆ ತರಲು ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ತಿಳಿಸಿತ್ತು. ಈ ರೀತಿಯ ಅಡಚಣೆಗೆ ಕ್ಷಮಿಸಿ ಎಂದು ಟ್ವೀಟ್ ಮಾಡಿ ಕ್ಷಮೆ ಕೋರಿದೆ. ಇದನ್ನೂ ಓದಿ: ರಾಜ್ಯದ ಜನರಿಗೆ ಶುಲ್ಕದ ಬರೆ – ಅಕ್ಟೋಬರ್‌ನಿಂದ ವಿದ್ಯುತ್ ದರ ಏರಿಕೆ

    ಹೀಗಿದ್ದರೂ ಅನೇಕ ಇನ್‍ಸ್ಟಾಗ್ರಾಮ್ ಬಳಕೆದಾರರು ಈಗ ಸುಮಾರು ಒಂದು ಗಂಟೆಯವರೆಗೂ ಇನ್‍ಸ್ಟಾಗ್ರಾಮ್ ಸ್ಥಗಿತಗೊಂಡಿದೆ ಮತ್ತು ವೈಬ್‍ಸೈಟ್ (website) ಮೂಲಕ ಇನ್‍ಸ್ಟಾಗ್ರಾಮ್‍ಗೆ ಲಾಗ್ ಇನ್ (Login) ಆಗಲು ಸಾಧ್ಯವಾಗುತ್ತಿಲ್ಲ ಎಂದು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ. ಇದನ್ನೂ ಓದಿ: NIA ಮಿಡ್‌ನೈಟ್ ಆಪರೇಷನ್- ಬೆಂಗ್ಳೂರಿನಲ್ಲಿ ಶಂಕಿತ ಉಗ್ರ ಯಾಸಿರ್ ಅರೆಸ್ಟ್

    ಸಾಮಾಜಿಕ ಮಾಧ್ಯಮ ಸೈಟ್‍ನಲ್ಲಿ #Instagram ಟ್ರೆಂಡಿಂಗ್ ಹ್ಯಾಶ್‍ಟ್ಯಾಗ್‍ನೊಂದಿಗೆ ಹಲವಾರು ಬಳಕೆದಾರರು ಸೇವೆಯ ಅಡಚಣೆಯ ಕುರಿತು ನವೀಕರಣಗಳು ಮತ್ತು ಮೀಮ್‍ಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸರ್ವರ್ ಡೌನ್, ಒಟಿಪಿ ಬರುತ್ತಿಲ್ಲ – ಉಡುಪಿಯಲ್ಲಿ ಪಡಿತರ ಗೊಂದಲ

    ಸರ್ವರ್ ಡೌನ್, ಒಟಿಪಿ ಬರುತ್ತಿಲ್ಲ – ಉಡುಪಿಯಲ್ಲಿ ಪಡಿತರ ಗೊಂದಲ

    ಉಡುಪಿ: ಕರ್ನಾಟಕದಲ್ಲಿ ಕೊರೊನಾ ಹಬ್ಬುತ್ತಿರುವ ರೀತಿ ಕಂಡು ರಾಜ್ಯದ ಜನರು ಆತಂಕಕ್ಕೀಡಾಗಿದ್ದಾರೆ. ಲಾಕ್‍ಡೌನ್ ಮತ್ತೆ ಮುಂದುವರೆಯಬಹುದು ಎಂದು ಅಂದುಕೊಂಡು ಪಡಿತರ ಅಂಗಡಿಗಳಿಗೆ ಜನ ಮುಗಿಬಿದ್ದಿದ್ದಾರೆ.

    ಉಡುಪಿ ಜಿಲ್ಲೆಯ 298 ಪಡಿತರ ಅಂಗಡಿಗಳಿಗೆ ಅಕ್ಕಿ ಮಾತ್ರ ಈವರೆಗೆ ಪೂರೈಕೆಯಾಗಿದೆ. ಗೋಧಿ, ಸಕ್ಕರೆ, ಎಣ್ಣೆ, ಬೇಳೆ ಕಾಳು ಯಾವುದು ಪೂರೈಕೆಯಾಗಿಲ್ಲ. ಬಿಪಿಎಲ್ ಕಾರ್ಡುದಾರರಿಗೆ ತಲಾ 14 ಕೆಜಿ ಅಕ್ಕಿ ವಿತರಿಸುವುದಾಗಿ ಸರ್ಕಾರ ಘೋಷಿಸಿತ್ತು. ಆದರೆ ಉಡುಪಿಯಲ್ಲಿ ಒಬ್ಬೊಬ್ಬರಿಗೆ 10 ಕೆಜಿ ಅಕ್ಕಿ ಮಾತ್ರ ಪೂರೈಕೆಯಾಗುತ್ತಿದೆ. ಒಟಿಪಿ, ಹೆಬ್ಬೆಟ್ಟಿನ ಗುರುತು ಇಲ್ಲದೆ ಪಡಿತರ ವಿತರಿಸಬೇಕೆಂದು ಸರ್ಕಾರ ಆದೇಶ ಮಾಡಿದೆ. ಕಳೆದೆರಡು ದಿನಗಳಿಂದ ಸರ್ವರ್ ಡೌನ್ ಆದ ಹಿನ್ನೆಲೆ ನಿಗದಿತ ಪ್ರಮಾಣದಲ್ಲಿ ಅಕ್ಕಿ ವಿತರಣೆ ಆಗುತ್ತಿಲ್ಲ. ಹೀಗಾಗಿ ನ್ಯಾಯಬೆಲೆ ಅಂಗಡಿಯ ಮುಂದೆ ಗ್ರಾಮೀಣ ಪ್ರದೇಶದಲ್ಲಿ ಜನ ಜಾತ್ರೆಯೇ ಆಗಿದೆ.

    ಕಾರ್ಕಳ ತಾಲೂಕು ಎರ್ಲಪ್ಪಾಡಿ ಗ್ರಾಮದ ನ್ಯಾಯಬೆಲೆ ಅಂಗಡಿಯ ಮುಂದೆ ನೂರಾರು ಜನ ಸರತಿ ಸಾಲಿನಲ್ಲಿ ನಿಂತ ದೃಶ್ಯ ಕಂಡು ಬಂದಿತ್ತು. ಸರ್ವರ್ ಡೌನ್ ಆಗಿರುವುದರಿಂದ ಜನ ಬಿಸಿಲಿನಲ್ಲಿ ಬೇಯಬೇಕಾಯಿತು. ದಿನಕ್ಕೆ 50 ಜನರಿಗೆ ಮಾತ್ರ ಪಡಿತರ ವಿತರಣೆ ಮಾಡುವ ಸುದ್ದಿ ಹರಿದಾಡುತ್ತಿರುವುದರಿಂದ ಜನ ಗೊಂದಲಕ್ಕೀಡಾಗಿ ಒಂದೇ ದಿನ ನ್ಯಾಯಬೆಲೆ ಅಂಗಡಿಯತ್ತ ಮುಖ ಮಾಡಿದ್ದರು.

    ಪಡಿತರ ಪಡೆದುಕೊಳ್ಳಲು ಬಂದ ಜನರು ಮಾತನಾಡಿ, ಎಲ್ಲಾ ದಿನಸಿ ಸಿಗುತ್ತಿಲ್ಲ. ಅಕ್ಕಿಗಾಗಿ ಮಧ್ಯಾಹ್ನದವರೆಗೆ ಕಾಯುವ ಸ್ಥಿತಿಯಿದೆ. ಅಧಿಕಾರಿಗಳು ಒಂದೊಂದು ಏರಿಯಾಕ್ಕೆ ಒಂದು ದಿನ ಅಂತ ನಿಗದಿಪಡಿಸಿದರೆ ಬಿಸಿಲಲ್ಲಿ ಕಾಯುವುದು ತಪ್ಪುತ್ತದೆ ಎಂದರು. ಅಲ್ಲದೇ ಸಾಮಾಜಿಕ ಹೋರಾಟಗಾರರು ನ್ಯಾಯಬೆಲೆ ಅಂಗಡಿ ಮಾಲೀಕರ ಜೊತೆ ವಾಗ್ವಾದ ನಡೆಸಿದ ಘಟನೆ ಕೂಡಾ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ನಡೆದಿದೆ.

  • ಎರಡು ದಿನ ವಿಶ್ವಾದ್ಯಂತ ಇಂಟರ್‌ನೆಟ್ ಸೇವೆಯಲ್ಲಿ ವ್ಯತ್ಯಯ

    ಎರಡು ದಿನ ವಿಶ್ವಾದ್ಯಂತ ಇಂಟರ್‌ನೆಟ್ ಸೇವೆಯಲ್ಲಿ ವ್ಯತ್ಯಯ

    ನವದೆಹಲಿ: ಮುಂದಿನ 48 ಗಂಟೆಗಳ ಕಾಲ ವಿಶ್ವಾದ್ಯಂತ ಇಂಟರ್‌ನೆಟ್ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ ಎಂದು ರಷ್ಯಾ ಟುಡೇ ವರದಿ ಮಾಡಿದೆ.

    ದಿ ಇಂಟರ್‍ನೆಟ್ ಕಾರ್ಪೋರೇಷನ್ ಆಫ್ ಅಸೈನ್ಡ್ ನೇಮ್ಸ್ ಆಂಡ್ ನಂಬರ್ಸ್ (ಐಸಿಎಎನ್‍ಎನ್) ಮುಂದಿನ 48 ಗಂಟೆಗಳ ಕಾಲ ಇಂಟರ್‍ನೆಟ್ ಅಡ್ರೆಸ್ ಬುಕ್ ಅಥವಾ ಡೊಮೈನ್ ನೇಮ್ ಸಿಸ್ಟಮ್ (ಡಿಎನ್‍ಎಸ್) ಅನ್ನು ಕಾಪಾಡುವ ಕ್ರಿಪ್ಟೋಗ್ರಾಫಿಕ್ ಕೀಯನ್ನು ಬದಲಾಯಿಸುತ್ತಿದೆ. ಈ ಸಂದರ್ಭದಲ್ಲಿ ಸರ್ವರ್ ಡೌನ್ ಆಗಿ ನೆಟ್‍ವರ್ಕ್ ಸಮಸ್ಯೆ ಎದುರಾಗಲಿದೆ ಎಂದು ಹೇಳಿದೆ.

    ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಸೈಬರ್ ದಾಳಿಗೆ ಕಡಿವಾಣ ಹಾಕಿ ಹೆಚ್ಚಿನ ಭದ್ರತೆ ನೀಡಲು ಈ ಬದಲಾವಣೆ ಮಾಡಲಾಗುತ್ತಿದೆ.

    ದಿ ಕಮ್ಯುನಿಕೇಷನ್ಸ್ ರೆಗ್ಯೂಲೇಟರಿ ಅಥಾರಿಟಿ (ಸಿಆರ್‌ಎ) ಪ್ರಕಾರ, ವಿಶ್ವಾದ್ಯಂತ ಇಂಟರ್‍ನೆಟ್ ವ್ಯತ್ಯಯವು ಡಿಎನ್‍ಎಸ್ ನ ಭದ್ರತೆ ಮತ್ತು ಬದ್ಧತೆಯನ್ನ ಕಾಪಾಡಲು ಅವಶ್ಯವಾಗಿದೆ. ಇದರಿಂದ ಮುಂದಿನ 48 ಗಂಟೆಗಳ ಇಂಟರ್‌ನೆಟ್ ಬಳಕೆದಾರಿಗೆ ಸಮಸ್ಯೆಯಗಲಿದೆ ಎಂದು ತಿಳಿಸಿದೆ.

    ಇಂಟರ್‌ನೆಟ್ ವ್ಯವಹಾರ ಮಾಡುವವರು ಔಟ್ ಡೇಟೆಡ್ ಇಂಟರ್‍ನೆಟ್ ಸರ್ವೀಸ್ ಪ್ರೊವೈಡರ್ (ಐಎಸ್‍ಪಿ) ಬಳಸುತ್ತಿದ್ದರೆ ಅವರಿಗೆ ಮತ್ತಷ್ಟು ಸಮಸ್ಯೆಯಾಗಲಿದೆ ಎಂದು ಹೇಳಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv