Tag: ಸರ್ಫರಾಜ್ ಖಾನ್

  • ಟೀಂ ಇಂಡಿಯಾ ಸ್ಟಾರ್‌ ಸರ್ಫರಾಜ್‌ ಖಾನ್‌ ಸಹೋದರನಿಗೆ ಆಕ್ಸಿಡೆಂಟ್

    ಟೀಂ ಇಂಡಿಯಾ ಸ್ಟಾರ್‌ ಸರ್ಫರಾಜ್‌ ಖಾನ್‌ ಸಹೋದರನಿಗೆ ಆಕ್ಸಿಡೆಂಟ್

    ಲಕ್ನೋ: ಟೀಂ ಇಂಡಿಯಾ ಕ್ರಿಕೆಟಿಗ ಸರ್ಫರಾಜ್‌ ಖಾನ್‌ ಅವರ ಸಹೋದರ ಮುಶೀರ್‌ ಖಾನ್‌ (Musheer Khan) ಅವರು ಉತ್ತರ ಪ್ರದೇಶದಲ್ಲಿ ರಸ್ತೆ ಅಪಘಾತಕ್ಕೀಡಾಗಿ (Road Accident) ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

    ಮುಂಬೈ ಮೂಲದ ಆಟಗಾರನಾದ ಮುಶೀರ್‌ ಖಾನ್‌ ಇರಾನಿ ಕಪ್‌ ಟೈ (Irani Cup tie) ಪರವಾಗಿ ಆಡಲು ಕಾನ್ಪುರದಿಂದ ಲಕ್ನೋಗೆ ತನ್ನ ಕೋಚ್‌ ಆಗಿರುವ ತಂದೆ ನೌಶಾದ್‌ ಖಾನ್‌ ಅವರೊಂದಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ರಸ್ತೆ ಅಪಘಾತಕ್ಕೀಡಾಗಿ ಮೂಳೆ ಮುರಿತಕ್ಕೆ ಒಳಗಾಗಿದ್ದಾರೆಂದು ತಿಳಿದುಬಂದಿದೆ. ಇದನ್ನೂ ಓದಿ: IPL 2025 Auction: ಮೆಗಾ ಹರಾಜಿಗೂ ಮುನ್ನ ಬಿಸಿಸಿಐನಿಂದ ಆಗುತ್ತಾ ಪ್ರಮುಖ ಬದಲಾವಣೆ?

    ಪ್ರತಿಭಾನ್ವಿತ ರಣಜಿ ಪ್ಲೇಯರ್‌ ಆಗಿರುವ 19 ವರ್ಷದ ಮುಶೀರ್‌ ಖಾನ್‌ ಈವರೆಗೆ 9 ಪ್ರಥಮದರ್ಜೆ ಪಂದ್ಯಗಳನ್ನಾಡಿದ್ದಾರೆ. ಇತ್ತೀಚೆಗೆ ದುಲೀಪ್‌ ಟ್ರೋಫಿಯಲ್ಲಿ ಭಾರತ – ಎ (India-A) ತಂಡದ ವಿರುದ್ಧ 181 ರನ್ ಗಳಿಸಿ ಮಿಂಚಿದ್ದರು. ಇದನ್ನೂ ಓದಿ: ಭಾರತ-ಬಾಂಗ್ಲಾ 2ನೇ ಟೆಸ್ಟ್ ಪಂದ್ಯಕ್ಕೆ ಮಳೆ ಕಾಟ – ಮೊದಲ ದಿನದಂತ್ಯಕ್ಕೆ ಬಾಂಗ್ಲಾದೇಶ 107ಕ್ಕೆ 3 ವಿಕೆಟ್‌

    ಮುಂದಿನ ಅಕ್ಟೋಬರ್‌ 1 ರಿಂದ 5ರ ವರೆಗೆ ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ರೆಸ್ಟ್ ಆಫ್ ಇಂಡಿಯಾ ವಿರುದ್ಧ ಮುಂಬೈನ ಇರಾನಿ ಕಪ್ ಟೈ ವಿರುದ್ಧ ರಣಜಿ (Ranji Trophy) ನಡೆಯಲಿದೆ. ಅಪಘಾತಕ್ಕೀಡಾಗಿರುವ ಮುಶೀರ್‌ ಆರಂಭಿಕ ಪಂದ್ಯಗಳನ್ನು ಕಳೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಮತ್ತೊಂದು ವರದಿಯ ಪ್ರಕಾರ, ಕುತ್ತಿಗೆಗೆ ಭಾಗಕ್ಕೆ ಗಾಯವಾಗಿರುವುದರಿಂದ ಮೂರು ತಿಂಗಳ ಕಾಲ ಹೊರಗುಳಿಯುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಇದನ್ನೂ ಓದಿ: IPL 2025 | ಮುಂಬೈ, ಆರ್‌ಸಿಬಿಗೆ ಬಿಗ್‌ ಶಾಕ್‌ – ದೈತ್ಯ ಆಟಗಾರರನ್ನೇ ಹೊರದಬ್ಬಿದ ಫ್ರಾಂಚೈಸಿ

  • Duleep Trophy | ಕನ್ನಡಿಗ ರಾಹುಲ್‌ ಹೋರಾಟ ವ್ಯರ್ಥ – ಭಾರತ-ಬಿ ತಂಡಕ್ಕೆ 76 ರನ್‌ಗಳ ಭರ್ಜರಿ ಜಯ

    Duleep Trophy | ಕನ್ನಡಿಗ ರಾಹುಲ್‌ ಹೋರಾಟ ವ್ಯರ್ಥ – ಭಾರತ-ಬಿ ತಂಡಕ್ಕೆ 76 ರನ್‌ಗಳ ಭರ್ಜರಿ ಜಯ

    – ಶುಭಮನ್‌ ಗಿಲ್‌ ಪಡೆಗೆ ಹೀನಾಯ ಸೋಲು

    ಬೆಂಗಳೂರು: ಸಂಘಟಿತ ಬೌಲಿಂಗ್‌, ಬ್ಯಾಟಿಂಗ್‌ ಪ್ರದರ್ಶನದೊಂದಿಗೆ ಭಾರತ-ಬಿ ತಂಡವು (India B), ಭಾರತ-ಎ ತಂಡದ ವಿರುದ್ಧ 76 ರನ್‌ಗಳ ಗೆಲುವು ಸಾಧಿಸಿದೆ. ಈ ಮೂಲಕ ದುಲೀಪ್‌ ಟ್ರೋಫಿಯಲ್ಲಿ ಆರಂಭಿಕ ಮುನ್ನಡೆ ಕಾಯ್ದುಕೊಂಡಿದೆ.

    ಬೆಂಗಳೂರಿನ (Bengaluru) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ದುಲೀಪ್‌ ಟ್ರೋಫಿ (Duleep Trophy) ಮೊದಲ ಪಂದ್ಯದಲ್ಲಿ ಅಭಿಮನ್ಯು ಈಶ್ವರನ್ ನಾಯಕತ್ವದ ʻಬಿʼ ತಂಡ ಅಮೋಘ ಜಯ ಸಾಧಿಸಿದೆ. ಆದ್ರೆ ಎರಡೂ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಶುಭಮನ್‌ ಗಿಲ್‌ ಪಡೆ ಆರಂಭಿಕ ಪಂದ್ಯದಲ್ಲಿ ಹೀನಾಯ ಸೋಲಿಗೆ ತುತ್ತಾಗಿದೆ. ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇಂಗ್ಲೆಂಡ್‌ ಆಲ್‌ರೌಂಡರ್‌ ಮೊಯಿಲ್‌ ಅಲಿ ಗುಡ್‌ಬೈ

    90 ರನ್‌ಗಳ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ ಬಿ ತಂಡ, ರಿಷಭ್‌ ಪಂತ್‌ ಅವರ ಅಮೋಘ ಅರ್ಧಶತಕ ಹಾಗೂ ಸರ್ಫರಾಜ್‌ ಖಾನ್‌ ಬ್ಯಾಟಿಂಗ್‌ ನೆರವಿನೊಂದಿಗೆ 42 ಓವರ್‌ಗಳಲ್ಲಿ 184 ರನ್‌ ಗಳಿಸಿತ್ತು. ಈ ಮೂಲಕ ಒಟ್ಟು 274 ರನ್‌ ಗಳಿಸಿ, ಎದುರಾಳಿ ತಂಡಕ್ಕೆ 275 ರನ್‌ ಗುರಿ ನೀಡಿತ್ತು. ಸ್ಪರ್ಧಾತ್ಮಕ ರನ್‌ಗಳ ಗುರಿ ಬೆನ್ನಟ್ಟಿದ ಎ ತಂಡ 2ನೇ ಇನ್ನಿಂಗ್ಸ್‌ನಲ್ಲಿ 198 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ ಸೋಲು ಕಂಡಿತು.

    ಸ್ಪರ್ಧಾತ್ಮಕ ಗುರಿ ಪಡೆದಿದ್ದ ಎ ತಂಡ ಆರಂಭದಲ್ಲೇ ವಿಕೆಟ್‌ ಕಳೆದುಕೊಳ್ಳಲು ಶುರು ಮಾಡಿತು. ಆರಂಭಿಕ ಮಯಾಂಕ್‌ ಅಗರ್ವಾಲ್‌ 3 ರನ್‌ಗಳಿಗೆ ಪೆವಿಲಿಯನ್‌ಗೆ ಮರಳಿದರು. ಬಳಿಕ ಉತ್ತಮ ಪ್ರದರ್ಶನದ ಭರವಸೆ ಮೂಡಿಸಿದ್ದ ಶುಭಮನ್‌ ಗಿಲ್‌ ಕೇವಲ 21 ರನ್‌ಗಳಿಗೆ ಔಟಾದರು. ಈ ಬೆನ್ನಲೇ ಟಿ20 ಕ್ರಿಕೆಟ್‌ನಂತೆ ಸ್ಫೋಟಕ ಪ್ರದರ್ಶನಕ್ಕೆ ಮುಂದಾದ ರಿಯಾನ್‌ ಪರಾಗ್‌ 18 ಎಸೆತಗಳಲ್ಲಿ 31 ರನ್‌ ಬಾರಿಸಿ ಔಟಾದರು. ನಂತರದಲ್ಲಿ ಕೆ.ಎಲ್‌ ರಾಹುಲ್‌, ಆಕಾಶ್‌ ದೀಪ್‌ ಹೊರತುಪಡಿಸಿದ್ರೆ ಉಳಿದ ಆಟಗಾರರು ಅಲ್ಪಮೊತ್ತಕ್ಕೆ ನಿರ್ಗಮಿಸಿದ ಕಾರಣ ಭಾರತ ಎ ತಂಡ ಸೋಲಬೇಕಾಯಿತು.

    ಭಾರತ-ಎ ತಂಡದ ಪರ ಕೆ.ಎಲ್‌ ರಾಹುಲ್‌ 57 ರನ್‌ (121 ಎಸೆತ, 7 ಬೌಂಡರಿ), ಆಕಾಶ್‌ ದೀಪ್‌ 43 ರಮ್‌, ಶಿವಂ ದುಬೆ, ಕುಲ್ದೀಪ್‌ ಯಾದವ್‌ ತಲಾ 14 ರನ್‌ಗಳ ಕೊಡುಗೆ ನೀಡಿದರು. ಇದನ್ನೂ ಓದಿ: U-20 World Wrestling Championships – ಭಾರತಕ್ಕೆ 2 ಪದಕ; ನಿಕಿತಾಗೆ ಬೆಳ್ಳಿ, ನೇಹಾಗೆ ಕಂಚು!

    ಇದಕ್ಕೂ ಮುನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತ – ಬಿ ತಂಡದ ಪರ ರಿಷಭ್‌ ಪಂತ್‌ ಹಾಗೂ ಸರ್ಫರಾಜ್‌ ಖಾನ್‌ ಅವರ ಅಮೋಘ ಪ್ರದರ್ಶನ ತಂಡಕ್ಕೆ ನೆರವಾಯಿತು. ಪಂತ್‌ 47 ಎಸೆತಗಳಲ್ಲಿ 61 ರನ್‌ (9 ಬೌಂಡರಿ, 2 ಸಿಕ್ಸರ್)‌, ಸರ್ಫರಾಜ್‌ 46 ರನ್‌ (36 ಎಸೆತ, 7 ಬೌಂಡರಿ, 1 ಸಿಕ್ಸರ್)‌ ಗಳಿಸಿದ್ರೆ, ನಿತಿಶ್‌ ಕುಮಾರ್‌ ರೆಡ್ಡಿ 19 ರನ್‌, ನವದೀಪ್‌ ಸೈನಿ 13 ರನ್‌, ಯಶ್‌ ದಯಾಳ್‌ 16 ರನ್‌ಗಳ ಕೊಡುಗೆ ನೀಡಿದರು.

    ಸಂಕ್ಷಿಪ್ತ ಸ್ಕೋರ್‌
    ಮೊದಲ ಇನ್ನಿಂಗ್ಸ್‌
    ಭಾರತ ಬಿ ತಂಡ – 321/10
    ಭಾರತ ಎ ತಂಡ – 231/10

    ದ್ವಿತೀಯ ಇನ್ನಿಂಗ್ಸ್‌
    ಭಾರತ ಬಿ ತಂಡ – 184/10
    ಭಾರತ ಎ ತಂಡ – 198/10

    ಇನ್ನೂ ಭಾರತ ಸಿ ಮತ್ತು ಭಾರತ ಡಿ ತಂಡಗಳ ನಡುವಿನ ಹಣಾಹಣಿಯಲ್ಲಿ ರುತುರಾಜ್‌ ಗಾಯಕ್ವಾಡ್‌ ನಾಯಕತ್ವದ ʻಸಿʼ ತಂಡ ಶ್ರೇಯಸ್‌ ಅಯ್ಯರ್‌ ನಾಯಕತ್ವದ ʻಡಿʼ ತಂಡದ ವಿರುದ್ಧ 4 ವಿಕೆಟ್‌ಗಳ ಗೆಲುವು ಸಾಧಿಸಿದೆ. ಇದನ್ನೂ ಓದಿ: Duleep Trophy | ಮುಶೀರ್ ಕೈತಪ್ಪಿದ ದ್ವಿಶತಕ – ಕೊನೇ 3 ವಿಕೆಟ್‌ಗೆ 227 ರನ್‌ ಪೇರಿಸಿದ ಭಾರತ-ಬಿ ತಂಡ!

  • ರಣಜಿಯಲ್ಲಿ ದ್ವಿಶತಕ ಸಿಡಿಸಿ ಸರ್ಫರಾಜ್‌ ಖಾನ್‌ ಸಹೋದರ ಶೈನ್‌; ಕ್ರಿಕೆಟ್‌ ಲೋಕದಲ್ಲಿ ಅಣ್ತಮ್ಮ ಕಮಾಲ್‌!

    ರಣಜಿಯಲ್ಲಿ ದ್ವಿಶತಕ ಸಿಡಿಸಿ ಸರ್ಫರಾಜ್‌ ಖಾನ್‌ ಸಹೋದರ ಶೈನ್‌; ಕ್ರಿಕೆಟ್‌ ಲೋಕದಲ್ಲಿ ಅಣ್ತಮ್ಮ ಕಮಾಲ್‌!

    ಮುಂಬೈ: ಸದ್ಯ ಇಂಗ್ಲೆಂಡ್‌ (England) ವಿರುದ್ಧ ನಡೆಯುತ್ತಿರುವ ಟೆಸ್ಟ್‌ ಸರಣಿಯಲ್ಲಿ ಟೀಂ ಇಂಡಿಯಾ ಪರ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡುತ್ತಿರುವ ಸರ್ಫರಾಜ್‌ ಖಾನ್‌ (Sarfaraz Khan) ಅವರ ಕಿರಿಯ ಸಹೋದರ ರಣಜಿಯಲ್ಲಿ ದ್ವಿಶತಕ ಸಿಡಿಸಿ ಮಿಂಚಿದ್ದಾರೆ.

    ಇಲ್ಲಿನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಕ್ರೀಡಾಂಗಣದಲ್ಲಿ ಶನಿವಾರ ಬರೋಡಾ ವಿರುದ್ಧ ನಡೆದ ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್‌ನಲ್ಲಿ ಮುಂಬೈ ತಂಡದ ಯುವ ಬ್ಯಾಟರ್ ಮುಶೀರ್ ಖಾನ್ (Musheer Khan) ಪ್ರಥಮ ದರ್ಜೆ ಕ್ರಿಕೆಟ್‌ನ ತಮ್ಮ ಚೊಚ್ಚಲ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸಿದ್ದಾರೆ. ಈ ಮೂಲಕ 18 ಓವರ್‌ಗಳಲ್ಲಿ 99 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದ ಮುಂಬೈ ತಂಡಕ್ಕೆ ಮುಶೀರ್ ಆಸರೆಯಾಗಿದ್ದಾರೆ.

    3ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದು ಭದ್ರವಾಗಿ ನೆಲೆಯೂರಿದ ಮುಶೀರ್ 350 ಎಸೆತಗಳಲ್ಲಿ 18 ಬೌಂಡರಿಗಳೊಂದಿಗೆ ಅಜೇಯ ದ್ವಿಶತಕ ಬಾರಿಸಿದ್ದಾರೆ. ಒಟ್ಟು 357 ಎಸೆತಗಳಲ್ಲಿ 203 ರನ್‌ ಗಳಿಸಿ ಅಜೇಯರಾಗುಳಿದಿದ್ದಾರೆ. ಇದರಿಂದಾಗಿ ಮುಂಬೈ ತಂಡವು 384 ರನ್‌ಗಳ ಬೃಹತ್‌ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಕಳೆದ ಮೂರು ಪಂದ್ಯಗಳ 5 ಇನ್ನಿಂಗ್ಸ್‌ಗಳಲ್ಲಿ ಕೇವಲ 96 ರನ್‌ ಗಳಿಸಿದ್ದ ಮುಶೀರ್‌ ದ್ವಿಶತಕ ಬಾರಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

    ರಣಜಿಯಲ್ಲಿ ಸರ್ಫರಾಜ್‌ ಸಹೋದರ ಶೈನ್‌:
    ತಮ್ಮ ಚೊಚ್ಚಲ ಶತಕವನ್ನೇ ದ್ವಿಶತಕವನ್ನಾಗಿ (Maiden Double Hundred) ಪರಿವರ್ತಿಸಿದ ಮುಶೀರ್ ಖಾನ್‌, ರಣಜಿ ಕ್ರಿಕೆಟ್‌ನಲ್ಲಿ ಅತ್ಯಂತ ಕಿರಿಯ ವಯಸ್ಸಿಗೇ (18 ವರ್ಷ 362 ದಿನಗಳು) ದ್ವಿಶತಕ ಸಿಡಿಸಿದ ಮುಂಬೈನ 2ನೇ ಬ್ಯಾಟರ್‌ ಸಹ ಎನಿಸಿಕೊಂಡಿದ್ದಾರೆ. 1996-97ರಲ್ಲಿ ಸೌರಾಷ್ಟ್ರ ವಿರುದ್ಧ ನಡೆದ ರಣಜಿ ಟ್ರೋಫಿಯಲ್ಲಿ ವಾಸಿಂ ಜಾಫರ್ 18 ವರ್ಷ 262 ದಿನಗಳು ವಯಸ್ಸಿನವರಿದ್ದಾಗ ದ್ವಿಶತಕ ಸಿಡಿಸಿದ ದಾಖಲೆ ಮಾಡಿದ್ದರು.

    ಸದ್ಯ ಮುಂಬೈ ನೀಡಿದ 385 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿರುವ ಬರೋಡಾ ತಂಡ 8 ಓವರ್‌ಗಳಲ್ಲಿ 33 ರನ್‌ಗಳಿಗೆ 1 ವಿಕೆಟ್‌ ಕಳೆದುಕೊಂಡಿದೆ.

  • 6ನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದು ತ್ರಿಶತಕ ಸಿಡಿಸಿದ ಸರ್ಫರಾಜ್- ಯುಪಿ ವಿರುದ್ಧ ಮುಂಬೈಗೆ ಇನ್ನಿಂಗ್ಸ್ ಮುನ್ನಡೆ

    6ನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದು ತ್ರಿಶತಕ ಸಿಡಿಸಿದ ಸರ್ಫರಾಜ್- ಯುಪಿ ವಿರುದ್ಧ ಮುಂಬೈಗೆ ಇನ್ನಿಂಗ್ಸ್ ಮುನ್ನಡೆ

    – ಹಿಟ್‍ಮ್ಯಾನ್, ಗವಾಸ್ಕರ್ ಪಟ್ಟಿಗೆ ಸೇರಿದ ಖಾನ್
    – 633 ನಿಮಿಷದಲ್ಲಿ 30 ಬೌಂಡರಿ, 8 ಸಿಕ್ಸರ್‌ನಿಂದ 301 ರನ್

    ಮುಂಬೈ: ಯುವ ಆಟಗಾರ ಸರ್ಫರಾಜ್ ಖಾನ್ ಅವರ ತ್ರಿಶತಕದಿಂದ ಮುಂಬೈ ತಂಡವು ಉತ್ತರ ಪ್ರದೇಶ ನೀಡಿದ್ದ 625 ರನ್‍ಗಳ ಗುರಿಯನ್ನು ಹಿಂದಿಕ್ಕಿ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ.

    ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ರಣಜಿ ಟ್ರೋಫಿಯ ಭಾಗವಾಗಿ ಉತ್ತರ ಪ್ರದೇಶ ವಿರುದ್ಧ ನಡೆದ ಪಂದ್ಯದಲ್ಲಿ ಸರ್ಫರಾಜ್ ಖಾನ್ ತ್ರಿಶತಕ ಸಾಧನೆ ಮಾಡಿದ್ದಾರೆ. 633 ನಿಮಿಷಗಳ ಕಾಲ ಬ್ಯಾಟಿಂಗ್ ಮಾಡಿದ ಸರ್ಫರಾಜ್ ಔಟಾಗದೆ 301 ರನ್ (391 ಎಸೆತ, 30 ಬೌಂಡರಿ, 8 ಸಿಕ್ಸರ್) ಸಿಡಿಸಿದರು. ಈ ಮೂಲಕ ಉತ್ತರ ಪ್ರದೇಶದ ವಿರುದ್ಧ ಮುಂಬೈ ತಂಡವು 3 ಅಂಕ ಸಂಪಾದಿಸಿಕೊಂಡಿದೆ.

    ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಉತ್ತರ ಪ್ರದೇಶ ತಂಡವು ಅಕ್ಷದೀಪ್ ನಾಥ್ 115 ರನ್ ಹಾಗೂ ಉಪೇಂದ್ರ ಯಾದವ್ ಅವರ 203 ರನ್‍ನಿಂದ 159.3 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ  625 ರನ್‍ಗಳಿಸಿ ಡಿಕ್ಲೇರ್ ಘೋಷಿಸಿಕೊಂಡಿತ್ತು. ಈ ಬೃಹತ್ ರನ್‍ಗಳ ಮೊತ್ತವನ್ನು ಬೆನ್ನಟ್ಟಿದ ಮುಂಬೈ 16 ರನ್‍ಗಳಿಗೆ 2 ವಿಕೆಟ್ ಕಳೆದುಕೊಂಡಿತು. ಆದರೆ ಭುಪಿನ್ ಲವಣಿ ವಿಕೆಟ್ ಕಾಯ್ದುಕೊಂಡು ಬ್ಯಾಟಿಂಗ್ ಮಾಡಿದರು. ಆದರೆ 43 ಗಳಿಸಿದ್ದಾಗ ವಿಕೆಟ್ ಒಪ್ಪಿಸಿದ ಪೆವಿಲಿಯನ್‍ಗೆ ತೆರಳಿದರು.

    ಮುಂಬೈ ಬ್ಯಾಟ್ಸ್‌ಮನ್‌ ಜೀತಂದ್ರ ತಾಮೊರೆ 51 ರನ್, ಸಿದ್ಧಾರ್ಥ್ ಲಾಡ್ 98 ರನ್ ಗಳಿಸಿದರು. ಬಳಿಕ ಆರನೇ ಕ್ರಮಾಂಕದಲ್ಲಿ ಮೈದಾಕ್ಕಿಳಿದ ಸರ್ಫರಾಜ್ ಖಾನ್ ಔಟಾಗದೆ 301 ಗಳಿಸಿದರು. ಆದಿತ್ಯಾ ತಾರೆ 97 ರನ್, ಮುಲಾನಿ 65 ರನ್‍ಗಳ ಸಹಾಯದಿಂದ ಮುಂಬೈ 625 ರನ್‍ಗಳ ಬೃಹತ್ ಮೊತ್ತವನ್ನು ಹಿಂದಿಕ್ಕಿತು. ಬಳಿಕ 166.3 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 688 ರನ್‍ಗಳಿಸಿದ್ದಾಗ ಡಿಕ್ಲೇರ್ ಘೋಷಿಸಿತು. ಈ ಮೂಲಕ 63 ರನ್‍ಗಳ ಇನ್ನಿಂಗ್ಸ್ ಮುನ್ನಡೆಯೊಂದಿಗೆ 3 ಅಂಕ ಸಂಪಾದಿಸಿತು.

    6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮೈದಾಕ್ಕಿಳಿದು ತ್ರಿಶತಕ ಸಿಡಿಸಿದ ಭಾರತದ ಎರಡನೇ ಬ್ಯಾಟ್ಸ್‌ಮನ್‌ ಹಾಗೂ ತ್ರಿಶಕ ಸಿಡಿಸಿದ ಮುಂಬೈನ 7ನೇ, ದೇಶದ 45ನೇ ಬ್ಯಾಟ್ಸ್‌ಮನ್‌ ಎಂಬ ಖ್ಯಾತಿಗೆ ಸರ್ಫರಾಜ್ ಖಾನ್ ಪಾತ್ರರಾದರು.

    ಸರ್ಫರಾಜ್ ಖಾನ್ ಮುಂಬೈ ಪರ ತ್ರಿಶತಕ ಗಳಿಸಿದ ಏಳನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. ವಾಸಿಮ್ ಜಾಫರ್ ಎರಡು ಬಾರಿ ಈ ಸಾಧನೆ ಮಾಡಿದ್ದಾರೆ. ಅವರು 301 ರನ್ ಮತ್ತು ಔಟಾಗದೆ 314 ರನ್ ಗಳಿಸಿದ್ದರು. ರೋಹಿತ್ ಶರ್ಮಾ ಔಟಾಗದೆ 309 ರನ್, ಅಜಿತ್ ವಾಡೆಕರ್ 323 ರನ್, ಸುನಿಲ್ ಗವಾಸ್ಕರ್ 340 ರನ್, ವಿಜಯ್ ಮರ್ಚೆಂಟ್ ಔಟಾಗದೆ 359 ಮತ್ತು ಸಂಜಯ್ ಮಂಜ್ರೇಕರ್ 377 ರನ್ ಗಳಿಸಿದ್ದರು.