Tag: ಸರ್ಫರಾಜ್ ಅಹ್ಮದ್

  • ಧೋನಿ ನಿವೃತ್ತಿಯಾಗಿದ್ದಾರಾ? ಪತಿಯನ್ನು ಟೀಕಿಸಿದವರಿಗೆ ಸರ್ಫರಾಜ್ ಅಹ್ಮದ್ ಪತ್ನಿ ತಿರುಗೇಟು

    ಧೋನಿ ನಿವೃತ್ತಿಯಾಗಿದ್ದಾರಾ? ಪತಿಯನ್ನು ಟೀಕಿಸಿದವರಿಗೆ ಸರ್ಫರಾಜ್ ಅಹ್ಮದ್ ಪತ್ನಿ ತಿರುಗೇಟು

    ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕತ್ವದಿಂದ ಸರ್ಫರಾಜ್ ಅಹ್ಮದ್‍ರನ್ನು ಕೆಳಗಿಳಿಸಿದ ಬಳಿಕ ಸರ್ಫರಾಜ್ ಪತ್ನಿ ಖುಷ್ ಬಹ್ತ್ ಪತಿ ವಿರುದ್ಧ ಕೇಳಿ ಬಂದ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ. ಆದರೆ ಖುಷ್ ಬಹ್ತ್ ಪತಿಯ ಬೆಂಬಲಕ್ಕೆ ನಿಲ್ಲಲು ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿಯನ್ನು ಉದಾಹರಣೆಯಾಗಿ ನೀಡಿ ಪತಿಯನ್ನು ಸಮರ್ಥಿಸಿಕೊಂಡಿದ್ದಾರೆ.

    ಟೀ ಇಂಡಿಯಾ ಆಟಗಾರ 38 ವರ್ಷದ ಎಂಎಸ್ ಧೋನಿ ಕ್ರಿಕೆಟ್ ಆಡುತ್ತಿದ್ದ ಸಂದರ್ಭದಲ್ಲಿ ತನ್ನ ಪತಿ ಏಕೆ ಕ್ರಿಕೆಟ್ ಆಡಬಾರದು ಎಂಬುವುದು ಖುಷ್ ಬಹ್ತ್ ಅವರ ವಾದವಾಗಿದೆ. ಅಲ್ಲದೇ ತಮ್ಮ ಪತಿ ಮತ್ತಷ್ಟು ಸಮರ್ಥರಾಗಿ ತಂಡಕ್ಕೆ ಕಮ್‍ಬ್ಯಾಕ್ ಮಾಡುತ್ತಾರೆ ಎಂದು ಖುಷ್ ಬಹ್ತ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಸಂದರ್ಶನವೊಂದರಲ್ಲಿ ಮಾತನಾಡಿದ ಖುಷ್ ಬಹ್ತ್, ನನ್ನ ಪತಿ ಏಕೆ ನಿವೃತ್ತಿಯಾಗಬೇಕು? ಅವರಿಗೆ ಇನ್ನು 32 ವರ್ಷವಷ್ಟೇ. ಧೋನಿ ಅವರ ವಯಸ್ಸೆಷ್ಟು? ಅವರು ಈ ವಯಸ್ಸಿಗೆ ನಿವೃತ್ತಿಯಾಗಿದ್ದಾರಾ ಎಂದು ಪ್ರಶ್ನೆ ಮಾಡಿ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ.

    2019ರ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಿಂದ ಪಾಕಿಸ್ತಾನ ಕ್ರಿಕೆಟ್ ತಂಡ ಹೊರಬಿದ್ದ ಬಳಿಕ ತಂಡದ ನಾಯಕತ್ವ ಕುರಿತು ಭಾರೀ ಟೀಕೆ ವ್ಯಕ್ತವಾಗಿತ್ತು. ಅಲ್ಲದೇ ಆ ಬಳಿಕ ನಡೆದ ಶ್ರೀಲಂಕಾ ವಿರುದ್ಧ ಕ್ರಿಕೆಟ್ ಟೂರ್ನಿಯಲ್ಲೂ ಪಾಕ್ ತಂಡ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಪರಿಣಾಮ ಪಾಕ್ ಕ್ರಿಕೆಟ್ ಬೋರ್ಡ್, ಸರ್ಫರಾಜ್ ಅಹ್ಮದ್‍ರನ್ನು ಟೆಸ್ಟ್, ಟಿ20 ತಂಡದ ನಾಯಕತ್ವದಿಂದ ಸರ್ಫರಾಜ್ ಅಹ್ಮದ್ ರನ್ನು ಕೆಳಗಿಳಿಸಿ ಅಝರ್ ಅಲಿರನ್ನು ನಾಯಕರನ್ನಾಗಿ ಮಾಡಿತ್ತು. ನಾಯಕತ್ವದಿಂದ ಕೆಳಗಿಳಿಸಿದ್ದು ಮಾತ್ರವಲ್ಲದೇ ಟೆಸ್ಟ್ ಹಾಗೂ ಟಿ20 ತಂಡದಿಂದಲೂ ಸರ್ಫರಾಜ್‍ರನ್ನು ಕೈ ಬಿಟ್ಟಿತ್ತು.

  • ಬೊಜ್ಜು ತುಂಬಿಕೊಂಡ, ನಾಯಕ ಆಡಲು ಅನರ್ಹ – ಶೋಯೆಬ್ ಅಖ್ತರ್ ಕಿಡಿ

    ಬೊಜ್ಜು ತುಂಬಿಕೊಂಡ, ನಾಯಕ ಆಡಲು ಅನರ್ಹ – ಶೋಯೆಬ್ ಅಖ್ತರ್ ಕಿಡಿ

    ನವದೆಹಲಿ: 2019ರ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋಲುಂಡಿದ್ದ ಪಾಕಿಸ್ತಾನದ ತಂಡದ ವಿರುದ್ಧ ದೇಶದ ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಪಾಕ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಶೋಯೆಬ್ ಅಖ್ತರ್ ನಾಯಕ ಸರ್ಫರಾಜ್ ಖಾನ್ ವಿರುದ್ಧ ಕಿಡಿಕಾರಿದ್ದಾರೆ.

    ತಂಡದ ನಾಯಕ ಸರ್ಫರಾಜ್ ಅಹ್ಮದ್ ಟಾಸ್‍ಗೆ ಆಗಮಿಸುತ್ತಿದ್ದ ವೇಳೆ ಆತನ ಹೊಟ್ಟೆ ಬೊಜ್ಜಿನಿಂದ ಕೂಡಿರುವುದನ್ನು ನೋಡಿ ನನಗೆ ಅಸಹ್ಯವಾಗಿತ್ತು. ಇದುವರೆಗೂ ನಾನು ನೋಡಿದ ಆನ್ ಫಿಟ್ ಕ್ಯಾಪ್ಟನ್ ಎಂದರೆ ಈತನೆ. ಆತನ ದೇಹದಲ್ಲಿ ತುಂಬಿಕೊಂಡಿದ್ದ ಬೊಜ್ಜಿನಿಂದ ಆತ ನಡೆದಾಡುವುದಕ್ಕೂ ಕಷ್ಟ ಪಡುತ್ತಿದ್ದ. ಅಲ್ಲದೇ ವಿಕೆಟ್ ಕೀಪಿಂಗ್ ಸಮಯದಲ್ಲಿ ಭಾರೀ ಅವಸ್ಥೆ ಪಡುತ್ತಿದ್ದನ್ನು ಗಮನಿಸಿದ್ದೇನೆ ಎಂದು ಶೋಯೆಬ್ ಅಖ್ತರ್ ಬೇಸರ ವ್ಯಕ್ತಪಡಿಸಿದ್ದಾರೆ.

    ಪಂದ್ಯದ ವೇಳೆ ಅಖ್ತರ್ ಈ ಮೇಲಿನ ಮಾತುಗಳನ್ನು ಆಡಿದ್ದು, ಆ ಬಳಿಕ ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ‘ಆಗಿದ್ದು.. ಆಗಿದೆ.. ನನ್ನ ಆಲೋಚನೆಗಳ ಭಾವೋದ್ವೇಗದಲ್ಲಿ ಆಡಿದ ಮಾತುಗಳನ್ನು ಮತ್ತೊಮ್ಮೆ ಚಿಂತಿಸುತ್ತಿದ್ದೇನೆ. ದೇಶದ ಪರ ಆಡುತ್ತಿರುವ ಆಟಗಾರರಿಗೆ ನಾವು ಬೆಂಬಲವಾಗಿರುವುದು ಅಗತ್ಯ. ಟೂರ್ನಿ ಅಂತ್ಯವಾಗುವವರೆಗೂ ನಮ್ಮ ಬೆಂಬಲ ಆಟಗಾರರಿಗೆ ಬೇಕು’ ಎಂದು ಟ್ವೀಟ್ ಮಾಡಿದ್ದಾರೆ.

    ಪಂದ್ಯದ ಸೋಲಿನ ಬಳಿಕ ಪ್ರತಿಕ್ರಿಯೆ ನೀಡಿದ ಸರ್ಫರಾಜ್ ಅಹ್ಮದ್, 2017 ಚಾಂಪಿಯನ್ಸ್ ಟ್ರೋಫಿಯಲ್ಲಿಯೂ ಕೂಡ ಭಾರತ ತಂಡ ಕೂಡ ಮೊದಲ ಪಂದ್ಯಗಳಲ್ಲಿ ಸೋಲುಂಡಿತ್ತು. ಆದರೆ ಫೈನಲ್ ವೇಳೆಗೆ ಟೈಟಲ್ ಗೆದ್ದು ಸಂಭ್ರಮಿಸಿತ್ತು ಎಂದು ನೆನಪು ಮಾಡಿದ್ದಾರೆ. ಅಲ್ಲದೇ ಸೋಲಿನಿಂದ ಆಟಗಾರರು ಪಾಠ ಕಲಿತು ಟೈಟಲ್ ಗೆಲುವಿನ ರೇಸ್ ನಲ್ಲಿ ಇರುತ್ತೇವೆ. ಟೂರ್ನಿಯ ಉಳಿದ 8 ಪಂದ್ಯಗಳಲ್ಲಿ ತಂಡ ಉತ್ತಮ ಪ್ರದರ್ಶನ ನೀಡುತ್ತದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದರು. ಇದನ್ನು ಓದಿ: ಬಿರಿಯಾನಿ ಸವಿಯುತ್ತಾ ಕುಳಿತ ಪಾಕ್ ಕ್ರಿಕೆಟಿಗರ ವಿರುದ್ಧ ವಾಸೀಂ ಅಕ್ರಂ ಗರಂ

  • ಸಾಂಪ್ರದಾಯಿಕ ಡ್ರೆಸ್ ತೊಟ್ಟು ಪಾಕ್ ಕ್ರಿಕೆಟಿಗ ಟ್ರೋಲ್!

    ಸಾಂಪ್ರದಾಯಿಕ ಡ್ರೆಸ್ ತೊಟ್ಟು ಪಾಕ್ ಕ್ರಿಕೆಟಿಗ ಟ್ರೋಲ್!

    ನವದೆಹಲಿ: ಇಂಗ್ಲೆಂಡ್ ರಾಣಿ ಎಲಿಜಬೆತ್‍ರನ್ನು ಭೇಟಿ ಮಾಡಲು ಸಾಂಪ್ರದಾಯಿಕ ಉಡುಗೆ ತೊಟ್ಟು ಬಂದಿದ್ದ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ ಅಹ್ಮದ್ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದಾರೆ.

    2019ರ ವಿಶ್ವಕಪ್‍ಗೆಂದು ಇಂಗ್ಲೆಂಡ್‍ಗೆ ತೆರಳಿರುವ 10 ತಂಡಗಳ ನಾಯಕರನ್ನು ಬ್ರಿಟನ್ ರಾಣಿ ಎಲಿಜಬೆತ್ ಮತ್ತು ಯುವರಾಜ ಹ್ಯಾರಿ ಅವರು ಭೇಟಿ ಮಾಡಿ ಶುಭಕೋರಿದ್ದಾರೆ. ಈ ಸಮಾರಂಭದಲ್ಲಿ ಇಂಗ್ಲೆಂಡ್‍ನ ಹಲವು ರಾಜ ಮನೆತನದವರು ನಾಯಕರನ್ನು ಭೇಟಿಯಾಗಿ ಶುಭಕೋರಿದ್ದಾರೆ.

    ಈ ಸಮಾರಂಭಕ್ಕೆ ಎಲ್ಲಾ ತಂಡದ ನಾಯಕರುಗಳು ಸೂಟ್‍ಗಳನ್ನು ಧರಿಸಿ ರಾಣಿಯನ್ನು ಭೇಟಿಯಾದರೆ ಪಾಕಿಸ್ತಾನದ ನಾಯಕ ಸರ್ಫರಾಜ್ ಅಹ್ಮದ್ ಅವರು ಮಾತ್ರ ಸಾಂಪ್ರದಾಯಿಕ ಉಡುಪು ಧರಿಸಿ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿದ್ದಾರೆ. ಈ ಸಮಾರಂಭದಲ್ಲಿ ಸರ್ಫರಾಜ್ ಅವರು ತಮ್ಮ ದೇಶದ ಸಾಂಪ್ರದಾಯಿಕ ಉಡುಪಾದ ಬಿಳಿ ಬಣ್ಣದ ಸಲ್ವಾರ್ ಕಮೀಜ್‍ನ್ನು ಧರಿಸಿ ಅದರ ಮೇಲೆ ತಮ್ಮ ತಂಡದ ಹಸಿರು ಬಣ್ಣದ ಕೋಟನ್ನು ಧರಿಸಿ ಸಮಾರಂಭಕ್ಕೆ ಬಂದಿದ್ದಾರೆ.

    ಈ ವಿಷಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಚರ್ಚೆಯಾಗುತ್ತಿದ್ದು ಸರ್ಫರಾಜ್ ಅಹ್ಮದ್‍ರನ್ನು ಟೀಕಿಸಿ ಟ್ವೀಟ್ ಮಾಡಿರುವ ಪಾಕಿಸ್ತಾನ ಮೂಲದ ಕೆನೆಡಿಯಾನ್ ಬರಹಗಾರ ಟರೆಕ್ ಫತಾಹ್ ಪೈಜಾಮಾ ಧರಿಸಿ ಬಂದಿದ್ದಾರೆ. ಸದ್ಯ ಅವರು ಲುಂಗಿ, ಬನ್ಯನ್, ಟೋಪಿ ಧರಿಸಿ ಬಂದಿಲ್ಲ ಎಂದು ಅಶ್ಚರ್ಯ ವ್ಯಕ್ತಪಡಿಸಿದ್ದಾರೆ.

    ಸರ್ಫರಾಜ್ ಅಹ್ಮದ್ ನಾಯಕನಾಗಿರುವ ಪಾಕಿಸ್ತಾನ ತಂಡ ವಿಶ್ವಕಪ್‍ನ ಮೊದಲ ಪಂದ್ಯವನ್ನು ಇಂದು ವೆಸ್ಟ್ ಇಂಡೀಸ್ ವಿರುದ್ಧ ಆಡಲಿದೆ.

  • ಧೋನಿಯನ್ನು ಅನುಕರಣೆ ಮಾಡಲು ಹೋಗಿ ಫೇಲ್ ಆದ ಪಾಕ್ ವಿಕೆಟ್ ಕೀಪರ್ – ವಿಡಿಯೋ ನೋಡಿ

    ಧೋನಿಯನ್ನು ಅನುಕರಣೆ ಮಾಡಲು ಹೋಗಿ ಫೇಲ್ ಆದ ಪಾಕ್ ವಿಕೆಟ್ ಕೀಪರ್ – ವಿಡಿಯೋ ನೋಡಿ

    ಬುಲಬಾಯೊ: ಜಿಂಬಾಬ್ವೆ ವಿರುದ್ಧ ನಡೆದ ಏಕದಿನ ಟೂರ್ನಿಯ ಕೊನೆಯ ಪಂದ್ಯದಲ್ಲಿ ಪಾಕ್ ತಂಡದ ನಾಯಕ, ವಿಕೆಟ್ ಕೀಪರ್ ಸರ್ಫರಾಜ್ ಅಹ್ಮದ್ ಟೀಂ ಇಂಡಿಯಾ ಮಾಜಿ ನಾಯಕ ಧೋನಿ ಅವರನ್ನು ಅನುಕರಣೆ ಮಾಡಲು ಹೋಗಿ ಫೇಲ್ ಆಗಿದ್ದಾರೆ.

    ಹೌದು, ಪಾಕಿಸ್ತಾನ ತಂಡ ಜಿಂಬಾಬ್ವೆ ವಿರುದ್ಧ ಐದು ಪಂದ್ಯಗಳ ಏಕದಿನ ಸರಣಿ ಭಾನುವಾರ ಅಂತ್ಯವಾಗಿದ್ದು, ಸರಣಿಯ ಅಂತಿಮ ಪಂದ್ಯದ ವೇಳೆ ಪಾಕಿಸ್ತಾನ ಸರ್ಫರಾಜ್ ಅಹ್ಮದ್ 2 ಓವರ್ ಬೌಲ್ ಮಾಡಿದ್ದರು. ಮೊದಲ ಓವರ್ ನಲ್ಲಿ 6 ರನ್ ನೀಡಿದ್ದ ಸರ್ಫರಾಜ್ ಬಳಿಕ ತಮ್ಮ 2ನೇ ಓವರ್ ಬೌಲ್ ಮಾಡಿ ಎಡವಿದ್ದಾರೆ.

    ಪಂದ್ಯದ ಕೊನೆಯ ಓವರಿನ ಬೌಲಿಂಗ್ ನಲ್ಲಿ ಜಿಂಬಾಬ್ವೆ ಬ್ಯಾಟ್ಸ್ ಮನ್ ಪೀಟರ್ ಮೂರ್ ಸಿಕ್ಸರ್ ಸಿಡಿಸಿ ಮಿಂಚಿದ್ದರು. ಈ ಮೂಲಕ ಧೋನಿಯನ್ನು ಅನುಕರಣೆ ಮಾಡಲು ಯತ್ನಿಸಿದ್ದ ಸರ್ಫರಾಜ್ ಭಾರೀ ಮುಖಭಂಗ ಅನುಭವಿಸಿದ್ದರು.

    ಅಂದಹಾಗೇ, ಧೋನಿ ತಮ್ಮ ಬೌಲಿಂಗ್ ನಲ್ಲಿ ಒಂದು ಅಂತರಾಷ್ಟ್ರೀಯ ವಿಕೆಟ್ ಪಡೆದಿದ್ದು, 2009 ರಲ್ಲಿ ನಡೆದಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ವೇಳೆ ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯದಲ್ಲಿ ಬೌಲ್ ಮಾಡಿ ವಿಕೆಟ್ ಪಡೆದು ಮಿಂಚಿದ್ದರು. ಸದ್ಯ ಸರ್ಫರಾಜ್ ತಮ್ಮ ಬೌಲಿಂಗ್ ನಲ್ಲಿ ಜಿಂಬಾಂಬ್ವೆ ಬ್ಯಾಟ್ಸ್ ಮನ್ ಸಿಕ್ಸರ್ ಸಿಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪಾಕಿಸ್ತಾನ ಜಿಂಬಾಂಬ್ವೆ ವಿರುದ್ಧ ಏಕದಿನ ಸರಣಿಯನ್ನು 5-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ. ಪಾಕ್ ಪರ ಆರಂಭಿಕ ಆಟಗಾರ ಫಖಾರ್ ಜಮಾನ್ 18 ಇನ್ನಿಂಗ್ಸ್ ಗಳಲ್ಲಿ 1 ಸಾವಿರ ರನ್ ಗಳಿಸಿ ದಾಖಲೆ ಬರೆದು ಪಾಕ್ ಪರ ದ್ವಿಶತಕ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ.