Tag: ಸರ್ಪ್ರೈಸ್

  • ಪೂಜಾ ಹೆಗ್ಡೆಗೆ ಸರ್ಪ್ರೈಸ್ ಕೊಟ್ಟ ಫೋಟೋಗ್ರಾಫರ್‌ಗಳು

    ಪೂಜಾ ಹೆಗ್ಡೆಗೆ ಸರ್ಪ್ರೈಸ್ ಕೊಟ್ಟ ಫೋಟೋಗ್ರಾಫರ್‌ಗಳು

    ಮುಂಬೈ: ಟಾಲಿವುಡ್ ಹಾಗೂ ಬಾಲಿವುಡ್‍ನಲ್ಲಿ ಸದ್ಯ ಬಹುಬೇಡಿಕೆಯಲ್ಲಿರುವ ನಟಿ ಪೂಜಾ ಹೆಗ್ಡೆಗೆ ಪಾಪರಾಜೀ ಫೋಟೋಗ್ರಾಫರ್‌ಗಳು ಸರ್ಪ್ರೈಸ್ ನೀಡಿದ್ದಾರೆ.

    ಪೂಜಾ ಹೆಗ್ಡೆ ಇತ್ತೀಚೆಗಷ್ಟೇ ಸೈಮಾದಲ್ಲಿ ಅತ್ಯುತ್ತಮ ನಟಿ ಎರಡು ಪ್ರಶಸ್ತಿಗಳನ್ನು ಸ್ವೀಕರಿಸಿದರು.

    ಸೈಮಾ ಪ್ರಶಸ್ತಿ ಪಡೆದ ಪೂಜಾ ಹೆಗ್ಡೆಗಾಗಿ ಫೋಟೋಗ್ರಾಫರ್‌ಗಳು ಕೇಕ್ ತಂದಿದ್ದರು. ಫೋಟೋಗ್ರಾಫರ್ ಮತ್ತು ಕ್ಯಾಮರಾಮ್ಯಾನ್‍ಗಳ ಜೊತೆ ಕೇಕ್ ಕತ್ತರಿಸಿ ಪೂಜಾ ಹೆಗ್ಡೆ ಸಂಭ್ರಮಿಸಿದರು. ಇದನ್ನೂ ಓದಿ:  Do not Disturb : ನಟಿ ರಾಗಿಣಿ ಪ್ರಜ್ವಲ್

    ತಮಗಾಗಿ ಸರ್ಪ್ರೈಸ್ ನೀಡಿದ ಫೋಟೋಗ್ರಾಫರ್ ಮತ್ತು ಕ್ಯಾಮರಾಮ್ಯಾನ್‍ಗಳಿಗೆ ಪೂಜಾ ಹೆಗ್ಡೆ ಧನ್ಯವಾದಗಳನ್ನ ತಿಳಿಸಿದರು. ಕೇಕ್ ಕಟ್ ಮಾಡಿ ಸಂತೋಷ ಪಟ್ಟು ಕ್ಯಾಮರಾಕ್ಕೆ ಪೋಸ್ ಕೊಟ್ಟಿದ್ದಾರೆ.

    ಪ್ರಶಸ್ತಿಗಳನ್ನು ಸ್ವೀಕರಿಸಿದ ನಟಿ ಪೂಜಾ ಹೆಗ್ಡೆ, ತಮ್ಮ ಸಂತಸವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅಭಿಮಾನಿಗಳು ಶುಭಕೊರಿ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

    ನನ್ನ ವೃತ್ತಿ ಜೀವನದಲ್ಲಿ ಅತ್ಯಂತ ಸ್ಪೆಷಲ್ ಸಿನಿಮಾಗಳಲ್ಲಿ ಅಲಾ ವೈಕುಂಠಪುರಮುಲೋ ಕೂಡ ಒಂದು. ನನಗೆ ಪ್ರೀತಿ ತೋರಿಸಿದ ನನ್ನೆಲ್ಲಾ ಅಭಿಮಾನಿಗಳಿಗೆ ಧನ್ಯವಾದ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೂಜಾ ಹೆಗ್ಡೆ ಬರೆದುಕೊಂಡಿದ್ದರು.

     

    View this post on Instagram

     

    A post shared by Pooja Hegde (@hegdepooja)

    ಪೂಜಾ ಹೆಗ್ಡೆ ಜೀನ್ಸ್ ಪ್ಯಾಂಟ್ ತೊಟ್ಟು, ವರ್ಣರಂಜಿತವಾದ ಜಾಕೇಟ್ ತೊಟ್ಟು, ಡ್ರೆಸ್‍ಗೆ ಹೊಂದಿಕೆ ಯಾಗುವ ಒಂದು ಹ್ಯಾಂಡ್ ಬ್ಯಾಗ್ ಹಿಡಿದು ಸಿಂಪಲ್ ಲುಕ್‍ನಲ್ಲಿ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ.

    ನಟಿ ಪೂಜಾ ಹೆಗ್ಡೆ ಮಹರ್ಷಿ, ಅಲಾ ವೈಕುಂಠಪುರಮುಲೋ, ಹೌಸ್‍ಫುಲ್ 4 ಸೇರಿದಂತೆ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ.

  • BB ಫಿನಾಲೆಯಲ್ಲಿ ಸುದೀಪ್‍ಗೆ ಸಿಕ್ತು ಭರ್ಜರಿ ಸರ್ಪ್ರೈಸ್

    BB ಫಿನಾಲೆಯಲ್ಲಿ ಸುದೀಪ್‍ಗೆ ಸಿಕ್ತು ಭರ್ಜರಿ ಸರ್ಪ್ರೈಸ್

    ಬಿಗ್‍ಬಾಸ್ ಮನೆಯಲ್ಲಿ ಗ್ರ್ಯಾಂಡ್ ಫಿನಾಲೆ ಭರ್ಜರಿಯಾಗಿ ನಡೆಯುತ್ತಿದೆ. ಇಷ್ಟು ದಿನಗಳ ಕಾಲ ಸ್ಪರ್ಧಿಗಳಿಗೆ ಸರ್ಪ್ರೈಸ್ ನೀಡುತ್ತಿದ್ದ ಸುದೀಪ್ ಅವರಿಗೆ ಈ ಬಾರಿ ಬಿಗ್‍ಬಾಸ್ ಸರ್ಪ್ರೈಸ್ ನೀಡಿದ್ದಾರೆ.

    ಬಿಗ್‍ಬಾಸ್ ವಿನ್ನರ್ ಪಟ್ಟವನ್ನು ಪಡೆದುಕೊಳ್ಳಲು ಕೊನೆ ಹಂತದಲ್ಲಿ ಇರುವ ಟಾಪ್ 5 ನಲ್ಲಿ ಇರುವ ಸ್ಪರ್ಧಿಗಳಿದ್ದೀರ. 120 ದಿನ ಈ ಮನೆಯಲ್ಲಿ ಪೂರ್ತಿ ಮಾಡಿದ್ದೀರ. ಇಲ್ಲಿವರೆಗೂ ಯಾವ ಸೀಸನ್ ಅಲ್ಲಿಯೂ 120 ದಿನಗಳ ಕಾಲ ಯಾವ ಸ್ಪರ್ಧಿಯೂ ಇರಲಿಲ್ಲ. ನಿಮಗೆ ಒಬ್ಬೊಬ್ಬ ವಿಶೇಷ ವ್ಯಕ್ತಿಯಿಂದ ಶುಭ ಹಾರೈಕೆ ಡಾನ್ಸ್ ಮೂಲಕವಾಗಿ ಸಿಗುತ್ತದೆ ಎಂದು ಸುದೀಪ್ ಹೇಳಿದ್ದಾರೆ.

    ಈ ವೇಳೆ ಮಾತನಾಡಿದ ಬಿಗ್ ಬಾಸ್, ಕಿಚ್ಚನಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ಮೊದಲ ಆವೃತ್ತಿಯಿಂದ ಸತತ 8 ಸೀಸನ್‍ಗಳಿಂದ ನೀವೇ ನಿರೂಪಣೆ ಮಾಡುತ್ತಾ ಬಂದಿರುವುದು ಕಾರ್ಯಕ್ರಮದ ಗೌರವವನ್ನು ಹೆಚ್ಚಿಸಿದೆ. ನಿಮ್ಮ ಸಿನಿಮಾ ಜರ್ನಿ ಪ್ರಾರಂಭವಾಗಿ 25 ವರ್ಷವಾಗಿದೆ. ನಿಮ್ಮ ಮತ್ತು ನಮ್ಮ ಒಡನಾಟಕ್ಕೆ 8 ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ಸದಸ್ಯರು ಮತ್ತು ಅತಿಥಿಗಳು ಪ್ರದರ್ಶಿಸುವ ಎಲ್ಲ ಹಾಡುಗಳು ನಿಮ್ಮ ಸಿನಿಮಾದ್ದೇ ಆಗಿರುತ್ತದೆ. ಬಿಗ್‍ಬಾಸ್‍ನಲ್ಲಿ ಎಲ್ಲಾ ಏರಿತಗಳ ಮಧ್ಯದಲ್ಲಿಯೂ ಉತ್ತಮವಾಗಿ ನಡೆಸಿಕೊಟ್ಟಿದ್ದಕ್ಕಾಗಿ ಅಭಿನಂದನೆಗಳು ಎಂದು ಬಿಗ್‍ಬಾಸ್ ಹೇಳಿದ್ದಾರೆ. ಈ ವೇಳೆ ಸುದೀಪ್ ಸಂತೋಷದಿಂದಲೇ ಧನ್ಯವಾದವನ್ನು ಹೇಳಿದ್ದಾರೆ.

    ಬಿಗ್‍ಬಾಸ್ ಗ್ರ್ಯಾಂಡ್ ಫಿನಾಲೆ ಗ್ರ್ಯಾಂಡ್ ಆಗಿ ನಡೆಯುತ್ತಿದೆ. ಯಾರು ಬಿಗ್‍ಬಾಸ್ ಪಟ್ಟವನ್ನು ತಮ್ಮದಾಗಿಸಿಕೊಳ್ಳುತ್ತಾರೆ ಎಂದು ವೀಕ್ಷಕರು ಎದುರು ನೋಡುತ್ತಿದ್ದಾರೆ. ಈ ಮಧ್ಯೆ ಬಿಬಿ ಫಿನಾಲೆಯಲ್ಲಿ ಸುದೀಪ್ ಅಭಿನಯದ ಸಿನಿಮಾಗಳ ಹಾಡುಗಳಿಗೆ ಹೆಜ್ಜೆ ಹಾಕುವ ಸ್ಪರ್ಧಿಗಳ ಡಾಸ್ಸ್ ಸಖತ್ ಮನರಂಜನೆಯನ್ನು ನೀಡುತ್ತಿದೆ.

  • ಶುಭಾ ಕೊಟ್ಟ ಟಾಸ್ಕ್ ಸೋತಿರುವುದಾಗಿ ಒಪ್ಪಿದ ಬಿಗ್‍ಬಾಸ್

    ಶುಭಾ ಕೊಟ್ಟ ಟಾಸ್ಕ್ ಸೋತಿರುವುದಾಗಿ ಒಪ್ಪಿದ ಬಿಗ್‍ಬಾಸ್

    ಬಿಗ್‍ಬಾಸ್ ಮನೆಯಲ್ಲಿ ಹೆಚ್ಚು ತರ್ಲೆ ಮಾಡುತ್ತಾ, ಮುದ್ದು, ಮುದ್ದಾಗಿ ಚಿಕ್ಕಮಕ್ಕಳಂತೆ ಆಡುವ ಸ್ಪರ್ಧಿ ಎಂದರೆ ಅದು ಶುಭಾ ಪೂಂಜಾ. ಬಿಗ್‍ಬಾಸ್ ಮನೆಯ ಜರ್ನಿಯಲ್ಲಿ ಸ್ಪರ್ಧಿಗಳನ್ನಷ್ಟೇ ಅಲ್ಲದೇ ಬಿಗ್‍ಬಾಸ್‍ರನ್ನು ಕೂಡ ಗೋಳುಯ್ದುಕೊಂಡಿದ್ದಾರೆ. ಪ್ರತಿ ಬಾರಿ ಮನೆಯ ಸ್ಪರ್ಧಿಗಳಿಗೆ ಬಿಗ್‍ಬಾಸ್ ಟಾಸ್ಕ್‌ಗಳನ್ನು ನೀಡಿರುವುದನ್ನು ನೋಡಿದ್ದೇವೆ. ಆದರೆ ಈ ಬಾರಿ ಶುಭಾ ಪೂಂಜಾರವರೆ ಬಿಗ್‍ಬಾಸ್‍ಗೆ ಟಾಸ್ಕ್ ನೀಡಿ ಸೋಲಿಸಿದ್ದಾರೆ. ಸದ್ಯ ಈ ಕುರಿತಂತೆ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಚರ್ಚೆಯಾಗಿದ್ದು, ಶುಭಾ ಬಿಗ್‍ಬಾಸ್‍ಗೆ ನೀಡಿದ್ದ ಚಾಲೆಂಜ್‍ನನ್ನು ಮತ್ತೆ ಹೇಳುವಂತೆ ಸುದೀಪ್ ಮರು ಪ್ರಶ್ನೆ ಮಾಡಿದ್ದಾರೆ.

    ಹೌದು, ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್‌ನ 37 ದಿನ ಶುಭಾಪೂಂಜಾ ಒಂದು ಪ್ರಶ್ನೆ ಕೇಳಿ ಅದರ ಅರ್ಥ ಹೇಳಿದರೆ ಬಿಗ್‍ಬಾಸ್‍ಗೆ ಸರ್​ಪ್ರೈಸ್​ ನೀಡುವುದಾಗಿ ಹೇಳಿದ್ದರು. ಈ ಬಗ್ಗೆ ಸುದೀಪ್ ನೀವು ಬಿಗ್‍ಬಾಸ್‍ಗೆ ನೀಡಿದ್ದ ಟಾಸ್ಕ್‌ನಲ್ಲಿ ಬಿಗ್‍ಬಾಸ್ ಸೋತಿದ್ದಾರೆ. ಅವರಿಗೆ ನೀವು ಹೇಳಿದ ವಾಕ್ಯದ ಅರ್ಥ ಗೊತ್ತಾಗಲಿಲ್ಲ. ಹಾಗಾಗಿ ಸೋಲು ಒಪ್ಪಿಕೊಳ್ಳಲು ತಯಾರಾಗಿದ್ದಾರೆ. ಆದರೆ ನೀವು ಏನು ಪ್ರಶ್ನೆ ಕೇಳಿದ್ರಿ ಅದನ್ನು, ಅದೇ ಆರ್ಡರ್‍ನಲ್ಲಿ, ಅದೇ ತರ ಈಗ ರಿಪೀಟ್ ಮಾಡಬೇಕು ಎನ್ನುತ್ತಾರೆ.

    ಆಗ ಶುಭಾ ಪೂಂಜಾ ಶಾಕ್‍ನಿಂದ ಸರ್ ನನಗೆ ನೆನಪಿಲ್ಲ. ನಾನು ಒಂದು ಸಲ ಅದನ್ನು ಹೇಳಿದ ನಂತರ ಮತ್ತೆ ಅದನ್ನು ಹೇಳುವುದಿಲ್ಲ ಎಂದು ಹೇಳುತ್ತಾರೆ. ಇದಕ್ಕೆ ಸುದೀಪ್ ನೀವು ಹೇಳುವ ತನಕ ನಾವು ಬಿಡುವುದಿಲ್ಲ ಎಂದಿದ್ದಾರೆ. ಕೊನೆಗೆ ಶುಭಾ ಹೇಳಲು ಪ್ರಯತ್ನಿಸಿದಾಗ ಸುದೀಪ್, ನಾನು ಎಲಿಮಿನೇಷನ್‍ನನ್ನು ಇದೇ ಭಾಷೆಯಲ್ಲಿ ಮಾಡಿದರೆ ಹೇಗಿರುತ್ತದೆ ಎಂದು ಸ್ಪರ್ಧಿಗಳ ಕಾಲೆಳೆದಿದ್ದಾರೆ.

    ನಾನು ನಿಮ್ಮ ಹೆಸರುಗಳನ್ನು ತೆಗೆದುಕೊಂಡಿರುವುದು ನಿಮಗೆ ಗೊತ್ತಿರುತ್ತದೆ. ಆದರೆ ನೀವು ಸೇಫಾ, ಅನ್ ಸೇಫಾ ಎಂದು ಗೊತ್ತಿರುವುದಿಲ್ಲ ಎಂದು ನಗೆ ಚಟಾಕಿ ಹರಿಸಿದ್ದಾರೆ. ಇದನ್ನೂ ಓದಿ:ಕಪ್ಪಾಗಿರುವುದರಿಂದ ಡಿಯು ಪಟ್ಟ ಕಷ್ಟಗಳೆಷ್ಟು ಗೊತ್ತಾ

  • ಕೇಕ್ ಕತ್ತರಿಸಿ, ಮಗುವನ್ನೆತ್ತಿ ಮುದ್ದಾಡಿದ ಚಿರು – ಕ್ಷತ್ರಿಯ ಟೀಸರಿನಲ್ಲಿದೆ ಡಬ್ಬಲ್ ಸರ್ಪ್ರೈಸ್

    ಕೇಕ್ ಕತ್ತರಿಸಿ, ಮಗುವನ್ನೆತ್ತಿ ಮುದ್ದಾಡಿದ ಚಿರು – ಕ್ಷತ್ರಿಯ ಟೀಸರಿನಲ್ಲಿದೆ ಡಬ್ಬಲ್ ಸರ್ಪ್ರೈಸ್

    ಬೆಂಗಳೂರು: ನಟ ಚಿರಂಜೀವಿ ಸರ್ಜಾ ಅಭಿನಯದ ಕ್ಷತ್ರಿಯ ಸಿನಿಮಾದ ಟೀಸರ್ ಇಂದು ಬಿಡುಗಡೆಯಾಗಿದ್ದು, ಇದರಲ್ಲಿ ಅಭಿಮಾನಿಗಳಿಗೆ ಎರಡು ಸರ್ಪ್ರೈಸ್ ವಿಚಾರಗಳಿವೆ.

    ಅನಿಲ್ ಮಂಡ್ಯ ನಿರ್ದೇಶನದ ಮತ್ತು ದಿವಂಗತ ನಟ ಚಿರಂಜೀವಿ ಸರ್ಜಾ ಅಭಿನಯದ ಕೊನೆಯ ಸಿನಿಮಾ ಕ್ಷತ್ರಿಯದ ಟೀಸರ್ ಅನ್ನು ಚಿರು ಹುಟ್ಟುಹಬ್ಬವಾದ ಇಂದು ಬಿಡುಗಡೆ ಮಾಡಲಾಗಿದೆ. ಈ ಟೀಸರಿನಲ್ಲಿ ಚಿರು ಹುಟ್ಟುಹಬ್ಬ ಆಚರಿಸಿಕೊಂಡಿರುವ, ಮತ್ತು ಮಗುವನ್ನು ಅಪ್ಪಿ ಮುದ್ದಾಡುವ ಎರಡು ಮನಕಲಕುವ ದೃಶ್ಯಗಳನ್ನು ನಾವು ಕಾಣಬಹುದು. ಇದನ್ನು ಓದಿ: ನಿನ್ನ ತಂದೆ ಸದಾ ಸಂಭ್ರಮ ನೀಡುವವರು ಪುಟಾಣಿ – ಮೇಘನಾ ವೀಡಿಯೋ

    ರೀಯಲ್ ಲೈಫ್‍ನಲ್ಲಿ ಅನುಭವಿಸಲಾಗದ್ದನ್ನು ಚಿರು ತಮ್ಮ ಅಭಿನಯದ ಕೊನೆಯ ಸಿನಿಮಾದಲ್ಲಿ ರೀಲ್‍ನಲ್ಲಿ ಅನುಭವಿಸಿದ್ದಾರೆ. ಇಂದು ಅವರ ಹುಟ್ಟುಹಬ್ಬಕ್ಕೆ ಕೇಕ್ ಕತ್ತರಿಸಲು ಅವರು ಇಲ್ಲ. ಆದರೆ ಸಿನಿಮಾದಲ್ಲಿ ಚಿರು ಕೇಕ್ ಕಟ್ ಮಾಡಿ ಎಲ್ಲರಿಗೂ ತಿನ್ನಿಸಿ ಸಂಭ್ರಮಿಸಿದ್ದಾರೆ. ಚಿರು ಪತ್ನಿ ಮೇಘನಾ ತುಂಬು ಗರ್ಭಿಣಿ ಮಗುವನ್ನು ಹೆತ್ತಿ ಆಡಸಬೇಕಾದ ಚಿರು ಬಾರದ ಲೋಕಕ್ಕೆ ಹೋಗಿದ್ದಾರೆ. ಆದರೆ ಸಿನಿಮಾದ ದೃಶ್ಯದಲ್ಲಿ ಅವರು ಮಗುವನ್ನು ಹೆತ್ತಿ ಆಡಿಸಿದ್ದಾರೆ. ಈ ಎರಡು ದೃಶ್ಯಗಳು ನೋಡುಗರಿಗೆ ಕಣ್ಣೀರು ತರಿಸುತ್ತವೆ. ಇದನ್ನು ಓದಿ: ಹಳೆಯ ಫೋಟೋ ಹಂಚಿಕೊಂಡು ಅಣ್ಣನಿಗೆ ಧ್ರುವ ವಿಶ್

    ಈ ಬಾರಿ ಚಿರುವಿಲ್ಲದೇ ಅವರ ಅಭಿಮಾನಿಗಳು ಮೊದಲ ವರ್ಷದ ಹುಟ್ಟಹಬ್ಬ ಆಚರಿಸುತ್ತಿದ್ದಾರೆ. ಚಿರಂಜೀವಿ ಸರ್ಜಾ (39) ಅವರು ಜೂನ್ 7ರಂದು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಚಿರಂಜೀವಿ ಸರ್ಜಾ ಅವರಿಗೆ ಜೂನ್ 6ರ ರಾತ್ರಿಯಿಂದ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಅವರನ್ನು ಜೂನ್ 7ರಂದು ಮಧ್ಯಾಹ್ನ 3:30ರ ಸುಮಾರಿಗೆ ಅಶೋಕಾ ಪಿಲ್ಲರ್ ಬಳಿ ಇರುವ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಇದನ್ನು ಓದಿ: ಅವಳಿ ಮಕ್ಕಳು ಆದ್ರೂ ಆಗ್ಬೋದು: ನಸುನಕ್ಕ ಮೇಘನಾ

    ಇಂದು ಬೆಳಗ್ಗೆ ಧ್ರುವ ಹಾಗೂ ಮೇಘನಾ ಸಹ ಫೋಟೋ ಹಾಕಿ ಚಿರು ಹಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಅಣ್ಣನೊಂದಿಗೆ ಇದ್ದ ಫೋಟೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಸ್ಟೇಟಸ್ ಹಾಕಿಕೊಂಡು ಧ್ರುವ ಸರ್ಜಾ ಅಣ್ಣನ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ಹ್ಯಾಪಿ ಬರ್ಥ್ ಡೇ ಲವ್ ಯು ಫಾರ್ ಎವರ್ ಎಂದು ಬರೆದುಕೊಂಡಿದ್ದಾರೆ. ಚಿಕ್ಕ ವಯಸ್ಸಿನ ಮೂರು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಎರಡನೇ ಸ್ಟೇಟಸ್‍ನಲ್ಲಿ 3 ಫೋಟೋಗಳನ್ನು ಸೇರಿಸಿ ಸಣ್ಣವರಿದ್ದಾಗಿನ ಹಾಗೂ ಹಳೆಯ, ಇನ್ನೊಂದು ಇತ್ತೀಚಿನ ಫೋಟೋ ಪೋಸ್ಟ್ ಮಾಡಿದ್ದಾರೆ.

  • ಡಿಂಪಲ್ ಕ್ವೀನ್ ಹುಟ್ಟುಹಬ್ಬಕ್ಕೆ ಸರ್ಪ್ರೈಸ್‌ಗಳ ಮೇಲೆ ಸರ್ಪ್ರೈಸ್‌

    ಡಿಂಪಲ್ ಕ್ವೀನ್ ಹುಟ್ಟುಹಬ್ಬಕ್ಕೆ ಸರ್ಪ್ರೈಸ್‌ಗಳ ಮೇಲೆ ಸರ್ಪ್ರೈಸ್‌

    ಬೆಂಗಳೂರು: ಸ್ಯಾಂಡಲ್‍ವುಡ್ ಡಿಂಪಲ್ ಕ್ವೀನ್ ಎಂದೇ ಪ್ರಸಿದ್ಧಿ ಪಡೆದಿರುವ ನಟಿ ರಚಿತಾರಾಮ್ ಹುಟ್ಟುಹಬ್ಬಕ್ಕೆ ಒಂದೆಡೆ ಶುಭಾಶಯಗಳ ಮಹಾಪೂರ ಹರಿದುಬರುತ್ತಿದ್ದರೆ, ಮತ್ತೊಂದೆಡೆ ಸರ್ಪ್ರೈಸ್‌ಗಳ ಮೇಲೆ ಸರ್ಪ್ರೈಸ್ ಬರುತ್ತಿವೆ.

    ಹೌದು ಸ್ಯಾಂಡಲ್‍ವುಡ್ ಸುಂದರಿ ರಚಿತಾರಾಮ್ ಹುಟ್ಟುಹಬ್ಬವನ್ನು ಚಂದನವನದ ನಟ, ನಟಿಯರು ಹಾಗೂ ಅಭಿಮಾನಿಗಳು ಸಂಭ್ರಮದಿಂದ ಆಚರಿಸುತ್ತಿದ್ದು, ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಅಭಿಮಾನಿಗಳು ನೇರವಾಗಿ ವಿಶ್ ಮಾಡಲು ಸಾಧ್ಯವಾಗದಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ವಿಭಿನ್ನ ರೀತಿಯಲ್ಲಿ ಆಚರಿಸುತ್ತಿದ್ದಾರೆ. ತಮ್ಮ ನೆಚ್ಚಿನ ನಟಿಗೆ ಶುಭಾಶಯ ತಿಳಿಸುತ್ತಿದ್ದಾರೆ.

    ಮತ್ತೊಂದೆಡೆ ರಚಿತಾ ರಾಮ್ ಅವರ ಹುಟ್ಟುಹಬ್ಬದ ಅಂಗವಾಗಿ ಹಲವು ಸರ್ಪ್ರೈಸ್‌ಗಳು ಬಂದಿದ್ದು, ಗುಳಿಕೆನ್ನೆ ಚೆಲುವೆಗಾಗಿ ತಯಾರಿಸಿದ ಹಲವು ಸಿನಿಮಾಗಳ ಪೋಸ್ಟರ್‍ಗಳನ್ನು ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ರಚಿತಾ ರಾಮ್ ಈಗಾಗಲೇ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಹಾಗೂ ರಮೇಶ್ ಅರವಿಂದ್ ಜೊತಿಗಿನ 100 ಸಿನಿಮಾಗಳು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿವೆ. ಇದಲ್ಲದೆ ಹತ್ತಾರು ಸಿನಿಮಾಗಳು ರಚಿತಾ ರಾಮ್ ಲಿಸ್ಟ್ ನಲ್ಲಿವೆ. ಈ ಮೂಲಕ ಸ್ಯಾಂಡಲ್‍ವುಡ್‍ನ ಮೋಸ್ಟ್ ಬ್ಯುಸಿಯಸ್ಟ್ ನಟಿಯಾಗಿದ್ದಾರೆ.

     

    View this post on Instagram

     

    Official Announcement My Next..! Thanks to the team Lilly for releasing official poster on my Birthday???????? @vijay_s_gowda_

    A post shared by Rachita Ram (@rachita_instaofficial) on

    ಈ ಎಲ್ಲ ಸಿನಿಮಾಗಳ ಹೊರತಾಗಿಯೂ ರಚಿತಾ ರಾಮ್ ಹುಟ್ಟುಹಬ್ಬದಂದು ಹಲವು ಸಿನಿಮಾಗಳು ಘೋಷಣೆಯಾಗಿವೆ. ಈ ಪೈಕಿ ಲಿಲ್ಲಿ, ನೀನಾಸಂ ಸತೀಶ್ ಅವರ ಮುಂದಿನ ಚಿತ್ರ ಮ್ಯಾಟ್ನಿ ಹಾಗೂ ಪುಷ್ಪಕ ವಿಮಾನ ತಂಡದ ಮತ್ತೊಂದು ಚಿತ್ರ ರಚಿತಾಗೆ ಒಲಿದು ಬಂದಿದೆ. ಅಂದಹಾಗೆ ಈ ಸಿನಿಮಾಗೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ, ಸದ್ಯದಲ್ಲೇ ಸಿನಿಮಾ ಹೆಸರು ತಿಳಿಸುವುದಾಗಿ ರಚಿತಾ ಹೇಳಿದ್ದಾರೆ.

    ಹೀಗೆ ಸಾಲು ಸಾಲು ಸಿನಿಮಾಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ರಚಿತಾ ಹುಟ್ಟುಹಬ್ಬಕ್ಕೆ ಗಿಫ್ಟ್ ನೀಡಲಾಗಿದೆ. ರಚಿತಾ ರಾಮ್ ಸಹ ಸಂತಸವಾಗಿಯೇ ಎಲ್ಲ ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಈ ಕುರಿತು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಇದರೊಂದಿಗೆ ಹಲವು ಗಣ್ಯರು ಡಿಂಪಲ್ ಕ್ವೀನ್‍ಗೆ ವಿಶ್ ಮಾಡಿದ್ದಾರೆ. ಗುಳಿಕೆನ್ನೆ ಚೆಲುವೆಯ ಹುಟ್ಟುಹಬ್ಬ ಫುಲ್ ಕಲರ್‍ಫುಲ್ ಆಗಿದೆ.

  • ಆದಿ ಹುಟ್ಟುಹಬ್ಬಕ್ಕೆ ನಿಧಿಮಾ ಸರ್ಪ್ರೈಸ್

    ಆದಿ ಹುಟ್ಟುಹಬ್ಬಕ್ಕೆ ನಿಧಿಮಾ ಸರ್ಪ್ರೈಸ್

    ಬೆಂಗಳೂರು: ಸ್ಯಾಂಡಲ್‍ವುಡ್ ಸೆನ್ಸೇಷನ್ ಜೋಡಿ ಎಂದೇ ಗುರುತಿಸಿಕೊಂಡಿರುವ, ಆದಿ-ನಿಧಿಮಾ ಎಂದೇ ಪ್ರಸಿದ್ಧಿ ಪಡೆದಿರುವ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಸಿನಿಮಾ ಕೆಲಸಗಳಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆಯೇ ಪ್ರೀತಿ, ತುಂಟಾಟಗಳನ್ನು ಮುಂದುವರಿಸಿದ್ದಾರೆ. ಅಲ್ಲದೆ ಜೂನ್ 12ರಂದು ಡಾರ್ಲಿಂಗ್ ಕೃಷ್ಣ ಹುಟ್ಟುಹಬ್ಬವಾಗಿದ್ದು, ಸರ್ಪ್ರೈಸ್ ನೀಡಿದ್ದಾರೆ.

    ಲಾಕ್‍ಡೌನ್ ಹಿನ್ನೆಲೆ ಹೆಚ್ಚು ಜನ ಸೇರುವ ಹಾಗಿಲ್ಲ. ಹೀಗಾಗಿ ಅಭಿಮಾನಿಗಳು ಡಾರ್ಲಿಂಗ್ ಕೃಷ್ಣ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣಗಳ ಮೂಲಕವೇ ಶುಭ ಕೋರುತ್ತಿದ್ದಾರೆ. ಆದರೆ ಡಾರ್ಲಿಂಗ್ ಕೃಷ್ಣ ಭಾವಿ ಪತ್ನಿ ಮಿಲನ ನಾಗರಾಜ್ ವಿಭಿನ್ನವಾಗಿ ಹಾಗೂ ವಿಶೇಷವಾಗಿ ಹುಟ್ಟುಹಬ್ಬಕ್ಕೆ ಸರ್ಪೈಸ್ ನೀಡಿ ಸೆಲೆಬ್ರೇಟ್ ಮಾಡಿದ್ದಾರೆ.

    ಹೌದು ಡಾರ್ಲಿಂಗ್ ಕೃಷ್ಣ ಹುಟ್ಟುಹಬ್ಬದ ಅಂಗವಾಗಿ ಲವ್‍ಮಾಕ್‍ಟೇಲ್ 2 ಚಿತ್ರದ ಟೈಟಲ್‍ನ ಪೋಸ್ಟರ್ ಬಿಡುಗಡೆಗೊಳಿಸಿದ್ದು, ಈ ಮೂಲಕ ಟೈಟಲ್ ಶೈಲಿಯನ್ನು ತಿಳಿಸಿದ್ದಾರೆ. ಡಾರ್ಲಿಂಗ್ ಕೃಷ್ಣ ಚಿತ್ರದೊಂದಿಗೆ ಸಿನಿಮಾ ಹೆಸರಿದ್ದು, ಸ್ಟೋರಿ ಟು ಬಿ ಕಂಟಿನ್ಯೂಡ್ ಎಂಬ ಸಬ್ ಟೈಟಲ್ ಬರೆಯಲಾಗಿದೆ. ಇದರ ಕೆಳಗೆ ಸಿನಿಮಾ ಹೆಸರಿದೆ. ಈ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಮಿಲನ ನಾಗರಾಜ್, ವಿಶಿಂಗ್ ಎ ವೆರಿ ಹ್ಯಾಪಿ ಬರ್ತ್‍ಡೇ ಟು ಅವರ್ ಡಾರ್ಲಿಂಗ್ ಡೈರೆಕ್ಟರ್ ಎಂದು ಬರೆದುಕೊಂಡಿದ್ದಾರೆ.

     

    View this post on Instagram

     

    Wishing a very happy birthday to our darling director @darling_krishnaa ❤️

    A post shared by Milana Nagaraj (@milananagaraj) on

    ಮಧ್ಯರಾತ್ರಿ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿದ ವಿಡಿಯೋವನ್ನು ಸಹ ಹಂಚಿಕೊಂಡಿದ್ದು, ಇದರಲ್ಲಿ ತಾವು ನೀಡಿದ ಸರ್ಪ್ರೈಸ್ ನ್ನು ತೋರಿಸಿದ್ದಾರೆ. ತಮ್ಮ ಸ್ನೇಹವನ್ನು ನೆನಪಿಸುವ ಹಾಗೂ ತಾವು ಭೇಟಿಯಾದ ಸುಂದರ ಕ್ಷಣಗಳ ಚಿತ್ರಗಳ ಗುಚ್ಛವನ್ನು ಗಿಫ್ಟ್ ನೀಡಿದ್ದಾರೆ. ಕೇವಲ ಮೂರ್ನಾಲ್ಕು ಜನರೊಂದಿಗೆ ಹುಟ್ಟುಹಬ್ಬ ಆಚರಿಸಿದ್ದಾರೆ.

     

    View this post on Instagram

     

    Thanks for joining us???? @sricrazymindzz @abhi_lash_abii @apoorva.ashok @kmajithkumar220 @v_suvarna_ @darling_krishnaa

    A post shared by Milana Nagaraj (@milananagaraj) on

    ಇದಕ್ಕೂ ಮೊದಲು ಇಬ್ಬರೂ ಚೇತಕ್ ಮೇಲೆ ಕುಳಿತಿರುವ ಫೋಟೋ ಹಾಕಿ ಭಾವನಾತ್ಮಕ ಸಾಲುಗಳನ್ನು ಬರೆದಿದ್ದು, ನೀನು ಪ್ರೀತಿಸಿದ ರೀತಿ ಮತ್ಯಾರು ನನ್ನನ್ನು ಪ್ರೀತಿಸಿಲ್ಲ. ನೀನೇ ಶ್ರೇಷ್ಠ, ನಾನೇ ಅದೃಷ್ಟವಂತೆ ಹ್ಯಾಪಿಯಸ್ಟ್ ಬರ್ತ್‍ಡೇ ಎಂದು ಬರೆದುಕೊಂಡಿದ್ದಾರೆ.

     

    View this post on Instagram

     

    No one would have ever loved me the way you do. You are the best and I got lucky! Happiest Birthday my❤️@darling_krishnaa.

    A post shared by Milana Nagaraj (@milananagaraj) on

    ಈ ಜೋಡಿ ತಾವೇ ನಿರ್ದೇಶಿಸಿ, ನಿರ್ಮಿಸಿ ನಟಿಸಿದ್ದ ಲವ್ ಮಾಕ್‍ಟೇಲ್ ಚಿತ್ರ ಜನವರಿಯಲ್ಲಿ ತೆರೆ ಕಂಡಿತ್ತು. ಮೊದಲ ಪ್ರಯತ್ನದಲ್ಲೇ ಈ ಜೋಡಿ ಅಪಾರ ಜನ ಮನ್ನಣೆ ಗಳಿಸಿತು. ಹೀಗಾಗಿ ಇದೇ ಸಿನಿಮಾದ ಸೀಕ್ವೆಲ್ ತಯಾರಿಸುತ್ತಿದ್ದು, ಇದು ಯಾವ ರೀತಿ ಮೂಡಿ ಬರಲಿದೆ ಎಂಬುದು ಅಭಿಮಾನಿಗಳ ಸದ್ಯದ ಕುತೂಹಲವಾಗಿದೆ. ಲಾಕ್‍ಡೌನ್ ಸಮಯವನ್ನೇ ಬಳಸಿಕೊಂಡು ಈ ಜೋಡಿ ಈಗಾಗಲೇ ಸ್ಕ್ರಿಪ್ಟ್ ಬರೆದಿದ್ದು, ಇನ್ನೇನು ಚಿತ್ರೀಕರಣ ಆರಂಭಿಸುವಷ್ಟರ ಮಟ್ಟಿಗೆ ಸಿದ್ಧತೆ ಮಾಡಿಕೊಂಡಿದೆ. ಚಿತ್ರೀಕರಣಕ್ಕೆ ಅವಕಾಶ ಸಿಗುತ್ತಿದ್ದಂತೆ ತಂಡ ಚಿತ್ರೀಕರಣ ಆರಂಭಿಸಲಿದೆ.

  • ಸ್ಪರ್ಧಿಗಳಿಗೆ ಸರ್ಪ್ರೈಸ್ ಮೇಲೆ ಸರ್ಪ್ರೈಸ್

    ಸ್ಪರ್ಧಿಗಳಿಗೆ ಸರ್ಪ್ರೈಸ್ ಮೇಲೆ ಸರ್ಪ್ರೈಸ್

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ಇನ್ನೂ ಕೆಲವೇ ಕೆಲವು ದಿನಗಳಲ್ಲಿ ಫಿನಾಲೆ ತಲುಪಲಿದೆ. ಹೀಗಾಗಿ ಬಿಗ್‍ಬಾಸ್, ಮನೆಯ ಸದಸ್ಯರಿಗೆ ಸರ್ಪ್ರೈಸ್ ಮೇಲೆ ಸರ್ಪ್ರೈಸ್ ಕೊಡುತ್ತಿದ್ದಾರೆ.

    ಸೋಮವಾರ ಬೆಳ್ಳಂಬೆಳಗ್ಗೆ ಗಾಯಕಿ ಇಂದು ನಾಗರಾಜ್ ಅವರು ಬಿಗ್‍ಬಾಸ್ ಮನೆಗೆ ಬಂದು ಹಾಡು ಹೇಳುವ ಮೂಲಕ ಎಲ್ಲರನ್ನು ಎದ್ದೇಳಿಸಿದ್ದಾರೆ. ಇವರು ಮನೆಯಿಂದ ಹೋದ ತಕ್ಷಣ ಎಲಿಮಿನೇಟ್ ಆಗಿದ್ದ ಸುಜಾತಾ ಹಾಗೂ ದುನಿಯಾ ರಶ್ಮಿ ಆಗಮಿಸಿದ್ದಾರೆ. ಇವರು ಮನೆಯ ಸದಸ್ಯರ ಜೊತೆಗೆ ಸ್ವಲ್ಪ ಹೊತ್ತು ಮಾತನಾಡಿದ್ದಾರೆ. ಜೊತೆಗೆ ಅವರೇ ಸ್ಪರ್ಧಿಗಳಿಗೆ ತಿಂಡಿ ಕೂಡ ಮಾಡಿ ಕೊಟ್ಟಿದ್ದಾರೆ.

    ಕೊನೆಗೆ ಸುಜಾತಾ ಹಾಗೂ ರಶ್ಮಿ ಹೊರಡುವಾಗ ನೀರಿನ ಬಾಟಲಿಯನ್ನು ತೆಗೆದುಕೊಂಡು ಹೋಗಿದ್ದಾರೆ. ನಂತರ ಗುರುಲಿಂಗ ಸ್ವಾಮಿಜಿಗಳು ಬಿಗ್‍ಬಾಸ್‍ಗೆ ಬಂದಿದ್ದು, ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸಿ ಹೋಗಿದ್ದಾರೆ. ಬಳಿಕ ಚೈತ್ರಾ ವಾಸುದೇವನ್ ಆಗಮಿಸಿ, ನಿಮ್ಮನ್ನು ನೋಡಿದರೆ ತುಂಬಾ ಖುಷಿಯಾಗುತ್ತಿದೆ ಎಂದು ಎಲ್ಲರಿಗೂ ದೃಷ್ಟಿ ತೆಗೆದಿದ್ದಾರೆ. ಇದೇ ಸಂದರ್ಭದಲ್ಲಿ ಮಸ್ತ್ ಮಸ್ತ್ ಹುಡುಗಿ ಬಂದ್ಲು ಹಾಡು ಪ್ಲೇ ಆಗಿದೆ. ಆಗ ಮನೆಯವರ ಜೊತೆ ಸೇರಿಕೊಂಡು ಚೈತ್ರಾ ಕೂಡ ಡ್ಯಾನ್ಸ್ ಮಾಡಿ ಬಿಗ್ ಮನೆಯಿಂದ ಹೊರ ಹೋಗಿದ್ದಾರೆ.

    ಜೈ ಜಗದೀಶ್ ಬಿಗ್‍ಬಾಸ್ ಮನೆಗೆ ಆಗಮಿಸಿದ್ದು, ಬಿಗ್‍ಬಾಸ್ ಪಯಣದ ತಮ್ಮ ಅನುಭವವನ್ನು ಸದಸ್ಯರ ಬಳಿ ಹಂಚಿಕೊಂಡು ಮನೆಯಿಂದ ಹೋಗಿದ್ದಾರೆ. ನಂತರ ರಕ್ಷಾ ಅವರು ಮನೆಗೆ ಆಗಮಿಸಿದರು. ಇವರ ಜೊತೆಗೆ ಶೈನ್ ಶೆಟ್ಟಿ, ವಾಸುಕಿ ವೈಭವ್, ಹರೀಶ್ ರಾಜ್ ಹಾಗೂ ಕುರಿ ಪ್ರತಾಪ್ ತುಂಬಾ ಕ್ಲೋಸ್ ಆಗಿ ನಡೆದುಕೊಂಡಿದ್ದಾರೆ. ಜೊತೆಗೆ ಡ್ಯಾನ್ಸ್ ಕೂಡ ಮಾಡಿದ್ದಾರೆ. ಇದರಿಂದ ದೀಪಿಕಾ ದಾಸ್ ಮತ್ತು ಭೂಮಿ ಶೆಟ್ಟಿ ಮುನಿಸಿಕೊಂಡು ಎಲ್ಲರಿಗೂ ಕ್ಲಾಸ್ ತೆಗೆದುಕೊಂಡಿದ್ದಾರೆ.

    ವಿಶೇಷ ಎಂದರೆ ಕಿಶನ್ ಮನೆಗೆ ಬಂದು ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಆದರೆ ಕಿಶನ್ ಸಿಕ್ಕಿದ್ದೇ ಚಾನ್ಸ್ ಎಂಬಂತೆ ಮತ್ತೊಮ್ಮೆ ದೀಪಿಕಾ ದಾಸ್ ಜೊತೆಗೆ ಈಜುಕೊಳಕ್ಕೆ ಜಿಗಿದು ಮನೆಯಿಂದ ಹೊರಹೋಗಿದ್ದಾರೆ.

    ಫಿನಾಲೆ ವಾರದಲ್ಲಿ ಮಿಡ್‍ವೀಕ್ ಎಲಿಮಿನೇಷನ್ ಮೂಲಕ ಮನೆಯಿಂದ ಒಬ್ಬ ಸದಸ್ಯ ಮನೆಯಿಂದ ಹೊರ ಹೋಗುತ್ತಾರೆ. ಈಗಾಗಲೇ ವಾಸುಕಿ ವೈಭವ್ ಟಿಕೆಟ್ ಟು ಫಿನಾಲೆ ಗೆದ್ದು ನೇರವಾಗಿ ಫಿನಾಲೆ ಹಂತ ತಲುಪಿದ್ದಾರೆ. ಉಳಿದ ಐದು ಮಂದಿಯಲ್ಲಿ ಅಂದರೆ ಶೈನ್ ಶೆಟ್ಟಿ, ಕುರಿ ಪ್ರತಾಪ್, ದೀಪಿಕಾ ದಾಸ್, ಹರೀಶ್ ರಾಜ್ ಹಾಗೂ ಭೂಮಿ ಶೆಟ್ಟಿ ಯಾರು ಹೊರಹೋಗುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

  • ಕೀನ್ಯಾದಿಂದ ಹಿಂತಿರುಗಿದ ದರ್ಶನ್‍ ನೋಡಲು ಮುಗಿಬಿದ್ದ ಅಭಿಮಾನಿಗಳು

    ಕೀನ್ಯಾದಿಂದ ಹಿಂತಿರುಗಿದ ದರ್ಶನ್‍ ನೋಡಲು ಮುಗಿಬಿದ್ದ ಅಭಿಮಾನಿಗಳು

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೀನ್ಯಾದಿಂದ ಹಿಂತಿರುಗಿದ ಮೇಲೆ ಅಭಿಮಾನಿಗಳಿಂದ ಸರ್ಪ್ರೈಸ್ ಸಿಕ್ಕಿದೆ.

    ಇತ್ತೀಚೆಗೆ ದರ್ಶನ್ ‘ರಾಬರ್ಟ್’ ಚಿತ್ರೀಕರಣದಿಂದ ಬ್ರೇಕ್ ಪಡೆದುಕೊಂಡು ವೈಲ್ಡ್ ಲೈಫ್ ಫೋಟೋಗ್ರಫಿಗಾಗಿ ಕೀನ್ಯಾಗೆ ತೆರೆಳಿದ್ದರು. ಈ ವೇಳೆ ಕೀನ್ಯಾದ ಕಾಡಿನಲ್ಲಿ ಪ್ರಾಣಿ-ಪಕ್ಷಿಗಳ ಫೋಟೋವನ್ನು ಸೆರೆಹಿಡಿದು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಹೀಗಾಗಿ ಅಭಿಮಾನಿಗಳು ಭಾನುವಾರ ತಮ್ಮ ನೆಚ್ಚಿನ ನಟನನ್ನು ನೋಡಲು ಅವರ ಮನೆ ಮುಂದೆ ಜಮಾಯಿಸಿದ್ದರು.

    ಭಾನುವಾರ ರಜೆಯಿದ್ದ ಕಾರಣ ದರ್ಶನ್ ರಾಜರಾಜೇಶ್ವರಿ ನಗರದ ನಿವಾಸದಲ್ಲಿ ಇದ್ದರು. ಹೀಗಾಗಿ ಅಭಿಮಾನಿಗಳು ಅವರನ್ನು ಮನೆ ಮುಂದೆ ಕಾಯುತ್ತಿದ್ದರು. ಅಭಿಮಾನಿಗಳು ಕಾಯುತ್ತಿರುವುದನ್ನು ತಿಳಿದ ದರ್ಶನ್ ಅವರು ಹೊರಗೆ ಬಂದು ಅವರನ್ನು ಮಾತನಾಡಿಸಿದ್ದಾರೆ. ಅಲ್ಲದೆ ಅವರ ಜೊತೆ ಸ್ವಲ್ಪ ಸಮಯ ಕಳೆದಿದ್ದಾರೆ.

    ದರ್ಶನ್ ಹೊರ ಬರುತ್ತಿದ್ದಂತೆ ಅಭಿಮಾನಿಗಳು ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾದರು. ಇದೇ ವೇಳೆ ಕೆಲವು ಅಭಿಮಾನಿಗಳು ಅವರ ವಾಹನದ ಮೇಲೆ ದರ್ಶನ್ ಅವರ ಆಟೋಗ್ರಾಫ್ ಹಾಕಿಸಿಕೊಂಡು ಸಂತೋಷಪಟ್ಟಿದ್ದಾರೆ.

    ದರ್ಶನ್ ಸಂತಸದಿಂದ ತಮ್ಮನ್ನು ನೋಡಲು ಬಂದ ಅಭಿಮಾನಿಗಳನ್ನು ಮಾತನಾಡಿಸಿ ಅವರ ಜೊತೆ ಫೋಟೋಗೆ ಫೋಸ್ ನೀಡಿದ್ದಾರೆ. ಸದ್ಯ ಅಭಿಮಾನಿಗಳು ದರ್ಶನ್ ಅವರ ಜೊತೆ ಕಾಲಕಳೆದ ಕ್ಷಣಗಳನ್ನು ವಿಡಿಯೋ ಮಾಡಿ ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ.

    ಸದ್ಯ ಕೀನ್ಯಾದಿಂದ ವಾಪಸ್ ಆಗಿರುವ ದರ್ಶನ್ ಅಕ್ಟೋಬರ್ 2ರಿಂದ ಮತ್ತೆ ಚಿತ್ರೀಕರಣಕ್ಕೆ ಹೋಗಲಿದ್ದಾರೆ. `ರಾಬರ್ಟ್’ ಸಿನಿಮಾದ ಮುಂದಿನ ಹಂತದ ಚಿತ್ರೀಕರಣ ಉತ್ತರ ಭಾರತದಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾಗೆ ತರುಣ್ ಸುಧೀರ್ ಆಕ್ಷನ್ ಕಟ್ ಹೇಳುತ್ತಿದ್ದು, ದರ್ಶನ್‍ಗೆ ಜೋಡಿಯಾಗಿ ಆಶಾ ಭಟ್ ಕಾಣಿಸಿಕೊಳ್ಳುತ್ತಿದ್ದಾರೆ.

  • ಸೆಕ್ಸ್ ನಂತ್ರ ಸರ್ಪ್ರೈಸ್ ಎಂದು ಹೇಳಿ ಪತ್ನಿ ಕತ್ತು ಸೀಳಿದ

    ಸೆಕ್ಸ್ ನಂತ್ರ ಸರ್ಪ್ರೈಸ್ ಎಂದು ಹೇಳಿ ಪತ್ನಿ ಕತ್ತು ಸೀಳಿದ

    ಲಂಡನ್: ಸೆಕ್ಸ್ ನಂತರ ಸರ್ಪ್ರೈಸ್ ನೀಡುತ್ತೇನೆ ಎಂದು ಹೇಳಿ ಪತಿ ತನ್ನ ಪತ್ನಿಯ ಕತ್ತು ಸೀಳಿ ಕೊಲೆಗೆ ಯತ್ನಿಸಿದ ಘಟನೆ ಬ್ರಿಟನ್‍ನ ಕೆಂಟ್‍ನಲ್ಲಿ ನಡೆದಿದೆ.

    ಶಾನ್ ಮೇ ಕೊಲೆಗೆ ಯತ್ನಿಸಿದ ಪತಿ. ಶಾನ್ ತನ್ನ ಪತ್ನಿ ಲಾರಾ ಮೇ ಜೊತೆ ದೈಹಿಕ ಸಂಬಂಧ ಬೆಳೆಸಿದ ಕೆಲವೇ ನಿಮಿಷಗಳಲ್ಲಿ ಆಕೆಯ ಕಣ್ಣುಗಳನ್ನು ಟವೆಲ್ ನಿಂದ ಮುಚ್ಚಿ ಸರ್ಪ್ರೈಸ್ ಗೆಸ್ ಮಾಡಲು ಹೇಳಿದ್ದಾನೆ. ಈ ವೇಳೆ ಶಾನ್ ನಿಧಾನವಾಗಿ 10 ರಿಂದ ಎಣಿಸುತ್ತಾ ‘ಕಮಾನ್ ಶಾನ್’ ಎಂದು ಹೇಳುತ್ತಿದ್ದನು.

    ಲಾರಾ ಕಣ್ಣುಗಳು ಇನ್ನು ಟವೆಲ್‍ನಿಂದ ಮುಚ್ಚಲಾಗಿತ್ತು. ಲಾರಾ ಹಾಸಿಗೆ ಮೇಲೆ ಮಲಗಿದ್ದಾಗಲೇ ಶಾನ್ ಚಾಕು ಇರಿದಿದ್ದಾನೆ. ಶಾನ್ ಚಾಕು ಇರಿದಾಗ ಲಾರಾ ಮೊದಲು ನಾಯಿಮರಿ ಹೊಡೆಯುತ್ತಿದೆ ಎಂದುಕೊಂಡಿದ್ದಳು. ಬಳಿಕ ಶಾನ್ ಚಾಕು ಇರಿದಿದ್ದಾನೆ ಎಂಬುದು ತಿಳಿಯಿತು. ಶಾನ್ ಬಲವಾಗಿ ಲಾರಾಗೆ ಚಾಕು ಇರಿದಿದ್ದರಿಂದ ಬ್ಲೇಡ್ ಆಕೆಯ ಬೆನ್ನಿನಿಂದ ಹೊರ ಬಂದರೆ ಅದರ ಹ್ಯಾಂಡಲ್ ಕೆಳಗೆ ಬಿದ್ದಿದೆ.

    ಚಾಕು ಇರಿದ ಬಳಿಕ ಲಾರಾ ಕಣ್ಣಿಗೆ ಕಟ್ಟಿದ್ದ ಬಟ್ಟೆಯನ್ನು ತೆಗೆದು ಹಾಸಿಗೆಯಿಂದ ಎದ್ದಳು. ಆಗ ಪತಿ ಎರಡು ಕೈಗಳಲ್ಲಿ ಚಾಕು ಹಿಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಈ ವೇಳೆ ಲಾರಾ ನನ್ನ ಮೇಲೆ ಏಕೆ ಹಲ್ಲೆ ಮಾಡಿದೆ ಎಂದು ಪ್ರಶ್ನಿಸಿದ್ದಾಗ ಶಾನ್ ಆಫೀಸ್‍ನಲ್ಲಿ ಹಣಕಾಸಿನ ಅಕ್ರಮಗಳಿಂದ ನಾನು ಕೆಲಸ ಕಳೆದುಕೊಂಡಿದ್ದೇನೆ. ಸಾಲ ತೀರಿಸುವ ಬಗ್ಗೆ ನಾನು ತುಂಬಾ ಯೋಚಿಸುತ್ತಿದ್ದೇನೆ ಎಂದು ಉತ್ತರಿಸಿದ್ದಾನೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಲಾರಾ, ನನ್ನ ಹಾಗೂ ಶಾನ್ ಸಂಬಂಧ ಚೆನ್ನಾಗಿಯೇ ಇದೆ. ನಮ್ಮಿಬ್ಬರ ನಡುವೆ ಎಂದಿಗೂ ವಾಗ್ವಾದ ನಡೆದಿಲ್ಲ. ನಾವಿಬ್ಬರೂ ಪರಸ್ಪರ ಪ್ರೀತಿಸುತ್ತೇವೆ. ಐದು ದಿನಗಳ ಹಿಂದೆ ನನ್ನ ಸಹೋದರನ ಮದುವೆಯಲ್ಲಿ ಭಾಗವಹಿಸಲು ದಕ್ಷಿಣ ಕೊರಿಯಾಗೆ ಹೋಗಿದ್ದೆವು. ಶಾನ್ ನನಗೆ ಚಾಕು ಇರಿಯುತ್ತಾನೆ ಎಂದು ನಾನು ಊಹೆ ಕೂಡ ಮಾಡಿಕೊಂಡಿರಲಿಲ್ಲ. ನಾನು ಈಗ ಶಾಕ್‍ನಲ್ಲಿ ಇದ್ದೇನೆ ಎಂದು ಹೇಳಿದ್ದಾಳೆ.

    ಲಾರಾ ಪ್ರಾಣಾಪಾಯದಿಂದ ಪಾರಾಗಿದ್ದು, ಪೊಲೀಸರು ಶಾನ್‍ನನ್ನು ಬಂಧಿಸಿದ್ದಾರೆ. ಈ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

  • ಶಿವರಾಜ್‍ಕುಮಾರ್ ಹುಟ್ಟುಹಬ್ಬಕ್ಕೆ ಅನಿಲ್ ಕುಂಬ್ಳೆ ಸರ್ಪ್ರೈಸ್

    ಶಿವರಾಜ್‍ಕುಮಾರ್ ಹುಟ್ಟುಹಬ್ಬಕ್ಕೆ ಅನಿಲ್ ಕುಂಬ್ಳೆ ಸರ್ಪ್ರೈಸ್

    ಲಂಡನ್: ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರು ಶುಕ್ರವಾರ ಲಂಡನ್‍ನಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಈ ವೇಳೆ ಭಾರತ ತಂಡದ ಮಾಜಿ ಕ್ರಿಕೆಟ್ ಆಟಗಾರ ಅನಿಲ್ ಕುಂಬ್ಳೆ ಅವರು ಶಿವರಾಜ್ ಕುಮಾರ್ ಅವರಿಗೆ ಸರ್ಪ್ರೈಸ್ ನೀಡಿದ್ದಾರೆ.

    ಹೌದು. ಅನಿಲ್ ಕುಂಬ್ಳೆ ಅವರು ಶುಕ್ರವಾರ ಶಿವರಾಜ್‍ಕುಮಾರ್ ಹಾಗೂ ಅವರ ಕುಟುಂಬದವರನ್ನು ಭೇಟಿ ಮಾಡಿದ್ದಾರೆ. ಹಾಗೂ ಈ ವೇಳೆ ಶಿವರಾಜ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಅಲ್ಲದೆ ಅವರ ಆರೋಗ್ಯವನ್ನು ಕೂಡ ವಿಚಾರಿಸಿದ್ದಾರೆ.

    ಅನಿಲ್ ಕುಂಬ್ಳೆ ಅವರು ಶಿವಣ್ಣ ಹಾಗೂ ಅವರ ಕುಟುಂಬದ ಜೊತೆಯಿರುವ ಫೋಟೋ ಹಾಕಿ ಅದಕ್ಕೆ, “ಹುಟ್ಟುಹಬ್ಬದಂದೇ ಶಿವಣ್ಣ ಅವರನ್ನು ಭೇಟಿ ಮಾಡಿದ್ದು ಖುಷಿ ಆಗಿದೆ. ಶಿವಣ್ಣ ನಿಮಗೆ ಹುಟ್ಟುಹಬ್ಬದ ಶುಭಾಶಯಗಳು ಹಾಗೂ ನಿಮ್ಮ ಆರೋಗ್ಯ ಬೇಗ ಚೇತರಿಸಿಕೊಳ್ಳಲಿ” ಎಂದು ಟ್ವೀಟ್ ಮಾಡಿದ್ದಾರೆ.

    ಶಿವಣ್ಣ ಕೂಡ ತಮ್ಮ ಟ್ವಿಟ್ಟರಿನಲ್ಲಿ, “ಕ್ರಿಕೆಟ್ ಅಂದ್ರೆ ನನಗೆ ಇಷ್ಟ, ಅದರಲ್ಲೂ ನಮ್ಮ ಕನ್ನಡದ ಕ್ರಿಕೆಟ್ ಆಟಗಾರರು ಅಂದ್ರೆ ನನಗೆ ಪ್ರೀತಿ ಜಾಸ್ತಿ. ನನ್ನ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಆಗಿ ಸಿಕ್ಕ ನನ್ನ ನೆಚ್ಚಿನ ಆಟಗಾರ, ನನ್ನ ಒಳ್ಳೆಯ ಸ್ನೇಹಿತ ಅನಿಲ್ ಕುಂಬ್ಳೆ ಅವರೇ ನಿಮ್ಮ ಭೇಟಿ ಖುಷಿ ಕೊಡ್ತು” ಎಂದು ಟ್ವೀಟ್ ಮಾಡಿದ್ದಾರೆ.

    ಕಳೆದ ಆರು ತಿಂಗಳಿನಿಂದ ಭುಜದ ನೋವಿನಿಂದ ಬಳುತ್ತಿದ್ದ ಶಿವಣ್ಣ ಅವರು ಶಸ್ತ್ರಚಿಕಿತ್ಸೆಗೆ ಎಂದು ಇತ್ತೀಚೆಗೆ ಲಂಡನ್‍ಗೆ ತೆರಳಿದ್ದರು. ಅನಿಲ್ ಕುಂಬ್ಳೆ ಅವರು ಇಂಗ್ಲೆಂಡ್‍ನಲ್ಲಿ ನಡೆಯುತ್ತಿದ್ದ ವಿಶ್ವಕಪ್ ಟೂರ್ನಿ ವೀಕ್ಷಿಸಲು ಹೋಗಿದ್ದರು. ಹೀಗಾಗಿ ಅವರು ಶಿವಣ್ಣ ಅವರನ್ನು ಭೇಟಿ ಮಾಡಿದ್ದಾರೆ.