Tag: ಸರ್ಜನ್

  • ತಂದೆ ಮೇಲಿನ ಇರಿತ ಸುದ್ದಿ ಕೇಳಿದ್ರೂ ಹಾರ್ಟ್ ಆಪರೇಷನ್ ಪೂರ್ಣಗೊಳಿಸಿದ ಮಗ ರವಿಶಂಕರ್

    ತಂದೆ ಮೇಲಿನ ಇರಿತ ಸುದ್ದಿ ಕೇಳಿದ್ರೂ ಹಾರ್ಟ್ ಆಪರೇಷನ್ ಪೂರ್ಣಗೊಳಿಸಿದ ಮಗ ರವಿಶಂಕರ್

    ಬೆಂಗಳೂರು: ಲೋಕಾಯುಕ್ತ ನ್ಯಾ. ವಿಶ್ವನಾಥ್ ಶೆಟ್ಟಿ ಅವರ ಪುತ್ರ ರಾಮಯ್ಯ ಆಸ್ಪತ್ರೆಯಲ್ಲಿರುವ ಡಾ. ರವಿಶಂಕರ್ ಶೆಟ್ಟಿ ತಂದೆಯನ್ನು ನೋಡಲು ತೆರಳುವ ಮೊದಲು ವೃತ್ತಿ ಗೌರವ ತೋರಿಸಿದ್ದಾರೆ.

    ತಂದೆ ವಿಶ್ವನಾಥ್ ಶೆಟ್ಟಿ ಅವರಿಗೆ ಲೋಕಾಯುಕ್ತ ಕಚೇರಿಯಲ್ಲಿ ಚಾಕು ಇರಿದ ಸುದ್ದಿ ತಿಳಿಯುವ ವೇಳೆ ಆಸ್ಪತ್ರೆಯಲ್ಲಿ ಹಾರ್ಟ್ ಆಪರೇಷನ್ ಮಾಡುತ್ತಿದ್ದರು. ಸಹೋದ್ಯೋಗಿಗಳಿಂದ ಸುದ್ದಿ ತಿಳಿದರೂ ಧೃತಿಗೆಡದೆ ಸರ್ಜನ್ ಆಗಿರುವ ರವಿಶಂಕರ್ ಶೆಟ್ಟಿ ರೋಗಿಯ ಆಪರೇಶನ್ ಪೂರ್ಣಗೊಳಿಸಿದ್ದಾರೆ. ಇದನ್ನೂ ಓದಿ : ರಾಜ್ಯದಲ್ಲಿ ಗುಂಡಾ ಸರ್ಕಾರ ಆಳ್ವಿಕೆಯಲ್ಲಿದ್ದು, ರಾಷ್ಟ್ರಪತಿ ಆಡಳಿತ ತನ್ನಿ: ಆರ್ ಅಶೋಕ್

    ಆಪರೇಷನ್ ಪೂರ್ಣಗೊಳಿಸಿದ ನಂತರ ಮಲ್ಯ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ತಂದೆ ವಿಶ್ವನಾಥ್ ಶೆಟ್ಟಿ ಅವರನ್ನು ನೋಡಲು ಆಗಮಿಸಿದ್ದಾರೆ. ಇದನ್ನೂ ಓದಿ : ಇದು ವಿಪರ್ಯಾಸವೇ ಸರಿ: ಸಂತೋಷ್ ಹೆಗ್ಡೆ

  • ವಿಸಿಟಿಂಗ್ ಕಾರ್ಡ್ ಕೊಟ್ಟು ಕಾಲ್ ಮಾಡದ್ದಕ್ಕೆ ಹಾಜರಾತಿ ಕಡಿಮೆ- ಸರ್ಜನ್ ವಿರುದ್ಧ ವಿದ್ಯಾರ್ಥಿನಿ ಗಂಭೀರ ಆರೋಪ

    ವಿಸಿಟಿಂಗ್ ಕಾರ್ಡ್ ಕೊಟ್ಟು ಕಾಲ್ ಮಾಡದ್ದಕ್ಕೆ ಹಾಜರಾತಿ ಕಡಿಮೆ- ಸರ್ಜನ್ ವಿರುದ್ಧ ವಿದ್ಯಾರ್ಥಿನಿ ಗಂಭೀರ ಆರೋಪ

    ಚಿತ್ರದುರ್ಗ: ಇದೊಂಥರ ವಿಚಿತ್ರ ಪ್ರಕರಣ. ಜಿಲ್ಲಾ ಸರ್ಜನ್ ನನಗೆ ವಿಸಿಟಿಂಗ್ ಕಾರ್ಡ್ ಕೊಟ್ಟು ಕಾಲ್ ಮಾಡು ಎಂದು ಹೇಳುತ್ತಾರೆ. ಅಲ್ಲಿ ಇಲ್ಲಿ ಬಾ ಎಂದು ಕರೀತಾರೆ ಎಂದು ವಿದ್ಯಾರ್ಥಿನಿಯೊಬ್ಬಳು ಗಂಭೀರ ಆರೋಪ ಮಾಡಿದ್ದಾಳೆ.

    ಆದರೆ ಜಿಲ್ಲಾ ಸರ್ಜನ್ ನನ್ನ ಮಗಳಿಗಿಂತ ಚಿಕ್ಕ ವಯಸ್ಸಿನವಳು ಯಾರೋ ಆ ಯುವತಿಯನ್ನ ನನ್ನ ವಿರುದ್ಧ ಎತ್ತಿಕಟ್ಟಿ ಆಕೆಯ ಹಿತ್ತಾಳೆ ಕಿವಿ ಚುಚ್ಚಿದ್ದಾರೆ ಎಂದು ಜಿಲ್ಲಾ ಸರ್ಜನ್ ಹೇಳುತ್ತಿದ್ದಾರೆ.

    ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಕಳೆದ 2 ವರ್ಷಗಳಿಂದ ಎಎನ್‍ಎಂ ವ್ಯಾಸಂಗ ಮಾಡುತ್ತಿರೋ ವಿದ್ಯಾರ್ಥಿನಿಗೆ ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕ ಡಾ. ಜಗದೀಶ್ ಕಿರುಕುಳ ನೀಡುತ್ತಿದ್ದಾರೆ ಎನ್ನುವ ಆರೋಪ ಎದುರಾಗಿದೆ.

    ವಿಸಿಟಿಂಗ್ ಕಾರ್ಡ್ ಕೊಟ್ಟು ಕಾಲ್ ಮಾಡು ಎಂದು ಹೇಳುವುದು, ಹಾಸ್ಟೆಲ್‍ನಿಂದ ಡೈಲಿ ತಿಂಡಿ ತಂದು ಕೊಡು ಎಂದು ಹೇಳುವುದು. ಅಲ್ಲಿ ಬಾ, ಇಲ್ಲಿ ಬಾ ಎಂದು ಕರಿಯುತ್ತಾರಂತೆ. ಅವರ ತಾಳಕ್ಕೆ ತಕ್ಕಂತೆ ಕುಣಿಲಿಲ್ಲ ಎನ್ನುವ ಕಾರಣಕ್ಕೆ ಹಾಜರಾತಿ ಕಡಿಮೆ ನೀಡಿ, ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡದೇ ನನ್ನ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ನನಗೆ ನ್ಯಾಯ ಕೊಡಿಸಿ ಎಂದು ಧರಣಿ ಕುಳಿತ್ತಿದ್ದಾಳೆ.

    ವಿದ್ಯಾರ್ಥಿ ಆರೋಪಗಳ ಬಗ್ಗೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಜಗದೀಶ್ ಅವರನ್ನು ಕೇಳಿದರೆ, ಆ ವಿದ್ಯಾರ್ಥಿನಿ ಕಳೆದ ಬಾರಿ ಹೊಸದುರ್ಗ ತಾಲೂಕಿನ ಬೆಲಗೂರಿನಲ್ಲಿ ಕ್ಯಾಂಪ್ ಹಾಕಿದ್ದ ವೇಳೆ ಊರಿನಿಂದ ಓಡಾಡುತ್ತಿದಳು. ಹಾಗಾಗಿ ನಾನು ವಾರ್ನಿಂಗ್ ಮಾಡಿದ್ದೆ. ಆ ಯುವತಿ ಮಾಡುತ್ತಿರೋ ಆರೋಪದಲ್ಲಿ ಯಾವುದೇ ಹುರುಳಿಲ್ಲ. ನನ್ನ ವಿರುದ್ಧ ಪಿತೂರಿ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ.

    ಒಟ್ಟಾರೆ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ ಜಿಲ್ಲಾ ಸರ್ಜನ್ ವಿರುದ್ಧ ವಿಧ್ಯಾರ್ಥಿನಿ ಮಾಡಿರೋ ಗಂಭೀರ ಆರೋಪ ಸುಳ್ಳು ಎನ್ನುವುದು ಸಹಪಾಠಿಗಳ ಮಾತಾಗಿದೆ. ತನ್ನ ಆರೋಪದ ಬಗ್ಗೆ ಪ್ರಿನ್ಸಿಪಾಲ್ ಬಳಿ ಕಂಪ್ಲೆಂಟ್ ಮಾಡಿದ್ದು, ಪೊಲೀಸರಿಗೆ ದೂರು ನೀಡದೇ ಇರೋದು ಅನುಮಾನ ಹುಟ್ಟುಹಾಕಿದೆ.