Tag: ಸರ್ಕಾರಿ ರಜೆ

  • ನಾಳೆ ಸರ್ಕಾರಿ ರಜೆ ಘೋಷಣೆ – 3 ದಿನ ಶೋಕಾಚರಣೆ

    ನಾಳೆ ಸರ್ಕಾರಿ ರಜೆ ಘೋಷಣೆ – 3 ದಿನ ಶೋಕಾಚರಣೆ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ (SM Krishna) ಅವರ ನಿಧನದ ಹಿನ್ನೆಲೆಯಲ್ಲಿ ನಾಳೆ ಸರ್ಕಾರಿ ರಜೆಯನ್ನು (Government Holidays) ಘೋಷಣೆ ಮಾಡಲಾಗಿದೆ. ರಾಜ್ಯ ಸರ್ಕಾರ ಮೂರು ದಿನಗಳ ಶೋಕಾಚರಣೆಯನ್ನು ಘೋಷಿಸಿದೆ.

    ಬೆಳಗಾವಿಯಿಂದ ಬೆಂಗಳೂರಿನ ಸದಾಶಿವ ನಗರಕ್ಕೆ ಆಗಮಿಸಿ ಕೃಷ್ಣ ಅವರ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಿದ ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಮಾಧ್ಯಮಗಳ ಜೊತೆ ಮಾತನಾಡಿ ಸರ್ಕಾರಿ ರಜೆ ಘೋಷಣೆ ಮಾಡಿದ ವಿಚಾರವನ್ನು ತಿಳಿಸಿದರು.  ಇದನ್ನೂ ಓದಿ: ರಾಜಕಾರಣದ ಮೊದಲು ಗುರು, ಮಗನ ರೀತಿ ನೋಡುತ್ತಿದ್ದರು : ಎಸ್‌ಎಂಕೆ ನೆನೆದು ಡಿಕೆಶಿ ಕಣ್ಣೀರು

    ನಾಳೆ ಬೆಳಗ್ಗೆ 8 ಗಂಟೆಯವರೆಗೆ ಬೆಂಗಳೂರಿನಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ನಂತರ ಮದ್ದೂರಿಗೆ ತೆಗೆದುಕೊಂಡು ಹೋಗಲಾಗುತ್ತದೆ. ಅಲ್ಲಿ ಬೆಳಗ್ಗೆ 10:30 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಇಡಲಾಗುತ್ತದೆ. ಮಂಡ್ಯ ಮೈಸೂರು ಭಾಗದ ಕೃಷ್ಣ ಅವರ ಅಭಿಮಾನಿಗಳು ಮದ್ದೂರಿಗೆ ಬರಬಹುದು.  ಇದನ್ನೂ ಓದಿ: ಅಮೆರಿಕ ಮಾಜಿ ಅಧ್ಯಕ್ಷ ಜಾನ್‌ ಎಫ್‌ ಕೆನಡಿ ಪ್ರೇರಣೆಯಿಂದ ರಾಜಕೀಯ ಸೇರಿದ್ದ ಕೃಷ್ಣ

    ಮಧ್ಯಾಹ್ನ 3 ಗಂಟೆಯ ನಂತರ ಮೃತದೇಹವನ್ನು ಸ್ವಗ್ರಾಮ ಸೋಮನಹಳ್ಳಿಗೆ ತೆಗೆದುಕೊಂಡು ಹೋಗಿ ಅವರ ಸಂಪ್ರದಾಯದಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗುವುದು

    ಎಸ್. ಎಂ. ಕೃಷ್ಣ ಅವರು ಸದಾಶಿವನಗರದ ಸ್ವಗೃಹದಲ್ಲಿ ಇಂದು(ಡಿ.10) ಬೆಳಗಿನ ಜಾವ 2:30 ರ ಸುಮಾರಿಗೆ ನಿಧನರಾದರು. ಅವರಿಗೆ 93 ವರ್ಷ ವಯಸ್ಸಾಗಿತ್ತು.

     

  • 2021ನೇ ಸಾಲಿನ ಸರ್ಕಾರಿ ರಜಾ ದಿನಗಳ ಪಟ್ಟಿ ಪ್ರಕಟ – ಯಾವ ದಿನ ಯಾವ ರಜೆ?

    2021ನೇ ಸಾಲಿನ ಸರ್ಕಾರಿ ರಜಾ ದಿನಗಳ ಪಟ್ಟಿ ಪ್ರಕಟ – ಯಾವ ದಿನ ಯಾವ ರಜೆ?

    ಬೆಂಗಳೂರು: 2021ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಭಾನುವಾರ, ಎರಡು ಮತ್ತು ನಾಲ್ಕನೇ ಶನಿವಾರ ಅಲ್ಲದೇ ಒಟ್ಟು 20 ದಿನಗಳ ರಜೆಯನ್ನು ಘೋಷಿಸಲಾಗಿದೆ.

    ಏಪ್ರಿಲ್‌ 25 ರಂದು ಮಹಾವೀರ ಜಯಂತಿ ಹಾಗೂ ಆಗಸ್ಟ್‌ 15ರ ಸ್ವಾತಂತ್ರ್ಯ ದಿನಾಚರಣೆ ಭಾನುವಾರ ಬರಲಿದೆ. ಡಿಸೆಂಬರ್‌ 25 ರಂದು ಕ್ರಿಸ್‌ಮಸ್‌ ನಾಲ್ಕನೇ ಶನಿವಾರದಂದು ಬರಲಿದೆ. ಹೀಗಾಗಿ ಈ ದಿನಗಳಂದು ಸಾರ್ವತ್ರಿಕ ರಜೆ ಇಲ್ಲ.

    ಸೆಪ್ಟೆಂಬರ್‌ 9 ಶುಕ್ರವಾರದಂದು ಕೈಲ್‌ ಮುಹೂರ್ತಕ್ಕೆ, ಅಕ್ಟೋಬರ್‌ 18ರ ಸೋಮವಾರದಂದು ತುಲಾ ಸಂಕ್ರಮಣಕ್ಕೆ ಮತ್ತು ನವೆಂಬರ್‌ 20ರ ಶನಿವಾರದಂದು ಹುತ್ತರಿ ಹಬ್ಬಕ್ಕೆ ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಪ್ರಕಟಿಸಲಾಗಿದೆ.

    ಮುಸ್ಲಿಂ ಸಮುದಾಯದ ಹಬ್ಬಗಳು ಘೋಷಿತ ದಿನಾಂಕದ ಬದಲು ಬೇರೆ ದಿನ ಬಂದರೆ, ನಿಗದಿತ ದಿನಾಂಕದಂದು ರಜೆ ನೀಡದೆ ಹಬ್ಬದ ದಿನ ಆ ಸಮುದಾಯದ ಸರ್ಕಾರಿ ನೌಕರರಿಗೆ ರಜೆ ನೀಡಬಹುದು ಎಂದು ತಿಳಿಸಿದೆ.

    ಇಂದು ಪ್ರಕಟಗೊಂಡ ರಜೆಗಳಲ್ಲಿ ಶಿಕ್ಷಣ ಇಲಾಖೆಯ ರಜೆಗಳು ಒಳಗೊಂಡಿಲ್ಲ. ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರತ್ಯೇಕ ರಜೆ ಪಟ್ಟಿ ಬಿಡುಗಡೆ ಮಾಡಲಿದೆ.

    2021ರಲ್ಲಿ ರಾಜ್ಯ ಸರಕಾರಿ ನೌಕರರಿಗೆ 19 ದಿನಗಳ ಪರಿಮಿತ ರಜೆಗಳೂ ಇವೆ. ಅವುಗಳ ಪಟ್ಟಿಯನ್ನೂ ರಾಜ್ಯ ಸರಕಾರ ಬಿಡುಗಡೆಗೊಳಿಸಿದೆ. ಏಪ್ರಿಲ್‌ 1 ರಂದು ಬ್ಯಾಂಕ್‌ಗಳ ವಾರ್ಷಿಕ ಲೆಕ್ಕಪತ್ರ ಮುಕ್ತಾಯದ ದಿನವಾಗಿದ್ದು, ಅಂದು ವಾಣಿಜ್ಯ ಮತ್ತು ಸರ್ಕಾರಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ.

    ಯಾವ ದಿನ ರಜೆ?
    ಜನವರಿ 14 – ಗುರುವಾರ – ಉತ್ತರಾಯಣ ಪುಣ್ಯ ಕಾಲ, ಮಕರ ಸಂಕ್ರಾಂತಿ
    ಜನವರಿ 26 – ಮಂಗಳವಾರ – ಗಣರಾಜ್ಯೋತ್ಸವ
    ಮಾರ್ಚ್‌ 11 – ಗುರುವಾರ – ಮಹಾ ಶಿವರಾತ್ರಿ
    ಏಪ್ರಿಲ್‌ 2 – ಶುಕ್ರವಾರ – ಗುಡ್‌ ಫ್ರೈಡೇ
    ಏಪ್ರಿಲ್‌ 13 – ಮಂಗಳವಾರ – ಯುಗಾದಿ
    ಏಪ್ರಿಲ್‌ 14 – ಬುಧವಾರ – ಡಾ. ಬಿ.ಆರ್‌. ಅಂಬೇಡ್ಕರ್‌ ಜಯಂತಿ
    ಮೇ 1 – ಶನಿವಾರ – ಕಾರ್ಮಿಕ ದಿನಾಚರಣೆ
    ಮೇ 14 – ಶುಕ್ರವಾರ – ಬಸವ ಜಯಂತಿ/ಅಕ್ಷಯ ತೃತೀಯ/ ಖುತುಬ್‌ ಎ ರಂಜಾನ್
    ಜುಲೈ 21 – ಬುಧವಾರ – ಬಕ್ರೀದ್


    ಆಗಸ್ಟ್‌ 20 – ಶುಕ್ರವಾರ – ಮೊಹರಂ ಕಡೇ ದಿನ
    ಸೆಪ್ಟೆಂಬರ್‌ 10 – ಶುಕ್ರವಾರ – ವರ ಸಿದ್ಧಿವಿನಾಯಕ ವ್ರತ
    ಅಕ್ಟೋಬರ್‌ 2 – ಶನಿವಾರ – ಗಾಂಧಿ ಜಯಂತಿ
    ಅಕ್ಟೋಬರ್ ‌6 – ಬುಧವಾರ – ಮಹಾಲಯ ಅಮವಾಸ್ಯೆ
    ಅಕ್ಟೋಬರ್‌ 14 – ಗುರುವಾರ – ಮಹಾ ನವಮಿ, ಆಯುಧ ಪೂಜೆ
    ಅಕ್ಟೋಬರ್‌ 15 – ಶುಕ್ರವಾರ – ವಿಜಯ ದಶಮಿ
    ಅಕ್ಟೋಬರ್‌ 20 – ಬುಧವಾರ – ಮಹರ್ಷಿ ವಾಲ್ಮೀಕಿ ಜಯಂತಿ, ಈದ್‌ ಮಿಲಾದ್‌
    ನವೆಂಬರ್‌ 1 – ಸೋಮವಾರ – ಕನ್ನಡ ರಾಜ್ಯೋತ್ಸವ
    ನವೆಂಬರ್‌ 3 – ಬುಧವಾರ – ನರಕ ಚತುರ್ದಶಿ
    ನವೆಂಬರ್‌ 5 – ಶುಕ್ರವಾರ – ಬಲಿ ಪಾಡ್ಯಮಿ, ದೀಪಾವಳಿ
    ನವೆಂಬರ್‌ 22 – ಸೋಮವಾರ – ಕನಕದಾಸ ಜಯಂತಿ

  • ಕೊರೊನಾ ಅಬ್ಬರ- ಪಂಜಾಬ್‍ನಲ್ಲಿ ವೀಕೆಂಡ್, ಸರ್ಕಾರಿ ರಜೆಯಂದು ಕಠಿಣ ಲಾಕ್‍ಡೌನ್ ಜಾರಿ

    ಕೊರೊನಾ ಅಬ್ಬರ- ಪಂಜಾಬ್‍ನಲ್ಲಿ ವೀಕೆಂಡ್, ಸರ್ಕಾರಿ ರಜೆಯಂದು ಕಠಿಣ ಲಾಕ್‍ಡೌನ್ ಜಾರಿ

    – ಜೂನ್ 17ಕ್ಕೆ ಸಿಎಂ ಬಿಎಸ್‍ವೈ ಜೊತೆ ಮೋದಿ ಸಭೆ

    ಚಂಡೀಗಢ್: ಪಂಜಾಬ್ ರಾಜ್ಯದಲ್ಲಿ ಕೊರೊನಾ ಕೇಸ್ ಜಾಸ್ತಿಯಾದ ಹಿನ್ನೆಲೆಯಲ್ಲಿ ವೀಕೆಂಡ್ ಮತ್ತು ಸರ್ಕಾರಿ ರಜಾ ದಿನಗಳಲ್ಲೂ ಕಠಿಣ ಲಾಕ್‍ಡೌನ್ ಜಾರಿಯಾಗಿದೆ.

    ಪಂಜಾಬ್ ಸರ್ಕಾರದ ಆದೇಶದ ಪ್ರಕಾರ, ವಾರದ ಶನಿವಾರ ಮತ್ತು ಭಾನುವಾರ ಲಾಕ್‍ಡೌನ್ ಇರಲಿದೆ. ಇದರ ಜೊತೆಗೆ ಸರ್ಕಾರಿ ರಜೆ ದಿನಗಳಲ್ಲೂ ಲಾಕ್‍ಡೌನ್ ಜಾರಿ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ಈ ದಿನಗಳಲ್ಲಿ ರಾಜ್ಯದಲ್ಲಿ ಯಾವುದೇ ಅಂಗಡಿಗಳು ತೆರೆಯುವುದಿಲ್ಲ ಹಾಗೂ ಸಾರಿಗೆ ಸಂಚಾರವೂ ಇರುವುದಿಲ್ಲ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.

    ಪಂಜಾಬ್ ಸರ್ಕಾರ ಇಂದಿನಿಂದಲೇ ಪ್ರಯೋಗಿಕವಾಗಿ ಲಾಕ್‍ಡೌನ್ ಅನ್ನು ಜಾರಿ ಮಾಡಿದೆ. ಆದರೆ ಈಗಾಗಲೇ ಲಾಕ್‍ಡೌನ್ ಸಮಯದಲ್ಲಿ ನಮಗೆ ಬಹಳ ಲಾಸ್ ಆಗಿದೆ. ಈಗ ಮತ್ತೆ ಲಾಕ್‍ಡೌನ್ ಮಾಡಿದರೆ ನಮಗೆ ಬಹಳ ತೊಂದರೆಯಾಗುತ್ತದೆ ಎಂದು ಅಂಗಡಿ ವ್ಯಾಪಾರಿಗಳು ಹೇಳುತ್ತಿದ್ದಾರೆ. ಇದರ ಜೊತೆಗೆ ಸರ್ಕಾರ ದಿಢೀರ್ ಆಗಿ ಲಾಕ್‍ಡೌನ್ ಘೋಷಣೆ ಮಾಡಿದ್ದು, ಇ-ಪಾಸ್ ಇರುವವರು ಹಾಗೂ ಅಗತ್ಯ ಸೇವೆಗೆ ಹೊರಬರುವವರನ್ನು ಏನೂ ಮಾಡಬೇಕು ಎಂದು ಆಡಳಿತಾಧಿಕಾರಿಗಳು ತಲೆಕೆಡಿಸಿಕೊಂಡಿದ್ದಾರೆ.

    ಸದ್ಯ ಪಂಜಾಬ್‍ನಲ್ಲಿ ಒಟ್ಟು 2,986 ಕೊರೊನಾ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 2,282 ಜನರು ಈಗಾಗಲೇ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈಗ ಪ್ರಸ್ತುತ ಪಂಜಾಬ್‍ನಲ್ಲಿ 641 ಕೊರೊನಾ ಸಕ್ರಿಯ ಪ್ರಕರಣಗಳು ಇವೆ. ಕೊರೊನಾ ಸೋಂಕಿನಿಂದ ಪಂಜಾಬ್‍ನಲ್ಲಿ ಸುಮಾರು 64 ಜನರು ಸಾವನ್ನಪ್ಪಿದ್ದಾರೆ. ಮುಂದಿನ ದಿನಗಳಲ್ಲಿ ಸೋಂಕು ಮತ್ತಷ್ಟು ಜಾಸ್ತಿಯಾಗುವ ಸಾಧ್ಯತೆ ಇದ್ದು, ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ತಗೆದುಕೊಳ್ಳುತ್ತಿದೆ.

    ಈಗಾಗಲೇ ಇಡೀ ದೇಶದಲ್ಲಿ ಜೂನ್ 31ರ ವರೆಗೂ ಲಾಕ್‍ಡೌನ್ ಇದ್ದರೂ ಕೆಲ ಸಡಿಲಿಕೆಗಳು ನೀಡಲಾಗಿದೆ. ಈ ಕಾರಣದಿಂದ ಕರ್ನಾಟಕವೂ ಸೇರಿದಂತೆ ಮಹಾರಾಷ್ಟ್ರ, ತಮಿಳುನಾಡು, ಕೇರಳ ಮತ್ತು ಜರ್ಖಾಂಡ್ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಕಾರಣಕ್ಕಾಗಿ ಮೋದಿ ಮತ್ತೆ ಸಭೆ ನಡೆಸುತ್ತಿದ್ದು, ಮತ್ತೆ ಲಾಕ್‍ಡೌನ್ ಮಾಡುತ್ತಾರಾ ಎಂಬ ಪ್ರಶ್ನೆ ಮೂಡಿದೆ. ರಾಜ್ಯದಲ್ಲೂ ಸೋಂಕು ದಿನೇ ದಿನೇ ಹೆಚ್ಚಾಗುತ್ತಿದ್ದು, ಜೂನ್ 17ರಂದು ಪ್ರಧಾನಿ ಮೋದಿ ಸಿಎಂ ಯಡಿಯೂರಪ್ಪ ಅವರ ಜೊತೆ ಸಭೆ ನಡೆಸಲಿದ್ದಾರೆ.

  • ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ರಜೆ ಹಾಕಲು ಇ-ಲೀವ್ ಜಾರಿ

    ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ರಜೆ ಹಾಕಲು ಇ-ಲೀವ್ ಜಾರಿ

    ಬೆಂಗಳೂರು : ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ಇನ್ನುಂದೆ ಸಿಕ್ಕ ಸಿಕ್ಕ ಹಾಗೆ ರಜೆ ಹಾಕುವ  ಹಾಗಿಲ್ಲ. ಮನಬಂದಂತೆ ರಜೆ ತೆಗೆದುಕೊಳ್ಳುವ ಹಾಗಿಲ್ಲ. ಇವತ್ತು ರಜೆ ಹಾಕಿ ನಾಳೆ ಲೆಟರ್ ಕೊಡೋಣ ಎನ್ನುವ ಹಾಗಿಲ್ಲ. ಯಾಕಂದ್ರೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ರಜೆ ಹಾಕೋ ವ್ಯವಸ್ಥೆಯನ್ನು ಬದಲಾಯಿಸಿದ್ದು, ಇ-ಲೀವ್ ವ್ಯವಸ್ಥೆ ಜಾರಿಗೆ ತಂದಿದೆ.

    ಇ-ಲೀವ್ ವ್ಯವಸ್ಥೆ ಸಂಪೂರ್ಣವಾಗಿ ವಿದ್ಯುನ್ಮಾನ ವ್ಯವಸ್ಥೆ ಅಗಿದೆ. ಇಷ್ಟು ದಿನ ರಜೆ ಹಾಕುವವರು ಕೈ ಬರಹದ ಮೂಲಕ ಸಂಬಂಧ ಪಟ್ಟವರಿಗೆ ರಜೆ ಅರ್ಜಿ ಸಲ್ಲಿಸಬೇಕಿತ್ತು. ಆದ್ರೆ ಈಗ ಈ ವ್ಯವಸ್ಥೆಯನ್ನೇ ಬದಲಾವಣೆ ಮಾಡಲಾಗಿದೆ.

    ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಇಲಾಖೆ ಹೊಸ ವ್ಯವಸ್ಥೆ ಜಾರಿಗೆ ತರಲಾಗಿದೆ. ಹೊಸ ವ್ಯವಸ್ಥೆಯಲ್ಲಿ ಸಿಬ್ಬಂದಿಗೆ ನೀಡಿರುವ, ಇ -ಆಫೀಸ್ ಐಡಿ ಮೂಲಕ ರಜೆಗೆ ಅರ್ಜಿ ಸಲ್ಲಿಸಬೇಕು. ರಜೆ ಅನುಮತಿ ಕೂಡ ಇಲ್ಲೇ ಸಿಗುತ್ತದೆ.

    ಡಿ ದರ್ಜೆ ವಾಹನ ಸವಾರರನ್ನು ಹೊರತು ಪಡಿಸಿ ಉಳಿದ ಎ, ಬಿ, ಸಿ, ಡಿ ವರ್ಗದ ನೌಕರರು, ಸರ್ಕಾರದ ಎಲ್ಲಾ ಅಧಿಕಾರಿಗಳಿಗೂ ಈ ಹೊಸ ನಿಯಮ ಅನ್ವಯ ಆಗುತ್ತದೆ. 2020 ಜನವರಿ 1 ರಿಂದಲೇ ಇ-ಲೀವ್ ವ್ಯವಸ್ಥೆ ಜಾರಿಗೆ ಬರುತ್ತಿದೆ.

  • ಸರ್ಕಾರಿ ನೌಕರರಿಗೆ ಸಿಹಿ – ಕಹಿ ಸುದ್ದಿ : ನಾಲ್ಕನೇ ಶನಿವಾರ ರಜೆ?

    ಸರ್ಕಾರಿ ನೌಕರರಿಗೆ ಸಿಹಿ – ಕಹಿ ಸುದ್ದಿ : ನಾಲ್ಕನೇ ಶನಿವಾರ ರಜೆ?

    ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ನಾಲ್ಕನೇ ಶನಿವಾರ ರಜೆ ಸಿಗುವ ಸಾಧ್ಯತೆಯಿದೆ. ರಜೆ ಸಿಕ್ಕಿದರೂ 8 ಜಯಂತಿಗೆ ಸಿಗುತ್ತಿದ್ದ ಸಾಂದರ್ಭಿಕ ರಜೆ ರದ್ದಾಗುವ ಸಾಧ್ಯತೆಯಿದೆ.

    ಆರನೇ ವೇತನ ಆಯೋಗ ನೀಡಿದ್ದ 2ನೇ ವರದಿಯಲ್ಲಿ ರಜೆಗಳಿಗೆ ಸಂಬಂಧಿಸಿದಂತೆ ಕೆಲವು ಶಿಫಾರಸು ಮಾಡಿತ್ತು. ಸಾಂರ್ದಭಿಕ ರಜೆ ಕಡಿತ, ಜಯಂತಿಗಳಿಗೆ ಇರುವ ರಜೆ ರದ್ದು ಸೇರಿ ಕೆಲ ಸಲಹೆಗಳನ್ನು ಆಯೋಗ ನೀಡಿತ್ತು. ಆಯೋಗದ ವರದಿಗೆ ಸಂಬಂಧಪಟ್ಟಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ ನೇತೃತ್ವದ ಉಪಸಮಿತಿ ವಿವಿಧ ಸಮುದಾಯ, ಸರ್ಕಾರಿ ನೌಕರರ ಸಂಘಟನೆ, ಸರ್ಕಾರಿ ಆಡಳಿತ ಕ್ಷೇತ್ರದ ತಜ್ಞರ ಜೊತೆ ಸಮಾಲೋಚಿಸಿ ಕೆಲ ಶಿಫಾರಸು ಮಾಡಿದೆ.

    ಶಿಫಾರಸಿನಲ್ಲಿ ಏನಿದೆ?
    ಸರ್ಕಾರಿ ನೌಕರರಿಗೆ ಈಗ ಇರುವಂತಹ 15 ಸಾಂದರ್ಭಿಕ ರಜೆಗಳ ಪೈಕಿ ಮೂರು ಕಡಿಮೆ ಮಾಡಿ ತಿಂಗಳಿಗೆ ಒಂದರಂತೆ ವರ್ಷಕ್ಕೆ 12 ಸಿಎಲ್‍ಗಳಿಗೆ ಕಡಿತ ಮಾಡುವುದು, ಹಬ್ಬ ಹಾಗೂ ವಿವಿಧ ಜಯಂತಿ ಸೇರಿ 23 ರಜೆ ಪೈಕಿ 8 ಜಯಂತಿಗಳನ್ನು ರದ್ದು ಮಾಡುವುದಕ್ಕೆ ಶಿಫಾರಸು ಮಾಡಿದೆ ಎನ್ನಲಾಗಿದೆ.

    ಸದ್ಯದ ಮಾಹಿತಿಗಳ ಪ್ರಕಾರ ಕನಕ ಜಯಂತಿ, ಬಸವ ಜಯಂತಿ, ವಾಲ್ಮೀಕಿ ಜಯಂತಿ, ಮಹಾವೀರ ಜಯಂತಿ, ಮಹಾಲಯ ಅಮಾವಾಸ್ಯೆ, ಈದ್ ಮಿಲಾದ್, ಕಾರ್ಮಿಕ ದಿನ, ಗುಡ್‍ಫ್ರೈಡೆಗಳಿಗೆ ನೀಡಲಾಗುವ ರಜೆಯನ್ನು ರದ್ದುಗೊಳಿಸಬಹುದು ಎಂದು ಶಿಫಾರಸು ಮಾಡಿದೆ.

    ಬದಲಾವಣೆ ಯಾಕೆ?
    ಸರ್ಕಾರಿ ನೌಕರರು 100 ಕ್ಕೂ ಹೆಚ್ಚು ರಜೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. 54 ವಾರದ ರಜಾ ದಿನಗಳು, 12 ಎರಡನೇ ಶನಿವಾರ, 21 ಸಾರ್ವತ್ರಿಕ ರಜಾ ದಿನಗಳು ಬರುತ್ತದೆ. 15 ಸಾಂದರ್ಭಿಕ ರಜೆಗಳಿದ್ದು, ರಜಾ ದಿನಗಳ ಸಂಖ್ಯೆ ಹೆಚ್ಚಿರುವ ಕಾರಣ ಆಡಳಿತದ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಕಾರಣಕ್ಕಾಗಿ ರಜೆಯಲ್ಲಿ ಬದಲಾವಣೆ ಮಾಡಲು ಸರ್ಕಾರ ಮುಂದಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಸರ್ಕಾರಿ ರಜೆ ಇದ್ದರೂ ಶಾಲಾ, ಕಾಲೇಜು ಓಪನ್!

    ಸರ್ಕಾರಿ ರಜೆ ಇದ್ದರೂ ಶಾಲಾ, ಕಾಲೇಜು ಓಪನ್!

    ಬೆಂಗಳೂರು: ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಶಿವೈಕ್ಯರಾದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಶಾಲಾ-ಕಾಲೇಜುಗಳಿಗೆ ಸರ್ಕಾರಿ ರಜೆಯನ್ನು ಘೋಷಿಸಲಾಗಿದೆ. ಆದರೆ ಕೆಲವು ಜಿಲ್ಲೆಗಳಲ್ಲಿ ಸರ್ಕಾರಿ ರಜೆ ಇದ್ದರೂ ಶಾಲೆ,ಕಾಲೇಜು ನಡೆಸಿ ಶ್ರೀಗಳಿಗೆ ಅವಮಾನ ಮಾಡಿದ್ದಾರೆ ಎನ್ನುವ ಟೀಕೆ ಕೇಳಿಬಂದಿದೆ.

    ಬೆಂಗಳೂರಿನ ಮತ್ತಿಕೆರೆಯಲ್ಲಿರುವ ಎಂ.ಎಸ್ ರಾಮಯ್ಯ ಇನ್ಸ್ ಟ್ಯೂಟ್ ಆಫ್ ಬಿಸಿನೆಸ್ ಸ್ಟಡೀಸ್ ಕಾಲೇಜಿನಲ್ಲಿ ಪರೀಕ್ಷೆಗಳನ್ನು ನಡೆಸಲಾಗಿದೆ. ಸರ್ಕಾರಿ ಆದೇಶವನ್ನು ಕಾಲೇಜು ಧಿಕ್ಕರಿಸಿದ್ದು, ವಿದ್ಯಾರ್ಥಿಗಳು ಒಲ್ಲದ ಮನಸ್ಸಿನಿಂದ ಕಾಲೇಜಿಗೆ ಬಂದಿದ್ದಾರೆ.

    ಮಂಡ್ಯದ ಕೆ.ಆರ್.ಪೇಟೆ ಪಟ್ಟಣದಲ್ಲಿ ಎರಡು ಖಾಸಗಿ ಕಾಲೇಜುಗಳು ಅಗೌರವ ತೋರಿ ಎಂದಿನಂತೆ ಕಾಲೇಜಿನಲ್ಲಿ ತರಗತಿಯನ್ನು ನಡೆಸಿದೆ. ಕೆ.ಆರ್.ಪೇಟೆ ಪಟ್ಟಣದ ಕ್ರೈಸ್ಟ್ ಕಿಂಗ್ ಹಾಗೂ ಸ್ಕಾಲರ್ಸ್ ಪಿಯು ಕಾಲೇಜುಗಳು ಇಂದು ಓಪನ್ ಆಗಿದೆ. ಸರ್ಕಾರದ ಆದೇಶ ಧಿಕ್ಕರಿಸಿ ಎಂದಿನಂತೆ ತರಗತಿ ನಡೆಸುತ್ತಿದ್ದು, ಶ್ರೀಗಳ ಅನುಯಾಯಿಗಳು ಪ್ರಶ್ನಿಸಿದ್ದಕ್ಕೆ, ಕಾಲೇಜಿಗೆ ನೂರರಷ್ಟು ಫಲಿತಾಂಶ ತರಬೇಕೆಂದು ಕ್ಲಾಸ್ ನಡೆಸುತ್ತಿದ್ದೇವೆ ಎಂಬ ಉತ್ತರ ನೀಡಿದ್ದಾರೆ. ಕಾಲೇಜು ಸಿಬ್ಬಂದಿಯ ಈ ವರ್ತನೆಗೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ರಾಯಚೂರಿನ ಎಎಂಇ ಸೊಸೈಟಿಯ ವಿಎಸ್‍ಸಿ ಫಾರ್ಮರ್ಸಿ ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿದೆ. 3ನೇ ಸೆಮಿಸ್ಟರ್ ಫಾರ್ಮಸಿಟಿಕಲ್ ಎಂಜಿನಿಯರಿಂಗ್ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಪರೀಕ್ಷಾ ಕೊಠಡಿ ಮೇಲ್ವಿಚಾರಕರು ರಜೆಯ ಬಗ್ಗೆ ನಮಗೆ ಮಾಹಿತಿಯಿಲ್ಲ, ದೂರದ ಊರಿನಿಂದ ಬಂದಿದ್ದೇನೆ ಪರೀಕ್ಷೆ ನಡೆಸುತ್ತಿದ್ದೇನೆ ಎಂದಿದ್ದಾರೆ. ಕಾಲೇಜು ಆಡಳಿತ ಮಂಡಳಿ ಯಾವುದೇ ಪ್ರತಿಕ್ರಿಯೇ ನೀಡದೇ ಜಾರಿಕೊಳ್ಳುವ ಪ್ರಯತ್ನ ಮಾಡಿದೆ.

    ಬೀದರ್ ನ ಬಸವನಗರದಲ್ಲಿರುವ ದತ್ತಗಿರಿ ಮಹಾರಾಜ್ ಪಬ್ಲಿಕ್ ಸ್ಕೂಲ್ ನಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಸಿಬಿಎಸ್‍ಸಿ ಪೂರಕ ಪರೀಕ್ಷೆ ನಡೆಸಿದೆ. ಬೆಳಗ್ಗೆ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಿ ಬಳಿಕ ಶಾಲೆಯ ಮೂರನೇ ಮಹಡಿಯಲ್ಲಿ ವಿಜ್ಞಾನ ಪರೀಕ್ಷೆ ನಡೆಸಲಾಗಿದೆ. ವಿಷಯ ತಿಳಿದು ಶಾಲೆಗೆ ಪಬ್ಲಿಕ್ ಟಿವಿ ಭೇಟಿ ನೀಡಿದ ಕ್ಯಾಮೆರಾ ನೋಡಿ ಆಡಳಿತ ಮಂಡಳಿಯ ಸದಸ್ಯರು ಕೆಲ ಸಮಯ ಕಕ್ಕಾಬಿಕ್ಕಿಯಾದರು. ಈ ಬಗ್ಗೆ ಪ್ರಿನ್ಸಿಪಾಲ್ ಬಳಿ ಪ್ರಶ್ನಿಸಿದರೆ, ಪರೀಕ್ಷೆ ನಡೆದಿದೆ ಈಗ ಏನು ಮಾಡುವುದು ಎಂದು ಉಡಾಫೆಯ ಉತ್ತರ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಉಪಚುನಾವಣೆಯ 5 ಕ್ಷೇತ್ರಗಳಲ್ಲಿ ನ.3ರಂದು ಸರ್ಕಾರಿ ರಜೆ

    ಉಪಚುನಾವಣೆಯ 5 ಕ್ಷೇತ್ರಗಳಲ್ಲಿ ನ.3ರಂದು ಸರ್ಕಾರಿ ರಜೆ

    ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ 5 ಕ್ಷೇತ್ರಗಳ ಉಪಚುನಾವಣೆಯ ಮತದಾನದ ದಿನವಾದ ನವೆಂಬರ್ 3ರಂದು ರಜೆ ಘೋಷಿಸಿ ಸರ್ಕಾರ ಆದೇಶ ಹೊರಡಿಸಿದೆ.

    ಮಂಡ್ಯ, ಬಳ್ಳಾರಿ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರ ಮತ್ತು ಜಮಖಂಡಿ, ರಾಮನಗರ ವಿಧಾನಸಭಾ ಮತಕ್ಷೇತ್ರಗಳಲ್ಲಿ ಇದೇ ಶನಿವಾರ ಮತದಾನ ನಡೆಯಲಿದೆ. ಹೀಗಾಗಿ ಈ ಐದೂ ಕ್ಷೇತ್ರಗಳ ವ್ಯಾಪ್ತಿಯ ಶಾಲಾ-ಕಾಲೇಜು, ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಹಾಗೂ ಸರ್ಕಾರಿ ನೌಕರರಿಗೆ ರಜೆ ನೀಡಲಾಗಿದೆ.

    ಉಪಚುನಾವಣಾ ಕ್ಷೇತ್ರಗಳ ವ್ಯಾಪ್ತಿಯ ಹೊರಗೆ ಕೆಲಸ ನಿರ್ವಹಿಸಿಕೊಂಡು, ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳ ಅರ್ಹ ಮತದಾರರಾಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಚೇರಿ ನೌಕರರಿಗೂ ರಜೆ ನೀಡಲಾಗಿದೆ. ಆದರೆ ತುರ್ತು ಸೇವೆಗಳ ಮೇಲೆ ಕಾರ್ಯನಿರ್ವಹಿಸುವ ಸರ್ಕಾರಿ ನೌಕರರಿಗೆ ಈ ರಜೆ ಅನ್ವಯವಾಗುವುದಿಲ್ಲ ಎಂದು ಕರ್ನಾಟಕ ಸರ್ಕಾರದ ಸಚಿವಾಲಯ ತಿಳಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 15 ಸರ್ಕಾರಿ ರಜೆಗಳನ್ನ ರದ್ದು ಮಾಡಿದ ಯೋಗಿ ಆದಿತ್ಯನಾಥ್

    15 ಸರ್ಕಾರಿ ರಜೆಗಳನ್ನ ರದ್ದು ಮಾಡಿದ ಯೋಗಿ ಆದಿತ್ಯನಾಥ್

    ಲಕ್ನೋ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂಪುಟ ಮಂಗಳವಾರದಂದು ಶ್ರೇಷ್ಠ ವ್ಯಕ್ತಿಗಳ ಜಯಂತಿಗಳಿಗೆ ನೀಡಲಾಗ್ತಿದ್ದ 15 ಸರ್ಕಾರಿ ರಜೆಗಳನ್ನ ರದ್ದು ಮಾಡಿದೆ.

    ಇವುಗಳಲ್ಲಿ ಬಹುತೇಕ ರಜೆಗಳನ್ನ ಹಿಂದಿನ ಅಖಿಲೇಶ್ ಯಾದವ್ ಸರ್ಕಾರ ಇದ್ದಾಗ ಪರಿಚಯಿಸಲಾಗಿತ್ತು. 42 ಸರ್ಕಾರಿ ರಜೆಗಳಲ್ಲಿ 17 ರಜೆಗಳನ್ನ ಶ್ರೇಷ್ಠ ವ್ಯಕ್ತಿಗಳ ಜಯಂತಿ ಹಾಗೂ ಪುಣ್ಯ ಸ್ಮರಣೆಯ ಅಂಗವಾಗಿ ನೀಡಲಾಗ್ತಿತ್ತು.

    ಡಾ. ಬಿಆರ್ ಅಂಬೇಡ್ಕರ್ ಅವರ ಜನ್ಮ ವಾರ್ಷಿಕೋತ್ಸವ ಆಚರಣೆಯ ಸಂದರ್ಭದಲ್ಲಿ ಮಾತನಾಡಿದ್ದ ಯೋಗಿ ಆದಿತ್ಯನಾಥ್, ಶ್ರೇಷ್ಠ ವ್ಯಕ್ತಿಗಳ ಜಯಂತಿಗಳಿಗೆ ಇನ್ಮುಂದೆ ಶಾಲೆಗಳಿಗೆ ರಜೆ ನೀಡುವುದಿಲ್ಲ ಎಂದು ಹೇಳಿದ್ದರು. ಶಾಲೆಗಳಿಗೆ ರಜೆ ನೀಡೋ ಬದಲು ಈ ದಿನಗಳಂದು ಮಕ್ಕಳಿಗೆ 2 ಗಂಟೆಗಳ ಕಾಲ ಅಂತಹ ವ್ಯಕ್ತಿಗಳ ಬಗ್ಗೆ ಪಾಠ ಮಾಡಬೇಕೆಂದು ಯೋಗಿ ಹೇಳಿದ್ದರು.

    ಈ ಮೂಲಕ ಉತ್ತರ ಪ್ರದೇಶ ಸರ್ಕಾರ, ಸರ್ಕಾರಿ ರಜೆಗಳ ಪಟ್ಟಿಯನ್ನ ಕಡಿತಗೊಳಿಸಿರುವ ಮೊದಲ ಸರ್ಕಾರ ಎನಿಸಿಕೊಂಡಿದೆ.