Tag: ಸರ್ಕಾರಿ ಭೂಮಿ

  • ನನ್ನನ್ನ ಟಾರ್ಗೆಟ್‌ ಮಾಡೋದಕ್ಕೆ ಕೇತಗಾನಹಳ್ಳಿ ಜಮೀನು ಸರ್ವೆ – ಕುಮಾರಸ್ವಾಮಿ ಕಿಡಿ

    ನನ್ನನ್ನ ಟಾರ್ಗೆಟ್‌ ಮಾಡೋದಕ್ಕೆ ಕೇತಗಾನಹಳ್ಳಿ ಜಮೀನು ಸರ್ವೆ – ಕುಮಾರಸ್ವಾಮಿ ಕಿಡಿ

    – 14 ಎಕರೆ ಸರ್ಕಾರಿ ಜಮೀನು ಒತ್ತುವರಿ ಆರೋಪದ ಹಿನ್ನೆಲೆ ಸರ್ವೆ ಕಾರ್ಯ

    ಬೆಂಗಳೂರು: ಕೇತಗಾನಹಳ್ಳಿ ಜಮೀನು ಸರ್ವೆ (Land survey) ಕೆಲಸ ನನ್ನನ್ನು ಟಾರ್ಗೆಟ್ ಮಾಡಲು ಸರ್ಕಾರ ಮಾಡ್ತಿದೆ. ಯಾವುದೇ ತನಿಖೆಗೆ ನಾನು ಸಿದ್ಧ. ಎಲ್ಲಾ ದಾಖಲಾತಿಗಳು ನನ್ನ ಬಳಿ ಇವೆ‌ ಅಂತ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ (HD Kumaraswamy) ವಾಗ್ದಾಳಿ ನಡೆಸಿದ್ದಾರೆ.

    ಈಗ ಎಲ್ಲಿಂದ ಉದ್ಬವ ಆದ್ರು ದೂರುದಾರರು?
    ಕೇತಗಾನಹಳ್ಳಿ ಜಮೀನು ಸರ್ವೆ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕೇತಗಾನಹಳ್ಳಿ ಜಮೀನು ನಾನು 40 ವರ್ಷಗಳ ಹಿಂದೆ ಭೂಮಿ ಖರೀದಿ ಮಾಡಿದ್ದು. 40 ವರ್ಷಗಳ ಹಿಂದೆ ಹತ್ತಾರು ಬಾರಿ ಸರ್ವೆ ಮಾಡಿಕೊಂಡಿದ್ದಾರೆ. ಹತ್ತಾರು ಬಾರಿ ಎಲ್ಲಾ ರೀತಿ ತನಿಖೆಗಳು ನಡೆದಿವೆ. ತನಿಖೆ ಮಾಡೋಕೆ ನಾನು ಮುಕ್ತವಾಗಿ ಇದ್ದೇನೆ. ನಿನ್ನೆ ಕೆಲವು ಕಾಂಗ್ರೆಸ್ ಪುಡಾರಿಗಳು ಕರೆದುಕೊಂಡು ಬಂದು ರಿಯಾಕ್ಷನ್ ಕೊಡಿಸಿದ್ದಾರೆ ನೋಡಿದ್ದೇನೆ. 40 ವರ್ಷಗಳಿಂದ ನನ್ನ ಹತ್ರ ಯಾರು ಬಂದಿರಲಿಲ್ಲ. ಈಗ ಎಲ್ಲಿಂದ ಉದ್ಬವ ಆದ್ರು ದೂರುದಾರರು ಅಂತ ಪ್ರಶ್ನೆ ಮಾಡಿದ್ರು. ಇದನ್ನೂ ಓದಿ: ಹೆಚ್‌ಡಿಕೆ ವಿರುದ್ಧ 14 ಎಕರೆ ಸರ್ಕಾರಿ ಜಮೀನು ಒತ್ತುವರಿ ಆರೋಪ – ಕಂದಾಯ ಇಲಾಖೆ ಅಧಿಕಾರಿಗಳಿಂದ ಸರ್ವೇ

    1986-87 ರಲ್ಲಿ ಸಿಎಂ ಲಿಂಗಪ್ಪ, ರಾಮಚಂದ್ರಪ್ಪ ಅನ್ನೋರು ದೂರು ನೀಡಿದ್ರು. ಅಂದಿನ ಸಿಎಂ, ಪ್ರಧಾನಿ, ಗೃಹ ಸಚಿವರಿಗೆ ಅರ್ಜಿ ಹಾಕಿ ಕಾನೂನುಬಾಹಿರ ಭೂಮಿ ಖರೀದಿ ಮಾಡಿದ್ದಾರೆ ಅಂತ ಅರ್ಜಿ ಹಾಕಿದ್ರು. ಎಲ್ಲಾ ದಾಖಲಾತಿಗಳು ನನ್ನ ಬಳಿ ಇವೆ. ಹಿರೇಮಠ ರಾಜ್ಯದ ಸಂಪತ್ತು ಉಳಿಸೋರು ಅವರು ದೂರು ಕೊಟ್ಟಿದ್ದಾರೆ. ನನಗೆ ಇಲ್ಲಿವರೆಗೂ ಹೈಕೋರ್ಟ್ ನಿಂದ ಯಾವುದೇ ನೊಟೀಸ್ ಕೊಟ್ಟಿಲ್ಲ. ಮೊನ್ನೆ ಯಾವುದೇ ನೊಟೀಸ್ ಕೊಡದೇ ಸರ್ವೆಗೆ ಮುಂದಾಗಿದ್ರು. ನಾನು ಡಿಸಿ ಅವರಿಗೆ ಹೇಳಿದೆ ನೀವು ಸರ್ವೆ ಮಾಡೋದಾದ್ರೆ ನೊಟೀಸ್ ಕೊಟ್ಟು ಮಾಡಿ ಅಂತ. ಅಮೇಲೆ 3 ದಿನಗಳ ಹಿಂದೆ ಡೇಟ್ ಹಾಕಿ ಸರ್ವೆ ಮಾಡೋಕೆ ಮುಂದಾದ್ರು. ನಾನು ಸರ್ವೆ ಮಾಡಿಕೊಳ್ಳಿ ಅಂತ ಹೇಳಿದ್ದೇನೆ. ಇಂಟರ್ನ್ಯಾಷನಲ್ ಸರ್ವೆ ಅವರನ್ನ ಕರೆದುಕೊಂಡು ಸರ್ವೆ ಮಾಡಿಸಲಿ. ನಾನು ಖರೀದಿ ಮಾಡಿರೋ ಭೂಮಿಯಲ್ಲಿ ಯಾವುದೇ ಅಕ್ರಮವಾಗಿಲ್ಲ. ಈ ರಾಜ್ಯದಲ್ಲಿ ಯಾರು ಯಾರು ಏನೇನು ಮಾಡಿದ್ದಾರೆ ಚರಿತ್ರೆ ಇದೆ. ಯಾವ ರೀತಿ ಸಂವಿಧಾನದ ಸಂಸ್ಥೆಗಳನ್ನ ಬಳಕೆ ಮಾಡಿಕೊಂಡಿದ್ದಾರೆ. ಯಾವ ಸರ್ಕಾರಿ ರೀತಿ ಸರ್ಕಾರಿ ಭೂಮಿ ಲಪಟಾಯಿಸಿದ್ದಾರೆ ಅಂತ ಈ ಮಹಾನುಭಾವರ ಎಲ್ಲಾ ದಾಖಲಾತಿಗಳು ನನ್ನ ಬಳಿ ಇವೆ. ಆದರೆ ಇಂದಿನ ವ್ಯವಸ್ಥೆಗಳಲ್ಲಿ ತಾರ್ಕಿಕ ಅಂತ್ಯ ಕಾಣೋಕೆ ಸಾಧ್ಯವಿಲ್ಲ ಅಂತ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದರು.

    ನನ್ನನ್ನ ಟಾರ್ಗೆಟ್ ಮಾಡ್ತಿದ್ದಾರೆ. ಇದರಲ್ಲಿ ಸಂಶಯವೇ ಇಲ್ಲ. ಎಷ್ಟು ತನಿಖೆ ಮಾಡ್ತೀರಾ? ಎಷ್ಟು ಬಾರಿ ನನ್ನ ವಿರುದ್ದ ತನಿಖೆ ಮಾಡ್ತೀರಾ? 2023 ಮಾರ್ಚ್ ‌ನಲ್ಲಿ ಲೋಕಾಯುಕ್ತಗೆ ವರದಿ ‌ಕೊಟ್ಟಿದ್ದಾರೆ. ಪದೇ ಪದೇ ಮಾಧ್ಯಮಗಳು ಕುಮಾರಸ್ವಾಮಿ ಮತ್ತು ಸಂಬಂಧಿಕರು ಅಂತ ಹೇಳ್ತೀರಾ. ಇದು ಡಿಸಿ ತಮ್ಮಣ್ಣ ಮತ್ತು ಮಾದೇಗೌಡರು ನಡುವೆ ಆಗಿದ್ದು. ಮಾದೇಗೌಡರು ದೂರು ಕೊಟ್ಡಿದ್ದರು. ಅದರ ಮೇಲೆ ಲೋಕಾಯುಕ್ತ ತನಿಖೆ ಸೂಚಿಸಿದ್ರು. ಅವರ ನಡುವೆ ವಿವಾದ ಇರೋದು ಅವರಿಬ್ಬರ ನಡುವೆ. ನನ್ನ ಹೆಸರು ಯಾಕೆ ಬಂತುಗೊತ್ತಿಲ್ಲ ಎಂದರು. ಇದನ್ನೂ ಓದಿ: ಹೆಚ್‌ಡಿಕೆ ವಿರುದ್ಧ ಭೂ ಒತ್ತುವರಿ ಆರೋಪ – ಎರಡನೇ ದಿನವೂ ಮುಂದುವರಿದ ಸರ್ವೇ ಕಾರ್ಯ

    ಸಿದ್ದರಾಮಯ್ಯ ತರಹ ಸುಳ್ಳು ‌ದಾಖಲೆ‌ ಸೃಷ್ಟಿಸಿ ಪಡೆದಿಲ್ಲ
    ನಿನ್ನೆ ಸಂಪೂರ್ಣವಾಗಿ ನನ್ನ ಜಮೀನು ತನಿಖೆ ಆಗಿದೆ. ಏನಿದೆ ವರದಿ ಕೊಡಲಿ. ನನಗೇನು ಗಾಬರಿ ಇಲ್ಲ. 40 ವರ್ಷಗಳ ಹಿಂದೆ ಖರೀದಿ ಮಾಡಿರೋ ಜಮೀನಿನ ಬಗ್ಗೆ ಇಷ್ಟೆಲ್ಲಾ ಮಾಡ್ತಿದ್ದಾರೆ. ಸಿದ್ದರಾಮಯ್ಯ ಏನೇನು ಮೀಟಿಂಗ್ ಮಾಡಿದ್ದಾರೆ ನನಗೆ ಗೊತ್ತಿದೆ. ಯಾರ ಯಾರನ್ನು ಕರೆಸಿಕೊಂಡು ಮೀಟಿಂಗ್ ‌ಮಾಡಿದ್ದಾರೆ ಗೊತ್ತಿದೆ ನನಗೆ, 5 ಜನರ SIT ಟೀಂ ಮಾಡಿದ್ದಾರೆ. ಪೊಲೀಸ್ ಇಲಾಖೆಯ SIT ಟೀಂ ಆಯ್ತು. ಈಗ IAS ಅಧಿಕಾರಿಗಳ SIT ಟೀಂ ಸಿದ್ದರಾಮಯ್ಯ ರಚನೆ ಮಾಡಿದ್ದಾರೆ. ನಾನು ಓಪನ್ ಆಗಿ ಇದ್ದೇನೆ. ಸಿದ್ದರಾಮಯ್ಯ ತರಹ ನಾನು ಸರ್ಕಾರಿ ಭೂಮಿಗಳನ್ನು ಸುಳ್ಳು ‌ದಾಖಲೆ‌ ಸೃಷ್ಟಿ ಮಾಡಿ ಪಡೆದಿಲ್ಲ. ಅವರಿಗೆ ಅಧಿಕಾರ ಇದೆ, ಏನ್ ಬೇಕಾದ್ರು ಮಾಡ್ತಾರೆ ಅಂತ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

    ನನ್ನ ಮೇಲೆ 2012 ರಿಂದ ಮಹಾನುಭಾವರು ತನಿಖೆ ಮಾಡ್ತಾನೇ ಇದ್ದಾರೆ. ಬಿಜೆಪಿ ಅವಧಿಯಲ್ಲಿ ಅವರ ವಿರುದ್ದ ಹೋರಾಟ ಮಾಡಿದ್ದಕ್ಕೆ 3-4 ಕೇಸ್ ಹಾಕಿದ್ರು. 12-13 ವರ್ಷಗಳಿಂದ ಯಾವುದೇ ತನಿಖೆ ಸಂಸ್ಥೆಗಳು, SIT ಗಳು ಸತ್ಯಾಂಶ ಹೊರಗೆ ಇಡಲು ಆಗಲಿಲ್ಲ. ಡ್ರಾಮಾಗಳನ್ನ ಆಡಿಕೊಂಡು ಬರ್ತಿದ್ದಾರೆ‌. ಇದೊಂದು ರಾಜ್ಯನಾ? ಇದೆಲ್ಲದ್ದಕ್ಕೂ ಕಾಲವೇ ಉತ್ತರ ಕೊಡುತ್ತದೆ ಅಂತ ತಿಳಿಸಿದರು. ಇದನ್ನೂ ಓದಿ: ಟೋಲ್ ತಪ್ಪಿಸುತ್ತಿದ್ದ ವಾಹನ ಸವಾರರಿಗೆ ಹೆದ್ದಾರಿ ಪ್ರಾಧಿಕಾರ ಶಾಕ್; ಬಿಡದಿ ಬಳಿಯ ಎಕ್ಸಿಟ್ ರೋಡ್ ಬಂದ್

  • ಹೆಚ್‌ಡಿಕೆ ವಿರುದ್ಧ 14 ಎಕರೆ ಸರ್ಕಾರಿ ಜಮೀನು ಒತ್ತುವರಿ ಆರೋಪ – ಕಂದಾಯ ಇಲಾಖೆ ಅಧಿಕಾರಿಗಳಿಂದ ಸರ್ವೇ

    ಹೆಚ್‌ಡಿಕೆ ವಿರುದ್ಧ 14 ಎಕರೆ ಸರ್ಕಾರಿ ಜಮೀನು ಒತ್ತುವರಿ ಆರೋಪ – ಕಂದಾಯ ಇಲಾಖೆ ಅಧಿಕಾರಿಗಳಿಂದ ಸರ್ವೇ

    – 35ಕ್ಕೂ ಹೆಚ್ಚು ಸರ್ವೇ ನಂಬರ್‌ ಪರಿಶೀಲನೆ

    ರಾಮನಗರ: ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ಅವರ ವಿರುದ್ಧ ಸರ್ಕಾರಿ ಭೂಮಿ ಒತ್ತುವರಿ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಇಂದು ಬಿಡದಿಯ ಕೇತಗಾನಹಳ್ಳಿಯಲ್ಲಿ ಕಂದಾಯ ಇಲಾಖೆ (Revenue Department) ಅಧಿಕಾರಿಗಳು ಸರ್ವೇ ಕಾರ್ಯ ನಡೆಸಿದ್ದಾರೆ. ಇದನ್ನೂ ಓದಿ: ಕೆಲಸ ಮಾಡದ ಮೋದಿಯನ್ನು ಕೆಳಗಿಳಿಸಿ, ಗಡ್ಕರಿಯನ್ನು ಪ್ರಧಾನಿ ಮಾಡಿ: ಸಂತೋಷ್‌ ಲಾಡ್‌

    ಕೇತಗಾನಹಳ್ಳಿಯಲ್ಲಿ ರೆವಿನ್ಯೂ ಇನ್ಸ್‌ಪೆಕ್ಟರ್‌ ಪ್ರಕಾಶ್ ಹಾಗೂ ಗ್ರಾಮ ಆಡಳಿತಾಧಿಕಾರಿ ವಿಶಾಲಾಕ್ಷಿ ನೇತೃತ್ವದಲ್ಲಿ ಸರ್ವೇ ಕಾರ್ಯ ನಡೆದಿದೆ. ಸುಮಾರು 35ಕ್ಕೂ ಹೆಚ್ಚು ಸರ್ವೇ ನಂಬರ್‌ಗಳನ್ನ ಪರಿಶೀಲನೆ ಮಾಡಲಾಗಿದೆ. ಹೆಚ್.ಡಿ ಕುಮಾರಸ್ವಾಮಿ, ಸಹೋದರಿ ಅನುಸೂಯ ಮಂಜುನಾಥ್ ಹಾಗೂ ಸಂಬಂಧಿ ಡಿ.ಸಿ ತಮ್ಮಣ್ಣ ಹೆಸರಿನಲ್ಲಿರುವ 110 ಎಕರೆಗೂ ಹೆಚ್ಚು ಜಮೀನನ್ನ ಸರ್ವೇ ನಡೆಸಿದ್ದಾರೆ. ಇದನ್ನೂ ಓದಿ: Bengaluru | ಪತಿಗೆ ಅಕ್ರಮ ಸಂಬಂಧ – ಮಗಳನ್ನು ಕೊಲೆಗೈದು ಪತ್ನಿ ಆತ್ಮಹತ್ಯೆ

    ಹೆಚ್‌ಡಿಕೆ ವಿರುದ್ಧದ ಆರೋಪ ಏನು?
    ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಅವರು 14 ಎಕರೆ ಸರ್ಕಾರಿ ಜಮೀನನ್ನ ಒತ್ತುವರಿ ಮಾಡಿಕೊಂಡಿದ್ದಾರೆಂದು ಆರೋಪಿಸಿ ಸಾಮಾಜಿಕ ಹೋರಾಟಗಾರರು ದೂರು ನೀಡಿದ್ದರು. ಈ ಬಗ್ಗೆ ವರದಿ ನೀಡುವಂತೆ ಕಂದಾಯ ಇಲಾಖೆಗೆ ಹೈಕೋರ್ಟ್ ಸೂಚನೆ ನೀಡಿತ್ತು. ಆದಾಗ್ಯೂ ವರದಿ ನೀಡಲು ವಿಳಂಬವಾದ ಹಿನ್ನೆಲೆ ಕಂದಾಯ ಇಲಾಖೆ ಆಯುಕ್ತರಿಗೆ ಶೀಘ್ರ ವರದಿ ನೀಡುವಂತೆ ಕೋರ್ಟ್‌ ತಾಕೀತು ಮಾಡಿತ್ತು.

    ಕೋರ್ಟ್‌ ಸೂಚನೆಯಂತೆ ಇಂದು ಜಮೀನು ಸರ್ವೇ ಕಾರ್ಯ ನಡೆಸಿರುವ ಕಂದಾಯ ಇಲಾಖೆ ಅಧಿಕಾರಿಗಳು ಬಳಿಕ ಜಿಲ್ಲಾಧಿಕಾರಿಗಳಿಗೆ ಸರ್ವೇ ವರದಿ ಸಲ್ಲಿಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: 17ರ ಬಾಲಕಿ ಮೇಲೆ ಅತ್ಯಾಚಾರ – ಮೃತ ವ್ಯಕ್ತಿಯ ವಿರುದ್ಧ ಪೋಕ್ಸೋ ಕೇಸ್‌

  • ಸರ್ಕಾರಿ ಭೂಮಿ ಒತ್ತುವರಿ – ಬುಲ್ಡೋಜರ್ ಬಳಸಿ ಅಮೀರ್ ಖಾನ್ ಮನೆ ಕಾಂಪೌಂಡ್ ಧ್ವಂಸ

    ಸರ್ಕಾರಿ ಭೂಮಿ ಒತ್ತುವರಿ – ಬುಲ್ಡೋಜರ್ ಬಳಸಿ ಅಮೀರ್ ಖಾನ್ ಮನೆ ಕಾಂಪೌಂಡ್ ಧ್ವಂಸ

    ಶ್ರೀನಗರ: ಸರ್ಕಾರಿ ಭೂಮಿ (Government Land) ಒತ್ತುವರಿ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ (Terrorist) ಗುಂಪಿನ ಕಮಾಂಡರ್ ಅಮೀರ್ ಖಾನ್‌ಗೆ (Amir Khan) ಸೇರಿದ ಆಸ್ತಿಯನ್ನು ಜಮ್ಮು ಮತ್ತು ಕಾಶ್ಮೀರ (Jammu and Kashmir) ಆಡಳಿತವು ಬುಲ್ಡೋಜರ್ (Bulldozer) ಬಳಸಿ ಧ್ವಂಸಗೊಳಿಸಿದೆ.

    ಇಂದು ಜಮ್ಮು ಮತ್ತು ಕಾಶ್ಮೀರ ಆಡಳಿತವು ಜಂಟಿ ಕಾರ್ಯಾಚರಣೆ ನಡೆಸಿ ಅನಂತನಾಗ್ ಜಿಲ್ಲೆಯ ಪಾಹಲ್ಗಾಮ್ ನಲ್ಲಿ ಮ್ಯಾಜಿಸ್ಟ್ರೇಟ್‌ ಸಮ್ಮುಖದಲ್ಲೇ ಆಸ್ತಿಯನ್ನು ಧ್ವಂಸಗೊಳಿಸಿದೆ. ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಆಮೀರ್ ಖಾನ್‌ಗೆ ಸೇರಿದ ಮನೆಯ ಕಾಂಪೌಂಡ್ ಅನ್ನು ಧ್ವಂಸಗೊಳಿಸಲಾಗಿದೆ. ಇದನ್ನೂ ಓದಿ: ಟಿಕೆಟ್ ವಿಚಾರದಲ್ಲಿ ಕಚ್ಚಾಟ – KPCC ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಹೊಡೆದಾಟ

    ಬಳಿಕ ಮಾತನಾಡಿದ ಅಧಿಕಾರಿಗಳು, ಕಣಿವೆ ಪ್ರದೇಶದಲ್ಲಿ ಭಯೋತ್ಪಾದನೆ ಮುಕ್ತಗೊಳಿಸಲು ಮತ್ತು ಸರ್ಕಾರದ ಮೇಲೆ ಜನರಿಗೆ ನಂಬಿಕೆ ಮೂಡಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್ ಕೊಟ್ಟ ಸ್ಯಾಂಡಲ್ ವುಡ್ ಕ್ವೀನ್

    ಮೂಲಗಳ ಪ್ರಕಾರ, ಗುಲಾಂ ನಬಿ ಖಾನ್ ಅಲಿಯಾಸ್ ಅಮೀರ್ ಖಾನ್ ಹಿಜ್ಬುಲ್ ಮುಜಾಹಿದ್ದೀನ್‌ನ ಉನ್ನತ ಕಾರ್ಯಾಚರಣೆಯ ಕಮಾಂಡರ್ ಆಗಿದ್ದರು. 90ರ ದಶಕದ ಆರಂಭದಲ್ಲೇ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ತೆರಳಿದ್ದರು ಎಂದು ಹೇಳಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • 15 ದಿನದಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿ – ಕ್ರಮ ಕೈಗೊಳ್ಳದಿದ್ದರೆ ಅಧಿಕಾರಿಗಳ ವಿರುದ್ಧವೇ ಕೇಸ್

    15 ದಿನದಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿ – ಕ್ರಮ ಕೈಗೊಳ್ಳದಿದ್ದರೆ ಅಧಿಕಾರಿಗಳ ವಿರುದ್ಧವೇ ಕೇಸ್

    ಬೆಂಗಳೂರು: ಸರ್ಕಾರಿ ಭೂಮಿ ಒತ್ತುವರಿ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸರ್ಕಾರಿ ಜಾಗ ಉಳಿಸಲು ಸರ್ಕಾರ ಹೊಸ ಆದೇಶ ಹೊರಡಿಸಿದೆ. ಅಲ್ಲದೇ ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸದ ಅಧಿಕಾರಿಗಳ ವಿರುದ್ಧ ಕ್ರಮಕ್ಕೂ ನಿರ್ಧಾರ ತೆಗೆದುಕೊಂಡಿದೆ.

    ಇಷ್ಟೇ ಅಲ್ಲದೆ ಒತ್ತುವರಿದಾರರ ವಿರುದ್ಧ ಕ್ರಮ ತೆಗೆದುಕೊಳ್ಳದ ಅಧಿಕಾರಿಗಳ ವಿರುದ್ಧವೇ ಕ್ರಮ ತೆಗೆದುಕೊಳ್ಳುವ ಮಹತ್ವದ ನಿರ್ಧಾರ ಕಂದಾಯ ಇಲಾಖೆ ಮಾಡಿದೆ. ಇದಲ್ಲದೆ ನಕಲಿ ದಾಖಲೆ ಸೃಷ್ಟಿಸುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಿದೆ. ಜಿಲ್ಲಾಧಿಕಾರಿಗಳಿಗೆ 15 ಅಂಶಗಳ ಆದೇಶದ ಹೊರಡಿಸಿದ್ದು, ಡಿಸಿ ಗಳು ಕಡ್ಡಾಯವಾಗಿ ಪಾಲಿಸುವಂತೆ ಕಂದಾಯ ಇಲಾಖೆ ಸೂಚನೆ ನೀಡಿದೆ.

    ಆದೇಶದಲ್ಲಿ ಏನಿದೆ?
    ಡಿಸಿಗಳು ಒತ್ತುವರಿ ತೆರವು ಬಾಕಿ ಇರುವ ಪ್ರಕರಣವನ್ನು15 ದಿನಗಳಲ್ಲಿ ಪೂರ್ಣಗೊಳಿಸಬೇಕು. ನಗರ, ವಾಣಿಜ್ಯ, ಕೈಗಾರಿಕೆ ಇನ್ನಿತರ ಉದ್ಯಮಗಳು ಸರ್ಕಾರಿ ಜಾಗ ಒತ್ತುವರಿ ಮಾಡಿದರೆ ಕಾನೂನಿನ ಕ್ರಮ ತೆಗೆದುಕೊಳ್ಳಬೇಕು. ಒತ್ತುವರಿ ತೆರವುಗೊಳಿಸಲು ವಿಫಲವಾದ ಅಧಿಕಾರಿಗಳ ವಿರುದ್ಧ 192ಎ/192ಬಿ ಅನ್ವಯ ಕಾನೂನು ಕ್ರಮ ತೆಗೆದುಕೊಳ್ಳಬೇಕು. ನಕಲಿ ದಾಖಲೆ ಸೃಷ್ಟಿಸಿರುವ ಭೂ ಕಬಳಿಕೆ ವಿರುದ್ಧ ಬಂದಿರುವ ದೂರು ಕಾಲ ಮಿತಿಯಲ್ಲಿ ಪೂರ್ಣಗೊಳಿಸಬೇಕು.

    ನಕಲಿ ದಾಖಲೆ ಸೃಷ್ಟಿಯಲ್ಲಿ ಸರ್ಕಾರದ ಅಧಿಕಾರಿ ಕೈವಾಡ ಇದ್ದರೆ ಆ ಅಧಿಕಾರಿಯ ಪ್ರಾಥಮಿಕವಾಗಿ ಅಮಾನತು ಮಾಡಿ ತನಿಖೆ ನಡೆಸಬೇಕು. ನಕಲಿ ದಾಖಲೆ ಸೃಷ್ಟಿಸಿ ದೃಢವಾಗಿದ್ದರೆ ಅಂತಹ ಅಧಿಕಾರಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು. ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದ್ದರೆ ತಡೆಯಾಜ್ಞೆ ತೆರವು ಮಾಡಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು.

    ಒತ್ತುವರಿ ತೆರವು ಮಾಡಿದ ಜಮೀನಿಗೆ ನಾಮಫಲಕ, ತಂತಿ ಬೇಲಿ ಹಾಕಿ ರಕ್ಷಣೆ ಮಾಡಬೇಕು. ಡಿಸಿಗಳು ಪ್ರತಿ ತಿಂಗಳು ಒತ್ತುವರಿ ಕುರಿತು ಸಭೆ ಮಾಡಬೇಕು ಎಂಬ ಅಂಶಗಳು ಈ ಆದೇಶದಲ್ಲಿದೆ.

  • ದೇವರ ಹೆಸರಲ್ಲಿ ಕೆಜಿಎಫ್‍ನ 2 ಸಾವಿರ ಎಕರೆ ಗಣಿ ಪ್ರದೇಶ ಗುಳುಂ!

    ದೇವರ ಹೆಸರಲ್ಲಿ ಕೆಜಿಎಫ್‍ನ 2 ಸಾವಿರ ಎಕರೆ ಗಣಿ ಪ್ರದೇಶ ಗುಳುಂ!

    ಕೋಲಾರ: ಚಿನ್ನದ ನಾಡು ಕೋಲಾರದಲ್ಲಿ ಚಿನ್ನದಂತ ಸರ್ಕಾರಿ ಭೂಮಿ ಕಂಡವರ ಪಾಲಾಗುತ್ತಿದೆ. ಕೆಜಿಎಫ್‍ನ ಕೃಷ್ಣಾವರಂನಲ್ಲಿ ಚಿನ್ನದ ಗಣಿಗೆ ಸೇರಿ ಭೂಮಿಯನ್ನೇ ಲೂಟಿ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.

    ರಾತ್ರೋರಾತ್ರಿ ಗಣಿಗೆ ಸೇರಿದ ಭೂಮಿಗೆ ಬೇಲಿ ಹಾಕಿ ಅಲ್ಲಿ ದೇವಸ್ಥಾನ, ಚರ್ಚ್ ಕಟ್ಟುತ್ತಿದ್ದು, ಆ ಹೆಸರಲ್ಲೇ ಭೂಮಿಯನ್ನು ಲಪಟಾಯಿಸುತ್ತಿದ್ದಾರೆ. ಮೈನ್ಸ್‍ಗೆ ಸೇರಿದ 12,500 ಎಕರೆ ಭೂಮಿ ಇದೆ. ಅದರಲ್ಲಿ 2 ಸಾವಿರ ಎಕರೆಯಷ್ಟು ಭೂಮಿಯನ್ನು ಕೆಲ ಪ್ರಭಾವಿ ವ್ಯಕ್ತಿಗಳು ಮತ್ತು ಭೂಗಳ್ಳರು ಕಬಳಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

    ಕಳೆದ ಎರಡು ತಿಂಗಳಲ್ಲಿ ಕೃಷ್ಣಾಪುರಂ, ಘಟ್ಟಕಾಮದೇನಹಳ್ಳಿ, ಪಿಚ್ಚಹಳ್ಳಿಯಲ್ಲಿ ಅಕ್ರಮ ನಡೆಯುತ್ತಿದೆ. ವಿಚಿತ್ರ ಅಂದರೆ ಕಂದಾಯ ಇಲಾಖೆ ಅಧಿಕಾರಿಗಳಿಗೇ ಈ ಬಗ್ಗೆ ಮಾಹಿತಿ ಇರಲಿಲ್ಲ. ಸದ್ಯ ಕೆಜಿಎಫ್ ತಹಶೀಲ್ದಾರ್ ಗೆ ಸ್ಥಳ ಮಹಜರು ಮಾಡಿ ವರದಿಗೆ ಸೂಚಿಸಲಾಗಿದೆ. ಈ ವಿಚಾರದಲ್ಲಿ ನಕಲಿ ದಾಖಲೆ ಸೃಷ್ಠಿಸಿ ಅಕ್ರಮ ಪ್ರವೇಶ ಮಾಡಿದ್ದೇ ಆದಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಕುವ ಎಚ್ಚರಿಕೆ ನೀಡಲಾಗಿದೆ.

  • ಕೊಡಗಿನಲ್ಲಿ ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಿ, ನೆರೆ ಸಂತ್ರಸ್ತರಿಗೆ ಸೂರು

    ಕೊಡಗಿನಲ್ಲಿ ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಿ, ನೆರೆ ಸಂತ್ರಸ್ತರಿಗೆ ಸೂರು

    ಮಡಿಕೇರಿ: ನದಿ ತೀರದಲ್ಲಿ ಮನೆಗಳನ್ನು ಕಳೆದುಕೊಂಡಿರುವ ಹಾಗೂ ಹಾನಿಗೊಳಗಾದ ಕುಟುಂಬಗಳಿಗೆ ಶಾಶ್ವತ ಸೂರು ಒದಗಿಸುವ ನಿಟ್ಟಿನಲ್ಲಿ ಕೊಡಗು ಜಿಲ್ಲಾಡಳಿತ ವಿನೂತನ ಚಿಂತನೆ ನಡೆಸಿದ್ದು, ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಕಾಫಿ ತೋಟ ಮಾಡಿಕೊಂಡಿರುವ ಜಾಗವನ್ನು ತೆರವು ಗೊಳಿಸಿ ಸಂತ್ರಸ್ತರಿಗೆ ಶಾಶ್ವತ ಸೂರು ಕಟ್ಟಿಕೊಡಲು ತೀರ್ಮಾನಿಸಿದೆ.

    ಕೊಡಗು ಜಿಲ್ಲಾಧಿಕಾರಿ ಹಾಗೂ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಇಗಾಗಲೇ ಜಾಗ ಪರಿಶೀಲನೆ ನಡೆಸುತ್ತಿದ್ದಾರೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟದಕಾಡು ಹಾಗೂ ಕುಂಬಾರಗುಂಡಿ ಭಾಗದ ನದಿ ತೀರದ ಮನೆಗಳು ಪ್ರವಾಹಕ್ಕೆ ಸಿಲುಕಿ ಹಾನಿಯಾಗಿ ನೂರಾರು ಮನೆಗಳು ಕುಸಿದಿವೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತರಿಗೆ ಶಾಶ್ವತ ಸೂರು ಒದಗಿಸುವ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾಡಳಿತ ತ್ವರಿತಗತಿಯಲ್ಲಿ ನೆಲ್ಯಹುದಿಕೇರಿಯಲ್ಲಿ ಪೈಸಾರಿ ಜಾಗಗಳನ್ನು ಗುರುತಿಸಿದೆ.

    ಅನೇಕ ವರ್ಷಗಳಿಂದ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಕಾಫಿ ತೋಟ ಮಾಡಿಕೊಂಡಿರುವ ಜಾಗವನ್ನು ತೆರವು ಗೊಳಿಸಿ ಸಂತ್ರಸ್ತರಿಗೆ ಸರಕಾರದ ವತಿಯಿಂದ ಶಾಶ್ವತ ಸೂರು ಕಲ್ಪಿಸಲು ನಿರ್ಧರಿಸಲಾಗಿದೆ. ನೆಲ್ಯಹುದಿಕೇರಿ ವ್ಯಾಪ್ತಿಯಲ್ಲಿ ಸುಮಾರು 50 ಎಕರೆಯಷ್ಟು ಪೈಸಾರಿ ಜಾಗ ಒತ್ತುವರಿಯಾಗಿರುವುದು ಕುಂಡುಬಂದಿದ್ದು, ಒತ್ತುವರಿದಾರರು ಎಷ್ಟೇ ಪ್ರಭಾವಿಗಳಾಗಿದ್ದರೂ ಸರಿ ಸರ್ಕಾರ ಕ್ರಮ ಕೈಗೊಂಡು ಒತ್ತುವರಿ ತೆರವುಗೊಳಿಸುವುದಾಗಿ ಜಿಲ್ಲಾಧಿಕಾರಿ ಅನಿಸ್ ಕಣ್ಮಣಿ ಜಾಯ್ ಹಾಗೂ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.

    ಸಿದ್ದಾಪುರ ಸಮೀಪದಲ್ಲೂ ಸಂತ್ರಸ್ತರಿಗಾಗಿ ಮನೆ ನಿರ್ಮಿಸಲು ಜಾಗವನ್ನು ಪರಿಶೀಲಿಸಲಾಗಿದ್ದು, ಕರಡಿಗೋಡು ಸೇರಿದಂತೆ ವಿವಿಧ ಗ್ರಾಮಗಳ ಸಂತ್ರಸ್ತರಿಗೆ ಶಾಶ್ವತ ಸೂರು ಕಲ್ಪಿಸಲು ಚಿಂತನೆ ನಡೆಸಲಾಗಿದೆ. ಸರ್ಕಾರಿ ಜಾಗ ಒತ್ತುವರಿ ಮಾಡಿ ಅಕ್ರಮವಾಗಿ ತೋಟಗಳನ್ನು ನಿರ್ಮಾಣ ಮಾಡಿಕೊಂಡಿದ್ದು, ತೋಟಗಳನ್ನು ತೆರವು ಮಾಡಿ ಲೇಔಟ್ ನಿರ್ಮಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಜಿಲ್ಲಾಧಿಕಾರಿಗಳ ಈ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ಸಂತ್ರಸ್ತರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅದಷ್ಟು ಬೇಗ ಕಾಮಗಾರಿ ಪ್ರಾರಂಭಿಸಿ, ಸಂತ್ರಸ್ತರಿಗೆ ಸೂರು ಕಲ್ಪಿಸಲಿ ಎಂದು ನಾಗರಿಕರು ಮನವಿ ಮಾಡಿದ್ದಾರೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್:  ಸರ್ಕಾರಿ ಭೂಮಿಯನ್ನ ಬೇಕಾಬಿಟ್ಟಿ ಕೊಡಲು ಬಿಡಲ್ಲ – ಸಿಎಂ ಸ್ಪಷ್ಟನೆ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಸರ್ಕಾರಿ ಭೂಮಿಯನ್ನ ಬೇಕಾಬಿಟ್ಟಿ ಕೊಡಲು ಬಿಡಲ್ಲ – ಸಿಎಂ ಸ್ಪಷ್ಟನೆ

    ಬೆಂಗಳೂರು: ನಗರದ ಎಂಎಸ್‍ಐಎಲ್ ಜಾಗವನ್ನ ಟೆಂಡರ್ ಕರೆಯದೇ ಬಾಡಿಗೆ ನೀಡಲು ಮುಂದಾದ ಸಚಿವ ಜಾರ್ಜ್ ಕ್ರಮಕ್ಕೆ ಸಿಎಂ ಕುಮಾರಸ್ವಾಮಿ ತಡೆ ನೀಡಿದ್ದು, ವಿವರ ಪಡೆದು ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.

    ಅಕ್ರಮವಾಗಿ ಎಂಎಎಸ್‍ಐಎಲ್ ಜಾಗವನ್ನು ಬಾಡಿಗೆ ನೀಡಲು ಮುಂದಾಗಿದ್ದ ಸಚಿವ ಜಾರ್ಜ್ ಕ್ರಮದ ಬಗ್ಗೆ ಗುರುವಾರ ಸಂಜೆ ಪಬ್ಲಿಕ್ ಟಿವಿ ವಿಸೃತವಾಗಿ ಸುದ್ದಿ ಪ್ರಸಾರ ಮಾಡಿತ್ತು. ಈ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ ಕುಮಾರಸ್ವಾಮಿ, ಮಾಧ್ಯಮಗಳಲ್ಲಿ ಬಂದ ಸುದ್ದಿ ನಾನು ನೋಡಿದ್ದೇನೆ. ಈ ಬಗ್ಗೆ ಮಾಹಿತಿ ತರಿಸಿಕೊಂಡು ಕ್ರಮ ತೆಗೆದುಕೊಳ್ಳುತ್ತೇನೆ. ಸರ್ಕಾರದ ಭೂಮಿಗಳನ್ನ ಸ್ವೇಚ್ಛಾಚಾರವಾಗಿ ಕೊಡಲು ನಮ್ಮ ಸರ್ಕಾರ ಬಿಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಇತ್ತ ಜಾಗದ ಲೀಸ್ ಸಂಬಂಧ ತೀರ್ಮಾನ ಮಾಡಲು ಇಂದು 11.30ಕ್ಕೆ ನಿಗದಿಯಾಗಿದ್ದ ಅಧಿಕಾರಿಗಳ ಸಭೆಯನ್ನು ಮುಂದೂಡಲಾಗಿದೆ.

    ಇದೇ ವೇಳೆ ವಿಧಾನಸೌಧದಲ್ಲಿ ಲಕ್ಷ ಲಕ್ಷ ಹಣ ಸಿಕ್ಕ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿ, ಕಾನೂನಿನ ಅನ್ವಯ ಕ್ರಮ ತೆಗೆದುಕೊಳ್ಳುತ್ತೇನೆ. ಅಲ್ಲದೇ ಈ ಬಗ್ಗೆ ಸ್ವಲ್ಪ ಸಮಯ ಬೇಕಾಗಿದೆ. ನಾನು ಕಾನೂನು ಬದ್ಧವಾಗಿಯೇ ತೀರ್ಮಾನ ಮಾಡುತ್ತೇನೆ. ಯಾರಿಗೂ ರಕ್ಷಣೆ ಕೊಡುವ ಹಾಗೂ ತಪ್ಪು ಮುಚ್ಚಿ ಹಾಕುವ ಕೆಲಸ ನಾನು ಮಾಡುವುದಿಲ್ಲ. ನನ್ನ ರಾಜಕೀಯ ಜೀವನದಲ್ಲಿ ತಪ್ಪು ಮುಚ್ಚಿ ಹಾಕುವ ಕೆಲಸ ನಾನು ಮಾಡಿಲ್ಲ. ಕಾನೂನಿನ ಅನ್ವಯ ಕ್ರಮ ಖಚಿತ ಎಂದು ಭರವಸೆ ನೀಡಿದರು. 

    ಮಾಧ್ಯಮಗಳು ಸುದ್ದಿ ಪ್ರಸಾರ ಮಾಡದಂತೆ ತಡೆ ನೀಡಲು ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ ವಿಚಾರಕ್ಕೆ ಸಂಬಂಧಿಸಿದಂತೆ, ಅದು ಅವರ ವೈಯಕ್ತಿಕ ವಿಚಾರ. ಅದರ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ, ಅವರ ಭವಿಷ್ಯದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿರಬಹುದು ಎಂದರು. ಇದನ್ನು ಓದಿ: BIG EXCLUSIVE: ಕೋಟಿ ಕೋಟಿ ಬೆಲೆ ಬಾಳೋ ಸರ್ಕಾರಿ ಜಾಗ ಜುಜುಬಿ ಕಾಸಿಗೆ ಬಿಕರಿ – ಸಚಿವ ಕೆಜೆ ಜಾರ್ಜ್ ಬಂಟರ ಗುಂಡಾಗಿರಿ

    ಪುತ್ರ ಮಂಡ್ಯದಿಂದ ಲೋಕಸಭೆಗೆ ಸ್ಪರ್ಧೆ ಮಾಡುವ ವಿಚಾರವಾಗಿ ಮಾತನಾಡಿ, ಕೆಲ ಅಭಿಮಾನಿಗಳು ಸ್ಪರ್ಧೆ ಬಗ್ಗೆ ಕೇಳಿದ್ದಾರೆ. ಮುಂದೆ ಈ ವಿಚಾರ ತೀರ್ಮಾನ ಮಾಡುತ್ತೇವೆ ಎಂದು ಹೇಳಿ ನಿಖಿಲ್ ಕುಮಾರ್ ರಾಜಕೀಯ ಪ್ರವೇಶದ ಬಗ್ಗೆ ಕುತೂಹಲ ಮೂಡಿಸಿದ್ದಾರೆ.

    ನಿಗಮ-ಮಂಡಳಿ ನೇಮಕಕ್ಕೆ ತಡೆ ನೀಡಿರುವ ತಮ್ಮ ಕ್ರಮವನ್ನು ಎಚ್‍ಡಿಕೆ ಸಮರ್ಥನೆ ಮಾಡಿಕೊಂಡಿದ್ದು, ಕೆಲ ತಾಂತ್ರಿಕ ಸಮಸ್ಯೆಯಿಂದಾಗಿ ಇದನ್ನ ತಡೆ ಹಿಡಿಯಲಾಗಿದೆ. ಬಹಿರಂಗವಾಗಿ ಈ ಕುರಿತು ಚರ್ಚೆ ಮಾಡುವುದು ನನಗೆ ಶೋಭೆ ತರುವುದಿಲ್ಲ. ಅಲ್ಲದೇ ಸರಿಯಾದ ಜಾಗದಲ್ಲಿ ಮಾತನಾಡುತ್ತೇನ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv