Tag: ಸರ್ಕಾರಿ ಬಸ್

  • ಸ್ಟೇರಿಂಗ್ ಕಟ್ ಆಗಿ ಬಸ್ ಪಲ್ಟಿ – 15 ಮಂದಿಗೆ ಗಾಯ, ಮೂವರ ಸ್ಥಿತಿ ಗಂಭೀರ

    ಸ್ಟೇರಿಂಗ್ ಕಟ್ ಆಗಿ ಬಸ್ ಪಲ್ಟಿ – 15 ಮಂದಿಗೆ ಗಾಯ, ಮೂವರ ಸ್ಥಿತಿ ಗಂಭೀರ

    ಕೊಪ್ಪಳ: ಸ್ಟೇರಿಂಗ್ ಕಟ್ ಆದ ಪರಿಣಾಮ ಸರ್ಕಾರಿ ಬಸ್ಸೊಂದು ಪಲ್ಟಿಯಾಗಿ 15 ಪ್ರಯಾಣಿಕರು ಗಾಯಗೊಂಡು, ಮೂವರ ಸ್ಥಿತಿ ಗಂಭೀರವಾಗಿರೋ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ನಡೆದಿದೆ.

    ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದ ಬಳಿ ಬಸ್ ಪಲ್ಟಿಯಾಗಿದೆ. ತಾವರಗೇರಾದಿಂದ ಕುಷ್ಟಗಿ ಕಡೆಗೆ ಹೊರಟಿದ್ದ ಬಸ್ ನಲ್ಲಿ ಸುಮಾರು 30 ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸ್ತಿದ್ರು. ದೋಟಿಹಾಳ ಗ್ರಾಮದ ಬಳಿ ಬಸ್ ಬರುತ್ತಿದ್ದಂತೆ ಸ್ಟೇರಿಂಗ್ ಕಟ್ ಆಗಿ ಬುಡಮೇಲಾಗಿ ಬಿದ್ದಿದೆ. ಮೂವರ ಪ್ರಯಾಣಿಕರ ಸ್ಥಿತಿ ಚಿಂತಾಜನಕವಾಗಿದೆ.

    ಘಟನೆಯಿಂದ ಕೆಲ ಪ್ರಯಾಣಿಕರು ಅದೃಷ್ಟವಶಾತ್ ಪಾರಾಗಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಕುಷ್ಟಗಿ ಸರ್ಕಾರಿ ಆಸ್ಪತ್ರೆ ಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಕುಷ್ಟಗಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

  • ತೆಲಂಗಾಣ ಸರ್ಕಾರಿ ಬಸ್ ಡಿಕ್ಕಿ ಹೊಡೆದು ಪೋಷಕರ ಕಣ್ಣೆದುರೇ ಪ್ರಾಣ ಬಿಟ್ಟ 8ರ ಬಾಲಕ!

    ತೆಲಂಗಾಣ ಸರ್ಕಾರಿ ಬಸ್ ಡಿಕ್ಕಿ ಹೊಡೆದು ಪೋಷಕರ ಕಣ್ಣೆದುರೇ ಪ್ರಾಣ ಬಿಟ್ಟ 8ರ ಬಾಲಕ!

    ಯಾದಗಿರಿ: ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ತೆಲಂಗಾಣದ ಸರ್ಕಾರಿ ಬಸ್ ಡಿಕ್ಕಿಯಾಗಿ ಬಾಲಕನೋರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಯಾದಗಿರಿ ತಾಲೂಕಿನ ಪಸಪುಲ್ ಕ್ರಾಸ್ ಬಳಿ ನಡೆದಿದೆ.

    8 ವರ್ಷದ ಬಾಲಕ ಕಾರ್ತಿಕ್ ಮೃತ ದುರ್ದೈವಿ. ಕಾರ್ತಿಕ್ ತನ್ನ ಪೋಷಕರೊಂದಿಗೆ ದೇವಸ್ಥಾನಕ್ಕೆ ಹೋಗಿ ಮನೆಗೆ ವಾಪಾಸ್ಸಾಗಲೆಂದು ರಸ್ತೆ ದಾಟುತ್ತಿದ್ದ ವೇಳೆ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಬಾಲಕ ಪೋಷಕರ ಕಣ್ಣೆದುರೇ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

    ಬಾಲಕನಿಗೆ ಡಿಕ್ಕಿ ಹೊಡೆದ ನಂತರ ವೇಗವಾಗಿ ಮುಂದೆ ಹೋದ ಬಸ್ಸನ್ನು ಗ್ರಾಮಸ್ಥರು ತಡೆದಿದ್ದಾರೆ. ಘಟನೆ ಸಂಬಂಧ ಬಸ್ ಚಾಲಕ ನರಸಿಂಹಲುನನ್ನ ಪೊಲೀಸರು ಬಂಧಿಸಿದ್ದು, ನಿರ್ವಾಹಕ ಪರಾರಿಯಾಗಿದ್ದಾನೆ.

    ಗುರುಮಠಕಲ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.