ರಾಯಚೂರು: ಸರ್ಕಾರಿ ಬಸ್ ಪಲ್ಟಿಯಾದ ಪರಿಣಾಮ ಓರ್ವ ಪ್ರಯಾಣಿಕನ (Passenger) ಕಾಲು ಮುರಿದಿದ್ದು, ಬಸ್ನಲ್ಲಿದ್ದ 15 ಜನರಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ರಾಯಚೂರು (Raichur) ನಗರದ ಹೊರವಲಯದ ಸಾಥಮೈಲ್ ಕ್ರಾಸ್ ಬಳಿ ನಡೆದಿದೆ.
ದಾವಣಗೆರೆಯಿಂದ ರಾಯಚೂರಿಗೆ ಬರುತ್ತಿದ್ದ ಸ್ಲೀಪರ್ ಕೋಚ್ ಬಸ್ (Sleeper Coach Bus) ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ನಿದ್ದೆ ಮಂಪರಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿ ಬಸ್ ರಸ್ತೆ ಪಕ್ಕದ ಜಮೀನಿಗೆ ಉರುಳಿದೆ. ಬಸ್ನಲ್ಲಿ ಕಾಲು ಸಿಲುಕಿ ನೋವಿನಿಂದ ಒದ್ದಾಡಿದ ಪ್ರಯಾಣಿಕ ವಿಶ್ವನಾಥ್ನನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: Bengaluru | ಮಹಿಳೆಗೆ ಥಳಿತ ಕೇಸ್ – ಬಟ್ಟೆ ಅಂಗಡಿ ಮಾಲೀಕ ಸೇರಿ ಇಬ್ಬರು ಆರೋಪಿಗಳು ಅರೆಸ್ಟ್
ಮಂಡ್ಯ: ಬಸ್ ನಿಲ್ಲಿಸದೇ ಇದ್ದಕ್ಕೆ ಕಲ್ಲೆಸೆದು ಅನ್ಯಕೋಮಿಯನ ಯುವಕರು ದಾಂಧಲೆ ನಡೆಸಿರುವ ಘಟನೆ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ (Srirangapatna) ತಾಲೂಕಿನ ಗಂಜಾಂ ರಸ್ತೆಯಲ್ಲಿ ನಡೆದಿದೆ.
ಸರ್ಕಾರಿ ಬಸ್ (Government Bus) ಮೇಲೆ ಅನ್ಯಕೋಮಿನ ಯುವಕರ ಗುಂಪು ಕಲ್ಲು ತೂರಾಟ ನಡೆಸಿದ್ದು, ಬಳಿಕ ಯುವಕರನ್ನು ಹಿಡಿದು ಥಳಿಸಿದ ಸಾರ್ವಜನಿಕರು ಪೊಲೀಸರಿಗೊಪ್ಪಿಸಿದ್ದಾರೆ. ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಪಹಲ್ಗಾಮ್ ದಾಳಿ | ಕೂಡಲೇ ಪಾಕ್ ತೊರೆಯಿರಿ ಭಾರತೀಯರಿಗೆ ಕೇಂದ್ರ ಸೂಚನೆ
ಏನಿದು ಘಟನೆ?
ಬಸ್ಸೊಂದು ಶ್ರೀರಂಗಪಟ್ಟಣದಿಂದ ಗಂಜಾಂಗೆ ತೆರಳುತ್ತಿತ್ತು. ಈ ವೇಳೆ ಮೈಸೂರಿಗೆ ಹೋಗುವ ಬಸ್ ಬದಲು, ಅನ್ಯಕೋಮಿನ ಯುವಕರ ಕುಟುಂಬ ಗಂಜಾಂಗೆ ತೆರಳುತ್ತಿದ್ದ ಬಸ್ ಹತ್ತಿದೆ. ಕಂಡಕ್ಟರ್ ಬಳಿ ನಾವು ಮೈಸೂರಿಗೆ ಹೋಗಬೇಕು ಎಂದು ಕುಟುಂಬಸ್ಥರು ಹೇಳಿದ್ದಾರೆ. ಇದು ಮೈಸೂರಿನ ಬಸ್ ಅಲ್ಲ ಎಂದು ನಿರ್ವಾಹಕ ಹೇಳ್ತಿದ್ದಂತೆ ಬಸ್ ನಿಲ್ಲಿಸುವಂತೆ ವಾಗ್ವಾದಕ್ಕಿಳಿದಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್ ದಾಳಿ – ಪಾಕ್ ಉಗ್ರರ ಮಾಹಿತಿ ಕೊಟ್ಟವರಿಗೆ 20 ಲಕ್ಷ ಬಹುಮಾನ ಘೋಷಣೆ
ಆಗ ಕಂಡಕ್ಟರ್ ಇಲ್ಲಿ ಸ್ಟಾಪ್ ಇಲ್ಲ, ಮುಂದೆ ನಿಲ್ಲಿಸೋದಾಗಿ ಹೇಳಿದ್ದಾರೆ. ಅಷ್ಟಕ್ಕೆ ಡ್ರೈವರ್, ಕಂಡಕ್ಟರ್ ಮೇಲೆ ಹಲ್ಲೆ ನಡೆಸಿ ದರ್ಪ ತೋರಿದ್ದಾರೆ. ಕೊನೆಗೆ ಬಸ್ ನಿಲ್ಲಿಸುತ್ತಿದ್ದಂತೆ ಕೆಳಗಿಳಿದ ಯುವಕರು ಬಸ್ ಮೇಲೆ ಕಲ್ಲೆಸೆದು, ಕಿಟಕಿ ಗಾಜುಗಳನ್ನು ಪುಡಿಪುಡಿ ಮಾಡಿದ್ದಾರೆ. ನಂತರ ಕಲ್ಲೆಸೆದ ಅನ್ಯಕೋಮಿನ ಯುವಕರನ್ನ ಹಿಡಿದು ಥಳಿಸಿರುವ ಸಹ ಸಾರ್ವಜನಿಕರು ಪೊಲೀಸರಿಗೊಪ್ಪಿಸಿದ್ದಾರೆ. ಇದನ್ನೂ ಓದಿ: ‘ಮ್ಯಾಕ್ಸ್’ ಖ್ಯಾತಿಯ ಶ್ರೀಧರ್ಗೆ ಅನಾರೋಗ್ಯ- ಚಿಕಿತ್ಸೆಗೆ ಸಹಾಯ ಕೋರಿದ ನಟ
ಬಸ್ ಚಾಲಕ ಮತ್ತೊಂದು ವಾಹನವನ್ನು ಹಿಂದಿಕ್ಕಲು ಪ್ರಯತ್ನಿಸಿದಾಗ ನಿಯಂತ್ರಣ ತಪ್ಪಿ ಎದುರುಗಡೆ ಬರುತ್ತಿದ್ದ ಆಟೋರಿಕ್ಷಾಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೊಪ್ಪಳ (Koppal) ಜಿಲ್ಲೆಯ ಕುಷ್ಟಗಿ (Kushtagi) ಮಾರ್ಗ ಮಧ್ಯೆ ಸರ್ಕಾರಿ ಬಸ್ನಲ್ಲಿ ಹೋಗುವಾಗ ಗಲಾಟೆಯಾಗಿದೆ. ಬಸ್ ಕುಷ್ಟಗಿಯಿಂದ ಕೊಪ್ಪಳಕ್ಕೆ ಹೊರಟಿತ್ತು. ಈ ವೇಳೆ ಬಸ್ನಲ್ಲಿದ್ದ ಮಹಿಳೆಯರು ಹಾಗೂ ಓರ್ವ ಪುರುಷನ ನಡುವೆ ಗಲಾಟೆ ಆರಂಭವಾಗಿದೆ. ಗಲಾಟೆ ನಡುವೆಯೇ ಮಹಿಳೆಯರು ಪುರುಷನಿಗೆ ಥಳಿಸಿದ್ದು, ಗಲಾಟೆಗೆ ನಿಖರವಾದ ಕಾರಣ ಏನು ಎಂದು ತಿಳಿದುಬಂದಿಲ್ಲ.
ಬೆಂಗಳೂರು: ಯುಗಾದಿ ಹಬ್ಬದ ಪ್ರಯುಕ್ತ ಕೆಎಸ್ಆರ್ಟಿಸಿಯಿಂದ (KSRTC) 2000 ಹೆಚ್ಚುವರಿ ಬಸ್ಗಳು ಕಾರ್ಯಾಚರಣೆ ಮಾಡಲಿವೆ ಎಂದು ರಾಜ್ಯ ರಸ್ತೆ ಸಾರಿಗೆ ಇಲಾಖೆ ತಿಳಿಸಿದೆ.
ಮಾ. 28ರಿಂದ 30ರವರೆಗೆ ಹೆಚ್ಚುವರಿ ಬಸ್ಗಳು ಸಂಚರಿಸದ್ದು ಮೆಜೆಸ್ಟಿಕ್ನಿಂದ(Majestic) ರಾಜ್ಯದ ವಿವಿಧ ಭಾಗಗಳಿಗೆ ವಿಶೇಷ ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ಸಾಮಾನ್ಯ ಸಾರಿಗೆ, ಐರಾವತ, ಸ್ಲೀಪರ್ ಕೋಚ್ ಸೇರಿ ಎಲ್ಲಾ ಐಷಾರಾಮಿ ಬಸ್ಗಳು ಲಭ್ಯವಾಗಲಿವೆ. ಮೆಜೆಸ್ಟಿಕ್, ಶಾಂತಿನಗರ, ಸ್ಯಾಟ್ಲೈಟ್, ಪೀಣ್ಯ ಬಸ್ನಿಲ್ದಾಣದಿಂದ ಬಸ್ಗಳ ಕಾರ್ಯಾಚರಣೆ ನಡೆಯಲಿದೆ. ಇದನ್ನೂ ಓದಿ: ಹಾಸನ ಹೊರವರ್ತುಲ ರಸ್ತೆ ಯೋಜನೆಗೆ ಅನುಮೋದನೆ ನೀಡುವಂತೆ ಕೇಂದ್ರಕ್ಕೆ ಹೆಚ್.ಡಿ.ದೇವೇಗೌಡ ಮನವಿ
ಹಬ್ಬ ಮುಗಿದ ಬಳಿಕ ವಿಶೇಷ ಬಸ್ಗಳ ಕಾರ್ಯಾಚರಣೆ ನಡೆಯಲಿದ್ದು, ಮಾ. 31ರಂದು ವಾಪಸ್ ಬರುವ ಪ್ರಯಾಣಿಕರಿಗೆ ಸರ್ಕಾರಿ ಬಸ್ ವ್ಯವಸ್ಥೆಯಿದೆ. ರಾಜ್ಯದಾದ್ಯಂತ ಹಾಗೂ ಅಂತರರಾಜ್ಯದಿಂದಲೂ ಕೆಎಸ್ಆರ್ಟಿಸಿ ಬಸ್ಗಳು ಲಭ್ಯವಾಗಲಿವೆ.
ಎಲ್ಲಿಂದ ಎಲ್ಲಿಗೆ ಬಸ್ಗಳ ಕಾರ್ಯಾಚರಣೆ ಇರಲಿದೆ
1.ಮೆಜೆಸ್ಟಿಕ್
ಮೆಜೆಸ್ಟಿಕ್ ನಿಂದ ಧರ್ಮಸ್ಥಳ, ಶೃಂಗೇರಿ, ಹೊರನಾಡು, ಮಂಗಳೂರು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಗೋಕರ್ಣ, ಕಾರವಾರ ಭಾಗಗಳಿಗೆ ಇರಲಿದೆ. ಇನ್ನೂ ಉತ್ತರ ಕರ್ನಾಟಕದ ಹುಬ್ಬಳಿ, ಬೆಳಗಾವಿ, ಧಾರವಾಡ, ವಿಜಯಪುರ, ಯಾದಗಿರಿ ಸೇರಿ ಹಲವೆಡೆ ಬಸ್ ವ್ಯವಸ್ಥೆ ಇರಲಿದೆ. ಹೊರರಾಜ್ಯಗಳಾದ ತಿರುಪತಿ, ವಿಜಯವಾಡ, ಹೈದರಾಬಾದ್ ಕಡೆಗೂ ವಿಶೇಷ ಬಸ್ಗಳು ಲಭ್ಯವಿರಲಿದೆ. ಇದನ್ನೂ ಓದಿ: ಹನಿಟ್ರ್ಯಾಪ್ ತನಿಖೆಗೆ ಹೈಕಮಾಂಡ್ ಅನುಮತಿ ಬೇಕಾ – ಸಿಎಂ ನಿಲುವೇನು?
2.ಸ್ಯಾಟಲೈಟ್ ಬಸ್ ನಿಲ್ದಾಣ
ಮೈಸೂರು ಭಾಗದ ಎಲ್ಲಾ ಕಡೆಗಳಿಗೆ ಬಸ್ಗಳ ವ್ಯವಸ್ಥೆಯಿರಲಿದೆ. ಮಂಡ್ಯ, ರಾಮನಗರ, ಕುಶಾಲನಗರ, ಚಾಮರಾಜನಗರ, ಕೊಡಗು, ವಿರಾಜಪೇಟೆ, ಪಿರಿಯಾಪಟ್ಟಣ ಭಾಗಗಳಿಗೆ ಬಸ್ಗಳಿರಲಿವೆ.
ಇನ್ನೂ ಪ್ರಯಾಣಿಕರು ಎರಡೂ ಬದಿಯ ಮುಂಗಡ ಟಿಕೆಟ್ ಬುಕ್ ಮಾಡಿದರೆ 10% ರಿಯಾಯಿತಿ ಸಿಗಲಿದೆ. ಜೊತೆಗೆ ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್ ಕಾಯ್ದಿರಿಸಿದರೆ ಶೇಕಡ 5ರಷ್ಟು ರಿಯಾಯಿತಿ ದೊರಯಲಿದೆ. ಕೆಎಸ್ಆರ್ಟಿಸಿಯ ಅಧಿಕೃತ ವೆಬ್ಸೈಟ್ನಲ್ಲಿ ಬಸ್ ಬುಕ್ ಮಾಡಲು ಅವಕಾಶವಿದೆ.
ಚಿಕ್ಕೋಡಿ: ಸರ್ಕಾರಿ ಬಸ್ ಹಾಗೂ ಕಾರಿನ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Road Accident) ಮಹಿಳೆಯೊಬ್ಬರು ಮೃತಪಟ್ಟ ಘಟನೆ ಶನಿವಾರ ನಿಪ್ಪಾಣಿ ಮುಧೋಳ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದೆ.
ಬೆಳಗಾವಿ (Belagavi) ಜಿಲ್ಲೆಯ ರಾಯಬಾಗ ಪಟ್ಟಣದ ನಿರ್ಮಲ ಅವಟೆ (60) ಮೃತಪಟ್ಟ ಮಹಿಳೆ. ಕಾರು ಚಲಾಯಿಸುತ್ತಿದ್ದ ಚಿಕ್ಕೋಡಿ ಹೆಸ್ಕಾಂ ಉಪವಿಭಾಗ ಸಹಾಯಕ ಅಭಿಯಂತರ ನೇಮಿನಾಥ ಅವಟೆ (43) ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚಿಕ್ಕೋಡಿ ಪಟ್ಟಣದ ಯಾದವ ನಗರದಲ್ಲಿ ವಾಸಿಸವಿದ್ದ ಇವರು ಕಾರಿನಲ್ಲಿ ಸಂಚರಿಸುವ ವೇಳೆ ಉಮರಾಣಿ ಹತ್ತಿರ ನಿಪ್ಪಾಣಿ ಮುಧೋಳ ರಾಜ್ಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಗಾಯಗೊಂಡ ನೇಮಿನಾಥ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ಚಿಕ್ಕೋಡಿ ಪೊಲೀಸ್ ಠಾಣೆ ಡಿವೈಎಸ್ಪಿ ಗೋಪಾಲಕೃಷ್ಣ ಗೌಡರ, ಸಿಪಿಐ ವಿಶ್ವನಾಥ್ ಚೌಗಲಾ, ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ರೂಪಾ ಗುಡೋಡ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗದಗ: ಸರ್ಕಾರಿ ಬಸ್ ತಲೆ ಮೇಲೆ ಹರಿದು ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ನರಗುಂದ (Naragunda) ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ನಡೆದಿದೆ.
ರಾಘವೇಂದ್ರ ಮನಿಕಟ್ಟಿ (20) ಮೃತ ವಿದ್ಯಾರ್ಥಿ. ಶಕ್ತಿಯೋಜನೆ ಪ್ರಭಾವದಿಂದ ಬಸ್ ಪೂರ್ತಿ ಪ್ರಯಾಣಿಕರು ತುಂಬಿದ್ದರು. ರಾಘವೇಂದ್ರ ಬಸ್ಸಿನ ಮುಂದಿನ ಬಾಗಿಲಲ್ಲಿ ನಿಂತಿದ್ದ. ಬಸ್ ಕೊಣ್ಣೂರ (Konnur) ನಿಲ್ದಾಣದಿಂದ ಹೊರಡುವ ವೇಳೆ ತಿರುವಿನಲ್ಲಿ ಆಯಾತಪ್ಪಿ ವಿದ್ಯಾರ್ಥಿ ಕೆಳಗೆ ಬಿದ್ದಿದ್ದಾನೆ. ಬಸ್ಸಿನ ಹಿಂದಿನ ಚಕ್ರಗಳಿಗೆ ವಿದ್ಯಾರ್ಥಿ ಸಿಲುಕಿದ್ದು, ತೀವ್ರ ರಕ್ತ ಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೃತ ವಿದ್ಯಾರ್ಥಿಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಲಾಬಿ ಎಟಿಎಂ ಮಷಿನ್ನಲ್ಲಿ ಹಣ ಹಾಕಲು ಬಂದು 39,500 ರೂ. ಕಳೆದುಕೊಂಡ ವ್ಯಕ್ತಿ
ಕೊಣ್ಣೂರ ನರಗುಂದ ಪಟ್ಟಣದ ಸರ್ಕಾರಿ ಸಿದ್ಧೇಶ್ವರ ಪದವಿ ಕಾಲೇಜಿನಲ್ಲಿ ರಾಘವೇಂದ್ರ ಅಂತಿಮ ವರ್ಷದ ಬಿಎ ವ್ಯಾಸಂಗ ಮಾಡುತ್ತಿದ್ದ. ಬೆಳಗಾವಿ (Belagavi) ಜಿಲ್ಲೆಯ ರಾಮದುರ್ಗದಿಂದ ಕೊಣ್ಣೂರ, ನರಗುಂದ, ಗದಗ ಮಾರ್ಗವಾಗಿ ಹೊಸಪೇಟೆಗೆ ಹೊರಟಿದ್ದ ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಇದನ್ನೂ ಓದಿ: ಅಭಿವೃದ್ಧಿಗೆ ಬ್ರೇಕ್ ಹಾಕುವಲ್ಲಿ ಕಾಂಗ್ರೆಸ್, ಮಿತ್ರಪಕ್ಷಗಳಿಂದ ಪಿಹೆಚ್ಡಿ: ಮೋದಿ ವಾಗ್ದಾಳಿ
ರಾಯಚೂರು: ಜಿಲ್ಲೆಯ ಮಸ್ಕಿ (Maski) ತಾಲೂಕಿನ ಗುಡದೂರು ಬಳಿ ಸರ್ಕಾರಿ ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಓರ್ವ ಸಾವನ್ನಪ್ಪಿದ್ದಾನೆ. ಇನ್ನೋರ್ವನ ಸ್ಥಿತಿ ಚಿಂತಾಜನಕವಾಗಿದೆ.
ಡಿಕ್ಕಿ ರಭಸಕ್ಕೆ ಕಾರು ನುಜ್ಜುಗುಜ್ಜಾಗಿದೆ. ಬಸ್ನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಾರಿನಲ್ಲಿದ್ದ ಇನ್ನೋರ್ವ ಗಾಯಾಳು ಶಿವರಾಜ್ ಸ್ಥಿತಿ ಗಂಭೀರವಾಗಿದ್ದು, ಸಿಂಧನೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ಮುಂದುವರೆದಿದೆ.
ಚಿಕ್ಕೋಡಿ: ವೇಗವಾಗಿ ಬಂದ ಸರ್ಕಾರಿ ಬಸ್ವೊಂದು (Government Bus) ರಸ್ತೆ ಬದಿ ನಿಂತಿದ್ದ ಬಾಲಕನ ಮೇಲೆ ಹರಿದು, ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ಅಥಣಿ ಪಟ್ಟಣದ ಗಲಗಲಿ ಆಸ್ಪತ್ರೆ ಬಳಿ ನಡೆದಿದೆ.
ಏನಿದು ಘಟನೆ?
ಸುನೀಲ್ ಬಂಡರಗರ್ ಎಂಬ ಬಾಲಕ ಟ್ಯೂಷನ್ ಮುಗಿಸಿ ಮೂತ್ರ ವಿಸರ್ಜನೆಗೆಂದು ಹೊರಗೆ ಬಂದಿದ್ದ. ಈ ವೇಳೆ ರಸ್ತೆ ದಾಟಲು ಗೆಳೆಯರೊಟ್ಟಿಗೆ ರಸ್ತೆ ಬದಿ ನಿಂತಿದ್ದ. ಇದೇ ಸಮಯಕ್ಕೆ ಅಥಣಿಯಿಂದ ಕಾರವಾರಕ್ಕೆ ಹೋಗುತ್ತಿದ್ದ ಸರ್ಕಾರಿ ಬಸ್ ಬಾಲಕನ ಮೇಲೆ ಹರಿದಿದೆ. ಇದರಿಂದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಚಾಲಕನ ನಿರ್ಲಕ್ಷ್ಯಕ್ಕೆ ಸ್ಥಳೀಯರಿಂದ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ ಪಕ್ಷವನ್ನು ಅಧಿಕೃತಗೊಳಿಸಿದ ಚುನಾವಣಾ ಆಯೋಗ
ವಿಜಯಪುರ: ಸರ್ಕಾರಿ ಬಸ್ (Government Bus) ಕೆಳಗೆ ಬಿದ್ದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ (Vijayapura)ನಗರದ ಟಿಪ್ಪು ಸುಲ್ತಾನ್ ಸರ್ಕಲ್ನಲ್ಲಿ ನಡೆದಿದೆ.
ವಿಶ್ವನಾಥ ಶಂಕರಯ್ಯ (38) ಚಲಿಸುತ್ತಿದ್ದ ಬಸ್ ಕೆಳಗೆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಬಸ್ ಬರುತ್ತಿದ್ದಂತೆ ಕೈಯಲ್ಲಿದ್ದ ಮೊಬೈಲ್ (Mobile) ಎಸೆದು ಏಕಾಏಕಿ ಬಸ್ ಚಕ್ರದ ಕೆಳಗೆ ಬಿದಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ (CCTV) ಸೆರೆಯಾಗಿದೆ. ಇದನ್ನೂ ಓದಿ: ಪತ್ನಿಯ ಕತ್ತು ಕೊಯ್ದು ಮಾರಣಾಂತಿಕ ಹಲ್ಲೆ – ಕೊಂದೇಬಿಟ್ಟೆನೆಂದು ಪತಿ ಆತ್ಮಹತ್ಯೆ