Tag: ಸರ್ಕಾರಿ ಪ್ರಥಮ ದರ್ಜೆ ಕಾಲೇಜು

  • ಹಿಜಬ್ ವಿವಾದ – ರಾಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ರಜೆ ಘೋಷಣೆ

    ಹಿಜಬ್ ವಿವಾದ – ರಾಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ರಜೆ ಘೋಷಣೆ

    ರಾಮನಗರ: ಹಿಜಬ್ ವಿವಾದದ ಹಿನ್ನೆಲೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ರಜೆ ಘೋಷಿಸಲಾಗಿದೆ.

    ಬುಧವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಬ್ ಧರಿಸಿಯೇ ತರಗತಿಗಳಿಗೆ ಹೋಗಲು ವಿದ್ಯಾರ್ಥಿನಿಯರು ಗಲಾಟೆ ಮಾಡಿದ್ದರು. ಹೀಗಾಗಿ ಮುನ್ನೆಚರಿಕಾ ದೃಷ್ಟಿಯಿಂದ ನಗರದ ಪ್ರಥಮ ದರ್ಜೆ ಕಾಲೇಜಿಗೆ ತಾತ್ಕಾಲಿಕವಾಗಿ ರಜೆ ಘೋಷಿಸಲಾಗಿತ್ತು ಮತ್ತು ಮುಂದಿನ ಆದೇಶದವರೆಗೂ ಆನ್‍ಲೈನ್ ಕ್ಲಾಸ್ ನಡೆಸುವಂತೆ ಜಿಲ್ಲಾಧಿಕಾರಿ ಕೆ.ರಾಕೇಶ್ ಕುಮಾರ್ ಆದೇಶಿಸಿದ್ದರು. ಇದನ್ನೂ ಓದಿ: ತುಪ್ಪ ಸವಿಯುವ ಮುನ್ನ ಇರಲಿ ಎಚ್ಚರ – ನಕಲಿ ತಯಾರಿಕಾ ಘಟಕದ ಮೇಲೆ ಪೊಲೀಸರ ದಾಳಿ

    ಆನ್‍ಲೈನ್ ಕ್ಲಾಸ್ ಬಗ್ಗೆ ಕಾಲೇಜು ಆಡಳಿತ ಮಂಡಳಿ ಯಾವುದೇ ಮಾಹಿತಿ ನೀಡಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದು, ಈಗಾಗಲೇ ನಮಗೆ ಯಾವುದೇ ಪಠ್ಯಗಳು ಪೂರ್ಣಗೊಂಡಿಲ್ಲ. ಕೋವಿಡ್ ಕಾರಣದಿಂದಾಗಿ ಪಾಠಗಳು ಸರಿಯಾಗಿ ನಡೆದಿರಲಿಲ್ಲ. ಈಗ ಮತ್ತೆ ಆನ್‍ಲೈನ್ ಕ್ಲಾಸ್ ಎನ್ನುತ್ತಿದ್ದಾರೆ. ಹೀಗಾದರೆ ನಮ್ಮ ವಿದ್ಯಾಭ್ಯಾಸ ಹೇಗೆಂದು ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಏರ್ ಇಂಡಿಯಾವನ್ನು ವಿಶ್ವ ದರ್ಜೆಯ ವಿಮಾನಯಾನ ಕಂಪನಿಯನ್ನಾಗಿ ನಿರ್ಮಿಸಿ – ಉದ್ಯೋಗಿಗಳ ಜೊತೆ ಚಂದ್ರಶೇಖರ್ ಮಾತು

  • ಸೈಕಲ್ ಸ್ಟ್ಯಾಂಡ್‍ನಲ್ಲಿ ಪದವಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು

    ಸೈಕಲ್ ಸ್ಟ್ಯಾಂಡ್‍ನಲ್ಲಿ ಪದವಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು

    ದಾವಣಗೆರೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪರೀಕ್ಷೆ ಬರೆಯಲು ಕೊಠಡಿಗಳ ಸಂಖ್ಯೆ ಕಡಿಮೆ ಇದ್ದ ಕಾರಣ ಹೊರಗಡೆ ಸೈಕಲ್ ಸ್ಟ್ಯಾಂಡ್‍ನಲ್ಲಿ ಕುಳಿತು ವಿದ್ಯಾರ್ಥಿಗಳು ಪರೀಕ್ಷೆ ಬರೆದಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

    ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಇಂಗ್ಲೀಷ್ ಪರೀಕ್ಷೆ ನಡೆಯುತ್ತಿತ್ತು. ಈ ವೇಳೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಕೊಠಡಿಗಳ ಸಂಖ್ಯೆ ಕಡಿಮೆಯಾಗಿದೆ. ಆದರಿಂದ ಕಾಲೇಜ್ ಆವರಣದಲ್ಲಿದ್ದ ಸೈಕಲ್ ಸ್ಟ್ಯಾಂಡ್ ಹಾಗೂ ಗೋದಾಮ್‍ನಲ್ಲಿ ಕುಳಿತು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕೊಠಡಿಗಳ ಕೊರತೆಯಿಂದ ಕಾಲೇಜ್ ಉಪನ್ಯಾಸಕರು ಬಾಡಿಗೆ ನೀಡಿ ಶಾಮಿಯಾನದ ಡೈನಿಂಗ್ ಟೇಬಲ್ ಬಾಡಿಗೆಗೆ ತರಲಾಗಿತ್ತು.

    ಈ ಹಿಂದೆ ದಾವಣಗೆರೆಯ ಹರಪ್ಪನಹಳ್ಳಿಯಲ್ಲಿ ಶಾಮಿಯಾನ ಹಾಗೂ ಊಟದ ಟೇಬಲ್ ಬಾಡಿಗೆಗೆ ತಂದು ಕಾಲೇಜಿನ ಶಿಕ್ಷಕರು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಸಿದ್ದರು. ಈಗ ಮತ್ತೆ ಅದೇ ಜಿಲ್ಲೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೊಠಡಿಗಳ ಸಂಖ್ಯೆ ಕಡಿಮೆ ಇದ್ದುದರಿಂದ ಮತ್ತೆ ಸೈಕಲ್ ಸ್ಟಾಂಡ್‍ನಲ್ಲಿ ಕೂರಿಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಸಿದ್ದಾರೆ.

    ಸರಿಯಾಗಿ ಕೂರಲು ವ್ಯವಸ್ಥೆಯಿಲ್ಲದಿದ್ದರೂ ಕಷ್ಟದ ನಡುವೆಯೇ ವಿದ್ಯಾಥಿಗಳು ಪರೀಕ್ಷೆ ಬರೆದಿದ್ದಾರೆ. ವಿದ್ಯಾರ್ಥಿಗಳು ಇಷ್ಟೆಲ್ಲ ಕಷ್ಟ ಪಡುತ್ತಿದ್ದರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತ್ತಿದ್ದಾರೆ.

    https://www.youtube.com/watch?v=dePLWc11H_M