Tag: ಸರ್ಕಾರಿ ನೌಕರ

  • ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಲು ಮನವಿ

    ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಲು ಮನವಿ

    ಬೆಂಗಳೂರು: ರಾಜ್ಯದ ಸಾರಿಗೆ ಇಲಾಖೆಗೆ ದೇಶದಲ್ಲಿ ಉತ್ತಮ ಹೆಸರಿದೆ. ಇಂತಹ ಸಾರಿಗೆ ಇಲಾಖೆಯಲ್ಲಿ ನಾಲ್ಕು ನಿಗಮಗಳಿದ್ದು, ನಾಲ್ಕು ನಿಗಮದ ನೌಕರರನ್ನ ಸರ್ಕಾರಿ ನೌಕರರನ್ನಾಗಿ ಮಾಡಿ ಎಂದು ಹಲವು ವರ್ಷಗಳಿಂದ ಸರ್ಕಾರಕ್ಕೆ ಮನವಿ ಮಾಡುತ್ತಲೇ ಬಂದಿದ್ದಾರೆ.

    ಇಂದು ನಾಲ್ಕು ನಿಗಮದ ನೌಕರರು ಬೃಹತ್ ಕಾಲ್ನಡಿಗೆ ಜಾಥಾ ಮಾಡಲು ನಿರ್ಧಾರ ಮಾಡಿದ್ದು ಇಂದು ಮಧ್ಯಾಹ್ನ ಲಾಲ್ ಬಾಗ್ ನ ಕೆಂಗಲ್ ಗೇಟ್ ನಿಂದ ಶಾಂತಿನಗರದ ಕೆಎಸ್‍ಆರ್ ಟಿಸಿ ಮುಖ್ಯ ಕಚೇರಿಯವರಗೆ ಬೃಹತ್ ರ‍್ಯಾಲಿಯನ್ನ ಹಮ್ಮಿಕೊಂಡಿದ್ದಾರೆ. ಈ ಸಾರಿಗೆ ನೌಕರರ ಜಾಥಾದಲ್ಲಿ ಕೊಳದ ಮಠದ ಸ್ವಾಮೀಜಿ ಡಾ. ಶಾಂತವೀರ ಮಹಾಸ್ವಾಮೀಜಿ, ಹಿರಿಯ ಸಾಹಿತಿ ಡಾ. ಹಂ.ಪ ನಾಗರಾಜಯ್ಯ, ಕಮಲ ಹಂಪನಾ, ಕರವೇ ಮಹಿಳಾ ಘಟಕದ ಅಧ್ಯಕ್ಷೆ ಅಶ್ವಿನಿ ಗೌಡ ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ.

    ಕಾಲ್ನಡಿಗೆ ಮೂಲಕ ಬೃಹತ್ ಜಾಥಾ ಮಾಡಿದ ಬಳಿಕ ಕೆಎಸ್ಆರ್‌ಟಿಸಿಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ ಕಳಸದ ಅವರಿಗೆ ಮನವಿ ಪತ್ರ ನೀಡಲಿದ್ದಾರೆ. ಬೃಹತ್ ಜಾಥಾದಿಂದ ಯಾವುದೇ ರೀತಿಯಲ್ಲೂ ಸಾರಿಗೆ ಸಂಚಾರದಲ್ಲಿ ವ್ಯತ್ಯಯ ಆಗುವುದಿಲ್ಲ. ಪಾಳಿ ಮುಗಿದ ನೌಕರರು, ರಜೆಯಲ್ಲಿರೋ ನೌಕರರು ಮಾತ್ರ ಜಾಥಾದಲ್ಲಿ ಭಾಗಿಯಾಗಲ್ಲಿದ್ದಾರೆ. ಇದರಿಂದ ಪ್ರಯಾಣಿಕರಿಗೆ ಯಾವುದೇ ಸಮಸ್ಯೆಗಳು ಆಗೋದಿಲ್ಲ ಎಂಬುದಾಗಿ ತಿಳಿದುಬಂದಿಲ್ಲ.

  • ಶಾಸಕ ಶಿವನಗೌಡ ವರ್ತನೆ ಖಂಡಿಸಿ ಸರ್ಕಾರಿ ನೌಕರರಿಂದ ಪ್ರತಿಭಟನೆ

    ಶಾಸಕ ಶಿವನಗೌಡ ವರ್ತನೆ ಖಂಡಿಸಿ ಸರ್ಕಾರಿ ನೌಕರರಿಂದ ಪ್ರತಿಭಟನೆ

    ರಾಯಚೂರು: ಅವಾಚ್ಯ ಶಬ್ಧಗಳಿಂದ ಸರ್ಕಾರಿ ನೌಕರನಿಗೆ ನಿಂದಿಸಿದ್ದ ಶಾಸಕ ಶಿವನಗೌಡ ನಾಯಕ್ ರ ವರ್ತನೆಯನ್ನು ಖಂಡಿಸಿ ಜಿಲ್ಲಾ ಸರ್ಕಾರಿ ನೌಕರರು ಪತ್ರಿಭಟನೆ ನಡೆಸಿದ್ದಾರೆ.

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಆರ್.ನಾಗರಾಜ್ ಗೆ ದೂರವಾಣಿಯಲ್ಲಿ ಶಿವನಗೌಡ ನಾಯಕ್ ಅವಾಚ್ಯ ಪದಗಳಿಂದ ಬೈದಿದ್ದರು. ಅಂಗನವಾಡಿ ಮೊಟ್ಟೆ ಆಹಾರ ಪದಾರ್ಥಗಳ ಸರಬರಾಜು ವಿಚಾರಕ್ಕೆ ಅವಾಚ್ಯ ಪದಗಳಿಂದ ಬೈದಿದ್ದರು.

    ಈ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರು ಇಂದು ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ್ದರು. ಅಲ್ಲದೇ ಈ ಕೂಡಲೇ ಬಿಜೆಪಿ ಶಾಸಕ ಶಿವನಗೌಡ ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು. ಇದನ್ನೂ ಓದಿ: ಬಿಜೆಪಿ ಶಾಸಕನಿಂದ ಗೂಂಡಾಗಿರಿ- ನಿಂದನೆಯಿಂದ ಬೇಸತ್ತು ಹುದ್ದೆಯೇ ಬೇಡ ಅಂತಿದ್ದಾರೆ ಅಧಿಕಾರಿ!

    ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಶಾಸಕರು ತಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳಲು ಮಾರ್ಗದರ್ಶನ ನೀಡುವಂತೆ ಮನವಿ ಸಲ್ಲಿಸಿದ್ದಾರೆ. ಪ್ರತಿಭಟನೆಯಲ್ಲಿ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ-ಕಹಿ ಪ್ಯಾಕೇಜ್

    ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ-ಕಹಿ ಪ್ಯಾಕೇಜ್

    ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಇನ್ಮೇಲೆ ಕಾರ್ಪೊರೇಟ್ ಸ್ಟೈಲಲ್ಲಿ ಸರ್ಕಾರಿ ಕೆಲಸ ನಡೆಯುವ ಮೂಲಕ ಸಿ-ಕಹಿ ಪ್ಯಾಕೇಜ್ ದೊರೆಯಲಿದೆ.

    ಹೌದು. ಸರ್ಕಾರಿ ನೌಕರರಿಗೆ ಐದು ದಿನ ಕೆಲಸ ಎರಡು ದಿನ ರಜೆ ನೀಡಲು ಸರ್ಕಾರದ ನಿರ್ಧರಿಸಿದೆ. ಎರಡನೇ ಶನಿವಾರದ ಜೊತೆಗೆ ನಾಲ್ಕನೇ ಶನಿವಾರವೂ ರಜೆ ನೀಡಲು 6ನೇ ವೇತನ ಆಯೋಗದ ಅಂತಿಮ ವರದಿ ಶಿಫಾರಸ್ಸಿಗೆ ಸರ್ಕಾರ ಚಿಂತನೆ ನಡೆಸಿದೆ.

    ಸರ್ಕಾರಿ ಕೆಲಸದ ಅವಧಿ ಹೆಚ್ಚಳ ಮಾಡಿ ವೀಕೆಂಡ್‍ಗೆ ರಜೆ ನೀಡುವ ಚಿಂತನೆ ನಡೆಸಲಾಗಿದೆ. ಪ್ರಸ್ತುತ 10:30 ರಿಂದ 5:30 ತನಕ ಇರುವ ಕೆಲಸದ ಅವಧಿ, ಇನ್ಮುಂದೆ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆ ತನಕ ಏರಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಸರ್ಕಾರಿ ನೌಕರರಿಗೆ 5 ದಿನ ಕೆಲಸದ ಪದ್ದತಿ ತನ್ನಿ: ಸಿಎಂಗೆ ಪ್ರಿಯಾಂಕ್ ಖರ್ಗೆ ಪತ್ರ

    15 ಸಾಂದರ್ಭಿಕ ರಜೆಯನ್ನ ಎಂಟಕ್ಕೆ ಇಳಿಕೆ ಮಾಡುವ ಸಾಧ್ಯತೆಗಳಿದೆ. ಹಾಗೆಯೇ ನಾನಾ ಜಯಂತಿಗಳಿಗೆ ರಜೆ ನೀಡುವುದನ್ನ ಕಡಿತಗೊಳಿಸುವಂತೆ ಶಿಫಾರಸ್ಸು ಮಾಡಲಾಗಿದೆ. ವೇತನ ಹೆಚ್ಚಳಕ್ಕೆ ಕಾರ್ಯಕ್ಷಮತೆ ಅಳತೆಗೋಲು, ಕೆಲ ಇಲಾಖೆಗಳ ವಿಲೀನ ಸೇರಿದಂತೆ ನೌಕರರ ಕೆಂಗಣ್ಣಿಗೆ ಗುರಿಯಾಗುವಂಥ ಶಿಫಾರಸ್ಸುಗಳಿವೆ.

    ನಾಳೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಆರನೇ ವೇತನ ಆಯೋಗದ ಅಂತಿಮ ವರದಿಯ ಶಿಫಾರಸ್ಸು ಕುರಿತು ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ ಎಂಬುದಾಗಿ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

    ಪ್ರಸ್ತುತ ಸರ್ಕಾರಿ ನೌಕರರ ಕೆಲಸ ಅವಧಿ:
    * ವರ್ಷದಲ್ಲಿ 98 ದಿನ ರಜೆ
    * ಹಬ್ಬ, ಜಯಂತಿಗಳು ಸೇರಿ 34 ದಿನ ರಜೆ
    * ಎರಡನೇ ಶನಿವಾರದ ರಜೆ 12
    * ಭಾನುವಾರದ ರಜೆ 52
    * ಕೆಲಸದ ಅವಧಿ ಬೆಳಗ್ಗೆ 10.30 ರಿಂದ ಸಂಜೆ 5.30

    ಪ್ರಸ್ತಾಪಿತ ಅಂಶಗಳು:
    * ಎರಡನೇ ಶನಿವಾರದ ಜೊತೆ ನಾಲ್ಕನೇ ಶನಿವಾರವೂ ರಜೆ
    * ವಾರದಲ್ಲಿ 5 ದಿನ ಕೆಲಸ, 2 ದಿನ ರಜೆ
    * ಕೆಲಸದ ಅವಧಿ 9 ಗಂಟೆಯಿಂದ ಸಂಜೆ 6 ಗಂಟೆಗೆ ಹೆಚ್ಚಳ
    * 15 ಸಾಂದರ್ಭಿಕ ರಜೆ 8ಕ್ಕೆ ಇಳಿಕೆ
    * ಜಯಂತಿಗಳ ಸರ್ಕಾರಿ ರಜೆ ರದ್ದು
    * ನಿವೃತ್ತಿ ಬಳಿಕದ ಸೌಲಭ್ಯ ಪಡೆಯಲು ಸೇವಾವಧಿ 33 ವರ್ಷಗಳಿಂದ 30ಕ್ಕೆ ಇಳಿಕೆ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಂಡ್ಯದಲ್ಲಿ ಸರ್ಕಾರಿ ನೌಕರನ ಮೇಲೆ ಪೊಲೀಸ್ ಪೇದೆಯಿಂದ ಗಂಭೀರ ಹಲ್ಲೆ

    ಮಂಡ್ಯದಲ್ಲಿ ಸರ್ಕಾರಿ ನೌಕರನ ಮೇಲೆ ಪೊಲೀಸ್ ಪೇದೆಯಿಂದ ಗಂಭೀರ ಹಲ್ಲೆ

    ಮಂಡ್ಯ: ಕ್ಷುಲ್ಲಕ ವಿಚಾರಕ್ಕೆ ಪೊಲೀಸ್ ಪೇದೆಯೊಬ್ಬ ಸರ್ಕಾರಿ ಪಶು ಆಸ್ಪತ್ರೆಯ ಡಿ ಗ್ರೂಪ್ ನೌಕರನ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ ಘಟನೆ ನಗರದ ಹೊಸಹಳ್ಳಿ ಬಡಾವಣೆಯ ಪಶು ಆಸ್ಪತ್ರೆಯಲ್ಲಿ ನಡೆದಿದೆ.

    ಬಸವರಾಜು (58) ಹಲ್ಲೆಗೊಳಗಾದ ಪಶು ಆಸ್ಪತ್ರೆಯ ಡಿ-ಗ್ರೂಪ್ ನೌಕರ. ಚಿದು ಹಲ್ಲೆ ನಡೆಸಿದ ಪೊಲೀಸ್ ಪೇದೆಯಾಗಿದ್ದಾರೆ. ಇಬ್ಬರೂ ವಿನಾಯಕ ಬಡಾವಣೆಯ ಅಕ್ಕಪಕ್ಕದ ಮನೆಯವರಾಗಿದ್ದು, ಸಣ್ಣ-ಪುಟ್ಟ ವಿಚಾರಕ್ಕೆ ಮೊದಲಿನಿಂದಲೂ ಗಲಾಟೆ ನಡೆಯುತ್ತಿತ್ತು. ಇಂದು ಸಹ ಕ್ಷುಲ್ಲಕ ವಿಚಾರಕ್ಕೆ ವಾಗ್ವಾದ ನಡೆದಿದೆ. ಇದರಿಂದ ಸಿಟ್ಟಿಗೆದ್ದ ಪೇದೆ, ಬಸವರಾಜು ಕೆಲಸ ಮಾಡುವ ಆಸ್ಪತ್ರೆಗೆ ನುಗ್ಗಿ ಮಾರಾಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.

    ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಬಸವರಾಜು ಜಿಲ್ಲೆಯ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪಶ್ಚಿಮ ಠಾಣಾ ಪೊಲೀಸರು ಪೇದೆಯನ್ನು ವಶಕ್ಕೆ ಪಡೆದುಕೊಂಡು, ವಿಚಾರಣೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv