Tag: ಸರ್ಕಾರಿ ನೌಕರರ ಸಂಘ

  • 7ನೇ ವೇತನ ಆಯೋಗದ ವರದಿ ಸ್ವೀಕಾರ – ಸರ್ಕಾರಿ ನೌಕರರ ಸಂಘ ಸ್ವಾಗತ

    7ನೇ ವೇತನ ಆಯೋಗದ ವರದಿ ಸ್ವೀಕಾರ – ಸರ್ಕಾರಿ ನೌಕರರ ಸಂಘ ಸ್ವಾಗತ

    ಬೆಂಗಳೂರು: ರಾಜ್ಯ ಏಳನೇ ಆಯೋಗದ (7th Pay Commission) ವರದಿ ಸ್ವೀಕಾರ ಆಗಿದೆ. ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಅಂತಾ ಕಾದು ನೋಡಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ (Shadakshari C S) ಹೇಳಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಈ ಸರ್ಕಾರದಿಂದ ಒಳ್ಳೆಯ ಸೂಚನೆ ಸಿಗುತ್ತದೆ ಎನ್ನುವ ಭರವಸೆ ಇದೆ.ನಾವು ಕೂಡ ಕಾತುರದಿಂದ ಕಾಯುತ್ತಿದ್ದೇವೆ. ಈಗ 27.5% ವೇತನ ಹೆಚ್ಚಳಕ್ಕೆ ಆಯೋಗ ಶಿಫಾರಸ್ಸು ಮಾಡಿದೆ ಎಂದರು. ಇದನ್ನೂ ಓದಿ: Lok Sabha Election 2024: ಕರ್ನಾಟಕದಲ್ಲಿ ಏ.26, ಮೇ 7ಕ್ಕೆ ಮತದಾನ

    ಅಲ್ಲದೆ ಈ ಹಿಂದೆ ಸಿದ್ದರಾಮಯ್ಯ (Siddaramaiah) ಸರ್ಕಾರ ಇದ್ದಾಗ 30% ವೇತನ ಹೆಚ್ಚಳ ಮಾಡಿತ್ತು. ಈಗ ವರದಿ ಸ್ವೀಕಾರ ಮಾಡಿದ್ದಕ್ಕೆ ಸಂತೋಷ ಇದೆ ಎಂದು ಹೇಳಿದರು.  ಇದನ್ನೂ ಓದಿ: Lok Sabha Election 2024 – 7 ಹಂತದಲ್ಲಿ ಚುನಾವಣೆ, ಜೂನ್‌ 4 ರಂದು ಮತ ಎಣಿಕೆ

  • ಮಾ.1 ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸರ್ಕಾರಿ ನೌಕರರ ಕರೆ

    ಮಾ.1 ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸರ್ಕಾರಿ ನೌಕರರ ಕರೆ

    ಬೆಂಗಳೂರು: 7ನೇ ವೇತನ ಆಯೋಗ (7th Pay Commission) ಜಾರಿ ವಿಚಾರವಾಗಿ ಸರ್ಕಾರದ ನಡೆಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ (KSGEA) ತೀವ್ರ ಅಸಮಾಧಾನ ಹೊರಹಾಕಿದೆ. ಸಂಘದ ಬೇಡಿಕೆ ಈಡೇರಿಸದಿದ್ದರೆ ಮಾ.1 ರಿಂದ ರಾಜ್ಯಾದ್ಯಂತ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಳ್ಳುವುದಾಗಿ ಕರೆ ನೀಡಿದೆ.

    ರಾಜ್ಯ ಬಜೆಟ್‌ ಮಂಡನೆ ವೇಳೆ ಏಳನೇ ವೇತನ ಆಯೋಗ ಜಾರಿ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಪ್ರಸ್ತಾಪಿಸದಿರುವುದಕ್ಕೆ ನೌಕರರ ಸಂಘ ಸರ್ಕಾರದ ವಿರುದ್ಧ ಕಿಡಿಕಾರಿದೆ. ಈ ಹಿನ್ನೆಲೆಯಲ್ಲಿ ಸಂಘವು ಮಂಗಳವಾರ ತುರ್ತು ಕಾರ್ಯಕಾರಿಣಿ ಸಭೆ ಕರೆದು ಕೆಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದೆ. ಇದನ್ನೂ ಓದಿ: ಸಿದ್ದರಾಮಯ್ಯ ನಮ್ಮ ನಾಯಕ, ರಾಜ್ಯಕ್ಕೆ ಅನ್ನದಾತ – ಡಿಕೆಶಿ ಗುಣಗಾನ

    ಸಂಘದ ಬೇಡಿಕೆಗಳೇನು?
    ಏಳನೇ ವೇತನ ಆಯೋಗದ ಮಧ್ಯಂತರ ವರದಿ ಪಡೆದು 40% ಫಿಟ್ಮೆಂಟ್‌ನ್ನು ದಿನಾಂಕ 1.07.2022 ರಿಂದ ಜಾರಿಗೆ ತರುವುದು, ರಾಜಸ್ತಾನ, ಛತ್ತೀಸಗಢ, ಜಾರ್ಖಂಡ್, ಪಂಜಾಬ್ ಹಾಗೂ ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಎನ್‌ಪಿಎಸ್ ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಜಾರಿಗೆ ತಂದಿರುವಂತೆಯೇ ಕರ್ನಾಟಕ ರಾಜ್ಯದಲ್ಲಿಯೂ ಮಾಡಬೇಕು ಎಂದು ಬೇಡಿಕೆಯಿಟ್ಟಿದೆ.

    ಈ ಎರಡು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಏಳು ದಿನಗಳ ಕಾಲಾವಕಾಶ ನೀಡಲಾಗುವುದು. ಬೇಡಿಕೆ ಈಡೇರಿಸದಿದ್ದರೆ ಮಾ.1 ರಿಂದ ರಾಜ್ಯದ ಎಲ್ಲಾ ಸರ್ಕಾರಿ ನೌಕರರು, ನಿಗಮ ಮತ್ತು ಮಂಡಳಿಗಳು ಅನುದಾನಿತ ಸಂಸ್ಥೆಯ ಎಲ್ಲ ನೌಕರರು ಅನಿರ್ದಿಷ್ಟಾವಧಿ ವರೆಗೆ ಕರ್ತವ್ಯಕ್ಕೆ ಗೈರು ಹಾಜರಾಗುವುದರ ಮೂಲಕ ಮುಷ್ಕರ ಮಾಡಲಾಗುವುದು ಎಂದು ಸಂಘವು ತಿಳಿಸಿದೆ. ಇದನ್ನೂ ಓದಿ: ರಾಜ್ಯಾದ್ಯಂತ ಬಿಜೆಪಿ ಡಬಲ್ ಎಂಜಿನ್ ಸರ್ಕಾರಗಳ ಸಾಧನೆ ಸಾರಲಿವೆ `ಪ್ರಗತಿ ರಥ’ – ಎಸ್.ವಿ. ರಾಘವೇಂದ್ರ

    ಮಾ.1 ರಿಂದ ಅನಿರ್ಧಿಷ್ಟಾವಧಿ ವರೆಗೆ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮುಂದಾಗಿದೆ. ಇಂದು ಜರುಗಿದ ಕಾರ್ಯಕಾರಿಣಿ ಸಭೆಯಲ್ಲಿ ಮೇಲಿನ ತೀರ್ಮಾನ ಕೈಗೊಳ್ಳಲಾಗಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಂಡ್ಯದ ಸರ್ಕಾರಿ ನೌಕರರ ಸಂಘದಲ್ಲಿ ಭಾರೀ ಗೋಲ್‍ಮಾಲ್

    ಮಂಡ್ಯದ ಸರ್ಕಾರಿ ನೌಕರರ ಸಂಘದಲ್ಲಿ ಭಾರೀ ಗೋಲ್‍ಮಾಲ್

    – ನಿವೇಶನ ಹಂಚಿಕೆಯಲ್ಲಿ 11ಕೋಟಿ 36 ಲಕ್ಷ ವಂಚನೆ
    – 1 ಕೋಟಿ 22 ಲಕ್ಷ ರಿಕವರಿ, 9 ಕೋಟಿ ಲಾಕ್

    ಮಂಡ್ಯ: ಬಹುದೊಡ್ಡ ಅವ್ಯವಹಾರ ಪ್ರಕರಣವೊಂದನ್ನ ಮಂಡ್ಯ ಪೊಲೀಸರು ಬಯಲಿಗೆಳೆದಿದ್ದಾರೆ. ನಿವೇಶನ ಹಂಚಿಕೆ ವಿಚಾರದಲ್ಲಿ ನಡೆದಿದ್ದ ಗೋಲ್‍ಮಾಲ್ ಪ್ರಕರಣವನ್ನ ಖಾಕಿ ಪಡೆ ಭೇದಿಸಿದ್ದು. ನೌಕರರ ಸಂಘದ ಸದಸ್ಯರಿಗೆ ವಂಚಿಸಲಾಗಿದ್ದ ಕೋಟ್ಯಾಂತರ ರೂಪಾಯಿ ಹಣ ಮರಳಿ ಪಡೆದಿದ್ದಾರೆ.

    ಮಂಡ್ಯದ ಸರ್ಕಾರಿ ನೌಕರರ ಸಂಘ ಸದಸ್ಯರಿಗೆ ನಿವೇಶನ ನೀಡುವ ಉದ್ದೇಶದಿಂದ 2004ರಲ್ಲಿ ಗೃಹ ನಿರ್ಮಾಣ ಸಮಿತಿ ರಚಿಸಿತ್ತು. ಆ ವೇಳೆ ಸಂಘದ ಅಧ್ಯಕ್ಷರಾಗಿದ್ದ ಟಿ.ಎಚ್.ರಾಮಕೃಷ್ಣ ಗೃಹ ನಿರ್ಮಾಣ ಸಮಿತಿಗೆ ಅಧ್ಯಕ್ಷರಾಗಿದ್ರು. ಪ್ರತಿಯೊಬ್ಬ ಸದಸ್ಯರಿಂದಲೂ ಲಕ್ಷಾಂತರ ಹಣ ಕಟ್ಟಿಸಿಕೊಂಡು, ಕೋಣನಹಳ್ಳಿ ಬಳಿ ಜಮೀನು ಖರೀದಿಸಲಾಗಿತ್ತು.

    ಅಷ್ಟರಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ನಿರ್ಮಾಣಕ್ಕಾಗಿ ಲೇಔಟ್ ಉದ್ದೇಶಿದ ಜಾಗದಲ್ಲಿ 1,02,000 ಚದುರ ಅಡಿ ಭೂಮಿಯನ್ನು ಸರ್ಕಾರ ಸ್ವಾಧೀನ ಪಡಿಸಿಕೊಂಡಿತ್ತು. ಇದರಿಂದ ನೌಕರರಿಗೆ ನಿವೇಶನ ಹಂಚುವ ಕಾರ್ಯಕ್ಕೆ ಗ್ರಹಣ ಹಿಡಿದಿತ್ತು. ಆದರೆ ಸರ್ಕಾರ ಸ್ವಾಧೀನ ಪಡಿಸಿಕೊಂಡ ಜಾಗಕ್ಕೆ 11,36,42.375 ರೂ. ಪರಿಹಾರ ಘೋಷಿಸಿತ್ತು.

    ಈ ನಡುವೆ ಸರ್ಕಾರಿ ನೌಕರರ ಸಂಘಕ್ಕೆ ಮತ್ತೊಬ್ಬರು ಅಧ್ಯಕ್ಷರಾಗಿ ಆಯ್ಕೆಯಾದ್ರೂ ಗೃಹ ನಿರ್ಮಾಣ ಸಮಿತಿಯ ಲೆಕ್ಕಪತ್ರ, ದಾಖಲೆಗಳನ್ನು ಟಿ.ಎಚ್.ರಾಮಕೃಷ್ಣ ಹಸ್ತಾಂತರಿಸಿರಲಿಲ್ಲ. ಎಲ್ಲಾ ದಾಖಲಾತಿಗಳನ್ನು ಬಳಸಿಕೊಂಡು ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಹೊಸ ಖಾತೆ ತೆರೆದು 11,36,42.375 ರೂ. ಪರಿಹಾರದ ಹಣವನ್ನು ಜಮೆ ಮಾಡಿಸಿಕೊಂಡಿದ್ದಾರೆ. ಬಳಿಕ ವೈಯಕ್ತಿಕ ಖಾತೆಗೆ 1 ಕೋಟಿಗೂ ಹೆಚ್ಚು ಹಣವನ್ನು ವರ್ಗಾವಣೆ ಮಾಡಿಕೊಂಡು ಫಲಾನುಭವಿಗೆ ತಲುಪಬೇಕಿದ್ದ ಹಣವನ್ನು ಗೋಲ್ ಮಾಲ್ ಮಾಡಿದ್ದಾರೆ.

    ಈ ಬಗ್ಗೆ ಸರ್ಕಾರಿ ನೌಕರರ ಸಂಘ ನೀಡಿದ್ದ ದೂರಿನ ಮೇರೆಗೆ ತನಿಖೆ ಆರಂಭಿಸಿದ ಪೊಲೀಸರು ಪ್ರಕರಣದಲ್ಲಿ 1ಕೋಟಿ 22 ಲಕ್ಷ ವಶಪಡಿಸಿಕೊಂಡು ಬ್ಯಾಂಕ್ ಖಾತೆಯಲ್ಲಿದ್ದ 9 ಕೋಟಿ ಹಣವನ್ನ ತಡೆಹಿಡಿಯುವಂತೆ ಮಾಡಿದ್ದಾರೆ.

    ಇನ್ನು 16 ವರ್ಷದ ಹಿಂದೆಯೇ ಹಣ ಕಟ್ಟಿ ಇತ್ತ ಸೈಟೂ ಇಲ್ಲ, ಅಂತ ಹಣವೂ ಇಲ್ಲ ಅಂತಿದ್ದ ಸದಸ್ಯರು ಪೊಲೀಸರ ಕಾರ್ಯ ಶ್ಲಾಘಿಸಿದ್ದಾರೆ. ಸಂಘದ ಹಾಲಿ ಅಧ್ಯಕ್ಷ ಶಂಭೂಗೌಡ ಇನ್ನು ಹೆಚ್ಚಿನ ಹಣ ರಿಕವರಿ ಆಗಬೇಕು ಎಂದಿದ್ದು ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಲಿ ಎಂದು ಆಗ್ರಹಿಸಿದ್ದಾರೆ.

    ಮಂಡ್ಯ ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದಾಗಿ ಬಹುದೊಡ್ಡ ಅವ್ಯವಹಾರ ಪ್ರಕರಣ ಬಯಲಾಗಿದ್ದು. ಸದ್ಯ ಇನ್ನು ತನಿಖೆ ಹಂತದಲ್ಲಿರುವ ಈ ಕೇಸ್‍ನಲ್ಲಿ ಮತ್ತಷ್ಟು ವಿಚಾರ ಬಹಿರಂಗವಾಗಬೇಕಿದೆ.

  • ಸರ್ಕಾರಿ ನೌಕರರ ಸಂಘದ ಕೋಶಾಧ್ಯಕ್ಷರಾಗಿ ಸಿಎಸ್ ಷಡಾಕ್ಷರಿ ಆಯ್ಕೆ

    ಸರ್ಕಾರಿ ನೌಕರರ ಸಂಘದ ಕೋಶಾಧ್ಯಕ್ಷರಾಗಿ ಸಿಎಸ್ ಷಡಾಕ್ಷರಿ ಆಯ್ಕೆ

    ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ಇದರ ಕೇಂದ್ರ ಸಂಘದ ಕೋಶಾಧ್ಯಕ್ಷರಾಗಿ ಸಿಎಸ್ ಷಡಾಕ್ಷರಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

    ಸಿಎಸ್ ಷಡಾಕ್ಷರಿ ಅವರು 2013-2018 ರ ಉಳಿದ ಅವಧಿಗೆ ಕೋಶಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

    ಪ್ರಸ್ತುತ ಷಡಾಕ್ಷರಿ ಅವರು ಶಿವಮೊಗ್ಗ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿದ್ದಾರೆ.