Tag: ಸರ್ಕಾರಿ ಕಾಲೇಜು

  • ಅತಿಥಿ ಉಪನ್ಯಾಸಕರಿಗೆ 5 ಲಕ್ಷ ಇಡುಗಂಟು ಸೌಲಭ್ಯ – ಸರ್ಕಾರದಿಂದ ಆದೇಶ

    ಅತಿಥಿ ಉಪನ್ಯಾಸಕರಿಗೆ 5 ಲಕ್ಷ ಇಡುಗಂಟು ಸೌಲಭ್ಯ – ಸರ್ಕಾರದಿಂದ ಆದೇಶ

    ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ (Guest Lecturers) ಸೇವೆ ಸಲ್ಲಿಸಿ 60 ವರ್ಷ ಪೂರೈಸಿದ ಮತ್ತು ಮರಣ ಹೊಂದಿದ ಅತಿಥಿ ಉಪನ್ಯಾಸಕರಿಗೆ 5 ಲಕ್ಷ ಇಡುಗಂಟು ಸೌಲಭ್ಯ (Idugantu Facility) ನೀಡುವುದಾಗಿ ಸರ್ಕಾರ ಆದೇಶಿಸಿದೆ.

    ಇಡುಗಂಟು ಯೋಜನೆಯು 2024ರ ಜನವರಿ 1 ರಿಂದಲೇ ಜಾರಿಗೆ ಬರಲಿದ್ದು, ಕನಿಷ್ಠ 1 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಅಥವಾ ಮರಣ ಹೊಂದಿರುವ ಎಲ್ಲಾ ಅತಿಥಿ ಉಪನ್ಯಾಸಕರಿಗೂ ಯೋಜನೆ ಅನ್ವಯವಾಗಲಿದೆ. ಇದನ್ನೂ ಓದಿ: ತಪ್ಪು ಮಾಡಿದ್ಮೇಲೆ ಕ್ಷಮೆ ಕೇಳೋದ್ರಲ್ಲಿ ತಪ್ಪೇನಿದೆ- ಕಮಲ್ ಹಾಸನ್ ಹೇಳಿಕೆಗೆ ರಚಿತಾ ರಾಮ್ ಕಿಡಿ

    ಯೋಜನೆ ಅನುಷ್ಠಾನಕ್ಕೆ ಬಂದ ಹಿಂದಿನ 5 ವರ್ಷಗಳಲ್ಲಿ ಕನಿಷ್ಠ 1 ವರ್ಷ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, 60 ವರ್ಷ ಪೂರ್ಣಗೊಳಿಸಿರುವ ಅತಿಥಿ ಉಪನ್ಯಾಸಕರೂ ಈ ಯೋಜನೆಗೆ ಒಳಪಡಲಿದ್ದಾರೆ. ಈ ಯೋಜನೆಗೆ ಒಟ್ಟಾರೆ 44.15 ಕೋಟಿ ರೂ. ಹಣವನ್ನು ಸರ್ಕಾರ ಕಾಯ್ದಿರಿಸಿ ಆದೇಶ ಹೊರಡಿಸಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಗರ್ಭಿಣಿಯರೂ ಸೇರಿ 4 ಮಂದಿಗೆ ಕೊರೊನಾ

    ಇದೀಗ ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿನ ಅತಿಥಿ ಉಪನ್ಯಾಸಕರಿಗೆ ಇಡುಗಂಟು ಸೌಲಭ್ಯ ಅನುಷ್ಠಾನಕ್ಕೆ ಉನ್ನತ ಶಿಕ್ಷಣ ಇಲಾಖೆಯು ಮಾರ್ಗಸೂಚಿ ಪ್ರಕಟಿಸಿದೆ.

  • Chitraduraga| 240 ನರ್ಸಿಂಗ್‌ ವಿದ್ಯಾರ್ಥಿಗಳಿಗೆ ಒಂದೇ ಕೊಠಡಿಯಲ್ಲಿ ಪಾಠ!

    Chitraduraga| 240 ನರ್ಸಿಂಗ್‌ ವಿದ್ಯಾರ್ಥಿಗಳಿಗೆ ಒಂದೇ ಕೊಠಡಿಯಲ್ಲಿ ಪಾಠ!

    – ಜಿಲ್ಲಾಸ್ಪತ್ರೆಯ ಕಾಲೇಜಿನ ಅವ್ಯವಸ್ಥೆ

    ಚಿತ್ರದುರ್ಗ: ಸರ್ಕಾರಿ ಕಾಲೇಜಲ್ಲಿ ಸೀಟು ಸಿಕ್ಕರೆ ಎಲ್ಲಾ ಉಚಿತ ಅನ್ನೋ ಮಾತಿದೆ. ಆದರೆ ಚಿತ್ರದುರ್ಗದ ಸರ್ಕಾರಿ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಪಾಠ ಕೇಳಲು ಕಟ್ಟಡವೇ ಇಲ್ಲ. ಹೀಗಾಗಿ ಇಷ್ಟಪಟ್ಟು ನರ್ಸಿಂಗ್ ಮಾಡಲು ಬಂದ ವಿದ್ಯಾರ್ಥಿಗಳು ಕಿಷ್ಕಿಂದೆಯಂತಹ ಕೊಠಡಿಯಲ್ಲಿ ಹರಸಾಹಸಪಟ್ಟು ಓದೋದೇ ದೊಡ್ಡ ಸವಾಲಾಗಿದೆ.

    ಚಿತ್ರದುರ್ಗ (Chitradurga) ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಬಿಎಸ್ಸಿ ನರ್ಸಿಂಗ್ ಕಾಲೇಜಲ್ಲಿ ಕಳೆದ ಮೂರು ವರ್ಷಗಳಿಂದಲೂ ಸೂಕ್ತ ಮೂಲಭೂತ ಸೌಕರ್ಯಗಳಿಲ್ಲ. ಸುಸಜ್ಜಿತ ಕಟ್ಟಡ, ಕೊಠಡಿ, ಲ್ಯಾಬ್ ವ್ಯವಸ್ಥೆಯೂ ಇಲ್ಲ. ಬಿಎಸ್‌ಸಿ ನರ್ಸಿಂಗ್ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಒಂದೇ ಕಟ್ಟಡದಲ್ಲಿ ನಡೆಯುತ್ತಿದೆ. ಸುಮಾರು 240 ವಿದ್ಯಾರ್ಥಿಗಳು ಒಂದೇ ಕೊಠಡಿಯೊಳಗೆ ಕುಳಿತು ಪಾಠ ಕೇಳುತ್ತಿದ್ದಾರೆ. ಇದನ್ನೂ ಓದಿ: ಒಂದೇ ದಿನ ಮೂವರು ಗರ್ಭಿಣಿಯರು ಸಾವು – ಇನ್ನೂ ಬಳ್ಳಾರಿಗೆ ಮುಖ ಮಾಡದ ಜಮೀರ್‌

    ಈ ಬಗ್ಗೆ ಕ್ಷೇತ್ರದ ಶಾಸಕ ವೀರೇಂದ್ರ, ಡಿಸಿ ವೆಂಕಟೇಶ್ ಹಾಗು ವೈದ್ಯಕೀಯ ಸಚಿವ ಶರಣಪ್ರಕಾಶ್ ಪಾಟೀಲ್ (Sharan Prakash Patil) ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಲಿಲ್ಲ. ಇದರಿಂದ ಮನನೊಂದ ವಿದ್ಯಾರ್ಥಿಗಳು ಜಿಲ್ಲಾಸ್ಪತ್ರೆ ಸರ್ಜನ್‌ಗೆ ಕೇಳಿದರೆ ಎಲ್ಲೋ ಒಂದು ಮೂಲೆಯಲ್ಲಿ ಸುಮ್ಮನೆ ಪಾಠ ಕೇಳಿ ಅಂತಾರೆ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.

    ಈ ಕಾಲೇಜಿನಲ್ಲಿ ಓದುವ ವಿದ್ಯಾರ್ಥಿಗಳನ್ನು ಕೇವಲ ಉಚಿತ ಸೇವೆಗಾಗಿ ಬಳಸಿಕೊಳ್ಳುವ ಆರೋಗ್ಯ ಇಲಾಖೆ, ಇವರ ಸಂಕಷ್ಟ ಬಗೆಹರಿಸುತ್ತಿಲ್ಲ. ಈ ಬಗ್ಗೆ ಜಿಲ್ಲಾಸರ್ಜನ್ ಡಾ.ರವಿಂದ್ರ ಅವರನ್ನು ಕೇಳಿದರೆ ಹೊಸ ಮೆಡಿಕಲ್ ಕಾಲೇಜು ಕಾಮಗಾರಿ ಭರದಿಂದ ಸಾಗಿದೆ. ಹೀಗಾಗಿ ತಾತ್ಕಾಲಿಕವಾಗಿ ಆಸ್ಪತ್ರೆಯಲ್ಲಿ ಕಾಲೇಜು ನಡೆಸಲಾಗುತ್ತಿದೆ. ಆದರೆ ವಿದ್ಯಾರ್ಥಿಗಳು ಇದನ್ನು ಸಹಿಸಿಕೊಂಡು ಓದಲಾಗದೇ ಸಮಸ್ಯೆ ಸೃಷ್ಟಿಸಿದ್ದಾರೆಂದು ಕಾರಣ ಹೇಳುತ್ತಾರೆ. ಇದನ್ನೂ ಓದಿ: ವಿದೇಶಿ ಸ್ವತ್ತು, ಆದಾಯ ಘೋಷಿಸದಿದ್ರೆ 10 ಲಕ್ಷ ರೂ. ದಂಡ – ಕೊನೇ ದಿನ ಯಾವಾಗ?

  • ಸರ್ಕಾರಿ ಕಾಲೇಜಿಗೆ ಉಚಿತವಾಗಿ 30 ಕಂಪ್ಯೂಟರ್ ವಿತರಿಸಿದ ರೋಟರಿ ಕ್ಲಬ್

    ಸರ್ಕಾರಿ ಕಾಲೇಜಿಗೆ ಉಚಿತವಾಗಿ 30 ಕಂಪ್ಯೂಟರ್ ವಿತರಿಸಿದ ರೋಟರಿ ಕ್ಲಬ್

    ಬೀದರ್: ಕಾಂಗ್ನಿಜೆಂಟ್ ತಂತ್ರಜ್ಞಾನವು ಉಚಿತವಾಗಿ ನೀಡಿರುವ 30 ಕಂಪ್ಯೂಟರ್‌ಗಳನ್ನು ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯು ಚಿಟಗುಪ್ಪ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ವಿತರಿಸಿತು.

    ಕಾಲೇಜಿನ ಗಣಿತಶಾಸ್ತ್ರ ಪ್ರಯೋಗಾಲಯ ಹಾಗೂ ಗಣಕ ವಿಜ್ಞಾನ ಪ್ರಯೋಗಾಲಯದಲ್ಲಿ ಅಳವಡಿಸಿದ ಕಂಪ್ಯೂಟರ್‍ಗಳ ಸೇವೆಗೆ ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3160 ಗರ್ವನರ್ ತಿರುಪತಿ ನಾಯ್ಡು ಚಾಲನೆ ನೀಡಿದರು. ಕಾಂಗ್ನಿಜೆಂಟ್ ತಂತ್ರಜ್ಞಾನ ಸಂಸ್ಥೆಯು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ವಿತರಿಸಲು ರಾಜ್ಯ ಸರ್ಕಾರಕ್ಕೆ ಉಚಿತವಾಗಿ ಕಂಪ್ಯೂಟರ್‌ಗಳನ್ನು ಕೊಟ್ಟಿದೆ. ಸರ್ಕಾರ ಕಂಪ್ಯೂಟರ್‌ಗಳ ಸಾಗಣೆ ಹಾಗೂ ಅನುಷ್ಠಾನದ ಹೊಣೆಯನ್ನು ರೋಟರಿ ಸಂಸ್ಥೆಗೆ ವಹಿಸಿದೆ ಎಂದು ಅವರು ಹೇಳಿದರು. ಇದನ್ನೂ ಓದಿ: ಎಸಿಬಿ ಅಧಿಕಾರಿಗಳ ಭರ್ಜರಿ ರಣಬೇಟೆ – 503 ಅಧಿಕಾರಿಗಳು 68 ಕಡೆ ದಾಳಿ..! 

    ಉಚಿತ ಕಂಪ್ಯೂಟರ್ ವಿತರಣೆಯಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ರೋಟರಿ ಸಂಸ್ಥೆಯು ಸಾಮಾಜಿಕ ಚಟುವಟಿಕೆಗಳಲ್ಲಿ ನಿರಂತರ ತೊಡಗಿಸಿಕೊಂಡಿದೆ. ಶಿಕ್ಷಣ ಕ್ಷೇತ್ರದ ಪ್ರಗತಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದೆ. ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಜಿಲ್ಲೆಯಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ ಎಂದರು.

    ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3160 ಸಹಾಯಕ ಗವರ್ನರ್ ಶಿವಕುಮಾರ್ ಯಲಾಲ್ ಮಾತನಾಡಿ, ಬೀದರ್‌ನಲ್ಲಿ ಇನ್ನಷ್ಟು ರೋಟರಿ ಕ್ಲಬ್‍ಗಳನ್ನು ರಚಿಸುವ ಉದ್ದೇಶ ಇದೆ. ಹೊಸ ತಾಲೂಕು ಚಿಟಗುಪ್ಪದಲ್ಲೂ ಕ್ಲಬ್ ಆರಂಭಿಸುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ತಾನು ನೆಟ್ಟ ಗಿಡದಲ್ಲಿ ಹಣ್ಣು ಕೀಳಲು ಮುಂದಾದ ಅತ್ತೆಯತ್ತ ಚಾಕು ಬಿಸಿದ ಸೋಸೆ

  • ಸರ್ಕಾರಿ ಪ್ರಾಧ್ಯಾಪಕರಿಗೆ ಗುಡ್ ನ್ಯೂಸ್

    ಸರ್ಕಾರಿ ಪ್ರಾಧ್ಯಾಪಕರಿಗೆ ಗುಡ್ ನ್ಯೂಸ್

    ಬೆಂಗಳೂರು: ರಾಜ್ಯದ ವಿಶ್ವ ವಿದ್ಯಾಲಯ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಯುಜಿಸಿ ವೇತನ ಪಡೆಯುತ್ತಿರುವ ಸರ್ಕಾರಿ ಪ್ರಾಧ್ಯಾಪಕರುಗಳಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ರಾಜ್ಯ ಸರ್ಕಾರಿ ನೌಕರರಿಗೆ ನೀಡುವ ಮಾನದಂಡದಡಿ ಪಿಂಚಣಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.

    ವಿಧಾನಸಭೆಯಲ್ಲಿ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ವಿಧೇಯಕ ಮಂಡಿಸಿದ್ದಾರೆ. ವಿವಿಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಾಧ್ಯಾಪಕರು ಯುಜಿಸಿ ವೇತನ ಪಡೆಯುತ್ತಿದ್ದು, ಅದೇ ಮಾದರಿಯಲ್ಲಿ ಪಿಂಚಣಿಯನ್ನೂ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಪಿಂಚಣಿ ಸೌಲಭ್ಯ ಕಲ್ಪಿಸಲು ಸರ್ಕಾರ ವಿಧೇಯಕ ಮಂಡಿಸಿದೆ.

    ಅಂದಹಾಗೆ ಪಿಂಚಣಿ ವ್ಯವಸ್ಥೆಯು ರಾಜ್ಯ ಸರ್ಕಾರದ ವ್ಯಾಪ್ತಿಗೆ ಒಳಪಡುವುದರಿಂದ ರಾಜ್ಯ ಸರ್ಕಾರ ತನ್ನ ನೌಕರರಿಗೆ ನೀಡುವ ಪಿಂಚಣಿ ಮಾದರಿಯಲ್ಲಿಯೇ ಯುಜಿಸಿ ವೇತನ ಪಡೆಯುತ್ತಿರುವ ಪ್ರಾಧ್ಯಾಪಕರಿಗೂ ಅನ್ವಯವಾಗುವಂತೆ ಸೂಕ್ತ ಕಾನೂನು ರೂಪಿಸಲು ವಿಧೇಯಕ ಮಂಡಿಸಿದೆ. ಇದೇ ಬಜೆಟ್ ಅಧಿವೇಶನದಲ್ಲಿ ವಿಧೇಯಕ ಬಹುತೇಕ ಅಂಗೀಕಾರವಾಗುವ ಸಾಧ್ಯತೆ ಇದೆ. ವಿಧೇಯಕ ಅಂಗೀಕಾರವಾದ್ರೆ ಯುಜಿಸಿ ವೇತನ ಪಡೆಯುತ್ತಿರುವ ಪ್ರಾಧ್ಯಾಪಕರು ಪಿಂಚಣಿ ಪಡೆಯುತ್ತಾರೆ.

  • ಕುಂದಾಪುರದ ಸರ್ಕಾರಿ ಕಾಲೇಜನ್ನು ದತ್ತು ಪಡೆದ ರಾಮಿ ಗ್ರೂಪ್!

    ಕುಂದಾಪುರದ ಸರ್ಕಾರಿ ಕಾಲೇಜನ್ನು ದತ್ತು ಪಡೆದ ರಾಮಿ ಗ್ರೂಪ್!

    ಉಡುಪಿ: ಸರ್ಕಾರಿ ಶಾಲೆಗಳು ಮುಚ್ಚುವ ವಿರುದ್ಧ ಎಲ್ಲರೂ ಮಾತನಾಡುತ್ತಾರೆ. ಸರ್ಕಾರದ ನೀತಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿರುತ್ತಾರೆ. ಮಕ್ಕಳಿಲ್ಲದೆ ಮುಚ್ಚುವ ಶಾಲೆಗಳನ್ನು ಹೇಗೆ ಉಳಿಸಬಹುದು ಎಂಬ ಬಗ್ಗೆ ಯಾರೂ ಆಲೋಚನೆ ಮಾಡೋದೇ ಇಲ್ಲ. ವಿಶ್ವದ ಅತೀ ದೊಡ್ಡ ಉದ್ಯಮ ಸಂಸ್ಥೆ ರಾಮಿ ಫೌಂಡೆಶನ್ ಕುಂದಾಪುರದಲ್ಲಿ ಕಾಲೇಜನ್ನೇ ದತ್ತು ಪಡೆದು ಸಾವಿರ ಮಕ್ಕಳಿಗೆ ವಿದ್ಯಾಭ್ಯಾಸ ಕೊಡುತ್ತಿದೆ. ಈ ಮೂಲಕ ಸರ್ಕಾರಿ ಕಾಲೇಜು ಖಾಸಗಿ ಸಂಸ್ಥೆಗಳಿಗೆ ಸಡ್ಡು ಹೊಡೆಯುತ್ತಿದೆ.

    ಖಾಸಗಿ ಕಾಲೇಜಿನಂತೆ ಕಂಡರೂ ಇದು ಸರ್ಕಾರಿ ಪದವಿ ಪೂರ್ವ ಕಾಲೇಜು. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರದ ಶ್ರೀ ಕಾಳಾವರ ವರದರಾಜ್ ಶೆಟ್ಟಿ ಎಂ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇದು. ರಾಮಿ ಗ್ರೂಪ್ಸ್ ಆಫ್ ಹೋಟೆಲ್ಸ್ ಮತ್ತು ಚಾರಿಟೇಬಲ್ ಟ್ರಸ್ಟ್ ಈ ಕಾಲೇಜನ್ನು ದತ್ತು ಪಡೆದಿದೆ. 1,050 ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಕೊಡುತ್ತಿದೆ. ರಾಮಿ ಗ್ರೂಪ್ ಆಫ್ ಹೋಟೆಲ್ಸ್- ಅಪಾರ್ಟ್ ಮೆಂಟ್ ಮತ್ತು ರೆಸಾರ್ಟ್ ಅಧ್ಯಕ್ಷ ಕಳಾವರ ವರದರಾಜ ಶೆಟ್ಟಿಯವರು ತಮ್ಮ ಹುಟ್ಟು ಹಬ್ಬವನ್ನು ವಿಭಿನ್ನವಾಗಿ ಆಚರಿಸಿದರು. ಪ್ರತಿಭಾವಂತ ಮತ್ತು ಬಡ ವಿದ್ಯಾರ್ಥಿಗಳಿಗೆ 15 ಲಕ್ಷ ರೂಪಾಯಿಯ ಪ್ರೋತ್ಸಾಹ ಧನ ನೀಡಿದರು. ಈ ಮೂಲಕ ಉದ್ಯಮದಲ್ಲಿರುವವರು, ಸಿರಿವಂತರು ಸರ್ಕಾರಿ ಶಾಲೆಯನ್ನು ಉಳಿಸಲು ಸಹಾಯ ಮಾಡಬೇಕು ಎಂದು ಸಲಹೆ ನೀಡಿದರು.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರಾಮಿ ಗ್ರೂಪ್ ಅಧ್ಯಕ್ಷ ಕಾಳಾವರ ವರದರಾಜ್ ಶೆಟ್ಟಿ ಮಾತನಾಡಿ, ನಾನು 9 ನೇ ಕ್ಲಾಸಿಗೆ ವಿದ್ಯಾಭ್ಯಾಸ ಕಡಿದುಕೊಂಡು ಮುಂಬೈ ಸೇರಿದೆ. ನಾನು ವಿದ್ಯಾವಂತನಾಗಿದ್ದರೆ ಬೇರೆಯೇ ತರದಲ್ಲಿ ಬೆಳೆಯುತ್ತಿದ್ದೆ. ನನ್ನಂತೆ ಯಾರಿಗೂ ಆಗಬಾರದು ಅನ್ನೋದು ಕನಸು. ನನ್ನೆರಡು ಮಕ್ಕಳಂತೆಯೇ ಕಾಲೇಜಿನ 1,050 ಮಕ್ಕಳನ್ನು ಪ್ರೀತಿಸುತ್ತೇನೆ. ನಾನು ವಿದೇಶದಲ್ಲಿದ್ದರೂ ನನ್ನ ಊರಿಗೇನಾದರೂ ಮಾಡಬೇಕು ಅನ್ನೋದು ನನ್ನ ಆಸೆ ಅಂತ ಹೇಳಿದರು.

    ಅಂತಾರಾಷ್ಟ್ರೀಯ ಟೇಬಲ್ ಟೆನ್ನಿಸ್ ಆಟಗಾರ್ತಿ ನೈನಾ ಜೈಸ್ವಾಲ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು. ತನ್ನ 8 ನೇ ವಯಸ್ಸಿನಲ್ಲಿ ಎಸ್‍ಎಸ್‍ಎಲ್‍ಸಿ ಮುಗಿಸಿರುವ ನೈನಾ ಜೈಸ್ವಾಲ್, ಜರ್ನಲಿಸಂ ಡಿಗ್ರೀ, 15ನೇ ವಯಸ್ಸಿಗೆ ಪಿಜಿ ಮುಗಿಸಿರುವ ಏಷ್ಯಾದ ಏಕೈಕ ಸಾಧಕಿ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ನೈನಾ ಸಾವಿರಾರು ವಿದ್ಯಾರ್ಥಿಗಳಿಗೆ ತನ್ನ ಸಾಧನೆ ಬಗ್ಗೆ ಕಿವಿಮಾತುಗಳನ್ನು ಹೇಳಿದರು. ಅತೀ ಚಿಕ್ಕ ವಯಸ್ಸಿನಲ್ಲಿ ಪದವಿ ಮುಗಿಸಿದ ನೈನಾ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟ- ಪೋಷಕರು ಶಿಕ್ಷಕರ ಜೊತೆ ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ಮಾಹಿತಿಗಳನ್ನು ನೀಡಿದರು. ಜೀವನದಲ್ಲಿ ಮತ್ತು ಪಠ್ಯದಲ್ಲಿ ಅಳವಡಿಸಬೇಕು, ರಾಮಾಯಣ-ಪುರಾಣಗಳನ್ನು ಮೈಗೂಡಿಸಬೇಕು ಎಂದು ಹೇಳಿದರು.

    ಕುಂದಾಪುರದ ಕೋಟೇಶ್ವರದ ಸರ್ಕಾರಿ ಪಿಯು ಕಾಲೇಜಿಗೆ ಕಳೆದ 10 ವರ್ಷಗಳಿಂದ ವರದರಾಜ್ ಶೆಟ್ಟಿ ಕೋಟ್ಯಾಂತರ ರೂಪಾಯಿ ಸಹಾಯಧನ ನೀಡಿದ್ದಾರೆ. ಈ ಸಂದರ್ಭ ವರದರಾಜ್ ಶೆಟ್ಟಿ ಸೇರಿದಂತೆ ಸಾಧಕರನ್ನು ಸನ್ಮಾನಿಸಲಾಯಿತು. ವರದರಾಜ್ ಶೆಟ್ಟಿ ಮಕ್ಕಳಾದ ರಾಮಿ ಮತ್ತು ರಜತ್ ಸಹಾಯಧನಗಳನ್ನು ವಿತರಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಒಟ್ಟಿನಲ್ಲಿ ವಿದೇಶದಲ್ಲಿ ಸಾವಿರಾರು ಕೋಟಿಯ ಉದ್ಯಮ ಇದ್ದರೂ ಕಾಳಾವರ ವರದರಾಜ್ ಶೆಟ್ಟಿ ತಾನು ಹುಟ್ಟಿದ ಊರಿಗೆ ಕೊಡುಗೆ ಕೊಡುವುದನ್ನು ಮರೆತಿಲ್ಲ. ಎಲ್ಲರಿಗೂ ಆದರ್ಶಮಯ ಕೆಸಲ ಮಾಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಾಸನದ ಕಾಲೇಜಿನಲ್ಲಿಯೂ ಸಿಗುತ್ತೆ ಬಿಸಿಯೂಟ – ಎಲ್ಲರಿಗೂ ಮಾದರಿಯಾದ ಉಪನ್ಯಾಸಕರು

    ಹಾಸನದ ಕಾಲೇಜಿನಲ್ಲಿಯೂ ಸಿಗುತ್ತೆ ಬಿಸಿಯೂಟ – ಎಲ್ಲರಿಗೂ ಮಾದರಿಯಾದ ಉಪನ್ಯಾಸಕರು

    ಹಾಸನ: ನಗರದ ಪ್ರತಿಷ್ಠಿತ ಸರ್ಕಾರಿ ವಿಜ್ಞಾನ ಪದವಿ ಕಾಲೇಜಿನಲ್ಲಿ ಗ್ರಾಮಗಳಿಂದ ಬರುವ ವಿದ್ಯಾರ್ಥಿಗಳಿಗೆ ಬಿಸಿಯೂಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

    ಹಾಸನದ ಪ್ರತಿಷ್ಟಿತ ಸರ್ಕಾರಿ ವಿಜ್ಞಾನ ಪದವಿ ಕಾಲೇಜು ಬೇರೆ ಎಲ್ಲಾ ಕಾಲೇಜುಗಳಿಗಿಂತಲೂ ವಿಭಿನ್ನವಾಗಿ ನಿಂತಿದ್ದು, ವಿದ್ಯಾರ್ಥಿಗಳ ಪ್ರೀತಿಯ ಕಾಲೇಜಾಗಿ ಪರಿಣಮಿಸಿದೆ. ಕಾರಣ ಕಾಲೇಜಿನ ವಿದ್ಯಾರ್ಥಿಗಳಿಗೆ ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿ ಎಲ್ಲರೂ ಸೇರಿ ‘ಸಂವೇದನಾ ಬಳಗ’ ರಚಿಸಿಕೊಂಡಿದ್ದು, ವಿದ್ಯಾರ್ಥಿಗಳ ಕಷ್ಟಕ್ಕೆ ಸ್ಪಂದಿಸಲು ಮುಂದಾಗಿದ್ದಾರೆ.

    ಪ್ರತಿದಿನ ಕಾಲೇಜು ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿ ಊಟವನ್ನು ಕಾಲೇಜಿನಲ್ಲಿಯೇ ಉಚಿತವಾಗಿ ನೀಡಲಾಗುತ್ತಿದೆ. ಗ್ರಾಮೀಣ ಭಾಗಗಳಿಂದ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಇಲ್ಲಿ ಮಧ್ಯಾಹ್ನ ಬಿಸಿ ಊಟದ ವ್ಯವಸ್ಥೆಯನ್ನು ಮಾಡಿರುವುದು ನಿಜಕ್ಕೂ ಪ್ರಶಂಸನೀಯವಾಗಿದೆ. ಕಾಲೇಜಿನಲ್ಲಿ ಪ್ರತಿದಿನ 180 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬಿಸಿ ಊಟ ವ್ಯವಸ್ಥೆಯನ್ನು ನೀಡಲಾಗುತ್ತಿದೆ. ಸಂವೇದನಾ ಬಳಗದಿಂದ ಪ್ರತಿ ತಿಂಗಳು 30 ಸಾವಿರ ಹಣ ಸಂಗ್ರಹವಾಗುತ್ತಿದ್ದು, ಕಾಲೇಜು ತರಗತಿ ಇರುವ ದಿನಗಳಲ್ಲಿ ಊಟವನ್ನು ನೀಡಲಾಗುತ್ತಿದೆ. ಸಂವೇದನಾ ಬಳಗದಲ್ಲಿರುವ ಎಲ್ಲರೂ ತಮ್ಮ ಕೈಲಾದಷ್ಟು ಹಣವನ್ನು ವಿದ್ಯಾರ್ಥಿಗಳಿಗಾಗಿ ನೀಡಿ ಮಾದರಿಯಾಗಿದ್ದಾರೆ.

    ಪ್ರತಿದಿನ ಬೆಳಗ್ಗೆಯಿಂದ ಸಂಜೆಯವರೆಗೂ ತರಗತಿಗಳು ನಡೆಯುವುದರಿಂದ ವಿದ್ಯಾರ್ಥಿಗಳು ಹೊರಗಡೆ ಹೋಗಲೂ ಸಾಧ್ಯವಾಗದೆ, ಸಮಸ್ಯೆ ಎದುರಿಸುತ್ತಿದ್ದರು. ಇಂತಹ ವಿದ್ಯಾರ್ಥಿಗಳಿಗೆ ಕಾಲೇಜಿನ ಸಂವೇದನಾ ಬಳಗದ ಬಿಸಿ ಊಟದ ಕಾರ್ಯಕ್ರಮ ಸಾಕಷ್ಟು ಅನುಕೂಲ ಕಲ್ಪಿಸಿದೆ. ಸದ್ಯ ಕಾಲೇಜು ಯುಜಿಸಿ ಯಿಂದ ಉತ್ತಮ ಗುಣಮಟ್ಟದ ಪ್ರಮಾಣ ಪತ್ರವನ್ನು ಕೂಡ ಪಡೆದುಕೊಂಡಿದೆ. ವಿದ್ಯಾರ್ಥಿಗಳ ಸಂಖ್ಯೆಯೂ ವರ್ಷದಿಂದ ಹೆಚ್ಚಾಗುತ್ತಿದೆ. ಕಾಲೇಜು ವಾತಾವರಣ ಕೂಡ ಉತ್ತಮವಾಗಿದೆ ಎಂದು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದು, ಉಪನ್ಯಾಸಕರು ಸಹ ತಮ್ಮ ಕಾರ್ಯದಲ್ಲಿ ಸಂತೃಪ್ತಿಯನ್ನು ಕಾಣುತ್ತಿದ್ದಾರೆ.