Tag: ಸರ್ಕಾರಿ ಕಾರ್

  • `ಯಾರದೋ ಟ್ಯಾಕ್ಸ್ ದುಡ್ಡು, ದೇವೇಗೌಡ್ರ ಮೊಮ್ಮಕ್ಕಳ ಮೋಜು’

    `ಯಾರದೋ ಟ್ಯಾಕ್ಸ್ ದುಡ್ಡು, ದೇವೇಗೌಡ್ರ ಮೊಮ್ಮಕ್ಕಳ ಮೋಜು’

    – ಸರ್ಕಾರಿ ಕಾರು ಬಳಸಿದ ಪ್ರಜ್ವಲ್ ರೇವಣ್ಣ ವಿರುದ್ಧ ಬಿಜೆಪಿ ಟ್ವೀಟ್
    – ಪ್ರಜ್ವಲ್ ವಿರುದ್ಧ ಸಾರ್ವಜನಿಕರ ಆಕ್ರೋಶ

    ಹಾಸನ: ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಅವರು ಇಂದು ಜಿಲ್ಲೆಯ ವಿವಿಧ ವಾರ್ಡ ಗಳಿಗೆ ಸರ್ಕಾರಿ ಕಾರಿನಲ್ಲಿ ಸುತ್ತಾಡಿದ್ದು, ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಪ್ರಜ್ವಲ್ ರೇವಣ್ಣ ಕಾರಿನಲ್ಲಿ ಸುತ್ತಾಡುತ್ತಿರುವ ವಿಡಿಯೋವನ್ನು ಕರ್ನಾಟಕ ಬಿಜೆಪಿ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿ, ಯಾರದೋ ಟ್ಯಾಕ್ಸ್ ದುಡ್ಡು, ದೇವೆಗೌಡ್ರ ಮೊಮ್ಮಕ್ಕಳ ಮೋಜು ಎಂದು ಬರೆದು ಟೀಕಿಸಿದೆ.

    ವೈಯಕ್ತಿಕ ಜೀವನಕ್ಕೆ ಸರ್ಕಾರಿ ಕಾರನ್ನು ಹೇಗೆ ಬಳಕೆ ಮಾಡುತ್ತಿದ್ದಾರೆ ಎನ್ನುವುದನ್ನು ಇದೊಂದು ಉತ್ತಮ ಉದಾಹರಣೆ. ವಂಶಪಾರಂಪರ್ಯ ರಾಜಕಾರಣಕ್ಕೆ ಇದೊಂದು ಅತ್ಯುತ್ತಮ ಉದಾಹರಣೆ. ಸಾರ್ವಜನಿಕರ ತೆರಿಗೆ ಹಣಕ್ಕೆ ದೇವೇಗೌಡರ ಕುಟುಂಬದವರಿಂದ ಅವಮಾನ ಎಂದು ಬಿಜೆಪಿ ತನ್ನ ಖಾತೆಯಲ್ಲಿ ಬರೆದುಕೊಂಡಿದೆ.

    ಏನಿದು ಘಟನೆ?
    ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ಬೆನ್ನಲ್ಲೇ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರು ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಇಂದು ಸರ್ಕಾರಿ ಇನ್ನೋವಾ ಕಾರಿನಲ್ಲಿ ವಿವಿಧ ವಾರ್ಡ್‍ಗಳಿಗೆ ಸುತ್ತಾಡಿದ್ದಾರೆ. ಅಲ್ಲದೇ ಸರ್ಕಾರಿ ಕಾರಿನಲ್ಲಿಯೇ ಪಕ್ಷದ ಕಾರ್ಯಕರ್ತರ ಸಭೆಗೆ ಬಂದಿದ್ದಾರೆ. ಹೀಗಾಗಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ವಿರುದ್ಧ ಸರ್ಕಾರಿ ಕಾರು ದುರ್ಬಳಕೆ ಮಾಡಿದ್ದಕ್ಕೆ ಭಾರೀ ಟೀಕೆ ಕೇಳಿಬಂದಿದೆ.

    ಕೆಎ 01 ಜಿಎ 8009 ನಂಬರಿನ ಸರ್ಕಾರಿ ಇನ್ನೋವಾ ಕಾರ್ ಬಳಸಿದ ಪ್ರಜ್ವಲ್ ರೇವಣ್ಣ, ತಮ್ಮ ಪಕ್ಷದ ಮುಖಂಡರು ಹಾಗು ಕಾರ್ಯಕರ್ತರ ಜೊತೆ ನಗರದಾದ್ಯಂತ ಸಂಚಾರ ಮಾಡಿದ್ದಾರೆ. ಇದೀಗ ಪ್ರಜ್ವಲ್ ಸರ್ಕಾರಿ ಹುದ್ದೆಯಲ್ಲಿ ಇಲ್ಲ. ಹೀಗಿದ್ದರೂ ಹೇಗೆ ಸರ್ಕಾರಿ ಕಾರ್ ಬಳಸಿದ್ರು ಅನ್ನೋದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

    https://www.youtube.com/watch?v=Pkpa8R4wRqQ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಸರ್ಕಾರಿ ಕಾರನ್ನು ಅಡ್ಡಾದಿಡ್ಡಿ ಚಲಾಯಿಸಿದ ಬಾಲಕ-ಗೋಡೆ, ಕಾರಿಗೆ ಡಿಕ್ಕಿ ಹೊಡೆದು ಅವಾಂತರ

    ಸರ್ಕಾರಿ ಕಾರನ್ನು ಅಡ್ಡಾದಿಡ್ಡಿ ಚಲಾಯಿಸಿದ ಬಾಲಕ-ಗೋಡೆ, ಕಾರಿಗೆ ಡಿಕ್ಕಿ ಹೊಡೆದು ಅವಾಂತರ

    -ಇತ್ತ ಸಿಕ್ಕಿಬಿದ್ದ ಕುಡುಕ ಆಂಬುಲೆನ್ಸ್ ಚಾಲಕ

    ಬೆಂಗಳೂರು: ನಗರದಲ್ಲಿ ಚಾಲಕನೊಬ್ಬ ಸರ್ಕಾರಿ ಕಾರನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿ ಅವಾಂತರ ಸೃಷ್ಟಿ ಮಾಡಿದ್ರೆ, ಇತ್ತ ಕುಡಿದ ಮತ್ತಿನಲ್ಲಿ ಆಂಬುಲೆನ್ಸ್ ಚಲಾಯಿಸುತ್ತಿದ್ದವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಬೆಂಗಳೂರಿನ ಸಂಪಗಿರಾಮನಗರದ 4ನೇ ಮುಖ್ಯ ರಸ್ತೆಯಲ್ಲಿ ಈ ಅವಘಢ ಸಂಭವಿಸಿದೆ. ಸಫಾರಿ ಕರ್ಮಚಾರಿ ಆಯೋಗದ ಮುಖ್ಯಸ್ಥರ ಕಾರನ್ನು ಬೇಕಾಬಿಟ್ಟಿಯಾಗಿ ಡ್ರೈವ್ ಮಾಡಿ ಗೋಡೆ ಮತ್ತು ಕಾರುಗಳಿಗೆ ಡಿಕ್ಕಿ ಹೊಡೆಸಿದ್ದಾನೆ.

    ಈತನ ತಂದೆ ಅಧ್ಯಕ್ಷರ ಮನೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾನೆ. ಮಗನಿಗೆ ಕಾರುಗಳ ಕ್ರೇಜ್ ಹೆಚ್ಚಾಗಿ ತನ್ನ ತಂದೆಗೆ ಗೊತ್ತಾಗದಂತೆ ಕಾರು ಕೀ ತೆಗೆದುಕೊಂಡು ಅಡ್ಡಾದಿಡ್ಡಿಯಾಗಿ ಓಡಿಸಿದ್ದಾನೆ ಎಂದು ತಿಳಿದುಬಂದಿದೆ. ಈ ಕುರಿತು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ರೋಗಿಗಳ ಜೀವ ಉಳಿಸಲು ಅಂತಾನೇ ಇರೋದು ಅಂಬುಲೆನ್ಸ್. ಆದ್ರೆ ಇಲ್ಲೊಬ್ಬ ಅಂಬ್ಯುಲೆನ್ಸ್ ಚಾಲಕ ಕಂಠಪೂರ್ತಿ ಕುಡಿದು ಅಂಬುಲೆನ್ಸ್ ಚಲಾಯಿಸಿ ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

    ಪೂಜಪ್ಪ ಅನ್ನೋ ಚಾಲಕ ಮಲ್ಲೇಶ್ವರಂನಿಂದ ಇಲೆಕ್ಟ್ರಾನಿಕ್ ಸಿಟಿ ಕಡೆಗೆ ಅಂಬ್ಯುಲೆನ್ಸ್‍ನಲ್ಲಿ ಹೋಗ್ತಿದ್ದ. ಕಾರ್ಪೋರೇಷನ್ ಬಳಿ ಈತನನ್ನು ತಡೆದು ನಿಲ್ಲಿಸಿದ ಹಲಸೂರು ಠಾಣೆ ಸಂಚಾರಿ ಪೊಲೀಸರು ಕುಡಿದಿದ್ದಾನೋ ಇಲ್ವೋ ಅಂತಾ ಚೆಕ್ ಮಾಡಿದ್ರು. ಆಗ ಈತ ಕಂಠಪೂರ್ತಿ ಕುಡಿದಿರೋದು ಸಾಬೀತಾಗಿದೆ. ಈತನನ್ನು ವಶಕ್ಕೆ ಪಡೆದಿರುವ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.