Tag: ಸರ್ಕಾರಿ ಕಾರು

  • ಸರ್ಕಾರಿ ಕಾರಿನಲ್ಲಿ ಯುವತಿ ಫೋಟೋಶೂಟ್- ಸಾರ್ವಜನಿಕರಿಂದ ಟೀಕೆ

    ಸರ್ಕಾರಿ ಕಾರಿನಲ್ಲಿ ಯುವತಿ ಫೋಟೋಶೂಟ್- ಸಾರ್ವಜನಿಕರಿಂದ ಟೀಕೆ

    ಕಾರವಾರ: ಸರ್ಕಾರಿ ಕಾರಿನಲ್ಲಿ ಯುವತಿಯೊಬ್ಬಳು ವಿವಿಧ ಭಂಗಿಯಲ್ಲಿ ಕುಳಿತು, ಮಲಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾಳೆ. ಸದ್ಯ ಯುವತಿ ವಿರುದ್ಧ ಪ್ರಕರಣ ದಾಖಲಾಗಿದೆ.

    ಶಿರಸಿ ಅರಣ್ಯ ವಿಭಾಗದ ವಾಹನದ ಮೇಲೆ ಯುವತಿ ವಿವಿಧ ಭಂಗಿಯಲ್ಲಿ ಕುಳಿತು ಫೋಟೋ ಶೂಟ್ ಮಾಡಿದ್ದಾಳೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

    ಯಲ್ಲಾಪುರ ಎಸಿಎಫ್‍ಗೆ ಸೇರಿದ ವಾಹನ ಇದಾಗಿದ್ದು, ಯುವತಿ ಕುಳಿತು ಫೋಟೋ ತೆಗೆಸಿಕೊಂಡು ನಂತರ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾಳೆ. ಸದ್ಯ ಈ ಫೋಟೋ ವೈರಲ್ ಆಗಿದ್ದು, ಸರ್ಕಾರಿ ವಾಹನವನ್ನು ಫೋಟೋ ಶೂಟ್‍ಗೆ ಬಳಸಿಕೊಂಡ ಬಗ್ಗೆ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿದೆ.

    ಸಾರ್ವಜನಿಕರ ಆಕ್ರೋಶದ ಬಳಿಕ ಫೋಟೋ ಶೂಟ್ ಮಾಡಿಸಿಕೊಂಡವರ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.

  • ಸರ್ಕಾರಿ ಕಾರಿನಲ್ಲಿ ದಿನವಿಡೀ ಶಾಪಿಂಗ್- ಬಳ್ಳಾರಿ ಸಾರಿಗೆ ಅಧಿಕಾರಿ ನಡೆಗೆ ಸಾರ್ವಜನಿಕರ ಆಕ್ರೋಶ

    ಸರ್ಕಾರಿ ಕಾರಿನಲ್ಲಿ ದಿನವಿಡೀ ಶಾಪಿಂಗ್- ಬಳ್ಳಾರಿ ಸಾರಿಗೆ ಅಧಿಕಾರಿ ನಡೆಗೆ ಸಾರ್ವಜನಿಕರ ಆಕ್ರೋಶ

    ಬಳ್ಳಾರಿ: ಇಲ್ಲಿನ ಹೊಸಪೇಟೆ ಈಶಾನ್ಯ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿಗೆ ಸರ್ಕಾರ ಕೊಟ್ಟಿರೋ ಕಾರಣನ್ನ ತನ್ನ ಕುಟುಂಬದ ಕೆಲಸಕ್ಕೂ ಬಳಸುತ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಸ್ವಾಮಿ ಕಾರ್ಯದ ಜೊತೆಗೆ ಸ್ವಕಾರ್ಯ ಎನ್ನುವಂತೆ ಸಾರಿಗೆ ಇಲಾಖೆಯ ವಿಭಾಗೀಯ ನಿಯಂತ್ರಣಾಧಿಕಾರಿ ಮಹ್ಮದ್ ಪೈಜ್ ಅವರು ತಮ್ಮ ಕಚೇರಿ ಕೆಲಸಕ್ಕೆ ಮಾತ್ರವಲ್ಲದೆ ತಮ್ಮ ಕುಟುಂಬ ಸದಸ್ಯರ ಶಾಪಿಂಗ್ ಸೇರಿದಂತೆ ಇತರೆ ಕಾರ್ಯಗಳಿಗೆ ಬಳಕೆ ಮಾಡುತ್ತಿದ್ದಾರೆ. ಅಧಿಕಾರಿ ಕುಟುಂಬದ ಸದಸ್ಯರು ಎನ್‍ಇಕೆಎಸ್‍ಆರ್‍ಟಿಸಿ ಹಾಗೂ ಕರ್ನಾಟಕ ಸರಕಾರ ನಾಮಫಲಕ ಹೊಂದಿದ ಕಾರಿನಲ್ಲಿ ಭಾನುವಾರ ಇಡೀ ದಿನ ಶಾಪಿಂಗ್ ಮಾಡಿರುವುದು ಬೆಳಕಿಗೆ ಬಂದಿದೆ.

    ಅಲ್ಲದೇ ಶಾಪಿಂಗ್ ವೇಳೆಯೂ ಕಾರನ್ನು ಸ್ಟಾರ್ಟ್‍ನಲ್ಲೇ ಇಟ್ಟು ನಿರಂತರವಾಗಿ ಎಸಿ ಬಳಕೆ ಮಾಡಿದ್ದಾರೆ. ಇದನ್ನ ನೋಡಿದ ಸಾರ್ವಜನಿಕರು ಪೈಜ್ ವಿರುದ್ಧ ಕಿಡಿಕಾರಿದ್ದಾರೆ.

  • ಐಪಿಎಲ್ ಮ್ಯಾಚ್‍ಗೂ ಸರ್ಕಾರಿ ಕಾರೇ ಬೇಕು – ವಿವಿಐಪಿ ಸಂಸ್ಕೃತಿಗಿಲ್ಲ ಬ್ರೇಕ್

    ಐಪಿಎಲ್ ಮ್ಯಾಚ್‍ಗೂ ಸರ್ಕಾರಿ ಕಾರೇ ಬೇಕು – ವಿವಿಐಪಿ ಸಂಸ್ಕೃತಿಗಿಲ್ಲ ಬ್ರೇಕ್

    ಬೆಂಗಳೂರು: ಜನ ಸೇವೆಯೇ ಜನಾರ್ದನ ಸೇವೆ ಅನ್ನೋದು ಹಳೇ ಮಾತು. ಸರ್ಕಾರಿ ಕೆಲಸಕ್ಕೆ ಕೊಟ್ಟಿರೋ ಕಾರು ಸ್ವಕಾರ್ಯಕ್ಕೂ ಬಳಕೆ ಇದು ಅಧಿಕಾರಿಗಳ ಮಾತು.

    ಹೌದು. ಸರ್ಕಾರಿ ಕೆಲಸಕ್ಕೆ ಅಂತ ಕೊಟ್ಟಿರೋ ಕಾರನ್ನ ಸ್ವಂತ ಕೆಲಸಕ್ಕೆ ಅಧಿಕಾರಿಗಳು ಬಳಸುತ್ತಿರೋದು ಬೆಳಕಿಗೆ ಬಂದಿದೆ. ಐಪಿಎಲ್ ಮ್ಯಾಚ್ ನೋಡೋಕೆ ಅಧಿಕಾರಿಗಳು ತಮ್ಮ ಫ್ಯಾಮಿಲಿಗಾಗಿ ಸರ್ಕಾರಿ ಕಾರುಗಳನ್ನ ದುರ್ಬಳಕೆ ಮಾಡಿಕೊಳ್ತಿದ್ದಾರೆ.

    ಪೊಲೀಸ್ ಅಧಿಕಾರಿಗಳ ಕಾರು, ಸರ್ಕಾರಿ ವಾಹನಗಳು ಅಷ್ಟೇ ಅಲ್ಲ ಬಿಎಂಟಿಸಿ ಸಾರಥಿ ವಾಹನದಲ್ಲಿ ಸರ್ಕಾರಿ ಅಧಿಕಾರಿಗಳ ಕುಟುಂಬಸ್ಥರು ಐಪಿಎಲ್ ಮ್ಯಾಚ್ ನೋಡೋಕೆ ಹೋಗ್ತಾರೆ. ಈ ಎಲ್ಲಾ ದೃಶ್ಯಾವಳಿಗಳು ಪಬ್ಲಿಕ್ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ವಿವಿಐಪಿ  ಸಂಸ್ಕೃತಿ ಬೇಡ ಅನ್ನೋ ಕಾರಣಕ್ಕೆ ಕೇಂದ್ರ ಸರ್ಕಾರ ಹೊಸ ಕಾನೂನು ತಂದು ಅಧಿಕಾರಿಗಳು ಹಾಗೂ ಗಣ್ಯವ್ಯಕ್ತಿಗಳ ಕಾರಿನ ಮೇಲೆ ಕೆಂಪು ದೀಪ ಬಳಕೆ ನಿಷೇಧಿಸಿದೆ. ಕೇವಲ ತುರ್ತು ಸೇವೆ ಒದಗಿಸುವಂತಹ ವಾಹನಗಳಾದಂತಹ ಆಂಬುಲೆನ್ಸ್, ಅಗ್ನಿಶಾಮಕ ವಾಹನಗಳಲ್ಲಿ ಮಾತ್ರ ಕೆಂಪು ದೀಪ ಬಳಸಬಹುದಾಗಿದೆ.