Tag: ಸರ್ಕಾರಿ ಕಟ್ಟಡ

  • ಶಿಥಿಲಾವಸ್ಥೆಯಲ್ಲಿ ರಾಯಚೂರು ಬಿಇಒ ಕಚೇರಿ – ಜೀವಭಯದಲ್ಲೇ ಸಿಬ್ಬಂದಿ ಕೆಲಸ

    ಶಿಥಿಲಾವಸ್ಥೆಯಲ್ಲಿ ರಾಯಚೂರು ಬಿಇಒ ಕಚೇರಿ – ಜೀವಭಯದಲ್ಲೇ ಸಿಬ್ಬಂದಿ ಕೆಲಸ

    ರಾಯಚೂರು: ಜಿಲ್ಲೆಯ ಸರ್ಕಾರಿ ಶಾಲೆಗಳ ಸುವ್ಯವಸ್ಥೆ ಕಾಪಾಡಿ ಅಗತ್ಯ ಸೌಲಭ್ಯ ಒದಗಿಸಬೇಕಾದ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿಯಲ್ಲೇ (BEO Office) ಅವ್ಯವಸ್ಥೆ ಹಾಗೂ ಭಯದಲ್ಲಿ ಕೆಲಸ ಮಾಡಬೇಕಾದ ಪರಸ್ಥಿತಿ ಎದುರಿಸುತ್ತಿದ್ದಾರೆ. ಈಗಲೋ ಆಗಲೋ ಬಿದ್ದು ಹೋಗಬಹುದಾದ ಕಟ್ಟಡದಲ್ಲಿ ಬಿಇಒ ಕಚೇರಿ (BEO Office) ಸಿಬ್ಬಂದಿ ಕೆಲಸಮಾಡುತ್ತಿದ್ದಾರೆ.

    ರಾಯಚೂರು (Raichur) ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು, ಎಷ್ಟು ಬಾರಿ ರಿಪೇರಿ ಮಾಡಿದರೂ ಆಗಾಗ ಮೇಲ್ಚಾವಣಿ ಕುಸಿದು ಬೀಳುತ್ತಲೇ ಇದೆ. ಮಳೆ ಬಂದಾಗಲೆಲ್ಲಾ ಬಿಇಒ ಕಚೇರಿ ಸೋರುತ್ತಲೇ ಇದೆ. ಹೀಗಾಗಿ ಇಲ್ಲಿನ ಸಿಬ್ಬಂದಿ ಜೀವಭಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳೇ ಶಿಥಿಲಾವಸ್ಥೆಯ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದರೆ, ನಗರ ಹಾಗೂ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಸುಧಾರಣೆ, ಗುಣಮಟ್ಟದ ಶಿಕ್ಷಣ ಹೇಗೆ ಅನ್ನೋದು ಸಾರ್ವಜನಿಕರ ಪ್ರಶ್ನೆಯಾಗಿದೆ.

    ಎಷ್ಟೋ ಶಾಲೆಗಳಲ್ಲಿ ಅಗತ್ಯಕ್ಕನುಗುಣವಾಗಿ ಕೊಠಡಿಗಳಿಲ್ಲ, ಶೌಚಾಲಯಗಳಿಲ್ಲ. ಆದ್ರೆ ಸ್ವತಃ ಬಿಇಒ ಕಚೇರಿಯೇ ಮಳೆಗೆ ಸೋರುತ್ತಿದ್ದರೆ ಶಾಲಾ ಮುಖ್ಯಶಿಕ್ಷಕರು, ವಿದ್ಯಾರ್ಥಿಗಳು ಯಾರ ಬಳಿ ಕಷ್ಟ ಹೇಳೋದು ಅನ್ನೋ ಪರಸ್ಥಿತಿ ಬಂದೊದಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಒಂಟಿ, ದ್ವೇಷದಿಂದ ಬಿಜೆಪಿ ವಿರುದ್ಧ ಹಗರಣ ಆರೋಪ: ಕಾರಜೋಳ ಕಿಡಿ

    1995 ರಲ್ಲಿ ನಿರ್ಮಾಣವಾದ ಸುಮಾರು 30 ವರ್ಷಗಳ ಹಳೆಯ ಕಟ್ಟಡ ಈಗ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ಸಾಮರ್ಥ್ಯ ಸೌಧ ನಿರ್ಮಾಣಕ್ಕಾಗಿ 5 ಕೋಟಿ 50 ಲಕ್ಷ ರೂ. ಅಂದಾಜು ಪಟ್ಟಿಯನ್ನ ತಯಾರಿಸಿ ಕೆಕೆಆರ್‌ಡಿಬಿಗೆ ಶಿಕ್ಷಣ ಇಲಾಖೆ ಈಗಾಗಲೇ ಕಳುಹಿಸಿದೆ. ಆದಾಗ್ಯೂ ಯಾವುದೇ ಪ್ರಯೋಜವಾಗಿಲ್ಲ. ಇದರಿಂದ ಪಕ್ಕದ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿಗೆ ಸ್ಥಳಾಂತರಗೊಳ್ಳಲು ಅನುಮತಿ ಪಡೆದಿದ್ದಾರೆ. ದುರಂತ ಅಂದ್ರೆ ಆ ಕಾಲೇಜು ಸಹ ಮಳೆ ಬಂದಾಗ ಸೋರುತ್ತಿದೆ. ಹೀಗಾಗಿ ಯಾವುದಾದರೂ ಶಾಲೆಗೆ ಕಚೇರಿ ಸ್ಥಳಾಂತರ ಮಾಡಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಕಚೇರಿಯ 13 ಸಿಬ್ಬಂದಿ ಈಗ ಹೊಸ ಕಟ್ಟಡ ಕಟ್ಟಿಕೊಡಿ ಅಂತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಹೆಚ್ಚಿದ ತುಂಗಭದ್ರಾ ನೀರಿನ ಮಟ್ಟ – ಜಾನುವಾರು ಮೈತೊಳೆಯಲು ತೆರಳಿದ್ದ ಯುವಕ ನೀರುಪಾಲು

    ಒಟ್ಟಿನಲ್ಲಿ, ರಾಯಚೂರು ತಾಲೂಕಿನ ಸರ್ಕಾರಿ ಶಾಲೆಗಳ ಸುರಕ್ಷತೆ ಕಾಪಾಡಬೇಕಾದ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸುರಕ್ಷತೆಯಿಲ್ಲದಂತಾಗಿದೆ. ಯಾವಾಗ ಎಲ್ಲಿ ಚಾವಣಿ ಕುಸಿದು ಬೀಳುತ್ತೋ ಏನ್ ಅಪಾಯ ಕಾದಿದೆಯೋ ಅನ್ನೋ ಭಯ ಸಿಬ್ಬಂದಿಯಲ್ಲಿ ಮನೆ ಮಾಡಿದೆ. ಕನಿಷ್ಠ ಈಗಲಾದ್ರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಬಾಂಗ್ಲಾದಲ್ಲಿ ನಿಯಂತ್ರಣಕ್ಕೆ ಬಾರದ ಹಿಂಸಾಚಾರ – ಕಂಡಲ್ಲಿ ಗುಂಡು ಹಾರಿಸಲು ಸೂಚನೆ

  • ರಾಜಸ್ಥಾನ ಸರ್ಕಾರಿ ಕಟ್ಟಡದಲ್ಲಿ 2.1 ಕೋಟಿ ರೂ. ಹಣ, 1 ಕೆಜಿ ಚಿನ್ನ ಪತ್ತೆ

    ರಾಜಸ್ಥಾನ ಸರ್ಕಾರಿ ಕಟ್ಟಡದಲ್ಲಿ 2.1 ಕೋಟಿ ರೂ. ಹಣ, 1 ಕೆಜಿ ಚಿನ್ನ ಪತ್ತೆ

    ಜೈಪುರ: ರಾಜಸ್ಥಾನದ (Rajasthan) ಜೈಪುರದಲ್ಲಿರುವ (Jaipur) ಸರ್ಕಾರಿ ಕಟ್ಟಡದ ಯೋಜನ ಭವನದ ನೆಲಮಾಳಿಗೆಯಲ್ಲಿ ಬೀಗ ಹಾಕಲಾಗಿದ್ದ ಕಪಾಟಿನಲ್ಲಿ 2.31 ಕೋಟಿ ರೂ.ಗೂ ಅಧಿಕ ನಗದು ಹಾಗೂ 1 ಕೆಜಿ ಚಿನ್ನ ಪತ್ತೆಯಾಗಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ನೆಲಮಾಳಿಗೆಗೆ (Basement) ಪ್ರವೇಶ ಹೊಂದಿರುವ ಯೋಜನಾ ಭವನದ ಏಳು ಉದ್ಯೋಗಿಗಳನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ಕಪಾಟಿನಲ್ಲಿ ಇರಿಸಲಾಗಿದ್ದ ಟ್ರಾಲಿ ಸೂಟ್‌ಕೇಸ್‌ನಲ್ಲಿ 2,000 ರೂ. ಹಾಗೂ 500 ರೂ. ಮುಖಬೆಲೆಯ ನೋಟುಗಳು ಪತ್ತೆಯಾಗಿದ್ದು, ಆರ್‌ಬಿಐ 2,000 ರೂ. ಕರೆನ್ಸಿ ಚಲಾವಣೆ ಹಿಂತೆಗೆದುಕೊಂಡ ದಿನ ಈ ಘಟನೆ ನಡೆದಿದೆ. ನಗದು ಹಾಗೂ ಚಿನ್ನವನ್ನು ವಶಪಡಿಸಿಕೊಂಡ ಪೊಲೀಸರು ಈ ಕುರಿತು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಅವರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: MIG-21 ಫೈಟರ್‌ ಜೆಟ್‌ ಹಾರಾಟ ಬಂದ್ – IAF ಮಹತ್ವದ ನಿರ್ಧಾರ

    ಮುಖ್ಯ ಕಾರ್ಯದರ್ಶಿ ಉಷಾ ಶರ್ಮಾ, ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಉಮೇಶ್ ಮಿಶ್ರಾ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ದಿನೇಶ್ ಎಂಎನ್ ಮತ್ತು ಜೈಪುರ ಕಮಿಷನರ್ ಆನಂದ ಶ್ರೀವಾಸ್ತವ ಅವರು ಶುಕ್ರವಾರ ತಡರಾತ್ರಿ ಸಚಿವಾಲಯದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೈಪುರ ಕಮೀಷನರ್ ಶ್ರೀವಾಸ್ತವ, ಕಪಾಟಿನಲ್ಲಿ ಅನೇಕ ಫೈಲ್‌ಗಳು ಮತ್ತು ಟ್ರಾಲಿ ಸೂಟ್‌ಕೇಸ್‌ನಲ್ಲಿ ಚಿನ್ನ ಮತ್ತು ನಗದು ತುಂಬಿದೆ ಎಂದು ಅಲ್ಲಿನ ನೌಕರರು ಅಶೋಕ್ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ ಎಂದರು. ಇದನ್ನೂ ಓದಿ: ಆರ್ಥಿಕ ತಜ್ಞ ಮೋದಿಯವರೇ 500 ನೋಟು ಹಿಂಪಡೆಯುತ್ತೀರಾ?: ಓವೈಸಿ ಪ್ರಶ್ನೆ

    ಇ-ಫೈಲಿಂಗ್ ಯೋಜನೆಯಡಿ ಕಡತಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಣಗೊಳಿಸಲಾಗುತ್ತಿದೆ. ಅಲ್ಲದೇ ಬೀಗ ಹಾಕಿದ್ದ ಎರಡು ಕಪಾಟುಗಳ ಕೀಗಳು ಪತ್ತೆಯಾದ ನಂತರ ಅವುಗಳನ್ನು ತೆರೆಯಲಾಗಿದೆ. ಏಳು ಮಂದಿ ನೌಕರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಸಂಪೂರ್ಣ ಪ್ರಕರಣದ ತನಿಖೆಯನ್ನು ಪ್ರಾರಂಭಿಸಿ ಸಂಪೂರ್ಣ ವಿಷಯವನ್ನು ಬಹಿರಂಗಪಡಿಸಲಾಗುವುದು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಪಾಕಿಸ್ತಾನದಿಂದ ಭಾರತಕ್ಕೆ ಡ್ರಗ್ಸ್ ಸಾಗಾಟ – ಎರಡು ಡ್ರೋನ್ ಹೊಡೆದುರುಳಿಸಿದ ಬಿಎಸ್‌ಎಫ್

    ನಗದು ಮತ್ತು ಚಿನ್ನವನ್ನು ವಶಪಡಿಸಿಕೊಂಡ ಕಪಾಟಿಗೆ ಹಲವು ತಿಂಗಳುಗಳಿಂದ ಬೀಗ ಹಾಕಲಾಗಿತ್ತು. ಆಧಾರ್-ಯುಐಡಿ-ಸಂಯೋಜಿತ ಸಿಬ್ಬಂದಿಯ ಸಹಾಯದಿಂದ ನೆಲಮಾಳಿಗೆಯನ್ನು ಪ್ರವೇಶಿಸಿದ ಪೊಲೀಸರು ನೆಲಮಾಳಿಗೆಗೆ ಪ್ರವೇಶವಿರುವ ಉದ್ಯೋಗಿಗಳನ್ನು ಈ ಕುರಿತು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: 2,000 ರೂ. ಮುಖಬೆಲೆಯ ನೋಟ್‌ ಬ್ಯಾನ್‌ ಮಾಡಿದ RBI

    ಯಾರ ಹಣ? ಹೇಗೆ ಬಂತು ಎಂದು ತನಿಖೆ ನಡೆಸುತ್ತಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ. ಈ ಘಟನೆಯ ಬಳಿಕ ಪ್ರತಿಪಕ್ಷವಾದ ಬಿಜೆಪಿ ಈ ವಿಷಯದ ಬಗ್ಗೆ ಕಾಂಗ್ರೆಸ್ ಸರ್ಕಾರವನ್ನು ಗುರಿಯಾಗಿಸಿದೆ. ವಿರೋಧ ಪಕ್ಷದ ನಾಯಕ ರಾಜೇಂದ್ರ ರಾಥೋಡ್, ಇದು ಗೆಹ್ಲೋಟ್ ಸರ್ಕಾರ ಭ್ರಷ್ಟಾಚಾರದ ರಕ್ಷಕ ಎಂಬುವುದಕ್ಕೆ ಸಾಕ್ಷಿಯಾಗಿದೆ ಎಂದು ತಮ್ಮ ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ ಯೋಜನಾ ಭವನಕ್ಕೆ ಇಷ್ಟು ದೊಡ್ಡ ಮೊತ್ತದ ನಗದು ಮತ್ತು ಚಿನ್ನ ಹೇಗೆ ತಲುಪಿತು ಎಂಬುದನ್ನು ಮುಖ್ಯಮಂತ್ರಿಗಳು ಉತ್ತರಿಸಬೇಕು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಷೇರು ವಿವಾದ; ಅದಾನಿ ಗ್ರೂಪ್‌ಗೆ ಸುಪ್ರೀಂ ಕೋರ್ಟ್ ಸಮಿತಿ ಕ್ಲೀನ್ ಚಿಟ್

  • ಸರ್ಕಾರಿ ಸಂಘವೇ ಇಸ್ಪೀಟ್ ಅಡ್ಡ- ಅಧಿಕಾರಿಗಳು, ನೌಕರರೇ ಜೂಜುಕೋರರು

    ಸರ್ಕಾರಿ ಸಂಘವೇ ಇಸ್ಪೀಟ್ ಅಡ್ಡ- ಅಧಿಕಾರಿಗಳು, ನೌಕರರೇ ಜೂಜುಕೋರರು

    ಹಾಸನ: ಸರ್ಕಾರಿ ಕೆಲಸ ದೇವರ ಕೆಲಸ ಅಂತಾರೆ. ಆದರೆ ದೇವರು-ಕೆಲಸ ಎಲ್ಲಾ ಪಕ್ಕಕಿರಲಿ. ಸರ್ಕಾರಿ ಕಟ್ಟಡದ ಗೌರವ ಉಳಿಸಿಕೊಂಡರೆ ಸಾಕಾಗಿದೆ. ಯಾಕೆಂದರೆ ಹಾಸನದ ಸರ್ಕಾರಿ ಸಂಘವೇ ಅಲ್ಲಿನ ಅಧಿಕಾರಿಗಳು, ನೌಕರರಿಗೆ ಇಸ್ಪೀಟ್ ಅಡ್ಡೆಯಾಗಿದೆ.

    ಆಯಕಟ್ಟಾದ ಸ್ಥಳ, ಹತ್ತಾರು ಟೇಬಲ್‍ಗಳು, ಒಂದು ಟೇಬಲ್‍ಗೆ ಇಷ್ಟು ಜನ ಎಂದು ಜೂಜುಕೋರರು ಕುಳಿತು, ಎಲ್ಲರು ಕೈಯಲ್ಲಿ ಇಸ್ಪೀಟ್ ಕಾರ್ಡ್ ಹಿಡಿದುಕೊಂಡಿರೋದನ್ನ ನೋಡಿದರೆ ಇದು ಯಾವುದೋ ಲೈಸೆನ್ಸ್ ಹೊಂದಿದ ಇಸ್ಪೀಟ್ ಕ್ಲಬ್ ಎಂದು ನೋಡುಗರಿಗೆ ಅನಿಸುತ್ತೆ. ಅಷ್ಟರ ಮಟ್ಟೆಗೆ ಹಾಸನದ ಜಿಲ್ಲಾ ನೌಕರರ ಸಂಘದ ಕಟ್ಟಡದ ಚಿತ್ರಣವನ್ನೇ ಸಿಬ್ಬಂದಿ ಬದಲಿಸಿದ್ದಾರೆ.


    ಇವರ ಜೂಜಾಟ ಯಾರಿಗೂ ಗೊತ್ತಿಲ್ಲದ ವಿಚಾರ ಏನಲ್ಲ. ಜಿಲ್ಲೆಯಾದ್ಯಂತ ವೈರಲ್ ಕೂಡ ಆಗಿವೆ. ಆದರೆ ಈ ಸರ್ಕಾರಿ ನೌಕರರು ಮಾತ್ರ ಯಾವುದಕ್ಕೂ ಕ್ಯಾರೆ ಮಾಡಲ್ಲ ಎನ್ನುವ ಹಾಗೆ ಇದ್ದಾರೆ. ಇಲ್ಲಿ ಪ್ರತಿನಿತ್ಯ 150 ರಿಂದ 200 ಮಂದಿ ಜೂಜು ಆಟದಲ್ಲಿ ತೊಡಗಿರುತ್ತಾರೆ. ಸಾವಿರ ಅಲ್ಲ ಲಕ್ಷಗಳ ಲೆಕ್ಕದಲ್ಲಿ ಇಲ್ಲಿ ಜೂಜು ನಡೆಯುತ್ತೆ. ಇಷ್ಟೆಲ್ಲಾ ಆಗುತ್ತಿದ್ದರು, ಒಬ್ಬ ಅಧಿಕಾರಿಯೂ ಕೂಡ ಈ ಬಗ್ಗೆ ತುಟಕ್ ಪಿಟಕ್ ಅನ್ನಲ್ಲ. ಯಾಕೆಂದರೆ ಇಲ್ಲಿ ಎಲ್ಲರಿಗೂ ಮಾಮೂಲಿ ಹೋಗುತ್ತೆ. ಆದ್ದರಿಂದ ಅವರೆಲ್ಲಾ ಸುಮ್ಮನೆ ನಮಗೆ ಬರೋ ಹಣ ಬರುತ್ತಲ್ಲ ಎಂದು ಕಣ್ಮುಚ್ಚಿ ಕುಳಿತಿದ್ದಾರೆ.

    ಈ ರೀತಿಯ ಆರೋಪಗಳು ಕೇಳಿ ಬರುತ್ತಿರುವುದು ಇದೇ ಮೊದಲೇನಲ್ಲ. 2018ರಲ್ಲಿ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿಗಳೇ ಈ ರೀತಿ ಜೂಜು ಅಡ್ಡೆಯ ಮೇಲೆ ರೇಡ್ ಮಾಡಿ ಹಲವರನ್ನು ಬಂಧಿಸಿ ಬೀಗ ಕೂಡ ಜಡಿದಿದ್ದರು. ಆದರೆ ಇದೀಗ ಮತ್ತೆ ಅದೇ ಹಳೇ ವರಸೆ ಶುರುವಾಗಿದೆ. ಮತ್ತೊಮ್ಮೆ ಇಸ್ಪೀಟ್ ಆಟ ಎಗ್ಗಿಲ್ಲದೆ ಸಾಗಿದ್ದು, ಇದೆಕ್ಕೆ ತಡೆಹಾಕಬೇಕಿದೆ. ಈಗಿನ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಗಳು ತಮ್ಮ ಇಚ್ಛಾಶಕ್ತಿ ಕೊರತೆಯನ್ನ ನೀಗಿಸಿಕೊಂಡು ಕ್ರಮ ತೆಗೆದುಕೊಂಡರೆ, ಸರ್ಕಾರಿ ಕಟ್ಟಡದ ಮರ್ಯಾದೆ ಆದರೂ ಉಳಿಯುತ್ತೆ.

  • ಸರ್ಕಾರಿ ಕಟ್ಟಡ ಸ್ವಚ್ಛ ಮಾಡ್ತಾರೆ: ಸಸಿ ನೆಟ್ಟು ಪೋಷಿಸ್ತಿದ್ದಾರೆ

    ಸರ್ಕಾರಿ ಕಟ್ಟಡ ಸ್ವಚ್ಛ ಮಾಡ್ತಾರೆ: ಸಸಿ ನೆಟ್ಟು ಪೋಷಿಸ್ತಿದ್ದಾರೆ

    ಶಿವಮೊಗ್ಗ: ಸರ್ಕಾರಿ ಕೆಲ್ಸ ದೇವರ ಕೆಲಸ ಅಂತ ಬಹುತೇಕರು ಕಚೇರಿಯ ನೈರ್ಮಲ್ಯೀಕರಣಕ್ಕೆ ಆದ್ಯತೆ ಕೊಡಲ್ಲ. ಆದ್ರೆ, ಇವತ್ತಿನ ನಮ್ಮ ಪಬ್ಲಿಕ್ ಹೀರೋ ಶಿವಮೊಗ್ಗದ ಬಸವಲಿಂಗಪ್ಪ ಅವರು ಸರ್ಕಾರಿ ಕಚೇರಿಗಳನ್ನ ಹುಡುಕಿ- ಹುಡುಕಿ ಸ್ವಚ್ಛಗೊಳಿಸ್ತಿದ್ದಾರೆ. ಈ ಮೂಲಕ ಅಧಿಕಾರಿಗಳನ್ನೂ ನಾಚಿಸುವಂತೆ ಮಾಡಿದ್ದಾರೆ.

    ಬಸವಲಿಂಗಪ್ಪ ಅವರು ಸರ್ಕಾರಿ ಕಚೇರಿಗಳಿಗೆ, ವಕೀಲರಿಗೆ ಇನ್ನಿತರರಿಗೆ ಸ್ಟಾಂಪ್‍ಪೇಪರ್ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ವಿಶ್ರಾಂತಿ ಪಡೆಯದೆ ಬೆಳಗಿನ ಜಾವ 5.30ಕ್ಕೆ ಶಿವಮೊಗ್ಗದ ಡಿಸಿ ಕಾಂಪ್ಲೆಕ್ಸ್‍ಗೆ ಬಂದು 9.30ರವರೆಗೂ ಕೋರ್ಟ್ ಕಾಂಪ್ಲೆಕ್ಸ್, ಜಯನಗರ ಪೊಲೀಸ್ ಠಾಣೆ, ಆರ್‍ಟಿಓ ಕಚೇರಿ ಸೇರಿ ಹಲವಾರು ಸರ್ಕಾರಿ ಕಚೇರಿಗಳ ಆವರಣ ಸ್ವಚ್ಛ ಮಾಡುತ್ತಾರೆ.

    ನಾನಿರುವ ಸ್ಥಳ ಸ್ವಚ್ಛವಾಗಿರಬೇಕು ಅಂತ ಬಯಸೋ ಬಸವಲಿಂಗಪ್ಪ ಅವರು ಕಳೆದ 3 ವರ್ಷಗಳಿಂದ ಈ ಕಾರ್ಯವನ್ನ ಮಾಡ್ತಾ ಬಂದಿದ್ದಾರೆ. ಅಷ್ಟೇ ಅಲ್ಲದೇ ಈ ಪ್ರದೇಶದಲ್ಲಿ 72 ವಿಶೇಷ ತಳಿಯ ಮಾವಿನ ಸಸಿಗಳನ್ನು ನೆಟ್ಟು, ಖಾಲಿ ಬಾಟಲಿಗಳಲ್ಲಿ ನೀರುಣಿಸಿ ಪೋಷಿಸುತ್ತಿದ್ದಾರೆ.

    ಬಸಲಿಂಗಪ್ಪರ ಪುತ್ರಿ ಅಮೆರಿಕದಲ್ಲಿದ್ರೆ, ಮಗ ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡಿದ್ದಾರೆ. ತಾವು ಬಾಡಿಗೆ ಮನೆಯಲ್ಲಿದ್ದರೂ ತಮ್ಮ ಕಾರ್ಯಕ್ಕೆ ಹಿನ್ನಡೆಯಾಗಿಲ್ಲ ಎಂದು ಬಸಲಿಂಗಪ್ಪ ಹೇಳುತ್ತಾರೆ.

    https://www.youtube.com/watch?v=DDx6g5NJFYY