Tag: ಸರ್ಕಾರಿ ಉದ್ಯೋಗ

  • ಪ್ರತಿ ಮನೆಯ ಒಬ್ಬರಿಗೆ ಸರ್ಕಾರಿ ಉದ್ಯೋಗ, 20 ತಿಂಗಳಲ್ಲಿ ಜಾರಿ: ತೇಜಸ್ವಿ ಯಾದವ್ ಘೋಷಣೆ

    ಪ್ರತಿ ಮನೆಯ ಒಬ್ಬರಿಗೆ ಸರ್ಕಾರಿ ಉದ್ಯೋಗ, 20 ತಿಂಗಳಲ್ಲಿ ಜಾರಿ: ತೇಜಸ್ವಿ ಯಾದವ್ ಘೋಷಣೆ

    – ಚುನಾವಣೆಗೆ ಆರ್‌ಜೆಡಿಯಿಂದ ಭರ್ಜರಿ ಕೊಡುಗೆ
    – ಬಿಹಾರದಲ್ಲಿ ಮುಂದುವರಿದ ಸೀಟು ಹಂಚಿಕೆ ಕಸರತ್ತು

    ಪಾಟ್ನಾ: ಬಿಹಾರ ವಿಧಾನಸಭೆಗೆ (Bihar Assembly Elections) ದಿನಾಂಕ ಘೋಷಣೆಯಾದ ಬೆನ್ನಲ್ಲೇ ಒಂದು ಕಡೆ ಸೀಟು ಹಂಚಿಕೆ ಲೆಕ್ಕಚಾರಗಳು ನಡೆಯುತ್ತಿದ್ದರೆ ಮತ್ತೊಂದು ಕಡೆ ಭರಪೂರ ಕೊಡುಗೆಗಳ ಘೋಷಣೆ ಆರಂಭವಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಇಂಡಿಯಾ ಮಹಾಘಟಬಂಧನ್ ಅಧಿಕಾರಕ್ಕೆ ಬಂದರೆ, ಬಿಹಾರದ ಪ್ರತಿ ಮನೆಯಿಂದ ಒಬ್ಬ ವ್ಯಕ್ತಿಗೆ ಸರ್ಕಾರಿ ಉದ್ಯೋಗ (Government Job) ನೀಡಲಾಗುವುದು ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ (Tejashwi Yadav) ಭರವಸೆ ನೀಡಿದ್ದಾರೆ.

    ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂಡಿಯಾ ಮೈತ್ರಿಕೂಟ ಸರ್ಕಾರ ರಚಿಸಿದ 20 ದಿನಗಳಲ್ಲಿ ಉದ್ಯೋಗ ಖಾತರಿಪಡಿಸುವ ಹೊಸ ಕಾನೂನನ್ನು ಪರಿಚಯಿಸಲಾಗುವುದು ಎಂದು ಹೇಳಿದರು. ಅಧಿಕಾರ ವಹಿಸಿಕೊಂಡ 20 ತಿಂಗಳೊಳಗೆ ಈ ಯೋಜನೆಯನ್ನು ರಾಜ್ಯಾದ್ಯಂತ ಸಂಪೂರ್ಣವಾಗಿ ಜಾರಿಗೆ ತರಲಾಗುವುದು. 20 ತಿಂಗಳಲ್ಲಿ ಒಂದೇ ಒಂದು ಮನೆಯೂ ಸರ್ಕಾರಿ ಉದ್ಯೋಗವಿಲ್ಲದೆ ಇರುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಆಸ್ತಿ ಕಲಹ – ಪತಿಯ ಕಾರಿಗೆ ಬೆಂಕಿ ಇಟ್ಟ ಪತ್ನಿ

    ಭರವಸೆಗೆ ದತ್ತಾಂಶ ಬೆಂಬಲವಿದೆ, ಇದು ನನ್ನ ಪ್ರತಿಜ್ಞೆ. ಇದನ್ನು ಮಾಡಲು ಸಾಧ್ಯವಿದೆ. ಇದು ಜುಮ್ಲೆಬಾಜಿ ಅಲ್ಲ. ಬಿಹಾರದ ಜನರು ಈ ಬಾರಿ ಬದಲಾವಣೆಯನ್ನು ಬಯಸುತ್ತಿದ್ದಾರೆ. ಸಾಮಾಜಿಕ ನ್ಯಾಯದ ಜೊತೆಗೆ, ನಾವು ಬಿಹಾರದ ಜನರಿಗೆ ಆರ್ಥಿಕ ನ್ಯಾಯವನ್ನು ಸಹ ಖಚಿತಪಡಿಸುತ್ತೇವೆ. ಇದನ್ನು ಸಾಧಿಸಬಹುದು, ಇದಕ್ಕೆ ದೃಢಸಂಕಲ್ಪ ಮಾತ್ರ ಬೇಕಾಗುತ್ತದೆ. ಎನ್‌ಡಿಎ ನಮ್ಮ ಘೋಷಣೆಗಳನ್ನು ನಕಲಿಸಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಟೇಕಾಫ್‌ ಆದ ಕೆಲವೇ ಹೊತ್ತಲ್ಲಿ ಸ್ಕಿಡ್‌ ಆಗಿ ಹುಲ್ಲಿನ ಮೇಲೆ ಬಿದ್ದ ಪ್ರೈವೆಟ್ ಜೆಟ್‌

    ಈ ನಡುವೆ ಎನ್‌ಡಿಎ ಒಕ್ಕೂಟದಲ್ಲಿ ಸೀಟು ಹಂಚಿಕೆಗೆ ತಿಕ್ಕಾಟ ನಡೆಯುತ್ತಿದೆ. ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ರಾಷ್ಟ್ರೀಯ ಅಧ್ಯಕ್ಷ ಚಿರಾಗ್ ಪಾಸ್ವಾನ್ 40ರಿಂದ 50 ಸ್ಥಾನಗಳಲ್ಲಿ ಸ್ಪರ್ಧಿಸಲು ಬಯಸಿದ್ದು, ಬಿಜೆಪಿ ಅವರಿಗೆ ಸುಮಾರು 20 ಸ್ಥಾನಗಳನ್ನು ನೀಡಲು ನಿರ್ಧರಿಸಿದೆ. ಆದರೆ ಇದಕ್ಕೆ ಚಿರಾಗ್ ಪಾಸ್ವಾನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಮಾತನಾಡಿರುವ ಚಿರಾಗ್ ಪಾಸ್ವಾನ್, ಮಾತುಕತೆ ನಡೆಯುತ್ತಿವೆ. ಕೇಂದ್ರ ಸಚಿವರಾಗಿ ಉಳಿಯುವವರೆಗೆ ಸಚಿವಾಲಯದ ಜವಾಬ್ದಾರಿಗಳು ನನಗಿರುತ್ತವೆ, ಅದನ್ನು ಮಾಡುತ್ತಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಅನ್ನಭಾಗ್ಯ | 5 ಕೆಜಿ ಅಕ್ಕಿ ಬದಲು ʻಇಂದಿರಾ ಆಹಾರ ಕಿಟ್‌ʼ

    ಸೀಟು ಹಂಚಿಕೆ ಬಿಕ್ಕಟ್ಟನ್ನು ಪರಿಹರಿಸುವ ಪ್ರಯತ್ನದಲ್ಲಿ ಬಿಜೆಪಿ ಪ್ರಯತ್ನ ಮಾಡುತ್ತಿದೆ. ಎಲ್‌ಜೆಪಿ ನಾಯಕ ಚಿರಾಗ್ ಅವರನ್ನು ಕೇಂದ್ರ ಸಚಿವ ನಿತ್ಯಾನಂದ ರೈ ಭೇಟಿಯಾಗಿದ್ದಾರೆ. ಇದಕ್ಕೂ ಮೊದಲು, ಬಿಹಾರ ಚುನಾವಣೆಗೆ ಬಿಜೆಪಿಯ ಉಸ್ತುವಾರಿ ವಹಿಸಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಮಂಗಳವಾರ ಪಾಸ್ವಾನ್ ಅವರನ್ನು ಭೇಟಿಯಾಗಿದ್ದರು. ಅವರೊಂದಿಗೆ ಬಿಹಾರ ಸಚಿವ ಮಂಗಲ್ ಪಾಂಡೆ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಇದ್ದರು. ಇದನ್ನೂ ಓದಿ: ಬಿಗ್ ಬಾಸ್‌ಗೆ ಬೀಗ ಹಾಕಿದ್ದಕ್ಕೂ `ನಟ್ಟು ಬೋಲ್ಟ್’ ಹೇಳಿಕೆಗೂ ಸಂಬಂಧವಿಲ್ಲ: ಶಿವರಾಜ್ ತಂಗಡಗಿ

    ಈ ನಡುವೆ ಕಾಂಗ್ರೆಸ್ ಕೇಂದ್ರೀಯ ಚುನಾವಣಾ ಸಮಿತಿ ಸಭೆ ನಡೆಸಿದ್ದು, 20-30 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿದೆ. ಆದರೆ ಇಂಡಿಯಾ, ಎನ್‌ಡಿಎ ಸೀಟು ಹಂಚಿಕೆ ಕಸರತ್ತು ಮುಗಿದ ಬಳಿಕ ಅಭ್ಯರ್ಥಿಗಳ ಹೆಸರು ಘೋಷಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಛಲವಾದಿ ನಾರಾಯಣಸ್ವಾಮಿ ಕರ್ನಾಟಕದ ಅಪ್ರಬುದ್ಧ ವಿರೋಧ ಪಕ್ಷದ ನಾಯಕ: ಪ್ರದೀಪ್ ಈಶ್ವರ್

  • ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ನ್ಯೂಸ್- ನೇಮಕಾತಿಗಳಲ್ಲಿ 3 ವರ್ಷ ವಯೋಮಿತಿ ಸಡಿಲಿಕೆ

    ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ನ್ಯೂಸ್- ನೇಮಕಾತಿಗಳಲ್ಲಿ 3 ವರ್ಷ ವಯೋಮಿತಿ ಸಡಿಲಿಕೆ

    ಬೆಂಗಳೂರು: ಸರ್ಕಾರಿ ಉದ್ಯೋಗಾಕಾಂಕ್ಷಿ ಯುವಕರಿಗೆ ರಾಜ್ಯ ಸರ್ಕಾರ ದಸರಾ ಗಿಫ್ಟ್ ನೀಡಿದೆ. ರಾಜ್ಯ ಸರ್ಕಾರದ ಸಿವಿಲ್ ನೇರ ನೇಮಕಾತಿಗಳಲ್ಲಿ 3 ವರ್ಷಗಳ ವಯೋಮಿತಿ ಸಡಿಲಿಕೆ ಮಾಡಿ ಮಹತ್ವದ ಆದೇಶ ಹೊರಡಿಸಲಾಗಿದೆ.

    ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳಿಗೂ ಒಂದು ಬಾರಿಗೆ ಅನ್ವಯವಾಗುವಂತೆ 3 ವರ್ಷಗಳ ವಯೋಮಿತಿ ಸಡಿಲಿಕೆ ಮಾಡಿ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ. ಇತ್ತೀಚೆಗೆ ಧಾರವಾಡದಲ್ಲಿ ಯುವ ಸಮೂಹ 5 ವರ್ಷಗಳ ವಯೋಮಿತಿ ಸಡಿಲಿಕೆ ಹಾಗೂ ಪಿಎಸ್‌ಐ/ಕಾನ್ಸಟೇಬಲ್ ಹುದ್ದೆಗಳಿಗೆ ನೇಮಕಾತಿ ಆದೇಶಕ್ಕೆ ಆಗ್ರಹಿಸಿ ಜೆನ್ ಜಿ ಮಾದರಿಯಲ್ಲಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ರು. ಇದರ ಮಧ್ಯೆ ಇದೇ ತಿಂಗಳ 6ರಂದು ರಾಜ್ಯ ಸರ್ಕಾರ ಸಿವಿಲ್ ಹುದ್ದೆಗಳ ನೇರ ನೇಮಕಾತಿಗಳಿಗೆ 2 ವರ್ಷ ಸಡಿಲಿಕೆ ಮಾಡಿ ಆದೇಶಿಸಿತ್ತು.

    ಈಗ 5 ವರ್ಷ ವಯೋಮಿತಿ ಸಡಿಲಿಕೆ ಮಾಡುವಂತೆ ಜನಪ್ರತಿನಿಧಿಗಳು, ಸಂಘಟನೆಗಳು ಸರ್ಕಾರದ ಮೇಲೆ ಒತ್ತಡ ಹಾಕಿದ ಪರಿಣಾಮ ಸರ್ಕಾರ ಇದೀಗ 3 ವರ್ಷಗಳ ಸಡಿಲಿಕೆ ಮಾಡಿದೆ. ಈ ವಯೋಮಿತಿ ಸಡಿಲಿಕೆ 2027 ರ ಡಿಸೆಂಬರ್ 31ರೊಳಗೆ ಸರ್ಕಾರ ಹೊರಡಿಸುವ ಎಲ್ಲ ನೇರ ನೇಮಕಾತಿಗಳಿಗೂ ಒಂದು ಬಾರಿ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೂ ಅನ್ವಯಿಸಲಿದೆ.

    2019ರಿಂದಲೂ ಕೋವಿಡ್ ಹಾಗೂ ಮತ್ತಿತರೆ ಕಾರಣಗಳಿಂದ ನೇರನೇಮಕಾತಿಗಳಿಗೆ ಸರ್ಕಾರ ಅಧಿಸೂಚನೆ ಹೊರಡಿಸಲಿಲ್ಲ. ಪಿಎಸ್‌ಐ ಹಾಗೂ ಕಾನ್‌ಸ್ಟೇಬಲ್‌ ಹುದ್ದೆಗಳಿಗೆ ಪರೀಕ್ಷೆ ನಡೆಸಿತ್ತಿದ್ದಾರೂ ನೇಮಕಾತಿ ಆದೇಶ ಇನ್ನೂ ನೀಡಿಲ್ಲ. ಇದರಿಂದ ಸರ್ಕಾರಿ ಕೆಲಸವನ್ನೇ ನೆಚ್ಚಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿಕೊಂಡಿರುವ ಲಕ್ಷಾಂತರ ಯುವಕರು ವಯೋಮಿತಿ ಮೀರುತ್ತಿರುವ ಹಿನನೆಲೆಯಲ್ಲಿ ಆತಂಕಗೊಂಡಿದ್ದರು.

    ವಯೋಮಿತಿ ಸಡಿಲಿಕೆ ಎಷ್ಟು?
    * ಸಾಮಾನ್ಯ ವರ್ಗ – 35 ವರ್ಷದಿಂದ 38 ವರ್ಷ
    * ಒಬಿಸಿ – 38 ವರ್ಷದಿಂದ 41 ವರ್ಷ
    * ಎಸ್‌ಸಿ/ಎಸ್‌ಟಿ/ಪ್ರವರ್ಗ-1 – 40 ವರ್ಷದಿಂದ 43 ವರ್ಷ

  • ಆಕ್ಸಿಜನ್ ದುರಂತ ಸಂತ್ರಸ್ತರಿಗೆ ಶೀಘ್ರದಲ್ಲೇ ಸರ್ಕಾರಿ ಉದ್ಯೋಗ: ಸಚಿವ ವೆಂಕಟೇಶ್

    ಆಕ್ಸಿಜನ್ ದುರಂತ ಸಂತ್ರಸ್ತರಿಗೆ ಶೀಘ್ರದಲ್ಲೇ ಸರ್ಕಾರಿ ಉದ್ಯೋಗ: ಸಚಿವ ವೆಂಕಟೇಶ್

    ಚಾಮರಾಜನಗರ: ಆಕ್ಸಿಜನ್ ದುರಂತ (Chamarajanagar Oxygen Tragedy) ಸಂತ್ರಸ್ತರಿಗೆ ಅತಿ ಶೀಘ್ರದಲ್ಲೇ ಖಾಯಂ ನೇಮಕಾತಿ ಮಾಡುತ್ತೇವೆ ಎಂದು ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ವೆಂಕಟೇಶ್ (Venkatesh) ತಿಳಿಸಿದ್ದಾರೆ.

    ಸರ್ಕಾರದ ಪರಿಹಾರ ತಾರತಮ್ಯ ವಿಚಾರದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದೆ ಆಕ್ಸಿಜನ್ ದುರಂತ ನಡೆದಾಗ ಬಿಜೆಪಿ ಸರ್ಕಾರವಿತ್ತು, ಅವರು ಸರಿಯಾದ ರೀತಿ ಪರಿಹಾರ ಕೊಟ್ಟಿಲ್ಲ ಎಂದರು. ಈಗ ಕಾಲ್ತುಳಿತ ಪ್ರಕರಣದಲ್ಲಿ ಸತ್ತವರಿಗೆ ಕೊಟ್ಟ ರೀತಿಯಲ್ಲಿ ಅವರಿಗೆ ಪರಿಹಾರ ಕೊಡಲು ಆಗಲ್ಲ. ಅವರಿಗೆ ಸರ್ಕಾರಿ ಉದ್ಯೋಗ ಕೊಡುವ ಪ್ರಕ್ರಿಯೆ ನಡೆಯುತ್ತಿದೆ. ಶೀಘ್ರದಲ್ಲಿ ಅವರಿಗೆ ಸರ್ಕಾರಿ ಉದ್ಯೋಗ ಸಿಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಮೂವರು ಅಧಿಕಾರಿಗಳನ್ನು ವಜಾಗೊಳಿಸಿ, ಇಲ್ದೆ ಇದ್ರೆ ಲೈಸನ್ಸ್‌ ರದ್ದು ಆಗುತ್ತೆ: ಏರ್‌ ಇಂಡಿಯಾಗೆ ಡಿಜಿಸಿಎ ಎಚ್ಚರಿಕೆ

    ಮನೆ ಮಂಜೂರು ಮಾಡಲು ಲಂಚ ನೀಡಬೇಕು ಎಂಬ ಆಡಿಯೋ ವೈರಲ್ ವಿಚಾರದ ಕುರಿತು ಪ್ರತಿಕ್ರಿಯಿಸಿ, ಬಿಆರ್ ಪಾಟೀಲ್ ಆಪಾದನೆ ಎಷ್ಟರ ಮಟ್ಟಿಗೆ ನಿಜ ಎಂಬ ಬಗ್ಗೆ ತನಿಖೆಯಾಗಬೇಕು. ಈಗಾಗಲೇ ವಸತಿ ಸಚಿವರು ನಮ್ಮಲ್ಲಿ ಆ ರೀತಿ ನಡೆದಿಲ್ಲ ಎಂದು ಸಿಎಂ ಭೇಟಿ ಮಾಡಿ ಸ್ಪಷ್ಟನೆ ನೀಡಿದ್ದಾರೆ ಎಂದರು. ಇದನ್ನೂ ಓದಿ: ಪಲ್ಟಿ ಹೊಡೆದು ಪಂತ್‌ ಶತಕ ಸಂಭ್ರಮ – ಧೋನಿ ರೆಕಾರ್ಡ್‌ ಬ್ರೇಕ್‌

    ತನಿಖೆ ಮಾಡಿಸಿ ಎಂದು ವಸತಿ ಸಚಿವರು ಸಿಎಂಗೆ ಹೇಳಿದ್ದಾರೆ. ಆ ರೀತಿ ಲಂಚ ನಡೆದಿದ್ದರೆ ಕ್ರಮ ತೆಗೆದುಕೊಳ್ಳುವುದಾಗಿ ಸಚಿವರು ಹೇಳಿದ್ದಾರೆ. ಈಗ ಮನೆಗಳನ್ನೇ ಕೊಡ್ತಿಲ್ಲ, ಮನೆಗಳನ್ನು ಎಲ್ಲಿಯೂ ಮಂಜೂರು ಮಾಡುತ್ತಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಮನೆ ಮಂಜೂರು ಮಾಡ್ತಿಲ್ಲ, ಹಳೇ ಸರ್ಕಾರದ ಬಾಕಿ ತೀರಿಸ್ತಾ ಇದ್ದೇವೆ ಎಂದರು. ಇನ್ನೂ ಅಕ್ರಮ ಗಣಿಗಾರಿಕೆ ಬಗ್ಗೆ ಸಚಿವ ಹೆಚ್.ಕೆ ಪಾಟೀಲ್ ಸಿಎಂಗೆ ಪತ್ರ ಬರೆದಿರುವ ವಿಚಾರದ ಕುರಿತು ನನಗೆ ಗೊತ್ತಿಲ್ಲ ಎಂದು ಜಾರಿಕೊಂಡರು. ಇದನ್ನೂ ಓದಿ: ಯೋಗ ದಿನದಲ್ಲಿ 51 ಪುಷ್‌-ಅಪ್‌ ಸಲೀಸಾಗಿ ಪೂರ್ಣಗೊಳಿಸಿದ ತ.ನಾಡು ರಾಜ್ಯಪಾಲ ರವಿ

  • ಪಹಲ್ಗಾಮ್‌ ದಾಳಿಯಲ್ಲಿ ಮೃತಪಟ್ಟ ನೌಕಾಪಡೆ ಅಧಿಕಾರಿಯ ಕುಟುಂಬಕ್ಕೆ 50 ಲಕ್ಷ ಪರಿಹಾರ, ಸರ್ಕಾರಿ ಉದ್ಯೋಗ ಘೋಷಣೆ

    ಪಹಲ್ಗಾಮ್‌ ದಾಳಿಯಲ್ಲಿ ಮೃತಪಟ್ಟ ನೌಕಾಪಡೆ ಅಧಿಕಾರಿಯ ಕುಟುಂಬಕ್ಕೆ 50 ಲಕ್ಷ ಪರಿಹಾರ, ಸರ್ಕಾರಿ ಉದ್ಯೋಗ ಘೋಷಣೆ

    ಚಂಡೀಗಢ: ಇದೇ ಏ.22ರಂದು ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ (Vinay Narwal) ಅವರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಮತ್ತು ಸರ್ಕಾರಿ ಉದ್ಯೋಗ ನೀಡುವುದಾಗಿ ಹರಿಯಾಣ ಸಿಎಂ ನಯಾಬ್ ಸಿಂಗ್ ಸೈನಿ (Nayab Singh Saini) ಘೋಷಣೆ ಮಾಡಿದ್ದಾರೆ.

    ಅಧಿಕೃತ ಹೇಳಿಕೆಯ ಪ್ರಕಾರ, ನರ್ವಾಲ್ ಅವರ ಪೋಷಕರ ಆಶಯದಂತೆ ಕುಟುಂಬದ ಯಾವುದೇ ಸದಸ್ಯರಿಗೆ ಈ ಕೆಲಸವನ್ನು ನೀಡಲಾಗುವುದು ಎಂದು ಸಿಎಂ ಸೈನಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಭಾರತ-ಪಾಕ್‌ ನಡುವಿನ ಉದ್ವಿಗ್ನತೆಯಿಂದ ಯುದ್ಧದ ಭೀತಿ – ಗಡಿಯಲ್ಲಿ ಬಂಕರ್‌ ಶುಚಿಗೊಳಿಸುವ ಕಾರ್ಯ ಚುರುಕು

    ಹರಿಯಾಣದ ಕರ್ನಾಲ್ ನಿವಾಸಿಯಾಗಿದ್ದ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಅಂತ್ಯಕ್ರಿಯೆಯನ್ನು ಏಪ್ರಿಲ್ 23 ರಂದು ನಡೆಸಲಾಯಿತು. ಹರಿಯಾಣ ಮುಖ್ಯಮಂತ್ರಿ ನಯಾಬ್ ಸೈನಿ ಕೂಡ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ:  ಕಾಶ್ಮೀರದ ಹಲವೆಡೆ ಭದ್ರತಾ ಸಿಬ್ಬಂದಿ ಭರ್ಜರಿ ಕಾರ್ಯಾಚರಣೆ – ಇದುವರೆಗೆ 175ಕ್ಕೂ ಹೆಚ್ಚು ಮಂದಿ ವಶಕ್ಕೆ

  • ಇನ್ಮುಂದೆ ರಾಜ್ಯದಲ್ಲಿ ಸರ್ಕಾರಿ ಉದ್ಯೋಗಗಳ ಪರೀಕ್ಷೆಗೆ ನೀಲಿ ಪೆನ್ನು ಕಡ್ಡಾಯ – ಕೆಪಿಎಸ್‌ಸಿ

    ಇನ್ಮುಂದೆ ರಾಜ್ಯದಲ್ಲಿ ಸರ್ಕಾರಿ ಉದ್ಯೋಗಗಳ ಪರೀಕ್ಷೆಗೆ ನೀಲಿ ಪೆನ್ನು ಕಡ್ಡಾಯ – ಕೆಪಿಎಸ್‌ಸಿ

    ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಕೆಪಿಎಸ್‌ಸಿ (KPSC)  ಮಹತ್ವದ ಆದೇಶವನ್ನು ಹೊರಡಿಸಿದ್ದು, ಈ ಮೂಲಕ ನೀಲಿ ಪೆನ್ನು ಬಳಕೆ ಕಡ್ಡಾಯಗೊಳಿಸಿದೆ.

    ಹೌದು, ಇನ್ಮುಂದೆ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಡ್ಡಾಯವಾಗಿ ನೀಲಿ ಬಣ್ಣದ ಬಾಲ್ ಪಾಯಿಂಟ್ ಪೆನ್ನು ಮಾತ್ರ ಬಳಸಬೇಕು. ಕೆಪಿಎಸ್‌ಸಿ ವ್ಯಾಪ್ತಿಯ ಎಲ್ಲಾ ಪರೀಕ್ಷೆಗಳನ್ನು ನೀಲಿ ಪೆನ್ನಿನಲ್ಲಿಯೇ ಬರೆಯಬೇಕು ಎಂದು ಸೂಚಿಸಿದೆ.ಇದನ್ನೂ ಓದಿ: ಫ್ಯಾನ್ಸ್‌ಗೆ ಗುಡ್ ನ್ಯೂಸ್- ಚೊಚ್ಚಲ ಸಿನಿಮಾ ಘೋಷಿಸಿದ ‘ಬಿಗ್ ಬಾಸ್’ ಖ್ಯಾತಿಯ ಮೋಕ್ಷಿತಾ

    ಫೆಬ್ರವರಿ 16 ರಿಂದ ನಡೆಯುವ ಎಲ್ಲಾ ಕೆಪಿಎಸ್‌ಸಿ ಪರೀಕ್ಷೆಗಳಲ್ಲಿ ನೀಲಿ ಬಣ್ಣದ ಪೆನ್ನು ಕಡ್ಡಾಯ. ಇಲ್ಲಿಯವರೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಪ್ಪು ಬಣ್ಣದ ಬಾಲ್ ಪಾಯಿಂಟ್ ಪೆನ್ನಿನಿಂದ ಪರೀಕ್ಷೆ ಬರೆಯಬಹುದು ಎಂದು ಅಭ್ಯರ್ಥಿಗಳಿಗೆ ಸೂಚಿಸಲಾಗುತ್ತಿತ್ತು. ಆದರೆ ಇದೀಗ ಸೂಚನೆಯಲ್ಲಿ ಮಾರ್ಪಾಡು ಮಾಡಿ, ಕಪ್ಪು ಬಣ್ಣದ ಪೆನ್ನನ್ನು ಬಳಸದಿರಲು ತಿಳಿಸಿದೆ.

    ಕೆಪಿಎಸ್‌ಸಿ ನಡೆಸುವ ಎಲ್ಲಾ ಪರೀಕ್ಷೆಗಳಲ್ಲಿ ಕಡ್ಡಾಯವಾಗಿ ನೀಲಿ ಬಣ್ಣದ ಪೆನ್ನು ಮಾತ್ರ ಬಳಸಬೇಕು ಎಂದು ಕರ್ನಾಟಕ ಲೋಕಸೇವಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.ಇದನ್ನೂ ಓದಿ: ಇಬ್ಬರ ಜಗಳ 3ನೇಯವರಿಗೆ ಲಾಭ; ಕಾಂಗ್ರೆಸ್‌-ಆಪ್‌ ಕಿತ್ತಾಟ ಬಿಜೆಪಿಗೆ ವರದಾನ ಆಗಿದ್ಹೇಗೆ?

  • ಭ್ರಷ್ಟಾಚಾರದ ವಿರುದ್ಧ ಸಮರ – ಉ.ಪ್ರದೇಶದ 13 ಲಕ್ಷಕ್ಕೂ ಹೆಚ್ಚು ಸರ್ಕಾರಿ ಉದ್ಯೋಗಿಗಳಿಗೆ ಆಗಸ್ಟ್‌ ಸಂಬಳ ಸಿಗಲ್ಲ

    ಭ್ರಷ್ಟಾಚಾರದ ವಿರುದ್ಧ ಸಮರ – ಉ.ಪ್ರದೇಶದ 13 ಲಕ್ಷಕ್ಕೂ ಹೆಚ್ಚು ಸರ್ಕಾರಿ ಉದ್ಯೋಗಿಗಳಿಗೆ ಆಗಸ್ಟ್‌ ಸಂಬಳ ಸಿಗಲ್ಲ

    ಲಕ್ನೋ: ಉತ್ತರ ಪ್ರದೇಶ (Uttara Pradesh) ಸರ್ಕಾರದ 13 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿಗೆ ಆಗಸ್ಟ್‌ ತಿಂಗಳ ವೇತನ (August Salary) ಪಾವತಿಯಾಗುವುದು ಅನುಮಾನ.

    ಭ್ರಷ್ಟಾಚಾರದ (Corruption) ವಿರುದ್ಧ ಸಮರ ಸಾರಿರುವ ಉತ್ತರ ಪ್ರದೇಶ ಸರ್ಕಾರ ಎಲ್ಲಾ ಸರ್ಕಾರಿ ಉದ್ಯೋಗಿಗಳು ತಮ್ಮ ಆಸ್ತಿ ವಿವರಗಳನ್ನು ಕಡ್ಡಾಯವಾಗಿ ಮಾನವ ಸಂಪದಾ ಪೋರ್ಟಲ್‌ನಲ್ಲಿ ಸಲ್ಲಿಸಬೇಕೆಂದು ಸೂಚಿಸಿದೆ.

    ಉದ್ಯೋಗಿಗಳು ಆಗಸ್ಟ್ 31 ರೊಳಗೆ ತಮ್ಮ ಆಸ್ತಿಯ ವಿವರವನ್ನು ಘೋಷಿಸಬೇಕು. ಒಂದು ವೇಳೆ ಘೋಷಿಸದೇ ತಿಂಗಳ ಸಂಬಳವನ್ನು ಪಾವತಿಸಲಾಗುವುದಿಲ್ಲ ಜೊತೆಗೆ ಬಡ್ತಿಯ ಮೇಲೂ ಇದು ಗಂಭೀರ ಪರಿಣಾಮ ಬೀರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.  ಇದನ್ನೂ ಓದಿ: ಅನಿಲ್‌ ಅಂಬಾನಿಗೆ ಸೆಬಿ ಶಾಕ್‌ – ಸೆಕ್ಯೂರಿಟೀಸ್‌ ಮಾರುಕಟ್ಟೆಯಿಂದ 5 ವರ್ಷ ಬ್ಯಾನ್‌, 25 ಕೋಟಿ ದಂಡ

    ಸರ್ಕಾರ ಈಗ ಹಿಂದೆ ಕಳೆದ ವರ್ಷದ ಡಿಸೆಂಬರ್‌ 31ಕ್ಕೆ ಗಡುವು ನೀಡಿತ್ತು. ನಂತರ ಹಲವು ಬಾರಿ ವಿಸ್ತರಣೆ ಮಾಡಿ ಈಗ ಆ.31 ರಂದು ಕೊನೆಯದಾಗಿ  ಡೆಡ್‌ಲೈನ್‌ ವಿಸ್ತರಿಸಿದೆ. ರಾಜ್ಯದಲ್ಲಿನ 17,88,429 ಸರ್ಕಾರಿ ನೌಕರರ ಪೈಕಿ 26% ಉದ್ಯೋಗಿಗಳು ಮಾತ್ರ ವೆಬ್‌ಸೈಟ್‌ನಲ್ಲಿ ವಿವರ ಸಲ್ಲಿಸಿದ್ದು ಇನ್ನೂ 13 ಲಕ್ಷಕ್ಕೂ ಹೆಚ್ಚು ನೌಕರರು ತಮ್ಮ ಆಸ್ತಿಯನ್ನು ಬಹಿರಂಗಪಡಿಸಬೇಕಿದೆ.

    ವರದಿಗಳ ಪ್ರಕಾರ ಹೊಸ ಗಡುವಿನ ಮೊದಲು ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸುವವರಿಗೆ ಮಾತ್ರ ಈ ತಿಂಗಳ ವೇತನವನ್ನು ಪಾವತಿಸಲಾಗುತ್ತದೆ. ಈ ನಿಯಮವು ಎಲ್ಲಾ ವರ್ಗದ ಅಧಿಕಾರಿಗಳು ಮತ್ತು ಉದ್ಯೋಗಿಗಳಿಗೆ ಅನ್ವಯಿಸುತ್ತದೆ . ಇದನ್ನೂ ಓದಿ: ಮೋದಿ ಉತ್ತರಾಧಿಕಾರಿ ಯಾರು? ಅಮಿತ್‌ ಶಾ, ಗಡ್ಕರಿ, ಯೋಗಿ.. ಯಾರಿಗೆ ಹೆಚ್ಚು ಜನರ ಒಲವು?

    ಈ ಕ್ರಮವು ಸರ್ಕಾರದೊಳಗೆ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಮತ್ತು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ನೇತೃತ್ವದಲ್ಲಿ ನಾವು ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣು ನೀತಿಯನ್ನು ಹೊಂದಿದ್ದೇವೆ ಎಂದು ಯುಪಿ ಸರ್ಕಾರದ ಸಚಿವ ಡ್ಯಾನಿಶ್ ಆಜಾದ್ ಅನ್ಸಾರಿ (Danish Azad Ansari) ಹೇಳಿದ್ದಾರೆ.

     

  • ಸರ್ಕಾರಿ ಉದ್ಯೋಗ ಸಿಗದೇ ನಿರಾಸೆ – ನೇಣುಬಿಗಿದುಕೊಂಡು ಯುವಕ ಆತ್ಮಹತ್ಯೆ

    ಸರ್ಕಾರಿ ಉದ್ಯೋಗ ಸಿಗದೇ ನಿರಾಸೆ – ನೇಣುಬಿಗಿದುಕೊಂಡು ಯುವಕ ಆತ್ಮಹತ್ಯೆ

    ರಾಯಚೂರು: ಸರ್ಕಾರಿ ಉದ್ಯೋಗ (Government Job) ಕೈತಪ್ಪಿದ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಡೆತ್ ನೋಟ್ ಬರೆದು ಯುವಕನೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಯಚೂರು (Raichur) ಜಿಲ್ಲೆಯ ದೇವದುರ್ಗದಲ್ಲಿ ನಡೆದಿದೆ.

    ಚಿಕ್ಕಬೂದೂರು ಗ್ರಾಮದ 25 ವರ್ಷದ ಯುವಕ ಚನ್ನಬಸವ ದೇವದುರ್ಗದ ಖಾಸಗಿ ಶಾಲೆಯ ಆವರಣದಲ್ಲಿರುವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ಹೊಸ ʻಎಲಿವೇಟೆಡ್ ವಾಕ್‌ವೇʼ ಆರಂಭ

    6 ರಿಂದ 8ನೇ ತರಗತಿ ಶಿಕ್ಷಕರ ಹುದ್ದೆ ನೇಮಕಾತಿ (Teacher Recruitment) ಮೊದಲ ಪಟ್ಟಿಯಲ್ಲಿ ಆಯ್ಕೆಯಾಗಿದ್ದ ಚನ್ನಬಸವನಿಗೆ ಕೊನೆಗೆ ಉದ್ಯೋಗ ಕೈತಪ್ಪಿತ್ತು. ಬಳಿಕ ಮತ್ತೊಂದು ಬಾರಿ ಸ್ಪರ್ಧಾತ್ಮಕ ಪರೀಕ್ಷೆ ಬರೆದಿದ್ದ ಚನ್ನಬಸವ, ಪರೀಕ್ಷೆಯಲ್ಲಿ ಫೇಲ್ ಆಗಿದ್ದ. ಪರೀಕ್ಷೆ ಪಾಸ್ ಮಾಡಲು ದೇವದುರ್ಗದಲ್ಲಿ ಪ್ರತ್ಯೇಕ ರೂಮ್ ಮಾಡಿಕೊಂಡು ತಯಾರಿ‌ ನಡೆಸಿದ್ದ. ಆದ್ರೆ ಮನನೊಂದು ಏಕಾಏಕಿ ಆಡಳಿತ ವ್ಯವಸ್ಥೆ ವಿರುದ್ಧ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ಕನ್ನಡ ಶಾಲೆಗೆ ಮಲಯಾಳಂ ಶಿಕ್ಷಕಿ ನೇಮಿಸಿದ್ದ ಕೇರಳ ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ – ಕನ್ನಡ ಶಿಕ್ಷಕರನ್ನೇ ನೇಮಿಸುವಂತೆ ಆದೇಶ

    ಎಲ್ಲರನ್ನು ನಾನು ಕ್ಷಮೆಯಾಚಿಸುತ್ತಾ. ನಾನು ತೆಗೆದುಕೊಂಡ ನಿರ್ಧಾರ ಸರಿಯೋ ತಪ್ಪೋ ಗೊತ್ತಿಲ್ಲ. ಆದ್ರೆ ನನ್ನ ಮನಸ್ಸು ಆತ್ಮ ನನ್ನನ್ನು ಅಗಲಿದ ಅನುಭವವಾಗುತ್ತಿದೆ. ಯಾರೋ ಮಾಡಿದ ತಪ್ಪಿಗೆ ವ್ಯವಸ್ಥೆ ನನಗೆ ಶಿಕ್ಷೆ ನೀಡಿದ ಆಡಳಿತ ವ್ಯವಸ್ಥೆಗೆ ನನ್ನ ಧಿಕ್ಕಾರವಿರಲಿ. ನನ್ನ ಸಾವಿಗೆ ನಾನೇ ಕಾರಣನಾಗಿರುತ್ತೇನೆ. ಮತ್ತಾರೂ ಕಾರಣರಲ್ಲ. ನನ್ನ ಉಳಿದ ಪತ್ರಗಳನ್ನು ನನ್ನ ಕುಟುಂಬಕ್ಕೆ ತಲುಪಿಸಿ ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದೇವದುರ್ಗ ಪೊಲೀಸ್ ಠಾಣೆಯಲ್ಲಿ (Devadurga Police Station) ಪ್ರಕರಣ ದಾಖಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸರ್ಕಾರಿ ಕೆಲಸಕ್ಕೆ iPhone ಬಳಕೆ ನಿಷೇಧಿಸಿದ ರಷ್ಯಾ

    ಸರ್ಕಾರಿ ಕೆಲಸಕ್ಕೆ iPhone ಬಳಕೆ ನಿಷೇಧಿಸಿದ ರಷ್ಯಾ

    ಮಾಸ್ಕೋ: ರಷ್ಯಾದ ಡಿಜಿಟಲ್ ಅಭಿವೃದ್ಧಿ ಸಚಿವಾಲಯವು ಸರ್ಕಾರಿ ಉದ್ಯೋಗಿಗಳು (Government Employees) ಕೆಲಸದ ಉದ್ದೇಶಗಳಿಗೆ ಆಪಲ್ ಐಫೋನ್ (iPhones) ಅಥವಾ ಐಪ್ಯಾಡ್ (iPads) ಬಳಸುವುದನ್ನ ನಿಷೇಧಿಸಿದೆ ಎಂದು ಸಚಿವ ಮಕ್ಸುತ್ ಶಾದೇವ್ ಹೇಳಿದ್ದಾರೆ.

    ಸರ್ಕಾರಿ ಕೆಲಸದ ಅಪ್ಲಿಕೇಷನ್‌ಗಳನ್ನ ಬಳಸಲು, ಇಮೇಲ್ ವಿನಿಮಯ ಮಾಡಿಕೊಳ್ಳುವುದಕ್ಕಾಗಿ ಐಫೋನ್ ಮತ್ತು ಐಪ್ಯಾಡ್ ಬಳಸದಂತೆ ಎಚ್ಚರಿಸಿದೆ. ಅಮೆರಿಕದ ಬೇಹುಗಾರಿಕೆ ಕಾರ್ಯಾಚರಣೆಯ ಪರಿಣಾಮವಾಗಿ ಆಪಲ್ ರಾಜಿ ಮಾಡಿಕೊಂಡಿದೆ ಎಂದು ರಷ್ಯಾದ ಭದ್ರತಾ ಸಂಸ್ಥೆ FSB ಹೇಳಿದ ಎರಡು ತಿಂಗಳ ನಂತರ ಈ ಬೆಳವಣಿಗೆ ಕಂಡುಬಂದಿದೆ. ಆದ್ರೆ ರಷ್ಯಾ ಭದ್ರತಾ ಸಂಸ್ಥೆಯ ಆರೋಪವನ್ನ ಅಮೆರಿಕ ತಳ್ಳಿಹಾಕಿದೆ.

    ಬೇಕಿದ್ದರೆ ವೈಯಕ್ತಿಕ ಅಗತ್ಯಗಳಿಗಾಗಿ ಐಫೋನ್ ಬಳಸಬಹುದು. ಆದ್ರೆ ಯಾವುದೇ ಕಾರಣಕ್ಕೂ ಸರ್ಕಾರಿ ಕೆಲಸಗಳಿಗೆ ಐಫೋನ್ ಬಳಸುವಂತಿಲ್ಲ ಎಂದು ಆದೇಶಿಸಿರುವುದಾಗಿ ಶಾವೇದ್ ತಿಳಿಸಿದ್ದಾರೆ. ಇದನ್ನೂ ಓದಿ: ರಕ್ಷಣಾ ಸಚಿವಾಲದ ಕಂಪ್ಯೂಟರ್‌ಗಳಲ್ಲಿ ಇನ್ನು Windows ಬದಲು ದೇಶೀ ನಿರ್ಮಿತ Maya OS

    ಈ ಹಿಂದೆ ಅಮೆರಿಕ ಬೇಹುಗಾರಿಕೆ ನಡೆಸುತ್ತಿದೆ, ಐಫೋನ್ ಮೂಲಕ ಕದ್ದಾಲಿಕೆ ಮಾಡುತ್ತಿದೆ ಎಂಬ ಸಂಶಯದ ಮೇಲೆ ಸರ್ಕಾರಿ ಉದ್ಯೋಗಿಗಳು ಐಫೋನ್ ಬಳಸದಂತೆ ಸಂಪೂರ್ಣ ನಿಷೇಧಿಸಿತ್ತು. ಇದೀಗ ವೈಯಕ್ತಿಕ ಬಳಕೆಗೆ ಅನುಮತಿ ನೀಡಿದೆ. ಇದನ್ನೂ ಓದಿ: ಭಾರತದ ಚಂದ್ರಯಾನ-3 ಉಡಾವಣೆ ಬೆನ್ನಲ್ಲೇ ಚಂದ್ರನೆಡೆಗೆ ಬಾಹ್ಯಾಕಾಶ ನೌಕೆಯನ್ನು ಕಳುಹಿಸಿದ ರಷ್ಯಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅತ್ಯಾಚಾರ ಆರೋಪಿಗಳಿಗೆ ಸರ್ಕಾರಿ ಉದ್ಯೋಗ ಕಟ್: ಅಶೋಕ್ ಗೆಹ್ಲೋಟ್

    ಅತ್ಯಾಚಾರ ಆರೋಪಿಗಳಿಗೆ ಸರ್ಕಾರಿ ಉದ್ಯೋಗ ಕಟ್: ಅಶೋಕ್ ಗೆಹ್ಲೋಟ್

    ಜೈಪುರ: ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯ ಪ್ರಕರಣಗಳಿಂದ ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿದ್ದ ರಾಜಸ್ಥಾನ ಸರ್ಕಾರ (Rajasthan Government) ಮಹತ್ವದ ಘೋಷಣೆ ಮಾಡಿದೆ. ರಾಜ್ಯದಲ್ಲಿ ಅತ್ಯಾಚಾರ ಆರೋಪಿಗಳು ಹಾಗೂ ಅಪರಾಧ ಕೃತ್ಯ ಹಿನ್ನೆಲೆ ಉಳ್ಳವರಿಗೆ ಸರ್ಕಾರಿ ಉದ್ಯೋಗ (Government Jobs) ನೀಡುವುದಿಲ್ಲ ಎಂದು ಘೋಷಣೆ ಮಾಡಿದೆ.

    ಮಹಿಳೆಯರ ವಿರುದ್ಧ ನಡೆಯುತ್ತಿರುವ ಅಪರಾಧ ಕೃತ್ಯಗಳನ್ನ ತಡೆಯಲು ಶಿಸ್ತು ಕ್ರಮದ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಬಾಲಕಿಯರು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರಕ್ಕೆ ಯತ್ನ ಇತರ ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರಿಗೆ ಸರ್ಕಾರಿ ಉದ್ಯೋಗ ನಿಷೇಧಿಸಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಅನರ್ಹತೆ ಆದೇಶ ವಾಪಸ್ ಬಳಿಕ ಮೊದಲ ಬಾರಿಗೆ ವಯನಾಡ್‌ಗೆ ಭೇಟಿ ನೀಡಲಿರುವ ರಾಗಾ

    ಅಪರಾಧ ಹಿನ್ನೆಲೆ ಉಳ್ಳವರನ್ನು ಪತ್ತೆ ಮಾಡಲು ಪೊಲೀಸ್ ಠಾಣೆಗಳಲ್ಲಿ ದಾಖಲೆಗಳನ್ನ ಪರಿಶೀಲಿಸಲಾಗುತ್ತಿದೆ. ರಾಜ್ಯದಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಪ್ರಕರಣಗಳ ಕುರಿತು ಬಿಜೆಪಿ ಆಡಳಿತ ಕಾಂಗ್ರೆಸ್ ಪಕ್ಷದ ಮೇಲೆ ಟೀಕಾ ಪ್ರಹಾರ ನಡೆಸುತ್ತಿರುವ ನಡುವೆ ಸರ್ಕಾರ ಈ ಘೋಷಣೆ ಮಾಡಿದೆ.

    ಇದೇ ಆಗಸ್ಟ್ 2ರಂದು ಬಿಲ್ವಾರ ಜಿಲ್ಲೆಯ ಕಲ್ಲಿದ್ದಲು ಕುಲುಮೆಯಲ್ಲಿ 4 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ಅತ್ಯಾಚಾರ ಎಸಗಿದ ಬಳಿಕ ಬಾಲಕಿಯನ್ನ ಕೊಲೆ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ಓರ್ವ ಮಹಿಳೆ ಸೇರಿ 7 ಜನರನ್ನ ಬಂಧಿಸಲಾಗಿದೆ. ಈ ಪ್ರಕರಣದ ಬಳಿಕ ಎಚ್ಚೆತ್ತುಕೊಂಡ ಸರ್ಕಾರ ಅಪರಾಧ ಕೃತ್ಯ ಹಿನ್ನೆಲೆ ಉಳ್ಳವರಿಗೆ ಸರ್ಕಾರಿ ಉದ್ಯೋಗ ನೀಡದಂತೆ ಸೂಚಿಸಿದೆ.

    ಬಿಲ್ವಾರಾ ಮತ್ತು ಜೋಧ್‌ಪುರದಂತಹ ಘಟನೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಅಪರಾಧ ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿರುವುದಾಗಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆಯನ್ನು ವಿರೋಧಿಸಿ ಕೇರಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಕಾಮನ್‍ವೆಲ್ತ್ ಪದಕ ಗೆದ್ದ ಕನ್ನಡಿಗರಿಗೆ ಸರ್ಕಾರಿ ಹುದ್ದೆ

    ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಕಾಮನ್‍ವೆಲ್ತ್ ಪದಕ ಗೆದ್ದ ಕನ್ನಡಿಗರಿಗೆ ಸರ್ಕಾರಿ ಹುದ್ದೆ

    ಬೆಂಗಳೂರು: ಕ್ರೀಡಾಪಟುಗಳಿಗೆ ನೇರ ನೇಮಕಾತಿಯಡಿ ಒಲಿಂಪಿಕ್ಸ್ (Olympics), ಏಷ್ಯನ್ ಗೇಮ್ಸ್ (Asian Games), ಕಾಮನ್‍ವೆಲ್ತ್ (Commonwealth Games) ಮತ್ತು ಪ್ಯಾರಾಲಿಂಪಿಕ್ಸ್‌ನಲ್ಲಿ (Paralympics) ಪದಕ ವಿಜೇತ ಕನ್ನಡಿಗರಿಗೆ ಸರ್ಕಾರಿ ಉದ್ಯೋಗ (Government Job) ನೀಡಲು ಸರ್ಕಾರ ನಿರ್ಧರಿಸಿದ್ದು, ಈ ಬಗ್ಗೆ ಸರ್ಕಾರ ಆದೇಶ ಹೊರಡಿಸಿದೆ.

    ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಕಾಮನ್ ವೆಲ್ತ್ ಮತ್ತು ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ವಿಜೇತರಿಗೆ ಗ್ರೂಪ್ ಎ, ಬಿ, ಸಿ, ಡಿ ಹುದ್ದೆಗಳಿಗೆ ನೇರ ನೇಮಕ ಮಾಡಲು ನಿಯಮಾವಳಿಗೆ ತಿದ್ದುಪಡಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದನ್ನೂ ಓದಿ: ಸ್ಟೇಡಿಯಂನಿಂದ ಮೈದಾನಕ್ಕೆ ಬಂದು ರೋಹಿತ್‍ರನ್ನು ತಬ್ಬಿಕೊಂಡ ಬಾಲಕ

    ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಕೆಲವು ಹುದ್ದೆಗಳಿಗೆ ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್, ಏಷ್ಯನ್ ಗೇಮ್ಸ್ ಮತ್ತು ಕಾಮನ್‍ವೆಲ್ತ್ ಗೇಮ್ಸ್‌ನಲ್ಲಿ ಪದಕ ವಿಜೇತರಿಗೆ ಅನ್ವಯ ವಾಗಲಿದ್ದು, ಸ್ನಾತಕ ಪದವಿಗಿಂತ ಕಡಿಮೆ ಶೈಕ್ಷಣಿಕ ವಿದ್ಯಾರ್ಹತೆಯನ್ನು ಹೊಂದಿದ ಪದಕ ವಿಜೇತರಿಗೂ ಅನ್ವಯವಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: IND vs NZ 2nd ODI: ರಾಯ್‍ಪುರದಲ್ಲಿ ಟೀಂ ಇಂಡಿಯಾಗೆ ರಾಜ ಮರ್ಯಾದೆ – ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಜಯದೊಂದಿಗೆ ಸರಣಿ ಕೈವಶ

    ಒಲಂಪಿಕ್ಸ್ ಹಾಗೂ ಪ್ಯಾರಾಲಂಪಿಕ್ಸ್ ಪದಕ ವಿಜೇತರಿಗೆ ಪದವೀಧರರಿಗೆ ಗ್ರೂಪ್-ಎ ಉದ್ಯೋಗ. ಏಷ್ಯನ್ ಗೇಮ್ಸ್ ಹಾಗೂ ಕಾಮನ್ ವೆಲ್ತ್ ಪದಕ ವಿಜೇತ ಪದವೀಧರರಿಗೆ ಗ್ರೂಪ್-ಬಿ ಉದ್ಯೋಗ, ಇದಕ್ಕಿಂತ ಕಡಿಮೆ ಸ್ತರದ ಕ್ರೀಡಾಕೂಟದ ಪದಕ ವಿಜೇತರಿಗೆ ಗ್ರೂಪ್-ಸಿ ಹಾಗೂ ಗ್ರೂಪ್-ಡಿ ಉದ್ಯೋಗ ನೀಡುವ ಭರವಸೆಯನ್ನು ಈ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k