Tag: ಸರ್ಕಾರಿ ಆಸ್ಪತ್ರೆ

  • ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ಇರದಂತೆ ನೋಡಿಕೊಳ್ಳಿ- ಛಲವಾದಿ ನಾರಾಯಣಸ್ವಾಮಿ

    ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ಇರದಂತೆ ನೋಡಿಕೊಳ್ಳಿ- ಛಲವಾದಿ ನಾರಾಯಣಸ್ವಾಮಿ

    ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ (Govt Hospitals) ಯಾವುದೇ ರೀತಿಯ ಔಷಧಿಗಳ ಕೊರತೆ ಎದ್ದು ಕಾಣದಂತೆ ರಾಜ್ಯ ಸರ್ಕಾರ ನೋಡಿಕೊಳ್ಳಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಆಗ್ರಹಿಸಿದ್ದಾರೆ.

    ಕೆಲವು ದೂರು ಬಂದ ಕಾರಣ ಇಂದು ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ಕೊಟ್ಟ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಅವರು ಮಾತನಾಡಿದರು. ಸುಮಾರು 75ರಷ್ಟು ಔಷಧಗಳು ಇಲ್ಲಿ ಸಿಗುತ್ತವೆ. ಉಳಿದವನ್ನು ಸರ್ಕಾರ ಒದಗಿಸಬೇಕಿದೆ. ಬಡವರಿಗೆ ಔಷಧಿ ಅಂಗಡಿಗಳಲ್ಲಿ ಹೋಗಿ ಕೊಳ್ಳುವ ಶಕ್ತಿ ಇರುವುದಿಲ್ಲ. ಇದನ್ನು ಸರ್ಕಾರ ಸೂಕ್ಷ್ಮವಾಗಿ ಗಮನಿಸಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಬಿಗ್ ಬಾಸ್‌ಗೆ 10 ದಿನ ಕಾಲಾವಕಾಶ; ನಮಗೆ ಯಾವುದೇ ರೀತಿ ಮನವಿ ಬಂದಿಲ್ಲ: ನರೇಂದ್ರಸ್ವಾಮಿ

    ವೈದ್ಯರ ಕೆಲವು ಕೊರತೆಗಳೂ ಎದ್ದು ಕಾಣುತ್ತವೆ, ಅವರನ್ನು ಕೇಳಿದ್ದೇನೆ. ಕೆಲವು ಭಾಗಗಳಲ್ಲಿ ಹಿರಿಯ ವೈದ್ಯರು ರೋಗಿಗಳನ್ನು ಸರಿಯಾಗಿ ನೋಡುವುದಿಲ್ಲ ಎಂಬ ದೂರುಗಳಿತ್ತು. ನಮ್ಮ ಮುತುವರ್ಜಿಯಲ್ಲೇ ಎಲ್ಲವೂ ನಡೆಯುತ್ತದೆ. ಎಂಬಿಬಿಎಸ್ ತರಬೇತಿಗೆ ಬಂದವರಿಗೆ ಪಾಠ ಹೇಳುವಾಗ ಜೊತೆಯಲ್ಲಿ ಇಟ್ಟುಕೊಳ್ಳುತ್ತೇವೆ. ನಾವೇ ಚಿಕಿತ್ಸೆ ಕೊಡುತ್ತೇವೆ ಎಂದಿದ್ದಾಗಿ ವಿವರಿಸಿದರು. ಇದನ್ನೂ ಓದಿ: Karur Stampede | ಸ್ವತಂತ್ರ ತನಿಖೆಗೆ ಕೋರಿ ಸುಪ್ರೀಂಗೆ ಟಿವಿಕೆ ಅರ್ಜಿ – ಅ.10ಕ್ಕೆ ವಿಚಾರಣೆ

    ತುಂಬಾ ಹಿರಿಯ ವೈದ್ಯರು ಕೆಲವೊಮ್ಮೆ ಇಲ್ಲಿಂದ ಬೇರೆ ಬೇರೆ ಆಸ್ಪತ್ರೆಗೆ ಹೊರಟು ಹೋಗುತ್ತಾರೆ. ಇದನ್ನು ಸರ್ಕಾರ ತಡೆಯಬೇಕಿದೆ. ಇಲ್ಲಿ ಬರುವ ಅನಾರೋಗ್ಯಪೀಡಿತರನ್ನು ಕಾಪಾಡುವುದು ಹಿರಿಯ ವೈದ್ಯರ ಕರ್ತವ್ಯ. ಅವರನ್ನು ಹೊರಗಡೆ ಹೋಗಲು ಬಿಡಬಾರದು. ವೈದ್ಯರ ಕೊರತೆ ಆಗದಂತೆ ಸರ್ಕಾರ ನೋಡಿಕೊಳ್ಳಬೇಕು. ನರ್ಸ್ ಮತ್ತಿತರ ಸಿಬ್ಬಂದಿ ಕೊರತೆ ಇದ್ದು ಅದನ್ನು ಸರಿಪಡಿಸುವ ಕೆಲಸ ಮಾಡಬೇಕು. ಕೆಲವು ಸಂದರ್ಭಗಳಲ್ಲಿ ಸ್ವಚ್ಛತೆಯ ಕೊರತೆ ಇದೆ. ಆ ಕಡೆ ಗಮನ ಕೊಡಬೇಕು. ಶುಶ್ರೂಷೆ ಕೊಡುವ ಜಾಗದಲ್ಲಿ ಸ್ವಚ್ಛತೆಯ ಕೊರತೆಯಿಂದ ರೋಗ ರುಜಿನಗಳು ಹರಡುವ ಹಾಗೆ ಆಗಬಾರದು ಎಂದು ತಿಳಿಸಿದರು. ಇದನ್ನೂ ಓದಿ: ಬಿಜೆಪಿ ನಾಯಕರು ರಾಜ್ಯದಲ್ಲಿ ಬೊಗಳೋದು ಬಿಟ್ಟು ದೆಹಲಿಗೆ ಹೋಗಿ ಬೊಗಳಲಿ: ಬೋಸರಾಜು

  • ವಾಣಿವಿಲಾಸ ಆಸ್ಪತ್ರೆಯಲ್ಲಿ ಔಷಧಗಳ ಕೊರತೆ – ಸಿಎಂ ಅವ್ರನ್ನೇ ಕೇಳಿ ಅಂತ ಸಿಬ್ಬಂದಿ ಉಡಾಫೆ!

    ವಾಣಿವಿಲಾಸ ಆಸ್ಪತ್ರೆಯಲ್ಲಿ ಔಷಧಗಳ ಕೊರತೆ – ಸಿಎಂ ಅವ್ರನ್ನೇ ಕೇಳಿ ಅಂತ ಸಿಬ್ಬಂದಿ ಉಡಾಫೆ!

    – ಅನಿವಾರ್ಯವಾಗಿ ಖಾಸಗಿ ಮೆಡಿಕಲ್‌ಗಳಲ್ಲಿ ಮೆಡಿಸಿನ್‌ ಖರೀದಿ ಮಾಡ್ತಿರೋ ರೋಗಿಗಳು

    ಬೆಂಗಳೂರು: ವಾಣಿವಿಲಾಸ ಸರ್ಕಾರಿ ಆಸ್ಪತ್ರೆಯಲ್ಲಿ (Vanivilas Government Hospital) ಮೆಡಿಸಿನ್ ಸಿಗದೇ ರೋಗಿಗಳು ಪರದಾಡ್ತಿದ್ದಾರೆ. ಯಾಕೆ ಶಾರ್ಟೆಜ್ ಅಂತ ಪ್ರಶ್ನಿಸಿದ್ರೆ ರೋಗಿಗಳಿಗೆ ಸಿಬ್ಬಂದಿ ಗದರಿಸ್ತಿದ್ದಾರೆ, ಸಿಎಂ ಅವರನ್ನೇ ಕೇಳಿ ಅಂತ ಉಡಾಫೆ ಉತ್ತರ ಕೊಡ್ತಿದ್ದಾರೆ. ಈ ಕರ್ಮಕಾಂಡ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಹೌದು. ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯಲ್ಲಿ ಮೆಡಿಸಿನ್ ಶಾರ್ಟೆಜ್ (Medicines Shortage) ಇದೆ. ಅಗತ್ಯ ಔಷಧಿಗಳು ಸಿಗದೇ ರೋಗಿಗಳು ಪರದಾಡ್ತಿದ್ದಾರೆ. ಅನಿವಾರ್ಯವಾಗಿ ಖಾಸಗಿ ಮೆಡಿಕಲ್‌ಗಳಲ್ಲಿ (Private Medical) ಕಾಸು ಕೊಟ್ಟು ಔಷಧ ಖರೀದಿ ಮಾಡ್ತಿದ್ದಾರೆ. ಆದ್ರೆ ಔಷಧ ಕೊಡಿ ಅಂತ ರೋಗಿಗಳು ಕೇಳಿದ್ರೆ ಖಾಲಿಯಾಗಿದೆ, ಸಿಎಂ ರನ್ನೇ ಕೇಳಿ ಅಂತ ಸಿಬ್ಬಂದಿ ಉಡಾಫೆ ಉತ್ತರ ನೀಡಿದ್ದಾರೆ. ದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೆ ಪುಂಡರ ಅಟ್ಟಹಾಸ – ಸಿಕ್ಕಸಿಕ್ಕ ಲಾರಿಗಳನ್ನ ಅಡ್ಡಹಾಕಿ ಲಾಂಗ್‌ ತೋರಿಸಿ ಹಣ ವಸೂಲಿ

    ಸಮಸ್ಯೆ ಆಗಿದ್ರೆ ಸರಿಪಡಿಸುವ ಕೆಲಸ ಮಾಡ್ತೇವೆ
    ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದಿಂದ ಔಷಧಿಗಳ ಪೂರೈಕೆಯಲ್ಲಿ ವ್ಯತ್ಯಯ ಆಗ್ತಿದೆ. ಇದರಿಂದ ವಾಣಿವಿಲಾಸ ಆಸ್ಪತ್ರೆಗೆ ಅಗತ್ಯ ಔಷಧಿಗಳು ಪೂರೈಕೆ ಆಗ್ತಿಲ್ಲ. ಕೆಲ ಮಾತ್ರೆಗಳು ಮಾತ್ರ ಸ್ಟಾಕ್ ಇದೆ ಎನ್ನಲಾಗ್ತಿದೆ. ಇನ್ನೂ ಈ ವಿಚಾರಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿ, ವೈದ್ಯಕೀಯ ಶಿಕ್ಷಣ ಸಚಿವರ ಜೊತೆ ಮಾತನಾಡಿ, ಸಮಸ್ಯೆ ಆಗಿದ್ರೆ ಮಾಹಿತಿ ಪಡೆದು ಸರಿಪಡಿಸುವ ಕೆಲಸ ಮಾಡಲಾಗುತ್ತೆ ಎಂದು ತಿಳಿಸಿದರು. ದನ್ನೂ ಓದಿ: ಮಲ್ಲೇಶ್ವರಂ | ಫರ್ನಿಚರ್ ಶಾಪ್‍ನಲ್ಲಿ ಭಾರೀ ಅಗ್ನಿ ಅವಘಡ – 5 ಕೋಟಿ ಮೌಲ್ಯದ ವಸ್ತುಗಳು ಭಸ್ಮ

    ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲಾ ಉಚಿತವಾಗಿ ಸಿಗುತ್ತೆ ಅಂತ ಆಸ್ಪತ್ರೆ ಆವರಣದಲ್ಲಿದ್ದ ಜನೌಷಧಿ ಕೇಂದ್ರಗಳನ್ನ ಮುಚ್ಚಿಸಿದ್ರು. ಈಗ ಆಸ್ಪತ್ರೆಯಲ್ಲಿ ಔಷಧಿಗಳೇ ಸಿಗ್ತಿಲ್ಲ. ಔಷಧಿ ಖರೀದಿಗೆ ಕರೆಯಲಾಗಿರುವ ಟೆಂಡರ್‌ ಕೂಡ ಅಂತಿಮ ಆಗಿಲ್ಲ. ಹೀಗಾಗಿ ಕೆಲ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಕೊರತೆ ಎದುರಿಸುವಂತಾಗಿದೆ. ದನ್ನೂ ಓದಿ: ದರ್ಶನ್ ಪತ್ನಿ ಮನೆಯಲ್ಲಿ 3 ಲಕ್ಷ ನಗದು ಕಳವು ಕೇಸ್‌ – ಹಣದ  ಮೂಲದ ಬಗ್ಗೆ ಮಾಹಿತಿ ಕೇಳಿದ ಪೊಲೀಸರು

  • ಇನ್ಮುಂದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗಲಿದೆ ಇಸ್ಕಾನ್‌ನ ರುಚಿಕರ, ಪೌಷ್ಟಿಕ ಆಹಾರ

    ಇನ್ಮುಂದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗಲಿದೆ ಇಸ್ಕಾನ್‌ನ ರುಚಿಕರ, ಪೌಷ್ಟಿಕ ಆಹಾರ

    ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಇಸ್ಕಾನ್‌ನ ‘ಪೌಷ್ಟಿಕ ಆಹಾರ’ ಯೋಜನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಮಂಗಳವಾರ ಚಾಲನೆ ನೀಡಿದರು. ಇನ್ಮುಂದೆ ಆಸ್ಪತ್ರೆಗಳಲ್ಲಿ ಇಸ್ಕಾನ್‌ನ (ISKCON) ರುಚಿಕರ ಹಾಗೂ ಆರೋಗ್ಯಕರ ಊಟ ಸಿಗಲಿದೆ.

    ಇಂದಿರಾನಗರದಲ್ಲಿರುವ ಸಿ.ವಿ.ರಾಮನ್ ನಗರ ಜನರಲ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಊಟ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಸಚಿವರು ಚಾಲನೆ ನೀಡಿದರು. ಸದ್ಯ ಕೆಸಿ ಜನರಲ್ ಆಸ್ಪತ್ರೆ, ಜಯನಗರ ಜನರಲ್ ಆಸ್ಪತ್ರೆ, ಸಿವಿ ರಾಮನ್ ಜನರಲ್ ಆಸ್ಪತ್ರೆಯಲ್ಲಿ ಇಸ್ಕಾನ್ ಊಟ ಸಿಗಲಿದೆ. ಸುಮಾರು 9 ತಿಂಗಳ ಅವಧಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅದಕ್ಕಾಗಿ 1.37 ಕೋಟಿ ರೂಪಾಯಿ ವೆಚ್ಚವಾಗಲಿದೆ. ಇದನ್ನೂ ಓದಿ: ಮೈಸೂರು ಅರಮನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ – ಸಂತಸ ವ್ಯಕ್ತಪಡಿಸಿದ ರಾಜಮಾತೆ

    ಏನೇನು ಆಹಾರ?
    ಸೋಮವಾರ
    ಬೆಳಗ್ಗೆ ಟಿಫನ್: ರವೆ ಉಪ್ಪಿಟ್ಟು, ಕಾಫಿ 100 ಎಂಲ್, ಬಾಳೆಹಣ್ಣು
    ಮಧ್ಯಾಹ್ನ ಊಟ: ರಾಗಿಮುದ್ದೆ, ಸಾಂಬಾರು, ಸೋಯಾ
    ಸಂಜೆ: ಟೀ – 70 ಎಂಎಲ್, ಬಿಸ್ಕೆಟ್
    ರಾತ್ರಿ ಊಟ: ಚಪಾತಿ, ವೆಜ್ ಪಲ್ಯ, ಮೊಟ್ಟೆ

    ಮಂಗಳವಾರ
    ಟಿಫನ್: ಬಾಳೆಹಣ್ಣು, ಕಾಫಿ
    ಮಧ್ಯಾಹ್ನ: ರಾಗಿ ಮುದ್ದೆ, ಸಾಂಬಾರ್, ಸೋಯಾ
    ಸಂಜೆ: ಟೀ ಬಿಸ್ಕೆಟ್
    ರಾತ್ರಿ ಊಟ – ಚಪಾತಿ, ಪಲ್ಯ, ಮೊಟ್ಟೆ

    ಬುಧವಾರ
    ಬೆಳ್ಳಗ್ಗೆ: ಪೊಂಗಲ್, ಕಾಫಿ,ಬಾಳೆ ಹಣ್ಣು
    ಮಧ್ಯಾಹ್ನ: ರಾಗಿಮುದ್ದೆ, ಸಾಂಬಾರ್ ಮೊಟ್ಟೆ,
    ಸಂಜೆ: ಟೀ ಬಿಸ್ಕೆಟ್
    ರಾತ್ರಿ: ಚಪಾತಿ, ಸೊಪ್ಪು, ಪಲ್ಯ, ಮೊಟ್ಟೆ, ಸಾಂಬಾರು

    ನಾಲ್ಕು ವರ್ಗದ ರೋಗಿಗಳಿಗೆ ಐದು ಮಾದರಿಯ ಪೌಷ್ಟಿಕ ಆಹಾರ ವಿತರಣೆ ಮಾಡಲಾಗುವುದು.
    1.ಜನರಲ್ ರೋಗಿಗಳಿಗೆ
    2.ಥೆರಪಿಸ್ಟ್
    3.ಬಾಣಂತಿಯರಿಗೆ ಬೇರೆ ಪೌಷ್ಠಿಕ ಆಹಾರ
    4.ಮಕ್ಕಳಿಗೆ ಬೇರೆ ರೀತಿಯ ಪೌಷ್ಠಿಕ ಆಹಾರ

    ಯೋಜನೆಗೆ ಚಾಲನೆ ಬಳಿಕ ದಿನೇಶ್ ಗುಂಡೂರಾವ್ ಮಾತನಾಡಿ, ಸಿ.ವಿ.ರಾಮನ್ ನಗರ ಆಸ್ಪತ್ರೆಯಲ್ಲಿ ಕ್ಯಾಥ್ ಲ್ಯಾಬ್ ಆರಂಭ ಮಾಡುವುದಾಗಿ ಘೋಷಣೆ ಮಾಡುತ್ತೇವೆ. ಮಂಗಳೂರು, ಹೋಸಕೋಟೆಯಲ್ಲಿ ಕೂಡ ಕ್ಯಾಥ್ ಲ್ಯಾಬ್ ಓಪನ್ ಮಾಡ್ತೇವೆ. ಮೂರು ಆಸ್ಪತ್ರೆಗಳಲ್ಲಿ ಪ್ರಾಯೋಗಿಕವಾಗಿ ಪೌಷ್ಟಿಕ ಆಹಾರ ವಿತರಣೆ ಮಾಡುತ್ತಿದ್ದೇವೆ. ಇದನ್ನು ಇನ್ನೂ ವಿಸ್ತರಣೆ ಮಾಡೋ ಬಗ್ಗೆ ಚಿಂತನೆ ಆಗ್ತಿದೆ. ಐದು ಥರದ ಪೌಷ್ಟಿಕ ಆಹಾರ ವಿತರಣೆ ಮಾಡ್ತಾ ಇದ್ದೇವೆ. ಬಾಣಂತಿಯರಿಗೆ ಒಂದು ಆಹಾರ ಕ್ರಮ, ಥೆರಪಿಸ್ಟ್ಗಳಿಗೆ ಒಂದು ಮಾದರಿಯ ಆಹಾರ ಕ್ರಮ, ಮಕ್ಕಳಿಗೆ ಒಂದು ರೀತಿಯ ಆಹಾರ ಕ್ರಮ ಜಾರಿ ಆಗ್ತಿದೆ. ನಮ್ಮ ಆಸ್ಪತ್ರೆಯಲ್ಲಿ ಪ್ರಾರಂಭ ಆಗಿರೋದು ನನಗೆ ಬಹಳ ಸಂತೋಷ ಮತ್ತು ತೃಪ್ತಿ ತಂದಿದೆ ಎಂದು ತಿಳಿಸಿದ್ದಾರೆ.

    ಮೊಟ್ಟೆ ಕೊಡದಿದ್ದರೂ ಪ್ರೋಟಿನ್ ಕಂಟೆಂಟ್ ಅನ್ನು ಕೊಡಬೇಕು. ಇದು ಪ್ರಥಮ ಹಂತದಲ್ಲಿ ಮೂರು ಆಸ್ಪತ್ರೆ. ಎಲ್ಲೆಲ್ಲಿ ಇಸ್ಕಾನ್ ಇದೆ, ಅಲ್ಲಿಯ ಜಿಲ್ಲಾ ಆಸ್ಪತ್ರೆಗಳಿಗೆ ವಿಸ್ತರಿಸೋದಕ್ಕೆ ತೀರ್ಮಾನ ಮಾಡುತ್ತೇವೆ. ಬೆಳಗಾವಿ, ಬಳ್ಳಾರಿ, ಧಾರವಾಡ, ಮೈಸೂರು ಹಲವು ಕಡೆ ವಿಸ್ತರಣೆ ಮಾಡುತ್ತೇವೆ. ಕೆ.ಆರ್ ಪುರಂ ಆಸ್ಪತ್ರೆಗೂ ವಿಸ್ತರಣೆಯನ್ನ ಮಾಡ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಜಣ್ಣ ಬಿಜೆಪಿಗೆ ಹೋಗಲು ಅರ್ಜಿ ಹಾಕಿದ್ದಾರೆ – ಬಾಲಕೃಷ್ಣ ಸ್ಫೋಟಕ ಹೇಳಿಕೆ

    ಮೂರು ಆಸ್ಪತ್ರೆಗಳಿಗೆ 9 ತಿಂಗಳಿಗೆ 1.45 ಕೋಟಿ ಭರಿಸಬೇಕು. ಈ ಮೂರು ಆಸ್ಪತ್ರೆ ಇಸ್ಕಾನ್ ಸುಪರ್ದಿಗೆ ಕೊಟ್ಟಿದ್ದೇವೆ. ಬಾಣಂತಿಯರು, ಗರ್ಭಿಣಿಯರಿಗೆ ಡಯಟ್ ಪ್ಲಾನ್ ಹಾಗೂ ಮಕ್ಕಳಿಗೆ ಪ್ರತ್ಯೇಕ ಡಯಟ್ ಪ್ಲಾನ್ ಇದೆ. ಇದು ಖಂಡಿತ ಯಶಸ್ಸು ಸಿಗುತ್ತೆ. ಒಂದೇ ತರಹದ ಆಹಾರ ಇರುತ್ತೆ. ಗುಣಮಟ್ಟ ನೋಡಿಕೊಳ್ಳೋದಕ್ಕೆ ಸಾಧ್ಯ ಆಗ್ತಾ ಇರಲಿಲ್ಲ. ಸಾಕಷ್ಟು ದೂರು ಬರ್ತಾ ಇತ್ತು. ಇಸ್ಕಾನ್ ಅವರಿಗೆ ಬಹಳಷ್ಟು ಅನುಭವ ಇದೆ. ನಮಗೆ ಖರ್ಚು ಕೂಡ ತುಂಬ ಆಗ್ತಾ ಇರಲಿಲ್ಲ. ಮೊಟ್ಟೆ ಬದಲು ಸೋಯಾ ಚಂಕ್ಸ್ ಕೊಡುತ್ತೇವೆ. ಪೂರ್ತಿ ಜವಾಬ್ದಾರಿ ಇಸ್ಕಾನ್ ಆಗಿರುವುದರಿಂದ ಪೌಷ್ಟಿಕಾಂಶ, ಸ್ವಚ್ಛತೆ ಇರಬೇಕು. ವಿತರಣೆ ಸಲಕರಣೆ ಎಲ್ಲಾ ಇಸ್ಕಾನ್ ಅವರದ್ದೇ. ಇಸ್ಕಾನ್ ಇರುವ ಕಡೆ ಈ ವ್ಯವಸ್ಥೆ ಮುಂದುವರಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

  • ಸರ್ಕಾರಿ ವೈದ್ಯಕೀಯ ಕಾಲೇಜು ವೈದ್ಯರ ಹಾಜರಾತಿಗೆ ಬಯೋ ಮೆಟ್ರಿಕ್ ವ್ಯವಸ್ಥೆ: ಶರಣು ಪ್ರಕಾಶ್ ಪಾಟೀಲ್

    ಸರ್ಕಾರಿ ವೈದ್ಯಕೀಯ ಕಾಲೇಜು ವೈದ್ಯರ ಹಾಜರಾತಿಗೆ ಬಯೋ ಮೆಟ್ರಿಕ್ ವ್ಯವಸ್ಥೆ: ಶರಣು ಪ್ರಕಾಶ್ ಪಾಟೀಲ್

    – ಬಯೋ ಮೆಟ್ರಿಕ್ ಆಧಾರದಲ್ಲಿ ವೇತನ ಪಾವತಿಗೆ ಪ್ಲ್ಯಾನ್‌

    ಬೆಂಗಳೂರು: ಜಿಲ್ಲಾ ಆಸ್ಪತ್ರೆಗಳಲ್ಲಿ ಸಂಯೋಜನೆಗೊಂಡಿರೋ ಸರ್ಕಾರಿ ವೈದ್ಯಕೀಯ ಕಾಲೇಜುಗಳ ವೈದ್ಯರ ಹಾಜರಾತಿಗೆ ಬಯೋ ಮೆಟ್ರಿಕ್ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಬಯೋ ಮೆಟ್ರಿಕ್ ಆಧಾರದಲ್ಲಿ ಸಂಬಳ ಪಾವತಿ ಮಾಡೋ ವ್ಯವಸ್ಥೆ ಜಾರಿ ಮಾಡೋದಾಗಿ ವೈದ್ಯಕೀಯ ಶಿಕ್ಷಣ ಸಚಿವ ಶರಣು ಪ್ರಕಾಶ್ ಪಾಟೀಲ್ (Sharan Prakash Patil) ತಿಳಿಸಿದರು.

    ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್‌ನ ಬಲ್ಕೀಸ್ ಬಾನು ಪ್ರಶ್ನಿಸಿದ ಅವರು, ಜಿಲ್ಲಾಸ್ಪತ್ರೆಗಳಲ್ಲಿ ಸಂಯೋಜನೆಗೊಂಡಿರುವ ಸರ್ಕಾರಿ ವೈದ್ಯಕೀಯ ಕಾಲೇಜುಗಳ ವೈದ್ಯರು ಸರಿಯಾಗಿ ಕೆಲಸಕ್ಕೆ ಹಾಜರಾಗುವುದಿಲ್ಲ. ಸೀನಿಯರ್ ಡಾಕ್ಟರ್‌ಗಳು, ಜ್ಯೂನಿಯರ್ ಡಾಕ್ಟರ್‌ಗಳಿಗೆ ಜವಾಬ್ದಾರಿ ಕೊಟ್ಟು ಅವರು ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡಲು ಹೋಗುತ್ತಾರೆ. ಖಾಸಗಿ ಆಸ್ಪತ್ರೆಯಲ್ಲಿ ಡಾಕ್ಟರ್‌ಗಳು ಪ್ರಾಕ್ಟೀಸ್ ಮಾಡ್ತಾರೆ. ನಮ್ಮ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಇಂತಹ ವ್ಯವಸ್ಥೆ ಇದೆ. ಇಂತಹ ವ್ಯವಸ್ಥೆ ಸರಿ ಮಾಡಬೇಕು. ಶಿವಮೊಗ್ಗದಲ್ಲಿ 100 ಬೆಡ್‌ನ ಪ್ರತ್ಯೇಕ ಜಿಲ್ಲಾಸ್ಪತ್ರೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಮಕ್ಕಳಲ್ಲೂ ಕಾಡ್ತಿದೆ ಮಾರಕ ಕ್ಯಾನ್ಸರ್ – ಅಂಕಿ ಅಂಶ ಬಿಚ್ಚಿಟ್ಟ ಶರಣು ಪ್ರಕಾಶ್ ಪಾಟೀಲ್

    ಪ್ರಶ್ನೆಗೆ ಉತ್ತರಿಸಿದ ಸಚಿವ ಶರಣು ಪ್ರಕಾಶ್ ಪಾಟೀಲ್ ಅವರು, ವೈದ್ಯರು ಕಡ್ಡಾಯವಾಗಿ ಆಸ್ಪತ್ರೆಗಳಲ್ಲಿ ಇರಬೇಕು ಎಂದು ಆದೇಶ ಮಾಡಲಾಗಿದೆ. ಬೆಳಗ್ಗೆ 9 ರಿಂದ ಸಂಜೆ 4 ಗಂಟೆವರೆಗೂ ಯಾವುದೇ ಡಾಕ್ಟರ್‌ಗಳು ಪ್ರಾಕ್ಟೀಸ್ ಮಾಡುವ ಹಾಗಿಲ್ಲ ಎಂದೆಲ್ಲಾ ಆದೇಶ ಮಾಡಲಾಗಿದೆ. ಹಾಜರಾತಿಗಾಗಿ ಎಲ್ಲಾ ವೈದ್ಯಕೀಯ ಕಾಲೇಜುಗಳಲ್ಲಿ ಬಯೋ ಮೆಟ್ರಿಕ್ ಅಳವಡಿಕೆ ಮಾಡಲಾಗಿದೆ. ವೈದ್ಯರು ದಿನಕ್ಕೆ 4 ಬಾರಿ ಬಯೋ ಮೆಟ್ರಿಕ್ ಮಾಡಬೇಕು. ಮುಂದಿನ ದಿನಗಳಲ್ಲಿ ಬಯೋ ಮೆಟ್ರಿಕ್ ಆಧಾರದಲ್ಲಿ ಸಂಬಳ ಬಿಡುಗಡೆ ಮಾಡುವ ವ್ಯವಸ್ಥೆ ಜಾರಿಗೆ ನಿರ್ಧಾರ ಮಾಡಲಾಗಿದೆ ಎಂದರು. ಇದನ್ನೂ ಓದಿ: ರಾಜ್ಯದ 6 ಜಿಲ್ಲೆಗಳಲ್ಲಿ 40ರ ಗಡಿದಾಟಿದ ತಾಪಮಾನ

    ಮೆಗ್ಗಾನ್ ಆಸ್ಪತ್ರೆಗಳಲ್ಲಿ ವೈದ್ಯರು ಲೋಪ ಮಾಡಿದರೆ ಅವರ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ. ಶಿವಮೊಗ್ಗದಲ್ಲಿ ಪ್ರತ್ಯೇಕ ಜಿಲ್ಲಾ ಆಸ್ಪತ್ರೆ ಬಗ್ಗೆ ಆರೋಗ್ಯ ಸಚಿವರು ಪರಿಶೀಲನೆ ಮಾಡುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಅನ್ಯಧರ್ಮದ ಯುವತಿಯರನ್ನು ಪ್ರೀತಿಸಿ ಮದುವೆಯಾಗಿ: ಹಿಂದೂ ಚಿಂತಕ ಚಕ್ರವರ್ತಿ ಸೂಲಿಬೆಲೆ ವಿವಾದದ ಮಾತು

  • ಡಿಸೇಲ್ ಇಲ್ಲದೆ ಅಂಬುಲೆನ್ಸ್ ಸೇವೆ ಸ್ಥಗಿತ – ಗ್ರಾಮಸ್ಥರ ತರಾಟೆ ಬಳಿಕ ಅಧಿಕಾರಿಗಳು ಅಲರ್ಟ್‌

    ಡಿಸೇಲ್ ಇಲ್ಲದೆ ಅಂಬುಲೆನ್ಸ್ ಸೇವೆ ಸ್ಥಗಿತ – ಗ್ರಾಮಸ್ಥರ ತರಾಟೆ ಬಳಿಕ ಅಧಿಕಾರಿಗಳು ಅಲರ್ಟ್‌

    ಮಂಡ್ಯ: ಡಿಸೇಲ್ ಇಲ್ಲದೆ ಅಂಬುಲೆನ್ಸ್ ಸೇವೆ ಸ್ಥಗಿತಗೊಳಿಸಿದ್ದ ಘಟನೆ ಮಂಡ್ಯದ (Mandya) ಕೆರೆಗೋಡು ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

    ಡಿಸೇಲ್ ಇಲ್ಲದೆ ಅಂಬುಲೆನ್ಸ್ ಸೇವೆ (Ambulance Service) ಸ್ಥಗಿತಗೊಂಡಿರುವುದು ಸರ್ಕಾರಿ ಆಸ್ಪತ್ರೆಯ (Government Hospital) ಮತ್ತೊಂದು ಅಧೋಗತಿಗೆ ಸಾಕ್ಷಿಯಾಗಿದೆ. ಇದನ್ನೂ ಓದಿ: ಮುಡಾ 50:50 ಸೈಟು ಹಗರಣ – ಜೆಡಿಎಸ್‌ ಶಾಸಕ ಜಿಟಿಡಿ, ಪುತ್ರ ಹರೀಶ್‌ ಗೌಡ ವಿರುದ್ಧ ಲೋಕಾಯುಕ್ತಕ್ಕೆ ದೂರು

    ಅಂಬುಲೆನ್ಸ್‌ ಮುಂಬದಿ ಗ್ಲಾಸ್ ಮೇಲೆ `ಡಿಸೇಲ್ ಇಲ್ಲದ ಕಾರಣ ಆಂಬುಲೆನ್ಸ್ ಸೇವೆ ಸ್ಥಗಿತ’ ಎಂದು ಆಸ್ಪತ್ರೆ ಸಿಬ್ಬಂದಿ ಪೋಸ್ಟ್ ಅಂಟಿಸಿದ್ದಾರೆ. ಈ ಪೋಸ್ಟರ್ ನೋಡಿದ ಗ್ರಾಮಸ್ಥರು ದಿಗ್ಬ್ರಾಂತರಾಗಿದ್ದಾರೆ. ಇದನ್ನೂ ಓದಿ: ಲೋನ್ ಕೊಡದೇ 10 ತಿಂಗಳು 4.20 ಲಕ್ಷ EMI ಕಟ್ಟಿಸಿಕೊಂಡ ಕಂಪನಿ – ಫೈನಾನ್ಸ್ ಮುಂದೆ ದಂಪತಿ ಪ್ರತಿಭಟನೆ

    ಸರ್ಕಾರದಲ್ಲಿ ಆಂಬುಲೆನ್ಸ್ಗೆ ಡಿಸೇಲ್ ಹಾಕಲೂ ದುಡ್ಡಿಲ್ವ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಮಹಾ ಕುಂಭಮೇಳ – ಬೆಂಗಳೂರು To ಪ್ರಯಾಗ್‌ರಾಜ್‌ ವಿಮಾನ ಟಿಕೆಟ್‌ ದರ ದುಬಾರಿಯೋ ದುಬಾರಿ

    ತರಾಟೆ ಬೆನ್ನೆಲ್ಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಕೊನೆಗೂ ಅಂಬುಲೆನ್ಸ್‌ಗೆ ಡಿಸೇಲ್ ಹಾಕಿ ಸೇವೆಗೆ ಅನುವು ಮಾಡಿಕೊಟ್ಟಿದ್ದಾರೆ.

  • ಗ್ಯಾರಂಟಿ ಎಫೆಕ್ಟ್‌-  ಸರ್ಕಾರಿ ಆಸ್ಪತ್ರೆಗಳ ರೋಗಿಗಳಿಗೆ ದರ ಏರಿಕೆ ಬಿಸಿ

    ಗ್ಯಾರಂಟಿ ಎಫೆಕ್ಟ್‌- ಸರ್ಕಾರಿ ಆಸ್ಪತ್ರೆಗಳ ರೋಗಿಗಳಿಗೆ ದರ ಏರಿಕೆ ಬಿಸಿ

    ಬೆಂಗಳೂರು: ಸರ್ಕಾರಿ ಆಸ್ಪತ್ರೆಯ (Govt Hospitals) ರೋಗಿಗಳಿಗೆ ದರ ಏರಿಕೆ ಬಿಸಿ ತಟ್ಟಿದೆ. ಉಚಿತ ಚಿಕಿತ್ಸೆ ಕೊಡುವ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆಗಳ (Medical Service) ದರ ಹೆಚ್ಚಳ ಆಗಿದೆ.

    ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ದರ ಏರಿಕೆ ಆಗಿದೆ. ಸರ್ಕಾರಿ ಸೇವೆಗಳ ದರ 10 ರಿಂದ 20% ದರ ಏರಿಕೆ ಆಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ (Victoria Hospital) ದರ ಏರಿಕೆ ಆಗಿರುವ ಬಗ್ಗೆ ನೋಟಿಸ್ ಹಾಕಿದ್ದಾರೆ. ಆಸ್ಪತ್ರೆಯ ಹೊರ ರೋಗಿ ವಿಭಾಗಗಳ ಮುಂದೆ ದರ ಏರಿಕೆ ಆಗಿದೆ ಎಂದು ನೋಟಿಸ್ ಅಂಟಿಸಲಾಗಿದೆ. ರಾಜ್ಯದ ಅತಿದೊಡ್ಡ ಆಸ್ಪತ್ರೆ ವಿಕ್ಟೋರಿಯಾದಲ್ಲಿ ದರ ಏರಿಕೆ ಆಗಿರೋದನ್ನು ಕಂಡು ರೋಗಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಗಳಲ್ಲಿ ಹೊಸ ಜನೌಷಧಿ ಕೇಂದ್ರಕ್ಕೆ ಅನುಮತಿ ನೀಡಲ್ಲ: ಶರಣ ಪ್ರಕಾಶ್‌ ಪಾಟೀಲ್‌

     

    ಯಾವ ಸೇವೆಯ ದರ ಎಷ್ಟು ಹೆಚ್ಚಳ?
    *ಓಪಿಡಿ ರಿಜಿಸ್ಟ್ರೇಷನ್ ಬುಕ್
    ಹಿಂದಿನ ದರ – 10 ರೂ.
    ಈಗಿನ ದರ – 20 ರೂ.
    ಹೆಚ್ಚಳ – 10 ರೂ.

    *ಒಳರೋಗಿ ಅಡ್ಮಿಷನ್
    ಹಿಂದಿನ ದರ – 25 ರೂ.
    ಈಗಿನ ದರ – 50 ರೂ.
    ಹೆಚ್ಚಳ – 25 ರೂ.

    *ರಕ್ತ ಪರೀಕ್ಷೆ
    ಹಿಂದಿನ ದರ – 70 ರೂ.
    ಈಗಿನ ದರ – 120 ರೂ.
    ಹೆಚ್ಚಳ – 50 ರೂ.

    *ವಾರ್ಡ್ ಚಾರ್ಜಸ್
    ಹಿಂದಿನ ದರ – 25 ರೂ.
    ಈಗಿನ ದರ – 50 ರೂ.
    ಹೆಚ್ಚಳ – 25 ರೂ.

    *ಆಸ್ಪತ್ರೆ ತ್ಯಾಜ್ಯ ನಿರ್ವಹಣೆ ದರ
    ಹಿಂದಿನ ದರ – 10 ರೂ.
    ಈಗಿನ ದರ – 50 ರೂ.
    ಹೆಚ್ಚಳ – 40 ರೂ.

  • ಬೀದರ್ | ಈಗ ಸರ್ಕಾರಿ ಆಸ್ಪತ್ರೆಯೂ ವಕ್ಫ್ ಆಸ್ತಿ!

    ಬೀದರ್ | ಈಗ ಸರ್ಕಾರಿ ಆಸ್ಪತ್ರೆಯೂ ವಕ್ಫ್ ಆಸ್ತಿ!

    ಬೀದರ್: ರೈತರ ಜಮೀನು ಆಯ್ತು, ಮಠ, ಮಂದಿರವಾಯ್ತು, ಐತಿಹಾಸಿಕ ಸ್ಮಾರಕಗಳೂ ಆಯ್ತು ಇದೀಗ ಸರ್ಕಾರಿ ಆಸ್ಪತ್ರೆಯ (Governmnet Hospital) ಮೇಲೂ ವಕ್ಫ್ ವಕ್ರದೃಷ್ಟಿ ಬಿದ್ದಿದೆ.

    ಬೀದರ್ (Bidar) ಜಿಲ್ಲೆಯ ಕಮಲಾನಗರ (Kamalanagar) ತಾಲೂಕಿನ ತೋರಣ (Torana) ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ವಕ್ಫ್ಗೆ ಸೇರ್ಪಡೆಯಾಗಿದ್ದು, ಗ್ರಾಮದ ಸರ್ವೇ ನಂಬರ್ 64ರ 4 ಎಕರೆ 29 ಗುಂಟೆ ಜಾಗ ಈಗ ವಕ್ಫ್ ಆಸ್ತಿಯಾಗಿದೆ.ಇದನ್ನೂ ಓದಿ: ಭಾರತದ ವಕ್ಫ್ ಆಸ್ತಿ ಪಾಕಿಸ್ತಾನದಷ್ಟಿದೆ: ಯತ್ನಾಳ್ ಆರೋಪ

    ಗ್ರಾಮಸ್ಥರೇ ದೇಣಿಗೆ ಸಂಗ್ರಹಿಸಿ ಆಸ್ಪತ್ರೆಗೆ ನೀಡಿದ್ದ ಜಾಗ ಈಗ ವಕ್ಫ್ಗೆ ಸೇರ್ಪಡೆಯಾಗಿದ್ದು, ರೋಗಿಗಳು ಹಾಗೂ ಗ್ರಾಮಸ್ಥರು ಕಂಗಾಲಾಗಿದ್ದಾರೆ. 2013ಕ್ಕೂ ಮೊದಲು ಈ ಜಾಗ ಸರ್ಕಾರಿ ಜಾಗವಾಗಿತ್ತು. ನಂತರ ಈ ಜಾಗ ವಕ್ಫ್ ಆಸ್ತಿಯಾಗಿದ್ದು ಹೇಗೆ ಎಂದು ಜನ ಪ್ರಶ್ನಿಸುತ್ತಿದ್ದಾರೆ.

    ರೋಗಿಗಳ ಪಾಲಿಗೆ ಸಂಜೀವಿನಿಯಾಗಿರುವ ಆಸ್ಪತ್ರೆ ಈಗ ವಕ್ಫ್ ಆಸ್ತಿಯಾಗಿದ್ದು, ಪ್ರತಿದಿನ ಆಸ್ಪತ್ರೆಗೆ ಬರುತ್ತಿದ್ದ ಮುಧೋಳ, ಚಾಂದೋರಿ, ಕೊಟಿಗ್ಯಾಳ ಸೇರಿದಂತೆ ಹತ್ತಾರು ಹಳ್ಳಿಯ ರೋಗಿಗಳಿಗೆ ಶಾಕ್ ನೀಡಿದೆ. ಈ ಕೂಡಲೇ ಪಹಣಿ ಬದಲಾವಣೆ ಮಾಡಿ ಇಲ್ಲವಾದರೆ ಸರ್ಕಾರ ಹಾಗೂ ವಕ್ಫ್ ಬೋರ್ಡ್ ವಿರುದ್ಧ ಉಗ್ರವಾದ ಹೋರಾಟ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.ಇದನ್ನೂ ಓದಿ: 370ನೇ ವಿಧಿ ಜಾರಿ ನಿರ್ಣಯ ಬೆಂಬಲಿಸಿ ಬ್ಯಾನರ್ ಪ್ರದರ್ಶನ- ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ತಾರಕಕ್ಕೇರಿದ ಗದ್ದಲ

  • ಕೋಲ್ಕತ್ತಾ ಆಸ್ಪತ್ರೆಯಲ್ಲಿ ಭಾರಿ ಬೆಂಕಿ ಅವಘಡ: ಐಸಿಯುನಲ್ಲಿದ್ದ ರೋಗಿ ಸಾವು

    ಕೋಲ್ಕತ್ತಾ ಆಸ್ಪತ್ರೆಯಲ್ಲಿ ಭಾರಿ ಬೆಂಕಿ ಅವಘಡ: ಐಸಿಯುನಲ್ಲಿದ್ದ ರೋಗಿ ಸಾವು

    – 20 ನಿಮಿಷದಲ್ಲಿ 80 ರೋಗಿಗಳ ರಕ್ಷಣೆ

    ಕೋಲ್ಕತ್ತಾ: ಕೋಲ್ಕತ್ತಾದ ಇಎಸ್‌ಐ ಆಸ್ಪತ್ರೆಯಲ್ಲಿ (ESI Hospital) ಭಾರಿ ಬೆಂಕಿ ಅವಘಡ ಸಂಭವಿಸಿದ್ದು, ಐಸಿಯುನಲ್ಲಿದ್ದ (ICU) ಓರ್ವ ರೋಗಿ ಸಾವನ್ನಪ್ಪಿದ್ದಾನೆ.

    ಕೋಲ್ಕತ್ತಾದ ಸೀಲ್ದಾಹ್ (Sealdah) ಪ್ರದೇಶದಲ್ಲಿರುವ ಇಎಸ್‌ಐ ಸರ್ಕಾರಿ ಆಸ್ಪತ್ರೆಯಲ್ಲಿ ಇಂದು (ಅ.18) ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಸ್ಥಳಕ್ಕೆ 10 ಅಗ್ನಿಶಾಮಕ ವಾಹನಗಳು ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡರು. ಈ ವೇಳೆ ಕೇವಲ 20 ನಿಮಿಷದಲ್ಲಿ 80 ರೋಗಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, ಐಸಿಯುನಲ್ಲಿದ್ದ ಓರ್ವ ರೋಗಿ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಬಿಬಿಎಂಪಿ ಬಂಡವಾಳ ಬಯಲು- ಎರಡು ದಿನದ ಮಳೆಗೆ ಕಿತ್ತು ಬಂತು ಹೊಸದಾಗಿ ಹಾಕಿದ್ದ ಡಾಂಬರು ರಸ್ತೆ

    ಮೊದಲು ಆಸ್ಪತ್ರೆಯ ಒಂದು ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡಿತು. ಬೇರೆ ಕೋಣೆಗಳಿಗೆ ಹರಡುವ ಮುನ್ನ ಬೆಂಕಿಯನ್ನು ಹತೋಟಿಗೆ ತರಲಾಯಿತು. ಆದರೆ ಬೆಂಕಿ ಹೊತ್ತಿಕೊಳ್ಳಲು ನಿಖರವಾದ ಕಾರಣ ಏನು ಎಂಬುವುದು ತಿಳಿದು ಬಂದಿಲ್ಲ.

    ಕೆಲವು ರೋಗಿಗಳು ಬೆಂಕಿ ಕಾಣಿಸಿಕೊಂಡ ಬಳಿಕ ತಮ್ಮ ಆರೈಕೆದಾರರ ಜೊತೆ ಹೊರಗೆ ಬಂದಿದ್ದು, ಇನ್ನುಳಿದ ಕೆಲವರನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಯಿತು. ಸದ್ಯ ಚಿಕಿತ್ಸೆಗಾಗಿ ರೋಗಿಗಳನ್ನು ಬೇರೆ ಆಸ್ಪತ್ರೆಗೆ ವರ್ಗಾವಣೆ ಮಾಡಲಾಗಿದೆ.

    ಸ್ಥಳಕ್ಕೆ ಪಶ್ಚಿಮ ಬಂಗಾಳದ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಸಚಿವ ಸುಜಿತ್ ಬೋಸ್ (Sujit Bose) ಭೇಟಿ ನೀಡಿದರು.

    ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಟಿ.ಕೆ.ದತ್ತಾ (TK Dutta) ಮಾತನಾಡಿ, ಇದೊಂದು ಭಯಾನಕ ಅಗ್ನಿ ಅವಘಡ. ಐಸಿಯುನಲ್ಲಿ ದಾಖಲಾಗಿದ್ದ ಓರ್ವ ರೋಗಿಯ ಹೊರತಾಗಿ, ಕೇವಲ 20 ನಿಮಿಷದಲ್ಲಿ ಎಲ್ಲಾ ರೋಗಿಗಳನ್ನು ಪ್ರಾಣಾಪಾಯದಿಂದ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದೇವೆ. ಐಸಿಯುನಲ್ಲಿದ್ದ ಓರ್ವ ರೋಗಿಯ ಸಾವಿಗೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಇನ್ನಿತರ ಯಾವುದೇ ಗಾಯಗಳಾಗಿಲ್ಲ. ಕೋಣೆಯಲ್ಲಿ ಹೊಗೆ ಕಾಣಿಸಿದ್ದನ್ನು ಕಂಡ ಕೆಲ ರೋಗಿಗಳು ಕಿಟಕಿಯಿಂದ `ನಮ್ಮನ್ನು ಉಳಿಸಿ’ ಎಂದು ಕಿರುಚುತ್ತಿದ್ದರು ಎಂದು ನಡೆದ ಅವಘಡದ ಕುರಿತು ವಿವರಿಸಿದರು.ಇದನ್ನೂ ಓದಿ: ಬೆಂಗಳೂರು ಕಾಲೇಜಿಗೆ ಬಾಂಬ್ ಬೆದರಿಕೆ ಹಾಕಿದ್ದ ಆರೋಪಿ ಬಂಗಾಳದಲ್ಲಿ ಅರೆಸ್ಟ್‌

  • ರಾಯಚೂರು | ಆಸ್ಪತ್ರೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಯಂತ್ರೋಪಕರಣ ಕಳ್ಳತನ

    ರಾಯಚೂರು | ಆಸ್ಪತ್ರೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಯಂತ್ರೋಪಕರಣ ಕಳ್ಳತನ

    – ಸಿಸಿಟಿವಿ ಡಿವಿಆರ್ ಮಾಯ

    ರಾಯಚೂರು: ಸಿಬ್ಬಂದಿ ಕಾರ್ಯನಿರ್ವಹಿಸುತ್ತಿರುವಾಗಲೇ ಲಕ್ಷಾಂತರ ರೂ. ಮೌಲ್ಯದ ಯಂತ್ರೋಪಕರಣಗಳನ್ನು ಕಳ್ಳತನ ಮಾಡಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲೂಕು ಆಸ್ಪತ್ರೆಯಲ್ಲಿ (Devadurga Taluka Hospital) ನಡೆದಿದೆ.

    24*7 ಕಾರ್ಯನಿರ್ವಹಿಸುವ ತಾಲೂಕು ಆಸ್ಪತ್ರೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಯಂತ್ರೋಪಕರಣಗಳು ಕಳ್ಳತನವಾಗಿದ್ದು, ಸಿಬ್ಬಂದಿ ಕಾರ್ಯನಿರ್ವಹಿಸುತ್ತಿರುವಾಗಲೇ ಈ ಘಟನೆ ನಡೆದಿದೆ. ಸಿಸಿಟಿವಿ (CCTV) ಡಿವಿಆರ್ ಕೂಡ ಮಾಯವಾಗಿದೆ.ಇದನ್ನೂ ಓದಿ:ಜೈಲಿನಲ್ಲಿರೋ ದರ್ಶನ್‌ಗೆ ಮತ್ತೊಂದು ಸಂಕಷ್ಟ: ಪ್ರೊಡ್ಯೂಸರ್‌ಗೆ ಬೆದರಿಕೆ ಕೇಸ್‌ಗೆ ಮರುಜೀವ

    ಪ್ರಯೋಗಾಲಯದ ಬೀಗ ಹಾಕದೇ ಸಿಬ್ಬಂದಿ ಹಾಗೆ ಬಿಟ್ಟಿದ್ದರು. ಈ ವೇಳೆ ಹಿಮೋಗ್ಲೋಬಿನ್ ಲೆವೆಲ್, ಆಕ್ಸಿಜನ್ ಲೆವೆಲ್ ಚೆಕ್ ಮಾಡುವ ಮಷಿನ್ ಹಾಗೂ ಎಲೆಕ್ಟ್ರೋಲೈಟ್ ತಪಾಸಣೆ ಸೇರಿದಂತೆ ವಿವಿಧ ರಕ್ತ ಪರೀಕ್ಷೆಗಳನ್ನು (Blooad Test Machine) ಮಾಡಲು ಬಳಸುತ್ತಿದ್ದ ಮೂರು ದೊಡ್ಡ ಯಂತ್ರಗಳನ್ನು ಕಳ್ಳತನ ಮಾಡಿದ್ದಾರೆ. ಸುಮಾರು 10 ರಿಂದ 15 ಲಕ್ಷ ರೂ. ಮೌಲ್ಯದ ಯಂತ್ರೋಪಕರಣಗಳು ಕಳ್ಳತನವಾಗಿದ್ದು, ಸಿಸಿಟಿವಿ ಡಿವಿಆರ್‌ನ್ನು ಕೂಡ ಕದ್ದುಕೊಂಡು ಹೋಗಿದ್ದಾರೆ.

    ಅ.12, 13ರ ನಡುವೆ ಘಟನೆ ನಡೆದಿದ್ದು, ಮುಖ್ಯ ವೈದ್ಯಾಧಿಕಾರಿ ಡಾ.ಶಿವಾನಂದ ತಡವಾಗಿ ಅ.16 ರಂದು ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಒಂದೊಂದು ಯಂತ್ರೋಪಕರಣಗಳನ್ನು ಹೊತ್ತೊಯ್ಯಲು ಕನಿಷ್ಠ ನಾಲ್ಕು ಜನ ಬೇಕಿದ್ದು, ಈ ಕಳ್ಳತನದ ಹಿಂದೆ ನಾನಾ ಅನುಮಾನಗಳು ಹುಟ್ಟಿಕೊಂಡಿವೆ.

    ಒಂದೆಡೆ ಆಸ್ಪತ್ರೆಯ ಒಳಗಿನವರ ಸಹಾಯದಿಂದ ಕಳ್ಳತನ ನಡೆದಿರುವ ಶಂಕೆ ವ್ಯಕ್ತವಾಗಿದೆ. ಇನ್ನೊಂದೆಡೆ ಖಾಸಗಿ ಪ್ರಯೋಗಾಲಯಗಳ ಕೈವಾಡದ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ. ಆದರೆ ಹಿಂದುಳಿದ ಪ್ರದೇಶದಲ್ಲಿನ ಆಸ್ಪತ್ರೆಯಲ್ಲಿ ಕಳ್ಳತನ ನಡೆದಿರುವುದಕ್ಕೆ ಬಡ ರೋಗಿಗಳ ಕಡೆಯವರು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸದ್ಯ ಈ ಪ್ರಕರಣ ಸಂಬಂಧ ದೇವದುರ್ಗ ಠಾಣೆಯ ಪೊಲೀಸರು (Devadurga Police Station) ತನಿಖೆ ನಡೆಸುತ್ತಿದ್ದಾರೆ.ಇದನ್ನೂ ಓದಿ:ಕಾರವಾರ| ಹಳಿಯಾಳದಲ್ಲಿ ವಿದ್ಯುತ್ ಅವಘಡ – ಮಳಿಗೆ, ಮನೆಗಳು ಬೆಂಕಿಗಾಹುತಿ

  • ಸರ್ಕಾರಿ ಆಸ್ಪತ್ರೆಗಳಲ್ಲಿ ಹೊಸ ಜನೌಷಧಿ ಕೇಂದ್ರಕ್ಕೆ ಅನುಮತಿ ನೀಡಲ್ಲ:  ಶರಣ ಪ್ರಕಾಶ್‌ ಪಾಟೀಲ್‌

    ಸರ್ಕಾರಿ ಆಸ್ಪತ್ರೆಗಳಲ್ಲಿ ಹೊಸ ಜನೌಷಧಿ ಕೇಂದ್ರಕ್ಕೆ ಅನುಮತಿ ನೀಡಲ್ಲ: ಶರಣ ಪ್ರಕಾಶ್‌ ಪಾಟೀಲ್‌

    ಬೆಂಗಳೂರು: ಕಡಿಮೆ ಬೆಲೆಯ ಜನೌಷಧಿ (Janaushadhi) ಕೇಂದ್ರದ ವಿಚಾರದಲ್ಲಿ ರಾಜಕೀಯ ಆರಂಭವಾಯಿತೇ? ಮೋದಿ ವಿರೋಧಿಸೋ ಸಲುವಾಗಿಯೇ ಜನೌಷಧಿ ಕೇಂದ್ರಕ್ಕೆ ಸರ್ಕಾರ ಬ್ರೇಕ್‌ ಹಾಕಲು ಮುಂದಾಯಿತೇ ಎಂಬ ಪ್ರಶ್ನೆ ಎದ್ದಿದೆ.

    ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್‌ ಪಾಟೀಲ್‌ (Sharan Prakash Patil) ಅವರು ನೀಡಿದ ಒಂದು ಹೇಳಿಕೆಯಿಂದ ಈ ಪ್ರಶ್ನೆ ಈಗ ಎದ್ದಿದೆ. ಇನ್ಮುಂದೆ ಸರ್ಕಾರಿ ಆಸ್ಪತ್ರೆಗಳಲ್ಲಿ (Government Hospital) ಹೊಸ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರ ತೆರೆಯಲು ಅವಕಾಶ ನೀಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

    ಪಬ್ಲಿಕ್‌ ಟಿವಿಗೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳು ಉಚಿತವಾಗಿ ಸಿಗುವಾಗ ಜನೌಷಧಿ ಕೇಂದ್ರ ಯಾಕೆ ಬೇಕು? ಇದರಿಂದ ಆಸ್ಪತ್ರೆಯ ಒಳಗಡೆ ವರ್ತುಲ  ಸೃಷ್ಟಿಯಾಗುತ್ತದೆ. ಹಿಂದೆ ಯಾರು ಅನುಮತಿ ಕೊಟ್ಟಿದ್ದಾರೋ ಗೊತ್ತಿಲ್ಲ. ನಾನು ಹೊಸ ಜನೌಷಧಿ ಕೇಂದ್ರ ತೆರೆಯಲು ಅವಕಾಶ ನೀಡುವುದಿಲ್ಲ ಎಂದು ಖಡಕ್‌ ಆಗಿಯೇ ಹೇಳಿದ್ದಾರೆ.

    ಸರ್ಕಾರಿ ಆಸ್ಪತ್ರೆಗಳಲ್ಲೇ ಉಚಿತವಾಗಿ ಮಾತ್ರೆ ಕೊಡುತ್ತೇವೆ. ಹೀಗಾಗಿ ಜನರು ದುಡ್ಡು ನೀಡಿ ಮಾತ್ರೆ ಖರೀದಿ ಮಾಡುವುದು ಯಾಕೆ ಎಂದು ಸಚಿವರು ಪ್ರಶ್ನೆ ಮಾಡಿದ್ದಾರೆ.

    ಸರ್ಕಾರದಿಂದ ಔಷಧಿಗಳು, ಮಾತ್ರೆಗಳು ಉಚಿತ ಬರುತ್ತದೆ ಹೌದು. ಆದರೆ ಎಲ್ಲಾ ಮಾತ್ರೆಗಳು ಸಿಗುವುದಿಲ್ಲ. ಹೀಗಾಗಿ ಸರ್ಕಾರಿ ಆಸ್ಪತ್ರೆಯ ಬಳಿ ಜನೌಷಧಿ ಕೇಂದ್ರ ತೆರೆದರೆ ನಿಮಗೆ ಏನು ಕಷ್ಟ ಎಂದು ಜನರು ಈಗ ಸರ್ಕಾರಕ್ಕೆ ಪ್ರಶ್ನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ತರಬೇತಿ ವೈದ್ಯೆ ಮೇಲೆ ಅತ್ಯಾಚಾರ ಕೇಸ್‌ – ಅವಮಾನ ಸಹಿಸಲಾರದೇ ಪ್ರಾಂಶುಪಾಲ ರಾಜೀನಾಮೆ

    ಯಾವ ಮಾತ್ರೆಗೆ ಎಷ್ಟೆಷ್ಟು ದರ?
    > ಡೋಲೋ ಮಾತ್ರೆ
    ಮೆಡಿಕಲ್ ಸ್ಟೋರ್- 30 ರೂ. (ಒಂದು ಶೀಟ್‌ಗೆ)
    ಜನೌಷಧಿ ಕೇಂದ್ರ- 15 ರೂ. (ಒಂದು ಶೀಟ್‌ಗೆ)

    ಡಯಾಬಿಟೀಸ್ ಮಾತ್ರೆ
    ಮೆಡಿಕಲ್ ಸ್ಟೋರ್- 20 ರೂ. (ಒಂದು ಶೀಟ್‌ಗೆ)
    ಜನೌಷಧಿ ಕೇಂದ್ರ- 6 ರೂ. (ಒಂದು ಶೀಟ್‌ಗೆ)

    ಬಿಪಿ ಮಾತ್ರೆ (ಟೆಲ್ಮಾ)
    ಮೆಡಿಕಲ್ ಸ್ಟೋರ್- 30 ರೂ. (10 ಮಾತ್ರೆ)
    ಜನೌಷಧಿ ಕೇಂದ್ರ- 12 ರೂ.

    ಕೊಲೆಸ್ಟ್ರಾಲ್‌ ಮಾತ್ರೆ (ಅಟೋರ್ವಾ)
    ಮೆಡಿಕಲ್ ಸ್ಟೋರ್- 30 ರೂ.

    ಕ್ರೇಪ್ ಬ್ಯಾಂಡೇಜ್
    ಮೆಡಿಕಲ್ ಸ್ಟೋರ್- 150 ರೂ.
    ಜನೌಷಧಿ ಕೇಂದ್ರ- 36 ರೂ.

    ಪ್ಯಾರಸೆಟ್‌ಮಲ್
    ಜನೌಷಧಿ ಕೇಂದ್ರ- 25-30 ರೂ.
    ಮೆಡಿಕಲ್ ಸ್ಟೋರ್-120

    ಕೆಮ್ಮಿನ ಔಷಧಿ
    ಜನೌಷಧಿ ಕೇಂದ್ರ- 54 ರೂ.
    ಮೆಡಿಕಲ್ ಸ್ಟೋರ್- 150 ರೂ.