ತುಮಕೂರು: ಸರ್ಕಾರಿ ಅಧಿಕಾರಿಯೊಬ್ಬರನ್ನ ಸುಮಾರು 6 ಗಂಟೆಗಳ ಕಾಲ ಡಿಜಿಟಲ್ ಅರೆಸ್ಟ್ (Digital Arrest) ಮಾಡಿ 19 ಲಕ್ಷ ರೂ. ವಂಚಿಸಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ಡಿ.20ರಂದು ನಗರದ ಉಪ್ಪಾರಹಳ್ಳಿಯ ಬಿ.ಎಸ್.ನಾಗಭೂಷಣ್ ಎಂಬುವರಿಗೆ ಕರೆ ಮಾಡಿದ ಆರೋಪಿ ಮುಂಬೈ ಸೈಬರ್ ಪೊಲೀಸ್ (Mumbai Cyber Police) ಎಂದು ಪರಿಚಯಿಸಿಕೊಂಡಿದ್ದಾನೆ. ನಿಮ್ಮ ಖಾತೆ ಮೂಲಕ ಅಕ್ರಮವಾಗಿ ಹಣ ವರ್ಗಾವಣೆ ಮಾಡಲಾಗುತ್ತಿದೆ. ನಿಮ್ಮ ಹೆಸರಿನಲ್ಲಿ ಮತ್ತೊಂದು ಸಿಮ್ ಇದ್ದು, ಅದರಿಂದ ಬೇರೆಯವರಿಗೆ ಕಿರುಕುಳ ನೀಡಲಾಗುತ್ತಿದೆ. ಎರಡೂ ಪ್ರಕರಣಗಳಲ್ಲಿ ನಿಮ್ಮ ಆಸ್ತಿ ಜಪ್ತಿ ಮಾಡಿ ಬಂಧಿಸಬೇಕಾಗುತ್ತದೆ ಎಂದು ಹೆದರಿಸಿದ್ದಾರೆ.
ನಂತರ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ. ಸಮವಸ್ತ್ರ ಧರಿಸಿ ನಿಜವಾದ ಪೊಲೀಸರು ಎಂದು ನಂಬಿಸಿದ್ದಾರೆ. ಈ ವಿಷಯ ಯಾರಿಗೂ ಹೇಳದಂತೆ ಸೂಚಿಸಿದ್ದಾರೆ. ಬೆಳಿಗ್ಗೆ 8.30ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ನಿರಂತರವಾಗಿ ವಿಡಿಯೊ ಕಾಲ್ ಸಂಪರ್ಕ ಕಡಿತವಾಗದಂತೆ ನೋಡಿಕೊಂಡಿದ್ದಾರೆ.
ತನಿಖೆ ನೆಪದಲ್ಲಿ ಬ್ಯಾಂಕ್ ಖಾತೆಯಲ್ಲಿನ ಹಣದ ಬಗ್ಗೆ ವಿಚಾರಿಸಿದ್ದಾರೆ. ನಾಗಭೂಷಣ್ ಪತ್ನಿಯ ಹೆಸರಿನಲ್ಲಿ ಎಫ್‌ಡಿ ಇಟ್ಟಿರುವ ಬಗ್ಗೆ ತಿಳಿಸಿದ್ದಾರೆ. ಸದರಿ ಹಣವನ್ನು ನಾವು ಹೇಳಿದ ಖಾತೆಗೆ ವರ್ಗಾವಣೆ ಮಾಡಬೇಕು. ತನಿಖೆ ಪೂರ್ಣಗೊಂಡ ನಂತರ ಮರಳಿಸಲಾಗುವುದು ಎಂದು ಹೇಳಿದ್ದಾರೆ.
ಇದನ್ನು ನಂಬಿದ ನಾಗಭೂಷಣ್ 19 ಲಕ್ಷ ಹಣವನ್ನು ಸೈಬರ್ ವಂಚಕರು ತಿಳಿಸಿದ ಖಾತೆಗೆ ಆರ್‌ಟಿಜಿಎಸ್ ಮೂಲಕ ವರ್ಗಾಯಿಸಿದ್ದಾರೆ. ಹಣಕಾಸಿನ ಸ್ಥಿತಿಗತಿ ಪರಿಶೀಲಿಸಿ ಅರ್ಧ ಗಂಟೆಯ ನಂತರ ವಾಪಸ್ ಹಾಕುವುದಾಗಿ ಹೇಳಿ ಕರೆ ಕಟ್ ಮಾಡಿದ್ದಾರೆ. ಹಣ ಖಾತೆಗೆ ಬಾರದಿದ್ದರಿಂದ ಅನುಮಾನಗೊಂಡು ಸೈಬರ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
– ಡೆತ್‌ನೋಟ್‌ನಲ್ಲಿ ಬಹುಕೋಟಿ ರಹಸ್ಯ ಬಿಚ್ಚಿಟ್ಟ ಮೃತ ಅಧಿಕಾರಿ
ಶಿವಮೊಗ್ಗ: ಡೆತ್‌ನೋಟ್‌ನಲ್ಲಿ ಮೂವರು ಅಧಿಕಾರಿಗಳ ಹೆಸರು ಉಲ್ಲೇಖಿಸಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ (Karnataka Valmiki Nigama) ಅಧಿಕಾರಿಯೊಬ್ಬರು ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದ (Shivamogga) ವಿನೋಬನಗರದಲ್ಲಿ ನಡೆದಿದೆ.
ಇಲ್ಲಿನ ವಿನೋಬನಗರದ ಕೆಂಚಪ್ಪ ಬಡಾವಣೆಯ ನಿವಾಸಿ ಚಂದ್ರಶೇಖರನ್ (45) ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿಯಾಗಿದ್ದ ಚಂದ್ರಶೇಖರನ್ ಬೆಂಗಳೂರಿನ ಕಚೇರಿಯಲ್ಲಿ (Bengaluru Office) ಕೆಲಸ ನಿರ್ವಹಿಸುತ್ತಿದ್ದರು. ಅವಮಾನ ಸಹಿಸದೇ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಡೆತ್‌ನೋಟ್‌ನಲ್ಲಿ ಬಹುಕೋಟಿ ಭ್ರಷ್ಟಾಚಾರ ರಹಸ್ಯ:
ನನ್ನ ಸಾವಿಗೆ ನಿಗಮದ ಅಧಿಕಾರಿಗಳು ಕಾರಣ. ನಿಗಮದ ವ್ಯವಸ್ಥಾಪಕ ನಿದೇರ್ಶಕರಾದ ಜೆ.ಪದ್ಮನಾಭ, ಅಕೌಂಟ್ ವ್ಯವಸ್ಥಾಪಕ ಪರಶುರಾಮ್ ದುರ್ಗಣ್ಣನವರ್, ಯೂನಿಯನ್ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕರಾದ ಶುಚಿಸ್ಮಿತ ಕಾರಣ. ವಾಲ್ಮೀಕಿ ನಿಗಮದ ಅನುದಾನದಲ್ಲಿ 80 ರಿಂದ 85 ಕೋಟಿ ರೂ.ಗಳನ್ನು ನಿಯಮ ಬಾಹಿರವಾಗಿ ಲೂಟಿ ಮಾಡಿದ್ದಾರೆ. ಈ ಅವ್ಯವಹಾರದಲ್ಲಿ ನನ್ನ ಪಾತ್ರವಿಲ್ಲ. ಆದರೆ ಕೆಲಸದ ಒತ್ತಡದಲ್ಲಿ ಸದರಿ ಖಾತೆಯ ಚೆಕ್ ಪುಸ್ತಕ ಪಡೆಯದಿರುವುದು ಮತ್ತು ಕ್ಯಾಶ್ ಪುಸ್ತಕ ಮುಕ್ತಾಯಗೊಳಿಸದಿರುವುದು ನನ್ನ ತಪ್ಪಾಗಿದೆ. ಈ ಹಗರಣದಲ್ಲಿ ನಾನು ಕಾರಣ ನಲ್ಲ. ಆದ್ದರಿಂದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ.
ಹಾಸನ: ‘ನಾನು ಭ್ರಷ್ಟನಲ್ಲ, ಲಂಚ ಸ್ವೀಕರಿಸುವುದಿಲ್ಲ’ ಎಂದು ಹಾಸನ ಬಿಇಒ ಕಚೇರಿ ಅಧೀಕ್ಷಕರೊಬ್ಬರು ಟೇಬಲ್ ಬೋರ್ಡ್ ಹಾಕಿರುವ ದೃಶ್ಯದ ಫೋಟೋ ಎಲ್ಲೆಡೆ ವೈರಲ್ ಆಗಿದೆ.
ಹಾಸನ (Hassan) ಬಿಇಒ ಕಚೇರಿಯ ಅಧೀಕ್ಷರಾಗಿರುವ ಡಿ.ಎಸ್.ಲೋಕೇಶ್ ತಮ್ಮ ಟೇಬಲ್ ಮೇಲೆ ‘ನಾನು ಭ್ರಷ್ಟನಲ್ಲ, ಇಲ್ಲಿ ಲಂಚ ಸ್ವೀಕರಿಸುವುದಿಲ್ಲ’ ಎನ್ನುವ ಬೋರ್ಡ್ ಹಾಕಿರುವುದು ಗಮನ ಸೆಳೆದಿದೆ. ಲೋಕೇಶ್ ಅವರು ತಮ್ಮ ಪ್ರಾಮಾಣಿಕತೆ ಹಾಗೂ ದಕ್ಷತೆಯ ಕಾರಣಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಸನ ಸಂಸದರಾಗಿದ್ದ ಅವಧಿಯಲ್ಲಿ ಅವರ ಕಚೇರಿಯ ಆಪ್ತ ಕಾರ್ಯದರ್ಶಿಯಾಗಿದ್ದರು. ಇದನ್ನೂ ಓದಿ: ರಾಜ್ಯಕ್ಕೆ ಉತ್ತಮ ಮಳೆಯಾಗಲೆಂದು ಹಾಸನಾಂಬೆಗೆ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದ ಸಿಎಂ
ಕಳೆದ ಅವಧಿಯಲ್ಲಿ ಹಾಸನ ಕ್ಷೇತ್ರದ ಶಾಸಕರಾಗಿದ್ದ ಪ್ರೀತಂ ಜೆ.ಗೌಡರ ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುವ ಅವಕಾಶವನ್ನೂ ಪಡೆದಿದ್ದರು. ತಮ್ಮ ವಿರುದ್ಧ ಆರೋಪಗಳು ಕೇಳಿ ಬರುವ ಅವಕಾಶ ನೀಡದಂತೆ ಕಾರ್ಯನಿರ್ವಹಿಸುತ್ತ ಜನಸ್ನೇಹಿಯಾಗಿ ಗುರುತಿಸಿಕೊಂಡಿದ್ದಾರೆ.
ಇತ್ತೀಚಿಗೆ ಬಿಇಒ ಕಚೇರಿ ಅಧೀಕ್ಷಕರಾಗಿ ಲೋಕೇಶ್ ಅವರು ಬಡ್ತಿ ಹೊಂದಿದ್ದಾರೆ. ತಾವು ಪ್ರಾಮಾಣಿಕ ಎಂದು ಎದೆತಟ್ಟಿ ಹೇಳಿಕೊಳ್ಳುವ ಧೈರ್ಯ ಪ್ರದರ್ಶನ ಮಾಡಿದ್ದಾರೆ. ಲೋಕೇಶ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಸಂವಿಧಾನ ತಿದ್ದುಪಡಿ ಮಾಡಿ ಜಾತಿಗೊಂದು ಸಿಎಂ ಕೊಟ್ಬಿಡಿ: ಈಶ್ವರಪ್ಪ ವ್ಯಂಗ್ಯ
ಸರ್ಕಾರಿ ಅಧಿಕಾರಿಗಳು ಎಂದರೆ ಭ್ರಷ್ಟಚಾರಿಗಳು ಎಂಬ ಅಭಿಪ್ರಾಯಗಳೇ ಹೆಚ್ಚು. ಲಂಚ ಸ್ವೀಕರಿಸುವ ವೇಳೆ ಅಧಿಕಾರಿಗಳು ಲೋಕಾಯುಕ್ತ ಕೈಗೆ ಸಿಕ್ಕಿ ಬೀಳುವ ಅದೆಷ್ಟೋ ಸುದ್ದಿಗಳನ್ನು ಓದಿದ್ದೇವೆ. ಇಂತಹ ಸನ್ನಿವೇಶದಲ್ಲಿ ಅಲ್ಲಿ ಇಲ್ಲಿ ಬೆರಳೆಣಿಕೆಯಷ್ಟು ಪ್ರಾಮಾಣಿಕ ಅಧಿಕಾರಿಗಳು ಸಿಗುತ್ತಾರೆ. ಅಂತಹವರ ಸಾಲಿಗೆ ಲೋಕೇಶ್ ಅವರು ಸೇರಿದ್ದಾರೆ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಲೋಕೇಶ್ ಅವರ ಕರ್ತವ್ಯ ನಿಷ್ಠೆಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಬೆಂಗಳೂರು: ರಾಜ್ಯಾದ್ಯಂತ ಬೆಳ್ಳಂಬೆಳಗ್ಗೆ 21 ಸರ್ಕಾರಿ ಅಧಿಕಾರಿಗಳಿಗೆ ಎಸಿಬಿ ಶಾಕ್ ನೀಡಿದ್ದು, ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದೆ.
ಸುಮಾರು 400ಕ್ಕೂ ಹೆಚ್ಚು ಅಧಿಕಾರಿಗಳ ತಂಡದಿಂದ ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆದಿದೆ. ಅದರಲ್ಲೂ ಬೆಂಗಳೂರಿನಲ್ಲೇ 10 ಕಡೆ ದಾಳಿ ನಡೆದಿದೆ. ಆದಾಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹಣ, ಆಸ್ತಿ ಸಂಪಾದನೆ ಮಾಡಿರುವ ದೂರಿನ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ಸರ್ಕಾರಿ ನೌಕರರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದೆ.
ಜೆಪಿ ನಗರದ ಶಿವಲಿಂಗಯ್ಯ ಅವರಿಗೆ ಸೇರಿದ ಕಚೇರಿ ಮತ್ತು ಮನೆ ಮೇಲೆ ದಾಳಿ ನಡೆಸಿದ್ದಾರೆ. ಶಿವಲಿಂಗಯ್ಯ ಬಿಡಿಎನ ಗಾರ್ಡೇನೇಯರ್ ಆಗಿದ್ದಾರೆ. ಅಷ್ಟೇ ಅಲ್ಲದೇ ಬಸವನಗುಡಿ, ಕನಕಪುರ ರೋಡ್, ಹಾಗೂ ದೊಡ್ಡಕಲ್ಲಸಂದ್ರದ ಮನೆಗಳ ಮೇಲೆ ದಾಳಿ ನಡೆದಿದೆ. ಕೇವಲ ಬೆಂಗಳೂರೊಂದೇ ಅಲ್ಲದೇ ರಾಜ್ಯದ ನಾನಾ ಕಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಅಷ್ಟೇ ಅಲ್ಲದೇ ಬಾಗಲಕೋಟೆಯ ಶಂಕರ್ ಗೋಗಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಶಂಕರ್ ಗೋಗಿ ಹಾಗೂ ಆಪ್ತರ ಮನೆಗಳು ಸೇರಿ ಜಿಲ್ಲೆಯ ಒಟ್ಟು 5 ಕಡೆಗಳಲ್ಲಿ ದಾಳಿ ನಡೆಸಿದೆ.
ಹಾಸನದ ಎಇಇ ರಾಮಕೃಷ್ಣಗೆ ಸೇರಿದೆ ಮನೆ, ಆಫೀಸ್ ಸೇರಿ ಮೂರು ಕಡೆ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಹಾಸನದ ವಿದ್ಯಾನಗರದಲ್ಲಿರುವ ನಿವಾಸ ಕಚೇರಿ ಮೇಲೆ ದಾಳಿ ನಡೆದಿದೆ. ರಾಮಕೃಷ್ಣ ಸಹಾಯಕ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ:ಗ್ರಾಮ ಪಂಚಾಯತ್ ಅಧ್ಯಕ್ಷೆ ಸ್ಥಾನ ಸಿಗದಿದ್ದಕ್ಕೆ ವಿಷ ಕುಡಿದ ಮಹಿಳಾ ಸದಸ್ಯೆ
ಕಲಬುರಗಿಯ ಅಕ್ಕಮಹಾದೇವಿ ಕಾಲೋನಿಯಲ್ಲಿ ಬೀದರ್ ಸಿಡಿಪಿಓ ತಿಪ್ಪಣ್ಣ ಮನೆ ಮೇಲೆ ಎಸಿಬಿ ದಾಳಿ ನಡೆದಿದ್ದು, ತಿಪ್ಪಣ್ಣ ಕಾರ್ಯನಿರ್ವಹಿಸುವ ಬೀದರ್ ಕಚೇರಿ ಸೇರಿದಂತೆ ಹಲವೆಡೆ ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದು, ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ದಾಳಿ ಮಾಡಿ ಒಟ್ಟು 2 ಕೋಟಿ 10 ಲಕ್ಷ ನಗದು, 9 ಕೋಟಿ ಮೌಲ್ಯದ 17 ಕೆಜಿ 299 ಗ್ರಾಂ ಚಿನ್ನಾಭರಣವನ್ನು ಎಸಿಬಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಇದು ಕೇವಲ 15 ಸರ್ಕಾರಿ ಅಧಿಕಾರಿಗಳ ಬಳಿ ಪತ್ತೆಯಾಗಿರೋ ಆಸ್ತಿ-ಪಾಸ್ತಿ. ಇವತ್ತು ಬೆಳ್ಳಂಬೆಳಗ್ಗೆ 503 ಎಸಿಬಿ ಅಧಿಕಾರಿಗಳು 15 ಭ್ರಷ್ಟ ಅಧಿಕಾರಿಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ರು. ಬೆಂಗಳೂರು, ಕಲಬುರಗಿ, ಶಿವಮೊಗ್ಗ, ದಾವಣಗೆರೆ, ಮಂಡ್ಯ, ಮೈಸೂರು ಹೀಗೆ 15 ಅಧಿಕಾರಿಗಳಿಗೆ ಸಂಬಂಧಿಸಿದಂತೆ 68 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಲಾಯಿತು. ಬೊಬ್ಬಬ್ಬ ಅಧಿಕಾರಿಯೂ ದೇಪಿದ್ದ ಅಕ್ರಮ ಸಂಪತ್ತನ್ನು ಕಕ್ಕಿಸಿದ್ದಾರೆ. ಒಟ್ಟು 2 ಕೋಟಿ 10 ಲಕ್ಷ ನಗದು, 9 ಕೋಟಿ ಮೌಲ್ಯದ 17 ಕೆಜಿ 299 ಗ್ರಾಂ ಚಿನ್ನಾಭರಣವನ್ನ ಎಸಿಬಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಇದನ್ನೂ ಓದಿ: ನನಗೆ ಬರುವ ಸಂಬಳ ಸಾಕಾಗ್ತಿಲ್ಲ: ಮಾಯಣ್ಣ
ದಾಳಿ ವೇಲೆ ಪೈಪ್‍ನಲ್ಲೂ ಹಣ. ರೂಮ್‍ನಲ್ಲೂ ಹಣ. ರಾಶಿ ರಾಶಿ ಚಿನ್ನಾಭರಣ. ಐಷಾರಾಮಿ ಬಂಗಲೆಗಳು ಹೀಗೆ ಸುಖದ ಸುಪ್ಪತ್ತಿಗೆಯಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದವರಿಗೆ ಬಲೆ ಬೀಸಿ ಅಕ್ರಮ ಬಯಲಿಗೆಳೆದಿದ್ದಾರೆ.
ಯಾರಲ್ಲಿ ಎಷ್ಟೇಟ್ಟು?:
ಕಲಬುರಗಿಯ ಪಿಡಬ್ಲ್ಯೂಡಿ ಕಿರಿಯ ಇಂಜಿನಿಯರ್ ಶಾಂತಗೌಡ ಬಿರಾದಾರ್ ಮನೆಯ ಬಾತ್ರೂಮ್ ಪೈಪ್‍ನಲ್ಲಿ ಬಂದಿದ್ದು ನೀರಲ್ಲ. ಬದಲಾಗಿ ಕಂತೆ ಕಂತೆ ಹಣ. ಬಿರಾದಾರ್ ಮಾಸ್ಟರ್ ಪ್ಲಾನ್ ನೋಡಿ ಎಸಿಬಿ ಅಧಿಕಾರಿ ದಂಗಾಗಿ ಹೋಗಿದ್ರು. ಬಿರಾದಾರ್ ಬಾತ್ರೂಮ್ ಪೈಪ್. ಸೀಲಿಂಗ್, ಕೋಣೆಯ ಲಾಕರ್‍ಗಳಲ್ಲಿ ಕಂತೆ ಕಂತೆ ಹಣಮುಚ್ಚಿಟ್ಟಿದ್ದರು. ಬಾತ್ರೂಮ್ ಪೈಪ್ ಕಟ್ ಮಾಡುತ್ತಿದ್ದಂತೆ ನೀರಿನ ಬದಲಾಗಿ ನೋಟಿನ ಕಂತೆಯೇ ಸುರೀತು. ಬಿರಾದಾರ್ ಬಳಿ 54 ಲಕ್ಷ ನಗದು, ಬಾತ್ರೂಮ್ ಪೈಪ್‍ನಲ್ಲಿ 15 ಲಕ್ಷ, ಸೀಲಿಂಗ್‍ನಲ್ಲಿ 6 ಲಕ್ಷ, ಮಗನ ಕೋಣೆಯಲ್ಲಿ 33 ಲಕ್ಷ ನಗದು ಪತ್ತೆಯಾಗಿದೆ. 36 ಎಕರೆ ಕೃಷಿ ಭೂಮಿ, 2 ಮನೆ, 15 ಲಕ್ಷ ಮೌಲ್ಯದ ಗೃಹ ಬಳಕೆ ವಸ್ತುಗಳು, 3 ಐಷಾರಾಮಿ ಕಾರು, 2 ಟ್ರ್ಯಾಕ್ಟರ್, 1 ಸ್ಕೂಲ್ ಬಸ್ ಪತ್ತೆಯಾಗಿವೆ. ಇದನ್ನೂ ಓದಿ: ನಾನು ಪ್ರಾಮಾಣಿಕ ಅಧಿಕಾರಿ, ತೆರಿಗೆ ಕಟ್ಟುತ್ತಿದ್ದೇನೆ: ಎಲ್.ಸಿ.ನಾಗರಾಜ್
ಶಿವಮೊಗ್ಗದಲ್ಲಿ ಸಂಪತ್ತಿನ ಕೃಷಿ:
ಗದಗ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ಕೃಷಿ ಇಲಾಖೆಯಲ್ಲಿ ಇದ್ದುಕೊಂಡು ಚಿನ್ನದ ಕೃಷಿಯನ್ನೇ ಮಾಡಿರೋದು ಪತ್ತೆಯಾಗಿದೆ. ರುದ್ರೇಶಪ್ಪ ದಾವಣಗೆರೆಯ ಚನ್ನಗಿರಿ ತಾಲೂಕಿನ ತಣ್ಣಿಗೆರೆ ಗ್ರಾಮದವಾರಿದ್ದು, ಗದಗ್‍ನ ಕೃಷಿ ಇಲಾಖೆ ಜಂಟಿ ನಿರ್ದೇಶಕರಾಗಿ ಸೇವೆ ಸಲ್ಲಿಸ್ತಿದ್ದಾರೆ. ಆದ್ರೆ ಶಿವಮೊಗ್ಗದಲ್ಲಿ ಅಪಾರ ಪ್ರಮಾಣದಲ್ಲಿ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ. ಟಿ.ಎಸ್. ರುದ್ರೇಶಪ್ಪ ಶಿವಮೊಗ್ಗದಲ್ಲಿ 2 ಮನೆ, 4 ನಿವೇಶನ ಹೊಂದಿದ್ದಾರೆ. ಮನೆಯಲ್ಲಿ 9 ಕೆಜಿ 400 ಗ್ರಾಂ ಚಿನ್ನದ ಬಿಸ್ಕೇಟ್ ಪತ್ತೆಯಾಗಿದೆ. ಇದ್ರಲ್ಲಿ 100 ಗ್ರಾಂ ತೂಕದ 60 & 50 ಗ್ರಾಂ ತೂಕದ 8 ಚಿನ್ನದ ಬಿಸ್ಕೆಟ್, 14 ನೆಕ್ಲೆಸ್, 25 ಉಂಗುರ, 12 ಬ್ರೇಸ್‍ಲೆಟ್‍ಗಳು ಇವೆ. ಇನ್ನು 3 ಕೆಜಿ ಬೆಳ್ಳಿ, 2 ಕಾರು, 8 ಎಕರೆ ಕೃಷಿ ಭೂಮಿ, 15 ಲಕ್ಷ 90 ಸಾವಿರ ನಗದು, 20 ಲಕ್ಷ ಬೆಲೆ ಬಾಳುವ ಗೃಹ ಉಪಯೋಗಿ ವಸ್ತುಗಳು ಪತ್ತೆಯಾಗಿವೆ. ಇದನ್ನೂ ಓದಿ: ಬಿಬಿಎಂಪಿ ಎಫ್‍ಡಿಎ ನೌಕರನ ಬಳಿ ಕೋಟಿ ಕೋಟಿ ಆಸ್ತಿ – ಸರ್ಕಾರಕ್ಕೆ ಬರಬೇಕಿದೆ 125 ಕೋಟಿ
ಪ್ರಮೋಷನ್‍ಗೂ ಮೊದಲೇ ಸಕಾಲ ಅಧಿಕಾರಿಗೆ ಶಾಕ್:
ಬೆಂಗಳೂರಿನ ಸಕಾಲದಲ್ಲಿ ಆಡಳಿತಾಧಿಕಾರಿಯಾಗಿರುವ ನಾಗರಾಜುಗೆ ಇವತ್ತು ಎಸಿಬಿ ಶಾಕ್ ಕೊಟ್ಟಿದೆ ಬೆಂಗಳೂರು, ನೆಲಮಂಗಲದಲ್ಲಿ ನಾಗರಾಜುಗೆ ಸೇರಿಆ ನಿವೇಶನಗಳಲ್ಲಿ ಎಸಿಬಿ ತಲಾಶ್ ನಡೆSIಆ ಈ ವೇಳೆ ಕೋಟ್ಯಾಂತರ ಮೌಲ್ಯದ ಆಸ್ತಿಪಾಸ್ತಿ ಪತ್ತೆಯಾಯ್ತು. ಬೆಂಗಳೂರಲ್ಲಿ 1 ಮನೆ, ನಿವೇಶನ ಹೊಂದಿದ್ದಾರೆ. ನೆಲಮಂಗಲದಲ್ಲಿ 1 ಮನೆ, ನೆಲಮಂಗಲ ತಾಲೂಕಿನಲ್ಲಿ 11.25 ಎಕರೆ ಜಮೀನು, ಕೈಗಾರಿಕಾ ಉದ್ದೇಶದ 1 ಕಟ್ಟಡ ಹೊಂದಿದ್ದಾರೆ. ಎಸಿಬಿ ದಾಳಿ ವೇಳೆ 43 ಲಕ್ಷ ನಗದು ಸಿಕ್ಕಿದೆ. 3 ಕಾರು, 1 ಕೆ.ಜಿ 76 ಗ್ರಾಂ ಚಿನ್ನಾಭರಣ, 7 ಕೆ.ಜಿ 284 ಗ್ರಾಂ ಬೆಳ್ಳಿ ವಸ್ತು, 14 ಲಕ್ಷ ರೂ. ಗೃಹ ಉಪಯೋಗಿ ವಸ್ತುಗಳು ಪತ್ತೆಯಾಗಿವೆ.
ಬಿಬಿಎಂಪಿ ಗುಮಾಸ್ತನ `ಮಾಯದ’ ಸಂಪತ್ತು:
ಮಾಯಣ್ಣ, ಬಿಬಿಎಂಪಿ ಕೇಂದ್ರ ಕಚೇರಿ ಬೆಂಗಳೂರಿನಲ್ಲಿ ಪ್ರಥಮ ದರ್ಜೆ ಸಹಾಯಕ. ಈತನಿಗೆ ಸಂಬಂಧಿಸಿದಂತೆ ಕತ್ರಿಗುಪ್ಪೆ, ನಾಯಂಡಳ್ಳಿ, ವಿದ್ಯಾಪೀಠ ಸೇರಿ 8 ಕಡೆ ರೇಡ್ ಆಗಿದೆ. ಬಿಬಿಎಂಪಿ ರಸ್ತೆ & ಮೂಲಭೂತ ಸೌಕರ್ಯ ವಿಭಾಗದಲ್ಲಿ 11 ವರ್ಷಗಳಿಂದ ಠಿಕಾಣಿ ಹೂಡಿದ್ದಾರೆ. ಈತ ಗುಮಾಸ್ತನಾಗಿದ್ದು ಅದ್ಯಾವ ಮಾಯದಲ್ಲಿ ಕೊಳ್ಳೆ ಹೊಡೆದಿದ್ನೋ ಅಪಾರ ಸಂಪತ್ತು ಪತ್ತೆಯಾಗಿದೆ. ಬೆಂಗಳೂರಲ್ಲಿ 4 ವಾಸದ ಮನೆ, ವಿವಿಧ ಕಡೆ 6 ನಿವೇಶನ, 2 ಎಕರೆ ಕೃಷಿ ಜಮೀನು, 2 ಬೈಕ್, 1 ಕಾರ್ ಹೊಂದಿದ್ದು 59 ಸಾವಿರ ನಗದು ಮಾತ್ರ ಸಿಕ್ಕಿದೆ. ಜೊತೆಗೆ 10 ಲಕ್ಷ ರೂ. ಎಫ್‍ಡಿ, ಉಳಿತಾಯ ಖಾತೆಯಲ್ಲಿ 1.50 ಲಕ್ಷ, 600 ಗ್ರಾಂ ಚಿನ್ನಾಭರಣ, 3 ಸ್ಥಳಗಳಲ್ಲಿ ಬೇನಾಮಿ ಆಸ್ತಿ, 12 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತು ಸಿಕ್ಕಿದೆ.
ಆರ್‌ಟಿಓ ಅಧಿಕಾರಿ ಬಳಿ ಚಿನ್ನದ ಗಣಿ:
ಬೆಳಗಾವಿ ಜಿಲ್ಲೆಯ ಗೋಕಾಕ್ ಆರ್‌ಟಿಓ ಅಧಿಕಾರಿ ಸದಾಶಿವ ರಾಯಪ್ಪ ಮರಲಿಂಗಣ್ಣನವರ್ ಸಹಾ ಅಪಾರ ಆಸ್ತಿ ಸಂಪಾದಿಸಿದ್ದಾರೆ. ಬೆಳಗಾವಿ ನಗರದಲ್ಲಿ 1 ವಾಸದ ಮನೆ, 22 ಎಕರೆ ಕೃಷಿ ಜಮೀನು, 1 ಕೆ.ಜಿ 135 ಗ್ರಾಂ ಚಿನ್ನಾಭರಣ ಹೊಂದಿದ್ದು, ಇದರಲ್ಲಿ 26 ಚಿನ್ನದ ಬಳೆ, 5 ಸೆಟ್ ಚಿನ್ನದ ಓಲೆ, 7 ಚಿನ್ನದ ಹಾರ, 3 ಮಾಂಗಲ್ಯ ಸರ ಇದೆ. 8.22 ಲಕ್ಷ ನಗದು ಸಿಕ್ಕಿದ್ದು, 5 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.
ಬಿಬಿಎಂಪಿ ಬಾಲಕ ಮತ್ತು ಬಾಲಕಿಯರ ಹೈಸ್ಕೂಲ್ ಡಿ ಗ್ರೂಪ್ ನೌಕರ ಜಿ.ವಿ. ಗಿರಿ ಮನೆ ಮೇಲೂ ದಾಳಿ ನಡೀತು ಬೆಂಗಳೂರಿನಲ್ಲಿ 6 ವಾಸದ ಮನೆ. 4 ಕಾರು, 4 ಬೈಕ್, 8 ಕೆ.ಜಿ ಬೆಳ್ಳಿ ವಸ್ತುಗಳು, 1.16 ಲಕ್ಷ ನಗದು, 15 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತು ಪತ್ತೆಯಾಗಿದೆ. ಇದನ್ನೂ ಓದಿ: ಪೈಪ್, ಬಕೆಟ್‍ನಲ್ಲಿ ಫುಲ್ ಹಣ – ಕಲಬುರಗಿ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ
ಉಳಿದಂತೆ ಜಲಾನಯನ ಯೋಜನೆಗಳಲ್ಲಿ ಅಕ್ರಮ ಆರೋಪದಲ್ಲಿ ಹೇಮಾವತಿ ಡ್ಯಾಮ್ ಎಂಜಿನಿಯರ್ ಶ್ರೀನಿವಾಸ್‍ಗೂ ಬಿಸಿ ತಟ್ಟಿದೆ. ಮೈಸೂರಿನಲ್ಲಿ 1 ಮನೆ, 1 ಫ್ಲ್ಯಾಟ್, 2 ನಿವೇಶನ, 4 ಎಕೆರೆ ಕೃಷಿ ಭೂಮಿ, ನಂಜನಗೂಡಿನಲ್ಲಿ ಫಾರ್ಮ್ ಹೌಸ್, 9 ಕೆಜಿ ಬೆಳ್ಳಿ, 22 ಲಕ್ಷ ಬ್ಯಾಂಕ್ ಠೇವಣಿ ಪತ್ತೆಯಾಗಿದೆ. ಬಳ್ಳಾರಿಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರೋ ಸಬ್ ರಿಜಿಸ್ಟ್ರಾರ್ ಕೆ.ಎಸ್. ಶಿವಾನಂದಗೆ ಸಂಬಂಧಿಸಿದಂತೆ ಮಂಡ್ಯ ನಗರದಲ್ಲಿ 1 ವಾಸದ ಮನೆ, ಬೆಂಗಳೂರಲ್ಲಿ 1 ನಿವೇಶನ, ಬಳ್ಳಾರಿ ಜಿಲ್ಲೆಯ ಮೋಕಾ ಗ್ರಾಮದಲ್ಲಿ ಸುಮಾರು 7 ಎಕರೆ ಕೃಷಿ ಜಮೀನು ಮಾಹಿತಿ ಸಿಕ್ಕಿದೆ. ಸ್ಮಾರ್ಟ್ ಸಿಟಿ ಇಂಜಿನಿಯರ್ ಲಿಂಗೇಗೌಡಗೆ ಸಂಬಂಧಿಸಿದಂತೆ ಮಂಗಳೂರಿನ ಪಾಲಿಕೆ ಕಚೇರಿ, ಉರ್ವಾದ ಮನೆ ಮೇಲೆ ರೇಡ್ ಆಗಿದ್ದು, ಮಂಗಳೂರಿನಲ್ಲಿ 1 ಮನೆ, ಚಾಮರಾಜನಗರ- ಮಂಗಳೂರಿನಲ್ಲಿ 3 ನಿವೇಶನ, 1 ಕೆಜಿ ಬೆಳ್ಳಿ ಅಭರಣ ಪತ್ತೆಯಾಗಿದೆ.
ಲಕ್ನೋ: ಮಹಿಳಾ ಸಹೋದ್ಯೋಗಿಗೆ ಕಿರುಕುಳ ನೀಡುತ್ತಿದ್ದ ಸರ್ಕಾರಿ ಅಧಿಕಾರಿಯನ್ನು ಲಕ್ನೋ ಪೊಲೀಸರು ಬಂಧಿಸಿದ್ದು, ಆಕೆ ಮೇಲೆ ಹಲ್ಲೆ ಮಾಡಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇಚ್ಚಾ ರಾಮ್ ಯಾದವ್ ಬಂಧಿತ ಅಧಿಕಾರಿ. ಯುಪಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಗುತ್ತಿಗೆ ಉದ್ಯೋಗಿಯಾಗಿರುವ 30 ವರ್ಷದ ವಿವಾಹಿತ ಮಹಿಳೆ ಮೇಲೆ ಇಚ್ಚಾ ರಾಮ್ ಯಾದವ್ ಹಲ್ಲೆ ಮಾಡಿದ್ದು, ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಪರಿಣಾಮ ಇಚ್ಚಾ ರಾಮ್ ಮೇಲೆ ಎಫ್‍ಐಆರ್ ದಾಖಲಾಗಿದ್ದು, ಆತನನ್ನು ಲಕ್ನೋ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಅಪ್ಪು ನಟನೆಯ ಚಿತ್ರದ ಶೀರ್ಷಿಕೆಗಳಲ್ಲೇ ಗೀತೆ ರಚನೆ ಮಾಡಿದ ತಂದೆ, ಜೀವ ತುಂಬಿದ ಮಗಳು
ವೀಡಿಯೋದಲ್ಲಿ ಇಚ್ಚಾ ರಾಮ್ ಯಾದವ್, ಮಹಿಳೆಯ ಮೇಲೆ ಪಟ್ಟು ಬಿಡದೆ ಹಲ್ಲೆ ಮಾಡುತ್ತಿದ್ದು, ಮಹಿಳೆ ಅವನನ್ನು ದೂರ ತಳ್ಳತ್ತ, ತನ್ನನ್ನು ರಕ್ಷಿಸಿಕೊಳ್ಳುವ ಪ್ರಯತ್ನ ಪಡುತ್ತಿರುವ ದೃಶ್ಯ ಸೆರೆಯಾಗಿದೆ. ಅದು ಅಲ್ಲದೇ ವೀಡಿಯೋದಲ್ಲಿ ಯಾದವ್ ಆಕೆಯನ್ನು ಚುಂಬಿಸುವ ದೃಶ್ಯವು ಸಹ ಸೆರೆಯಾಗಿದೆ.
ಒಂದು ವಾರದ ಹಿಂದೆ ಈ ಕುರಿತು ಮಹಿಳೆ ದೂರು ನೀಡಿದ್ದು, ಪೊಲೀಸರು ತಡವಾಗಿ ಆತನನ್ನು ಬಂಧಿಸಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಇಂದು ಬೆಳಗ್ಗೆ, ಟ್ವಿಟ್ಟರ್‍ನಲ್ಲಿ ಇಚ್ಛಾ ರಾಮ್ ಜೈಲಿನಲ್ಲಿರುವ ಫೋಟೋವನ್ನು ಟ್ವೀಟ್ ಮಾಡಲಾಗಿದ್ದು, ಅನೇಕರು ಯುಪಿ ಪೊಲೀಸರ ತಡವಾದ ಕ್ರಮವನ್ನು ತೆಗೆದುಕೊಂಡಿರುವುದರ ಕುರಿತು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಡೆಸರ್ಟ್ ಸಫಾರಿಯನ್ನು ಎಂಜಾಯ್ ಮಾಡ್ತಿರೋ ಜಾನ್ವಿ, ಖುಷಿ ಕಪೂರ್
ಈ ಕುರಿತು ಮಹಿಳೆ ದೂರಿನಲ್ಲಿ, ನಾನು 2013 ರಿಂದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದೇನೆ. 2018 ರಿಂದ ವಿಭಾಗದ ಉಸ್ತುವಾರಿ ಅಧಿಕಾರಿ ಇಚ್ಚಾ ರಾಮ್ ನನಗೆ ಕಿರುಕುಳ ನೀಡಲು ಪ್ರಾರಂಭಿಸಿದನು. ಇಬ್ಬರೂ ಬಾಪು ಭವನದ ನಾಲ್ಕನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದೆವು ಎಂದು ತಿಳಿಸಿದ್ದಾರೆ.
ಇಚ್ಚಾ ರಾಮ್ ನನಗೆ ಕಿರುಕುಳ ಕೊಡುತ್ತಿದ್ದು, ನನಗೆ ಸಹಕರಿಸಿದರೆ ನಿನ್ನ ಕೆಲಸ ಖಾಯಂ ಮಾಡಿಸುವುದಾಗಿ ಭರವಸೆ ನೀಡುತ್ತಿದ್ದನು. ನಾನು ಹೇಳಿದ ರೀತಿ ಕೇಳುವುದಿಲ್ಲ ಎಂದರೇ ಕೆಲಸದಿಂದ ವಜಾ ಮಾಡಿಸುವುದಾಗಿ ಮತ್ತು ಕೊಲ್ಲುವುದಾಗಿ ಬೆದರಿಕೆಯನ್ನು ಹಾಕಿದ್ದನು ಎಂದು ದೂರಿನಲ್ಲಿ ತಿಳಿಸಿದ್ದಾರೆ.
– ಬೇಸತ್ತ ಸಿಬ್ಬಂದಿಯಿಂದ ವೀಡಿಯೋ
– ಬಳ್ಳಾರಿ ಜಿ.ಪಂ ಕಚೇರಿಯಲ್ಲಿ ಕಿಸ್ಸಾಯಣ
ಬಳ್ಳಾರಿ: ಸಾರ್ವಜನಿಕರ ಸೇವೆ ನಡೆಯುವ ಸರ್ಕಾರಿ ಕಚೇರಿಯಲ್ಲೇ ಅಧಿಕಾರಿಯೋರ್ವ ಮಹಿಳಾ ಸಿಬ್ಬಂದಿಯೊಂದಿಗೆ ರೋಮ್ಯಾನ್ಸ್ ಮಾಡಿ, ನಿತ್ಯ ಖುಲ್ಲಂ ಖುಲ್ಲಾ ನಡೆಸುತ್ತಿದ್ದ ಘಟನೆ ಬಳ್ಳಾರಿಯ ಜಿಲ್ಲಾ ಪಂಚಾಯ್ತಿ ಕಚೇರಿಯಲ್ಲಿ ಬೆಳಕಿಗೆ ಬಂದಿದೆ.
ಜಿಲ್ಲಾ ಪಂಚಾಯ್ತಿಯಲ್ಲಿ ಲೆಕ್ಕ ಅಧೀಕ್ಷಕ ಸಂಪತ್ ಕುಮಾರ್ ಮೇಲೆ ಗಂಭೀರ ಆರೋಪ ಕೇಳಿ ಬಂದಿದ್ದು, ಆತನ ಮತ್ತೊಂದು ಮುಖದ ವೀಡಿಯೋ ವೈರಲ್ ಆಗಿದೆ. ಕಳೆದ ಒಂದು ವರ್ಷದಿಂದಲೂ ಈತ ಕಚೇರಿಯ ಅವಧಿಯ ಸಮಯದಲ್ಲೇ ಮಹಿಳಾ ಸಿಬ್ಬಂದಿಯೊಂದಿಗೆ ಕಿಸ್ಸಾಯಾಣ ನಡೆಸುತ್ತಿದ್ದ ಎಂಬ ಮಾಹಿತಿ ಲಭಿಸಿದೆ. ಈತನ ಕೃತ್ಯದ ವೀಡಿಯೋ ಕಳೆದ 6 ರಿಂದ 7 ತಿಂಗಳಿಂದ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಮಹಿಳಾ ಸಿಬ್ಬಂದಿ ಹಾಗೂ ಅಧಿಕಾರಿಯ ಇಬ್ಬರ ರೋಮ್ಯಾನ್ಸ್ ಕಾಟಕ್ಕೆ ಕಚೇರಿಯ ಸಿಬ್ಬಂದಿ ಕೂಡ ಬೇಸತ್ತಿದ್ದಾರೆ ಎನ್ನಲಾಗಿದೆ.
ಈಗಾಗಲೇ ಈತನ ವಿರುದ್ಧ ಕೆಲ ಮಹಿಳಾ ಸಿಬ್ಬಂದಿ ಮೇಲಾಧಿಕಾರಿಗಳಿಗೆ ದೂರು ನೀಡಿದ್ದರು. ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಈತನ ಇಲಾಖೆಯಲ್ಲಿ ಉನ್ನತ ಹಂತದಲ್ಲಿ ಪ್ರಭಾಗಿಯಾಗಿದ್ದಾನೆ ಎನ್ನಲಾಗಿದ್ದು, ಮೇಲಾಧಿಕಾರಿಗಳು ಕೂಡ ಈತನ ಮೇಲೆ ಕ್ರಮಕೈಗೊಳ್ಳದೆ ಇರುವುದು ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಚಪಲ ಚನ್ನಿಗರಾಯನ ಕೃತ್ಯದ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿರುವ ಪಂಚಾಯ್ತಿ ಅಧ್ಯಕ್ಷೆ ಭಾರತಿ, ಮಹಿಳಾ ಸಿಬ್ಬಂದಿಯ ಮೇಲೆ ಲೆಕ್ಕ ಅಧೀಕ್ಷಕ ಸಂಪತ್ ಕುಮಾರ್ ನಡೆಸುತ್ತಿದ್ದ ಕೃತ್ಯದ ಬಗ್ಗೆ ಮಾಹಿತಿ ಇತ್ತು. ಆತನ ವಿರುದ್ಧ ಈಗಾಗಲೇ 3 ಬಾರಿ ದೂರು ನೀಡಿದ್ದೇವೆ. ಅಲ್ಲದೇ ಕ್ರಮಕೈಗೊಳ್ಳಲು ಮೇಲಾಧಿಕಾರಿಗಳಿಗೆ ಮನವಿಯನ್ನು ಮಾಡಿದ್ದೇವೆ. ಆದರೆ ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಇದನ್ನು ನೋಡಿದರೆ ಅಧಿಕಾರಿಗಳಿಗೆ ಆತನ ಪರ ಒಲವು ಇದೆಯಾ ಎಂಬ ಅನುಮಾನ ಮೂಡುತ್ತಿದೆ. ಜಿಲ್ಲಾಧಿಕಾರಿಗಳು ವರ್ಗಾವಣೆಯಾದ ಕಾರಣ ಆತನ ಮೇಲೆ ಕ್ರಮಕೈಗೊಳ್ಳಲು ಆಗಲಿಲ್ಲ ಎನ್ನಲಾಗಿದ್ದು, ಈಗ ಹೊಸದಾಗಿ ಬಂದಿರುವ ಅಧಿಕಾರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಆದ್ದರಿಂದ ಅವರು ಚೇತರಿಸಿಕೊಂಡು ಕಚೇರಿಗೆ ಆಗಮಿಸಿದ ಬಳಿಕ ಮತ್ತೆ ಅವರ ಮೇಲೆ ಕ್ರಮಕೈಗೊಳ್ಳಲು ಒತ್ತಡ ಹಾಕುತ್ತೇವೆ ಎಂದು ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿದ ಜಿಪಂ ಸದಸ್ಯೆ ಉಮಾದೇವಿ, ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನಿಮ್ಮ ವರದಿ ನೋಡಿದ ಬಳಿಕ ನನ್ನ ಗಮನಕ್ಕೆ ಬಂದಿದೆ. ಸರ್ಕಾರಿ ಕಚೇರಿಯಲ್ಲಿ ಈ ರೀತಿ ವರ್ತನೆ ಮಾಡುವುದು ಖಂಡನೀಯ. ಸರ್ಕಾರಿ ಕೆಲಸ ಸಮಯದಲ್ಲಿ ಇಂತಹ ಕೃತ್ಯ ಎಸಗಿರುವುದು ಈಗ ನಮ್ಮ ಗಮನಕ್ಕೆ ಬಂದಿದೆ. ಅಧಿಕಾರಿಗಳಿಗೆ ಕೂಡಲೇ ಕರೆ ಮಾಡಿ ಕ್ರಮಕೈಗೊಳ್ಳಲು ತಿಳಿಸುತ್ತೇವೆ ಎಂದು ಹೇಳಿದ್ದರು.
ಚಿಕ್ಕಮಗಳೂರು: ಮೇಲಾಧಿಕಾರಿಯ ನಕಲಿ ಸಹಿ ಮಾಡಿ ಸರ್ಕಾರದ 1.29 ಕೋಟಿಗೂ ಅಧಿಕ ಹಣವನ್ನ ಗುಳುಂ ಮಾಡಿದ್ದ ದ್ವಿತೀಯ ದರ್ಜೆ ಸಹಾಯಕನಿಗೆ ಜಿಲ್ಲೆಯ ತರೀಕೆರೆ ತಾಲೂಕಿನ ಜೆ.ಎಂ.ಎಫ್.ಸಿ. ನ್ಯಾಯಾಲಯ ಎರಡು ಕೋಟಿ ದಂಡ ಹಾಗೂ ಆರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.
ಶಿವಮೊಗ್ಗ ಮೂಲದ ಮೋಹನ್‍ನಿಗೆ ಶಿಕ್ಷೆ ವಿಧಿಸಲಾಗಿದೆ. 2009ರಲ್ಲಿ ತರೀಕೆರೆ ತಾಲೂಕಿನ ಅರಣ್ಯ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಈ ವೇಳೆ ಅಧಿಕಾರಿಗಳ ಸಹಿಯನ್ನ ನಕಲಿ ಮಾಡಿ 1 ಕೋಟಿ 29 ಲಕ್ಷ 8 ಸಾವಿರದ 451 ರೂಪಾಯಿ ಹಣವನ್ನ ವಂಚಿಸಿ ಮೋಸ ಮಾಡಿದ್ದನು. ಈ ಹಣವನ್ನ ತನ್ನ ಹೆಂಡತಿ ಅಕೌಂಟ್‍ಗೆ ಟ್ರಾನ್ಸ್ ಫರ್ ಮಾಡಿದ್ದ.
ಪತ್ನಿ ಸರ್ಕಾರದ ಹಣವನ್ನ ಹೀಗೆ ದುರುಪಯೋಗ ಮಾಡಿಕೊಳ್ಳಬಾರದೆಂದು ಪತಿಯ ವಿರುದ್ಧವೇ ತಿರುಗಿ ಬಿದ್ದಿದ್ದರು. ಆದರೆ ಸರ್ಕಾರದ ಹಣದ ಆಸೆಗೆ ಪತ್ನಿಯ ಕೊಲೆ ಮಾಡಿದ್ದನು. ಮೋಹನ್ ಪತ್ನಿಯನ್ನ ಕೊಲೆ ಮಾಡಿದ್ದ ಕೇಸಲ್ಲಿ ಈಗಾಗಲೇ ಶಿವಮೊಗ್ಗದ ಜೈಲಿನಲ್ಲಿದ್ದಾನೆ. ಯಾವಾಗ ಸರ್ಕಾರದ ಹಣ ದುರುಪಯೋಗವಾಯ್ತೋ ಆಗ ಅರಣ್ಯ ಇಲಾಖೆಯ ಆರ್‌ಎಫ್ಓ ತರೀಕೆರೆ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ತರೀಕೆರೆ ಪೊಲೀಸರು ಮೋಹನ್ ಬಗ್ಗೆ ಮಾಹಿತಿ ಕಲೆ ಹಾಕಿದ ಸಬ್ ಇನ್ಸ್‌ಪೆಕ್ಟರ್ ಶರಣಪ್ಪ ಹಾಗೂ ಸರ್ಕಲ್ ಇನ್ಸ್‌ಪೆಕ್ಟರ್ ಮಲ್ಲಿಕಾರ್ಜುನಪ್ಪ ಆರೋಪಿ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಕೆ ಮಾಡಿದ್ದರು. 2009 ರಿಂದ ಸುದೀರ್ಘ ವಿಚಾರಣೆ ನಡೆಸಿದ ತರೀಕೆರೆ ಜೆಎಂಎಫ್‍ಸಿ ನ್ಯಾಯಾಲಯ ಮೋಹನ್ ಗೆ ಎರಡು ಕೋಟಿ ದಂಡ ಹಾಗೂ ಆರು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಮೋಹನ್ ಸರ್ಕಾರಕ್ಕೆ ದಂಡದ ರೂಪವಾಗಿ ಎರಡು ಕೋಟಿ ಹಣವನ್ನ ನೀಡದ್ದಿದ್ದರೆ ಮತ್ತೆ ಮೂರು ವರ್ಷಗಳ ಕಾಲ ಹೆಚ್ಚಿನ ಜೈಲು ಶಿಕ್ಷೆ ವಿಧಿಸುವಂತೆ ನ್ಯಾಯಾಲಯ ಆದೇಶಿಸಿದೆ. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ್ದ ಜೆಎಂಎಫ್‍ಸಿ ನ್ಯಾಯಾಲಯದ ಹಿರಿಯ ಸಿಜೆಎಂಸಿ ನಂಜೇಗೌಡರವರು ಆರೋಪಿಗೆ ಎರಡು ಕೋಟಿ ದಂಡ ಹಾಗೂ ಆರು ವರ್ಷ ಜೈಲು ಶಿಕ್ಷೆಯನ್ನ ಪ್ರಕಟಿಸಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಗೋವಿಂದರಾಜ್ ಅವರು ವಾದ ಮಂಡಿಸಿದ್ದರು. ಸರ್ಕಾರದ ಕಣ್ಣಿಗೆ ಮಣ್ಣೆರಚಿ ಹಣ ಮಾಡೋ ಭ್ರಷ್ಟ ಅಧಿಕಾರಿಗಳಿಗೆ ಈ ತೀರ್ಪು ಚಳಿ-ಜ್ವರ ತರಿಸುವಂತದ್ದಾಗಿರೋದರಲ್ಲಿ ಯಾವುದೇ ಅನುಮಾನವಿಲ್ಲ. ನಾಲ್ಕು ಜನರಿಗೆ ಇಂತಹ ತೀರ್ಪು ಕೊಟ್ಟರೆ ಉಳಿದವರು ನೆಟ್ಟಗಾಗುತ್ತಾರೆ ಅನ್ನೋದು ಸ್ಥಳೀಯರ ಅಭಿಪ್ರಾಯವಾಗಿದೆ.
– ಕ್ಯಾಮೆರಾ ಆಫ್ ಮಾಡಲು ಹೋಗಿ ಬೇರೆ ಬಟನ್ ಒತ್ತಿದ
– ಲೈವ್ ಮೀಟಿಂಗ್‍ನಲ್ಲೇ ಸೆಕ್ಸ್ ಮಾಡಿ ಮತ್ತೆ ಸಭೆಗೆ ಹಾಜರಾದ
ಮಲಿನಾ: ಸರ್ಕಾರಿ ಅಧಿಕಾರಿಯೊಬ್ಬ ಕೆಲಸದ ನಿಮಿತ್ತ ಝೂಮ್ ಆ್ಯಪ್ ಮೂಲಕ ಆನ್‍ಲೈನ್ ಮೀಟಿಂಗ್‍ನಲ್ಲಿ ಭಾಗಿಯಾಗಿದ್ದ ವೇಳೆಯೇ ತನ್ನ ಕಾರ್ಯದರ್ಶಿಯೊಂದಿಗೆ ಸೆಕ್ಸ್ ಮಾಡಿರುವ ಘಟನೆ ಫಿಲಿಪ್ಪೀನ್ಸ್‌ನಲ್ಲಿ ನಡೆದಿದೆ.
ಕ್ಯಾವೈಟ್ ಪ್ರಾಂತ್ಯದ ಫಾತಿಮಾ ಡಾಸ್ ಗ್ರಾಮ ಸದಸ್ಯ ಕ್ಯಾಪ್ಟನ್ ಜೀಸಸ್ ಎಸ್ಟಿಲ್ ಕ್ಯಾಮೆರಾ ಆನ್ ಆಗಿರುವುದನ್ನು ತಿಳಿಯದೆ ತನ್ನ ಕಾರ್ಯದರ್ಶಿಯ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದನು. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಆನ್‍ಲೈನ್‍ನಲ್ಲಿ ಮೀಟಿಂಗ್ ನಡೆಯುತ್ತಿದ್ದರೂ ಸರ್ಕಾರಿ ಅಧಿಕಾರಿ ತನ್ನ ಕಾರ್ಯದರ್ಶಿಯ ಜೊತೆ ಸೆಕ್ಸ್ ಮಾಡಿರುವುದನ್ನು ಕಾಣಬಹುದಾಗಿದೆ.
ಝೂಮ್ ವಿಡಿಯೊ ಕಾನ್ಫರೆನ್ಸ್ ಆ್ಯಪ್ ಆಗಿದ್ದು, ಕೆಲಸಕ್ಕೆ ಸಂಬಂಧಿಸಿದಂತೆ ಆನ್‍ಲೈಲ್ ಮೂಲಕ ಮೀಟಿಂಗ್ ನಡೆಸಲಾಗುತ್ತದೆ. ಅದೇ ರೀತಿ ಆಗಸ್ಟ್ 26 ರಂದು ಕ್ಯಾಪ್ಟನ್ ಜೀಸಸ್ ಎಸ್ಟಿಲ್ ಕೆಲಸದ ನಿಮಿತ್ತ ಝೂಮ್ ಆ್ಯಪ್ ಮೂಲಕ ಮೀಟಿಂಗ್‍ನಲ್ಲಿ ಭಾಗವಹಿಸಿದ್ದನು. ಸ್ವಲ್ಪ ಸಮಯದ ನಂತರ ಎಸ್ಟಿಲ್ ಬ್ರೇಕ್ ತೆಗೆದುಕೊಂಡಿದ್ದಾನೆ. ಆಗ ಆತನ ಕಾರ್ಯದರ್ಶಿ ರೂಮಿಗೆ ಬಂದಿದ್ದಾಳೆ.
ಈ ವೇಳೆ ಎಸ್ಟಿಲ್ ಝೂಮ್ ಕ್ಯಾಮೆರಾ ಆಫ್ ಮಾಡಲು ಹೋಗಿ ಬೇರೆ ಬಟನ್ ಒತ್ತಿದ್ದಾನೆ. ಹೀಗಾಗಿ ಕ್ಯಾಮೆರಾ ಆನ್ ಆಗಿತ್ತು. ಆದರೆ ಎಸ್ಟಿಲ್ ಕ್ಯಾಮೆರಾ ಆನ್ ಆಗಿದೆ ಎಂದು ತಿಳಿಯದೆ ಮಹಿಳೆಯೊಂಧಿಗೆ ಸೆಕ್ಸ್ ಮಾಡಿದ್ದಾನೆ. ಮೀಟಿಂಗ್‍ನಲ್ಲಿ ಭಾಗವಹಿಸಿದ್ದ ಇತರರು ಸಭೆಯಲ್ಲಿ ಚರ್ಚೆ ಮಾಡುತ್ತಿದ್ದರು. ಕಾರ್ಯದರ್ಶಿಯ ಜೊತೆ ಸೆಕ್ಸ್ ಮಾಡಿದ ನಂತರ ಎಸ್ಟಿಲ್ ಮತ್ತೆ ಆನ್‍ಲೈನ್ ಮೀಟಿಂಗ್‍ಗೆ ಸೇರಿಕೊಂಡಿದ್ದಾನೆ.
ಇದೇ ವೇಳೆ ಮೀಟಿಂಗ್‍ನಲ್ಲಿ ಹಾಜರಾಗಿದ್ದ ಸಿಬ್ಬಂದಿಯೊಬ್ಬರು ಎಸ್ಟಿಲ್ ಸೆಕ್ಸ್ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ನಂತರ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗ್ರಾಮ ಸದಸ್ಯನ ವಿರುದ್ಧ ಕೆಲ ಗ್ರಾಮಸ್ಥರು ಆಕ್ರೋಶಗೊಂಡಿದ್ದು, ಆತನ ವಿರುದ್ಧ ದೂರು ದಾಖಲಿಸಿದ್ದಾರೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಇಬ್ಬರು ಕ್ಷಮೆ ಕೇಳಿದ್ದಾರೆ. ಆದರೂ ಗ್ರಾಮಸ್ಥರು ದೂರಿನ ಅನ್ವಯ ದೇಶದ ಆಂತರಿಕ ಮತ್ತು ಸ್ಥಳೀಯ ಸರ್ಕಾರದ ಇಲಾಖೆ ಎಸ್ಟಿಲ್‍ನಲ್ಲಿ ಆತನ ಕೆಲಸದಿಂದ ವಜಾಗೊಳಿಸಲಾಗಿದೆ.
ಚಂಡೀಗಢ: ಬಿಜೆಪಿ ಮುಖಂಡೆ, ಟಿಕ್‍ಟಾಕ್ ಸ್ಟಾರ್ ಸೋನಾಲಿ ಫೋಗಟ್ ಅವರು ಸರ್ಕಾರಿ ಅಧಿಕಾರಿಯೊಬ್ಬರಿಗೆ ಚಪ್ಪಲಿಯಿಂದ ಹೊಡೆದಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಫೋಗಟ್ ಶುಕ್ರವಾರ ಹಿಸಾರ್ ನ ಬಾಲ್ಸಮಂದ್ ಮಂಡಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಹಿಸಾರ್ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಸುಲ್ತಾನ್ ಸಿಂಗ್‍ರನ್ನು ಫೋಗಟ್ ಥಳಿಸಿದ್ದಾರೆ. ಕೆಲವು ರೈತರು ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳನ್ನು ಖರೀದಿಸುವ ವಿಚಾರದಲ್ಲಿ ಸಮಸ್ಯೆಗಳಿವೆ ಎಂದು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಫೋಗಟ್ ಮಂಡಿಯ ಪರಿಶೀಲನೆಗೆ ಹೋಗಿದ್ದರು. ಆಗ ಸುಲ್ತಾನ್ ಸಿಂಗ್ ನಿಮ್ಮಂಥ ಸುಂದರ ಚೆಲುವೆ, ಸ್ಟಾರ್ ಬಿಸಿಲಿನಲ್ಲಿ ಹೀಗೆ ಮಂಡಿಗೆ ಬರಬಾರದು ಎಂದು ಹೇಳಿದ್ದರು ಎನ್ನಲಾಗಿದೆ.
ಇದರಿಂದ ಕೋಪಗೊಂಡ ಫೋಗಟ್, ಸಿಂಗ್ ಜೊತೆ ತೀವ್ರವಾಗಿ ಮಾತುಕತೆ ನಡೆಸಿದ್ದಾರೆ. ನಂತರ ಚಪ್ಪಲಿ ತೆಗೆದುಕೊಂಡು ಥಳಿಸಿದ್ದಾರೆ. ಈ ವಿಡಿಯೋವನ್ನು ಸ್ಥಳದಲ್ಲಿದ್ದವರು ರೆಕಾರ್ಡ್ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದೀಗ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. “ನಿಮ್ಮಂತಹ ಜನರಿಂದ ನಿಂದನೆಗಳನ್ನು ಕೇಳಲು ನಾನು ಕೆಲಸ ಮಾಡುತ್ತಿದ್ದೇನೆ? ಗೌರವಾನ್ವಿತವಾಗಿ ಬದುಕಲು ನನಗೆ ಹಕ್ಕಿಲ್ಲವೇ?” ಎಂದು ಫೋಗಟ್ ವೀಡಿಯೊದಲ್ಲಿ ಹೇಳಿದ್ದಾರೆ.
ಪರಸ್ಪರ ಪೊಲೀಸರಿಗೆ ದೂರು:
ಈ ಘಟನೆ ನಡೆದ ನಂತರ ಫೋಗಟ್ ನೇರವಾಗಿ ಪೊಲೀಸ್ ಠಾಣೆಗೆ ಹೋಗಿ, ಸುಲ್ತಾನ್ ಸಿಂಗ್ ಅಸಭ್ಯವಾಗಿ ಮಾತನಾಡಿ ನನ್ನನ್ನು ಅವಮಾನಿಸಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಇತ್ತ ಸುಲ್ತಾನ್ ಸಿಂಗ್ ಕೂಡ ಒಬ್ಬ ಸರ್ಕಾರಿ ಅಧಿಕಾರಿಯ ಮೇಲೆ ಸಾರ್ವಜನಿಕವಾಗಿ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ. ಅಲ್ಲದೇ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಫೋಗಟ್ ವಿರುದ್ಧ ದೂರು ದಾಖಲಿಸಿದ್ದಾರೆ.
ಸುಲ್ತಾನ್ ಸಿಂಗ್ ಮತ್ತು ಫೋಗಟ್ ಇಬ್ಬರು ಪರಸ್ಪರ ದೂರು ದಾಖಲಿಸಿದ್ದಾರೆ. ನಾವು ಇಬ್ಬರ ಹೇಳಿಕೆಗಳು ಮತ್ತು ವಿಡಿಯೋಗಳನ್ನು ಪರಿಶೀಲಿಸುತ್ತಿದ್ದೇವೆ. ನಂತರ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಫೋಗಟ್ ವಿರುದ್ಧ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಈ ಕೃತ್ಯಗಳನ್ನು ಬಿಜೆಪಿ ಮುಖಂಡೆ ಮಾಡಿದ್ದಾರೆ. ಸರ್ಕಾರಿ ಕೆಲಸ ಮಾಡುವುದು ಅಪರಾಧವೇ? ಸಿಎಂ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಫೋಗಟ್ ವಿರುದ್ಧ ಕ್ರಮ ತೆಗೆದುಕೊಳ್ಳುವರೇ” ಎಂದು ಪ್ರಶ್ನೆ ಮಾಡಿದ್ದಾರೆ.
ಕಳೆದ ವರ್ಷ ಅದಂಪುರದಿಂದ ವಿಧಾನಸಭಾ ಚುನಾವಣೆಯಲ್ಲಿ ಸೋನಾಲಿ ಫೋಗಟ್ ಸ್ಪರ್ಧಿಸಿದ್ದರು. ಆಗ ಕಾಂಗ್ರೆಸ್‍ನ ಕುಲದೀಪ್ ಬಿಶ್ನೋಯಿ ವಿರುದ್ಧ ಸೋತಿದ್ದರು.
खट्टर सरकार के नेताओं के घटिया कारनामे!
मार्किट कमेटी सचिव को जानवरों की तरह पीट रही हैं आदमपुर, हिसार की भाजपा नेत्री।
क्या सरकारी नौकरी करना अब अपराध है? क्या खट्टर साहेब कार्यवाही करेंगे? क्या मीडिया अब भी चुप रहेगा? pic.twitter.com/2K1aHbFo5l
— Randeep Singh Surjewala (@rssurjewala) June 5, 2020