Tag: ಸರೋವರ

  • ಮಂಜುಗಡ್ಡೆ ಕುಸಿದು ಮಹಿಳೆ ಸೇರಿ ಭಾರತ ಮೂಲದ ಮೂವರು ನೀರುಪಾಲು

    ಮಂಜುಗಡ್ಡೆ ಕುಸಿದು ಮಹಿಳೆ ಸೇರಿ ಭಾರತ ಮೂಲದ ಮೂವರು ನೀರುಪಾಲು

    ವಾಷಿಂಗ್ಟನ್: ಹೆಪ್ಪುಗಟ್ಟಿದ ಸರೋವರದ (Frozen Lake) ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಮಂಜುಗಡ್ಡೆ ಕುಸಿದು ಮಹಿಳೆ ಸೇರಿದಂತೆ ಭಾರತ (India) ಮೂಲದ ಮೂವರು ಸಾವನ್ನಪ್ಪಿದ ಘಟನೆ ಅಮೆರಿಕದ (America) ಅರಿಜೋನಾ (Arizona) ರಾಜ್ಯದಲ್ಲಿ ನಡೆದಿದೆ.

    ಅರಿಜೋನಾದ ಕೊಕೊನಿನೊ ಕೌಂಟಿಯಲ್ಲಿರುವ ಕೆರೆಯಲ್ಲಿ ಈ ಘಟನೆ ಸಂಭವಿಸಿದೆ. ಮೃತರನ್ನು ನಾರಾಯಣ ಮುದ್ದಣ (49) ಗೋಕುಲ್ ಮೆಡಿಸೆಟಿ (47) ಹರಿತಾ ಮುದ್ದಣ ಎಂದು ಗುರುತಿಸಲಾಗಿದೆ. ಈ ಮೂವರು ಮೂಲತಃ ಭಾರತದವರಾಗಿದ್ದು, ಅಮೆರಿಕದ ಅರಿಜೋನಾದ ಚಾಂಡ್ಲರ್‌ನಲ್ಲಿ ನೆಲೆಸಿದ್ದರು.

    ಈ ಮೂವರು ನೀರಿನಲ್ಲಿ ಮುಳುಗಿದ್ದನ್ನು ನೋಡಿದ ಅಲ್ಲಿನ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾವಿಸಿದ ಪೊಲೀಸರು ಹರಿತಾಳನ್ನು ನೀರಿನಿಂದ ಹೊರತೆಗೆದಿದ್ದಾರೆ. ಆದರೆ ಆಕೆ ಅಷ್ಟರಲ್ಲಾಗಲೇ ಮೃತಪಟ್ಟಿದ್ದಳು. ಇನ್ನೂ ನಾರಾಯಣ ಹಾಗೂ ಗೋಕುಲ್ ಅವರಿಗಾಗಿ ಮಧ್ಯಾಹ್ನದವರೆಗೆ ಹುಡುಕಾಟ ನಡೆಸಿದ್ದು, ಅವರಿಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಇದನ್ನೂ ಓದಿ: 2 ತಿಂಗಳು ಬೃಂದಾವನದಲ್ಲಿ ಪ್ರತ್ಯಕ್ಷವಾಗುತ್ತಿದ್ದ ಚಿರತೆ ಬೋನಿಗೆ

    ಅಮೆರಿಕಾದಲ್ಲಿ ಈಗಾಗಲೇ ಹಿಮ ಸುನಾಮಿ ಭೀಭತ್ಸ ಸೃಷ್ಟಿಯಾಗಿದ್ದು, ತೀವ್ರ ಶೀತಗಾಳಿಗೆ ಉಷ್ಣಾಂಶ ದೊಡ್ಡ ಪ್ರಮಾಣದಲ್ಲಿ ಬಿದ್ದುಹೋಗ್ತಿದೆ. ಮೈನಸ್ 50 ಡಿಗ್ರಿವರೆಗೂ ತಾಪಮಾನ ಕುಸಿದಿದೆ. ಈ ಈ ಶೀತ ಸುನಾಮಿಯಿಂದಾಗಿ 60ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಇಡೀ ದೇಶದಲ್ಲೇ ಬೊಮ್ಮಾಯಿ ಅಧಿಕಾರವಿಲ್ಲದ ಮುಖ್ಯಮಂತ್ರಿ: ಸಿಎಂ ಇಬ್ರಾಹಿಂ

    Live Tv
    [brid partner=56869869 player=32851 video=960834 autoplay=true]

  • 42 ಜನರನ್ನು ಹೊತ್ತಿದ್ದ ವಿಮಾನ ಸರೋವರದಲ್ಲಿ ಪತನ

    42 ಜನರನ್ನು ಹೊತ್ತಿದ್ದ ವಿಮಾನ ಸರೋವರದಲ್ಲಿ ಪತನ

    ಡೊಡೊಮಾ: ಹವಾಮಾನ ವೈಪರಿತ್ಯದಿಂದಾಗಿ 42 ಜನರನ್ನು ಹೊತ್ತ ವಿಮಾನವೊಂದು (Plane) ಸರೋವರದಲ್ಲಿ (Lake) ಪತನವಾಗಿರುವ (Crash) ಘಟನೆ ಭಾನುವಾರ ಬೆಳಗ್ಗೆ ಪೂರ್ವ ಆಫ್ರಿಕಾದ ತಾಂಜಾನಿಯಾದಲ್ಲಿ (Tanzania) ನಡೆದಿದೆ.

    ತಾಂಜಾನಿಯಾದ ಬುಕೋಬಾದಲ್ಲಿನ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ ವಿಮಾನ ಹವಾಮಾನ ವೈಪರಿತ್ಯದಿಂದಾಗಿ ಕೇವಲ 100 ಮೀ. ದೂರದಲ್ಲಿದ್ದ ವಿಕ್ಟೋರಿಯಾ ಸರೋವರಕ್ಕೆ (Lake Victoria) ಅಪ್ಪಳಿಸಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಆನ್‍ಲೈನ್ ಎಡವಟ್ಟು- ಟಿಇಟಿ ಪರೀಕ್ಷೆಗೆ ಬಂದ ವಿದ್ಯಾರ್ಥಿ ಪರೀಕ್ಷೆಯಿಂದ ವಂಚಿತ

    39 ಪ್ರಯಾಣಿಕರು, ಇಬ್ಬರು ಪೈಲಟ್‌ಗಳು ಮತ್ತು ಇಬ್ಬರು ಕ್ಯಾಬಿನ್ ಸಿಬ್ಬಂದಿ ಸೇರಿದಂತೆ ಒಟ್ಟು 43 ಜನರನ್ನು ಹೊತ್ತಿದ್ದ ವಿಮಾನ ದಾರ್ ಎಸ್ ಸಲಾಮ್‌ನಿಂದ ಹೊರಟಿತ್ತು. 26 ಜನರನ್ನು ಈಗಾಗಲೇ ರಕ್ಷಿಸಲಾಗಿದ್ದು, ಉಳಿದವರ ರಕ್ಷಣೆಗಾಗಿ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಟಗರು ಗುದ್ದಿ ಕೊಟ್ಟಿಗೆಯಲ್ಲಿ ಲಾಕ್ ಆದ ಚಿರತೆ – ಕೆಆರ್‌ಎಸ್‌ನ ಬೃಂದಾವನದಲ್ಲಿ ಅಂತ್ಯವಾಗದ ಆತಂಕ

    Live Tv
    [brid partner=56869869 player=32851 video=960834 autoplay=true]

  • ತನ್ನ ಬಳಿ ಬಂದು ನಿಂತಿದ್ದ ಶ್ವಾನವನ್ನು ಏಕಾಏಕಿ ಸರೋವರಕ್ಕೆ ಎಸೆದ- ವಿಡಿಯೋ ವೈರಲ್

    ತನ್ನ ಬಳಿ ಬಂದು ನಿಂತಿದ್ದ ಶ್ವಾನವನ್ನು ಏಕಾಏಕಿ ಸರೋವರಕ್ಕೆ ಎಸೆದ- ವಿಡಿಯೋ ವೈರಲ್

    ಭೋಪಾಲ್: ತನ್ನ ಬಳಿ ನಿಂತಿದ್ದ ಶ್ವಾನವನ್ನು ವ್ಯಕ್ತಿಯೊಬ್ಬ ಏಕಾಏಕಿ ಎತ್ತಿ ಸರೋವರಕ್ಕೆ ಎಸೆದ ಅಮಾನವೀಯ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ. ಈ ಘಟನೆ ಪ್ರಾಣಿಪ್ರಿಯರ ಆಕ್ರೋಶ ಹೊರಹಾಕುವಂತೆ ಮಾಡಿದೆ.

    ಭೋಪಾಲ್‍ನಲ್ಲಿರುವ ಸರೋವರವೊಂದರಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿ ಶ್ವಾನವನ್ನು ನೀರಿಗೆ ಬಿಸಾಕುತ್ತಿರುವುದನ್ನು ವಿಡಿಯೋ ಕೂಡ ಮಾಡಲಾಗಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

    ವಿಡಿಯೋದಲ್ಲಿ ಕಪ್ಪು ಬಣ್ಣದ ಟೀ- ಶರ್ಟ್ ಧರಿಸಿದ್ದ ವ್ಯಕ್ತಿಯ ಬಳಿ ಎರಡು ಶ್ವಾನಗಳು ಬಂದು ನಿಲ್ಲುತ್ತವೆ. ಒಂದು ಶ್ವಾನ ಆತನ ಹಿಂದೆ ಬಂದು ನಿಂತರೆ, ಇನ್ನೊಂದು ಈತನ ಕಾಲ ಪಕ್ಕವೇ ಬಂದು ಬಾಲ ಅಲ್ಲಾಡಿಸಿಕೊಂಡು ನಿಲ್ಲುತ್ತದೆ. ಈ ವೇಳೆ ವ್ಯಕ್ತಿ ತನ್ನ ಪಕ್ಕ ನಿಂತಿರುವ ಶ್ವಾನವನ್ನು ಹಾಗೆಯೇ ಎತ್ತಿಕೊಂಡು ಏಕಾಏಕಿ ನೀರಿಗೆ ಬಿಸಾಕುತ್ತಾನೆ. ಇದರ ಸಂಪೂರ್ಣ ವಿಡಿಯೋ ಮಾಡಲಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತಯೇ ಪ್ರಾಣಿಪ್ರಿಯರು, ಎನ್‍ಜಿಓಗಳು ತಮ್ಮ ಆಕ್ರೋಶ ಹೊರಹಾಕಿದ್ದು, ವ್ಯಕ್ತಿ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದೆ.

    ವರದಿಗಳ ಪ್ರಕಾರ, ಈ ವಿಡಿಯೋವನ್ನು ವ್ಯಾನ್ ವಿಹಾರ್ ಬಳಿಕ ಬೋಟ್ ಕ್ಲಬ್ ರಸ್ತೆಯಲ್ಲಿ ಚಿತ್ರೀಕರಿಸಲಾಗಿದೆ ಎನ್ನಲಾಗಿದೆ. ವಿಡಿಯೋದಲ್ಲಿ ವ್ಯಕ್ತಿ ಶ್ವಾನವನ್ನು ನೀರಿಗೆ ಬಿಸಾಕಿದ ಬಳಿಕ ವಿಡಿಯೋ ಮಾಡುತ್ತಿರುವವನತ್ತ ತಿರುಗಿ ನಸುನಕ್ಕಿರುವುದನ್ನು ಕೂಡ ಕಾಣಬಹುದಾಗಿದೆ.

    ಆರೋಪಿಯನ್ನು ಸಲ್ಮಾನ್ ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಗೋವಿಂದ್ ಸಿಂಗ್ ಹೇಳಿದ್ದಾರೆ. ಘಟನೆಯ ಸಂಬಂಧ ಐಪಿಸಿ ಸೆಕ್ಷನ್ 429(ಯಾವುದೇ ಪ್ರಾಣಿಯನ್ನು ಕೊಲ್ಲುವ ಅಥವಾ ದುರ್ಬಲಗೊಳಿಸುವ ಮೂಲಕ ಕಿಡಿಗೇಡಿತನ) ಅಡಿಯಲ್ಲಿ ಆರೋಪಿ ಸಲ್ಮಾನ್ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.