ಬೆಂಗಳೂರು: ಸಾಹಸಸಿಂಹ ಡಾ.ವಿಷ್ಣುವರ್ಧನ್ (Dr.Vishnuvardhan) ಹಾಗೂ ನಟಿ ಬಿ.ಸರೋಜಾದೇವಿ (B.Saroja Devi) ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ (Karnataka Ratna) ಪ್ರಶಸ್ತಿಯನ್ನು ಸರ್ಕಾರ ಘೋಷಿಸಿದೆ. ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ನಟ ವಿಷ್ಣುವರ್ಧನ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ನೀಡುವಂತೆ ಪತ್ನಿ ಭಾರತಿ ಮತ್ತು ಅಳಿಯ ಅನಿರುದ್ಧ್, ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ಮನವಿ ಮಾಡಿದ್ದರು. ಈ ಸಂಬಂಧ ವಿಷ್ಣು ಅಭಿಮಾನಿಗಳು ಸಹ ಸರ್ಕಾರದ ಮೇಲೆ ಒತ್ತಡ ಹಾಕಿದ್ದರು. ಸಿನಿಮಾ ರಂಗಕ್ಕೆ ವಿಷ್ಣು ಅವರ ಕೊಡುಗೆ ಹಾಗೂ ಅಭಿಮಾನಿಗಳ ಒತ್ತಾಸೆಯನ್ನು ಪರಿಗಣಿಸಿ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಘೋಷಿಸಿದೆ. ಇದನ್ನೂ ಓದಿ: ದಿ.ಡಾ.ವಿಷ್ಣುವರ್ಧನ್, ಸರೋಜಾದೇವಿಯವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆಗೆ ನಟಿಯರ ಮನವಿ
1971 ರಲ್ಲಿ ವಿಷ್ಣುವರ್ಧನ್ ಬೆಳ್ಳಿತೆರೆಗೆ ಪ್ರವೇಶಿಸಿದರು. ವಂಶವೃಕ್ಷ ಅವರ ಮೊದಲ ಚಿತ್ರ. ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ನಾಗರಹಾವು ಸಿನಿಮಾ ವಿಷ್ಣುವರ್ಧನ್ ಅವರ ಸಿನಿಮಾ ಬದುಕಿಗೆ ತಿರುವು ನೀಡಿತು. ಭೂತಯ್ಯನ ಮಗ ಅಯ್ಯು, ಗಂಧದ ಗುಡಿ ಸಿನಿಮಾಗಳಲ್ಲೂ ಗಮನ ಸೆಳೆದರು. ನಂತರ ಸಾಲು ಸಾಲು ಸಿನಿಮಾಗಳ ಮೂಲಕ ಕನ್ನಡ ರಂಗದಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದರು. ಆಪ್ತರಕ್ಷಕ ವಿಷ್ಣು ಅಭಿನಯದ ಕೊನೆ ಚಿತ್ರ. ಇದು 2010 ರಲ್ಲಿ ತೆರೆ ಕಂಡಿತ್ತು.
ಅಭಿನಯ ಸರಸ್ವತಿ ಎಂದೇ ಜನಪ್ರಿಯತೆ ಗಳಿಸಿದ್ದ ಅಭಿನೇತ್ರಿ ಬಿ.ಸರೋಜಾ ದೇವಿ ಅವರು ಜು.14 ರಂದು ನಿಧನರಾದರು. ಅವರು ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿ ನಟಿಸಿ ಖ್ಯಾತಿ ಗಳಿಸಿದ್ದಾರೆ. ಸುಮಾರು 200 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿ ಸೈ ಎನಿಸಿಕೊಂಡಿದ್ದಾರೆ. 1955 ರಲ್ಲಿ ತೆರೆಕಂಡ ಮಹಾಕವಿ ಕಾಳಿದಾಸ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಕನ್ನಡದ ಮೊದಲ ಮಹಿಳಾ ಸೂಪರ್‌ಸ್ಟಾರ್ ಎಂಬ ಬಿರುದನ್ನೂ ಪಡೆದುಕೊಂಡರು. 1970ರ ದಶಕದ ವರೆಗೂ ಹಲವಾರು ಯಶಸ್ವಿ ಚಿತ್ರಗಳಲ್ಲಿ ನಟಿಸಿ ಖ್ಯಾತಿ ಗಳಿಸಿದರು. ಇದನ್ನೂ ಓದಿ: ನಟ ವಿಷ್ಣುವರ್ಧನ್‌ರಿಗೆ ಮರಣೋತ್ತರ ಕರ್ನಾಟಕ ರತ್ನ ನೀಡಿ: ಸಿಎಂಗೆ ಅನಿರುದ್ಧ ಮನವಿ
ಬೆಂಗಳೂರು: ಕಾವೇರಿ ನಿವಾಸದಲ್ಲಿ ಇವತ್ತು ಕನ್ನಡ ಚಿತ್ರರಂಗದ ಹಿರಿಯ ನಟಿಯರು ಸಿಎಂ ಸಿದ್ದರಾಮಯ್ಯನವರನ್ನು (Siddaramaiah) ಭೇಟಿ ಮಾಡಿದರು. ಹಿರಿಯ ನಟಿಯರಾದ ಜಯಮಾಲ, ಶೃತಿ, ಮಾಳವಿಕ ಭೇಟಿ ಮಾಡಿ ಮಾತುಕತೆ ನಡೆಸಿದರು.
ಸೆಪ್ಟಂಬರ್ 18ಕ್ಕೆ ವಿಷ್ಣುವರ್ಧನ್ (Dr Vishnuvardhan) ಅವರ 75ನೇ ಬರ್ತ್ ಡೇ. ಅವತ್ತು ದಿವಂಗತ ಡಾ.ವಿಷ್ಣುವರ್ಧನ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ (Posthumous Karnataka Ratna Award) ಘೋಷಣೆ ಮಾಡುವಂತೆ ಮನವಿ ಮಾಡಿದರು. ಅಲ್ಲದೆ ದಿವಂಗತ ನಟಿ ಸರೋಜಾದೇವಿ (Saroja Devi) ಅವರಿಗೂ ಮರಣೋತ್ತರ ಕರ್ನಾಟಕ ರತ್ನ ನೀಡಿ ಗೌರವಿಸಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಬಳ್ಳಾರಿಯಿಂದ ಪದೇ ಪದೇ ಕರೆತರಲು ಸಾಧ್ಯವಿಲ್ಲ: ದರ್ಶನ್ ಪರ ವಕೀಲ
ಇನ್ನು ಸಿಎಂ ಭೇಟಿ ಬಳಿಕ ಮಾತನಾಡಿದ ಹಿರಿಯ ನಟಿ ಜಯಮಾಲಾ, ದಿವಂಗತ ವಿಷ್ಣುವರ್ಧನ್ ಅವರಿಗೆ 75ನೇ ವರ್ಷದ ಹುಟ್ಟುಹಬ್ಬದಂದು ಮರಣೋತ್ತರ ಕರ್ನಾಟಕ ರತ್ನ ಕೊಡಬೇಕು. ವಿಷ್ಣುವರ್ಧನ್ ಹಾಗೂ ಸರೋಜಾದೇವಿ ಅವರಿಗೆ ಕರ್ನಾಟಕ ರತ್ನ ಕೊಡಬೇಕು. ರಸ್ತೆಗೆ ಸರೋಜಾದೇವಿ ಹೆಸರು ಇಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇವೆ. ಸಚಿವ ಸಂಪುಟ ಸಭೆಯಲ್ಲಿ ಮಾತಾಡುತ್ತೇನೆ ಎಂದು ಸಿಎಂ ಹೇಳಿದ್ದಾರೆ. ವಿಷ್ಣುವರ್ಧನ್, ಸರೋಜಾದೇವಿ ಅವರ ಜೊತೆ ಕೆಲಸ ಮಾಡಿದ್ದೇವೆ. ನಾವು ಕಲಾವಿದರು, ನಮಗೆ ಯಾವುದೇ ಜಾತಿ ಇಲ್ಲ, ರಾಜಕೀಯವಿಲ್ಲ. ನಾವು ಒಟ್ಟಿಗೆ ಕೆಲಸ ಮಾಡಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಚಿತ್ರದುರ್ಗದಲ್ಲಿ ನಿರಂತರ ಮಳೆಗೆ ಬೆಳೆಹಾನಿ – ಜಮೀನುಗಳಿಗೆ ಅಧಿಕಾರಿಗಳ ಭೇಟಿ, ಪರಿಶೀಲನೆ
ಇದೇ ವೇಳೆ ಹಿರಿಯ ನಟಿ ಶೃತಿ ಮಾತನಾಡಿ, ವಿಷ್ಣುವರ್ಧನ್ ಸರ್ ಅವರ ಅಭಿಮಾನಿಯಾಗಿ ನಾವು ಬಂದಿದ್ದೇವೆ. ಕರ್ನಾಟಕ ರತ್ನ ನೀಡಬೇಕೆಂದು ಮನವಿ ಮಾಡಿದ್ದೇವೆ. ಸರೋಜಾ ದೇವಿ ಅವರಿಗೂ ಕರ್ನಾಟಕ ರತ್ನ ಕೊಡಬೇಕು ಪಕ್ಷಾತೀತವಾಗಿ ನಾವೆಲ್ಲ ಬಂದಿದ್ದೇವೆ. ನಾವೆಲ್ಲರೂ ಕಲಾವಿದರು, ಇದರಲ್ಲಿ ರಾಜಕೀಯ ಇಲ್ಲ ಎಂದರು. ಇದನ್ನೂ ಓದಿ: ವಿಷ್ಣು ಸ್ಮಾರಕ ವಿಚಾರ – ನಾಳೆ ಸಿಎಂ ಭೇಟಿಯಾಗಲಿರುವ ಭಾರತಿ ವಿಷ್ಣುವರ್ಧನ್
ಸ್ಯಾಂಡಲ್‍ವುಡ್‍ನ (Sandalwood) ಹಿರಿಯ ನಟಿ, ಅಭಿನಯ ಸರಸ್ವತಿ ಎಂದೇ ಖ್ಯಾತಿ ಹೊಂದಿದ್ದ ನಟಿ ಸರೋಜಾದೇವಿ (B.Saroja Devi) ಅಗಲಿಕೆಗೆ 11 ದಿನಗಳು. ಈ ಹಿನ್ನೆಲೆ ವೈಕುಂಠ ಸಮಾರಾಧನೆ (Vaikuntha Samaradhane) ಕಾರ್ಯವನ್ನು ಶುಕ್ರವಾರ (ಜು.25)ರಂದು ಕುಟುಂಬಸ್ಥರು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್‍ವುಡ್‍ನ ನಟರು-ನಟಿಯರು ಹಾಗೂ ಕುಟುಂಬಸ್ಥರು, ಕುಟುಂಬದ ಆಪ್ತರು ಭಾಗಿಯಾಗಿದ್ದರು.
ಸರೋಜಾದೇವಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಟ-ನಟಿಯರು ಭಾವುಕರಾದರು. ಸಮಾರಾಧನೆಯಲ್ಲಿ ಭಾಗಿಯಾದ ನಟ ಉಪೇಂದ್ರ ಬಳಿಕ ಮಾತನಾಡಿದರು. “ವಿಷ್ಣುವರ್ಧನ್ ಪ್ರಶಸ್ತಿ, ಡಾ.ರಾಜ್‍ಕುಮಾರ್ ಪ್ರಶಸ್ತಿ ಹಾಗೆ ಬಿ.ಸರೋಜಾದೇವಿ ಅವ್ರ ಹೆಸರಲ್ಲಿ ಪ್ರಶಸ್ತಿ ಆಗಬೇಕು. `ಎ’ ಸಿನಿಮಾ ಸೆನ್ಸಾರ್ ಆಗೋದಿಲ್ಲ ಅನ್ನೋ ಟೈಂನಲ್ಲಿ ಸಪೋರ್ಟ್ ನನಗೆ ಮಾಡಿದವರು. `ಎ’ ಸಿನಿಮಾವನ್ನ ಮೆಚ್ಚಿ ಹೊಗಳಿದ ಮೊದಲಿಗರು ಸರೋಜಮ್ಮ. `ಎ’ ಪಿಚ್ಚರ್‍ಗೆ ಪ್ರೊತ್ಸಾಹ ನೀಡದೇ ಇದ್ದಿದ್ದರೆ ಇವತ್ತು ನಾನು ಹೀರೋ ಆಗಿರೋಕೆ ಅವಕಾಶ ಇರ್ತಿರಲಿಲ್ಲ”. ಎಂದು ಈ ವೇಳೆ ನೆನಪಿಸಿಕೊಂಡರು. ಇದನ್ನೂ ಓದಿ: ಸರೋಜಾದೇವಿ ನನಗೂ ಸಿನಿಮಾದಲ್ಲಿ ನಟಿಸುವಂತೆ ಹೇಳಿದ್ದರು: ಡಿಕೆಶಿ
ಸರೋಜಾ ದೇವಿ ಅವರ ಪುತ್ರ ಗೌತಮ್ ಮಾತನಾಡಿ “ಸರೋಜಮ್ಮ ಅವ್ರಿಗೆ ಇಂಡಸ್ಟ್ರಿ ಬಗ್ಗೆ ಯಾವಾಗಲೂ ಗೌರವವಿತ್ತು. ಕೊನೆ ಘಳಿಗೆಯಲ್ಲಿ ಅವ್ರಿಗೆ ಆರೋಗ್ಯ ಸರಿಯಿರಲಿಲ್ಲ. ಮಲ್ಲೇಶ್ವರಂ ರಸ್ತೆಗೆ ಹೆಸರು ಇಡೋಕೆ ಚರ್ಚೆ ನಡಿತಾ ಇದೆ. ಈ ನಿರ್ಧಾರಕ್ಕೆ ಕುಟುಂಬದ ಸ್ವಾಗತವಿದೆ. ಮ್ಯೂಸಿಯಂ ಮಾಡುವ ಬಗ್ಗೆ ಯಾವಥರದ ಚಿಂತನೆ ಮಾಡಿಲ್ಲ. ಮಣ್ಣು ಮಾಡಿದ ಜಾಗದಲ್ಲಿ ಮೆಮೊರಿಯಲ್ ಮಾಡೋದಕ್ಕೆ ಚಿಂತನೆ ನಡಿತಿದೆ” ಎಂದರು.
ಸರೋಜಾ ದೇವಿ ಅವರ ವೈಕುಂಠ ಸಮಾರಾಧನೆಯಲ್ಲಿ ಹಿರಿಯ ನಟಿಯರಾದ ಸುಮಲತಾ ಅಂಬರೀಷ್, ಜಯಮಾಲಾ, ಶ್ರುತಿ, ಹೇಮಾ ಚೌಧರಿ, ಮಾಳವಿಕಾ ಅವಿನಾಶ್ ಮುಂತಾದ ನಟಿಯರು ಹಾಗೂ ನಟ ರವಿಶಂಕರ್ ಗೌಡ, ರಾಕ್‍ಲೈನ್ ವೆಂಕಟೇಶ್ ಭಾಗಿಯಾಗಿದ್ದರು. ಇದನ್ನೂ ಓದಿ: ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿದ ಸರೋಜಾದೇವಿ ಅಂತ್ಯಸಂಸ್ಕಾರ
ರಾಮನಗರ: ಬಿ.ಸರೋಜಾದೇವಿ ಅವರು ಖ್ಯಾತ ನಟಿ. ಅವರ ಕಲಾಸೇವೆಗಾಗಿ ಅವರ ಹೆಸರು ಶಾಶ್ವತವಾಗಿ ಉಳಿಯುವಂತೆ ಮಾಡಲು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ದಶಾವರದಲ್ಲಿ ಬಿ.ಸರೋಜಾದೇವಿ ಅವರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿ, ಮಾಧ್ಯಮದವರೊಂದಿಗೆ ಮಾತನಾಡಿದರು. ಈ ವೇಳೆ, ನಾವೆಲ್ಲರೂ ಇಂದು ದಕ್ಷಿಣ ಭಾರತದ ಖ್ಯಾತ ನಟಿ ಬಿ.ಸರೋಜಾದೇವಿ ಅವರ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಿದ್ದೇವೆ. ಇವರು ದಕ್ಷಿಣ ಭಾರತದ ಖ್ಯಾತ ನಟರ ಜೊತೆ 25ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಅಪಾರವಾದ ಕೀರ್ತಿ ಸಂಪಾದಿಸಿದ್ದಾರೆ. ಇಡೀ ಕರ್ನಾಟಕ ಸರ್ಕಾರ, ದಕ್ಷಿಣ ಭಾರತದ ಕಲಾವಿದರು ಅವರಿಗೆ ಗೌರವಪೂರ್ವಕವಾಗಿ ನಮನ ಅರ್ಪಿಸುವ ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು.ಇದನ್ನೂ ಓದಿ: ಮಂಗಳೂರು, ಉಡುಪಿಯಲ್ಲಿ ಬಿಜೆಪಿ ಅವರೇ ಗ್ಯಾರಂಟಿಗೆ ಕ್ಯೂ ನಿಂತಿದ್ರು: ಡಿಕೆಶಿ ಟಾಂಗ್
ನನಗೂ ಸಿನಿಮಾದಲ್ಲಿ ನಟಿಸುವಂತೆ ಹೇಳಿದ್ದರು
ಸರೋಜಾದೇವಿ ಅವರು ನನಗೆ ಸಣ್ಣ ವಯಸ್ಸಿನಿಂದಲೂ ಬಹಳ ಪರಿಚಯ. ನಾನು ಆರಂಭದಲ್ಲಿ ಸಚಿವನಾದಾಗ, ನನ್ನನ್ನು ಕರೆದು ನೀನು ಸಿನಿಮಾಗಳಲ್ಲಿ ನಟನೆ ಮಾಡಬೇಕು ಎಂದು ಹೇಳಿದ್ದರು. ಅವರು ನಮ್ಮ ಜಿಲ್ಲೆಯವರು. ಅವರ ಅಂತಿಮ ಸಂಸ್ಕಾರವನ್ನು ಇಲ್ಲಿ ಮಾಡುತ್ತಿದ್ದೇವೆ ಎಂದು ಹೇಳಿದರು.
ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ, ಜನನ ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ನಡುವೆ ನಾವು ಏನು ಸಾಧನೆ ಮಾಡುತ್ತೇವೆ ಅದು ಶಾಶ್ವತವಾಗಿ ಉಳಿಯುತ್ತವೆ. ಬಹಳ ಚಿಕ್ಕ ವಯಸ್ಸಿಗೆ ಭಾರತ ಸರ್ಕಾರದ ಪದ್ಮವಿಭೂಷಣ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಆ ಕಾಲದಲ್ಲಿ ಆ ವಯಸ್ಸಿಗೆ ಯಾರೂ ಆ ಪ್ರಶಸ್ತಿ ಪಡೆದಿರಲಿಲ್ಲ. ಅವರ ಹೆಸರು ಶಾಶ್ವತವಾಗಿ ಉಳಿದುಕೊಳ್ಳಲು ರಸ್ತೆಗಳಿಗೆ ಅವರ ಹೆಸರಿಡುವ ಕಾರ್ಯಕ್ರಮವನ್ನು ರೂಪಿಸಬೇಕು ಎಂದು ನಮ್ಮ ಶಾಸಕರಾದ ಯೋಗೇಶ್ವರ್ ಅವರು ಒತ್ತಾಯ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಬಿಡಿಎ ಅಥವಾ ಪಾಲಿಕೆಯಲ್ಲಿ ಈ ವಿಚಾರ ಚರ್ಚೆ ಮಾಡಿ ಈ ಕೆಲಸ ಮಾಡುತ್ತೇವೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಜನಿಸಿ, ಅವರು ಮಾಡಿರುವ ಅಪಾರವಾದ ಕಲಾ ಸೇವೆ ಅಪ್ರತಿಮವಾದುದ್ದು. ಅವರು ಎಂದಿಗೂ ಒಂದೇ ಒಂದು ವಿವಾದಕ್ಕೆ ಸಿಲುಕಲಿಲ್ಲ. ಎಲ್ಲಾ ವರ್ಗದ ಜನ ಅವರನ್ನು ಬಹಳ ಪ್ರೀತಿ, ಗೌರವದಿಂದ ಕಂಡಿದ್ದಾರೆ. ರಾಜ್ಯಕ್ಕೆ ಸಮಸ್ಯೆ ಎದುರಾದಾಗ ಅವರು ನಮ್ಮ ಜೊತೆ ನಿಂತು ರಾಜ್ಯದ ಹಿತ ಕಾಪಾಡಿದ್ದಾರೆ. ಕಲೆಗೆ ಹೆಚ್ಚಿಗೆ ಪ್ರೋತ್ಸಾಹ ನೀಡಿರುವುದನ್ನು ನಾವು ಸ್ಮರಿಸಬೇಕು. ಸರ್ಕಾರದ ಪರವಾಗಿ, ಈ ಜಿಲ್ಲೆಯವನಾಗಿ ಅವರಿಗೆ ಸಕಲ ಸರ್ಕಾರಿ ಗೌರವ ಸಲ್ಲಿಸಲಾಗುತ್ತಿದೆ ಎಂದು ಹೇಳಿದರು.
ಬೆಂಗಳೂರು/ರಾಮನಗರ: ಕನ್ನಡ ಚಿತ್ರರಂಗದ ಮೇರುನಟಿ, ಅಭಿನಯ ಸರಸ್ವತಿ, ಹಿರಿಯ ನಟಿ ಬಿ. ಸರೋಜಾದೇವಿ (B. Saroja Devi) ಅವರ ಅಂತ್ಯಸಂಸ್ಕಾರ (Cremation) ಇಂದು ಹುಟ್ಟೂರು ಚನ್ನಪಟ್ಟಣದ ದಶಾವರದಲ್ಲಿ ತಾಯಿಯ ಸಮಾಧಿ ಪಕ್ಕವೇ ನಡೆಯಲಿದೆ.
ಈ ಹಿಂದೆ, ಸರೋಜಾದೇವಿ ಬರೆದ ವ್ಹಿಲ್ ಪ್ರಕಾರ, ಗಂಡ ಹರ್ಷ ಸಮಾಧಿ ಪಕ್ಕವೇ ಕೊಡಿಗೇಹಳ್ಳಿಯ ತೋಟದ ಮನೆಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಬೇಕಿತ್ತು. ಆದರೆ ಸರೋಜಾದೇವಿ ತೋಟದ ಪಕ್ಕ ಅಪಾರ್ಟ್‌ಮೆಂಟ್‌ಗಳು ತಲೆ ಎತ್ತಿರುವುದರಿಂದ ಚನ್ನಪಟ್ಟಣದ (Channapatna) ದಶಾವರದ ಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ. ಇದನ್ನೂಓದಿ: ಸರೋಜಮ್ಮ ದಂತಕಥೆ, ಅವರ ಸ್ಥಾನ ತುಂಬಲೂ ಯಾರಿಂದಲೂ ಸಾಧ್ಯವಿಲ್ಲ: ನಟ ವಿಶಾಲ್ ಭಾವುಕ
ಪುತ್ರ ಗೌತಮ್ ಮಾತನಾಡಿ, ಪತಿ ಪಕ್ಕದಲ್ಲೇ ಅಂತ್ಯ ಸಂಸ್ಕಾರ ಮಾಡಬೇಕು ಎಂಬ ಆಸೆಯನ್ನು ಅಮ್ಮ ವ್ಯಕ್ತಪಡಿಸಿದ್ದರು. ಆದ್ರೆ ಆ ಜಾಗಈಗ ಲೇಔಟ್, ಅಪಾರ್ಟ್ಮೆಂಟ್ ಆಗಿದೆ. ಹೀಗಾಗಿ ಅಲ್ಲಿ ಅಂತ್ಯ ಸಂಸ್ಕಾರ ಮಾಡಲು ಸಾಧ್ಯವಿಲ್ಲ. ದಶವಾರ ಅವರು ಹುಟ್ಟಿದ ಜಾಗ. ಅವರ ತಾಯಿಯನ್ನು ಅಲ್ಲೇ ಮಣ್ಣು ಮಾಡಲಾಗಿದೆ. ಹಾಗಾಗಿ ಅಲ್ಲೇ ಅಂತ್ಯಕ್ರಿಯೆ ನಡೆಯಲಿದೆ ಎಂದರು.
ಮಧ್ಯಾಹ್ನ 1:30ಕ್ಕೆ ಅಂತ್ಯಸಂಸ್ಕಾರ ಕೆಲಸಗಳು ನಡೆಯಲಿವೆ. ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಅಂತಿಮ ದರ್ಶನ ಪಡೆಯಲಿದ್ದಾರೆ. ಚನ್ನಪಟ್ಟಣ ಹಾಗೂ ರಾಮನಗರದಲ್ಲಿ ನಿಲ್ಲಿಸಿ ಅಂತಿಮ ದರ್ಶನ ಮಾಡಿಸಲಾಗುತ್ತದೆ ಎಂದು ತಿಳಿಸಿದರು.
ಒಕ್ಕಲಿಗ ಸಂಪ್ರದಾಯದಂತೆ ವಿಧಿವಿಧಾನ ನಡೆಯಲಿದ್ದು ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆಗೆ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.
– 200 ಚಿತ್ರಗಳಲ್ಲಿ ನಟಿಸಿದ್ರೂ ಅಮ್ಮನ ಮಾತು ಮೀರದ ಅಭಿನೇತ್ರಿ
ಭಾರತ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಅಭಿನೇತ್ರಿಯೇ ಸರೋಜಾ ದೇವಿ (B Saroja Devi) ಅವ್ರು.. 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ, ಅಭಿನಯ ಸರಸ್ವತಿಯನ್ನೇ ತನ್ನ ಕಲೆ ಅಡಗಿಸಿಟ್ಟುಕೊಂಡಿದ್ದ ಮಹಾನ್ ಕಲಾವಿದೆ ಇವರು.. ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲೂ ಅಭಿನಯಿಸಿ.. ಸೈ ಎನಿಸಿಕೊಂಡಿದ್ದಲ್ಲದೇ ಸಿನಿರಸಿಕರನ್ನ ರಂಜಿಸಿದ್ದಾರೆ.
13ನೇ ವಯಸ್ಸಿನಲ್ಲೇ ಸರೋಜಾ ದೇವಿಗೆ ಸಿನಿಮಾ (Cinema) ಆಫರ್ ಬಂದಿತ್ತು. ಬಿ.ಆರ್ ಕೃಷ್ಣಮೂರ್ತಿ ಮೊದಲು ದೇವಿಯನ್ನ ಹಾಡು ಹೇಳುವಾಗ ನೋಡಿದ್ದರು. ನಂತರ ಅವರೇ ಮೊದಲು ಸಿನಿಮಾ ಆಫರ್? ಮಾಡಿದ್ದರು. ಇದಕ್ಕೂ ಮೊದಲು ಸಿನಿ ಕ್ಷೇತ್ರಕ್ಕೆ ಕಾಲಿಡೋ ಮುನ್ನ ಸರೋಜಾದೇವಿ ತಾಯಿ ಒಂದು ಷರತ್ತು ಹಾಕಿದ್ರು. ಅದುವೇ ಎಂದಿಗೂ ಸ್ವಿಮ್ಮಿಂಗ್ ಸ್ಯೂಟ್ ಹಾಕುವಂತಿಲ್ಲ, ಸ್ಲೀವ್‌ಲೆಸ್ ಧರಿಸದಂತೆ ತಾಕೀತು ಮಾಡಿದ್ರು. ಅದರಂತೆ ಅವ್ರು ಅಭಿನಯಿಸಿರೋ ಯಾವೊಂದು ಸ್ಲೀವ್‌ಲೆಸ್ ಡ್ರೆಸ್ ಹಾಕಿಲ್ಲ. 60 ವರ್ಷದಲ್ಲಿ ಸುಮಾರು 200 ಚಿತ್ರಗಳಲ್ಲಿ ಅಭಿನಯಿಸಿದ್ದರು. ಆ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಅಭಿನಯ ಸರಸ್ವತಿ ಎಂದು ಬಿರುದು ಪಡೆದುಕೊಂಡರು.
ಡಾ.ರಾಜ್, ಎಂಜಿಆರ್, ಎನ್‌ಟಿರ್ ಜೊತೆ ನಟನೆ
ಇನ್ನೂ 1958ರಲ್ಲಿ ತಮಿಳಿನಲ್ಲಿ (Tamil) ಬಹುಬೇಡಿಕೆ ನಟಿಯಾಗಿದ್ದರು ಸರೋಜಾದೇವಿ. ಅವರಿಗೆ `ನಾಡೋಡಿ ಮಾನಾನ್..?’ ಸಿನಿಮಾ ತಮಿಳಿನಲ್ಲಿ ಸಕ್ಸಸ್ ತಂದುಕೊಟ್ಟ ಸಿನಿಮಾ. 1959ರಲ್ಲಿ `ಪಾಂಡುರಂಗ ಮಾಹಾತ್ಯಂ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದರು. 1970ರ ವರೆಗೂ ತೆಲುಗು ಇಂಡಸ್ಟ್ರೀಯಲ್ಲಿ ಯಶಸ್ವಿ ನಟಿಯಾಗಿದ್ದರು. 1967ರಲ್ಲಿ ಮದುವೆಯಾದ ಬಳಿಕವೂ 1974ರ ವರೆಗೂ ತಮಿಳಿನಲ್ಲಿ ಬೇಡಿಕೆ ನಟಿಯಾಗಿದ್ದರು. 1980ರ ವರೆಗೂ ಕನ್ನಡ ಮತ್ತು ತೆಲುಗಿನಲ್ಲಿ ಬಹು ಬೇಡಿಕೆಯ ನಟಿಯಾಗಿದ್ದ ಸರೋಜಾ ದೇವಿ, 1959 ರಿಂದ ಬಾಲಿವುಡ್‌ನಲ್ಲೂ ತನ್ನ ಛಾಪು ಮೂಡಿಸಿದ್ದರು. 161 ಸಿನಿಮಾಗಳಲ್ಲಿ ಲೀಡ್ ರೋಲ್‌ನಲ್ಲಿ ನಟಿಸಿರೋ ಅಭಿನಯ ಸರಸ್ವತಿಯಾಗಿದ್ದರು. ಡಾ. ರಾಜ್‌ಕುಮಾರ್ ಜೊತೆ `ಬಬ್ರುವಾಹನ’, `ಭಾಗ್ಯವಂತರು’, `ತಂದೆ ಮಕ್ಕಳು’ ಎಂಬ ಸಿನಿಮಾಗಳಲ್ಲಿ ಅವರು ನಟಿಸಿ, ಖ್ಯಾತಿ ಪಡೆದಿದ್ದ ಮೇರು ನಟಿ ಇವರಾಗಿದ್ದರು. ಅಷ್ಟೇ ಅಲ್ಲದೇ `ಕಿತ್ತೂರು ರಾಣಿ ಚೆನ್ನಮ್ಮ’ `ಕೋಕಿಲವಾಣಿ’, `ಶ್ರೀರಾಮಪೂಜಾ’, `ರತ್ನಗಿರಿ ರಹಸ್ಯ’, `ಸ್ಕೂಲ್ ಮಾಸ್ಟರ್’, `ಭೂಕೈಲಾಸ’, `ಜಗಜ್ಯೋತಿ ಬಸವೇಶ್ವರ’, ‘ದೇವಸುಂದರಿ’ ಸಿನಿಮಾ ಜನಪ್ರಿಯವಾಗಿದ್ದವು.
ಇನ್ನು, ಎನ್‌ಟಿಆರ್, ಎಂಜಿಆರ್, ಶಿವಾಜಿ ಗಣೇಶನ್ ನಂಥಹ ಖ್ಯಾತನಾಮರ ಜೊತೆ ಬಿ. ಸರೋಜಾ ದೇವಿ ತೆರೆ ಹಂಚಿಕೊಂಡಿದ್ದರು. ಮರುವರ್ಷ `ತಿರುಮಣಂ’ ಎಂಬ ಸಿನಿಮಾ ಮೂಲಕ ತಮಿಳು ಚಿತ್ರರಂಗ ಪ್ರವೇಶಿಸಿದ್ದರು. 1957ರಲ್ಲಿ `ಪಾಂಡುಗರಂ ಮಹಾತ್ಮ’ ತೆಲುಗಿನಲ್ಲಿ ನಟಿಸಿದ್ದ ಮೊದಲ ಸಿನಿಮಾ ಆಗಿತ್ತು. ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದರು. ಒಂದ್ಕಾಲದಲ್ಲಿ ನಾಯಕಿಯಾಗಿ ಮಿಂಚಿದ ಅವರು ಬಳಿಕ ಪೋಷಕ ಪಾತ್ರಗಳತ್ತ ಮುಖ ಮಾಡಿದ್ದರು.
ಪುನೀತ್ ರಾಜ್‌ಕುಮಾರ್ ಜೊತೆಯೂ ನಟನೆ
ಸರೋಜಾ ದೇವಿ ಅವರು ಪುನೀತ್ ರಾಜ್ ಕುಮಾರ್‌ನ ಬಾಲ್ಯದಿಂದಲೂ ನೋಡುತ್ತಾ ಬಂದವರು. ಅವರ ನಡುವಿನ ಆತ್ಮೀಯ ಬಾಂಧವ್ಯ ಎಲ್ಲರ ಕಣ್ಣಿಗೂ ಕಟ್ಟಿದಂತೆಯೇ ಇದೆ. ಸರೋಜಾ ದೇವಿ ಅವರು ಪುನೀತ್ ಅವರನ್ನು ತಮ್ಮ ಮಗನಂತೆ ಕಾಣುತ್ತಿದ್ದರು. 1984ರಲ್ಲಿ `ಯಾರಿವನು’ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಜೊತೆಗೆ ಸ್ಕ್ರೀನ್ ಶೇರ್ ಮಾಡಿದ್ರು ಮತ್ತು `ನಟಸಾರ್ವಭೌಮ’ ಚಿತ್ರಗಳಲ್ಲಿ ಅವರಿಬ್ಬರೂ ಒಟ್ಟಿಗೆ ನಟಿಸಿದ್ದಾರೆ. `ಕಣ್ಣಿಗೆ ಕಾಣದ ದೇವರು ಎಂದರೆ ಅದು ಅಮ್ಮನು ತಾನೆ’ ಎಂಬ ಹಾಡು ಇವತ್ತಿಗೂ ಫೇಮಸ್ ಆಗಿದೆ. ಆ ಹಾಡಿನ ದೃಶ್ಯ ನೋಡಿ ಸರೋಜಾ ದೇವಿ ಅವರು `ಈ ಮಗು ನನ್ನ ಮಗುವೇ ಆಗಿದ್ದರೆ ಎಷ್ಟು ಚೆನ್ನಾಗಿ ಇರುತ್ತಿತ್ತು’ ಅಂತ ಹೇಳಿದ್ದರು. ಆದ್ರೆ ದುರಾದೃಷ್ಟವಶಾತ್ ಇವತ್ತು ಈ ಎರಡೂ ನಕ್ಷತ್ರಗಳೂ ನಮ್ಮೊಂದಿಗೆ ಇಲ್ಲ.
200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಬಿ.ಸರೋಜಾದೇವಿ ಅವರಿಗೆ ಹತ್ತು-ಹಲವು ಪ್ರಶಸ್ತಿಗಳು ಲಭಿಸಿವೆ. ಪದ್ಮಶ್ರೀ, ಪದ್ಮಭೂಷಣ ಸೇರಿದಂತೆ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿಗಳೂ ಲಭಿಸಿವೆ. ಪ್ರಶಸ್ತಿಗಳ ವಿವರ ನೋಡೋದಾದ್ರೆ…
ರಾಷ್ಟ್ರಪ್ರಶಸ್ತಿಗಳು
* 2008ರಲ್ಲಿ ಜೀವಮಾನ ಸಾಧನೆಗಾಗಿ ಭಾರತ ಸರ್ಕಾರದಿಂದ ಪ್ರಶಸ್ತಿ
* 1992ರಲ್ಲಿ ಪದ್ಮಭೂಷಣ ಪ್ರಶಸ್ತಿ
* 1969ರಲ್ಲಿ ಪದ್ಮಶ್ರೀ ಪ್ರಶಸ್ತಿ
ರಾಜ್ಯಪ್ರಶಸ್ತಿಗಳು
* 2010ರಲ್ಲಿ ಜೀವಮಾನ ಸಾಧನೆಗಾಗಿ ತಮಿಳುನಾಡು ಸರ್ಕಾರದಿಂದ ಗೌರವ
* 2009ರಲ್ಲಿ ಕರ್ನಾಟಕ ಸರ್ಕಾರದಿಂದ ಡಾ.ರಾಜಕುಮಾರ್ ರಾಷ್ಟ್ರ ಪ್ರಶಸ್ತಿ
* 2009ರಲ್ಲಿ ಆಂಧ್ರಪ್ರದೇಶ ಸರ್ಕಾರದಿಂದ ಎನ್‌ಟಿಆರ್ ನ್ಯಾಷನಲ್ ಪ್ರಶಸ್ತಿ
* 2001ರಲ್ಲಿ ಆಂಧ್ರಪ್ರದೇಶ ಸರ್ಕಾರದಿಂದ ಎನ್‌ಟಿಆರ್ ನ್ಯಾಷನಲ್ ಪ್ರಶಸ್ತಿ
* 1993ರಲ್ಲಿ ತಮಿಳುನಾಡು ಸರ್ಕಾರದಿಂದ ಎಂಜಿಆರ್ ಪ್ರಶಸ್ತಿ
* 1989ರಲ್ಲಿ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ
* 1980ರಲ್ಲಿ ಕರ್ನಾಟಕ ರಾಜ್ಯದ ಅಭಿನಂದನ-ಕಾಂಚನ ಮಾಲಾ ಪ್ರಶಸ್ತಿ
* 1969ರಲ್ಲಿ ಕುಲ ವಿಲಕ್ಕು ಸಿನಿಮಾದ ಉತ್ತಮ ನಟನೆಗಾಗಿ ಫಿಲ್ಮ್ ಅವಾರ್ಡ್
* 1965ರಲ್ಲಿ ಕರ್ನಾಟಕ ಸರ್ಕಾರದಿಂದ ಅಭಿನಯ ಸರಸ್ವತಿ ಪ್ರಶಸ್ತಿಗಳನ್ನ ಮುಡಿಗೇರಿಸಿಕೊಂಡಿದ್ದಾರೆ.
ಅಭಿನಯ ಸರಸ್ವತಿ ಎಂದೇ ಖ್ಯಾತಿ ಪಡೆದಿದ್ದ ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ.ಸರೋಜಾ ದೇವಿ (B Saroja Devi) ಅವರಿಂದು ವಿಧಿವಶವಾಗಿದ್ದು, ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ʻಮನುಷ್ಯನ ಪಂಚೇಂದ್ರಿಯಗಳಲ್ಲಿ ಕಣ್ಣು ಪ್ರಮುಖವಾದದ್ದು. ಕಣ್ಣು ದಾನ ಮಾಡುವ ಮೂಲಕ ಬೇರೊಬ್ಬರಿಗೆ ದೃಷ್ಟಿ ನೀಡಿ ಬಾಳು ಬೆಳಗಬೇಕು’ ಎನ್ನುವಂತೆ ಸರೋಜಾ ದೇವಿ ಅವರು ನೇತ್ರದಾನ (Eye Donate) ಮಾಡಿದ್ದಾರೆ.
ಬೆಂಗಳೂರಿನ (Bengaluru) ನಾರಾಯಣ ನೇತ್ರಾಲಯಕ್ಕೆ ನೇತ್ರದಾನ ಮಾಡಿದ್ದರು. ಅದರಂತೆ ಇಂದು ಸರೋಜಾದೇವಿ ಅವರ ಕಣ್ಣುಗಳನ್ನು ಪಡೆಯಲಾಗುತ್ತಿದೆ. ವೈದ್ಯರ ತಂಡ ಮಲ್ಲೇಶ್ವರಂನಲ್ಲಿರುವ ಮೆನೆಗೆ ಆಗಮಿಸಿದ್ದು, ನೇತ್ರದಾನ ಪ್ರಕ್ರಿಯೆಯನ್ನ ಪೂರ್ಣಗೊಳಿಸಲಾಗುತ್ತಿದೆ. ನೇತ್ರದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಂತಿಮ ದರ್ಶನ ಮತ್ತೆ ನಡೆಯಲಿದೆ. ಇದನ್ನೂ ಓದಿ: ಕೋವಿಡ್ ವೇಳೆ 2 ಲಕ್ಷ ಕೊಟ್ಟು ಯಾರಿಗಾದ್ರೂ ಸಹಾಯ ಮಾಡು ಅಂತ ಹೇಳಿದ್ರು – ಸಾಧು ಕೋಕಿಲಾ
ಕನ್ನಡ ವರನಟ ಡಾ.ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ (Puneeth Rajkumar) ಕೂಡ ನೇತ್ರದಾನ ಮಾಡಿದ್ದರು. ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ಮರಣದ ನಂತರ ಅವರ ಕಣ್ಣುಗಳನ್ನು ನಾರಾಯಣ ನೇತ್ರಾಲಯದಲ್ಲಿ ಇಬ್ಬರು ಅಂಧರಿಗೆ ಅಳವಡಿಸಲಾಗಿದೆ. ಆ ಮೂಲಕ ಇಬ್ಬರ ಬಾಳಿಗೆ ಪುನೀತ್ ರಾಜ್‌ಕುಮಾರ್ ಬೆಳಕಾಗಿದ್ದಾರೆ. ಇದೀಗ ರಾಜ್‌ಕುಮಾರ್, ಪುನೀತ್ ಅವರ ಹಾದಿಯಾಗಿ ಸರೋಜಾದೇವಿ ಅವರೂ ನೇತ್ರದಾನ ಮಾಡಿದ್ದು, ಬದುಕಿನ ಪಯಣ ಮುಗಿಸಿದ್ದಾರೆ. ಇದನ್ನೂ ಓದಿ: ಸಿನಿಮಾದ ಸುವರ್ಣ ಯುಗವೊಂದು ಅಂತ್ಯವಾಗಿದೆ – ಸರೋಜಾದೇವಿ ನಿಧನಕ್ಕೆ ಕಂಬನಿ ಮಿಡಿದ ರಜನಿಕಾಂತ್, ಖುಷ್ಬು
ಸರೋಜಾದೇವಿ ಎಂದಾಕ್ಷಣ ಕಿತ್ತೂರು ಚೆನ್ನಮ್ಮ, ಬಬ್ರುವಾಹನ, ಭಾಗ್ಯವಂತರು, ಅಣ್ಣತಂಗಿ ಮುಂತಾದ ಚಿತ್ರಗಳಲ್ಲಿನ ಅವರ ಮನೋಜ್ಞ ಅಭಿನಯ ಕಣ್ಣಮುಂದೆ ಬರುತ್ತದೆ. ಕನ್ನಡ ಚಿತ್ರರಂಗದ ಕಿತ್ತೂರು ರಾಣಿ ಚೆನ್ನಮ್ಮ ಅಂತಲೇ ಎಲ್ಲರ ಮನದಲ್ಲಿ ಮನೆ ಮಾಡಿದ್ದ ಸರೋಜಾದೇವಿ ಅವರು ತಮ್ಮ ನಿವಾಸದಲ್ಲಿ ಉಸಿರು ಚೆಲ್ಲಿದ್ದಾರೆ. ಹಿರಿಯ ನಟಿಯ ನಿಧನಕ್ಕೆ ಸಿನಿ ಗಣ್ಯರು, ರಾಜಕೀಯ ನಾಯಕರು ಕಂಬನಿ ಮಿಡಿದಿದ್ದಾರೆ. ಇದನ್ನೂ ಓದಿ: ಬಿ.ಸರೋಜಾದೇವಿಯವರ ಸಾವಿನಿಂದ ಕಲಾಜಗತ್ತು ಬಡವಾಗಿದೆ – ಸಿಎಂ ಸಂತಾಪ