Tag: ಸರಳವಾಸ್ತು

  • ಚಂದ್ರಶೇಖರ್ ಗುರೂಜಿ ಹತ್ಯೆಗೆ ಟ್ವಿಸ್ಟ್ – ವಾಟ್ಸಾಪ್ ಚಾಟ್ ತೆರೆದಿಡ್ತು ಕೊಲೆ ರಹಸ್ಯ

    ಚಂದ್ರಶೇಖರ್ ಗುರೂಜಿ ಹತ್ಯೆಗೆ ಟ್ವಿಸ್ಟ್ – ವಾಟ್ಸಾಪ್ ಚಾಟ್ ತೆರೆದಿಡ್ತು ಕೊಲೆ ರಹಸ್ಯ

    ಹುಬ್ಬಳ್ಳಿ: (Hubballi) ಸರಳವಾಸ್ತು ಅನ್ನೋ ಸಾಮಾಜ್ಯವನ್ನು ಕಟ್ಟಿ ಭೀಕರವಾಗಿ ಕೊಲೆಯಾದ ಚಂದ್ರಶೇಖರ್ ಗುರೂಜಿ (Chandrashekhar Guruji) ಕೇಸ್‌ಗೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಒಂದೇ ಕುಟುಂಬದಂತಿದ್ದ ಗುರೂಜಿ ಪರಿವಾರ ಗ್ರೂಪ್‌ಗೆ ಹುಳಿ ಹಿಂಡಿದವರು ಅವರ ಅಣ್ಣನ ಮಕ್ಕಳು ಅನ್ನೋದು ಬಯಲಾಗಿದೆ.

    ಸರಳವಾಸ್ತು ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಕ್ತಿದೆ. ಇದಕ್ಕೆ ಪ್ರಮುಖ ಕಾರಣ ಆಪ್ತರಲ್ಲಿ ಮೂಡಿದ ಮನಸ್ತಾಪ. ಯಾವಾಗ ಅವರ ಅಣ್ಣನ ಮಕ್ಕಳು, ಗುರೂಜಿ ಕಂಪನಿಗೆ ಎಂಟ್ರಿ ಆದ್ರೋ ಅಲ್ಲಿಂದ ಸಮಸ್ಯೆ ಶುರುವಾಗಿದೆ. 2014ರ ನಂತರ ಗುರೂಜಿ ಸರಳವಾಸ್ತು (Saralavastu) ಕಂಪನಿಯಲ್ಲಿ ಮಹತ್ತರ ಬೆಳವಣಿಗೆ ಆಗಿದೆ. ಚಂದ್ರಶೇಖರ ಗುರೂಜಿ, ಸಿಬ್ಬಂದಿ ನಡುವೆ ಅಣ್ಣನ ಮಕ್ಕಳು ವಿಲನ್‌ಗಳಾಗುತ್ತಿದ್ದಾರೆ ಅಂತ ಹತ್ಯೆ ಆರೋಪಿ ಮಂಜುನಾಥ ಸ್ವತಃ ಗುರೂಜಿ ಮುಂದೆ ನೋವು ತೋಡಿಕೊಂಡಿದ್ದರು. ಇದನ್ನೂ ಓದಿ: ಮಂಗಳೂರಿನಲ್ಲಿ ಕೆಲ್ಸ- ಸಿಎಂಗೆ ಧನ್ಯವಾದ ಹೇಳಿದ ಪ್ರವೀಣ್ ನೆಟ್ಟಾರು ಪತ್ನಿ

    ಇನ್ನು 2019 ಜೂನ್ 24ರಂದು ಮಂಜುನಾಥ ಮರೆವಾಡ, ಚಂದ್ರಶೇಖರ್ ಗುರೂಜಿಗೆ ಮಾಡಿದ್ದ ವಾಟ್ಸಾಪ್ ಮೆಸೇಜ್ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ವಾಟ್ಸ್ ಮೆಸೇಜ್‌ನಲ್ಲಿರುವ ಪ್ರಮುಖ ಅಂಶಗಳು ಹೀಗಿವೆ.

    ಮಂಜುನಾಥ್ ವಾಟ್ಸಾಪ್ ಸಂದೇಶದಲ್ಲಿ ಏನಿದೆ?
    ನೀವು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ಸಿಬ್ಬಂದಿಗೆ 2ನೇ ತಂದೆಯಾಗಿದ್ದೀರಿ. ನಿಮ್ಮ ಏಳಿಗೆಗಾಗಿ ನಾವು ಕಷ್ಟಪಟ್ಟು ದುಡಿದೆವು. ಆದ್ರೆ ಯಾವಾಗ ನಿಮ್ಮ ಅಣ್ಣನ ಮಕ್ಕಳು ಕಂಪನಿಗೆ ಎಂಟ್ರಿ ಕೊಟ್ರೋ ಆಗ ಎಲ್ಲವೂ ಬದಲಾಯಿತು. ನೀವು ಸಿಬ್ಬಂದಿಯನ್ನು ಮಕ್ಕಳಂತೆ ಕಾಣುತ್ತಿದ್ದೀರಿ. ಆದರೆ ನಿಮ್ಮ ಅಣ್ಣನ ಮಕ್ಕಳು ನಿಮ್ಮನ್ನು ಮತ್ತು ನಮ್ಮನ್ನು ಬೇರೆ ಮಾಡಲು ಶುರು ಪ್ರಯತ್ನಿಸಿದ್ದಾರೆ. ನಿಮ್ಮ ಅಣ್ಣನ ಮಕ್ಕಳು ಯಾವಾಗ ಕಂಪನಿಗೆ ಬಂದರೋ ಆಗ ನಿಮ್ಮ ಅವನತಿ ಆರಂಭವಾಯಿತು. ನೀವು ನಮ್ಮ ಪಾಲಿನ ದೇವರು ಅಂತ ತಿಳಿದುಕೊಂಡಿದ್ದೆವು. ಆದರೆ ನೀವು ನಮ್ಮ ಪಾಲಿನ ಯಮ ಆದಿರಿ. ನಿಮಗೆ ನಾವು ಏನು ಮಾಡಿದ್ವಿ? ನಮ್ಮ ಕಣ್ಣೀರು ನಿಮ್ಮನ್ನ ಕ್ಷಮಿಸೋದಿಲ್ಲ. 400 ಜನ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಿದ್ರಿ. ಅವರ ಕಣ್ಣೀರು ಸುಮ್ಮನೆ ಬಿಡೋದಿಲ್ಲ. ಆದರೂ ನಿಮಗೆ ನಾವು ಒಳ್ಳೆಯದನ್ನೇ ಬಯಸುತ್ತೇವೆ ಎಂದು ಸಂದೇಶದಲ್ಲಿದೆ. ಇದನ್ನೂ ಓದಿ: ಅಕ್ರಮ ಒತ್ತುವರಿ ತೆರವಿಗೆ ಮುಂದಾದ ತಹಶೀಲ್ದಾರ್‌ಗೆ ವಕೀಲೆಯಿಂದ ಆವಾಜ್‌

    ಇಷ್ಟು ಮಾತ್ರವಲ್ಲ ಇನ್ನೂ ಸಾಕಷ್ಟು ಮೆಸೇಜ್‌ಗಳು ಆರೋಪಿಗಳಿಂದ ಗುರೂಜಿಗೆ ಹೋಗಿವೆ. ಆದರೆ ಚಂದ್ರಶೇಖರ ಗುರೂಜಿ ಮಾತ್ರ ಇವುಗಳಿಗೆ ತಲೆಕೆಡಿಸಿಕೊಂಡಿಲ್ಲ. ಗುರೂಜಿ, ಸಿಬ್ಬಂದಿ ಮೇಲಿಟ್ಟಿದ್ದ ಕಾಳಜಿಯು ಅಣ್ಣನ ಮಕ್ಕಳು ಎಂಟ್ರಿ ಬಳಿಕ ಕಡಿಮೆಯಾಗಿದೆ. ಇದರಿಂದ ಹುಟ್ಟಿಕೊಂಡ ಮನಸ್ತಾಪ ಗುರೂಜಿ ಅಂತ್ಯಕ್ಕೆ ಕಾರಣವಾಗಿದೆ ಎನ್ನಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಸರಳವಾಸ್ತು ಗುರೂಜಿ ಹತ್ಯೆ ಕೇಸ್- ಬೇನಾಮಿ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆ ಲಭ್ಯ

    ಸರಳವಾಸ್ತು ಗುರೂಜಿ ಹತ್ಯೆ ಕೇಸ್- ಬೇನಾಮಿ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆ ಲಭ್ಯ

    ಹುಬ್ಬಳ್ಳಿ: ಚಂದ್ರಶೇಖರ ಗುರೂಜಿ (Chandrashekhar Guruji) ಹತ್ಯೆಯ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಮುಖ್ಯ ತನಿಖಾಧಿಕಾರಿ ಎಸಿಪಿ ವಿನೋದ ಮುಕ್ತೇದಾರ ನೇತೃತ್ವದಲ್ಲಿ ಐದು ತನಿಖಾ ತಂಡ ರಚಿಸಲಾಗಿತ್ತು. ಸದ್ಯ ನ್ಯಾಯಾಲಯಕ್ಕೆ 800ಕ್ಕೂ ಅಧಿಕ ದೋಷಾರೋಪಣೆ ಪುಟಗಳನ್ನು ಅಧಿಕಾರಿಗಳು ಸಲ್ಲಿಸಿದ್ದಾರೆ. ಹಣ, ಬೇನಾಮಿ ಆಸ್ತಿ, ಮತ್ತು ಹಂತಕರಿಗೆ ಗುರೂಜಿಯಿಂದ ಹಂತಕರಿಗೆ ಮಾನಸಿಕ ಕಿರಿಕಿರಿ ಕೊಲೆಗೆ ಮುಖ್ಯ ಕಾರಣ ಎಂಬ ಪ್ರಮುಖ ಅಂಶಗಳು ಜಾರ್ಜ್ ಶೀಟ್‍ (ChargeSheet) ನಲ್ಲಿ ದಾಖಲಾಗಿವೆ.

    ಹುಬ್ಬಳ್ಳಿಯ ಖಾಸಗಿ ಹೋಟೆಲ್‍ನಲ್ಲಿ ನಡೆದ ಪ್ರಖ್ಯಾತ ಸರಳವಾಸ್ತು ಗುರೂಜಿಯ ಹತ್ಯೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಹತ್ಯೆಗೆ ಕಾರಣ ತಿಳಿಯಲು ಮುಖ್ಯ ತನಿಖಾಧಿಕಾರಿ ಎಸಿಪಿ ವಿನೋದ ಮುಕ್ತೇದಾರ ನೇತೃತ್ವದಲ್ಲಿ ಐದು ತನಿಖಾ ತಂಡ ರಚಿಸಲಾಗಿತ್ತು. ಸದ್ಯ ಪೊಲೀಸ್ ಅಧಿಕಾರಿಗಳು ನ್ಯಾಯಾಲಯಕ್ಕೆ 800 ಪುಟಗಳ ಚಾರ್ಜ್‍ಶೀಟ್ ಸಲ್ಲಿಸಿದ್ದಾರೆ.

    ಚಂದ್ರಶೇಖರ ಗುರೂಜಿ ಹತ್ಯೆಗೆ ಕಾರಣಗಳು: ಹಂತಕನ ಹೆಸರಿನಲ್ಲಿದ್ದ 10 ಕೋಟಿ ಬೇನಾಮಿ ಜಮೀನಿ (Property) ನ ವ್ಯಾಜ್ಯವೇ ಹತ್ಯೆಗೆ ಕಾರಣ ಎಂಬುದಾಗಿ ಉಲ್ಲೇಖಿಸಲಾಗಿದೆ. ವಿಚಾರಣೆ ವೇಳೆ ಬೇನಾಮಿ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆ ಪತ್ತೆಯಾಗಿದೆ. ಹುಬ್ಬಳ್ಳಿಯ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿರುವ 10 ಕೋಟಿ ರೂಪಾಯಿ ಮೌಲ್ಯದ 4.5 ಎಕರೆ ಜಮೀನು ಇದೆ. ಇದನ್ನು ಬೇನಾಮಿಯಾಗಿ ಗುರೂಜಿ ಹಂತಕ ಮಹಾಂತೇಶ ಹೆಸರಿಗೆ ಮಾಡಿದ್ದರು. ಈ ಜಮೀನನ್ನು ಮಹಾಂತೇಶ ಗುರೂಜಿಗೆ ತಿಳಿಯದಂತೆ ಮಾರಿದ್ದ. ಈ ವಿಚಾರವಾಗಿ ಗುರೂಜಿ, ಮಹಾಂತೇಶ ಕೋರ್ಟ್ ಮೆಟ್ಟಿಲೇರಿದ್ದರು.

    ರೆವಿನ್ಯೂ ಕೋರ್ಟ್ (Revenue Court) ನಲ್ಲಿ ಕೇಸ್ ಮಹಾಂತೇಶ್ ಪರವಾಗಿತ್ತು. ಈ ತೀರ್ಪು ಪ್ರಶ್ನಿಸಿ ಗುರೂಜಿ ಸಿವಿಲ್ ಕೋರ್ಟ್ (Civil Court) ಗೆ ಹೋಗಿದ್ದರು. ಈ ವಿಚಾರ ಮಹಾಂತೇಶ್ ಮತ್ತು ಗುರೂಜಿ ನಡುವೆ ಕಲಹಕ್ಕೆ ಕಾರಣವಾಗಿತ್ತು. ಅಲ್ಲದೆ ಹಂತಕರು ಸರಳವಾಸ್ತು ಸಂಸ್ಥೆಗೆ ವಿರುದ್ಧವಾಗಿ ಮತ್ತೊಂದು ಸಂಸ್ಥೆ ಕಟ್ಟಿದ್ರು. ತನ್ನ ಪ್ರಾಪರ್ಟಿಯನ್ನು ಮಹಾಂತೇಶ ಕಬಳಿಸಿದ್ದಕ್ಕೆ ಗುರೂಜಿ ಸಿಟ್ಟಾಗಿದ್ದರು. ಕೋಪಗೊಂಡಿದ್ದ ಗುರೂಜಿ ಇವರಿಗೆ ಹಿನ್ನಡೆ ಆಗುವಂತೆ ಮಾಡಿದ್ರು. ಇದಕ್ಕೆ ಹಂತಕರು ಗುರೂಜಿ ಅಪಾರ್ಟ್‍ಮೆಂಟ್‍ನಲ್ಲಿ ರೂಲ್ಸ್ ಬ್ರೇಕ್ ಆಗ್ತಿದೆ ಅಂತ ದೂರು ಕೊಟ್ಟಿದ್ರು.

    ಕಾನೂನುಗಳು ಉಲ್ಲಂಘನೆಯಾಗುತ್ತಿವೆ ಅಂತ ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಈ ದೂರನ್ನು ಹಿಂಪಡೆಯುವಂತೆ ಗುರೂಜಿಯೇ ಹಂತಕರಿಗೆ ಒತ್ತಡ, ಮಾನಸಿಕ ಕಿರಿಕಿರಿ ನೀಡಿದ್ದರು ಎಂದು ಚಾರ್ಜ್‍ಶೀಟ್‍ನಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ. ಇಷ್ಟೆಲ್ಲ ಆದ್ಮೇಲೆ ಈ ಹಂತಕರು ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿಯವರನ್ನು ಹತ್ಯೆ ಮಾಡಲು ಪೂರ್ವ ತಯಾರಿ ನಡೆಸಿದ್ರು.

    ಹತ್ಯೆಗೆ ಪ್ರೀಪ್ಲಾನ್..!: ಗುರೂಜಿ ಹತ್ಯೆಗೆ ಮೂರು ತಿಂಗಳಿನಿಂದ ಹಂತಕರಿಂದ ಸ್ಕೆಚ್ ಹಾಕಿದ್ದರು. ಸಾರ್ವಜನಿಕವಾಗಿ ಗುರೂಜಿ ಕೊಲ್ಲಲು ಪ್ಲಾನ್ ಮಾಡಿದ್ರು. ಆದರೆ ಅದು ಸಫಲವಾಗಿರಲಿಲ್ಲ. ತಮ್ಮ ಮೊಮ್ಮಗನ ಸಾವಿನಿಂದ ಗುರೂಜಿ ಹುಬ್ಬಳ್ಳಿಗೆ ಬಂದಿದ್ದ ವಿಷಯ ತಿಳಿದ ಆರೋಪಿಗಳು, ಗುರೂಜಿ ಬಂದ ದಿನವೇ ಖಾಸಗಿ ಹೋಟೆಲ್‍ನಲ್ಲಿ ರೂಂ ಪಡೆದು ಹತ್ಯೆಗೆ ಮಾಸ್ಟರ್ ಪ್ಲಾನ್ ಹೂಡಿದ್ದರು. ಇದನ್ನೂ ಓದಿ: ದಸರಾ ಮೆರವಣಿಗೆ ವೇಳೆ ಮದರಸಾಗೆ ನುಗ್ಗಿ ಪೂಜೆ – 9 ಜನರ ವಿರುದ್ಧ ಎಫ್‌ಐಆರ್

    ಹತ್ಯೆ ಹಿಂದಿನ ದಿನ ಗುರೂಜಿಗೆ ಕರೆ ಮಾಡಿ ಮಾತಾಡಿ ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂದು ನಾಟಕ ಮಾಡಿದರು. ಹಂತಕರ ಮಾತು ನಂಬಿದ್ದ ಗುರೂಜಿ ಭೇಟಿಗೆ ಒಪ್ಪಿ ಬರಲು ತಿಳಿಸಿದ್ದಾರೆ. ಗುರೂಜಿ ಭೇಟಿಗೆ ಹೋಟೆಲ್‍ಗೆ ಹೋಗಿದ್ದ ಹಂತಕರು, ಬೇನಾಮಿ ಆಸ್ತಿ ಪತ್ರ ಮತ್ತು ಹತ್ಯೆಗಾಗಿ ಚಾಕುವನ್ನು ಒಂದೇ ಕವರ್ ನಲ್ಲಿ ತಂದಿದ್ದರು. ಪ್ರೆಸಿಡೆಂಟ್ ಹೋಟೆಲ್‍ಗೆ ತೆಗೆದುಕೊಂಡು ಹೋಗಿದ್ದರು. ಮೊದಲು ದಾಖಲೆ ಪತ್ರ ತೆಗೆಯುವಂತೆ ನಾಟಕವಾಡಿ ಬಳಿಕ ಚಾಕು ತೆಗೆದು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಿದ್ದಾರೆ.

    ಒಟ್ಟಾರೆ ಚಂದ್ರಶೇಖರ್ ಗುರೂಜಿ ಹತ್ಯೆ ನಡೆದು 3 ತಿಂಗಳು ಕಳೆದ ಮೇಲೆ ಚಾರ್ಜ್‍ಶೀಟ್ ದಾಖಲಾಗಿದ್ದು. ಹಂತಕರಿಗೆ ಯಾವ ಶಿಕ್ಷೆ ಆಗಲಿದೆ ಎಂಬುದು ಮುಂದೆ ಗೊತ್ತಾಗಲಿದೆ.

    Live Tv
    [brid partner=56869869 player=32851 video=960834 autoplay=true]

  • ವಾಸ್ತುಗುರೂಜಿ ಕೊಲೆ ಬಗ್ಗೆ ಹಂತಕರ ತಪ್ಪೊಪ್ಪಿಗೆ – ಸಂಧಾನ ನೆಪದಲ್ಲಿ ದಾಖಲೆ ಜೊತೆ ಚಾಕು ತಂದು ಹತ್ಯೆ

    ವಾಸ್ತುಗುರೂಜಿ ಕೊಲೆ ಬಗ್ಗೆ ಹಂತಕರ ತಪ್ಪೊಪ್ಪಿಗೆ – ಸಂಧಾನ ನೆಪದಲ್ಲಿ ದಾಖಲೆ ಜೊತೆ ಚಾಕು ತಂದು ಹತ್ಯೆ

    ಹುಬ್ಬಳ್ಳಿ: ಖ್ಯಾತ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಅವರ ಹತ್ಯೆಯಾಗಿ ಮೂರು ದಿನ ಕಳೆಯುತ್ತಿದೆ. ಪ್ರಕರಣ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಹಂತಕರಿಂದ ಪೊಲೀಸರು ಮೊದಲ ದಿನವೇ ಆರೋಪಿಗಳಿಂದ ಮಹತ್ವದ ಸತ್ಯವನ್ನು ಬಾಯಿಬಿಡಿಸಿದೆ. ಮತ್ತೊಂದು ಕಡೆ ಅವರ ಕುಟುಂಬಸ್ಥರು ಮೂರನೇ ದಿನದ ಕಾರ್ಯ ನೆರವೇರಿಸಿದ್ದಾರೆ. ಆರೋಪಿಗಳನ್ನು ಕಸ್ಟಡಿಗೆ ಪಡೆದಿರೋ ಪೊಲೀಸರು ಗೌಪ್ಯ ಸ್ಥಳದಲ್ಲಿ ವಿಚಾರಣೆ ನಡೆಸಿದ್ದಾರೆ. ಹಂತಕರು ತಪ್ಪೊಪ್ಪಿಕೊಂಡಿದ್ದು ಹತ್ಯೆ ಹಿಂದಿನ ದ್ವೇಷವನ್ನ ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.

    42 ಬಾರಿ ಚುಚ್ಚಿ ಕೊಲ್ಲುವಷ್ಟು ದ್ವೇಷ ಯಾಕೆ: ಚಂದ್ರಶೇಖರ ಗುರೂಜಿ ಹತ್ಯೆಗೆ ದ್ವೇಷವೇ ಕಾರಣ ಅಂತ ಹಂತಕರು ವಿಚಾರಣೆಯಲ್ಲಿ ಹೇಳಿದ್ದಾರೆ. ಗುರೂಜಿ ಬಳಿ 10-12 ವರ್ಷ ಕೆಲಸ ಮಾಡಿದ್ದ ಹಂತಕರು 2016ರಲ್ಲೇ ಕೆಲಸ ಬಿಟ್ಟಿದ್ರು. ಗುರೂಜಿ ಸಂಸ್ಥೆಯಿಂದ ಹೊರಬಂದ ಬಳಿಕ ರಿಯಲ್ ಎಸ್ಟೇಟ್ ಸೇರಿದಂತೆ ಬೇರೆ ಬೇರೆ ಕೆಲಸ ಮಾಡ್ಕೊಂಡಿದ್ರಂತೆ. ಆದರೆ ನಮ್ಮ ಪ್ರತಿ ಕೆಲಸಕ್ಕೂ ಗುರೂಜಿ ಅಡ್ಡಗಾಲು ಹಾಕುತ್ತಿದ್ದರು ಅಂತ ಹಂತಕರು ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ. ನಮ್ಮ ವ್ಯಾಪಾರ-ಉದ್ಯೋಗಕ್ಕೆ ಅಡ್ಡಿಪಡಿಸುತ್ತಿದ್ದ ಗುರೂಜಿ ಬೆದರಿಕೆ ಹಾಕ್ತಿದ್ರು. ಹೀಗಾಗಿ ತಾಳ್ಮೆಗೆಟ್ಟು ನಾವೇ ಕೊಲೆ ಮಾಡಿದ್ದೇವೆಂದು ತಪ್ಪೊಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಇಬ್ಬರಲ್ಲ, 20ಕ್ಕೂ ಹೆಚ್ಚು ಮಂದಿಯಿಂದ ಸ್ಕೆಚ್‌ – ಗುರೂಜಿಗೆ ಬ್ಲ್ಯಾಕ್‌ಮೇಲ್‌ ಮಾಡಿ ಸುಲಿಗೆಗೆ ಇಳಿದಿದ್ದ ಹಂತಕರು

    ಸಂಧಾನ ನೆಪ.. ದಾಖಲೆ ಜೊತೆ ತಂದಿದ್ರು ಚಾಕು: ಚಂದ್ರಶೇಖರ್ ಗುರೂಜಿ ಹತ್ಯೆಗೆ ಜುಲೈ 3 ರಂದೇ ಪ್ಲಾನ್ ನಡೆದಿದೆ. ಮೂರು ದಿನದ ಹಿಂದೆ ಮನೆಬಿಟ್ಟಿದ್ದ ಹಂತಕರು ಹೊಸೂರು ವೃತ್ತದ ಬಳಿರುವ ಕೆನರಾ ಹೊಟೆಲ್‍ನಲ್ಲಿ ರೂಮ್ ಪಡೆದು ವಾಸವಿದ್ರು. ಹೋಟೆಲ್‍ನಲ್ಲಿ ಕೂತು ಹತ್ಯೆಗೆ ಪಕ್ಕಾ ಪ್ಲಾನ್ ಮಾಡಿಕೊಂಡಿದ್ರು. ಗುರೂಜಿ ಮತ್ತು ತಮ್ಮ ನಡುವೆ ಇರುವ ವ್ಯಾಜ್ಯದ ಸಂಧಾನ ನೆಪಹೇಳಿ ಚಂದ್ರಶೇಖರ್ ಗುರೂಜಿಯನ್ನು ಭೇಟಿ ಮಾಡಲು ಕೇಳಿಕೊಂಡಿದ್ರು. ಹಂತಕರ ಮುಖ ಅರಿಯದ ಗುರೂಜಿ ಭೇಟಿಗೆ ಒಪ್ಪಿದ್ದರು. ಹೋಟೆಲ್‍ಗೆ ಬರುವಾಗ ಕೈಯಲ್ಲಿ ದಾಖಲೆ ಪತ್ರಗಳನ್ನ ಹಿಡಿದುಕೊಂಡು ಬಂದಿದ್ದ ಹಂತಕರು, ದಾಖಲೆಪತ್ರಗಳ ಮಧ್ಯೆ ಚಾಕು ಹಿಡಿದು ತಂದಿದ್ರು. ಗುರೂಜಿ ಬರ್ತಿದ್ದಂತೆ ಹತ್ಯೆಗೈದು ದಾಖಲೆ ಅಲ್ಲಿಯೇ ಬಿಟ್ಟು ಎಸ್ಕೇಪ್ ಆಗಿದ್ರು. ಹೋಟೆಲ್ ಮುಂಭಾಗದ ಕಸದ ರಾಶಿಯಲ್ಲಿ ಚಾಕು ಎಸೆದು ಎಸ್ಕೇಪ್ ಆಗಿದ್ರು. ಇದನ್ನೂ ಓದಿ: ಗುರೂಜಿಯನ್ನು ನಾವು ದೇವರಂತೆ ಕಾಣುತ್ತಿದ್ದೆವು: ವನಜಾಕ್ಷಿ

    ಹತ್ಯೆ ನಡೆದ ಸ್ಥಳಕ್ಕೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಈ ವೇಳೆ ಹೋಟೆಲ್ ಭದ್ರತಾಲೋಪದ ಬಗ್ಗೆ ಹೋಟೆಲ್ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡರು. ಈ ಮಧ್ಯೆ ಗುರೂಜಿ ಸಾವಿನಿಂದ ಇನ್ನೂ ಹೊರಬಾರದ ಕುಟುಂಬಸ್ಥರು ಸಮಾಧಿಗೆ ಮೂರು ದಿನದ ಹಾಲು-ತುಪ್ಪ ಕಾರ್ಯ ನೆರವೇರಿಸಿದರು. ಮಗಳು ಸ್ವಾತಿ, ಗುರೂಜಿ ಪತ್ನಿ ಅಂಕಿತಾ ಹಾಗೂ ಅಣ್ಣನ ಮಗ ಸಂಜಯ್ ಸಮಾಧಿಗೆ ಪೂಜೆ ಸಲ್ಲಿಸಿದರು.

    Live Tv
    [brid partner=56869869 player=32851 video=960834 autoplay=true]

  • ಸಂಭವಾಮಿ ಯುಗೇ ಯುಗೇ – ಗೀತೋಪದೇಶದ ಸಾಲನ್ನು ಪೋಸ್ಟ್ ಮಾಡಿದ್ದ ಗುರೂಜಿ ಹಂತಕ

    ಸಂಭವಾಮಿ ಯುಗೇ ಯುಗೇ – ಗೀತೋಪದೇಶದ ಸಾಲನ್ನು ಪೋಸ್ಟ್ ಮಾಡಿದ್ದ ಗುರೂಜಿ ಹಂತಕ

    ಬೆಂಗಳೂರು: ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣದ ಪ್ರಮುಖ ಹಂತಕ ಮಹಾಂತೇಶ್ ಶಿರೂರು ಇತ್ತೀಚೆಗಷ್ಟೇ ತನ್ನ ಫೇಸ್‍ಬುಕ್‍ನಲ್ಲಿ ಫೋಸ್ಟ್ ಮಾಡಿದ್ದ ಭಗವದ್ಗೀತೆ ಗೀತೋಪದೇಶದ ಸಾಲಿನ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಚಂದ್ರಶೇಖರ ಗುರೂಜಿ ಅವರನ್ನು ಹತ್ಯೆ ಮಾಡುವ ಮುನ್ನ ಐದು ದಿನದ ಹಿಂದೆ ಹಂತಕ ಮಹಾಂತೇಶ್, ಶ್ರೀ ಕೃಷ್ಣ ಪರಮಾತ್ಮನ ರೌದ್ರಾವತಾರದಲ್ಲಿ ಕುದುರೆ ಏರಿ ಹೋಗುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾನೆ. ಅಲ್ಲದೇ ಈ ಫೋಟೋದಲ್ಲಿ ಅಧರ್ಮ ತಾಂಡವವಾಡುತ್ತಿರುವಾಗ ದುಷ್ಟರ ನಾಶ ಪಡಿಸಲು ಧರ್ಮ ಪುನರ್ ಸ್ಥಾಪಿಸಲು ನೀನು ಬರುವೆ ಎಂದು ವಚನ ನೀಡಿರುವೆ. ವಿಳಂಭವೇಕೆ ಮತ್ತೆ ಅವತರಿಸು ಪ್ರಭುವೆ..! ಸಂಭವಾಮಿ ಯುಗೇ ಯುಗೇ ಎಂಬ ಭಗವದ್ಗೀತೆಯ ಗೀತೋಪದೇಶದ ಸಾಲುಗಳಿರುವುದನ್ನು ಕಾಣಬಹುದಾಗಿದೆ.  ಇದನ್ನೂ ಓದಿ: ಸರಳವಾಸ್ತು ಗುರೂಜಿ ಹೆಸರು ಹೇಳಿ ಆಸ್ತಿ ಮಾಡಲು ಮುಂದಾಗಿದ್ದ ಹಂತಕರು

    ಸರಳವಾಸ್ತು ಖ್ಯಾತಿಯ ಜ್ಯೋತಿಷಿ ಚಂದ್ರಶೇಖರ್ ಗುರೂಜಿ ಅವರನ್ನು ಹುಬ್ಬಳ್ಳಿಯ ಉಣಕಲ್‍ನಲ್ಲಿರುವ ಖಾಸಗಿ ಹೋಟೆಲ್‍ನಲ್ಲಿ ಹಾಡಹಗಲೇ ಭಕ್ತರ ಸೋಗಿನಲ್ಲಿ ಬಂದ ಇಬ್ಬರು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದರು. ಸದ್ಯ ಇಬ್ಬರು ಆರೋಪಿಗಳನ್ನು ಪೊಲೀಸರು ಬುಧವಾರವೇ ಬಂಧಿಸಿದ್ದು, ಈ ಸಂಬಂಧ ತೀವ್ರ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಇಬ್ಬರಲ್ಲ, 20ಕ್ಕೂ ಹೆಚ್ಚು ಮಂದಿಯಿಂದ ಸ್ಕೆಚ್‌ – ಗುರೂಜಿಗೆ ಬ್ಲ್ಯಾಕ್‌ಮೇಲ್‌ ಮಾಡಿ ಸುಲಿಗೆಗೆ ಇಳಿದಿದ್ದ ಹಂತಕರು

    Live Tv
    [brid partner=56869869 player=32851 video=960834 autoplay=true]

  • ಇಬ್ಬರಲ್ಲ, 20ಕ್ಕೂ ಹೆಚ್ಚು ಮಂದಿಯಿಂದ ಸ್ಕೆಚ್‌ – ಗುರೂಜಿಗೆ ಬ್ಲ್ಯಾಕ್‌ಮೇಲ್‌ ಮಾಡಿ ಸುಲಿಗೆಗೆ ಇಳಿದಿದ್ದ ಹಂತಕರು

    ಇಬ್ಬರಲ್ಲ, 20ಕ್ಕೂ ಹೆಚ್ಚು ಮಂದಿಯಿಂದ ಸ್ಕೆಚ್‌ – ಗುರೂಜಿಗೆ ಬ್ಲ್ಯಾಕ್‌ಮೇಲ್‌ ಮಾಡಿ ಸುಲಿಗೆಗೆ ಇಳಿದಿದ್ದ ಹಂತಕರು

    ಹುಬ್ಬಳ್ಳಿ: ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿಯನ್ನು ಇಬ್ಬರು ಸೇರಿ ಹತ್ಯೆ ಮಾಡಿದ್ದಲ್ಲ. 20 ರಿಂದ 25 ಜನರ ತಂಡ ಸೇರಿ ಕೊಲೆಯ ಸ್ಕೆಚ್‌ ಹಾಕಿದ್ದ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ.

    ಹೌದು. ಮಂಗಳವಾರ ಮಧ್ಯಾಹ್ನ ಮಹಾಂತೇಶ್, ಮಂಜುನಾಥ ಇಬ್ಬರು ಹುಬ್ಬಳ್ಳಿ ಹೋಟೆಲ್‌ನಲ್ಲಿ ಗುರೂಜಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಆದರೆ ಈ ಹತ್ಯೆಯ ಹಿಂದೆ ಒಂದು ತಂಡವೇ ಕೆಲಸ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

    ದ್ವೇಷಕ್ಕೆ ಕಾರಣ ಏನು?
    ಮಹಾಂತೇಶ್ 2008ರಲ್ಲಿ ಗುರೂಜಿ ಅವರ ಚಂದ್ರಶೇಖರ ಗೌರಿ ಪರಿವಾರ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಕೆಲಸದ ಕೌಶಲ್ಯ ಮತ್ತು ಸಾಮರ್ಥ್ಯ ಕಂಡು ಈತನನ್ನು ಮುಂಬೈ  ಬ್ರ್ಯಾಂಚ್‌  ಒಂದರ ಮುಖ್ಯಸ್ಥನನ್ನಾಗಿ ಗುರೂಜಿ ನೇಮಕ ಮಾಡುತ್ತಾರೆ. ತನಗೆ ನೀಡಿದ ಜವಾಬ್ದಾರಿಯನ್ನು ದುರುಪಯೋಗ ಪಡಿಸಿಕೊಂಡ ಈತ ಗುರೂಜಿ ಅವರ ಸಲಹೆ ಪಡೆಯಲು ಬರುವವರ ಜೊತೆಗೆ ನೇರವಾಗಿ ವ್ಯವಹಾರ ಮಾಡಲು ಆರಂಭಿಸುತ್ತಾನೆ. ಇದನ್ನೂ ಓದಿ: ಗುರೂಜಿಯನ್ನು ನಾವು ದೇವರಂತೆ ಕಾಣುತ್ತಿದ್ದೆವು: ವನಜಾಕ್ಷಿ

    ಸರಳವಾಸ್ತು ಮಾಡಿಕೊಡಿಕೊಳ್ಳಲು ನಿಗದಿಪಡಿಸಿದ ಶುಲ್ಕವನ್ನು ಕಂಪನಿಗೆ ನೀಡದೇ ತಾನೇ ಗುಳುಂ ಮಾಡುತ್ತಾನೆ. ಇದೇ ಸಮಯದಲ್ಲಿ ಮಹಾಂತೇಶ್‌ಗೆ ಮಂಜುನಾಥನ ಪರಿಚಯವಾಗುತ್ತದೆ. ಕೊನೆಗೆ ಮಂಜುನಾಥ ಮತ್ತು ಇತನ ಜೊತೆಗೆ ಇನ್ನು ಹಲವು ಮಂದಿ ಮೋಸ ಮಾಡಿರುವ ವಿಚಾರ ಗುರೂಜಿಗೆ ತಿಳಿಯುತ್ತದೆ. ಇವರ ಮೇಲೆ ಸಿಟ್ಟಾದ ಗುರೂಜಿ ಮಹಾಂತೇಶ್‌ ತಂಡದಲ್ಲಿದ್ದ 20 ರಿಂದ 25 ಮಂದಿಯನ್ನು 2016ರಲ್ಲಿ ಕೆಲಸದಿಂದಲೇ ತೆಗೆದು ಹಾಕುತ್ತಾರೆ. ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಗುರೂಜಿ ಮೇಲೆ ಇವರಿಗೆ ದ್ವೇಷ ಆರಂಭವಾಗುತ್ತದೆ.

    ಕಿರಾಣಿ ಅಂಗಡಿಯಲ್ಲಿ ನಷ್ಟ:
    ಕೆಲಸ ಬಿಟ್ಟ ಬಳಿಕ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿ ಮಹಾಂತೇಶ್ ಕಿರಾಣಿ ಅಂಗಡಿ ತೆರೆದಿದ್ದ. 2018 ರಿಂದ ಒಂದು ವರ್ಷಗಳ ಕಾಲ ಕಿರಾಣಿ ಅಂಗಡಿ ನಡೆಸಿದ್ದರೂ ನಷ್ಟ ಅನುಭವಿಸಿದ್ದ. ಇದಾದ ಬಳಿಕ ಮಹಾಂತೇಶ್‌ ರಿಯಲ್‌ ಎಸ್ಟೇಟ್‌ ವ್ಯವಹಾರ ಮಾಡಲು ಮುಂದಾದ. ಮಹಾಂತೇಶನ ರಿಯಲ್‌ ಎಸ್ಟೇಟ್‌ ವ್ಯವಹಾರಕ್ಕೆ ಮಂಜುನಾಥನೂ ಸಹಕಾರ ನೀಡಿದ್ದ. ಇವರಿಬ್ಬರೂ ಸೇರಿ ಹುಬ್ಬಳ್ಳಿಯ ಖಾಸಗಿ ಕಟ್ಟಡದಲ್ಲಿ ರಿಯಲ್‌ ಎಸ್ಟೇಟ್‌ ಕಂಪನಿಯನ್ನು ತೆರೆದಿದ್ದರು. ಹುಬ್ಬಳ್ಳಿ, ಧಾರವಾಡ, ಜಮಖಂಡಿ, ಮುಧೋಳದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಮಾಡುತ್ತಿದ್ದರು. ಆದರೆ ಈ ವ್ಯವಹಾರ ನಷ್ಟವಾಗಿತ್ತು. ಇದರಿಂದ ಇಬ್ಬರು ಭಾರೀ ಪ್ರಮಾಣದಲ್ಲಿ ಆರ್ಥಿಕ ನಷ್ಟವನ್ನು ಅನುಭವಿಸಿದ್ದರು. ಈ ಆರ್ಥಿಕ ನಷ್ಟವನ್ನು ಸರಿಪಡಿಸಲು ಹೂಡಿದ ಕುತಂತ್ರವೇ ಬ್ಲ್ಯಾಕ್‌ಮೇಲ್‌. ಚಂದ್ರಶೇಖರ ಗುರೂಜಿ ಅವರಿಗೆ ಬ್ಲ್ಯಾಕ್‌ಮೇಲ್‌ ಮಾಡಿ ಸುಲಿಗೆ ಮಾಡಲು ಇವರಿಬ್ಬರು ಮುಂದಾಗಿದ್ದರು. ಈ ಕುತಂತ್ರಕ್ಕೆ ಚಂದ್ರಶೇಖರ ಗುರೂಜಿ ಬಗ್ಗಿರಲಿಲ್ಲ.

    ಬ್ಲ್ಯಾಕ್‌ಮೇಲ್‌ ಹೇಗೆ?
    ಚಂದ್ರಶೇಖರ ಗುರೂಜಿ ಹುಬ್ಬಳ್ಳಿ ವಿಮಾನ ನಿಲ್ದಾಣದ ರಸ್ತೆಯ ಡೆಕತ್ಲಾನ್ ಶೋರೂಂ ಹಿಂದೆ ʼಗೋಕುಲʼ ಹೆಸರಿನಲ್ಲಿ ಅಪಾರ್ಟ್‌ಮೆಂಟ್‌ ಕಟ್ಟಿಸಿದ್ದರು. ಆರಂಭದಲ್ಲಿ ಈ ಅಪಾರ್ಟ್‌ಮೆಂಟ್‌ ಗುರೂಜಿಯವರ ಬೇನಾಮಿ ಆಸ್ತಿಯಾಗಿದ್ದು ಮಹಾಂತೇಶ್‌ ಪತ್ನಿಯ ಹೆಸರಿನಲ್ಲಿ ನಿರ್ಮಿಸಿದ್ದರು ಎಂಬ ಮಾಹಿತಿ ಸಿಕ್ಕಿತ್ತು. ಆದರೆ ಈ ಆಸ್ತಿ ಬೇನಾಮಿ ಆಗಿರಲಿಲ್ಲ. ಗುರೂಜಿ ಅವರ ಸ್ವಂತ ಆಸ್ತಿಯಾಗಿದ್ದು ಈ ಅಪಾರ್ಟ್‌ಮೆಂಟ್‌ನಲ್ಲಿ ಮಹಾಂತೇಶ್‌ ಪತ್ನಿ ಜೊತೆ ವಾಸವಾಗಿದ್ದ.

    ಈ ಅಪಾರ್ಟ್‌ಮೆಂಟ್‌ ವಿಚಾರವಾಗಿ ಮಹಾಂತೇಶ್‌ ಮತ್ತು ಮಂಜುನಾಥ ಕಾನೂನು ಸಮರಕ್ಕೆ ಇಳಿದಿದ್ದರು. ಅಪಾರ್ಟ್‌ಮೆಂಟ್‌ ಸರಿಯಾಗಿ ನಿರ್ಮಾಣಗೊಂಡಿಲ್ಲ, ಪಾರ್ಕಿಂಗ್‌ಗೆ ಜಾಗವಿಲ್ಲ, ಮಳೆ ನೀರು ಸರಿಯಾಗಿ ಹೋಗುತ್ತಿಲ್ಲ, ಸೋಲಾರ್‌ ವ್ಯವಸ್ಥೆ ಇಲ್ಲ ಎಂದು ಆರೋಪಿಸಿ ಧಾರವಾಡ ಗ್ರಾಹಕ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು. ಈ ವಿಚಾರವಾಗಿ ಗುರೂಜಿ ಪ್ರಶ್ನೆ ಮಾಡಿದಾಗ ಹಣವನ್ನು ನೀಡಿದರೆ ದೂರನ್ನು ಹಿಂಪಡೆಯುವುದಾಗಿ ತಿಳಿಸಿದ್ದರು. ಅಷ್ಟೇ ಅಲ್ಲದೇ ಹಣ ನೀಡದೇ ಇದ್ದರೆ ಹತ್ಯೆ ಮಾಡುವುದಾಗಿ ಬೆದರಿಕೆ ಸಹ ಹಾಕಿದ್ದರು. ಆದರೆ ಗುರೂಜಿ ಹಂತಕರ ಜೀವ ಬೆದರಿಕೆ ಮತ್ತು ಬ್ಲ್ಯಾಕ್‌ಮೇಲ್‌ಗೆ ಬಗ್ಗಿರಲಿಲ್ಲ. ಹಣ ನೀಡದ್ದಕ್ಕೆ ಸಿಟ್ಟಾಗಿದ್ದ ಇವರು ಗುರೂಜಿ ವಿರುದ್ಧ ದ್ವೇಷ ಸಾಧಿಸಲು ಮುಂದಾಗುತ್ತಿದ್ದರು. ಯಾವುದೇ ಬೆದರಿಕೆಗೆ ಜಗ್ಗದ ಕಾರಣ ಸಿಟ್ಟಾಗಿದ್ದ ಇವರು ಪೂರ್ವ ತಯಾರಿ ಮಾಡಿಕೊಂಡು ಬಂದು ಮಂಗಳವಾರ ಮಧ್ಯಾಹ್ನ ಕೊಲೆ ಮಾಡಿದ್ದಾರೆ.

     

    ಎಫ್‌ಐಆರ್‌ ದಾಖಲು:
    ಗುರೂಜಿ ಸಂಬಂಧಿ ಸಂಜಯ್‌ ಅಂಗಡಿ ಎಂಬವರು ನೀಡಿದ ದೂರಿನ ಆಧಾರದಲ್ಲಿ ವಿದ್ಯಾನಗರ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 34(ಏಕೋದ್ದೇಶಕ್ಕಾಗಿ ಹಲವು ವ್ಯಕ್ತಿಗಳು ಮಾಡಿದ ಕೃತ್ಯ), 302(ಕೊಲೆ) ಅಡಿ ಎಫ್‌ಐಆರ್‌ ದಾಖಲಾಗಿದೆ.

    ಮಂಗಳವಾರ ಹೋಟೆಲ್‌ಗೆ ಬಂದಿದ್ದ ಮಹಾಂತೇಶ್‌ ಮತ್ತು ಮಜಂಜುನಾಥ್‌ ಅಪಾರ್ಟ್‌ಮೆಂಟ್‌ ವಿಚಾರ ಸಂಬಂಧ ಮಾತನಾಡಲು ಬನ್ನಿ ಎಂದು ಗುರೂಜಿ ಅವರನ್ನು ಕರೆದು ಹತ್ಯೆ ಮಾಡಿದ್ದಾರೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಗುರೂಜಿ ಹತ್ಯೆ ಪ್ರಕರಣ- ರಸ್ತೆಯಲ್ಲಿ ಜೆಸಿಬಿ ಅಡ್ಡ ನಿಲ್ಲಿಸಿ, ಗನ್ ತೋರಿಸಿ ಹಂತಕರಿಗೆ ಬೇಡಿ ತೊಡಿಸಿದ ಖಾಕಿ

    ಗುರೂಜಿ ಹತ್ಯೆ ಪ್ರಕರಣ- ರಸ್ತೆಯಲ್ಲಿ ಜೆಸಿಬಿ ಅಡ್ಡ ನಿಲ್ಲಿಸಿ, ಗನ್ ತೋರಿಸಿ ಹಂತಕರಿಗೆ ಬೇಡಿ ತೊಡಿಸಿದ ಖಾಕಿ

    ಬೆಳಗಾವಿ: ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಹಂತಕರನ್ನು ಸಿನಿಮೀಯ ಸ್ಟೈಲ್‍ನಲ್ಲಿ ಬಂಧಿಸಲಾಗಿದೆ.

    ಘಟನೆ ನಡೆದ ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು, ಕಾರಲ್ಲಿ ಮುಂಬೈಗೆ ಎಸ್ಕೇಪ್ ಆಗುತ್ತಿದ್ದ ಇಬ್ಬರು ಹಂತಕರಾದ ಧಾರವಾಡದ ಮಹಂತೇಶ್ ಶಿರೂರ ಮತ್ತು ಕಲಘಟಗಿಯ ಮಂಜುನಾಥ್‍ನನ್ನು ರಾಮದುರ್ಗ ಬಳಿ ಸಿನಿಮೀಯ ರೀತಿಯಲ್ಲಿ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

    ಮೊಬೈಲ್ ಲೋಕೇಷನ್ ಆಧರಿಸಿ ಬೆನ್ನಟ್ಟಿದ ಪೊಲೀಸರು ಆರೋಪಿಗಳು ಎಸ್ಕೇಪ್ ಆಗದಂತೆ ಸುತ್ತುವರಿದಿದ್ದಾರೆ. ರಸ್ತೆಗೆ ಅಡ್ಡಲಾಗಿ ಜೆಸಿಬಿಗಳು ನಿಂತಿದ್ದರಿಂದ ಆರೋಪಿಗಳು ಎಸ್ಕೇಪ್ ಆಗಲು ಸಾಧ್ಯವಾಗದೆ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳು ಓಡಲು ಪ್ರಶ್ನಿಸಿದಾಗ ರಾಮದುರ್ಗ ಡಿವೈಎಸ್ಪಿ ಶೂಟೌಟ್ ಮಾಡೋ ಎಚ್ಚರಿಕೆ ನೀಡಿ ಅರೆಸ್ಟ್ ಮಾಡಿದ್ದಾರೆ. ಇದಕ್ಕೂ ಮುನ್ನ ಮಹಂತೇಶ್ ಶಿರೂರ ಪತ್ನಿ ವನಜಾಕ್ಷಿಯನ್ನು ಪೊಲೀಸ್ರು ಬಂಧಿಸಿದ್ರು. ಮುಂಬೈನಿಂದ ಕುಟುಂಬಸ್ಥರು ಹುಬ್ಬಳ್ಳಿಗೆ ಧಾವಿಸಿದ್ದು, ನಾಳೆ ಹುಬ್ಬಳ್ಳಿಯ ಸುಳ್ಳ ಗ್ರಾಮದ ರಸ್ತೆಯ ಫಾರಂಹೌಸ್‍ನಲ್ಲಿ ಚಂದ್ರಶೇಖರ್ ಗುರೂಜಿ ಅಂತ್ಯಕ್ರಿಯೆ ನಡೆಯಲಿದೆ. ಸರಳವಾಸ್ತು ಸಿಬ್ಬಂದಿ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಚಂದ್ರಶೇಖರ ಗುರೂಜಿ ಹುಬ್ಬಳ್ಳಿ ಹೋಟೆಲ್‌ಗೆ ಹೋಗಿದ್ದು ಯಾಕೆ?

    ನಡೆದಿದ್ದೇನು..?: 
    ಚಂದ್ರಶೇಖರ ಗುರೂಜಿ ಅವರನ್ನು ಹುಬ್ಬಳ್ಳಿಯ ಖಾಸಗಿ ಹೋಟೆಲ್‍ನಲ್ಲಿ ಭೀಕರವಾಗಿ ಕೊಲ್ಲಲಾಗಿದೆ. 58 ವರ್ಷದ ಚಂದ್ರಶೇಖರ್ ಗುರೂಜಿಯನ್ನು ಭೇಟಿ ಮಾಡಲು ಬಂದ ಅವರ ಮಾಜಿ ಆಪ್ತ ಸಹಾಯಕರು ಈ ಕೃತ್ಯ ಎಸಗಿದ್ದಾರೆ. ಇಂದು ಮಧ್ಯಾಹ್ನ 12.23ರ ಸಮಯಲ್ಲಿ ಹೋಟೆಲ್ ರೂಂನಿಂದ ರಿಸೆಪ್ಶನ್‍ಗೆ ಬಂದ ಚಂದ್ರಶೇಖರ ಗುರೂಜಿ ಪಾದಕ್ಕೆ ಒಬ್ಬ ನಮಸ್ಕರಿಸುವ ಹೊತ್ತಲ್ಲೇ ಅಲ್ಲೇ ನಿಂತಿದ್ದ ಇನ್ನೊಬ್ಬ ಗುರೂಜಿ ಎದೆಗೆ ಚಾಕು ಹಾಕಿದ್ದ. ಇದನ್ನೂ ಓದಿ: ಚಂದ್ರಶೇಖರ್‌ ಗುರೂಜಿ ಹತ್ಯೆ ಪ್ರಕರಣ – ಇಬ್ಬರು ಆರೋಪಿಗಳು ಅರೆಸ್ಟ್‌

    ನಂತರ ಇಬ್ಬರೂ ಸೇರಿಕೊಂಡು ಕೇವಲ 40 ಸೆಕೆಂಡ್‍ಗಳ ಅಂತರದಲ್ಲಿ 60ಕ್ಕೂ ಹೆಚ್ಚು ಬಾರಿ ಚುಚ್ಚಿ, ಕತ್ತು ಕೊಯ್ದು ಭೀಕರವಾಗಿ ಕೊಂದಿದ್ದಾರೆ. ರಕ್ತದ ಮಡುವಿನಲ್ಲಿದ್ದ ಚಂದ್ರಶೇಖರ ಗುರೂಜಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹತ್ಯೆ ಬೆನ್ನಲ್ಲೇ ಇಬ್ಬರು ಹಂತಕರು ಅಲ್ಲಿಂದ ಹೊರಗೆ ಓಡಿದ್ದಾರೆ. ಈ ಎಲ್ಲಾ ಭೀಕರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

    Live Tv
    [brid partner=56869869 player=32851 video=960834 autoplay=true]

  • ಚಂದ್ರಶೇಖರ ಗುರೂಜಿ ಹುಬ್ಬಳ್ಳಿ ಹೋಟೆಲ್‌ಗೆ ಹೋಗಿದ್ದು ಯಾಕೆ?

    ಚಂದ್ರಶೇಖರ ಗುರೂಜಿ ಹುಬ್ಬಳ್ಳಿ ಹೋಟೆಲ್‌ಗೆ ಹೋಗಿದ್ದು ಯಾಕೆ?

    ಹುಬ್ಬಳ್ಳಿ: `ಸರಳ ವಾಸ್ತು’ ಖ್ಯಾತಿಯ ಜ್ಯೋತಿಷಿ ಚಂದ್ರಶೇಖರ್ ಗುರೂಜಿ ಅವರನ್ನು ಇಂದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹುಬ್ಬಳ್ಳಿಯ ಹೋಟೆಲ್‌ನಲ್ಲಿ ಕಾಲಿಗೆ ಅಡ್ಡಬಿದ್ದು ನಮಸ್ಕಾರ ಮಾಡುವ ನೆಪದಲ್ಲಿ ಬಂದ ಇಬ್ಬರು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ.

    ಗುರೂಜಿ ಹುಬ್ಬಳ್ಳಿಗೆ ತೆಳಿದ್ದು ಯಾಕೆ?
    ಕಳೆದ ಎರಡು ದಿನಗಳ ಹಿಂದೆಯಷ್ಟೇ ಚಂದ್ರಶೇಖರ್ ಗುರೂಜಿ ಅವರ ಅಣ್ಣನ ಮಗು ಸಾವನ್ನಪ್ಪಿತ್ತು. ಮೊಮ್ಮಗುವಿನ ಸಾವಿನಿಂದಲೇ ಇಡೀ ಕುಟುಂಬ ದುಃಖತಪ್ತವಾಗಿತ್ತು. ಮೊಮ್ಮಗುವನ್ನು ನೋಡುವುದಕ್ಕಾಗಿಯೇ ಗುರೂಜಿ ಶುಕ್ರವಾರ ಹುಬ್ಬಳ್ಳಿಗೆ ತೆರಳಿ ಪ್ರೆಸಿಡೆಂಟ್‌ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು. ತಮ್ಮ 2ನೇ ಪತ್ನಿಯೂ ಅದೇ ಹೋಟೆಲ್ ರೂಂನಲ್ಲಿದ್ದರು. ಇದನ್ನೂ ಓದಿ: ಗುರೂಜಿ ಹತ್ಯೆ ಹಿಂದೆ ಬೇನಾಮಿ ಅಪಾರ್ಟ್‌ಮೆಂಟ್‌ ಆಸ್ತಿ ಗಲಾಟೆ? – ಆಪ್ತನ ಪತ್ನಿ ಬಂಧನ

    ಮೊದಲ ಪತ್ನಿಯ ಸಾವಿನ ಬಳಿಕ ಗುರೂಜಿ 2ನೇ ಮದುವೆಯಾಗಿದ್ದರು. ಮೊದಲ ಪತ್ನಿಯ ಮಗಳು ಮುಂಬೈನಲ್ಲಿ ವಾಸವಾಗಿದ್ದಾರೆ. ಗುರೂಜಿ ಒಟ್ಟು 4 ದಿನಗಳಿಗೆ ರೂಂ ಪಡೆದಿದ್ದರು. ರೂಂ ನಂಬರ್ 220ರಲ್ಲಿ ವಾಸ್ತವ್ಯ ಹೂಡಿದ್ದರು. ಶನಿವಾರ ತಮ್ಮ ಮೊಮ್ಮಗುವಿನ ಕಾರ್ಯ ಮುಗಿಸಿ ಹೋಟೆಲ್‌ನಲ್ಲೇ ತಂಗಿದ್ದರು. ಇಂದು ಅಥವಾ ನಾಳೆ ರೂಂ ಖಾಲಿ ಮಾಡಿ ತಮ್ಮ ಮಗಳನ್ನು ನೋಡಲು ಮುಂಬೈಗೆ ತೆರಳಲು ಮುಂದಾಗಿದ್ದರು. ಇದನ್ನೂ ಓದಿ: ದೆಹಲಿ ಪೊಲೀಸರಿಂದ ಸಂಸದ ತೇಜಸ್ವಿ ಸೂರ್ಯ ವಿಚಾರಣೆ

    Live Tv
    [brid partner=56869869 player=32851 video=960834 autoplay=true]

  • ಗುರೂಜಿ ಹತ್ಯೆ ಹಿಂದೆ ಬೇನಾಮಿ ಅಪಾರ್ಟ್‌ಮೆಂಟ್‌ ಆಸ್ತಿ ಗಲಾಟೆ? – ಆಪ್ತನ ಪತ್ನಿ ವಶಕ್ಕೆ

    ಗುರೂಜಿ ಹತ್ಯೆ ಹಿಂದೆ ಬೇನಾಮಿ ಅಪಾರ್ಟ್‌ಮೆಂಟ್‌ ಆಸ್ತಿ ಗಲಾಟೆ? – ಆಪ್ತನ ಪತ್ನಿ ವಶಕ್ಕೆ

    ಬೆಂಗಳೂರು: ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದ್ದು, ಬೇನಾಮಿ ಆಸ್ತಿ ವಿಚಾರಕ್ಕೆ ಈ ಹತ್ಯೆ ನಡೆದಿದ್ಯಾ ಎಂಬ ಪ್ರಶ್ನೆ ಎದ್ದಿದೆ.

    ಆಪ್ತ ಮಹಾಂತೇಶ್‌ನಿಂದಲೇ ಈ ಹತ್ಯೆ ನಡೆದಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಸಿಸಿಟಿವಿ ಆಧಾರದಲ್ಲಿ ಮಹಾಂತೇಶ್‌ನನ್ನು ಗುರುತಿಸಲಾಗಿದ್ದು, ಈಗ ಮಹಾಂತೇಶ್‌ ಪತ್ನಿ ವನಜಾಕ್ಷಿಯನ್ನು ವಶಕ್ಕೆ ಪಡೆದಿದ್ದಾರೆ.

    ಗೋಕುಲ ರೋಡ್ ಠಾಣೆ ಪೊಲೀಸರು ವನಜಾಕ್ಷಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮಧ್ಯಾಹ್ನ 12:23ಕ್ಕೆ ಗುರೂಜಿ ಅವರನ್ನು ಹತ್ಯೆ ಮಾಡಿದ ಬಳಿಕ ಮಹಾಂತೇಶ್‌ ಸ್ನೇಹಿತ ಮಂಜುನಾಥನೊಂದಿಗೆ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಬರ್ಬರ ಹತ್ಯೆ


    ಹತ್ಯೆ ಮಾಡಿದ್ದು ಯಾಕೆ?
    ವನಜಾಕ್ಷಿ ಸರಳವಾಸ್ತು ಸಂಸ್ಥೆಯ ಮಾಜಿ ಉದ್ಯೋಗಿಯಾಗಿದ್ದಾಳೆ. ಈ ಹಿಂದೆ ಗುರೂಜಿ ವನಜಾಕ್ಷಿ ಹೆಸರಿನಲ್ಲಿ ಹುಬ್ಬಳ್ಳಿಯ ಗೋಕುಲ ರಸ್ತೆ ಬಳಿಯ ಅಪಾರ್ಟ್‌ಮೆಂಟ್‌ ನಿರ್ಮಿಸಿದ್ದರು. ಈ ಬೇನಾಮಿ ಆಸ್ತಿಯನ್ನು ಗುರೂಜಿ ವಾಪಸ್‌ ಕೇಳಿದ್ದರು. ಈ ವಿಚಾರ ಅಲ್ಲದೇ ಹಣಕಾಸಿನ ವಿಚಾರವಾಗಿ ಕೆಲ ದಿನಗಳಿಂದ ಮಹಾಂತೇಶ್‌ ಮಧ್ಯೆ ಗಲಾಟೆ ನಡೆಯುತ್ತಿತ್ತು. ಇಂದು ಇದು ವಿಕೋಪಕ್ಕೆ ತಿರುಗಿ ಗುರೂಜಿ ಕೊಲೆಯಲ್ಲಿ ಅಂತ್ಯವಾಗಿರಬಹುದು ಎಂಬ ಪ್ರಾಥಮಿಕ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

    ಸ್ವಾಮೀಜಿ ಯಾರನ್ನು ದ್ವೇಷಿಸುತ್ತಿರಲಿಲ್ಲ. ಯಾರ ಮೇಲೂ ದ್ವೇಷ ಇರಲಿಲ್ಲ. ಕೊಲೆ ವಿಚಾರವನ್ನು ಕೇಳಿ ಶಾಕ್‌ ಆಗಿದೆ ಎಂದು ಗುರೂಜಿ ಕಚೇರಿಯ ಸಿಬ್ಬಂದಿ ಸದಾನಂದ ಹೇಳಿಕೆ ನೀಡಿದ್ದಾರೆ.

    ಸಾವಿರಾರು ಕೋಟಿ ಆಸ್ತಿಗೆ ಒಡೆಯರಾಗಿದ್ದ ಚಂದ್ರಶೇಖರ ಗುರೂಜಿ ಅವರಿಗೆ ದೇಶ, ವಿದೇಶಗಳಲ್ಲೂ ಭಕ್ತರಿದ್ದಾರೆ. ಮುಂಬೈನಲ್ಲೂ ತನ್ನ ಕಚೇರಿಯನ್ನು ತೆರೆದಿದ್ದರು.

    Live Tv
    [brid partner=56869869 player=32851 video=960834 autoplay=true]