Tag: ಸರಪಳಿ

  • ಕುತ್ತಿಗೆ ಹಾಕಿದ್ದ ಸರಪಳಿ ಬಿಚ್ಚಿಕೊಂಡ ಬುದ್ಧಿವಂತ ಎಮ್ಮೆ – ವೀಡಿಯೋ ವೈರಲ್

    ಕುತ್ತಿಗೆ ಹಾಕಿದ್ದ ಸರಪಳಿ ಬಿಚ್ಚಿಕೊಂಡ ಬುದ್ಧಿವಂತ ಎಮ್ಮೆ – ವೀಡಿಯೋ ವೈರಲ್

    ಕುತ್ತಿಗೆಗೆ ಕಟ್ಟಿದ್ದ ಸರಪಳಿಯನ್ನು ಎಮ್ಮೆಯೊಂದು ಸುಲಭವಾಗಿ ಬಿಚ್ಚಿಕೊಂಡಿರುವ ವೀಡಿಯೋವೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಎಮ್ಮೆಯ ಈ ಚಟುವಟಿಕೆಯನ್ನು ನೋಡಿದ ನೆಟ್ಟಿಗರು ಮಾಲೀಕರಿಗಿಂತ ಎಮ್ಮೆಯೇ ಬಹಳ ಚುರುಕಿರಬಹುದು ಎಂದು ಹೇಳಲಾರಂಭಿಸಿದ್ದಾರೆ.

    ಸಾಮಾನ್ಯವಾಗಿ ಎಮ್ಮೆಗೆ ಬುದ್ಧಿ ಮತ್ತೆ ಎಂದು ಜನ ಹೇಳುತ್ತಾರೆ. ಆದರೀಗ ಎಮ್ಮೆ ಬುದ್ಧಿಯನ್ನು ನೋಡಿ ಎಲ್ಲರು ಮಾರುಹೋಗಿದ್ದಾರೆ. ಈ ವೀಡಿಯೋವನ್ನು ಐಪಿಎಸ್ ಅಧಿಕಾರಿ ಪಂಕಜ್ ಜೈನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ವೀಡಿಯೋನಲ್ಲಿ ಎಮ್ಮೆಯೊಂದು ಕುತ್ತಿಗೆಗೆ ಕಟ್ಟಿದ್ದ ಕಬ್ಬಿಣದ ಸರಪಳಿಯನ್ನು ಬಾಯಿಯ ಮುಖಾಂತರ ಸುಲಭವಾಗಿ ಬಿಚ್ಚಿಕೊಂಡಿದೆ. ಎಮ್ಮೆಯ ಚಾಣಕ್ಷತನ ನೋಡಿದ ಎಲ್ಲರೂ ಆಶ್ಚರ್ಯಗೊಂಡಿದ್ದಾರೆ.

    ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಎಮ್ಮೆ ಬುದ್ಧಿವಂತಿಕೆ ಕಂಡು ಎಮ್ಮೆ ಎಲ್ಲೋ ಗೋಡಂಬಿ ಮತ್ತು ಬಾದಾಮಿ ತಿಂದು ಬುದ್ಧಿ ಚುರುಕುಗೊಳಿಸಿಕೊಂಡಿರಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ.

  • ಕಾಲಿಗೆ ಸರಪಳಿ ಕಟ್ಟಿ ಮಹಿಳೆ ಬಂಧನ- ಸಂಬಂಧಿಕರಿಂದ್ಲೇ ರೇಪ್

    ಕಾಲಿಗೆ ಸರಪಳಿ ಕಟ್ಟಿ ಮಹಿಳೆ ಬಂಧನ- ಸಂಬಂಧಿಕರಿಂದ್ಲೇ ರೇಪ್

    ಜೈಪುರ್: ಅತ್ತೆ-ಮಾವ ಸರಪಳಿಯಿಂದ ಕಟ್ಟಿಹಾಕಿದ್ದ ಮಹಿಳೆಯ ಮೇಲೆ ಸಂಬಂಧಿಕರೇ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ರಾಜಸ್ಥಾನದ ಪ್ರತಾಪ್‍ಗಢ್‍ನಲ್ಲಿ ನಡೆದಿದೆ.

    ಸಂತ್ರಸ್ತೆಯನ್ನು ಪ್ರತಾಪ್‍ಗಢ್ ಜಿಲ್ಲಾಧಿಕಾರಿ ರಕ್ಷಿಸಿದ್ದಾರೆ. ಮಹಿಳೆಯ ಕಾಲಿಗೆ ಕಟ್ಟಲಾಗಿದ್ದ ಸರಪಳಿಯನ್ನು ಬಿಚ್ಚಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ವರದಿಯಾಗಿದೆ.

    ಸಂತ್ರಸ್ತೆಯು ಪ್ರತಾಪ್‍ಗಢ್ ಜಿಲ್ಲೆಯ ಪೀಪಲ್ ಖುಂಟ್ ಗ್ರಾಮದ ನಿವಾಸಿ. ಆಕೆಗೆ ಐವರು ಮಕ್ಕಳಿದ್ದು, ಅತ್ತೆ-ಮಾವ ಹಾಗೂ ಪತಿಯ ಜೊತೆಗೆ ವಾಸವಾಗಿದ್ದಳು. ಆದರೆ ಪತಿ ಮದ್ಯ ವ್ಯಸನಿಯಾಗಿದ್ದು, ನಿತ್ಯವೂ ಕುಡಿದು ಬಂದು ಹೊಡೆಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಅತ್ತೆ-ಮಾವನ ಸಂಬಂಧಿಕರು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ಮನೆಯಿಂದ ತಪ್ಪಿಸಿಕೊಂಡು ಹೋಗಿದ್ದ ನನ್ನನ್ನು ಹಿಡಿದುಕೊಂಡು ಬಂದು ಸರಪಳಿಯಿಂದ ಕಟ್ಟಿ ಹಾಕಿದ್ದಾರೆ ಎಂದು ಮಹಿಳೆ ದೂರಿದ್ದಾಳೆ. ಆಕೆಯ ಹೇಳಿಕೆ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಪ್ರತಾಪ್‍ಗಢ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

    ಈ ಸಂಬಂಧ ಪ್ರತಾಪ್‍ಗಢ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಆರಂಭಿಸಿರುವ ಪೊಲೀಸರು ಇನ್ನು ಯಾವುದೇ ಆರೋಪಿಗಳನ್ನು ಬಂಧಿಸಿಲ್ಲ.